ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Sunday, August 12, 2012

ನಾಳ್ಯಾರೋ? ನಾವ್ಯಾರೋ?

ಪ್ರತಿಕ್ಷಣ ಮಯಂ ಕಾಲಃ ಕ್ಷೀಯಮಾಣೋ ನ ಲಕ್ಷ್ಯತೇ ।
ಆಮಕುಂಭ ಇವಾಂಭಃಸ್ಥೋ ವಿಕೀರ್ಣೋ ನ ವಿಭಾವ್ಯತೇ ॥


ಪ್ರತಿ ಕ್ಷಣದಲ್ಲಿಯೂ ಸಹ ನಮ್ಮ ಆಯುಸ್ಸು ಕಳೆಯುತ್ತಿದ್ದರೂ ಗೊತ್ತಾಗುವುದಿಲ್ಲ,
ಹಸಿಯಾದ ಮಡಿಕೆಯು ನೀರಿನಲ್ಲಿ ಕರಗುತ್ತಿದ್ದರೂ ಗೊತ್ತಾಗುವುದಿಲ್ಲ. ಅದಕ್ಕೆ ಅಲ್ಲವೆ ಆಯುರ್ನಶ್ಯತಿ ಪಶ್ಯತಾಂ ಪ್ರತಿದಿನಂ ಯಾತಿ ಕ್ಷಯಮ್ ಯೌವ್ವನಂ ಎಂದು ಆದಿಶಂಕರರು  ಹೇಳಿದ್ದು. ಪ್ರತಿದಿನವೂ ವೃದ್ಧತ್ವ ಪಡೆಯುತ್ತಿದ್ದರೂ ನಮ್ಮ ಗತಿಸಿದ ಬಗ್ಗೆ ಅಲೋಚಿಸಲಾರೆವು. 

ನನ್ನ ಮಾತು:

ಈ ಸೂಕ್ತಿ ಎಷ್ಟು ಸೊಗಸಾಗಿದೆ, ಹೌದು, ಇಷ್ಟು ಆಯಸ್ಸನ್ನು ಕಳೆದಿದ್ದೇವೆ ನಾವು ಸಮಾಜಕ್ಕೆ ಮಾಡಿದ್ದೆಷ್ಟು? ಸಮಾಜದಿಂದ ಪಡೆದಿದ್ದೆಷ್ಟು? ನಿಜವಾಗಿ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳ ಬೇಕಲ್ಲವೇ? ಈ ಸೂಕ್ತಿ ನನ್ನ ದೃಷ್ಟಿಯಲ್ಲಿ ಎಳೆಯರಿಗಿಂತಲೂ ಪ್ರೌಢರಿಗೆ ಹೆಚ್ಚು ತಾಕಬೇಕು. ಹಿಂದಿದ್ದಷ್ಟು ದಿನ ಮುಂದೆ ಇರುವುದು ಗೊತ್ತಿಲ್ಲ. ನಾಳ್ಯಾರೋ, ನಾವ್ಯಾರೋ? ಎಂಬ ಮಾತಿದೆ. ಯಮನ ಧೂತರು ಬಂದು ಸೆಳೆಯುವಾಗ ನಾನು ಇನ್ನೂ ಏನೋ ಮಾಡಬೇಕೆಂದಿರುವೆ, ಸ್ವಲ್ಪ  ತಾಳು, ಎಂದರೆ ಅವ ತಾಳಲಾರ. ಇಂದು ಬದುಕಿದ್ದೇವೆ. ಇಂದೇ ಈಗಲೇ ನಾವೇನಾದರೂ ಸಮಾಜಮುಖಿ ಕಾರ್ಯದಲ್ಲಿ ನಮ್ಮನ್ನು ತೊ  ಗಿಸಿಕೊಂಡು ಬಿಡಬೇಕಲ್ಲವೇ? 
ಮತ್ತೆ ಹೇಳುವೆ...ನಾಳ್ಯಾರೋ? ನಾವ್ಯಾರೋ?

No comments:

Post a Comment