ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Sunday, July 15, 2012

ನನಗಾ ......ಎಂಬತ್ತೆಂಟು

ಇವತ್ತು ಬೆಳಿಗ್ಗೆ ಪೇಟೆಗೆ ಹೋಗಿದ್ದವನು ಮನೆಗೆ ಹಿಂದಿರುಗುತ್ತಿದ್ದೆ. ಆರ್.ಸಿ.ರಸ್ತೆಯಲ್ಲಿ ಬರುತ್ತಿದ್ದಾಗ ಮುದುಕಿಯೊಬ್ಬರು ಸೌತೆಕಾಯಿ  ಮಾರುತ್ತಿದ್ದುದನ್ನು ಕಂಡೆ. ಕೈಲಿ ಮೂರು ಚಿಕ್ಕ ಚಿಕ್ಕ ಸೌತ್ಕಾಯಿ ತೆಗೆದು ಕೊಂಡೆ. " ಅಮ್ಮಾ, ಎಷ್ಟು ಕೊಡಬೇಕು?" ಎಂದೆ. ಕೈನಿಲ್ಲಿದ್ದ ಮೂರು ಸೌತೆಕಾಯಿ ನೋಡಿದ ಅಜ್ಜಿ ಹೇಳಿದರು" ಹತ್ತು ರೂಪಾಯಿಗೆ ಬರುಲ್ಲ ಕಂದ" ನಾನೆಂದೆ" ನಾನೆಲ್ಲಿ ಹತ್ತು ರೂಪಾಯಿಗೆ ಕೊಡಿ ಎಂದೆ? " ಎಂದು ಹೇಳಿ ೨೦ ರೂಪಾಯಿ ಕೈಲಿತ್ತೆ. ಐದು ರೂಪಾಯಿ ವಾಪಸ್ ಕೊಡಬೇಕೆಂದು ತನ್ನಲ್ಲಿದ್ದ ಚಿಲ್ಲರೆ ಎಲ್ಲಾ ತಡಕಾಡಿತು ಮುದುಕಿ. ನಾನೆಂದೆ " ಪರವಾಗಿಲ್ಲ ಬಿಡಜ್ಜಿ. ನೋಡು ನಾಲ್ಕು ರೂಪಾಯಿ ಐತೆ, ನಿನ್ನ ಒಂದು ರೂಪಾಯಿ ನಾನ್ಯಾಕೆ ಇಟ್ಟುಕೊಳ್ಳಲಿ? ಸ್ವಲ್ಪ ತಡಿ ಕೊಡ್ತೀನಿ, ಅಂತಾ ತನ್ನ ಬಟ್ಟೆ ಚೀಲದಲ್ಲೆಲ್ಲಾ ತಡಕಾಡಿ ಕೊನೆಗೂ ಐದು ರೂಪಾಯಿ ಅಡ್ಜಸ್ಟ್ ಮಾಡಿ ನನ್ನ ಕೈಲಿತ್ತಮೆಲೆಯೇ ಆಮುದುಕಿಗೆ ನಿರಾಳ.
ಆ ಅಜ್ಜಿ ನೋಡಿ ನನಗೆ ಕುತೂಹಲ ಮೂಡಿತು. ಆ ಅಜ್ಜಿಯೊಡನೆ ಮಾತನಾಡಬೇಕೆನಿಸಿತು." ಅಜ್ಜಿ ನಿನ್ನ ವಯಸ್ಸೆಷ್ಟು? " ನನಗಾ...ಎಂಬತ್ತೆಂಟು ಮಗಾ" ಇಪ್ಪತ್ತೈದು ವರ್ಷದಿಂದ ಇಲ್ಲಿ ಸೌತೆಕಾಯಿ ಮಾರ್ತಾ ಇವ್ನಿ. ನನ್ ಬಡ್ಡೆಗೆ ಬಂದು ಅಂಗಡಿ ಹಾಕ್ತಾಳಲ್ಲಾ! ಅವ್ಳು!

"ಇರಲಿ, ಬಿಡಜ್ಜಿ, ನಿನ್ ಯಾಪಾರ ನಿನಗೆ ಆಯ್ತದೆ"
"ಹಂಗಲ್ಲಾ ಮಗ ಬರೋರ್ಗೆಲ್ಲಾ  ಆ ಮುದುಕಿತವ  ಸೌತೆ ಕಾಯಿ ಚೆನ್ದಾಗಿಲ್ಲಾ, ಇಲ್ ಬನ್ನಿ ಅಂತಾ ಕರೀತಾಳಲ್ಲಾ! ನಾನೆಲ್ಲಿ ಹೋಗಲೀ? ಅಥವಾ ನಾನೇನಾದ್ರೂ ಮೋಸ-ದಾಗ ಮಾಡ್ತಾ ಇದ್ದೀನಾ?

No comments:

Post a Comment