ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Tuesday, February 22, 2011

ವಸ್ತುಗಳ ಗುರುತ್ವಾಕರ್ಷಣ ನಿಯಮ ಮೊದಲು ಕಂಡು ಹಿಡಿದವರಾರು?

ವಸ್ತುಗಳ ಗುರುತ್ವಾಕರ್ಷಣ ನಿಯಮ ಮೊದಲು ಕಂಡು ಹಿಡಿದವರಾರು?
ನ್ಯೂಟನ್?
ಭಾಸ್ಕರಾಚಾರ್ಯ-೨?


5 comments:

 1. ನೂರಕ್ಕೆ ನೂರರಷ್ಟು Newton. ತಲೆಯ ಮೇಲೆ ಸೇಬು ಹಣ್ಣು ಬಿದ್ದ ನಂತರ ಅವನು ಗುರುತ್ವಾಕರ್ಷಣೆ ಕಂಡು ಹಿಡಿದನೆನ್ನುವದು ಸಂಪೂರ್ಣ ಕಟ್ಟುಕಥೆ. ತನ್ನ ೨೫ ನೇ ವಯಸ್ಸಿನಲ್ಲಿ Kepler ನ ನಿಯಮಗಳನ್ನು ವಿವರಿಸುವ ಪ್ರಯತ್ನದಲ್ಲಿದ್ದಾಗ ಅದಕ್ಕೆ ಬಂದ ಉತ್ತರವೇ ಗುರುತ್ವಾಕರ್ಷಣ ನಿಯಮ. ವರಾಹ ಮಿಹಿರಾಚಾರ್ಯರ ಶ್ಲೋಕದಲ್ಲಿ ಗುರುತ್ವಾಕರ್ಷಣೆಯ ನಿಯಮವನ್ನು Newton ನಷ್ಟು ಖಚಿತವಾಗಿ ವಿವರಿಸಿಲ್ಲ. ಅದು ಕೇವಲ ಸಾಮಾನ್ಯ ವಿವರಣೆಯಷ್ಟೇ. ಮನುಕುಲಕ್ಕೆ ದೇವರ ವರಪ್ರಸದರೂಪಿಯೂ, ಮಹಾ ಋಷಿಯೂ, ಆಜನ್ಮ ಬ್ರಹ್ಮಚಾರಿಯೂ ಆದ Newton ಗೆ ನನ್ನ ನಮನಗಳು

  ReplyDelete
 2. ನ್ಯೂಟನ್ ಅಷ್ಟೇ ಅಲ್ಲ ಹಲವಾರು ಪಾಶ್ಚಿಮಾತ್ಯ ವಿಜ್ಞಾನಿಗಳು ಮಾಡಿರುವ ಸಂಶೋಧನೆಗಳಿಗಾಗಿ ಅವರ ಸ್ಮರಣೆ ಮಾಡಲೇ ಬೇಕು, ಅದು ನಮ್ಮ ಕರ್ತವ್ಯವೂ ಕೂಡ. ಆದರೆ ಅದಕ್ಕೂ ಮುಂಚಿತವಾಗಿ ನಮ್ಮ ದೇಶದ ಋಷಿ ಮುನಿಗಳು ಕಂಡುಕೊಂಡ ದೃಷ್ಟಾಂತಗಳನ್ನು ಕಡೆಗಣಿಸಬಾರದಲ್ಲವೇ? ವಿಜ್ಞಾನಿಗಳಾದ ಡಾ|| ಗೋಪಾಲಕೃಷ್ಣ ಅವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈಂಟಿಫಿಕ್ ಹೆರಿಟೇಜ್[ಕೇರಳ] ನಲ್ಲಿ ಮಾಡಿರುವ ಭಾಷಣದಿಂದ ಆಕರ್ಷಿತನಾದ ನಾನು ಅವರ ಈ ಒಂದು ತುಣುಕನ್ನು ಹಾಕಿರುವೆ. ಮಾತೃಭಾಷೆ ಮಲೆಯಾಳಿಯಾಗಿರುವುದರಿಂದ ಸಂಸ್ಕೃತದಲ್ಲಿ ಹೇಳಿರುವ ಶ್ಲೋಕವನ್ನು ಅರ್ಥೈಸಿಕೊಳ್ಳುವುದು ಸ್ವಲ್ಪ ಕಷ್ಟವಾಗಬಹುದೇನೋ. ಆದರೆ ಅವರು ಆಂಗ್ಲಭಾಷೆಯಲ್ಲಿ ನೀಡಿರುವ ವಿವರಣೆ ನಮ್ಮನ್ನು ಆಕರ್ಷಿಸುತ್ತದೆ.
  ಇಲ್ಲಿ ಅವರು ಹೇಳಿರುವ ಸಿದ್ಧಾಂತ ಶಿರೋಮಣಿ ಆರನೇ ಅಧ್ಯಾಯದ ೨೧ ನೇ ಸಾಲು ಏನು ಹೇಳುತ್ತದೆಂದು ಅದನ್ನು ತಾವೇನಾದರೂ ಅಧ್ಯಯನ ಮಾಡಿರುವಿರಾ? ತಮಗೆ ಈ ಅವಕಾಶವೇನಾದರೂ ಲಭ್ಯವಿದ್ದರೆ ದಯಮಾಡಿ ವೇದಸುಧೆಗೆ ಮೇಲ್ ಮಾಡಿದರೆ ಅನುಕೂಲವಾಗುತ್ತದೆ.ಅಂತೂ ಯಾವುದನ್ನೂ ಕುರುಡಾಗಿ ಒಪ್ಪಬೇಕಾಗಿಲ್ಲ. ಸತ್ಯಕ್ಕೆ ಅಪಚಾರವಾಗಬಾರದು. ಮಾಹಿತಿ ಇದ್ದವರು ಹಂಚಿಕೊಂಡರೆ ಒಳ್ಳೆಯದು.

  ReplyDelete
 3. ಖಂಡಿತವಾಗಿಯೂ ಯಾವುದನ್ನೂ ಕುರುಡಾಗಿ ಒಪ್ಪಬಾರದು. ಅದೇ ವಿಜ್ಞಾನದ ಗುರಿ. ಪರಮ ಸತ್ಯದ ಕುರಿತ ಪಯಣವೇ ವಿಜ್ಞಾನದ ಗುರಿ. ನನ್ನ ಪ್ರಕಾರ ಇವರು ನಮ್ಮವರು, ಇವರು ಪಾಶ್ಚಿಮಾತ್ಯರು ಎಂಬ ಭೇದ ಸಲ್ಲದು. ಒಳ್ಳೆಯ ಜ್ಞಾನವನ್ನು ಯಾರು ಕೊಟ್ಟರೂ ಅವರಿಗೆ ನಮ್ಮ ಗೌರವ. ವರಹಮಿಹಿರಚರ್ಯರಿಗೂ ನಮ್ಮ ನಮನಗಳು ಸಲ್ಲತಕ್ಕದ್ದೆ. ಭೂಮಿ ಸೂರ್ಯನ ಸುತ್ತ ಸುತ್ತುವ ಸಮಯವನ್ನು ಬಹಳಷ್ಟು ನಿಖರವಾಗಿ ಅಂದೇ ತಿಳಿಸಿದ್ದಾರೆ.

  ವರಾಹ ಮಿಹಿರಚಾರ್ಯರ ಮೇಲೆ ಹೇಳಿದ ಆಡಿಯೋ ಪ್ರಕಾರ ಆ ಶ್ಲೋಕ ಗುರುತ್ವಾಕರ್ಷಣೆಯ ನಿಯಮವನ್ನು Newton ನಷ್ಟು ಸ್ಪಷ್ಟವಾಗಿ ವಿವರಿಸಿಲ್ಲ. Newton ನ ನಿಯಮ ಗುರುತ್ವಕ್ಕೆ ಸಂಬಂಧಪಟ್ಟ ಹಲವಾರು ಘಟನೆಗಳನ್ನು ನಿಖರವಾಗಿ ವಿವರಿಸುತ್ತದೆ. ಉದಾಹರಣೆಗೆ ಭೂಮಿ ಸೂರ್ಯನ ಸುತ್ತ ಸುತ್ತುತಿರುವದು.

  ಸಿದ್ದಾಂತ ಶಿರೋಮನಿಯನ್ನು ನಾನು ಅಧ್ಯಯನ ಮಾಡಿಲ್ಲ. Newton ನ ಗುರುತ್ವ ನಿಯಮಗಳನ್ನು ತಾವೇನಾದರೂ ಅಧ್ಯಯನ ಮಾಡಿರುವಿರಾ? ಕಾವ್ಯದ ಅತ್ಯುನ್ನತ ಸಾಲುಗಳೋ ಎಂಬಂತೆ ಭಾಸವಾಗುವ ಅವುಗಳ ಸೌಂದರ್ಯ ಅನದ್ಭುತ. ಈ ಜಗತ್ತಿನಲ್ಲಿ ನಡೆಯುವ ಘಟನೆಗಳ ಕಾರಣಗಳನ್ನು ಎಳೆ ಎಳೆಯಾಗಿ ಬಿಡಿಸಲು ಪ್ರಯತ್ನಿಸುವ ಆ ಸಮೀಕರಣಗಳು ನಿಜವಾಗಿಯೂ ಮನೋಹರ. ಪರಮ ಸತ್ಯದ ಕಡೆ ಸಾಗುವ ಹಾದಿಯಲ್ಲಿ ಸಿಕ್ಕ ಅತ್ಯಮೂಲ್ಯ ನಿಧಿಯೇ ಅದು.

  ಇಬ್ಬರನ್ನೂ ಸೂಕ್ತವಾಗಿ ಅಧ್ಯಯನ ಮಾಡಿದ ಯಾರಾದರೂ ಇದ್ದಾರೆ ಅವರು ತಮ್ಮ ಅಭಿಪ್ರಾಯ ಹಂಚಿಕೊಳ್ಳುವದು ಒಳ್ಳೆಯದು.

  ReplyDelete
 4. ಸತ್ಯಕ್ಕೆ ಅಪಚಾರವಾಗಬಾರದು, ಅದರಲ್ಲಿ ಎರಡು ಮಾತಿಲ್ಲ. ಆದರೆ ಇಂದು ಏನು ಪಾಶ್ಚಿಮಾತ್ಯರು ಕಂಡು ಹಿಡಿದಿದ್ದರೂ ಅದು ನಮ್ಮಲ್ಲಿ ಮೊದಲಿಂದಲೂ ಇತ್ತು ಎಂದು ಸಾಧಿಸಲು ಪ್ರಯತ್ನಿಸುವ ನಮ್ಮ ಮನೋಭಾವ ನಮ್ಮನ್ನು durbalarannaagi maaduvadendenisuvadillave?

  ReplyDelete
 5. ಶ್ರೀ ಮಹೇಶ್, ಇಲ್ಲಿ ನಾನು ಯಾವ ವಕಾಲತ್ತು ವಹಿಸುವ ಕೆಲಸ ಮಾಡುತ್ತಿಲ್ಲ. ನನಗಿಷ್ಟವಾದ ಸಂಗತಿಗಳನ್ನು ಹಂಚಿಕೊಳ್ಳುವೆ, ಅಷ್ಟೆ.ನ್ಯೂಟನ್ ಸಂಶೋಧನೆಗಳನ್ನೂ ಆಳವಾಗಿ ನಾನು ಅಭ್ಯಯಿಸಿಲ್ಲ ಅಥವಾ ನಮ್ಮ ಪೂರ್ವಜರ ವಿಚಾರಗಳನ್ನೂ ಅಷ್ಟೆ. ಜ್ಞಾನ ಎಲ್ಲಿಂದ ಬಂದರೇನು, ಸ್ವೀಕರಿಸೋಣ.

  ReplyDelete