Pages

Monday, September 6, 2010

ನಮ್ಮ ಋಷಿಮುನಿಗಳು ಮತ್ತು ಆಧುನಿಕ ವಿಜ್ಞಾನಿಗಳು

ನಮ್ಮ ಋಷಿಮುನಿಗಳ ತಪಸ್ಸಿನ ಫಲ ಮತ್ತು ಆಧುನಿಕ ವಿಜ್ಞಾನಿಗಳ ಸಂಶೋಧನೆ ಪರಿಣಾಮ- ಒಂದು ಚಿಂತನೆ
ಅದೊಂದು ಶಿಸ್ತುಬದ್ಧ ಕಾರ್ಯಕ್ರಮ.ಹಾಸನದ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನಲ್ಲಿ ಶ್ರೀ ಧನ್ವಂತರಿ ಮೂರ್ತಿ ಎದಿರು ನಿಂತು ಸಭೆಯನ್ನು ಒಮ್ಮೆ ವೀಕ್ಷಿಸಿದಾಗ ಕಣ್ ತುಂಬಿಬಂತು. ಕಾಲೇಜಿನ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು,ವಿದ್ಯಾರ್ಥಿಗಳು, ಆಸ್ಪತ್ರೆಯ ವೈದ್ಯರು, ಸಿಬ್ಬಂಧಿ, ಅಷ್ಟೇ ಅಲ್ಲ ಅಲ್ಲಿನ ರೋಗಿಗಳು ಮತ್ತು ಅವರ ಸಹಾಯಕರು, ಎಲ್ಲರೂ ಸದ್ಭಾವನೆಯನ್ನು ಹಂಚಿಕೊಳ್ಳಲು ಸೇರಿದ್ದ ಅಪೂರ್ವ ಸಮಾರಂಭ. ಎಲ್ಲವೂ ಶಿಸ್ತು ಬದ್ಧ. ಮುಖ್ಯ ಅತಿಥಿಯಾಗಿ ಆಹ್ವಾನಿತನಾಗಿದ್ದ ನನಗೆ ಹದಿನೈದು ನಿಮಿಷ ಮಾತನಾಡಲು ಅವಕಾಶ. ಮೊದಲು ಸುಶ್ರಾವ್ಯ ಪ್ರಾರ್ಥನೆ ಮತ್ತು ನನ್ನ ಭಾಷಣದ ನಂತರವೂ ಸಮೂಹ ಗೀತೆ. ಅಧ್ಯಕ್ಷರ ಭಾಷಣ. ನಂತರ ಪರಸ್ಪರ ಸದ್ಭಾವನೆಯ ಸಂಕೇತವಾಗಿ ರಕ್ಷಾ ಬಂಧನ.ಹೌದು, ಅಲ್ಲಿನ ವಾತಾವರಣದಿಂದ ರೋಮಾಂಚನವಾಗಿತ್ತು. ಆಗ ಭಗವತಿಯ ಅನುಗ್ರಹದಿಂದ ಹೊರಹೊಮ್ಮಿದ ಮಾತುಗಳು ವೇದಸುಧೆಯ ಅಭಿಮಾನಿಗಳ ಕಿವಿಗೂ ಮುಟ್ಟಲೆಂದು ಇಲ್ಲಿ ಪೇರಿಸಲಾಗಿದೆ.


"ಹೊಸಯುಕ್ತಿ-ಹಳೆ ತತ್ವದೊಡೆಗೂಡೆ ಸ್ವರ್ಗ" ಎಂಬ ಡಿವಿಜಿಯವರ ಮಾತನ್ನು ಆಚಾರದಲ್ಲಿ ತಂದದ್ದೇ ಆದರೆ ಸ್ವರ್ಗ ಇಲ್ಲೇ ನಿರ್ಮಾಣವಾಗಬಹುದಲ್ಲವೇ?
-ಹರಿಹರಪುರ ಶ್ರೀಧರ್

ಸಪ್ತಪದಿ


ಹಿಂದು ವಿವಾಹ ಪದ್ದತಿಯಲ್ಲಿ "ಸಪ್ತಪದಿ" ಯ ಹೆಸರು ಬಹಳ ಮಹತ್ವ ಪಡೆದಿದೆ. ಈ ಬಗ್ಗೆ ವೇದಾಧ್ಯಾಯೀ ಸುಧಾಕರ ಶರ್ಮರ ಉಪನ್ಯಾಸ ಇಲ್ಲಿದೆ.