Pages

Monday, December 13, 2010

ಬಾಲ ಪ್ರತಿಭೆ ಕುಮಾರಿಸಹನಾ

ಪುಟಾಣಿ ಸಹನ ಹಾಡ್ತಾಳೆ ಅಂತಾ ಕೇಳಿದ್ದೆ. ಆದರೆ ಆ ಪುಟ್ಟಿಯನ್ನು ನೋಡಲು ಅವಕಾಶ ಸಿಕ್ಕಿದ್ದು ಮೊನ್ನೆ. ನನ್ನ ಮಿತ್ರ ಶ್ರೀಯುತ ರಂಗೇಗೌಡ ಮತ್ತು ಶ್ರೀ ಮತಿ ಪುಷ್ಪಲತಾ ದಂಪತಿಗಳಿಗೆ ಚಿನ್ನದಂತಾ ಇಬ್ಬರು ಮಕ್ಕಳು. ಹಿರಿಯ ಮಗ ಭರತ್ ಏಳನೆಯ ತರಗತಿಯಲ್ಲಿ ಓದುತ್ತಿದ್ದು ಜೊತೆಯಲ್ಲಿ ವೇಣುವಾದನ ಕಲಿಯುತ್ತಿದ್ದಾನೆ. ತಂಗಿಯ ಹಾಡಿಗೆ ಸೊಗಸಾಗಿ ಕೊಳಲು ನುಡಿಸುತ್ತಾನೆ.ಎರಡನೆಯ ಮಗಳು ಕು|| ಸಹನಾ. ಇವತ್ತಿನ ನಮ್ಮ ಅತಿಥಿ.ನಾಲ್ಕನೇ ತರಗತಿ ಓದುತ್ತಿರುವ ಈ ಮಗುವನ್ನು ಯಾವಾಗಿನಿಂದ ಸಂಗೀತವನ್ನು ಅಭ್ಯಾಸ ಮಾಡುತ್ತಿದ್ದೀಯಾ? ಎಂದರೆ ತನ್ನ ಎಲ್.ಕೆ.ಜಿ.ತರಗತಿಯಿಂದ ಎಂದು ಉತ್ತರಿಸುತ್ತಾಳೆ.ಶಾಲೆಯಲ್ಲಿ ಟಾಪರ್. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಜೂನಿಯರ್ ಮುಗಿಸಿರುವ ಈಕೆ ಭರತನಾಟ್ಯ ಹಾಗೂ ವೀಣಾವಾದನವನ್ನೂ ಕಲಿಯುತ್ತಿದ್ದಾಳೆ.ಇಂದು ಆಕೆಯ ಮೊದಲನೆ ಕಂತನ್ನು ಕೇಳಿ.






3 comments:

  1. congratulations to kumari Sahana !

    ReplyDelete
  2. ಈ ವಯಸ್ಸಿಗೇ ಇಷ್ಟು ಪ್ರತಿಭಯಾದರೆ ಮುಂದಿನ 20 ವರ್ಷಗಳಲ್ಲಿ ಏನಾಗಬಹುದು!
    ನಿರಂತರ ಸಾಧನೆ ಮಾಡಬೇಕು. ಚಿ.ಸಹನಾ ತಂದೆ-ತಾಯಿಗಳಿಗೆ ಒಂದು ಕಿವಿಮಾತು. ಒಂದು ವೇಳೆ ಸಹನಾ ಸಂಗೀತವನ್ನೇ ತನ್ನ ಕ್ಷೇತ್ರವನ್ನಾಗಿ ಆರಿಸಿದ್ದಾದರೆ, ಶಾಲೆಯ ಶಿಕ್ಷಣ, ಸರ್ಟಿಫಿಕೇಟ್ ಗಾಗಿ ಒದ್ದಾಡಬೇಡಿ.
    ಇನ್ನೊಂದು ಕಿವಿಮಾತು. ಪ್ರಸಿದ್ಧಿ ಹಣದ ಹಿಂದೆ ನೀವು ಹೋಗಬೇಡಿ. ಈ ಪ್ರತಿಭೆಗೆ ಅವೆಲ್ಲಾ ತಾವಾಗಿಯೇ ಮನೆಬಾಗಿಲಿಗೆ ಬರುತ್ತವೆ.
    ಶುಭಾಶಯಗಳು
    -ಸುಧಾಕರ ಶರ್ಮಾ

    ReplyDelete