///// ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ ////// ಕೃಣ್ವಂತೋ ವಿಶ್ವಮಾರ್ಯಂ //// //// ಮಾತಾ ಭೂಮಿಃ ಪುತ್ರೋಹಂ ಪೃಥಿವ್ಯಾಃ /////
Saturday, November 22, 2014
വേദപുഷ്പാഞ്ജലി - ഭാഗം 3
ಈ ವೀಡಿಯೋ ದಯಮಾಡಿ ನೋಡಿ. ಜನಸಾಮಾನ್ಯರಿಗೆ ವೇದದ ಅರಿವು ಮೂಡಿಸಲು ಆಚಾರ್ಯ ರಾಜೇಶ್ ಪರಿಶ್ರಮ ಅದ್ಭುತ. ವೇದದ ಕೆಲಸವು ಆಗುತ್ತಿಲ್ಲವೆಂಬ ಅಭಿಪ್ರಾಯ ನನ್ನದಲ್ಲ. ಆದರೆ ಜಾತಿ/ಮತ/ಪಂಥ ಭೇದವಿಲ್ಲದೆ ಎಲ್ಲರಿಗೂ ವೇದದ ಅರಿವು ಮೂಡಿಸುತ್ತಿರುವ ಶ್ರೀ ರಾಜೇಶ್ ಆಚಾರ್ಯರಿಗೆ ನಮೋನಮಃ
ವೇದದ ಅರಿವು ಮೂಡಿಸುವ ಆಂದೋಲನ ಆರಂಭಿಸೋಣ ಬನ್ನಿ,
ಕೇರಳದ ಆಚಾರ್ಯ ರಾಜೇಶ್ ಅವರ ಎಲ್ಲಾ ಕಾರ್ಯಕ್ರಮಗಳೂ ನನ್ನನ್ನು ಆಕರ್ಶಿಸುತ್ತಿವೆ. ಅವರಂತೆ ವೇದವು ಹಳ್ಳಿ ಹಳ್ಳಿಗಷ್ಟೇ ಅಲ್ಲ, ಗೊಲ್ಲರ ಹಟ್ಟಿಗೂ ಮುಟ್ಟಬೇಕಾಗಿದೆ. ಸ್ನೇಹಿತರೇ, ಹಾಸನಕ್ಕೆ ನೂರು ಕಿಲೋಮೀಟರ್ ದೂರದೊಳಗೆ ಯಾವ ಹಳ್ಳಿಯಲ್ಲಿ ಕರೆದರೂ ನಾನು ನಮ್ಮ ವೇದ ಭಾರತಿಯ ಸದಸ್ಯರೊಡನೆ ಬರಲು ಸಿದ್ಧ. ಹಣ ಖರ್ಚುಮಾಡಬೇಕಾಗಿಲ್ಲ. ಅಗ್ನಿಹೋತ್ರ ಕಲಿಕೆ, ವೇದದ ಸರಳ ಪರಿಚಯ ಕಾರ್ಯಕ್ರಮವನ್ನು ಎಲ್ಲೇ ಯೋಜಿಸಿದರೂ ನಾವು ಬರಲು ಸಿದ್ಧ. ಸಾಮಾಜಿಕ ಸಾಮರಸ್ಯಕ್ಕೆ ವೇದವು ಅತ್ಯಂತ ಸಹಕಾರಿ.ಬನ್ನಿ, ವೇದದ ಅರಿವು ಮೂಡಿಸುವ ಆಂದೋಲನ ಆರಂಭಿಸೋಣ. ನಿಮ್ಮ ಯಾವುದೇ ಸಲಹೆಯನ್ನು vedasudhe@gmail.com ಗೆ ಮೇಲ್ ಮಾಡಿ.

![]() |
Thursday, November 20, 2014
ಅಂತರ್ಜಾಲದಲ್ಲಿ ಉಪನ್ಯಾಸ
ನನ್ನ ಆತ್ಮೀಯ ಗೆಳೆಯರೇ,
ಹಾಸನದ ವೇದಭಾರತಿವತಿಯು ಈಗಾಗಲೇ ಎರಡು-ಮೂರು ವರ್ಷಗಳಿಂದ " ಎಲ್ಲರಿಗಾಗಿ ವೇದ" ಎಂಬ ಉದ್ದೇಶವನ್ನಿಟ್ಟುಕೊಂಡು ನಿತ್ಯ ಸತ್ಸಂಗ ನಡೆಸುತ್ತಿದೆ. ಸತ್ಸಂಗದಲ್ಲಿ ಜಾತಿಭೇದ ಬಿಟ್ಟು ಎಲ್ಲರೂ ಸೇರಿ ಅಗ್ನಿಹೋತ್ರ ,ವೇದಪಠಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪ್ರತೀ ಬುಧವಾರ ವಿಶೇಷ ಸತ್ಸಂಗ ನಡೆಯುತ್ತಿದೆ. ಅದರಲ್ಲಿ ಯಾರದಾದರೂ ವೇದ ಪಂಡಿತರ ಉಪನ್ಯಾಸ ಇರುತ್ತದೆ.
ನಮಗೆಲ್ಲಾ ಪ್ರೇರಕರು ಬೆಂಗಳೂರಿನ ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು. ಅವರು ಇನ್ನು ಕೆಲವು ದಿನ ಹೊರ ಪ್ರವಾಸ ಮಾಡುವಂತಿಲ್ಲ. ಆದರೆ ನಾವು ಅವರನ್ನು ಬಿಡುವಂತಿಲ್ಲ. ಅವರ ಮಾರ್ಗದರ್ಶನದಲ್ಲಿ ಸಾಗಬೇಕೆಂದು ಅಂತರ್ಜಾಲದ ಮೂಲಕ ಅವರ ಉಪನ್ಯಾಸ ಕೇಳುವ ಮತ್ತು ಅವರೊಡನೆ ಮಾತನಾಡಿ ನಮ್ಮ ಸಮಸ್ಯೆಗಳಿಗೆ ಉತ್ತರ ಪಡೆಯುವ ದಿಕ್ಕಿನಲ್ಲಿ ಆಲೋಚನೆ ನಡೆಸಿದ್ದೇವೆ. ವಾರದಲ್ಲಿ ಎರಡು ದಿನ ಆನ್ ಲೈನ್ ಪಾಠಮಾಡಲು ಅವರು ಒಪ್ಪಿದ್ದಾರೆ. ಅಲ್ಲದೆ ಜಗತ್ತಿನಲ್ಲಿ ಅಲ್ಲಲ್ಲಿ ಚದುರಿಹೋಗಿರುವ ಉಪನ್ಯಾಸಕರಿಂದಲೂ ಉಪನ್ಯಾಸ ಕೇಳಬೇಕೆಂಬ ಆಸೆಯೂ ಇದೆ. ಸ್ಕೈಪ್ ಅಥವಾ ಗೂಗಲ್ ಮೂಲಕ ಯೋಜನೆ ರೂಪಿಸಬೇಕೆಂದು ಕೊಂಡಿದ್ದೇವೆ.
ಈಗಾಗಲೇ ಅಂತರ್ಜಾಲದ ಸಹಿತ ಕಂಪ್ಯೂಟರ್ ಸಿದ್ಧವಿದೆ. ನಮಗೀಗ ನಾವು ಸುಮಾರು ನಲವತ್ತು ಐವತ್ತು ಜನರು ನೋಡುವಂತೆ ಪ್ರೊಜೆಕ್ಟರ್ ಕೊಂಡು ಅದನ್ನು ಕಂಪ್ಯೂಟರ್ ಗೆ ಕನೆಕ್ಟ್ ಮಾಡಬೇಕಾಗಿದೆ.
ಈ ಬಗ್ಗೆ ಹೆಚ್ಚು ಮಾಹಿತಿ ಇದ್ದವರು vedasudhe@gmail.com ಗೆ ಮೇಲ್ ಮಾಡಿ ಸಲಹೆ ಕೊಡುವಿರಾ? ಮುಂದಿನ ದಿನಗಳಲ್ಲಿ ಹೊರಗಿರುವ ಸ್ನೇಹಿತರೂ ಸ್ಕೈಪ್/ಗೂಗಲ್ ಮೂಲಕ ಕೂಡ ಪಾಠ ಕೇಳುವ ವ್ಯವಸ್ಥೆ ಮಾಡಿಕೊಳ್ಳಬಹುದೆಂದು ಭಾವಿಸುವೆ. ಸರಿಯಾದ ಯೋಜನೆ ರೂಪಿಸಬೇಕಾಗಿದೆ. ಸಾಮಾನ್ಯವಾಗಿ ಆಗುವ ಖರ್ಚು ಮತ್ತು ಅಗತ್ಯ ಸಲಕರಣೆಗಳ ಬಗ್ಗೆ ದಯಮಾಡಿ ಸಲಹೆ ಕೊಟ್ಟು ಉಪಕರಿಸಿ.
ಅಂತೆಯೇ ಒಂದು ಸದ್ವಿಚಾರದ ಪ್ರಚಾರಕ್ಕಾಗಿ ಇರುವ vedasudhe.com ನಿರ್ವಹಣೆ ಮಾಡಲು ಯಾರಾದರೂ ಮುಂದೆ ಬಂದರೆ ಬಹಳ ಸಹಾಯವಾಗುತ್ತೆ. ತಾಂತ್ರಿಕ ಅರಿವಿನ ಕೊರತೆಯಿಂದ ಅದನ್ನು ಪೂರ್ಣ ಬಳಸಲು ಸಾಧ್ಯವಾಗಿಲ್ಲ.
ಅಂತೆಯೇ ಒಂದು ಸದ್ವಿಚಾರದ ಪ್ರಚಾರಕ್ಕಾಗಿ ಇರುವ vedasudhe.com ನಿರ್ವಹಣೆ ಮಾಡಲು ಯಾರಾದರೂ ಮುಂದೆ ಬಂದರೆ ಬಹಳ ಸಹಾಯವಾಗುತ್ತೆ. ತಾಂತ್ರಿಕ ಅರಿವಿನ ಕೊರತೆಯಿಂದ ಅದನ್ನು ಪೂರ್ಣ ಬಳಸಲು ಸಾಧ್ಯವಾಗಿಲ್ಲ.
ಅಂತೆಯೇ ಅಂತರ್ಜಾಲದಲ್ಲಿ ಉಪನ್ಯಾಸ ಮಾಡಲು ಆಸಕ್ತಿ ಇರುವ ಪಂಡಿತರ ಬಗ್ಗೆ ನಮಗೆ ವಿವವರ ಕೊಡಿ
-ಹರಿಹರಪುರಶ್ರೀಧರ್
ಸಂಯೋಜಕ
ವೇದಭಾರತೀ, ಹಾಸನ
Saturday, November 15, 2014
ಇಬ್ಬರು ಮಹನೀಯರ ಮಾರ್ಗದರ್ಶನದಲ್ಲಿ -ಎಲ್ಲರಿಗಾಗಿ ವೇದ
ಕೇರಳದ ಕೆಲವು ಚಿತ್ರಗಳು!ಹಾಸನದ ಕೆಲವು ಚಿತ್ರಗಳು! ಒಂದು ಕಡೆ ಕೇರಳದ ಆಚಾರ್ಯ ರಾಜೇಶ್ ಮತ್ತೊಂದು ಕಡೆ ಬೆಂಗಳೂರಿನ ವೇದಾಧ್ಯಾಯೀ ಶ್ರೀ ಸುಧಾಕರಶರ್ಮ.
ವೇದದ ಕೆಲಸಕ್ಕೆ ಯಾವ ಗಡಿ! ಸಾಗರಗಳನ್ನೂ ದಾಟಿರುವಾಗ!!
"ಎಲ್ಲರಿಗಾಗಿ ವೇದ " ಎಂಬ ವೇದಭಾರತಿಯ ಉದ್ದೇಶಕ್ಕೆ ಹೊಂದುವ ಕೇರಳದ ಆಚಾರ್ಯ ರಾಜೇಶ್ ಅವರ ಕೆಲಸವನ್ನು ಗಮನಿಸಿದಾಗ ಆಚಾರ್ಯ ರಾಜೇಶ್ ಮತ್ತು ವೇದಭಾರತಿಯ ಚಿಂತನೆಗಳಿಗೆ ಸಾಮ್ಯತೆಯು ಗೊತ್ತಾಗುತ್ತದೆ.
ವೇದಭಾರತಿಯು ಅಗ್ನಿಹೋತ್ರಕ್ಕೆ ಕೊಟ್ಟಿರುವಂತೆಯೇ ಮಹತ್ವವನ್ನು ಆಚಾರ್ಯ ರಾಜೇಶ್ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕೊಟ್ಟಿರುವುದನ್ನು ಗಮನಿಸಬಹುದು. ಅವರದು ಸುಮಾರು ಹದಿನೈದು ವರ್ಷಗಳ ಸಾಹಸ ಯಾತ್ರೆ. ವೇದಭಾರತೀ ಈಗಿನ್ನೂ ಮೂರನೇ ವರ್ಷದಲ್ಲಿ ಪದಾರ್ಪಣೆ ಮಾಡುತ್ತಿರುವ ಶಿಶು.
ಆಚಾರ್ಯರ ಮಾರ್ಗದರ್ಶನ ಪಡೆಯಲು ಯಾವ ಅಡ್ದಿಯೂ ಇಲ್ಲ. ಆಚಾರ್ಯರು ಅಲ್ಲಿನ ದೇವಾಲಯಗಳನ್ನೇ ಕೇಂದ್ರವಾಗಿಟ್ಟು ಕೊಂಡಿದ್ದಾರೆ. ವೇದಭಾರತಿಯದೂ ಅದೇ ಪ್ರಯತ್ನ.ನಮಗೆ ಮಾರ್ಗದರ್ಶನ ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು.ವೇದಭಾರತಿಗೆ ರಾ.ಸ್ವ.ಸಂಘದ ಹಿರಿಯರಾದ ಶ್ರೀ ಸು.ರಾಮಣ್ಣ ನವರ ಸಹಿತ ಹಲವರ ಮಾರ್ಗದರ್ಶನ ಸಿಕ್ಕಿದೆ. ಹುಬ್ಬಳ್ಳಿಯ ಆರ್ಷ ವಿದ್ಯಾಲಯದ ಪೂಜ್ಯ ಶ್ರೀ ಚಿದ್ರೂಪಾನಂದರೂ ಸಹ ಮಾರ್ಗದರ್ಶನ ಮಾಡುತ್ತಿದ್ದಾರೆ. ಶ್ರೀ ರಾಮಕೃಷ್ಣ ಮಿಷನ್ ಸೇರಿದಂತೆ ಹಲವಾರು ಯತಿಗಳು ವೇದಭಾರತಿಯ ಕಾರ್ಯವನ್ನು ಗಮನಿಸುತ್ತಿದ್ದಾರೆ.
ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು ಅನಾರೋಗ್ಯದಿಂದ ಹೊರ ಊರುಗಳಿಗೆ ಪ್ರವಾಸ ಮಾಡುವ ಸ್ಥಿತಿಯಲ್ಲಿಲ್ಲ. ಆದರೆ ವೇದಭಾರತಿಯು ಎಲ್ಲೆ ಕಾರ್ಯಕ್ರಮಗಳನ್ನು ಆಯೋಜಿಸಿದರೂ ಬೆಂಗಳೂರಿನ ಅವರ ಮನೆಯಲ್ಲೇ ಕುಳಿತು ದೂರವಾಣಿ ಮೂಲಕವೇ ಶರ್ಮರು ಮಾಡುವ ಉಪನ್ಯಾಸವನ್ನು ಮೈಕ್ ಗೆ ಸಂಪರ್ಕಿಸಿ ಕಾರ್ಯಕ್ರಮದಲ್ಲಿ ಅವರ ಪ್ರವಚನವನ್ನು ಪ್ರಸ್ತುತ ಪಡಿಸಲಾಗುತ್ತಿದೆ.
ಜನಸಾಮಾನ್ಯರಿಗೆ ವೇದದ ಅರಿವು ಮೂಡಿಸುತ್ತಿರುವ ಆಚಾರ್ಯ ರಾಜೇಶ್ ಮತ್ತು ವೇದಾಧ್ಯಾಯೀ ಸುಧಾಕರ ಶರ್ಮರ ಚಿಂತನೆಯನ್ನು ಸಾಕಾರಗೊಳಿಸುವಲ್ಲಿ ವೇದಾಭಿಮಾನಿಗಳ ಸಹಕಾರ ಇನ್ನೂ ಹೆಚ್ಚು ಲಭ್ಯವಾಗಲೆಂಬುದು ವೇದಭಾರತಿಯ ಅಪೇಕ್ಷೆ.
ವೇದಾಧ್ಯಾಯೀ ಶ್ರೀ ಸುಧಾಕರಶರ್ಮರ ಆರೋಗ್ಯ ಪೂರ್ಣವಾಗಿ ಸುಧಾರಿಸಿಬಿಟ್ಟರೆ ವೇದಭಾರತಿಯ ಕೆಲಸ ಇನ್ನೂ ಹೆಚ್ಚು ಊರುಗಳಿಗೆ ವಿಸ್ತರಿಸುವುದರಲ್ಲಿ ಅನುಮಾನವಿಲ್ಲ. ಅವರ ಆರೋಗ್ಯ ಸುಧಾರಿಸಲೆಂಬುದೇ ಭಗವಂತನಲ್ಲಿ ನಮ್ಮ ಪ್ರಾರ್ಥನೆ.

| ಆಚಾರ್ಯ ರಾಜೇಶ್ |
![]() |
| ವೇದಾಧ್ಯಾಯೀ ಶ್ರೀಸುಧಾಕರಶರ್ಮ |
![]() |
| ಕೇರಳದಲ್ಲಿ ಆಚಾರ್ಯ ರಾಜೇಶ್ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಅಗ್ನಿಹೋತ್ರ |
![]() |
| ಕೇರಳದಲ್ಲಿ ಮಹಿಳೆಯರೇ ಮಾಡುತ್ತಿರುವ ಅಗ್ನಿಹೋತ್ರ |
![]() |
| ಆಚಾರ್ಯ ರಾಜೇಶ್ ಮಾರ್ಗದರ್ಶನದಲ್ಲಿ ಸಾಮೂಹಿಕ ಅಗ್ನಿಹೋತ್ರ |
![]() |
| ಜಾತಿಭೇದವಿಲ್ಲದೆ ಎಲ್ಲರಿಗಾಗಿ-ದೇವಾಲಯಗಳಲ್ಲಿ ಅಗ್ನಿಹೋತ್ರ ಕೇರಳದ ದೇವಾಲಯದಲ್ಲಿ |
![]() |
| ಹಾಸನ ವೇದಭಾರತಿಯಿಂದ ದೇವಾಲಯದಲ್ಲಿ ಸಾಮೂಹಿಕ ಅಗ್ನಿಹೋತ್ರ |
![]() |
| ವೇದಭಾರತಿಯ ಸಾಮೂಹಿಕ ಅಗ್ನಿಹೋತ್ರದಲ್ಲಿ RSS ಹಿರಿಯರಾದ ಶ್ರೀ ಸು.ರಾಮಣ್ಣ ಮತ್ತು ಹುಬ್ಬಳ್ಳಿಯ ಆರ್ಷವಿದ್ಯಾಲಯದ ಪೂಜ್ಯ ಶ್ರೀ ಸ್ವಾಮಿ ಚಿದ್ರೂಪಾನಂದ ಸರಸ್ವತೀ |
Tuesday, November 11, 2014
ಹಾಸನದಲ್ಲಿ ದಿನಾಂಕ 10.11.2014 ರಂದು ನಡೆದ ಸಾಮೂಹಿಕ ಅಗ್ನಿಹೋತ್ರದ ದೃಶ್ಯಗಳು

Sunday, November 9, 2014
Subscribe to:
Posts (Atom)