೧. ಪರಿಶ್ರಮ ಮೆಟ್ಟಿಲಿನ೦ತೆ- ಅದೃಷ್ಟ ಲಿಫ್ಟ್ ನ೦ತೆ! ಅದೃಷ್ಟ ಕೈಕೊಟ್ಟರೂ ಮೆಟ್ಟಿಲು ನಮ್ಮನ್ನು ಮೇಲಕ್ಕೆ ಕೊ೦ಡೊಯ್ಯುತ್ತದೆ!-ಅಬ್ದುಲ್ ಕಲಾ೦
೨ . ಜೀವನದಲ್ಲಿಪ್ರತಿಯೊಬ್ಬನೂ ಮತ್ತೊಬ್ಬನ ಅಜ್ಞಾನದ ಲಾಭವನ್ನು ಪಡೆದುಕೊ೦ಡು , ತನಗಿಲ್ಲದ ಯೋಗ್ಯತೆಯನ್ನು ಆರೋಪಿಸಿಕೊ೦ಡು- ಮನಸ್ಸು ಖ೦ಡಿಸಿದರೂ – ಬಹಿರ೦ಗದಲ್ಲಿ ಬ೦ದ ಹೆಸರನ್ನು ಸ್ವೀಕರಿಸುತ್ತಾನೆ- ಜಾನ್ ಸನ್
೩. ನಾವು ನಮ್ಮ ಬಗ್ಗೆ ಏನನ್ನು ಯೋಚಿಸುತ್ತೇವೆಯೋ ಅದೇ ನಮ್ಮ ಅದೃಷ್ಟವನ್ನು ನಿರ್ಧರಿಸುತ್ತದೆ!
೪. ತನ್ನ ಮನಸ್ಸಿಗೆ ಆನ೦ದ ನೀಡುವ ಭೋಗಗಳನ್ನು ಅನುಭವಿಸುವುದರಲ್ಲಿ ಕಷ್ಟ-ಸುಖ, ಲಾಭ –ನಷ್ಟ, ಕೊನೆಗೆ ಧರ್ಮಾಧರ್ಮಗಳ ಬಗ್ಗೆ ಚಿ೦ತಿಸದೆ ಕೆಲಸ ಮಾಡುವವನೇ ರಸಿಕ- ರಾಳ್ಳಪಳ್ಳಿ ಅನ೦ತಕೃಷ್ಣ ಶರ್ಮ
೫. ಒಬ್ಬ ನಾಗರೀಕ ತನ್ನ ಕಾಲ ಮೇಲೆ ನಿಲ್ಲುವ೦ತೆ ಮಾಡುವುದೇ ರಾಜಕೀಯ- ಸ್ವಾಮಿ ರ೦ಗನಾಥಾನ೦ದ
೬. ಯುಧ್ಧದಿ೦ದ ಕೆಟ್ಟವರ ನಾಶವಾಗದು! ಒಳ್ಳೆಯವರ ನಾಶವಾಗುತ್ತದೆ!!- ಸಾಪೋಕ್ಲಿಸ್
೭. ಒಳ್ಳೆಯದಾದ ಶಾ೦ತಿ ಹಾಗೂ ಒಳ್ಳೆಯದಾದ ಯುಧ್ಧ ಎ೦ದೂ ಇರದು- ಬೆ೦ಜಮಿನ್ ಫ್ರಾ೦ಕ್ಲಿನ್
೮. ಆತ್ಮಕ್ಕಿ೦ತ ಮತಧರ್ಮವನ್ನು ಮೆಚ್ಚುವವನು ತನ್ನ ಗು೦ಪು, ಚರ್ಚು,ಮಸೀದಿ ಹಾಗೂ ದೇವಾಲಯಗಳನ್ನು ಹೆಚ್ಚು ಪ್ರೀತಿಸುತ್ತಾನೆ- ಕೊನೆಗೆ ತನ್ನನ್ನೇ ಇತರೆಲ್ಲರಿಗಿ೦ತಲೂ ಹೆಚ್ಚು ಅ೦ದುಕೊಳ್ಳುತ್ತಾನೆ!
೯. ಮತಾ೦ಧತೆಯನ್ನು ಎದುರಿಸುವ ಅಸ್ತ್ರ ಎ೦ದರೆ ಅಲಕ್ಷ್ಯ ಹಾಗೂ ತಾತ್ಸಾರ ಮಾತ್ರ!!
೧೦.ಉತ್ತಮ ನಾಳಿಗಾಗಿ ಹಗಲಿರುಳು ಕಷ್ಟ ಪಡುತ್ತಾ, ಅನೇಕ ಕನಸುಗಳನ್ನು ಕಾಣುವ ನಾವು , ಹ೦ಬಲಿಸಿದ ಭವಿಷ್ಯ ಕಣ್ಮು೦ದೆ ನಿ೦ತಾಗ, ಪುನ: ಮತ್ತೊ೦ದು ಸು೦ದರ ನಾಳಿನ ವಗ್ಗೆ ಚಿ೦ತಿಸಲು ಆರ೦ಭಿಸುತ್ತೇವೆಯೇ ವಿನಾ: ಬಯಸಿ ಪಡೆದ ಭವಿಷ್ಯವನ್ನು ಆನ೦ದಿಸುವುದಿಲ್ಲ!!
೧೧. ನಮ್ಮ ಜೀವನವೊ೦ದು ಖಾಲಿ ಹಾಳೆ ಯ೦ತೆ! ಅದರಲ್ಲಿ ನಾವೇನಾದರೂ ಬರೆದರೆ ಮಾತ್ರವೇ ಅದೊ೦ದು ದಾಖಲೆಯಾಗುವುದು!
೧೨. ವಿಜ್ಞಾನವು ಧರ್ಮದ ಅಧೀನದಲ್ಲಿದ್ದರೆ ಲೋಕೋನ್ನತಿ!- ಡಾ|| ಡಿ.ವೀರೇ೦ದ್ರ ಹೆಗ್ಗಡೆ
೧೩. ದಿನದ ಪ್ರತಿಕ್ಷಣವೂ ನಮಗೊ೦ದು ಬದುಕುವ ಹಾಗೂ ಪ್ರತಿ ಗ೦ಟೆಯೂ ನಮ್ಮ ಬದುಕನ್ನು ಪರಿವರ್ತಿಸಿಕೊಳ್ಳುವ ಹತ್ತು ಹಲವು ಅವಕಾಶಗಳನ್ನು ಮು೦ದಿರಿಸುತ್ತಲೇ ಇರುತ್ತದೆ!!
೧೪.ಪ್ರತಿಯೊ೦ದು ಸೋಲೂ ಒ೦ದು ಪಾಠವೇ.. ಅರಿತುಕೊಳ್ಳುವುದು ಮಾತ್ರ ನಮ್ಮ ಆಯ್ಕೆ! ಪ್ರತಿಯೊ೦ದು ಜಯವೂ ಒ೦ದು ಕನ್ನಡಿಯೇ.. ಒಡೆಯದ೦ತೆ ಕಾಪಿಟ್ಟುಕೊಳ್ಳುವುದು ಮಾತ್ರ ನಮ್ಮ ಜವಾಬ್ದಾರಿ!- ಪ್ರತಿಯೊಬ್ಬ ಸ್ನೇಹಿತನೂ ಒ೦ದು ರತ್ನವೇ... ಸು೦ದರವಾಗಿ ಕಾಣುವ೦ತೆ ಜತನವಾಗಿ ಧರಿಸುವುದು ಮಾತ್ರ ನಮ್ಮ ಕರ್ತವ್ಯ!!!
೧೫. ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಕಣ್ಣೀರನ್ನು ಹಾಗೂ ಕೋಪವನ್ನು ವ್ಯಕ್ತಪಡಿಸಲು ಪದಗಳನ್ನು ಬಳಸಿಕೊಳ್ಳಬಾರದು!!
///// ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ ////// ಕೃಣ್ವಂತೋ ವಿಶ್ವಮಾರ್ಯಂ //// //// ಮಾತಾ ಭೂಮಿಃ ಪುತ್ರೋಹಂ ಪೃಥಿವ್ಯಾಃ /////
Wednesday, August 17, 2011
ಯೋಚಿಸಲೊ೦ದಿಷ್ಟು...೩೮
Tuesday, August 16, 2011
ಗೂಗಲ್ ಮಾಹಿತಿ
ಹೀಗೇ ಗೂಗಲ್ ನಲ್ಲಿ ಜಾಲಾಡುವಾಗ ಒಂದು ಮಾಹಿತಿ ಸಿಕ್ಕಿತು. http://www.networkedblogs.com/ ನಲ್ಲಿ ವೇದಸುಧೆಯು ಅಧ್ಯಾತ್ಮದ ವಿಚಾರದಲ್ಲಿ ಟಾಪ್-3 ನಲ್ಲಿದೆ
Top 2 Blogs in: Knowledge
Top 3 Blogs in: Adhyatma
ಎಂಬ ಮಾಹಿತಿ.
ಪ್ರಕಟಮಾಡಬೇಕಿನಿಸಿ ಪ್ರಕಟಿಸಿರುವೆ. ಈ ಬಗ್ಗೆ ಹೆಚ್ಚಿನ ಅರಿವಿರುವವರು ನಿಮ್ಮ ಅಭಿಪ್ರಾಯ ತಿಳಿಸಬಹುದು. ಈ ಅಂತರ್ ಜಾಲದ ಕೊಂಡಿ ಇಲ್ಲಿದೆ.
Friday, August 12, 2011
ವೇದೋಕ್ತ ಜೀವನ ಪಥ: ಮಾನವಧರ್ಮದ ಮೂರು ಅಭಿನ್ನ ಅಂಗಗಳು - ೫:
ಕೇಳಿರಿ:-
ಅನೃಣಾ ಅಸ್ಮಿನ್ನನೃಣಾಃ ಪರಸ್ಮಿನ ತೃತೀಯೇ ಲೋಕೇ ಅನೃಣಾಃ ಸ್ಯಾಮ |
ಯೇ ದೇವಯಾನಾಃ ಪಿತೃಯಾಣಾಶ್ಚ ಲೋಕಾಃ ಸರ್ವಾನ್ಪಥೋ ಅನೃಣಾ ಆ ಕ್ಷಿಯೇಮ ||
(ಅಥರ್ವ. ೬.೧೧೭.೩.)
[ಅನೃಣಾಃ ಅಸ್ಮಿನ್] ಋಣರಹಿತರಾಗಿ ಈ ಬ್ರಹ್ಮಚರ್ಯದಲ್ಲಿರೋಣ. [ಪರಸ್ಮಿನ್] ಗಾರ್ಹಸ್ಥ್ಯದಲ್ಲಿಯೂ, [ಅನೃಣಾಃ] ಋಣರಹಿತರಾಗಿರೋಣ. [ತೃತೀಯೇ ಲೋಕೇ] ಮೂರನೆಯದಾದ ವಾನಪ್ರಸ್ಥದಲ್ಲಿಯೂ, [ಅನೃಣಾಃ ಸ್ಯಾಮ] ಋಣರಹಿತರಾಗಿರೋಣ. [ಯೇ ದೇವಯಾನಾಃ] ಯಾವ ಆಧ್ಯಾತ್ಮಿಕ ಗತಿಯ [ಚ] ಮತ್ತು, [ಪಿತೃಯಾಣಾಃ ಲೋಕಃ] ಸಾಂಸಾರಿಕಗತಿಯ ಸ್ಥಿತಿಗತಿಗಳಿವೆಯೋ, [ಸರ್ವಾನ್ ಪಥಃ] ಆ ಎಲ್ಲಾ ಮಾರ್ಗಗಳನ್ನೂ [ಅನೃಣಾಃ ಆ ಕ್ಷಿಯೇಷು] ಋಣರಹಿತರಾಗಿ ಸಂಕ್ರಮಿಸೋಣ.
ವಾನಪ್ರಸ್ಥ ತೀರಿದ ಮೇಲೆ, ಸಂನ್ಯಾಸ ಸ್ವೀಕರಿಸಲು ಅರ್ಹರಾದವರು ಸಂನ್ಯಾಸಿಗಳು, ದೇವಯಾನ ಮಾರ್ಗಿಗಳಾಗುತ್ತಾರೆ. ಶಕ್ತಿಯಿಲ್ಲದವರು ಹಾಗೆಯೇ ಉಳಿಯುತ್ತಾರೆ. ಯಾವ ದಾರಿಯಲ್ಲೇ ಉಳಿಯಲಿ, ಋಣ ಮಾತ್ರ ಹೊರಬಾರದು. ಬೇರೆಯವರಿಗಾಗಿ ಏನನ್ನೂ ಒಳಿತನ್ನು ಮಾಡದೆ, ತಾನು ಬೇರೆಯವರಿಂದ ಏನನ್ನೂ ಪಡೆಯುವಂತಿಲ್ಲ.
*********************
Wednesday, August 10, 2011
ನಾಗರಪಂಚಮಿ - 'ಪರಿಸರ ಪಂಚಮಿ'ಯಾಗಲಿ
ನಾಗರಪಂಚಮಿಯಂದು ನಾಗರನಿಗೆ ಹಾಲೆರೆದು, ಧೂಪ, ದೀಪ, ನೈವೇದ್ಯಗಳನ್ನು ಅರ್ಪಿಸುವ ಸಂಪ್ರದಾಯ ಚಾಲನೆಯಲ್ಲಿದೆ. ನಾಗರ ಪಂಚಮಿ ಆಚರಣೆ ಪರಂಪರೆಯಿಂದ ಮುಂದುವರೆಯಲು ಹಲವಾರು ಕಾರಣಗಳಿರಬಹುದು, ಅದಕ್ಕಾಗಿ ಹಲವಾರು ಪುರಾಣಕಥೆಗಳು ಇರಬಹುದು, ಹಲವಾರು ಕ್ಷೇತ್ರಗಳು ನಾಗಪೂಜೆಯ ಕಾರಣಕ್ಕೇ ಪ್ರಸಿದ್ಧವಾಗಿರುವುದೂ ಸತ್ಯ. ಎಲ್ಲಾ ಹಾವುಗಳನ್ನು ಪೂಜಿಸದೆ ನಾಗರವನ್ನೇ ಆಯ್ಕೆ ಮಾಡಿಕೊಳ್ಳಲು ಅದರ ಚುರುಕುತನ, ನಯನ ಮನೋಹರ ರೂಪ, ಹೊಂದಿರುವ ಭಯಂಕರ ವಿಷ ಹಾಗೂ ಭಯ ಸಹ ಕಾರಣವಾಗಿರಬಹುದು. ನಾಗರಹಾವನ್ನು ಕಾಮ ಹಾಗೂ ದ್ವೇಷಕ್ಕೆ ಸಂಕೇತವಾಗಿಯೂ ಬಳಸುತ್ತಿರುವುದು ವೇದ್ಯದ ಸಂಗತಿ.
ನಾಗರಪಂಚಮಿಯ ಹಬ್ಬದಲ್ಲಿ ಕುಟುಂಬದವರು ಹಬ್ಬದ ಅಡಿಗೆ ಮಾಡಿ, ಹೊಸ ಬಟ್ಟೆಯುಟ್ಟು ಸಂಭ್ರಮಿಸುವುದು, ಸೋದರ-ಸೋದರಿಯರು ಬಾಂಧವ್ಯದ ಬೆಸುಗೆ ಗಟ್ಟಿ ಮಾಡಿಕೊಳ್ಳುವುದು ಒಳ್ಳೆಯದೇ. 'ನಾಗದೇವ'ನಿಗೆ ಸಂತುಷ್ಟಗೊಳಿಸಲು, ಅರಿತೋ, ಅರಿಯದೆಯೋ ತಪ್ಪಾಗಿದ್ದಲ್ಲಿ ತಮಗೆ ಕೇಡಾಗದಿರಲಿ ಎಂಬ ಬೇಡಿಕೆಗಾಗಿ, ಮಕ್ಕಳ ಭಾಗ್ಯ(?)ಕ್ಕಾಗಿ ನಾಗಪೂಜೆಯನ್ನು, ಪ್ರಾಯಶ್ಚಿತ್ತಕಾರ್ಯವನ್ನು ಹಬ್ಬದ ದಿನಗಳಲ್ಲದೆ ಇತರ ದಿನಗಳಲ್ಲೂ ಆಚರಿಸುವವರಿದ್ದಾರೆ.
ಪ್ರಸ್ತುತ ಆಚರಣೆಯಲ್ಲಿರುವ ಹಾಲೆರೆಯುವ ಪದ್ಧತಿಯಿಂದ ನಾಗದೇವ ಸಂತುಷ್ಟಗೊಳ್ಳುವನೇ ಎಂಬ ಕುರಿತು ವಿಚಾರ ಮಾಡುವುದು ಒಳ್ಳೆಯದು. ಬಸವಣ್ಣನವರ ವಚನ "ಕಲ್ಲ ನಾಗರ ಕಂಡರೆ ಹಾಲನೆರೆವರಯ್ಯಾ, ದಿಟದ ನಾಗರ ಕಂಡರೆ ಕೊಲ್ಲು ಕೊಲ್ಲೆಂಬರಯ್ಯಾ" ಎಂಬುದು ಮಾನವನ ಮನಸ್ಥಿತಿಗೆ ಹಿಡಿದ ಕೈಗನ್ನಡಿ. ಹಾವು ಹಾಲು ಕುಡಿಯುವುದೇ, ಒಂದು ವೇಳೆ ಕುಡಿದರೂ ಅದು ಇಷ್ಟವಾದ ಆಹಾರವೇ ಎಂಬುದು ಸಂದೇಹಾಸ್ಪದ. ಒಂದು ವೇಳೆ ಹಾಲು ಅದಕ್ಕೆ ಇಷ್ಟವಾದ ಆಹಾರವೆಂದೇ ಇಟ್ಟುಕೊಂಡರೂ ಹುತ್ತಕ್ಕೆ ಹಾಲೆರೆದರೆ ಉದ್ದೇಶ ಈಡೇರುವುದೇ? ಎರೆಯುವುದಾದರೆ ಹಾವಿಗೇ ಎರೆಯಲಿ. ವರ್ಷಕ್ಕೊಮ್ಮೆ ಹಾಲೆರೆದರೆ ಉಳಿದ ೩೬೪ ದಿನಗಳಲ್ಲಿ ಅದಕ್ಕೆ ಹಾಲು ಎಲ್ಲಿ ಸಿಗುತ್ತದೆ? ಯೋಚಿಸಬೇಕಾದ ವಿಷಯವಿದಲ್ಲವೇ? ಹಾಲನೆರೆಯುವ ಶೇ. ೯೫ಕ್ಕೂ ಹೆಚ್ಚು ಜನರು ಹಬ್ಬದ ದಿನದಂದು ಹುತ್ತವನ್ನು ಹುಡುಕಿಕೊಂಡು ಹೋಗಿ ಹಾಲು ಎರೆಯುವವರು. ಹುತ್ತಕ್ಕೆ ಹಾಲು ಹಾಕುವುದರಿಂದ ಹುತ್ತಕ್ಕೆ ಹಾನಿಯಾಗುತ್ತದೆ, ಅಲ್ಲಿರಬಹುದಾದ ಹಾವಿನ ಏಕಾಂತಕ್ಕೆ ಭಂಗವಾಗುತ್ತದೆ, ಹಿಂಸೆಯಾಗುತ್ತದೆ, ತೊಂದರೆ ಅನುಭವಿಸುತ್ತದೆಯಲ್ಲವೇ? ಹೀಗೆ ತೊಂದರೆ ಕೊಟ್ಟು 'ನಾಗದೇವ' ಸಂತುಷ್ಟನಾದನೆಂದು ಭಾವಿಸುವುದು ಎಷ್ಟರ ಮಟ್ಟಿಗೆ ಸರಿ? ಸಂಪ್ರದಾಯವಾದಿಗಳು 'ಎಷ್ಟೋ ಪ್ರಶ್ನೆಗಳಿಗೆ ಸಮಂಜಸ ಉತ್ತರ ಸಿಗಲಾರದು ಮತ್ತು ಎಷ್ಟೋ ವಿಷಯಗಳು ತರ್ಕಕ್ಕೆ ನಿಲುಕಲಾರವು' ಎಂದು ಹೇಳುತ್ತಾರಾದರೂ, ಇಂತಹ ಆಚರಣೆ ಕುರಿತು ಪ್ರಶ್ನೆ ಮಾಡಬಾರದು, ತರ್ಕ ಮಾಡಬಾರದು ಎಂಬ ಅವರ ವಾದ ಸರಿಯೆಂದು ತೋರುವುದಿಲ್ಲ. ಅಪ್ಪ ಹಾಕಿದ ಆಲದಮರವೆಂದು ನೇಣು ಹಾಕಿಕೊಳ್ಳಲು ಹೋಗದೆ ಅದರ ನೆರಳಿನಲ್ಲಿ ಬಾಳಬಹುದು.
ಉದ್ದೇಶ 'ನಾಗದೇವ'ನಿಗೆ ಸಂತುಷ್ಟಗೊಳಿಸಬೇಕು, ಆತನಿಂದ ತೊಂದರೆಯಾಗಬಾರದು ಎಂಬುದೇ ಆಗಿದ್ದಲ್ಲಿ ಹಬ್ಬವನ್ನು ಈರೀತಿ ಆಚರಿಸಬಹುದಲ್ಲವೇ?
೧. ಉರಗಗಳು ನೆಮ್ಮದಿಯಿಂದ ಬಾಳಲು ಅವಕಾಶ ಮಾಡಿಕೊಡಬೇಕು.
೨. ತಮಗೆ ತೊಂದರೆಯಾದಾಗ ಮತ್ತು ಭಯವಾದಾಗ ಮಾತ್ರ ಹಾವುಗಳು ಕಚ್ಚುತ್ತವೆ. ಇಲ್ಲದಿದ್ದಲ್ಲಿ ಅವುಗಳಿಂದ ತೊಂದರೆಯಿಲ್ಲ. ಇಲಿಗಳು, ಕೀಟಗಳನ್ನು ಭಕ್ಷಿಸುವ ಅವು ರೈತಮಿತ್ರರು. ಜನರಲ್ಲಿ ಉರಗಗಳ ಕುರಿತು ಜಾಗೃತಿ ಮೂಡಿಸುವುದಲ್ಲದೆ ಪರಿಸರ ಸಂರಕ್ಷಣೆಯ ಕಡೆಗೆ ಗಮನ ಕೊಡಬೇಕು.
೩. ಹುತ್ತಕ್ಕೆ ಹಾಲೆರೆಯುವ ಬದಲು ಕೆಲವು ವಿಚಾರವಂತ ಮಠಾಧೀಶರು ಮಾಡುತ್ತಿರುವಂತೆ ಮಕ್ಕಳಿಗೆ ಹಾಲು ಹಂಚಬಹುದು.೪. ಹಾವು ಅಥವ ಪ್ರಾಣಿಗಳ ಚರ್ಮ ಸುಲಿದು ತಯಾರಿಸುವ ಬೆಲ್ಟು, ಇತ್ಯಾದಿಗಳನ್ನು ಕೊಳ್ಳಬಾರದು. ಹಾವು ಬದುಕಿದ್ದಂತೆಯೇ ಹಾವಿನ ಚರ್ಮ ಸುಲಿದು, ಒದ್ದಾಡುತ್ತಿರುವ ಹಾವಿನ ದೇಹವನ್ನು ಎಸೆದು ಹೋಗುವ ಕ್ರೂರಿಗಳ ಕಾರ್ಯಕ್ಕೆ ಇದರಿಂದ ಕಡಿವಾಣ ಹಾಕಬಹುದು.
೫. ಇಂತಹ ಇತರ ಸೂಕ್ತವೆನಿಸುವ ಕಾರ್ಯಗಳನ್ನು ಕೈಗೊಳ್ಳಬಹುದು.
ಇನ್ನು ಮುಂದಾದರೂ ನಾಗರ ಪಂಚಮಿಯನ್ನು 'ಪರಿಸರ ಪಂಚಮಿ'ಯಾಗಿ ಆಚರಿಸಲಿ ಎಂಬುದು ಈ 'ನಾಗರಾಜ'ನ ಆಶಯ!
*************
ಜಿಜ್ಞಾಸೆ
ವೇದಸುಧೆಯ ಆತ್ಮೀಯ ಅಭಿಮಾನಿಗಳೇ,
ಕಥೆ ಕಾದಂಬರಿಗಳನ್ನಾದರೆ ಸಲೀಸಾಗಿ ಓದಿಕೊಂಡು ಹೋಗಿಬಿಡಬಹುದು ,ಆದರೆ ಆತ್ಮಜ್ಞಾನದ ವಿಚಾರ ಹಾಗಲ್ಲ. ಅರ್ಥಮಾಡಿಕೊಂಡು ಓದಲು ಸ್ವಲ್ಪ ತಾಳ್ಮೆಯೂ ಬೇಕು. ಆದರೆ ತಾಳ್ಮೆಯಿಂದ ಅರ್ಥಮಾಡಿಕೊಂಡು ಓದಿದರೆ ಅದರಲ್ಲಿ ಸಿಗುವ ಸಂತೋಷಕ್ಕೆ ಪಾರವಿರುವುದಿಲ್ಲ. ಶ್ರೀ ಸುಧಾಕರ ಶರ್ಮರು ವೇದದ ಹಲವಾರು ಮಂತ್ರಗಳನ್ನು ನಮ್ಮ ನೆಮ್ಮದಿಯಬದುಕಿಗಾಗಿ ನಮ್ಮ ಮನಮುಟ್ಟುವಂತೆ ಮಾಡಿರುವ ಪ್ರವಚನಗಳ ಆಡಿಯೋ ಶರ್ಮರ ಪುಟದಲ್ಲಿದೆ. ಕಳೆದ ಕೆಲವು ದಿನಗಳಿಂದ ಶ್ರೀ ಸುಬ್ರಹ್ಮಣ್ಯರು ಶ್ರೀ ಶಂಕರಾಚಾರ್ಯರ ವಿವೇಕ ಚೂಡಾಮಣಿಯ ಬಗ್ಗೆ ಬರೆಯುತ್ತಿದ್ದಾರೆ. ಶಂಕರರ ಕೃತಿಗಳಲ್ಲಿ ಆತ್ಮತತ್ವದ ಬಗ್ಗೆ ಸರಳವಾದ ನಿರೂಪಣೆಯನ್ನು ಕಾಣಬಹುದು. ನಮ್ಮ ಸಮಚಿತ್ತದ ಜೀವನಕ್ಕೆ ಸಹಕಾರಿಯಾಗಬಲ್ಲ ಶಂಕರರ ಕೃತಿಗಳನ್ನು ಓದುವುದು ಮತ್ತು ಅದರ ಬಗ್ಗೆ ಜಿಜ್ಞಾಸೆ ನಡೆಸುವುದು ನಮ್ಮ ನೆಮ್ಮದಿಯ ಜೀವನಕ್ಕೆ ಸಹಕಾರಿಯಾಗಬಲ್ಲದು. ಬನ್ನಿ ಈ ಬಗ್ಗೆ ಜಿಜ್ಞಾಸೆ ನಡೆಸೋಣ. ಶ್ರೀ ಸುಧಾಕರ ಶರ್ಮರ ಆರೋಗ್ಯ ಇನ್ನೂ ಉತ್ತಮ ಗೊಳ್ಳಬೇಕಿದೆ. ಶರ್ಮರ ಆರೋಗ್ಯವು ಸುಧಾರಣೆ ಯಾದಮೇಲೆ ಶರ್ಮರು ನಮ್ಮೊಡನೆ ಚರ್ಚೆಗೆ ಸೇರುತ್ತಾರೆ. ಅವರಿಂದ ಉತ್ತಮ ಮಾರ್ಗದರ್ಶನ ದೊರೆಯಬಲ್ಲದು. ಈಗ ನಿಮ್ಮ ಸರದಿ.....

Tuesday, August 9, 2011
ವಿವೇಕ ಚೂಡಾಮಣಿ -ಭಾಗ ೭
ಗ್ರಂಥದ ಮುಂದುವರಿದ ಭಾಗ
चित्तस्य शुद्धये कर्म न तु वस्तूपलब्धये ।
वस्तुसिद्धिर्विचरेण न किज्ञ्चित् कर्मकोटिभिः ॥११॥
ಚಿತ್ತಸ್ಯ ಶುದ್ಧಯೇ ಕರ್ಮ ನ ತು ವಸ್ತೂಪಲಬ್ಧಯೇ |
(=ಚಿತ್ತಶುದ್ಧಿಗಾಗಿ ಕರ್ಮ; ಆತ್ಮವಸ್ತು(ಜ್ಞಾನ)ವನ್ನು ಪಡೆಯಲು ಅಲ್ಲ)
ವಸ್ತುಸಿದ್ಧಿರ್ವಿಚಾರೇಣ ನ ಕಿಂಚಿತ್ ಕರ್ಮಕೋಟಿಭಿಃ ||೧೧||
(=ವೈಚಾರಿಕತೆಯಿಂದ ಜ್ಞಾನ; ಕೋಟಿ ಕರ್ಮಾಚರಣೆಯಿಂದಲ್ಲ)
ಕರ್ಮಗಳನ್ನು ಆಚರಿಸುವುದರಿಂದ ಮುಕ್ತಿಯಂತೂ ದೊರೆಯುವುದಿಲ್ಲ ಎಂದಾದಲ್ಲಿ ಅವುಗಳನ್ನು ಆಚರಿಸುವುದಾದರೂ ಏಕೆ ? ಎಂಬ ಪ್ರಶ್ನೆಗೆ ಮೇಲಿನ ಶ್ಲೋಕದ ಮೂಲಕ ಶಂಕರರು ಉತ್ತರವನ್ನು ತಿಳಿಸುತ್ತಾರೆ.
’ಚಿತ್ತಶುದ್ಧಿಗಾಗಿ ಕರ್ಮ’ ಎಂದು ಹೇಳುತ್ತಾರೆ. ಬುದ್ಧಿಗೆ ಆವರಿಸುವ ಭ್ರಮೆ ಅಥವಾ ಅಜ್ಞಾನವನ್ನು ತೊಡೆದುಹಾಕಲು ಕರ್ಮಗಳನ್ನು ಆಚರಿಸಬೇಕು ಎನ್ನುತ್ತಾರೆ. ಮೊದಲು ಅಜ್ಞಾನವನ್ನು ಕಳೆದುಕೊಂಡರೆ ಜ್ಞಾನದ ಮಾರ್ಗ ಯಾವುದು ಎಂದು ತಂತಾನೇ ಕಾಣಿಸುತ್ತದೆ. ಜ್ಞಾನಸಿದ್ಧಿಗೆ ಬೇಕಾಗುವ ಧೃಡತೆ, ಏಕಾಗ್ರತೆ, ಸಹಿಷ್ಣುತೆ ಇತ್ಯಾದಿಗಳು ಮಾಡುವ ಕರ್ಮದಿಂದ ನೆಲೆಗೊಳ್ಳುತ್ತವೆ ಮತ್ತು ಸಾಧನೆಯ ಹಾದಿಗೆ ದಾರಿದೀಪವಾಗುತ್ತದೆ. ಸಮಚಿತ್ತಕ್ಕಾಗಿ ಕರ್ಮವೇ ಹೊರತು ಆತ್ಮವಸ್ತುವನ್ನು ಅಥವಾ ಆತ್ಮಜ್ಞಾನವನ್ನು ಪಡೆಯಲು ಅಲ್ಲ ಎಂದು ಹೇಳುತ್ತಾರೆ.
ಮೇರುಪರ್ವತವನ್ನು ಅಥವಾ ಎವರೆಸ್ಟ್ ಅನ್ನು ಏರಬೇಕೆನ್ನುವವರು ಅದಕ್ಕೆ ಬೇಕಾಗುವ ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಳ್ಳಬೇಕಾಗುತ್ತದೆ. ಕೆಲವು ಏರುವುದಕ್ಕೆ ಮುಂಚೆ ಬೇಕಾದ ತಯಾರಿಗಳು ಮತ್ತು ಕೆಲವು ಏರುವಾಗ ಬೇಕಾಗುವ ತಯಾರಿಗಳು ಇರುತ್ತವೆ. ಶಿಖರವನ್ನು ಏರಬೇಕೆಂದು ಮನಸು ಮಾಡಿದವನು ಮೊದಲು ಧೃಡಾಕಾಯನಾಗಿರಬೇಕಾಗುತ್ತದೆ. ಗರಡಿಮನೆಯ ವ್ಯಾಯಾಮಗಳನ್ನು ಮಾಡಿಕೊಂಡು ಗಟ್ಟಿಮುಟ್ಟಾಗಿರಬೇಕಾಗುತ್ತದೆ. ಇದಕ್ಕೆ ಕೆಲವು ತಿಂಗಳುಗಳು ಬೇಕಾಗುತ್ತದೆ. ಉಸಿರನ್ನು ನಿಯಂತ್ರಿಸಿಕೊಳ್ಳುವ ಸಾಮರ್ಥ್ಯವನ್ನು ಕೆಲವು ವಾರಗಳ ಅಭ್ಯಾಸದಿಂದ ಪಡೆದುಕೊಳ್ಳಬೇಕಾಗುತ್ತದೆ. ಆರೋಗ್ಯದಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಇಷ್ಟೆಲ್ಲಾ ಕರ್ಮಗಳನ್ನು ಏರುವವನು ಮುಂಚೆಯೇ ಮುಗಿಸಿ ಸಿದ್ಧನಾಗಿರಬೇಕಾಗುತ್ತದೆ. ನಂತರ ಪರ್ವತವನ್ನು ಏರುವಾಗ ಈ ಹಿಂದಿನ ಯಾವ ಸಾಧನಗಳು ಬೇಕಾಗುವುದಿಲ್ಲ, ಇಲ್ಲಿ ಬೇರೆಯದೇ ಸಾಧನಗಳು ಬೇಕಾಗುತ್ತವೆ. ಬೆಚ್ಚಗಿನ ಉಣ್ಣೆಯ ಬಟ್ಟೆ, ಆಮ್ಲಜನಕದ ಸಿಲಿಂಡರ್, ಹಿಮನಿರೋಧಕ ಬೂಟುಗಳು, ಕೈ ಗವಸುಗಳು ಇತ್ಯಾದಿ. ಇವೆಲ್ಲಾ ಗರಡಿಮನೆಯ ತಯಾರಿಯಲ್ಲಿ ಬೇಕಾಗುವುದಿಲ್ಲ. ಹೇಗೂ ಹಿಮಾಲಯ ಏರಲೇಬೇಕು ಅದಕ್ಕಾಗಿ ಬೂಟು, ಗವಸು, ಉಣ್ಣೆಯ ಬಟ್ಟೆ ಇವುಗಳನ್ನೆಲ್ಲಾ ಹಾಕಿಕೊಂಡೇ ವ್ಯಾಯಾಮ ಮಾಡುತ್ತೇನೆಂದು ಹೇಳುವವನನ್ನು ಮೂಳನೆನ್ನಬೇಕಾಗುತ್ತದೆ. ಗರಡಿಮನೆಯ ವ್ಯಾಯಾಮವು ಕರ್ಮಕ್ಕೆ ಸಾಧನವಾದರೆ ಏರುವಾಗ ಬೇಕಾಗುವ ವಸ್ತುಗಳು ಜ್ಞಾನಕ್ಕೆ ಸಾಧನಗಳು. ಇವು ಒಂದನ್ನೊಂದು ಸಂಪರ್ಕಿಸುವುದಿಲ್ಲ. ಕೇವಲ ಗಟ್ಟಿಮುಟ್ಟಾದ ದೇಹವನ್ನು ಹೊಂದಿದ ಮಾತ್ರಕ್ಕೆ ಹಿಮಾಲಯವನ್ನು ಏರಿದಂತಾಗುತ್ತದೆಯೇ? ಇಲ್ಲ ; ಅದು ಪರೋಕ್ಷವಾಗಿ ಸಹಾಯ ಮಾಡುತ್ತದೆ ಆದರೆ ಜ್ಞಾನಪ್ರಾಪ್ತಿಯ ಸಾಧನಗಳ ಮುಂದೆ ಅದು ಗೌಣವಾಗುತ್ತದೆ. ಆಮ್ಲಜನಕದ ಸಿಲಿಂಡರ್ ಇಲ್ಲದೆ ಯಾರೂ ಎವರೆಸ್ಟನ್ನು ಏರಲಾರರು !. ಕೆಲವರು ಗರಡಿಮನೆಯಲ್ಲಿ ಪಳಗದೆಯೂ ಸಹ ಆಮ್ಲಜನಕದ ಸಿಲಿಂಡರ್, ಉಣ್ಣೆಯ ಬಟ್ಟೆ, ಇತ್ಯಾದಿ ಸಾಧನಗಳನ್ನಿಟ್ಟುಕೊಂಡು ಮನೋಬಲದಿಂದ (ಮನಸಿನಂತೆ ಮಹಾದೇವ !) ಎವರೆಸ್ಟ್ ಏರಿದರೂ ಏರಬಹುದು !. ಅಂತಹವರು ತುಂಬಾ ವಿರಳ ಎನ್ನಬೇಕಾಗುತ್ತದೆ. ಅಂತಹ ಮನೋಬಲವುಳ್ಳವರು ಆತ್ಮಜ್ಞಾನಕ್ಕೆ ನೇರವಾಗಿ ಅರ್ಹರಾಗುತ್ತಾರೆ.
ವಿಚಾರಮಂಥನದಿಂದ ಮಾತ್ರ ಜ್ಞಾನಪ್ರಾಪ್ತಿಯೇ ಹೊರತು ಹಲವು ಕೋಟಿ ಕರ್ಮಗಳನ್ನು ಆಚರಿಸುವುದರಿಂದಲ್ಲ ಎಂದು ಎರಡನಯೆ ಸಾಲಿನಲ್ಲಿ ಹೇಳುತ್ತಾರೆ. ವಿವೇಕ ಚೂಡಾಮಣಿಯನ್ನು ಓದಿ ಪಡೆಯುವ ಜ್ಞಾನಕ್ಕಿಂತಲೂ ಅಲ್ಲಿರುವ ವಿಚಾರವನ್ನು ಚರ್ಚಿಸಿ, ವಿವೇಚಿಸಿ ಪಡೆಯುವ ಜ್ಞಾನವು ಉನ್ನತಮಟ್ಟದ್ದಾಗಿರುತ್ತದೆ. ತತ್ತ್ವವಿಚಾರದ ಚರ್ಚೆಗಳು ನಡೆದಂತೆಲ್ಲಾ ಆತ್ಮಜ್ಞಾನದ ಒಲವು ಹೆಚ್ಚುತ್ತಾ ಹೋಗುತ್ತದೆ. ವಿವೇಚಿಸದೆ , ವಿಚಾರವಿಲ್ಲದೇ ಮಾಡುವ ಕೋಟಿ ಕರ್ಮಗಳಿಗಿಂತಲೂ ವೈಚಾರಿಕತೆಯಿಂದ ಬರುವ ತಿಳುವಳಿಕೆ ಅಥವಾ ಆತ್ಮಜ್ಞಾನವೇ ಉನ್ನತವಾದುದು ಎಂದು ಶಂಕರರು ತಿಳಿಸುತ್ತಾರೆ.
ಹೀಗೆ ಕರ್ಮ-ಜ್ಞಾನಗಳು ಒಂದನ್ನು ಬಿಟ್ಟು ಮತ್ತೊಂದಿಲ್ಲ. ಚಿತ್ತ ಶುದ್ಧಿಯಾಗದ ಹೊರತು ಜ್ಞಾನಪ್ರಾಪ್ತಿಗೆ ಅವಕಾಶವಿಲ್ಲ. ಅಜ್ಞಾನವನ್ನು ತೊರೆಯಲು ಕರ್ಮಗಳು ಸಹಾಯಕವಾಗುತ್ತವೆ ಆದರೆ ಆತ್ಮಜ್ಞಾನಕ್ಕೆ ಬೇರೆಯದೇ ಆದ ದಾರಿಯನ್ನು ಹುಡುಕಬೇಕಾಗುತ್ತದೆ.
ಅಜ್ಞಾನ ಅಥವಾ ಭ್ರಮೆಯು ಹೇಗೆ ತೋರುತ್ತದೆ ಎನ್ನುವುದನ್ನು ಮುಂದಿನ ಶ್ಲೋಕದಲ್ಲಿ ನಿರೂಪಿಸುತ್ತಾರೆ.
सम्यग् विचारतः सिद्धा रज्जुतत्वावधारणा ।
भ्रान्त्योदितमहासर्पभवदुःखविनाशिनी ॥१२॥
ಸಮ್ಯಗ್ವಿಚಾರತಃ ಸಿದ್ಧಾ ರಜ್ಜುತತ್ವಾವಧಾರಣಾ |
(= ವಿಚಾರದಿಂದ ಜ್ಞಾನ ಎನ್ನುವುದು ಹಾವು-ಹಗ್ಗದ ತತ್ತ್ವದಿಂದ ತಿಳಿಯುತ್ತದೆ)
ಭ್ರಾಂತ್ಯೋದಿತ ಮಹಾಸರ್ಪ ಭವದುಃಖವಿನಾಶಿನೀ ||೧೨||
(= ಮಹಾಸರ್ಪವೆಂಬ ಭ್ರಮೆಯು ನೀಗುತ್ತದೆ)
ಕರ್ಮದಿಂದಲೇ ಮುಕ್ತಿ ಎಂದು ತಿಳಿದು ಆತ್ಮತತ್ತ್ವಾನ್ವೇಷಣೆಯನ್ನೇ ನೆಡೆಸದಿರುವುದು ಹಗ್ಗವನ್ನೇ ಹಾವೆಂದು ಭ್ರಮಿಸಿದಂತೆ ಮತ್ತು ಆತ್ಮಜ್ಞಾನವು ಬಂದೊಡನೆಯೆ ಅಂತಹ ಭ್ರಮೆಯು ತಾನಗೇ ತೊಲಗುವುದು ಎಂದು ಮೇಲಿನ ಶ್ಲೋಕದ ಮೂಲಕ ಹೇಳುತ್ತಾರೆ. ಸರ್ಪ-ರಜ್ಜು (=ಹಗ್ಗ) ತತ್ತ್ವವು ವೇದಾಂತದರ್ಶನದ ಮಹತ್ವದ ಪ್ರಕ್ರಿಯೆಯಾಗಿದೆ. ಭ್ರಮೆಯಲ್ಲಿದ್ದಾಗ ಹಗ್ಗವು ಹಾವಿನ ರೂಪದಲ್ಲಿ ತೋರಬಹುದು. ಕತ್ತಲಲ್ಲಿ ಪಂಜನ್ನು ಹಿಡಿದು ನೆಡೆದು ಹೋದವರನ್ನು ಕೊಳ್ಳಿದೆವ್ವವೆಂದು ಭ್ರಮಿಸಿ ವಾರಗಳ ಕಾಲ ಭಯದಿಂದ ತತ್ತರಿಸುವ ಪ್ರಮೇಯವೂ ಇರುತ್ತದೆ. ಹರೆಯದ ಮಾಯೆಯಲ್ಲಿ ಕತ್ತೆಯೂ (ಕತ್ತೆಗಳಲ್ಲಿ ಕ್ಷಮೆಯಾಚಿಸುತ್ತೇನೆ, ಅದು ನನ್ನ ಇಷ್ಟದ ಪ್ರಾಣಿ) ಸುಂದರವಾಗಿ ಕಾಣುತ್ತದೆ ಎಂಬ ಮಾತಿದೆ. ಕತ್ತಲಿನಲ್ಲಿ ’ಸರ-ಸರ’ ಎಂದು ಸದ್ದಾದಾಗ ಅಲ್ಲಿ ಹಾವಿರುವುದೆಂಬ ಭ್ರಮೆಯಿಂದ ಭಯಗೊಂಡವರು ದೀಪದ ಬೆಳಕಿನಲ್ಲಿ ನೋಡಿದಾಗ ಅದು ಹೆಗ್ಗಣವೋ ಮತ್ತೊಂದೋ ಆಗಿರುವುದು ತಿಳಿದಾಗ ಅವರ ಬುದ್ಧಿಗೆ ಬಡಿದಿದ್ದ ಮಂಕು ತೆರೆಯುತ್ತದೆ. ಆ ಕ್ಷಣಕ್ಕೆ ಹಗ್ಗವೇ ಹಾವಿನಂತೆ ಕಂಡರೂ ವಿಚಾರಿಸಿ, ವಿವೇಚಿಸಿ ನೋಡಿದಾಗ ವ್ಯತ್ಯಾಸವು ತಿಳಿದು ಭ್ರಮೆಯು ಅಳಿಯುತ್ತದೆ. ಚಿತ್ತಶುದ್ಧಿಗಾಗಿ ಕರ್ಮ. ಕರ್ಮದಲ್ಲಿ ಪರಿಪಾಕಗೊಂಡ ನಂತರ ಆತ್ಮತತ್ತ್ವಾನ್ವೇಷಣೆಯ ದಾರಿ. ಈ ದಾರಿಯಲ್ಲಿ ಸಾಗುತ್ತಿದ್ದಂತೆಯೆ ಹಗ್ಗವೇ ಮಾಹಸರ್ಪ ಎಂದು ತಿಳಿದ ಭ್ರಾಂತಿಯು ನೀಗಿ ವಿಚಾರದಿಂದಲೇ ಜ್ಞಾನ ಎಂಬುದು ನಿಕ್ಕಿಯಾಗುತ್ತದೆ.
ಒಂದು ಲೌಕಿಕದ ಉದಾಹರಣೆಯನ್ನು ಇಲ್ಲಿ ನೋಡೋಣ; ಬೊಂಬಾಯಿ ಬೋಂಡವನ್ನು ಮಾಡಲು ಹಿಟ್ಟನ್ನು ಕಲೆಸಿ ಅದನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಟ್ಟುರುತ್ತೇವೆ. ಕಾದಿರುವ ಎಣ್ಣೆಗೆ ಆ ಉಂಡೆಗಳನ್ನು ಹಾಕಿದಾಗ ಅದು ಸದ್ದುಮಾಡಿಕೊಂಡು ಬೇಯುತ್ತದೆ, ಬೆಂದ ನಂತರ ಸುಮ್ಮನಾಗುತ್ತದೆ. ಬೋಂಡದ ಉಂಡೆಯು ಬೇಯುವುದಕ್ಕೆ ಮುಂಚೆಯೂ ಸುಮ್ಮನಿತ್ತು. ಈಗ ಎರಡರ ಗುಣವನ್ನೂ ಒಂದೇ ಎನ್ನಲು ಸಾಧ್ಯವೆ ?!. ಬೇಯದ ಬೋಂಡವು ಕರ್ಮವನ್ನು ಮಾಡಿಲ್ಲದ ಜೀವವಾದರೆ ಬೆಂದಿರುವ ಬೋಂಡವು ಕರ್ಮವನ್ನು ಮೀರಿರುತ್ತದೆ !. ಎಣ್ಣೆಯಲ್ಲಿ ಚೆನ್ನಾಗಿ ಬೆಂದು ( ಕರ್ಮದಲ್ಲಿ ಪರಿಪಾಕಗೊಂಡು) ತೆಪ್ಪಗಾಗಿರುತ್ತದೆ. ಮುಂದೆ ಅದು ಒಬ್ಬರ ಹೊಟ್ಟೆಯನ್ನು ಸೇರಲು ಅರ್ಹತೆಯನ್ನು ಪಡೆದುಕೊಂಡಿರುತ್ತದೆ. (ಕನ್ನಡದ "ಭಕ್ತ ಕುಂಬಾರ" ಚಲನಚಿತ್ರ ನೋಡಿುವವರು , ಚಿತ್ರದಲ್ಲಿ ಕುಂಬಾರನ ಪಾತ್ರ ವಹಿಸಿರುವ ರಾಜಕುಮಾರರು ತಮ್ಮ ಮನೆಯಲ್ಲಿ ಸೇರಿದ್ದ ಸಂತರುಗಳ ತಲೆಯನ್ನು ಕುಟ್ಟಿ ’ಇದು ಬೆಂದಿಲ್ಲ, ಇದು ಅರ್ಧ ಬೆಂದಿದೆ, ಇದು ಮುಕ್ಕಾಲು’ ಎಂದು ಹೇಳುವ ಸನ್ನಿವೇಶವನ್ನು ನೆನೆಪಿಸಿಕೊಳ್ಳಬಹುದು !). ಬೇಸಾಯ ಮಾಡಲು ಕುದುರೆಯು ಬೇಡವಾದರೆ ಏನಂತೆ ? ಟಾಂಗಾ ಗಾಡಿಗಾದರೂ ಬೇಕಲ್ಲವೆ !. ಹೀಗೆ ಮುಕ್ತಿಗೆ ಕರ್ಮವಲ್ಲದಿದ್ದರೂ , ಭ್ರಮೆಯಿಂದ ಹೊರಬರಲು ಮತ್ತು ಚಿತ್ತಶುದ್ಧಿಗಾಗಿ ಕರ್ಮವು ಬೇಕಾಗುತ್ತದೆ ಮತ್ತು ವಿಚಾರದಿಂದಲೇ ಆತ್ಮಜ್ಞಾನ ಎನ್ನುವುದನ್ನು ಶಂಕರರು ತಿಳಿಸುತ್ತಾರೆ.
ಮುಂದಿನ ಕಂತಿನಲ್ಲಿ ಇನ್ನಷ್ಟು ತಿಳಿಯೋಣ.

Subscribe to:
Posts (Atom)