ದಾರಿದ್ರ್ಯಾತ್ ಪುರುಷಸ್ಯ ಬಾಂಧವ ಜನೋ ವಾಕ್ಯೇ ನ ಸಂತಿಷ್ಠತೇ |
ಸತ್ತ್ವಂ ಹಾಸ್ಯಮುಪೈತಿ ಶೀಲಶಶಿನಃ ಕಾಂತಿಃ ಪರಿಮ್ಲಾಯತೇ |
ನಿರ್ವೈರಾ ವಿಮುಖೀ ಭವಂತಿ ಸುಹೃದಃ ಸ್ಫೀತಾ ಭವಂತ್ಯಾಪದಃ |
ಪಾಪಂ ಕರ್ಮ ಚ ಯತ್ ಪರೈರಪಿಕೃತಂ ತತ್ತಸ್ಯ ಸಂಭಾವ್ಯತೇ ||
ಬಡವನ ಮಾತಿಗೆ ನೆಂಟರು ಬೆಲೆ ಕೊಡುವುದಿಲ್ಲ, ಅವನ ಶಕ್ತಿ ಧೈರ್ಯಗಳು ಹಾಸ್ಯಕ್ಕೆ ಗುರಿಯಾಗುತ್ತವೆ.

ಚಂದ್ರನ ಕಾಂತಿಯು ಹಗಲಿನಲ್ಲಿ ಬಾಡುವಂತೆ ಅವನ ಒಳ್ಳೆಯತನವು ಮಸುಕಾಗುತ್ತವೆ.
ಹಗೆತನಕ್ಕೆ ಕಾರಣ ಇಲ್ಲದಿದ್ದರೂ ಮಿತ್ರರು ದೂರವಾಗುತ್ತಾರೆ. ಕಷ್ಟಗಳು ಹೆಚ್ಚುತ್ತವೆ.
ಬೇರೆಯವರು ಮಾಡಿದ ಪಾಪದ ಕೆಲಸಗಳಿಗೂ ಇವನೇ ಹೊಣೆಗಾರನಾಗುತ್ತಾನೆ.
ನನ್ನ ಮಾತು:
ಏನು ಸೂಕ್ತಿ ಹೀಗೆ ಹೇಳುತ್ತದಲ್ಲಾ! ಬಡವನ ಬಗ್ಗೆ ತಾತ್ಸಾರವೇ? ಏನಿದರ ಅರ್ಥ?
ಈಗ ಬಡವ ಅಂದರೆ ಯಾರು? ಬಡತನ ಅಂದರೆ ಏನು? ಇಲ್ಲಿನ ಆಡಿಯೋ ಕೇಳಿ ಪುನ: ಈ ಬಗ್ಗೆ ಮಾತಾಡೋಣ.