ಸ್ವರಚಿತಗೀತೆ: ಭ್ರಮೆ [
ಕೆಳಗಿನ ಕೊಂಡಿಯನ್ನು ಚಿಟುಕಿಸಿ ಅಥವಾ ಕಾಪಿಮಾಡಿ ಅಡ್ರೆಸ್ ಬಾರ್ ಗೆ ಪೇಸ್ಟ್ ಮಾಡಿ ನೀವು ಕೇಳಬಹುದು]
ಗಾಯಕಿ: ಶ್ರೀಮತಿ ಲಲಿತಾರಮೇಶ್http://www.binfire.com/rel/index.php?page=public_share_new&link=48ccec62840d76ccb3eb100374351c75
ಎಲ್ಲಿ ಹುಡುಕಲಿ ನಿನ್ನ
ನಾ ಹೇಗೆ ಅರ್ಚಿಸಲಿ?
ಯಾವ ಮಂತ್ರವಹೇಳಿ
ನಿನ್ನ ಮೆಚ್ಚಿಸಲಿ?
ನನ್ನಂತೆ ನಿನಗೂ
ಮಡಿಯಮಾಡಿಸಿ ನಾನು
ಹಸಿದು ಪೂಜೆಯ ಮಾಡಿ
ಪಡಿಯ ನಿಡುವೆ|
ಕಣ್ಮುಚ್ಚಿ ಕುಳಿತಿರುವ
ನಿನ್ನ ದೇಗುಲದಿ ಹುಡುಕಿ
ಕಾಣಲಾಗದೆ ಬಂದೆ
ಎಲ್ಲಿರುವೆ ತಂದೆ?
ಜಗವೆಲ್ಲ ಬೆಳಗುತ್ತ
ಜಗವ ರಕ್ಷಿಪ ನಿನ್ನ
ಹಣತೆಬೆಳಕಲಿ ಹುಡುಕಿ
ದೇಗುಲದಿ ಕೂಡಿಡುವೆ|
ಬಲ್ಲವರು ಹೇಳಿದರು
ಎಲ್ಲೆಲ್ಲು ನೀನಿರುವೆ|
ಅಹುದೇ ದೇವ ತೋರು
ನಿನ್ನ ರೂಪ|
ನನ್ನೊಳಗೆ ಇರುವಾ
ನಿನ್ನ ಮರೆತು ನಾನು
ಎಲ್ಲಿ ಕಾಣಲಿ ನಿನ್ನ
ನಿಜದ ರೂಪ?||