ವೇದಾಂತ ಶಿವರಾಮ ಶಾಸ್ತ್ರಿಗಳು ನೂರಾರು ತತ್ವಪದಗಳನ್ನು ಬರೆದಿದ್ದಾರೆ. ಸರಳಗನ್ನಡದಲ್ಲಿರುವ ಈ ತತ್ವಪದಗಳನ್ನುಕೇಳಿದವರು ಬಲುಬೇಗ ಅದರ ಸೆಳೆತಕ್ಕೆ ಸಿಲುಕಿಬಿಡುತ್ತಾರೆ. ಕಳೆದ ಮೂರು ದಿನಗಳಿಂದ ಹಾಸನದ ಶಂಕರಮಠದಲ್ಲಿನಡೆಯುತ್ತಿರುವ ನವರಾತ್ರಿಯ ವಿಶೇಷ ಉಪನ್ಯಾಸಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಪರಮಾನಂದ ಭಾರತೀ ಸ್ವಾಮೀಜಿಯವರುಭಕ್ತಾದಿಗಳಿಗೆ ಈ ತತ್ವಪದಗಳನ್ನು ಹೇಳಿಕೊಟ್ಟರು.ಕೇಳಲು ಹಿತವಾಗಿದೆ. ವೇದಸುಧೆಯ ಅಭಿಮಾನಿಗಳಿಗಾಗಿ ಇಲ್ಲಿ ಪ್ರಕಟಿಸಲಾಗಿದೆ. ಎಂದಿನಂತೆ ಸ್ವೀಕರಿಸಿ ನಿಮ್ಮ ಪ್ರತಿಕ್ರಿಯೆ ತಿಳಿಸಿ.
ಈ ಹಾಡಿನೊಂದಿಗೆ ಇನ್ನೂ ೧೨ ತತ್ವಪದಗಳನ್ನೊಳಗೊಂಡ ಧ್ವನಿಸುರುಳಿ ದೊರೆಯುವ ಸ್ಥಳ: ಶಂಕರಾಶ್ರಮ, ೧೦೩/೬೨, ರತ್ನವಿಲಾಸ ರಸ್ತೆ, ಬಸವನಗುಡಿ, ಬೆಂಗಳೂರು
ಪೋಗಿಬಾಳುವ ಬನ್ನಿರೋ| ನಮ್ಮೂರೊಳು ರೋಗ ವಿಲ್ಲವು ಕಾಣಿರೋ
ತ್ಯಾಗ ವಿಯೋಗಾನುರಾಗ ಭೋಗಗಳೆಂಬ| ಸಾಗರವನುದಾಟಿ ಯೋಗಿಗಳೊಂದಾಗಿ ||ಪ||
ಬರವೆಂಬ ಭಯವಲ್ಲಿಲ್ಲಾ| ಕಳ್ಳರಕಾಟ ಸೆರೆಮಾನೆ ದೊರೆಗಳಿಲ್ಲಾ|
ಕೊರತೆಯಾಗಲು ಬೇರೆ ಸಿರಿವಂತರಲ್ಲಿಲ್ಲಾ| ಮರಣಜನ್ಮಗಳ ಪೊತ್ತಿರುವೊ ಭವಿಗಳಿಲ್ಲಾ ||1||
ನೆರೆಹೊರೆ ಎಂಬು ದಿಲ್ಲಾ| ಕಿಂಕರಭಾವ ವರಸಿ ನೋಡಿದೊಡಲ್ಲಿಲ್ಲಾ|
ಬರುವ ಸಂಕಟ ವಿಲ್ಲ ಮರುಳು ಮಾಡುವರಿಲ್ಲ| ನರಕನಾಕಗಳೆಂಬ ಪರಿಕಲ್ಪನೆಗಳಿಲ್ಲ ||2||
ಚಳಿಗಾಳಿಮಳೆಗಳಿಲ್ಲಾ| ಸೂತಕದಿಂದ ಬಳಲುವ ಕೊಳೆಗಳಿಲ್ಲಾ|
ಕುಲಜಾತಿಗೆಳೆಯುವ ಬಳಗದ ಸುಳುಹಿಲ್ಲ| ನೆಲಸಿಹರಲ್ಲಿಸತ್ಕುಲದ ಸಜ್ಜನರೆಲ್ಲ ||3||
ಬರುವೋತಾಪಂಗಳಿಲ್ಲಾ | ನೋಡಲು ನಿತ್ಯಾ ಪರಿಪೂರ್ಣಾನಂದವೆಲ್ಲ|
ನರಕುರಿಗಳೊಳಿದನರಿತವರಾರಿಲ್ಲ| ಧರೆಯೊಳಿದನುನಮ್ಮ ಗುರುಶಂಕರನೆ ಬಲ್ಲ ||4||

No comments:
Post a Comment