///// ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ ////// ಕೃಣ್ವಂತೋ ವಿಶ್ವಮಾರ್ಯಂ //// //// ಮಾತಾ ಭೂಮಿಃ ಪುತ್ರೋಹಂ ಪೃಥಿವ್ಯಾಃ /////
Showing posts with label ಅನ್ಯ. Show all posts
Showing posts with label ಅನ್ಯ. Show all posts
Wednesday, October 30, 2013
Friday, August 31, 2012
ಬ್ರಹ್ಮಸೂತ್ರಗಳು
ಬ್ರಹ್ಮ(ಪರಿಪೂರ್ಣ
ಭಗವಂತ)ನಿಗೆ ಸಂಭಂದಪಟ್ಟ ವಿಷಯದ ಕುರಿತಾಗಿ ಸರ್ವ ರೀತಿಯಿಂದಲೂ ಸಂಪೂರ್ಣವಾಗಿ ಚರ್ಚಿಸುವುದರಿಂದ ಈ
ಕೃತಿಗೆ ಆ ಹೆಸರು ಬರಲು ಮೂಲ ಕಾರಣ. ಅದನ್ನು ನಾನಾ ವಿಧವಾದ ಹೆಸರುಗಳಿಂದಲೂ ಕರೆಯುತ್ತಾರೆ, ಅವು ಈ ರೀತಿಯಾಗಿ ಇವೆ:
೧) ವೇದಾಂತ ಸೂತ್ರಾ - ಇದು ವೇದಾಂತ ಅಥವಾ
ಉಪನಿಷತ್ತಿನ ವಿಷಯಕ್ಕೆ ಸಂಭಂದಿಸಿದ್ದರಿಂದ,
೨) ಶಾರೀರಿಕ ಸೂತ್ರಾ - ಏಕೆಂದರೆ ಇದು ಶರೀರದಲ್ಲಿ
ನೆಲೆಸಿರುವ ಆತ್ಮನ ವಿಚಾರವಾಗಿ ಚರ್ಚಿಸುವುದರಿಂದ,
೩) ಉತ್ತರ ಮೀಮಾಂಸ ಸೂತ್ರಾ - ಪೂರ್ವ ಮೀಮಾಂಸಕ್ಕೆ
ವಿರುದ್ಧವಾಗಿ; ಏಕೆಂದರೆ ಇದು ವೇದಗಳ ಉತ್ತರ ಅಥವಾ ಅಂತಿಮ ಭಾಗಗಳ ಕುರಿತಾಗಿ
ಮೀಮಾಂಸ ಅಥವಾ ಜಿಜ್ಞಾಸೆ ಮಾಡುವುದರಿಂದ.(ಜಿಜ್ಞಾಸೆ ಎಂದರೆ ಸಾಮಾನ್ಯ ಅರ್ಥದಲ್ಲಿ ವಿಚಾರಣೆ),
೪) ಭಿಕ್ಷುಸೂತ್ರಾ - ಏಕೆಂದರೆ ಈ ದರ್ಶನವು
ವಿಶೇಷವಾಗಿ ’ಭಿಕ್ಷು’ಗಳು ಅಥವಾ ’ಸನ್ಯಾಸಿ’ಗಳ ಬಗ್ಗೆ ಅಧ್ಯಯನ ಕೈಗೊಂಡಿದ್ದರಿಂದ.
ರಚನಕಾರ ಬಾದರಾಯಣ
ಈ ಮಹತ್ತರ ಕೃತಿಯ
ರಚನಕಾರನಾದ ಬಾದರಾಯಣನ ಬಗ್ಗೆ ಹೆಚ್ಚೇನೂ ತಿಳಿದು ಬಂದಿಲ್ಲ. ಸಂಪ್ರದಾಯವಾದಿಗಳು ಇವನನ್ನು ಮಹಾಭಾರತ
ಮತ್ತು ಪುರಾಣಗಳ ಕರ್ತೃವಾದ ವ್ಯಾಸನೊಂದಿಗೆ ಏಕೀಭವಿಸುತ್ತಾರೆ; ಏಕೆಂದರೆ ಕೆಲವು ಭಾರತೀಯ ಹಾಗೂ ಪಾಶ್ಚಿಮಾತ್ಯ
ಪಂಡಿತರ ಅಭಿಮತದಂತೆ ಈ ಕೃತಿಯು ಕ್ರಿ.ಪೂ. ೫೦೦ ರಿಂದ ಕ್ರಿ. ಪೂ. ೨೦೦ರ ಮಧ್ಯಕಾಲದಲ್ಲಿ ರಚಿತವಾಗಿದೆ.
ಅದರೆ ಇನ್ನಿತರ ವಿದ್ವಾಂಸರು ಈ ಮಹಾಭಾರತದ ವ್ಯಾಸ ಮತ್ತು ವೇದಾಂತಸೂತ್ರಗಳ ವ್ಯಾಸ ಇಬ್ಬರೂ ಬೇರೆಯೆಂದು
ಪ್ರತಿಪಾದಿಸಿ ಬಾದರಾಯಣನ ಕಾಲವನ್ನು ಕ್ರಿ. ಶ. ೨೦೦ಕ್ಕೆ ಮುಂದೂಡುತ್ತಾರೆ.
ಕೃತಿಯ ಬಗ್ಗೆ
ಬ್ರಹ್ಮಸೂತ್ರವು
ನಾಲ್ಕು ಅಧ್ಯಾಯ ಅಥವಾ ವಿಭಾಗಗಳನ್ನು ಒಳಗೊಂಡಿದೆ. ಪ್ರತಿಯೊಂದು ಅಧ್ಯಾಯವು ನಾಲ್ಕು ಪಾದಗಳಾಗಿ ಉಪವಿಭಾಗಗೊಂಡಿದೆ.
ಪಾದಗಳು ಅಧಿಕರಣ ಅಥವಾ ವಿಷಯಗಳನ್ನು ಒಳಗೊಂಡಿವೆ ಮತ್ತು ಆ ವಿಷಯಗಳು ಸೂತ್ರರೂಪದಲ್ಲಿವೆ.
ಆದಿ ಭಾಷ್ಯಕಾರರಾದ
ಶಂಕರರು ಬ್ರಹ್ಮಸೂತ್ರವು ಒಟ್ಟು ೧೯೧ ಅಧಿಕರಣಗಳನ್ನು ಹೊಂದಿದ್ದು; ೫೫೫ ಸೂತ್ರಗಳನ್ನು ಒಳಗೊಂಡಿದೆ
ಎಂದು ಉಲ್ಲೇಖಿಸಿದ್ದಾರೆ. ಒಂದೇ ಕೃತಿಯ ವಿವಿಧ ಆವೃತ್ತಿಗಳಲ್ಲಿ ಮತ್ತು ಬೇರೆ ಬೇರೆ ಕೃತಿಗಳಲ್ಲಿ
ಈ ಸಂಖ್ಯೆಯ ಬಗ್ಗೆ ಹಲವಾರು ವ್ಯತ್ಯಾಸಗಳು ಕಂಡು ಬರುತ್ತದೆ. ಒಂದು ಸೂತ್ರವನ್ನು ಎರಡಾಗಿ ವಿಭಾಗಿಸುವುದು, ಅಥವಾ ಎರಡು ಸೂತ್ರಗಳನ್ನು ಒಂದೇ ಆಗಿ ಪರಿಗಣಿಸುವುದು ಅಥವಾ
ಒಂದು ಸೂತ್ರದ ಕಡೆಯ ಶಬ್ದವನ್ನು ಇನ್ನೊಂದು ಸೂತ್ರದ ಮೊದಲನೆಯ ಪದವನ್ನಾಗಿ ಓದಿಕೊಳ್ಳುವುದು, ಮುಂತಾದವುಗಳಿಂದ
ಈ ರೀತಿಯ ವ್ಯತ್ಯಾಸ ಉಂಟಾಗಿದೆ. ಈ ರೀತಿಯ ವ್ಯತ್ಯಾಸಗೊಂಡ ಸೂತ್ರಗಳಿಂದಾಗಿ ಹಲವಾರು ವೈವಿಧ್ಯಮಯ ವ್ಯಾಖ್ಯೆಗಳು
ಕೂಡ ಹುಟ್ಟಿಕೊಂಡಿವೆ. ಈ ರೀತಿ ವ್ಯತ್ಯಾಸಗೊಂಡ ಸೂತ್ರಗಳನ್ನೇ ’ಪೂರ್ವಪಕ್ಷ’ (ಎದುರಾಳಿಯ ಅಭಿಪ್ರಾಯ)ವೆಂದು
ತಿಳಿದು ಕೆಲವೊಂದು ಶಾಖೆಗಳು, ಅವನ್ನು ಸಂಶಯ ಅಥವಾ ಆಕ್ಷೇಪಣೆಯನ್ನು ವ್ಯಕ್ತಪಡಿಸಲು ಉಪಯೋಗಿಸಿಕೊಂಡರೆ;
ಇತರೇ ಕೃತಿಕಾರರು ಅವುಗಳನ್ನೇ ತಮ್ಮ ಸಿದ್ಧಾಂತವನ್ನು ಸ್ಥಾಪಿಸಲು ಪೂರಕವಾಗಿ ಬಳಸಿಕೊಂಡಿದ್ದಾರೆ.
ಈ ಹಿಂದೆ ತಿಳಿಸಿದಂತೆ
ಪ್ರತಿಯೊಂದು ಪಾದವೂ ಹಲವಾರು ಅಧ್ಯಾಯಗಳನ್ನೊಳಗೊಂಡು, ಹಲವಾರು
ಅಧಿಕರಣ ಅಥವಾ ವಿಷಯಗಳನ್ನು ಹೊಂದಿದೆ. ಒಂದು ಅಧಿಕರಣವು ನಿಯಮದಂತೆ ಅನುಕ್ರಮವಾಗಿ ಐದು ಹಂತಗಳನ್ನು
ಒಳಗೊಂಡಿರಬೇಕು, ಅವೆಂದರೆ:
೧) ವಿಷಯ ೨) ವಿಶಯ ಅಥವಾ ಸಂಶಯ (ಶಂಖೆ), ೩) ಪೂರ್ವಪಕ್ಷ ಅಥವಾ ಎದುರಾಳಿಯ ಅಭಿಪ್ರಾಯ, ೪) ಸಿದ್ಧಾಂತ ಅಥವಾ ದೃಢಪಡಿಸಿಕೊಂಡ ವಿಷಯ ಅಥವಾ ತೀರ್ಮಾನಗೊಂಡ
ವಿಷಯ, ೫) ಸಂಗತಿ ಅಥವಾ ವಿವಿಧ ವಿಭಾಗಗಳೊಂದಿಗಿನ ಸಂಭಂದ.
ಯಾವುದೇ ಅಧಿಕರಣದಲ್ಲಿ
ಇರುವ ಸೂತ್ರಗಳ ಸಂಖ್ಯೆಯು ಅಧಿಕರಣದ ವಿಷಯದ ಮೇಲೆ ಆಧಾರಿತವಾಗಿರುತ್ತದೆ. ಸೂತ್ರಗಳಲ್ಲಿ ಇರುವ ದ್ವಂದ್ವದ
ಪರಿಣಾಮದಿಂದಾಗಿ ಮತ್ತು ಅಧಿಕರಣದ ಶೀರ್ಷಿಕೆಗಳಿಂದಾಗಿ ಸೂತ್ರಗಳ ಸಂಖ್ಯೆಯು ವ್ಯಾಖ್ಯಾನಕಾರನಿಂದ ವ್ಯಾಖ್ಯಾನಕಾರನಿಗೆ
ವ್ಯತ್ಯಾಸಗೊಂಡಿದೆ. ನಿಂಬಾರ್ಕರು (ಕ್ರಿ. ಪೂ. ೧೩ನೇ ಶತಮಾನ) ಕನಿಷ್ಟ ಅಧಿಕರಣಗಳನ್ನು (೧೫೧) ಪ್ರತಿಪಾದಿಸಿದರೆ
ಮಧ್ವರು (ಕ್ರಿ. ಪೂ. ೧೨೩೮-೧೩೧೭) ಗರಿಷ್ಟ ಸಂಖ್ಯೆಯ (೨೨೩) ಅಧಿಕರಣಗಳನ್ನು ಪ್ರತಿಪಾದಿಸುತ್ತಾರೆ.
ಸೂತ್ರದ ಆಶಯವು
’ಷಡ್ವಿಧಲಿಂಗ’ಗಳು ಅಥವಾ ಆರು ಸಂಕೇತಗಳ ತತ್ವಗಳಿಗನುಸಾರವಾಗಿ ವ್ಯಾಖ್ಯಾನಕಾರನಿಂದ ರೂಪಿಸಲ್ಪಡುತ್ತದೆ.
ಅವುಗಳೆಂದರೆ: ’ಉಪಕ್ರಮ’ ಮತ್ತು ’ಉಪಸಂಹಾರ’ (ಪ್ರಾರಂಭ ಮತ್ತು ಅಂತ್ಯ), ’ಅಭ್ಯಾಸ’ (ಪುನರಾವರ್ತನೆ ಅಥವಾ ಪುನರುಕ್ತಿ), ’ಅಪೂರ್ವತಾ’ (ಹಿಂದೆ ಇಲ್ಲದ್ದು ಅಥವಾ ಹೊಸತು), ’ಫಲ’ (ಉದ್ದೇಶ),”ಅರ್ಥವಾದ’
(ಸ್ತುತಿ ಅಥವಾ ಗುಣಗಾನ), ಮತ್ತು ’ಉಪಪತ್ತಿ’
(ತರ್ಕಬದ್ಧತೆ).
ಹೆಸರೇ ಸೂಚಿಸುವಂತೆ
ಬ್ರಹ್ಮಸೂತ್ರವು ಮೂಲತಃ ಅತ್ಯುನ್ನತ ಸತ್ಯವಾದ ಬ್ರಹ್ಮದ ಬಗ್ಗೆ ಚರ್ಚಿಸುತ್ತದೆ, ಬ್ರಹ್ಮವೊಂದೇ ಸತ್ಯವಾಗಿದ್ದು,
ಅದನ್ನು ಅರಿತುಕೊಂಡವರಿಗೆ ಜನನ ಮರಣಗಳ ಚಕ್ರದಿಂದ ಬಿಡುಗಡೆಯುಂಟಾಗುತ್ತದೆ. ಬ್ರಹ್ಮನ ಇರುವಿಕೆಯ ಬಗ್ಗೆ ಅಧಿಕಾರಯುತವಾಗಿ ತಿಳಿಸುವುದು
ಮತ್ತು ಅದರ ಸ್ವರೂಪವನ್ನು ತಿಳಿಸಿಕೊಡುವುದು ನಮಗೆ ಶ್ರುತಿಗಳು ಅಥವಾ ವೇದಗಳ ಭಾಗವಾದ ಜ್ಞಾನಕಾಂಡದಲ್ಲಿ
(ಬ್ರಹ್ಮ ಮತ್ತು ಆತ್ಮನ ಸ್ವರೂಪವನ್ನು ತಿಳಿಸಿಕೊಡುವ ಭಾಗಗಳು) ಬರುವ ಉಪನಿಷತ್ತುಗಳು. ಮನುಷ್ಯನ ಬುದ್ಧಿವಂತಿಕೆ
ಅಥವಾ ಅರಿವು ಇಂದ್ರಿಯಗಳ ಮೂಲಕ ಅನುಭವಕ್ಕೆ ಬರುವುದರಿಂದ ಬ್ರಹ್ಮನನ್ನು ಅದರಿಂದ ಅರಿಯುವುದು ಸಾಧ್ಯವಿಲ್ಲ;
ಏಕೆಂದರೆ ಬ್ರಹ್ಮವು ಶುದ್ಧ ಚೈತನ್ಯವಾಗಿದ್ದು, ಅದು ಇಂದ್ರಿಯಗಳಿಗೆ ಗೋಚರವಾಗದು. ಅದಕಾರಣ ದ್ರಷ್ಟ್ರಾರರಾದ
ಋಷಿಗಳಿಂದ ಗ್ರಹಿಸಲ್ಪಟ್ಟ ಶ್ರುತಿಗಳು ಮಾತ್ರವೇ ನಮಗೆ ಬ್ರಹ್ಮನ ಸ್ವರೂಪವನ್ನು ತಿಳಿಸಿಕೊಡಬಲ್ಲ ಏಕೈಕ
ಸಾಧನ. ಆದ್ದರಿಂದ ಬ್ರಹ್ಮಸೂತ್ರವು ಶ್ರುತಿಗಳ (ಉಪನಿಷತ್ತುಗಳ)
ಆಧಾರದ ಮೇಲೆ ರಚಿಸಲ್ಪಟ್ಟಿದೆ.
ಈಗ
ಬ್ರಹ್ಮಸೂತ್ರಕ್ಕೆ ಮೂಲ ವಸ್ತುವಾದ ಉಪನಿಷತ್ತುಗಳ ವಾಕ್ಯಗಳ ಬಗ್ಗೆ ಚಿಂತಿಸೋಣ. ಇವುಗಳು ಒಂದಕ್ಕೊಂದು
ವೈರುದ್ಧತೆಯಿಂದ ಕೂಡಿದ ನುಡಿಗಟ್ಟುಗಳಾಗಿ ಕಂಡುಬಂದದ್ದರಂದ ಬಾದರಾಯಣನು ಅವನ್ನೆಲ್ಲಾ ಸಮನ್ವಯಗೊಳಿಸಿ
ಎಲ್ಲರೂ ಒಪ್ಪಿಕೊಳ್ಳಬಹುದಾದಂತಹ ಹೊಸ ತತ್ವವೊಂದನ್ನು ರೂಪಿಸಿದ. ಈ ರೀತಿ ಮಾಡುವಾಗ ಬಾದರಾಯಣನು ಸಹಜವಾಗಿಯೇ
ಸನಾತನವಾದ ಉಪನಿಷತ್ತುಗಳನ್ನು ಆಯ್ಕೆ ಮಾಡಿಕೊಂಡ. ಬಾದರಾಯಣನು ತನ್ನ ಸೂತ್ರಗಳಲ್ಲಿ ಉಲ್ಲೇಖಿಸಿರುವ
ಈ ಉಪನಿಷತ್ತುಗಳು ಮತ್ತು ಅವುಗಳಲ್ಲಿ ಆಯ್ದುಕೊಂಡ ವಾಕ್ಯಗಳಾದರೂ ಯಾವುವು? ಸೂತ್ರಗಳು ಬಹಳ ಸಂಕ್ಷಿಪ್ತವಾಗಿರುವುದರಿಂದ
ಅವುಗಳ ಮೂಲ ಉಪನಿಷತ್ತಿನ ಬಗ್ಗೆ ಸೂಚನೆಗಳು ದೊರೆಯುವುದಿಲ್ಲ. ಆ ಉಪನಿಷತ್ತುಗಳ ಮೂಲಕ್ಕಾಗಿ ನಾವು
ಭಾಷ್ಯಕಾರರು ಅಥವಾ ವ್ಯಾಖ್ಯಾನಕಾರರ ಮೇಲೆ ಅವಲಂಭಿಸಬೇಕಾಗುತ್ತದೆ; ಅದೃಷ್ಟವಶಾತ್ ಎಲ್ಲಾ ವ್ಯಾಖ್ಯಾನಕಾರರು
ಅವುಗಳ ಬಗ್ಗೆ ಏಕರೂಪವಾದ ಸುಳಿವುಗಳನ್ನು ಕೊಡುತ್ತಾರೆ.
ಆದಿಶಂಕರರ
ಭಾಷ್ಯದ ಪ್ರಕಾರ ಮೊದಲ ೩೧ ಅಧಿಕರಣಗಳಲ್ಲಿ ವಿಷಯ ಅಥವಾ ವಿಷಯವಾಕ್ಯಗಳಿಗೆ ಸಂಭಂದಪಟ್ಟ ಪ್ರಮುಖವಾದ
ನುಡಿಗಟ್ಟುಗಳು ಅಥವಾ ವಾಕ್ಯಗಳನ್ನು ಒದಗಿಸುವ ಉಪನಿಷತ್ತುಗಳು ಆವರಣದಲ್ಲಿ ನಮೂದಿಸಿರುವ ಸಂಖ್ಯೆಗನುಗುಣವಾಗಿ
ಈ ರೀತಿ ಇವೆ.
ಛಾಂದೋಗ್ಯ (೧೪),
ಬೃಹದಾರಣ್ಯಕ (೫), ಕಠಾ (೪), ತೈತ್ತರೀಯ (೨), ಮುಂಡಕ (೩), ಪ್ರಶ್ನ (೧) ಮತ್ತು ಕೌಶೀತಕಿ (೨),
ಉಳಿದ
ದರ್ಶನಕಾರರ ಅಭಿಪ್ರಾಯಗಳನ್ನು ಮತ್ತು ಅವರು ಬೇರೆ ಬೇರೆ ಉಪನಿಷತ್ತುಗಳ ವಾಕ್ಯ ಪಂಕ್ತಿಗಳನ್ನು ಬಳಸಿಕೊಳ್ಳುವುದರ
ಔಚಿತ್ಯವನ್ನು ಬಾದರಾಯಣನು ತನ್ನ ವಿಶ್ಲೇಷಣೆಯಲ್ಲಿ ಉಲ್ಲೇಖಿಸಿದ್ದಾನೆ. ಹೀಗೆ ಉಲ್ಲೇಖಿಸಲ್ಪಟ್ಟಿರುವ
ಇತರ ದರ್ಶನಕಾರರೆಂದರೆ; ಆತ್ರೇಯ, ಆಶ್ಮರಾಥ್ಯ, ಔದುಲೋಮಿ, ಕಾರ್ಷ್ಣಾಜನಿ, ಕಾಶಕೃತ್ಸ್ನ, ಜೈಮಿನಿ
ಮತ್ತು ಬಾದರಿ. ಸ್ವಲ್ಪ ಹೆಚ್ಚು ಕಡಿಮೆ ಈ ಎಲ್ಲಾ ಹೆಸರುಗಳು ಪುರಾತನ ಕೃತಿಗಳಾದ ಶ್ರೌತಸೂತ್ರ ಮತ್ತು
ಗೃಹ್ಯಸೂತ್ರಗಳಲ್ಲಿ ಕಂಡುಬರುತ್ತವೆ. ಕೆಲವು ಕೃತಿಕಾರರು ಬಾದರಾಯಣನ ಕಾಲಕ್ಕಿಂತಲೂ ಹಿಂದಿನವರಾದರೆ
ಜೈಮಿನಿ ಮೊದಲಾದವರು ಅವನ ಸಮಕಾಲೀನರೆಂದು ತೋರುತ್ತದೆ. ಬಾದರಾಯಣನು ಅವರೊಂದಿಗೆ ಅಭಿಪ್ರಾಯಭೇದವನ್ನು
ಹೊಂದಿದ್ದರೂ ಕೂಡ ಅವರ ಅಭಿಪ್ರಾಯಗಳನ್ನು ಖಂಡಿಸಿಲ್ಲ; ಬಹುಶಃ ಅವರು ಉಪನಿಷತ್ತುಗಳು ಅತ್ಯುನ್ನತ ಸತ್ಯವಾದ
ಬ್ರಹ್ಮವನ್ನು ಅರಿಯುವಲ್ಲಿ ಅಧಿಕಾರಯುತವಾದ ಮೂಲಗ್ರಂಥಗಳೆಂದು ಒಪ್ಪಿಕೊಂಡಿದ್ದರೆನ್ನುವುದು ಒಂದು
ಕಾರಣವಾದರೆ ಮತ್ತೊಂದು ಕಾರಣ ಅವರು ಕೂಡ ಖ್ಯಾತಿವೆತ್ತ
ವೇದಾಂತಿಗಳಾಗಿದ್ದರು ಎನ್ನುವುದು.
Tuesday, August 28, 2012
'ಮೀಮಾಂಸಾ' ದರ್ಶನ
ಪರಿಚಯ
ಹಿಂದೂ
ತತ್ವಶಾಸ್ತ್ರದಲ್ಲಿ ಯಾವುದಾದರೂ ಪದ್ದತಿಯಲ್ಲಿ ಗ್ರಂಥ ಕರ್ತೃವಿಗಿಂತ ಆ ಗ್ರಂಥವೇ ಪ್ರಾಮುಖ್ಯತೆಯನ್ನು
ಪಡೆದಿದೆ ಎಂದರೆ ಅದು 'ಮೀಮಾಂಸಾ' ದರ್ಶನ ಮಾತ್ರವೇ. ಇದನ್ನು 'ಪೂರ್ವಮೀಮಾಂಸ ದರ್ಶನ'ವೆಂದೂ ಕರೆದಿದ್ದಾರೆ;
ಇದು ಪ್ರಾಥಮಿಕವಾಗಿ ವೇದಗಳಲ್ಲಿ ಪ್ರತಿಪಾದಿಸಲ್ಪಟ್ಟಿರುವ ಕ್ಲಿಷ್ಟವಾದ ಯಜ್ಞ-ಯಾಗಾದಿಗಳ ವಿಧಿ-ವಿಧಾನಗಳನ್ನು
ಹೇಗೆ ಅರ್ಥೈಸಿಕೊಳ್ಳಬೇಕೆನ್ನುವುದನ್ನು ಕ್ರಮಬದ್ಧವಾಗಿ ತಿಳಿಸಿಕೊಡುತ್ತದೆ.
ವೈದಿಕ ವಿಧಿ-ವಿಧಾನಗಳು ನಂಬುವುದೇನೆಂದರೆ:
(೧) 'ಆತ್ಮ' ಎನ್ನುವ ವಸ್ತುವೊಂದು ಇದ್ದು;
ಅದು ದೇಹದ ಮರಣವನ್ನು ಅಧಿಗಮಿಸಿ ನಾವು ಮಾಡಿದ ಯಜ್ಞಯಾಗಾದಿಗಳ ಫಲವನ್ನು ಸ್ವರ್ಗದಲ್ಲಿ ಅನುಭವಿಸುತ್ತದೆ.
(೨) ಅಗೋಚರ ಶಕ್ತಿಯೆನ್ನುವುದೊಂದಿದ್ದು ಅದು
ಯಜ್ಞಯಾಗಾದಿಗಳ ಪರಿಣಾಮವನ್ನು ಜೋಪಾನವಾಗಿ ಭದ್ರಪಡಿಸುತ್ತದೆ.
(೩) ವೇದಗಳು 'ಅಸತ್ಯ'ವಲ್ಲ
(೪) ಈ ಪ್ರಪಂಚವು ನಿಜವಾದುದು;
(೫) ನಮ್ಮ ಜೀವನ ಮತ್ತು ನಾವು ಇಲ್ಲಿ ಕೈಗೊಂಡ
ಕಾರ್ಯಗಳು ನಿಜ ಅವು ಕೇವಲ ಸ್ವಪ್ನದಂತಲ್ಲ.
ಮೂಲ ಕೃತಿಗಳು
ಜೈಮಿನಿ
(ಕ್ರಿ.ಶ. ೨೦೦) ವಿರಚಿತ 'ಮೀಮಾಂಸಾಸೂತ್ರಾ' ಗ್ರಂಥವೇ ಈ ಪದ್ಧತಿಗೆ ಮೂಲ ಗ್ರಂಥ. ಅದು ಒಂದು ಬೃಹದ್ಗ್ರಂಥವಾಗಿದ್ದು
ಅದರಲ್ಲಿ ೨೫೦೦ ಸೂತ್ರಗಳನ್ನೊಳಗೊಂಡ ೧೨ ಅಧ್ಯಾಯಗಳು ಮತ್ತು ೬೦ ಉಪವಿಭಾಗಗಳು ಇವೆ. ಶಬರ ಸ್ವಾಮಿನ್
(ಕ್ರಿ.ಶ.೪೦೦) ಬರೆದ 'ಭಾಷ್ಯ'ವೇ ಮೀಮಾಂಸ ಸೂತ್ರಗಳಿಗೆ ಅಧಿಕೃತ ವ್ಯಾಖ್ಯಾನವನ್ನು ಕೊಡುತ್ತದೆ. ಶಬರ
ಭಾಷ್ಯಕ್ಕೆ ಎರಡು ಟೀಕಾಗ್ರಂಥಗಳಿವೆ - ಪ್ರಭಾಕರ(ಕ್ರಿ.ಶ. ೬೫೦) ವಿರಚಿತ ಇನ್ನೂ ಕೈಬರಹದ ರೂಪದಲ್ಲಿ
ಲಭ್ಯವಿರುವ 'ಬೃಹತಿ' ಗ್ರಂಥವು ಮೊದಲನೆಯದು ಹಾಗೂ ಕುಮಾರಿಲ ಭಟ್ಟ(ಕ್ರಿ.ಶ. ೭೦೦)ನು ಮೂರು ಭಾಗಗಳಲ್ಲಿ
ಬರೆದ; 'ಶ್ಲೋಕವಾರ್ತಿಕ', 'ತಂತ್ರವಾರ್ತಿಕ' ಮತ್ತು 'ಟಪ್ಟೀಕಾ' ಎರಡೆನೆಯದು. ಶಾಲಿಕನಾಥ(ಪ್ರಭಾಕರನ
ಶಿಷ್ಯ)ನ 'ಪ್ರಕರಣಪಂಚಿಕ', ಪಾರ್ಥಸಾರಥಿ(ಕ್ರಿ.ಶ. ೯೦೦)ಯ 'ಶಾಸ್ತ್ರದೀಪಿಕ', ಮಾಧ್ವ ವಿದ್ಯಾರಣ್ಯ(ಕ್ರಿ.ಶ.
೧೩೫೦) ವಿರಚಿತ 'ನ್ಯಾಯಮಾಲಾವಿಸ್ತಾರ' ಮತ್ತು ಲೌಗಾಕ್ಷಿ ಭಾಸ್ಕರ(೧೭ನೇ ಶತಮಾನ)ನ 'ಅರ್ಥಸಂಗ್ರಹ' ಈ ದರ್ಶನದ ಬಗ್ಗೆ ಲಭ್ಯವಿರುವ ಇತರೇ ಕೃತಿಗಳು.
ಜ್ಞಾನದ ಬಗೆಗಿನ ಸಿದ್ಧಾಂತ
ವೇದಗಳ
ಅಂತಿಮ ಪ್ರಭುತ್ವವನ್ನು ಸ್ಥಾಪಿಸಲು 'ಮೀಮಾಂಸ ದರ್ಶನ'ವು ಒಂದು ವಿವರವಾದ ಪದ್ಧತಿಯನ್ನು ಅಭಿವೃದ್ಧಿ
ಪಡಿಸಿದೆ ಮತ್ತು ಇದನ್ನು ಇತರೇ ದರ್ಶನಗಳ ಪ್ರತಿಪಾದಕರು; ಅದರಲ್ಲೂ ವಿಶೇಷವಾಗಿ 'ವೇದಾಂತ ದರ್ಶನ'ಕಾರರು
ಕೂಡ ಒಪ್ಪಿಕೊಂಡಿದ್ದಾರೆ.
ಯಾವುದೇ
ಒಂದು ಜ್ಞಾನವು ಮಾನ್ಯತೆಯನ್ನು ಗಳಿಸಬೇಕಾದರೆ ಅದು ಮೂರು ನಿಯಮಗಳನ್ನು ಪೂರೈಸಬೇಕಾಗುತ್ತದೆ. ಅವೆಂದರೆ:
೧) ಅದು ಪೂರ್ವದಲ್ಲಿ ಗೊತ್ತಿಲ್ಲದ ಹೊಸದೊಂದು
ಮಾಹಿತಿಯನ್ನು ಹೊರಹಾಕಬೇಕು.
೨) ಅದು ಪ್ರಚಲಿತವಿರುವ ಯಾವುದಾದರೂ ಜ್ಞಾನದಿಂದ
ಸುಳ್ಳೆಂದು ನಿರೂಪಿತವಾಗಬಾರದು.
೩) ಆ ಜ್ಞಾನವನ್ನು ಉಂಟು ಮಾಡುವ ಪರಿಸ್ಥಿತಿಗಳು
ದೋಷಮುಕ್ತವಾಗಿರಬೇಕು.
'ಮೀಮಾಂಸ'ವು
ಎರಡು ವಿಧವಾದ ಜ್ಞಾನವನ್ನು ಒಪ್ಪಿಕೊಳ್ಳುತ್ತವೆ: 'ಪ್ರತ್ಯಕ್ಷ' (ತಕ್ಷಣದ್ದು) ಮತ್ತು 'ಪರೋಕ್ಷ'(ತದನಂತರದ್ದು).
'ಪರೋಕ್ಷ ಜ್ಞಾನ'ವು ಐದು ಬಗೆಯದಾಗಿರುತ್ತದೆ; 'ಅನುಮಾನ'(ನಿಷ್ಕರ್ಷೆ/ಕ್ರಮಬದ್ಧ ಜ್ಞಾನ), 'ಉಪಮಾನ'(ಹೋಲಿಕೆ),
'ಶಬ್ದ'(ನುಡಿ ಪ್ರಮಾಣ) - ಇದನ್ನು 'ಆಪ್ತವಾಕ್ಯ'(ನಂಬಲರ್ಹ ವ್ಯಕ್ತಿಯ ಹೇಳಿಕೆ)ವೆಂದೂ ಕರೆದಿದ್ದಾರೆ,
'ಅರ್ಥಾಪತ್ತಿ' (ಸಮರ್ಥನೆ ಅಥವಾ ಅನಿಸಿಕೆ) ಮತ್ತು 'ಅನುಪಲಬ್ಧಿ'(ಮನಗಾಣದೇ ಇರುವುದು/ಗ್ರಹಿಸಲಾಗದ್ದು).
ಇವುಗಳನ್ನು ಸಂಕ್ಷಿಪ್ತವಾಗಿ ಹೀಗೆ ವಿವರಿಸಬಹುದು:
'ಪ್ರತ್ಯಕ್ಷ'
(ನೇರವಾದ ಅಥವಾ ತಕ್ಷಣದ ಗ್ರಹಿಕೆ/ತಿಳಿವು/ಅನುಭವ)ವು ಎರಡು ವಿಧವಾದ ಹಂತಗಳಲ್ಲಿ ಅಭಿವೃದ್ಧಿಯಾಗುತ್ತದೆ.
ಜ್ಞಾನೇಂದ್ರಿಯವೊಂದು ಯಾವುದಾದರೂ ಒಂದು ವಸ್ತುವಿನ ಸಂಪರ್ಕಕ್ಕೆ ಬಂದ ಕೂಡಲೇ, ಏನೋ ಇದೆ ಎನ್ನುವುದರ
ಬಗ್ಗೆ ಸಾಮಾನ್ಯ ತಿಳುವಳಿಕೆ ಉಂಟಾಗುತ್ತದೆ. ಇದನ್ನು 'ನಿರ್ವಿಕಲ್ಪಪಕ-ಪ್ರತ್ಯಕ್ಷ' ಎಂದು ಕರೆಯುತ್ತಾರೆ.
ಮುಂದಿನ ಹಂತದಲ್ಲಿ, ಆ ವಸ್ತುವಿನ ಎಲ್ಲಾ ವಿವರಗಳು ಪೂರ್ವಾನುಭವದ ಜ್ಞಾನದಿಂದ ತಿಳಿಯಲ್ಪಡುತ್ತದೆ.
ಇದನ್ನು 'ಸವಿಕಲ್ಪಕ-ಪ್ರತ್ಯಕ್ಷ' ಎನ್ನುತ್ತಾರೆ.
ನಾವು
ಮೂಲ ವಸ್ತುವಿಗೆ ಸಂಭಂದಿಸಿದ 'ಲಿಂಗ' ಅಥವಾ 'ಸಂಕೇತ'ವನ್ನು ನೋಡಿದಾಗ, 'ಅನುಮಾನ'(ಕ್ರಮಬದ್ಧ ಜ್ಞಾನ)ವು
ಆ ವಸ್ತುವಿನ ತಿಳುವಳಿಕೆಯನ್ನು ಪರೋಕ್ಷವಾಗಿ ಒದಗಿಸುತ್ತದೆ. ಉದಾಹರಣೆಗೆ, ದೂರದ ಬೆಟ್ಟದ ಮೇಲೆ ಹೊಗೆಯನ್ನು
ನೋಡಿ ಅಲ್ಲಿ ಬೆಂಕಿಯಿದೆಯೆಂದು ತೀರ್ಮಾನಿಸುತ್ತೇವೆ (ಬೆಂಕಿಯನ್ನು ಪ್ರತ್ಯಕ್ಷವಾಗಿ ಕಾಣದಿದ್ದರೂ
ಕೂಡ); ಏಕೆಂದರೆ ನಮ್ಮ ಪೂರ್ವ ಅನುಭವದಲ್ಲಿ ಹೊಗೆಯು ಅವಿನಾಭಾವವಾಗಿ ಬೆಂಕಿಯ ಜೊತೆಯಲ್ಲಿರುವುದನ್ನು
ಗಮನಿಸಿರುತ್ತೇವಾದ್ದರಿಂದ.
'ಉಪಮಾನ'(ಹೋಲಿಕೆ)ವು
ಇನ್ನೊಂದು ಜ್ಞಾನದ ಮೂಲ. ಒಂದು ಮೂಗಿಲಿಯನ್ನು ನೋಡಿದ ನಂತರ ಅದು ತಾನು ಹಿಂದೆ ನೋಡಿದ ಇಲಿಯಂತೆ ಇರುವುದನ್ನು
ವ್ಯಕ್ತಿಯು ನೆನೆಪಿಸಿಕೊಳ್ಳುತ್ತಾನೆ. ಅಗ ಅವನ ಅರಿವಿಗೆ ತಾನು ಗ್ರಹಿಸಿದ ಮೂಗಿಲಿಯು, ಇಲಿಯಂತಿರುವುದು
ಕಂಡುಬರುವುದು. ಈ ರೀತಿಯ ಜ್ಞಾನವು ನಮಗೆ ಉಪಮಾನದಿಂದ ಲಭ್ಯವಾಗುತ್ತದೆ.
’ಶಬ್ದ'(ನುಡಿ/ವಾಕ್ಯ
ಸಾಕ್ಷ್ಯ)ವು ಮುಂದಿನ ಜ್ಞಾನದ ಮೂಲ. 'ಮೀಮಾಂಸ ದರ್ಶನ'ವು ವೇದಗಳ ನಿರ್ವಿವಾದಿತ ಪ್ರಾಮಾಣ್ಯವನ್ನು
ನಿರೂಪಿಸ ಬೇಕಾದುದರಿಂದ; ಇದಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ಕೊಟ್ಟಿದೆ.
ನಂಬಲರ್ಹ
ವ್ಯಕ್ತಿಯ ನುಡಿಗಳು ಸತ್ಯವೆಂದು ಗಣಿಸಲ್ಪಡುತ್ತವೆ, ಇದನ್ನೇ 'ಆಪ್ತವಾಕ್ಯ'ವೆಂದಿದ್ದಾರೆ.
'ಶಬ್ದ'
ಪ್ರಮಾಣವು ಎರಡು ರೀತಿಯದಾಗಿರುತ್ತದೆ; ಪೌರುಷೇಯ (ವ್ಯಕ್ತಿಗತ ಅಥವಾ ಆಪ್ತವಾಕ್ಯ) ಮತ್ತು ಅಪೌರುಷೇಯ
(ಮಾನವಾತೀತ). ಎರಡನೆಯದು ವೇದಗಳನ್ನು ಸೂಚಿಸುತ್ತದೆ
ಏಕೆಂದರೆ ಅವು ಮಾನವ ಮಾತ್ರರಿಂದ ಸೃಷ್ಟಿಸಲ್ಪಟ್ಟಿಲ್ಲ.
ವೇದಗಳು ಅಂತಿಮ ಪ್ರಮಾಣಗಳಾಗಿದ್ದು ಅವು ಕಟ್ಟಳೆಗಳನ್ನು ನಿರ್ದೇಶಿಸುವ ಗ್ರಂಥಗಳಾಗಿವೆ ಮತ್ತು ಅವು
ನಮಗೆ ಅಗೋಚರವಾದ ವಿಷಯಗಳನ್ನು ತಿಳಿಸುತ್ತವೆ ಮತ್ತು ಅಜ್ಞಾನವನ್ನು ಪರಿಹರಿಸುತ್ತವೆ. ಮತ್ತು ಅವುಗಳ
ಮೂಲ ಉದ್ದೇಶ ಮತ್ತು ಗುರಿ ಯಜ್ಞಯಾಗಾದಿಗಳ ಕ್ರಿಯೆಯನ್ನು ಪ್ರಚುರಪಡಿಸುವುದೇ ಆಗಿದೆ.
ವೇದಗಳು
ನಿತ್ಯವಾಗಿದ್ದು, ಮುದ್ರಿತ ಪುಸ್ತಕ ಅಥವಾ ಬಾಯಿಂದ ಬಾಯಿಗೆ ಹರಿದ ಮಂತ್ರಗಳಾಗಿರದೆ ಅವುಗಳಲ್ಲಿ ನಿತ್ಯ
ಸತ್ಯವಾದ ಬೋಧನೆಗಳಿವೆ. ಈ ಬೋಧನೆಗಳನ್ನು ಋಷಿ ಮುನಿಗಳು ಪ್ರತಿ ಯುಗದಲ್ಲಿಯೂ ನಮಗೆ ತಿಳಿಸಿ ಕೊಡುತ್ತಾರೆ.
ವೇದಗಳು
ಮುಖ್ಯವಾಗಿ ಯಜ್ಞ-ಯಾಗಾದಿಗಳು ಮತ್ತು ಅವಕ್ಕೆ ಸಂಭಂದಪಟ್ಟ ವಿಧಾನಗಳನ್ನು ಆದೇಶಿಸುವುದರಿಂದ ('ವಿಧಿ'ಸುವುದರಿಂದ); ಯಾವ ವಾಕ್ಯಗಳಲ್ಲಿ ಆದೇಶಾತ್ಮಕ ಕ್ರಿಯಾಪದಗಳು - 'ವಿಧಿಲಿನ್'
ಅಡಕವಾಗಿಯೋ (ಉದಾಹರಣೆಗೆ; "ಸ್ವರ್ಗಕಾಮೋ
ಯಜೇತ" - ಸ್ವರ್ಗವನ್ನು ಭಯಸುವವನು ಯಾಗವನ್ನು ಮಾಡಬೇಕು ಎನ್ನುವ ಆದೇಶಾತ್ಮಕ ಭಾವನೆ) ಅಂತಹವುಗಳನ್ನು
ಮಾತ್ರ 'ವಿಧಿ'ಗಳೆಂದು ಅಥವಾ 'ಅಧಿಕಾರಯುತ'ವಾದವುಗಳೆಂದು ಪರಿಗಣಿಸಿ ಉಳಿದವುಗಳನ್ನು ಅವಕ್ಕೆ ಪೂರಕವಾಗಿರುವ
ವಾಕ್ಯಗಳೆಂದು ಪರಿಗಣಿಸ ಬೇಕು. ಈ ರೀತಿಯ ಕ್ರಿಯಾಪದಗಳು ಕೇಳುಗರಲ್ಲಿ ತಾವು ಯಾಗವನ್ನು ಮಾಡಬೇಕು ಎನ್ನುವ ಬಯಕೆಯನ್ನುಂಟು ಮಾಡುವ ಅಂತಃಶಕ್ತಿಯಿಂದ ಕೂಡಿರುತ್ತವೆ.
ಇದನ್ನೇ 'ಭಾವನಾ' ಎಂದು ಹೇಳುತ್ತಾರೆ. ಬಯಕೆಯನ್ನು ಅಡಕವಾಗಿಸಿಕೊಂಡ ವೇದದ ನುಡಿಗಳನ್ನು 'ಶಬ್ದಿಭಾವನ'
(ಶಬ್ದ=ನುಡಿ) ಎನ್ನುತ್ತಾರೆ. ಈ ರೀತಿಯ ನುಡಿಗಳನ್ನು ಕೇಳಿದಾಕ್ಷಣ, ಕೇಳಿದವನಿಗೆ ಅದರಿಂದ ಪ್ರಯೋಜನವನ್ನು
ಪಡೆಯುವ ಉತ್ಕಟ ಬಯಕೆಯೂ ಉಂಟಾಗುತ್ತದೆ. ಈ ರೀತಿಯ ಬಯಕೆಯುಂಟಾದಾಗ ಅದನ್ನು 'ಅರ್ಥಿಭಾವನ' (ಅರ್ಥಿ=ಉಪಯೋಗ/ಪ್ರಯೋಜನ)
ಎಂದು ಕರೆಯಲಾಗಿದೆ.
ಮೇಲೆ ಹೇಳಿರುವ ವಿಷಯವನ್ನು ಸ್ಪಷ್ಟವಾಗಿ
ಅರಿಯಬೇಕೆಂದರೆ ವೇದದಲ್ಲಿನ ವಾಕ್ಯಗಳನ್ನು ಸರಿಯಾದ ಅರ್ಥ ಮತ್ತು ವಿಶ್ಲೇಷಣೆಗಳ ಮೂಲಕ ತಿಳಿದುಕೊಳ್ಳಬೇಕು.
ಇದಕ್ಕಾಗಿ ಮೀಮಾಂಸವು ಆರು ಹಂತಗಳನ್ನು ಸೂಚಿಸುತ್ತದೆ; 1) ಉಪಾಕರ್ಮ(ಪ್ರಾರಂಭ), 2) ಉಪಸಂಹಾರ(ತೀರ್ಮಾನ),
3) ಅಭ್ಯಾಸ(ಒತ್ತುಕೊಡುವುದಕ್ಕಾಗಿ ಪುನರುಚ್ಛಾರ), 4) ಅಪೂರ್ವತ (ಹಿಂದೆ ಬೇರೆ ಯಾವುದೇ ರೀತಿಯಿಂದ
ತಿಳಿಯಲಾಗದ್ದು), 5) ಫಲ (ಪ್ರಯೋಜನ) ಅಥವಾ ಅರ್ಥವಾದ
(ಕೇವಲ ಪ್ರಶಂಸೆ) 6) ಮತ್ತು ಉಪಪತ್ತಿ (ತರ್ಕ ಮತ್ತು
ಕಾರಣ).
ಒಮ್ಮೆ ಸರಿಯಾದ ಅರ್ಥವು ಸ್ಥಿರವಾದಲ್ಲಿ,
ವಿಧಿಗಳನ್ನು ಕೈಗೊಳ್ಳಬಹುದು.
'ಅರ್ಥಾಪತ್ತಿ'(ಸಮರ್ಥನೆ ಅಥವಾ
ಅನಿಸಿಕೆ)ಯು, ಸಾಮಾನ್ಯವಾಗಿ ಅಸಮಂಜಸವೆನಿಸುವ ಒಂದು ಅರ್ಥೈಸಲಾಗದ ಸಂಗತಿಯನ್ನು ವಿವರಿಸಲು ಅನಿವಾರ್ಯ.
ಉದಾಹರಣೆಗೆ, ಒಬ್ಬ ವ್ಯಕ್ತಿಯು ಹಗಲಿನಲ್ಲಿ ಏನನ್ನೂ ತಿನ್ನದೇ ಇದ್ದರೂ ಕೂಡ ದಪ್ಪನಾಗುತ್ತಿರುವುದು
ಕಂಡುಬಂದರೆ, ನಾವು ಅವನು ರಾತ್ರಿಯಲ್ಲಿ ರಹಸ್ಯವಾಗಿ ತಿನ್ನುತ್ತಿರಬೇಕೆಂದು ಊಹಿಸಿ ನಿರ್ಭಯವಾಗಿ ಸಮರ್ಥಿಸಬಹುದು.
'ಅರ್ಥಾಪತ್ತಿ'ಯಿಂದ ಲಭ್ಯವಾದ ಜ್ಞಾನವು ಪ್ರತ್ಯೇಕವಾಗಿರುವುದು ಏಕೆಂದರೆ ಈ ರೀತಿಯ ತಿಳುವಳಿಕೆಯು
ನಮಗೆ ಬೇರೆ ಯಾವುದೇ ವಿಧಾನದಿಂದ ಉಂಟಾಗುವುದಿಲ್ಲ.
'ಅನುಪಲಬ್ಧಿ'(ಗ್ರಹಿಸಲಾಗದ್ದು)
ಕೂಡ ಜ್ಞಾನವನ್ನು ಪಡೆಯುವ ಮೂಲವೆಂದು ಒಪ್ಪಲಾಗಿದೆ; ಏಕೆಂದರೆ ಅದು ತಕ್ಷಣವೇ ನಮಗೆ ಇಲ್ಲದಿರುವ ವಸ್ತುವಿನ
ಬಗ್ಗೆ ತಿಳುವಳಿಕೆಯನ್ನುಂಟು ಮಾಡುತ್ತದೆ. ಮೇಜಿನ ಮೇಲೆ ಈ ಮುಂಚೆ ಇದ್ದ ಒಂದು ಜಾಡಿಯ ಇಲ್ಲದಿರುವುದು
ಕಂಡು ಬಂದರೆ; ಅದರ ಇಲ್ಲದಿರುವಿಕೆಯು ಗೋಚರವಾಗುತ್ತದೆ.
ಪ್ರಾಸಂಗಿಕವಾಗಿ, ಮೀಮಾಂಸ ದರ್ಶನಕಾರರು
ದೋಷಗಳು ಹೇಗೆ ಒಳನುಸುಳತ್ತವೆಂದು ತಮ್ಮದೇ ಆದ ವಿವರಣೆಗಳನ್ನು ಮತ್ತು ಸಿದ್ಧಾಂತಗಳನ್ನು ಕೊಡುತ್ತಾರೆ.
ಇದು ಎರಡು ರೀತಿಯ ಅಭಿಪ್ರಾಯಗಳಿಗೆ ಎಡೆ ಮಾಡಿ ಕೊಟ್ಟಿದೆ.
ಮಸುಕಾದ ಬೆಳಕಿನಲ್ಲಿ ಹಗ್ಗವನ್ನು
ಹಾವೆಂದು ಗ್ರಹಿಸಿದಾಗ; ಈಗ ನೋಡುತ್ತಿರುವ ಹಗ್ಗ ಮತ್ತು ಈ ಹಿಂದೆ ನೋಡಿದ ಹಾವು ಎರಡೂ ನಿಜವಾದವು;
ಇಲ್ಲಿ ನೆನಪಿನ ಶಕ್ತಿಯ ಅಚಾತುರ್ಯದಿಂದ (ಸರಿಯಾಗಿ
ಕಾರ್ಯನಿರ್ವಹಿಸದೇ ಇರುವುದರಿಂದ) ಎರಡು ವಸ್ತುಗಳ ಬಗೆಗಿನ ಜ್ಞಾನದ ಮಿಶ್ರಣವಾಗಿ ಅದು ಭಯದ ಪ್ರಕ್ರಿಯೆಗೆ
ಕಾರಣವಾಯಿತು. ಇದನ್ನು 'ಅಖ್ಯಾತಿವಾದ'(ಮಿಥ್ಯಾ ಜ್ಞಾನದ ಅಲ್ಲಗಳೆಯುವಿಕೆ ಅಥವಾ ಭ್ರಮೆಯಿಂದುಂಟಾದ
ತಿಳುವಳಿಕೆಯನ್ನು ನಿರಾಕರಿಸುವುದು) ಎಂದು ಕರೆಯುತ್ತಾರೆ.
ಎರಡನೆಯದಾದ 'ವಿಪರೀತಖ್ಯಾತಿವಾದ'ವು,
ದೋಷವು ಎರಡು ನಿಜವಾದ ಆದರೆ ಪ್ರತ್ಯೇಕವಾದ ವಸ್ತುಗಳಿಗೆ ತಪ್ಪಾದ ಸಂಭಂದವನ್ನು ಕಲ್ಪಿಸುವುದರಲ್ಲಿದೆ
ಎಂದು ಪ್ರತಿಪಾದಿಸುತ್ತದೆ. (ಎರಡು ಬೇರೆ ಬೇರೆಯಾದ ಆದರೆ ನಿಜವಾದ ವಸ್ತುಗಳಿಗೆ ತಪ್ಪಾದ ಸಂಭಂದವನ್ನು
ಕಲ್ಪಿಸುವುದರಲ್ಲಿ ದೋಷವು ಅಡಗಿದೆ ಎಂದು ಎರಡನೆಯದಾದ 'ವಿಪರೀತಖ್ಯಾತಿ'ವಾದವು ಪ್ರತಿಪಾದಿಸುತ್ತದೆ.)
ಅಭೌತಿಕತೆ ಅಥವಾ ಅಧ್ಯಾತ್ಮ
(ಅ) ಪ್ರಪಂಚ
ಅದ್ವೈತ ಮೊದಲಾದ ಸಿದ್ಧಾಂತಗಳಿಗೆ
ಹೊರತಾಗಿ ಮೀಮಾಂಸ ದರ್ಶನವು ಅಸಂಖ್ಯಾತ ವಸ್ತುಗಳಿಂದ ಕೂಡಿರುವ ಈ ವಿಶ್ವವು ಸತ್ಯವೆಂದು ನಂಬುತ್ತದೆ. ಮೀಮಾಂಸ ದರ್ಶನದ ಪ್ರಕಾರ ಈ ಪ್ರಪಂಚವು, ಗ್ರಹಣೇಂದ್ರಿಯಗಳಿಂದ
ಕೂಡಿದ ಜೀವಿಗಳನ್ನು ಒಳಗೊಂಡಿದ್ದು; ಅದರಲ್ಲಿ ಜೀವಿಗಳು ತಾತ್ಕಾಲಿಕವಾಗಿ ವಾಸಿಸಿ ತಮ್ಮ ಕರ್ಮಕ್ಕನುಸಾರವಾಗಿ
ಒಳ್ಳೆಯ ಅಥವಾ ಕೆಟ್ಟ ಫಲಗಳನ್ನು ಅನುಭವಿಸುತ್ತವೆ. ವಿವಿಧ ಪ್ರಾಪಂಚಿಕ ವಸ್ತುಗಳು ಜೀವಿಗಳು ಒಳ್ಳೆಯ
ಅಥವಾ ಕೆಟ್ಟ ಫಲವನ್ನು ಅನುಭವಿಸಲು ಪೂರಕ ಸಾಧನಗಳಾಗಿವೆ.
(ಬ) ಆತ್ಮ
ಪ್ರಪಂಚದಲ್ಲಿ ಅಸಂಖ್ಯಾತವಾದ ಜೀವಾತ್ಮಗಳಿವೆ. ಅವುಗಳು ಶಾಶ್ವತವಾದರೂ
ಕೂಡ ಅವು ನಿಜವಾದ ದೇಹವನ್ನು ಹೊಂದಿದ್ದಾಗ ತಾವು ನಿಜವಾದ ಪ್ರಪಂಚದಲ್ಲಿ ಕೈಗೊಂಡ ಸುಕರ್ಮ ಅಥವಾ ಕುಕರ್ಮಗಳಿಗನುಸಾರವಾಗಿ
ಜನ್ಮಾಂತರಗಳನ್ನು/ಪುನರ್ಜನ್ಮವನ್ನು ಹೊಂದುತ್ತವೆ.
ಆತ್ಮಕ್ಕೆ ತನ್ನದೇ ಆದ ಅರಿವೆನ್ನುವುದು
ಇರುವುದಿಲ್ಲ. ಅದರಲ್ಲಿ ಅರಿವು ಅಥವಾ ತಿಳುವಳಿಕೆಯು ಅದು ಮನಸ್ಸು, ಜ್ಞಾನೇಂದ್ರಿಯಗಳು ಮತ್ತು ವಿಷಯ
ವಸ್ತುಗಳೊಂದಿಗೆ ಸಹಯೋಗ ಹೊಂದಿದಾಗ ಉದ್ಭವವಾಗುತ್ತದೆ. ಇದು ವಿಶೇಷವಾಗಿ ಜ್ಞಾನೇಂದ್ರಿಯಗಳು ಅಥವಾ
ಗ್ರಹಣೇಂದ್ರಿಯಗಳು ತಮಗೆ ಸಂಭಂದಪಟ್ಟ ವಿಷಯ ವಸ್ತುಗಳೊಂದಿಗೆ ಸಂಪರ್ಕವೇರ್ಪಡಿಸಿಕೊಂಡಾಗ ಉಂಟಾಗುತ್ತದೆ.
ಗಾಢ ನಿದ್ರೆಯಲ್ಲಿ ಸ್ಪೃಹೆಯಿಲ್ಲದಿರುವುದು/ಅರಿವು ಇಲ್ಲದಿರುವುದು ಆತ್ಮಕ್ಕೆ ತನ್ನದೇ ಆದ ಅರಿವು
ಇರುವುದಿಲ್ಲವೆನ್ನುವುದನ್ನು ನಿರೂಪಿಸುತ್ತದೆ.
ವ್ಯಕ್ತಿಯೊಬ್ಬನು ಸ್ವರ್ಗವನ್ನು
ಪಡೆಯಲು 'ಜ್ಯೋತಿಸ್ತೋಮ' ಯಜ್ಞವನ್ನು ಕೈಗೊಂಡನೆಂದುಕೊಳ್ಳಿ; ಆಗ ಅದರ ಸುಪ್ತ ಪ್ರಭಾವವು ಸೂಕ್ಷ್ಮ
ರೂಪದಲ್ಲಿ ಆತ್ಮದಲ್ಲಿ ನೆಲೆಸಿದ್ದು; ಆ ವ್ಯಕ್ತಿಯ ಮರಣಾನಂತರ ಅದರ ಫಲವು ಉಂಟಾಗುತ್ತದೆ. ಹೀಗೆ ಸುಪ್ತವಾಗಿರುವ
ಮತ್ತು ಅಗೋಚರವಾದ ಶಕ್ತಿ ಅಥವಾ ಸತ್ವವನ್ನು 'ಅಪೂರ್ವ'ವೆನ್ನುತ್ತಾರೆ.
ವೇದಗಳು ಪೂರ್ಣವಾಗಿ ಮನುಷ್ಯನನ್ನು
ಕರ್ಮ(ಯಜ್ಞ-ಯಾಗಗಳು) ಮಾಡಲು ಆದೇಶಿಸುವುದರಿಂದ, ಪ್ರತಿಯೊಬ್ಬ ಮನುಷ್ಯನು ಕರ್ತವ್ಯಕ್ಕಾಗಿ ಕರ್ತವ್ಯ
ಮಾಡಲು ಬದ್ಧನಾಗಿರುತ್ತಾನೆ. ಯಜ್ಞಕ್ರಿಯೆಯು ಮಾಡತಕ್ಕದ್ದು; ಏಕೆಂದರೆ ವೇದಗಳು ಹಾಗೆ ಮಾಡೆಂದು ಆದೇಶಿಸುತ್ತವೆಯಾದ್ದರಿಂದ;
ಅವನ್ನು ಮಾಡಲಾರೆನೆಂದು ಅಥವಾ ಅವನ್ನು ಬೇರೆ ವಿಧಾನದಿಂದ ಮಾಡುತ್ತೇನೆನ್ನದೆ ಅನಿವಾರ್ಯವಾಗಿ ಅವನ್ನು
ಮಾಡದೇ ವಿಧಿಯಿಲ್ಲ!
ಈ ರೀತಿಯ ಕರ್ತವ್ಯಗಳನ್ನು ಎರಡು
ವಿಶಾಲವಾದ ಗುಂಪುಗಳಾಗಿ ವಿಂಗಡಿಸಿದ್ದಾರೆ; ಅವೆಂದರೆ 'ನಿತ್ಯ' ಅಥವಾ ದಿನನಿತ್ಯ ಕೈಗೊಳ್ಳಲೇ ಬೇಕಾದ
ಕರ್ಮಗಳು ಮತ್ತು 'ನೈಮಿತ್ತಿಕ' ಅಥವಾ ಸಾಂದರ್ಭಿಕವಾದ (ಆದರೆ ಕೈಗೊಳ್ಳಲೇ ಬೇಕಾದ) ಕರ್ಮಗಳು. ಇವು
ಆತ್ಮನ ನೈತಿಕತೆಯನ್ನು ಉತ್ತಮಪಡಿಸಿ ಅದನ್ನು ಪರಿಶುದ್ಧಗೊಳಿಸುತ್ತವೆ.
(ಕ) ಮೋಕ್ಷ ಅಥವಾ
ಮುಕ್ತಿ
ಒಬ್ಬ ವ್ಯಕ್ತಿ ಹೊಂದಬಹುದಾದ ಅತ್ಯುನ್ನತ
ಒಳಿತೆಂದರೆ (ನಿಃಶ್ರೇಯಸವೆಂದರೆ), ಜನ್ಮಾಂತರಗಳ ಸರಪಳಿಯಿಂದ ಸಂಪೂರ್ಣ ಬಿಡುಗಡೆ. ಈ ಸ್ಥಿತಿಯಲ್ಲಿ
ಆತ್ಮನು ಸಂಪೂರ್ಣವಾಗಿ ಯಾತನೆ ಮತ್ತು ದುಃಖಗಳಿಂದ ಮುಕ್ತನಾಗಿರುತ್ತಾನೆ ಆದರೆ ಆ ಸ್ಥಿತಿಯಲ್ಲಿ ಆತ್ಮನಿಗೆ
ಅರಿವು ಮತ್ತು ಆನಂದವಿರುವುದಿಲ್ಲ!
ಬಹುಶಃ ಜೀವನದ ಅಂತಿಮ ಗುರಿಯು ಸ್ವರ್ಗದಲ್ಲಿ
'ನಿತ್ಯಾನಂದ'ವನ್ನು ಪಡೆಯುವುದು ಮೀಮಾಂಸ ದರ್ಶನದ ಗುರಿಯಾಗಿತ್ತೆಂದು ತೋರುತ್ತದೆ; ಆದರೆ ಈಗ ಲಭ್ಯವಿರುವ
ಸಾಹಿತ್ಯವು ಅದನ್ನು ಅನುಮೋದಿಸುವುದಿಲ್ಲ.
ಮೋಕ್ಷವನ್ನು ಹೊಂದುವುದು ಹೇಗೆ?
ಎನ್ನುವುದನ್ನು ಬಹುಶಃ ಬಹಳ ಸರಳವಾಗಿ ಮೀಮಾಂಸ ದರ್ಶನದಲ್ಲಿ ಉತ್ತರಿಸಿದ್ದಾರೆನಿಸುತ್ತದೆ. 'ಕಾಮ್ಯಕರ್ಮ'ಗಳನ್ನು
ಅಥವಾ ಆಸೆಯಿಂದೊಡಗೂಡಿದ ಕರ್ಮಗಳನ್ನು ಮಾಡದೇ ಇರುವುದರಿಂದ ಪುನರ್ಜನ್ಮವು ಉಂಟಾಗುವುದಿಲ್ಲ. ಇಷ್ಟವಿಲ್ಲದೆ
ಮಾಡಿದ ಪಾಪಕಾರ್ಯಗಳ ಫಲವನ್ನು ವಿವಿಧ ರೀತಿಯ 'ಪ್ರಾಯಶ್ಚಿತ್ತ'ವನ್ನು ಮಾಡಿಕೊಳ್ಳುವುದರ (ಪಾಪಗಳಿಂದ
ಮುಕ್ತಿಹೊಂದುವ ಯಜ್ಞಕರ್ಮಗಳನ್ನು ಮಾಡುವುದರಿಂದ) ಮೂಲಕ ತೊಡೆದುಹಾಕಬಹುದು. 'ನಿತ್ಯ' ಮತ್ತು 'ನೈಮಿತ್ತಿಕ'
ಕರ್ಮಗಳನ್ನು ಮಾಡುವುದರಿಂದ 'ಚಿತ್ತಶುದ್ಧಿ' ಅಥವಾ ಮನಸ್ಸಿನ ಶುದ್ಧತೆ ಉಂಟಾಗುತ್ತದೆ; ಒಂದು ವೇಳೆ
ಈ ಕರ್ಮಗಳನ್ನು ಕೈಗೊಳ್ಳದಿದ್ದರೆ 'ಪ್ರತ್ಯವಾಯದೋಷ' ಅಥವಾ 'ಕರ್ಮರಾಹಿತ್ಯ ದೋಷ'ವುಂಟಾಗಿ ಅದು ಮೋಕ್ಷದ
ಹಾದಿಯಲ್ಲಿ ತೊಡಕಾಗಿ ಪರಿಣಮಿಸುತ್ತದೆ. ಪ್ರಾರಬ್ಧಕರ್ಮವು (ಈ ಜನ್ಮಕ್ಕೆ ಕಾರಣವಾದ ಕರ್ಮವು) ಅದನ್ನು
ಈ ಜನ್ಮದಲ್ಲಿ ಅನುಭವಿಸುವುದರಿಂದ ಕರಗಿಹೋಗುತ್ತದೆ. ಆದ್ದರಿಂದ ಈ ದೇಹವು ಬಿದ್ದುಹೋದ ನಂತರ ಯಾವುದೇ
ಶೇಷವು ಉಳಿಯದಿರುವುದರಿಂದ ಆತ್ಮವು ಈ ಲೋಕಕ್ಕೆ ಮತ್ತೆ ಹಿಂತಿರುಗುವುದಿಲ್ಲ. ಮೇಲೆ ತಿಳಿಸಿರುವ ಕರ್ಮಗಳನ್ನು
ಕೈಗೊಳ್ಳುವುದರ ಪರಿಣಾಮವಾಗಿ ಮುಕ್ತಿಯು ತನ್ನಷ್ಟಕ್ಕೇ ತಾನೇ ಉಂಟಾಗುತ್ತದೆ.
(ಡ) ಈಶ್ವರ ಅಥವಾ
ಭಗವಂತ
ಮೀಮಾಂಸ ದರ್ಶನದ ಮತ್ತೊಂದು ಪ್ರಶ್ನೆಯೆಂದರೆ
ಅದು ದೇವರು ಅಥವಾ ಈಶ್ವರನು ಇದ್ದಾನೋ ಇಲ್ಲವೋ ಎನ್ನುವುದನ್ನು ಚರ್ಚಿಸಿ; ದೇವರ ಅಸ್ತಿತ್ವವನ್ನು ಅಲ್ಲಗಳೆಯುವುದು.
ಈ ಭೌತಿಕ ಜಗತ್ತನ್ನು ಉಂಟು ಮಾಡುವ ವಸ್ತುಗಳು ಯಾವಾಗಲೂ ಶಾಶ್ವತವಾಗಿ ಅಸ್ತಿತ್ವದಲ್ಲಿರುವುದರಿಂದ
ಮತ್ತು ಜೀವಾತ್ಮರ ಅದೃಷ್ಟ ಅಥವಾ ಕರ್ಮಗಳಿಗನುಸಾರವಾಗಿ ಈ ವಸ್ತುಗಳು ಪ್ರಚೋದನೆಗೊಳಪಟ್ಟು ಸೃಷ್ಟಿ
ಕ್ರಿಯೆಯನ್ನು ಉಂಟು ಮಾಡುತ್ತವೆಯಾದ್ದರಿಂದ, ಸೃಷ್ಟಿಯನ್ನು ರಚಿಸಲು ಯಾವುದೇ ವ್ಯಕ್ತಿಗತ ಭಗವಂತ ಅಥವಾ
ಕರ್ತೃವಿನ ಅವಶ್ಯಕತೆಯನ್ನು ಒಪ್ಪಿಕೊಳ್ಳುವ ಪ್ರಮೇಯವಿಲ್ಲ. (ವಿಶ್ವದಲ್ಲಿರುವ ವಸ್ತುಗಳು ಶಾಶ್ವತ
ಮತ್ತು ಜೀವ ಅಥವಾ ಆತ್ಮಗಳ ಕರ್ಮಕ್ಕನುಸಾರವಾಗಿ ಈ ಸೃಷ್ಟಿ ಕ್ರಿಯೆಯು ಸಹಜವಾಗಿ ಜರುಗುತ್ತದೆಯಾದ್ದರಿಂದ
ಇದನ್ನು ನಿಯಂತ್ರಿಸುವ ಅಥವಾ ಅದಕ್ಕೆ ದಿಶೆಯನ್ನು ಕೊಡುವ ಇನ್ನೊಬ್ಬ ವ್ಯಕ್ತಿ ಅಥವಾ ಭಗವಂತನ ಅವಶ್ಯಕತೆಯಿಲ್ಲ;
ಆದ್ದರಿಂದ ಅವನ ಇರುವಿಕೆಯನ್ನು ಮೀಮಾಂಸ ದರ್ಶನವು ಅಲ್ಲಗಳೆಯುತ್ತದೆ.)
ಉಪಸಂಹಾರ
ಒಂದು ಸೋಜಿಗದ ಸಂಗತಿಯೆಂದರೆ ವೇದಗಳ
ಪ್ರಭುತ್ವವನ್ನು ಎತ್ತಿಹಿಡಿಯಲು ಹೋದ ಪದ್ಧತಿಯು ಆ ಗ್ರಂಥವನ್ನೇ ಭಗವಂತನನ್ನಾಗಿಸಿ ಅದನ್ನು ಸೃಜಿಸಿದ
ವ್ಯಕ್ತಿಯನ್ನೇ (ಭಗವಂತನನ್ನೇ) ಬಹಿಷ್ಕರಿಸುತ್ತವೆ!
ಭಗವಂತನ ಸಂಗತಿ ಒತ್ತಟ್ಟಿಗಿರಲಿ, ವೈದಿಕ ಕ್ರಿಯೆಗಳಲ್ಲಿ ತಮ್ಮ ಆಹುತಿಗಳನ್ನು ಸ್ವೀಕರಿಸಲು ಮೊರೆಯಿಡುವ
ಇಂದ್ರ, ಮಿತ್ರ, ವರುಣ ಮೊದಲಾದವರನ್ನೂ ಕೂಡ ಕಟ್ಟು ಕಥೆಗಳಲ್ಲಿನ ಅಥವಾ ನಾಟಕಗಳಲ್ಲಿನ 'ಕಾಲ್ಪನಿಕ
ಪಾತ್ರ'ಗಳೆಂದು ಮೀಮಾಂಸ ದರ್ಶನದ ಪ್ರತಿಪಾದಕರು ಪರಿಗಣಿಸುತ್ತಾರೆ.
ಅಂತಿಮ ಕೇಡನ್ನು ಹೋಗಲಾಡಿಸಿಕೊಳ್ಳಲು
(ಮೋಕ್ಷದ ಹಾದಿಯನ್ನು ಸುಗುಮಗೊಳಿಸಿಕೊಳ್ಳಲು); ಕರ್ಮ(ಯಾಗ, ಯಜ್ಞ ಅಥವಾ ವೈದಿಕ ಕ್ರಿಯೆ)ಗಳನ್ನು ಮಾಡುವುದನ್ನು
ಅತಿಯಾಗಿ ಹೇರಿದ್ದರಿಂದ ಅಥವಾ ವಿಪರೀತವಾಗಿ ಪ್ರತಿಪಾದಿಸಿದ್ದರಿಂದ ಮೀಮಾಂಸ ದರ್ಶನವು ತನ್ನ ಸಮಾಧಿಯನ್ನು
ತಾನೇ ತೋಡಿಕೊಂಡು, ಅದರ ಜೀವಂತ ಅಸ್ತಿತ್ವವನ್ನು ಕಳೆದುಕೊಂಡಿತೆಂದು ಘಂಟಾಘೋಷವಾಗಿ ಹೇಳಿದರೆ ತಪ್ಪಿಲ್ಲವೆನಿಸುತ್ತದೆ.
ಆದರೂ ಕೂಡ, ಮೀಮಾಂಸ ದರ್ಶನದ 'ಜ್ಞಾನ
ಸಿದ್ಧಾಂತ' ಮತ್ತು ಅದು ವೈದಿಕ ನುಡಿಗಟ್ಟುಗಳು ಅಥವಾ 'ಸೂತ್ರ'ಗಳನ್ನು ವಿಶ್ಲೇಷಿಸುವ ವಿಧಾನಗಳನ್ನು
ಶ್ರದ್ಧೆಯಿಂದ ಅಭ್ಯಸಿಸಿದರೆ ಅವು ನಮಗೆ ವೇದಾಂತ ಪದ್ಧತಿಗಳನ್ನು ಚೆನ್ನಾಗಿ ಅರಿತುಕೊಳ್ಳುವುದರಲ್ಲಿ
ಸಹಾಯಕವಾಗುತ್ತವೆ.
*******
Friday, August 24, 2012
ನಟರಾಜ್ ಲೇಖನಿಯಿಂದ-1
ಬೆಂಗಳೂರಿನ ಶ್ರೀ ನಟರಾಜ್ ಕಾನಗೋಡ್ ಪ್ರಸ್ತುತ ಆಫ್ಘಾನಿಸ್ಥಾನದ ಕಾಬೂಲ್ ನಲ್ಲಿ ಆಫ್ಗನ್ ಟಿ.ವಿ.ಯಲ್ಲಿ ಚೀಫ್ ಆಪರೇಟಿಂಗ್ ಆಫೀಸರ್ ಹುದ್ಧೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಫೇಸ್ ಬುಕ್ ನಲ್ಲಿ " ಸಿದ್ಹಾಂತ!!ವೇದಾಂತ!!ವಿಚಾರ ವೇದಿಕೆ !!! " ಗುಂಪನ್ನು ಆರಂಭಿಸಿ ಸಾಕಷ್ಟು ಚಿಂತನ ಮಂಥನ ನಡೆಸುತ್ತಿರುವ ಶ್ರೀ ನಟರಾಜ್ ತಮ್ಮ ಲೇಖನಿಯಿಂದ ವೇದಸುಧೆಯಲ್ಲೂ ಬರೆಯಲಿದ್ದಾರೆ. ಅವರ ಅನುಮತಿಯೊಡನೆ ಅವರ ಕೆಲವು ಕಿರು ಬರಹಗಳನ್ನು ಇಲ್ಲಿ ಪ್ರಕಟಿಸಿರುವೆ.
-ಹರಿಹರಪುರಶ್ರೀಧರ್
------------------------------------------------------
ಸಾತ್ವಿಕ ವ್ಯಕ್ತಿಯ ಲಕ್ಷಣಗಳು:
ಒಬ್ಬ ವ್ಯಕ್ತಿ ಅಥವಾ ಜೀವಿಯನ್ನು ಸಾತ್ವಿಕ ವೆಂದು ಕರೆಯಬೇಕಾದರೆ, ಅಂತಹವನು ಮುಖ್ಯವಾಗಿ ಸಾತ್ವಿಕ ಪ್ರವೃತ್ತಿಗಳನ್ನು ಹೊಂದಿರಬೇಕು. "ಸಾತ್ವಿಕ" ಎಂಬ ಪದವು ದೈವಿಕ, ಶುದ್ಧ, ಹಾಗು ಆಧ್ಯಾತ್ಮಕ್ಕೆ ಸೂಚಿತವಾಗುತ್ತದೆ.
ಒಬ್ಬ ಸಾತ್ವಿಕ ನಾದ ವ್ಯಕ್ತಿಯು ಯಾವಾಗಲೂ ಜಗತ್ತಿನ ಒಳಿತಿಗಾಗಿ ಕೆಲಸವನ್ನು ಮಾಡುತ್ತಾನೆ. ಇವರುಗಳು ಯಾವಾಗಲೂ ಶ್ರಮಜೀವಿಗಳಾಗಿದ್ದು, ಜಾಗರೂಕರಾಗಿ ಹಾಗು ಅತಿರೇಕವಿಲ್ಲದ ಜೀವನಶೈಲಿಯನ್ನು ಅನುಸರಿಸುತ್ತಾರೆ. ಸರಳವಾದ ಜೀವನವನ್ನು ಸಾಗಿಸುತ್ತಾರೆ. ಮಿತವಾಗಿ ಆಹಾರವನ್ನು ಸೇವಿಸುತ್ತಾರೆ. ಸತ್ಯವನ್ನು ನುಡಿಯುವುದರ ಜೊತೆಗೆ ದಿಟ್ಟವಾಗಿರುತ್ತಾರೆ. ಅಶ್ಲೀಲವಾದ ಅಥವಾ ಅವಮಾನ ಮಾಡುವ ರೀತಿಯಲ್ಲಿ ಎಂದಿಗೂ ಮಾತನಾಡುವುದಿಲ್ಲ. ಅಭಿನಂದನಾರ್ಹವಾಗಿ ಮಾತನಾಡುವುದರ ಜೊತೆಗೆ ನಿಖರವಾದ ಭಾಷೆಯನ್ನೂ ಬಳಸುತ್ತಾರೆ. ಇವರು ಹೊಟ್ಟೆಕಿಚ್ಚು ಪಡುವುದಿಲ್ಲ ಅಥವಾ ದುರಾಸೆ ಹಾಗು ಸ್ವಾರ್ಥ ಇವರ ಮೇಲೆ ಪರಿಣಾಮ ಬೀರುವುದಿಲ್ಲ. ಭರವಸೆ, ಸಮೃದ್ಧತೆ ಹಾಗು ಔದಾರ್ಯವನ್ನು ಮೆರೆಯುತ್ತಾರೆ. ಯಾವುದೇ ಕಾರಣಕ್ಕೂ ಒಬ್ಬರಿಗೆ ಮೋಸ ಮಾಡುವುದಾಗಲಿ ಅಥವಾ ತಪ್ಪುದಾರಿಗೆ ಎಳೆಯ
ವುದಾಗಲಿ ಮಾಡುವುದಿಲ್ಲ. ಇರುವುದನ್ನೇ ಹೇಳುವುದರ ಜೊತೆಗೆ ಗಮ್ಯವನ್ನು ವಿವರಿಸಿ, ಜನರು ತಮಗೆ ಬೇಕಾದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತಾರೆ. ತಮ್ಮ ಮನಸ್ಸಿನ ಮೇಲೆ ಯಾವುದೇ ಕೆಡುಕಿನ ಪ್ರವೃತ್ತಿಗಳು ಆಳಲು ಅವಕಾಶ ಮಾಡಿಕೊಡುವುದಿಲ್ಲ. ಆಂತರಿಕ ಪರಮಾನಂದದ ಸ್ಥಿತಿಗೆ ಬೆಂಬಲಿಸಿ, ಅದು ಜಗತ್ತಿಗೆ ಹರಡುವಂತೆ ಮಾಡುತ್ತಾರೆ. ಅವರು ಸ್ಮರಣಶಕ್ತಿ ಹಾಗು ಚಿತ್ತೈಕಾಗ್ರತೆಯು ಉತ್ತಮವಾಗಿರುತ್ತದೆ. ಆಧ್ಯಾತ್ಮಿಕ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ಹೆಚ್ಚು ಆಸಕ್ತರಾಗಿರುವುದರ ಜೊತೆಗೆ ದೈವತ್ವವನ್ನು ಪೂಜಿಸುತ್ತಾ ಅಥವಾ ಧ್ಯಾನಿಸುತ್ತಾ ಕಾಲವನ್ನು ಕಳೆಯುತ್ತಾರೆ. ತೀವ್ರತರವಾದ ಪರಿಸ್ಥಿತಿಗಳಲ್ಲಿ ದೇಹವನ್ನು ದಂಡಿಸಬಹುದು ಅಥವಾ ಭಂಗ ಬರದಂತೆ ಧ್ಯಾನವನ್ನು ಮಾಡಬಹುದು. ಮನಸ್ಸು, ಮಾತು ಹಾಗು ಕೃತ್ಯಗಳು ಸಮನ್ವಯಗೊಂಡಿದ್ದಾಗ, ಅಂತಹ ವ್ಯಕ್ತಿಯನ್ನು ಒಬ್ಬ ಸಾತ್ವಿಕ ನೆಂದು ಗುರುತಿಸಬಹುದು. ಇಂತಹ ಸ್ಥಿತಿಯನ್ನು ಸಂಸ್ಕೃತ ಪದಗಳಲ್ಲಿ ಮನಸಾ, ವಾಚ, ಕರ್ಮಣ ಎಂದು ವಿವರಿಸಲಾಗುತ್ತದೆ.
ಸಾತ್ವಿಕ ಆಹಾರದ ಲಕ್ಷಣ:
ಒಂದು ಪದಾರ್ಥ ಅಥವಾ ಆಹಾರವು ಸಾತ್ವಿಕ ವಾದದ್ದು ಎನಿಸಿಕೊಳ್ಳಬೇಕಾದರೆ, ಅದು ಶುದ್ಧವಾಗಿರುವುದರ ಜೊತೆಗೆ ಜಗತ್ತಿನಲ್ಲಿ ಯಾವುದೇ ರೀತಿಯಲ್ಲಿ ಕೆಡುಕನ್ನು ಅಥವಾ ಕಾಯಿಲೆಯನ್ನು ಅದು ಉಂಟುಮಾಡದಂತಿರಬೇಕು. ಇದಕ್ಕೆ ಪರಸ್ಪರ ವಿರುದ್ಧವಾಗಿ ಇದರ ಅಸ್ತಿತ್ವವು ಸುತ್ತಮುತ್ತಲಿನ ಪರಿಸರವನ್ನು ಶುದ್ಧಗೊಳಿಸುವಂತಿರಬೇಕು. ಈ ರೀತಿಯಾಗಿ, ಒಬ್ಬ ವ್ಯಕ್ತಿಯು ಇಂತಹ ಆಹಾರವನ್ನು ಸೇವಿಸಿದಾಗ, ಅವನಿಗೆ ತಾನು ಒಳ್ಳೆಯ ಆಹಾರವನ್ನು ಸೇವಿಸುತ್ತಿರುವುದಾಗಿ ಭಾಸವಾಗಬೇಕು. ಆಹಾರವು ಆರೋಗ್ಯಕರವಾಗಿ, ಪೌಷ್ಟಿಕರವಾಗಿ ಹಾಗು ಶುದ್ಧವಾಗಿರಬೇಕು. ಇದು ಶಕ್ತಿಯನ್ನು ಕುಂದಿಸುವ ರೀತಿಯಲ್ಲಾಗಲಿ ಅಥವಾ ಮಾನಸಿಕ ಸಮತೋಲನಕ್ಕೆ ಧಕ್ಕೆ ತರುವ ರೀತಿಯಲ್ಲಾಗಲಿ ಇರಬಾರದು. ಈ ಕಲ್ಪನೆಯು ಕಾಮೋತ್ತೆಜನಕ್ಕೆ ಅವಕಾಶ ಮಾಡಿಕೊಡದಂತೆಯೂ ಅಥವಾ ಈ ಮಾರ್ಗದಲ್ಲಿ ಮನಸ್ಸಿನ ಮೇಲೆ ಪರಿಣಾಮವನ್ನು ಉಂಟುಮಾಡುವ ಔಷಧಗಳು ಹಾಗು ಮಾದಕದ್ರವ್ಯವನ್ನು ನಿಷೇಧಿಸುವಂತಿರಬೇಕು. ಇದು, ಒಂದು ಜೀವಿಗೆ ನೋವನ್ನುಂಟುಮಾಡಿ, ಅದನ್ನು ಸಾಯಿಸಿದ ನಂತರ ಒದಗುವ ಆಹಾರ ಅಥವಾ ಪದಾರ್ಥಗಳನ್ನೂ ಸಹ ನಿಷೇಧಿಸುತ್ತದೆ. ಇದಕ್ಕೆ ಕಾರಣ, ಪದಾರ್ಥವು ನಂತರದಲ್ಲಿ ಒಂದು ಪಾಪ ಕೃತ್ಯಕ್ಕೆ ಮೂಲವಾಗುತ್ತದೆ. ಇದು ಹಳಸಿದ ಹಾಗು ಘಾಟಿನ ತೀಕ್ಷ್ಣತೆಯಿರುವ ಆಹಾರವನ್ನೂ ಸಹ ಬಹಿಷ್ಕರಿಸುತ್ತದೆ.
"ವೇದದ ಬಗ್ಗೆಯ ತಪ್ಪು ಕಲ್ಪನೆ"
ವೇದಗಳ ಬಗ್ಗೆ ಬಹಳ ತಪ್ಪು ಕಲ್ಪನೆಗಳಿವೆ, ವೇದ ಮಂತ್ರಗಳಲ್ಲಿ ಎಲ್ಲೂ ದೇವರ ಪೂಜಾವಿಧಾನವನ್ನು ಹೇಳಿರುವುದಿಲ್ಲ. ಕೆಲವು ದೇವತೆಗಳ ಹೆಸರುಗಳನ್ನು ಋಷಿಮುನಿಗಳು ಸಂಕಲ್ಪಿಸಿಕೊಂಡು ಮಾಡಿದ ತಪಸ್ಸಿನಿಂದಾ ಈ ಮಂತ್ರವನ್ನು ಕಾಣಲಾಯಿತು ಎಂದು ನಮೂದಿಸಲ್ಪಟ್ಟಿದೆಯೇ ಹೊರೆತು, ವೇದ ಮಂತ್ರಗಳು ಪೂಜಾ ವಿಧಾನವನ್ನಾಗಲೀ, ಅಥವಾ ದೇವರ ಬಗ್ಗೆ ಯಾವುದೇ ರೂಪದ ಕಲ್ಪನೆಯನ್ನಾಗಲೀ ಕೊಟ್ಟಿಲ್ಲ. ಅಲ್ಲಿ ಕೇವಲ ಕೆಲವು ಮಂತ್ರಗಳು ಕಾಣಲ್ಪಟ್ಟಿವೆ(ಅವುಗಳು ಯಾರಿಂದಲೂ ಬರೆಯಲ್ಪಟ್ಟಿಲ್ಲ ಅಥವ ಅವರ ಬದ್ಧಿಯಿಂದಾ ರಚಿಸಲ್ಪಟ್ಟಿಲ್ಲ)ಹಾಗೂ ಆ ಮಂತ್ರಗಳನ್ನೂ ಕಂಡವರಿಗೂ(ಯಾರ ಬಾಯಿಂದ ಬಂದಿದೆಯೋ)ಕೂಡ ಅದರ ಅರಿವು ಇರುತ್ತಿರಲಿಲ್ಲ. ಅಂಥಹ ಸ್ಥಿತಿಗೆ ಅವರು ಹೋದಾಗಲೇ ಅವು ಅವರ ಬಾಯಿಂದಾ ಬರುತ್ತಿದ್ದವು(ಸಮಾಧಿ ಸ್ಥಿತಿ)ಅದನ್ನ ಮತ್ತೊಬ್ಬರು ತಿಳಿದು ಬರೆದುಕೊಳ್ಳಬೇಕಾಗಿತ್ತು.ಅಂತ ಒಂದು ಕಾಲವೇ ವೇದ ಕಾಲವಾಗಿತ್ತು.ಯಾರು,ಯಾವ ವಿಷಯದ ಬಗ್ಗೆ ತಿಳಿದುಕೊಳ್ಳಬೇಕಾಗಿತ್ತೋ,ಅದರ ಬಗ್ಗೆ ಸಂಕಲ್ಪ ಮಾಡಿ, ಧ್ಯಾನದ ಸ್ಥಿತಿಯಲ್ಲಿ ಕುಳಿತಾಗ, ಅವರು ಸಮಾಧಿ ಸ್ಥಿತಿಗೆ ಹೋದಾಗ, ಅವರ ಬಾಯಿಯಿಂದಾ ಬಂದಂತಹುದೇ ವೇದ ಮಂತ್ರಗಳು ಹಾಗೂ ಸೂಕ್ತಗಳು.ಅದು ಈಗ ನಮಗೆ ಪರಿಚಿತವಿರುವ ಸಂಸ್ಕೃತದ ಅರ್ಥಕ್ಕೆ ಕೂಡ ಪೂರ್ತಿಯಾಗಿ ಸಿಗುವುದಿಲ್ಲ. ಅದರ ವ್ಯಾಪ್ತಿಗೆ ಮೀರಿರುವುದು ಆಗಿರುತ್ತದೆ. ಅದನ್ನು ನಮಗೆ ಈಗ ಗೊತ್ತಿರುವ ಸಂಸ್ಕೃತದಿಂದ ವೇದ ಮಂತ್ರದ ಅರ್ಥ ಇಷ್ಟೇ, ಹೀಗೆ, ಎಂದು ಹೇಳಲು ಆಗುವುದಿಲ್ಲ.ಅದನ್ನು ಜಪಿಸಿಯೇ ಅದರ ಪರಿಣಾಮವನ್ನು ತಿಳಿದುಕೊಳ್ಳಬೇಕಾಗುತ್ತದೆ.ಹಾಗೆ ಅದನ್ನು ಜಪಿಸಿ ತಿಳಿದುಕೊಂಡವರು ಮಾತ್ರಾ ಈ ಮಂತ್ರ ಇದಕ್ಕಾಗಿ ಎಂದು ಹೇಳಲು ಸಾಧ್ಯ. ನಮ್ಮಲ್ಲಿಯ ಯಾವ ವಿಧ್ವಾಂಸರಿಗೂ ಅದನ್ನು ಪೂರ್ತಿಯಾಗಿ ಅರ್ಥೈಸಲು ಆಗುವುದಿಲ್ಲ. ಕೇವಲ ಸ್ಥೂಲವಾಗಿ ಅರ್ಥೈಸಬಹುದೇ ಹೊರೆತು, ಅದರ ಪರಿಣಾಮ, ಅದರ ತರಂಗಗಳು, ಇವನ್ನೆಲ್ಲ ಸ್ವತಹ ಜಪಿಸಿಯೇ, ಸಿದ್ಧಿಮಾಡಿಕೊಂಡೇ, ಕಂಡುಕೊಳ್ಳಬೇಕಾಗುತ್ತದೆ.ಅದನ್ನು ಬಾಯಿಪಾಠ ಮಾಡಿದ ಮಾತ್ರಕ್ಕೆ ಯಾರೂ ಬ್ರಹ್ಮ್ಮಜ್ನಾನಿ ಯಾಗುವುದಿಲ್ಲ.ಅದರ ಶುದ್ಧವಾದ ಹಾಗೂ ನಿರಂತರ ಪಠಣೆಯಿಂದಾ ಸಿದ್ಧಿಯನ್ನು ಹೊಂದಬಹುದಾಗಿದೆ ಅಷ್ಟೆ. ಎಲ್ಲವಕ್ಕೂ ವೇದದ ಹೆಸರನ್ನು ಹೇಳಿ ದಾರಿತಪ್ಪಿಸುತ್ತಿರುವುದೇ ಒಂದು ದೊಡ್ಡ ದುರಾದೃಷ್ಟ.
ಸಾತ್ವಿಕ ಆಹಾರದ ಲಕ್ಷಣ:
ಒಂದು ಪದಾರ್ಥ ಅಥವಾ ಆಹಾರವು ಸಾತ್ವಿಕ ವಾದದ್ದು ಎನಿಸಿಕೊಳ್ಳಬೇಕಾದರೆ, ಅದು ಶುದ್ಧವಾಗಿರುವುದರ ಜೊತೆಗೆ ಜಗತ್ತಿನಲ್ಲಿ ಯಾವುದೇ ರೀತಿಯಲ್ಲಿ ಕೆಡುಕನ್ನು ಅಥವಾ ಕಾಯಿಲೆಯನ್ನು ಅದು ಉಂಟುಮಾಡದಂತಿರಬೇಕು. ಇದಕ್ಕೆ ಪರಸ್ಪರ ವಿರುದ್ಧವಾಗಿ ಇದರ ಅಸ್ತಿತ್ವವು ಸುತ್ತಮುತ್ತಲಿನ ಪರಿಸರವನ್ನು ಶುದ್ಧಗೊಳಿಸುವಂತಿರಬೇಕು. ಈ ರೀತಿಯಾಗಿ, ಒಬ್ಬ ವ್ಯಕ್ತಿಯು ಇಂತಹ ಆಹಾರವನ್ನು ಸೇವಿಸಿದಾಗ, ಅವನಿಗೆ ತಾನು ಒಳ್ಳೆಯ ಆಹಾರವನ್ನು ಸೇವಿಸುತ್ತಿರುವುದಾಗಿ ಭಾಸವಾಗಬೇಕು. ಆಹಾರವು ಆರೋಗ್ಯಕರವಾಗಿ, ಪೌಷ್ಟಿಕರವಾಗಿ ಹಾಗು ಶುದ್ಧವಾಗಿರಬೇಕು. ಇದು ಶಕ್ತಿಯನ್ನು ಕುಂದಿಸುವ ರೀತಿಯಲ್ಲಾಗಲಿ ಅಥವಾ ಮಾನಸಿಕ ಸಮತೋಲನಕ್ಕೆ ಧಕ್ಕೆ ತರುವ ರೀತಿಯಲ್ಲಾಗಲಿ ಇರಬಾರದು. ಈ ಕಲ್ಪನೆಯು ಕಾಮೋತ್ತೆಜನಕ್ಕೆ ಅವಕಾಶ ಮಾಡಿಕೊಡದಂತೆಯೂ ಅಥವಾ ಈ ಮಾರ್ಗದಲ್ಲಿ ಮನಸ್ಸಿನ ಮೇಲೆ ಪರಿಣಾಮವನ್ನು ಉಂಟುಮಾಡುವ ಔಷಧಗಳು ಹಾಗು ಮಾದಕದ್ರವ್ಯವನ್ನು ನಿಷೇಧಿಸುವಂತಿರಬೇಕು. ಇದು, ಒಂದು ಜೀವಿಗೆ ನೋವನ್ನುಂಟುಮಾಡಿ, ಅದನ್ನು ಸಾಯಿಸಿದ ನಂತರ ಒದಗುವ ಆಹಾರ ಅಥವಾ ಪದಾರ್ಥಗಳನ್ನೂ ಸಹ ನಿಷೇಧಿಸುತ್ತದೆ. ಇದಕ್ಕೆ ಕಾರಣ, ಪದಾರ್ಥವು ನಂತರದಲ್ಲಿ ಒಂದು ಪಾಪ ಕೃತ್ಯಕ್ಕೆ ಮೂಲವಾಗುತ್ತದೆ. ಇದು ಹಳಸಿದ ಹಾಗು ಘಾಟಿನ ತೀಕ್ಷ್ಣತೆಯಿರುವ ಆಹಾರವನ್ನೂ ಸಹ ಬಹಿಷ್ಕರಿಸುತ್ತದೆ.
"ವೇದದ ಬಗ್ಗೆಯ ತಪ್ಪು ಕಲ್ಪನೆ"
ವೇದಗಳ ಬಗ್ಗೆ ಬಹಳ ತಪ್ಪು ಕಲ್ಪನೆಗಳಿವೆ, ವೇದ ಮಂತ್ರಗಳಲ್ಲಿ ಎಲ್ಲೂ ದೇವರ ಪೂಜಾವಿಧಾನವನ್ನು ಹೇಳಿರುವುದಿಲ್ಲ. ಕೆಲವು ದೇವತೆಗಳ ಹೆಸರುಗಳನ್ನು ಋಷಿಮುನಿಗಳು ಸಂಕಲ್ಪಿಸಿಕೊಂಡು ಮಾಡಿದ ತಪಸ್ಸಿನಿಂದಾ ಈ ಮಂತ್ರವನ್ನು ಕಾಣಲಾಯಿತು ಎಂದು ನಮೂದಿಸಲ್ಪಟ್ಟಿದೆಯೇ ಹೊರೆತು, ವೇದ ಮಂತ್ರಗಳು ಪೂಜಾ ವಿಧಾನವನ್ನಾಗಲೀ, ಅಥವಾ ದೇವರ ಬಗ್ಗೆ ಯಾವುದೇ ರೂಪದ ಕಲ್ಪನೆಯನ್ನಾಗಲೀ ಕೊಟ್ಟಿಲ್ಲ. ಅಲ್ಲಿ ಕೇವಲ ಕೆಲವು ಮಂತ್ರಗಳು ಕಾಣಲ್ಪಟ್ಟಿವೆ(ಅವುಗಳು ಯಾರಿಂದಲೂ ಬರೆಯಲ್ಪಟ್ಟಿಲ್ಲ ಅಥವ ಅವರ ಬದ್ಧಿಯಿಂದಾ ರಚಿಸಲ್ಪಟ್ಟಿಲ್ಲ)ಹಾಗೂ ಆ ಮಂತ್ರಗಳನ್ನೂ ಕಂಡವರಿಗೂ(ಯಾರ ಬಾಯಿಂದ ಬಂದಿದೆಯೋ)ಕೂಡ ಅದರ ಅರಿವು ಇರುತ್ತಿರಲಿಲ್ಲ. ಅಂಥಹ ಸ್ಥಿತಿಗೆ ಅವರು ಹೋದಾಗಲೇ ಅವು ಅವರ ಬಾಯಿಂದಾ ಬರುತ್ತಿದ್ದವು(ಸಮಾಧಿ ಸ್ಥಿತಿ)ಅದನ್ನ ಮತ್ತೊಬ್ಬರು ತಿಳಿದು ಬರೆದುಕೊಳ್ಳಬೇಕಾಗಿತ್ತು.ಅಂತ ಒಂದು ಕಾಲವೇ ವೇದ ಕಾಲವಾಗಿತ್ತು.ಯಾರು,ಯಾವ ವಿಷಯದ ಬಗ್ಗೆ ತಿಳಿದುಕೊಳ್ಳಬೇಕಾಗಿತ್ತೋ,ಅದರ ಬಗ್ಗೆ ಸಂಕಲ್ಪ ಮಾಡಿ, ಧ್ಯಾನದ ಸ್ಥಿತಿಯಲ್ಲಿ ಕುಳಿತಾಗ, ಅವರು ಸಮಾಧಿ ಸ್ಥಿತಿಗೆ ಹೋದಾಗ, ಅವರ ಬಾಯಿಯಿಂದಾ ಬಂದಂತಹುದೇ ವೇದ ಮಂತ್ರಗಳು ಹಾಗೂ ಸೂಕ್ತಗಳು.ಅದು ಈಗ ನಮಗೆ ಪರಿಚಿತವಿರುವ ಸಂಸ್ಕೃತದ ಅರ್ಥಕ್ಕೆ ಕೂಡ ಪೂರ್ತಿಯಾಗಿ ಸಿಗುವುದಿಲ್ಲ. ಅದರ ವ್ಯಾಪ್ತಿಗೆ ಮೀರಿರುವುದು ಆಗಿರುತ್ತದೆ. ಅದನ್ನು ನಮಗೆ ಈಗ ಗೊತ್ತಿರುವ ಸಂಸ್ಕೃತದಿಂದ ವೇದ ಮಂತ್ರದ ಅರ್ಥ ಇಷ್ಟೇ, ಹೀಗೆ, ಎಂದು ಹೇಳಲು ಆಗುವುದಿಲ್ಲ.ಅದನ್ನು ಜಪಿಸಿಯೇ ಅದರ ಪರಿಣಾಮವನ್ನು ತಿಳಿದುಕೊಳ್ಳಬೇಕಾಗುತ್ತದೆ.ಹಾಗೆ ಅದನ್ನು ಜಪಿಸಿ ತಿಳಿದುಕೊಂಡವರು ಮಾತ್ರಾ ಈ ಮಂತ್ರ ಇದಕ್ಕಾಗಿ ಎಂದು ಹೇಳಲು ಸಾಧ್ಯ. ನಮ್ಮಲ್ಲಿಯ ಯಾವ ವಿಧ್ವಾಂಸರಿಗೂ ಅದನ್ನು ಪೂರ್ತಿಯಾಗಿ ಅರ್ಥೈಸಲು ಆಗುವುದಿಲ್ಲ. ಕೇವಲ ಸ್ಥೂಲವಾಗಿ ಅರ್ಥೈಸಬಹುದೇ ಹೊರೆತು, ಅದರ ಪರಿಣಾಮ, ಅದರ ತರಂಗಗಳು, ಇವನ್ನೆಲ್ಲ ಸ್ವತಹ ಜಪಿಸಿಯೇ, ಸಿದ್ಧಿಮಾಡಿಕೊಂಡೇ, ಕಂಡುಕೊಳ್ಳಬೇಕಾಗುತ್ತದೆ.ಅದನ್ನು ಬಾಯಿಪಾಠ ಮಾಡಿದ ಮಾತ್ರಕ್ಕೆ ಯಾರೂ ಬ್ರಹ್ಮ್ಮಜ್ನಾನಿ ಯಾಗುವುದಿಲ್ಲ.ಅದರ ಶುದ್ಧವಾದ ಹಾಗೂ ನಿರಂತರ ಪಠಣೆಯಿಂದಾ ಸಿದ್ಧಿಯನ್ನು ಹೊಂದಬಹುದಾಗಿದೆ ಅಷ್ಟೆ. ಎಲ್ಲವಕ್ಕೂ ವೇದದ ಹೆಸರನ್ನು ಹೇಳಿ ದಾರಿತಪ್ಪಿಸುತ್ತಿರುವುದೇ ಒಂದು ದೊಡ್ಡ ದುರಾದೃಷ್ಟ.
Friday, August 17, 2012
೫. ಯೋಗದರ್ಶನ
ಪರಿಚಯ
ಭಾರತೀಯ ತತ್ವಶಾಸ್ತ್ರ ಪದ್ಧತಿಗಳನ್ನು ದರ್ಶನಗಳೆಂದು
ಕರೆದಿದ್ದಾರೆ. ಪಾಶ್ಚಿಮಾತ್ಯ ತತ್ವ ಸಿದ್ಧಾಂತಗಳಂತೆ, ಸಂಪೂರ್ಣವಾಗಿ ತರ್ಕ ಮತ್ತು ಕಾರಣಗಳ ಮೇಲೆ
ಅವಲಂಭಿಸದೆ ಭಾರತೀಯ ತತ್ವಶಾಸ್ತ್ರವು ಸತ್ಯದ 'ದರ್ಶನ' ಅಥವಾ 'ನೋಟ' ಅಥವಾ 'ಅನುಭವ'ವನ್ನು ಅತೀಂದ್ರಿಯ
ಸ್ಥಿತಿಯಲ್ಲಿ ಕಂಡುಕೊಳ್ಳುವುದರ ಮೇಲೆ ನಿಂತಿದೆ. ಆದ್ದರಿಂದ 'ದರ್ಶನ' ಪದವು ಹೆಚ್ಚು ಸೂಕ್ತವೆನಿಸುತ್ತದೆ.
ಈ ದರ್ಶನಗಳನ್ನು ಎರಡು ಗುಂಪುಗಳಾಗಿ ವಿಂಗಡಿಸುತ್ತಾರೆ - ಆಸ್ತಿಕ ಮತ್ತು ನಾಸ್ತಿಕ. ಯಾವುವು ವೇದಗಳ
ಪ್ರಮಾಣಗಳ ಮೇಲೆ ಆಧಾರಿತವಾಗಿವೆಯೋ ಅವು ಆಸ್ತಿಕ ದರ್ಶನಗಳು ಇದಕ್ಕೆ ಹೊರತಾದವುಗಳು ನಾಸ್ತಿಕ ದರ್ಶನಗಳು.
ಚಾರ್ವಾಕ (ಪ್ರಾಪಂಚಿಕ ಭೋಗವನ್ನು ಪ್ರತಿಪಾದಿಸುವ ದರ್ಶನ), ಜೈನ ಮತ್ತು ಬೌದ್ಧ ಸಿದ್ಧಾಂತಗಳು ನಾಸ್ತಿಕ
ದರ್ಶನಗಳ ವರ್ಗಕ್ಕೆ ಸೇರಿದರೆ; ಷಡ್ದರ್ಶನಗಳು ಅಥವಾ ಆರು ಹಿಂದೂ ಸಾಂಪ್ರದಾಯಿಕ ಸಿದ್ಧಾಂತಗಳು ಆಸ್ತಿಕ
ದರ್ಶನಗಳ ವರ್ಗಕ್ಕೆ ಸೇರುತ್ತವೆ.
ಆರು ಸಾಂಪ್ರದಾಯಿಕ ಪದ್ಧತಿಗಳೆಂದರೆ: ನ್ಯಾಯ, ವೈಶೇಷಿಕ,
ಸಾಂಖ್ಯ, ಯೋಗ, ಮೀಮಾಂಸ ಮತ್ತು ವೇದಾಂತ. ಸಾಮಾನ್ಯವಾಗಿ ಈ ಪದ್ಧತಿಗಳು ನಾಲ್ಕು ವಿಷಯಗಳ ಬಗ್ಗೆ ಚರ್ಚಿಸುತ್ತವೆ,
ಅವೆಂದರೆ - ಬ್ರಹ್ಮನ್/ಈಶ್ವರ ಅಥವಾ ಭಗವಂತನ ಇರುವಿಕೆ ಮತ್ತು ಅವನ ಸ್ವಭಾವ; ಜೀವಿಗಳು ಅಥವಾ ಪ್ರತ್ಯೇಕ
ಆತ್ಮಗಳ ಸ್ವಭಾವ; ಜಗತ್ತಿನ ಅಥವಾ ಪ್ರಪಂಚದ ಸೃಷ್ಟಿ
; ಮೋಕ್ಷ ಅಥವಾ ಮುಕ್ತಿ ಹಾಗೂ ಅದನ್ನು ಪಡೆಯಲು ಅನುಸರಿಸುವ ವಿವಿಧ ಮಾರ್ಗಗಳು/ನಿಯಮಗಳು.
ಸಾಂಖ್ಯ
ಮತ್ತು ಯೋಗ ದರ್ಶನಗಳು:
ಸಾಂಖ್ಯ ಶಬ್ದವು 'ಸಂಖ್ಯಾ' ಎಂದರೆ ಜ್ಞಾನ ಅಥವಾ
ಅರಿವು ಎನ್ನುವ ಧಾತುವಿನಿಂದ ವ್ಯುತ್ಪತ್ತಿಯಾಗಿದೆ. ಏಕೆಂದರೆ, ಸಾಂಖ್ಯ ಪದ್ಧತಿಯ ದಾರ್ಶನಿಕರಾದ ಕಪಿಲ
ಮುನಿಗಳು "ಜ್ಞಾನವೊಂದೇ ಮೋಕ್ಷ ಅಥವಾ ಕೈವಲ್ಯ ಪಡೆಯಲು ಏಕೈಕ ಅಥವಾ ಮೂಲ ಸಾಧನ" ಎಂದು
ಪ್ರತಿಪಾದಿಸಿದ್ದರಿಂದ ಈ ಪದ್ಧತಿಯನ್ನು 'ಸಾಂಖ್ಯ ದರ್ಶನ'ವೆಂದು ಪ್ರಚುರಪಡಿಸಲಾಗಿದೆ. ಸಾಂಖ್ಯ ಎನ್ನುವುದು
ಸಂಖ್ಯೆಯೆನ್ನುವ ಅರ್ಥವನ್ನೂ ಕೊಡುತ್ತದೆ. ಈ ದರ್ಶನವು ಮೂಲ ವಿಶ್ವದ ತತ್ವಗಳು ೨೪+೧
(೨೪= ಪ್ರಕೃತಿ ಮತ್ತದರಿಂದ ಹೊಮ್ಮಿದ ವಿಶ್ವದ
ತತ್ವಗಳು ಮತ್ತು ೧=ಪುರುಷ) ಎನ್ನುವ ಸಂಖ್ಯೆಯನ್ನು ನಿರ್ಧಿಷ್ಠ ಪಡಿಸುವುದರಿಂದ,
ಈ ದರ್ಶನವು ತನ್ನಷ್ಟಕ್ಕೇ ಸಾಂಖ್ಯ ಪದ್ಧತಿಯೆನ್ನುವ ಅನ್ವರ್ಥ ನಾಮವನ್ನು ಪಡೆದಿರಬಹುದು.
ಸಾಂಖ್ಯ ಪದ್ಧತಿಯು 'ಪುರುಷ'(ಪ್ರತ್ಯೇಕ ಆತ್ಮ)
ಮತ್ತು 'ಪ್ರಧಾನ' ಅಥವಾ 'ಪ್ರಕೃತಿ' ಇವುಗಳನ್ನು ಮಾತ್ರವೇ ಮೂಲ ವಾಸ್ತವತೆಗಳೆಂದು ನಂಬುವುದರಿಂದ ಅವು
'ಈಶ್ವರ' ಅಥವಾ 'ಭಗವಂತ'ನನ್ನು ಒಪ್ಪಿಕೊಳ್ಳುವುದಿಲ್ಲ. ಆದ್ದರಿಂದ ಇದನ್ನು ಕೆಲವೊಮ್ಮೆ 'ನಿರೀಶ್ವರ
ಸಾಂಖ್ಯ' (ಈಶ್ವರ ರಹಿತ ಸಾಂಖ್ಯ)ವೆಂದು ಕರೆದಿದ್ದಾರೆ. ಯೋಗ ದರ್ಶನವು ಸಾಂಖ್ಯದ ಎಲ್ಲಾ ತತ್ವಗಳೊಂದಿಗೆ
ಈಶ್ವರ ಅಥವಾ ಭಗವಂತನನ್ನೂ ಒಪ್ಪಿಕೊಳ್ಳುವುದರಿಂದ ಅದು 'ಸೇಶ್ವರ-ಸಾಂಖ್ಯ' (ಈಶ್ವರ ಸಹಿತ ಸಾಂಖ್ಯ)ವೆಂದು
ಪ್ರಾಚುರ್ಯ ಪಡೆದಿದೆ.
ಸಾಂಖ್ಯ ಪದ್ಧತಿಯಲ್ಲಿ ತತ್ವಜ್ಞಾನ ಅಥವಾ ಸತ್ಯದ
ಗುಣ ಮತ್ತು ಸ್ವಭಾವಗಳ ಬಗೆಗಿನ ಅನ್ವೇಷಣೆಗೆ ಹೆಚ್ಚು ಒತ್ತು ಕೊಡಲಾಗಿದೆ. ಆದರೆ ಯೋಗ ಪದ್ಧತಿಯು 'ಸಾಧನೆ'
ಅಥವಾ 'ಆಧ್ಯಾತ್ಮಿಕ ನಿಯಮ'ಗಳಿಗೆ ಹೆಚ್ಚು ಒತ್ತು ಕೊಡುತ್ತದೆ. ಆದ್ದರಿಂದ ಪತಂಜಲಿಯ 'ಯೋಗಸೂತ್ರಾ'
ಅಥವಾ ಯೋಗ ಪದ್ಧತಿಯ ಮೂಲ ಗ್ರಂಥವು, 'ಜಿಜ್ಞಾಸಾ' ಅಥವಾ 'ಮೀಮಾಂಸಾ' ಎನ್ನುವ ಅನ್ವೇಷಣಾತ್ಮಕ ಪದವನ್ನು
ಬಳಸದೆ; "ಅಥ ಯೋಗಾನುಶಾಸನಮ್" (ಈಗ ಯೋಗದ ಅನುಶಾಸನವು=ನಿಯಮಗಳ ಪಾಠವು, ಪ್ರಾರಂಭವಾಗಿದೆ)
ಎಂದಿದೆ.
ಯೋಗ
ಎಂದರೆ ಏನು?
ಯೋಗ ಎನ್ನುವುದನ್ನು ಎರಡು ಶಬ್ದ ಧಾತುಗಳಿಂದ ನಿಷ್ಪತ್ತಿಗೊಳಿಸಬಹುದು.
'ಯುಜ್' (ಒಂದುಗೂಡಿಸು/ಜೋಡಿಸು) ಅಥವಾ 'ಯುಜ್' (ಧ್ಯಾನಿಸು). ಆದ್ದರಿಂದ ಯಾವುದು ಜೀವಿ ಅಥವಾ ಆತ್ಮನನ್ನು
ಈಶ್ವರನ ಮೇಲೆ ಧ್ಯಾನಿಸಲು ಸಹಾಯ ಮಾಡಿ ಅವನಲ್ಲಿ ಒಂದುಗೂಡಿಸುತ್ತದೆಯೋ ಅದನ್ನೇ 'ಯೋಗ'ವೆನ್ನುವುದು.
ಯೋಗವೆನ್ನುವ ಶಬ್ದವನ್ನು ಹಲವಾರು ಅರ್ಥಗಳಲ್ಲಿ
ಋಗ್ವೇದ (೫.೮೧.೧), ಕೆಲವೊಂದು ಉಪನಿಷತ್ತುಗಳು - ಕಥಾ (೬.೧೦,೧೧; ೨.೧೨) ಮತ್ತು ಶ್ವೇತಾಶ್ವತರ (೧.೩).; ಇವುಗಳಲ್ಲಿ
ಬಳಸಿರುವುದನ್ನು ಕಾಣಬಹುದು. ಭಗವದ್ಗೀತೆ(೬.೧೧,೧೩,೨೦ ಮತ್ತು ೩೫)ಯಲ್ಲಿ
ಕಂಡುಬರುವ ಅನೇಕ ವಿಷಯಗಳು ಯೋಗಸೂತ್ರಾ(೨.೪೬;೧.೨;೧.೧೨)ದಲ್ಲಿ ಪ್ರಸ್ತಾವಿಸಲ್ಪಟ್ಟಿರುವ
ಹಲವಾರು ಉಪದೇಶಗಳಿಂದ ಪ್ರಭಾವಿತವಾಗಿರುವಂತೆ ಕಾಣುತ್ತವೆ. ಆದ್ದರಿಂದ ಯೋಗದ ಬಗ್ಗೆ ಹಿರಣ್ಯಗರ್ಭನು
ರಚಿಸಿದನೆಂದು ಹೇಳಲ್ಪಡುವ ಪುರಾತನವಾದ ಕೃತಿಯಿರಬೇಕು; ಮತ್ತು ಆ ಮೂಲ ಕೃತಿಯು ಇತರ ಕೃತಿಗಳ ರಚನೆಯ
ಮೇಲೆ ತನ್ನ ಪ್ರಭಾವವನ್ನು ಬೀರಿರಬಹುದು.
ಕೃತಿಕಾರ
ಮತ್ತು ಅವನ ಕಾಲ
ಸ್ವಯಂ ಭಗವಂತನ ಸ್ವರೂಪನಾದ ಹಿರಣ್ಯಗರ್ಭನಿಂದ ಯೋಗ
ವಿಜ್ಞಾನವು ಆವಿರ್ಭವಿಸಿತೆಂದು ಹಿಂದೂ ಸಂಪ್ರದಾಯವು ಆರೋಪಿಸುತ್ತದೆ. ಕೆಲವೊಮ್ಮೆ ಋಷಿಗಳಾದ ಸನತ್ಕುಮಾರ ಮತ್ತು ಜೈಗಿಶ್ವ್ಯ ಇವರೀರ್ವರಿಂದ
ಯೋಗಶಾಸ್ತ್ರವು ರಚಿಸಲ್ಪಟ್ಟಿತು ಎಂದು ತಿಳಿಸುತ್ತದೆ. ಆದರೆ ಇವರಿಂದ ರಚಿತವಾಗಿರಬಹುದಾದ ಕೃತಿಗಳು ಇದುವರೆಗೆ ಲಭ್ಯವಾಗಿಲ್ಲ.
ನಮಗೆ ಈಗ ದೊರೆತಿರುವ ಕೃತಿಗಳಲ್ಲಿ ಪತಂಜಲಿಯ ಯೋಗಸೂತ್ರವೇ
ಬಹು ಪುರಾತನವಾದದ್ದೆಂದು ತೋರುತ್ತದೆ. ಪಾಣಿನಿಯ ಸೂತ್ರಗಳಿಗೆ ಭಾಷ್ಯ ಅಥವಾ ವ್ಯಾಖ್ಯಾನವನ್ನು ಬರೆದ
ಪತಂಜಲಿ ಹಾಗೂ ಯೋಗಸೂತ್ರವನ್ನು ರಚಿಸಿದ ಪತಂಜಲಿಯು ಒಬ್ಬರೇ ಎನ್ನುವುದು ಇದುವರೆಗೂ ನಿರ್ವಿವಾದಿತವಾಗಿ
ನಿರೂಪಿತವಾಗಿಲ್ಲ. ಆಯುರ್ವೇದದ ಬಗ್ಗೆಯೂ ಪತಂಜಲಿಯು ರಚಿಸಿರುವನೆಂದು ಹೇಳಲಾದ ಕೃತಿಯೂ ಕೂಡ ಇದುವರೆಗೆ
ನಮಗೆ ಲಭ್ಯವಾಗಿಲ್ಲ. ಈ ಪತಂಜಲಿಯು ಸುಮಾರು ಕ್ರಿ.ಪೂ. ೨೦೦ರಿಂದ ಕ್ರಿ.ಶ. ೩೦೦ರ
ಮಧ್ಯ ಕಾಲದಲ್ಲಿ ಜೀವಿಸಿರಬಹುದೆಂದು ಪಂಡಿತರು ಅಭಿಪ್ರಾಯ ಪಡುತ್ತಾರೆ.
ಪತಂಜಲಿಯ
ಕೃತಿ
ಷಡ್ದರ್ಶನಗಳನ್ನು ವಿಶದಪಡಿಸುವ ಇತರೇ ಕೃತಿಗಳಂತೆ
ಪತಂಜಲಿಯ ಗ್ರಂಥವೂ ಕೂಡ ಸೂತ್ರರೂಪದಲ್ಲಿದೆ. ಸೂತ್ರವೆಂದರೆ ಚಿಕ್ಕದಾದ ನೆನಪಿನಲ್ಲಿಡಬೇಕಾದ ನುಡಿಗಟ್ಟು/ವಾಕ್ಯ;
ಸೂತ್ರವು ಮಿತ ಅಕ್ಷರಗಳನ್ನು ಹೊಂದಿದ್ದು ಮಹತ್ತರವಾದ ಜ್ಞಾನವನ್ನು ಹೊರಹೊಮ್ಮಿಸುತ್ತದೆ.
ಯೋಗಸೂತ್ರವು ೧೯೫ ಸೂತ್ರಗಳನ್ನೊಳಗೊಂಡ
ನಾಲ್ಕು ಪಾದಗಳು ಅಥವಾ ಅಧ್ಯಾಯಗಳನ್ನು ಹೊಂದಿದೆ. ಅವೆಂದರೆ: ಸಮಾಧಿ ಪಾದ (೫೧ ಸೂತ್ರಗಳು); ಸಾಧನಪಾದ
(೫೫ ಸೂತ್ರಗಳು); ವಿಭೂತಿಪಾದ (೫೫ ಸೂತ್ರಗಳು) ಮತ್ತು
ಕೈವಲ್ಯಪಾದ (೩೪ಸೂತ್ರಗಳು).
ಯಾವುದೇ ಸೂತ್ರ ಕೃತಿಯು ತನ್ನ ಶೈಲಿಯಿಂದಾಗಿ ಅಸ್ಪಷ್ಟವಲ್ಲದಿದ್ದರೂ
ದ್ವಂದ್ವತೆಯಿಂದ ಕೂಡಿರುತ್ತದೆ; ಹಾಗಾಗಿ ಅದನ್ನು ಅರ್ಥ ಮಾಡಿಸಲು ಅದಕ್ಕೆ ವ್ಯಾಖ್ಯಾನ ಅಥವಾ ಭಾಷ್ಯ
ಬಹು ಆವಶ್ಯಕ. ಸುದೈವವಶಾತ್ ಯೋಗಸೂತ್ರಗಳು ಹಲವಾರು ಪ್ರಭುದ್ಧರ ಗಮನ ಸೆಳೆದದ್ದರಿಂದ ಅವರು ವಿದ್ವತ್ಪೂರ್ಣ
ಟಿಪ್ಪಣಿ ಹಾಗೂ ಉಪಟಿಪ್ಪಣಿ(ಭಾಷ್ಯ, ಟೀಕಾ, ವಾರ್ತಿಕ ಮೊದಲಾದವುಗಳು)ಗಳನ್ನು ರಚಿಸಿ ಯೋಗ ಸಾಹಿತ್ಯವನ್ನು
ಶ್ರೀಮಂತಗೊಳಿಸಿದ್ದಾರೆ.
ವ್ಯಾಸ ರಚಿತ 'ಭಾಷ್ಯ'ವು ಯೋಗಸೂತ್ರಕ್ಕೆ ಬರೆದ
ಮೂಲ ಟಿಪ್ಪಣಿಯೆಂದು ಒಪ್ಪಿಕೊಳ್ಳುವುದಲ್ಲದೆ ಅದನ್ನು ಗೌರವಾದರಗಳಿಂದ ವ್ಯಾಸರ ನಂತರದ ಎಲ್ಲಾ ಕೃತಿಕಾರರು
ಕಂಡಿದ್ದಾರೆ. ಈ ವ್ಯಾಸನು ಬಹುಶಃ ನಮ್ಮ ಸಾಂಪ್ರದಾಯಿಕ ವ್ಯಾಸನಿಗಿಂತ ಬೇರೆಯವನು ಎಂದು ತಿಳಿಯಲಾಗಿದೆ
ಮತ್ತು ಈತನ ಜೀವಿತ ಕಾಲವು ಕ್ರಿ.ಶ. ೪೦೦ ಎಂದು ಭಾವಿಸಲಾಗಿದೆ.
ಈ ಕೆಳಗಿನವು ವ್ಯಾಸ ಭಾಷ್ಯಕ್ಕೆ ಬರೆದಿರುವ ಟೀಕೆ
ಹಾಗೂ ಟಿಪ್ಪಣಿಗಳು:
ವಾಚಸ್ಪತಿ
ಮಿಶ್ರ(ಕ್ರಿ.ಶ. ೮೫೦) ಬರೆದ - 'ತತ್ವವೈಶಾರದಿ'; ವಿಜ್ಞಾನಭಿಕ್ಷು(ಕ್ರಿ.ಶ.
೧೬ನೇ ಶತಮಾನ)ವಿನ - 'ಯೋಗವಾರ್ತಿಕ'; ಹರಿಹರಾನಂದ ಅರಣ್ಯ (೧೯ನೇ ಶತಮಾನ) ವಿರಚಿತ 'ಭಾಸ್ವತೀ'.
ಶಂಕರ(ಕ್ರಿ.ಶ. ೭೮೮-೮೨೦)ರು ರಚಿಸಿದರೆಂದು ಹೇಳಲಾದ ಯೋಗಭಾಷ್ಯವಿವರಣ
ಎನ್ನುವ ಕೃತಿಯೂ ಲಭ್ಯವಿದೆ. ಆದರೆ ಈ ಕೃತಿಯು ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ ಆದಿಶಂಕರರಿಂದ
ರಚಿಸಲ್ಪಟ್ಟಿತೋ ಇಲ್ಲವೋ ಎನ್ನುವ ವಿಷಯದಲ್ಲಿ ವಿದ್ವಾಂಸರಲ್ಲಿ ಗೊಂದಲವಿದೆ. ಬರವಣಿಗೆಯ ಶೈಲಿ ಮತ್ತು
ಕೃತಿಯ ನಿರೂಪಣೆ, ಮತ್ತು ಆದಿ ಶಂಕರರು ಮಹಾನ್ ಯೋಗಿಗಳಾಗಿದ್ದರು ಎನ್ನುವುದು ದೃಢಪಟ್ಟ ವಿಷಯವಾದ್ದರಿಂದ,
ಈ ಕೃತಿಯು ಅವರದೇ ಆಗಿರಬಹುದು ಎನ್ನುವುದಕ್ಕೆ ಸ್ವಲ್ಪ
ಪುಷ್ಟಿ ದೊರೆಯುತ್ತದೆ.
ಇವಲ್ಲದೆ ಯೋಗಸೂತ್ರಕ್ಕೆ ನೇರವಾಗಿ ಬರೆದ ಕನಿಷ್ಠ
ಆರು ಭಾಷ್ಯಗಳು ಲಭ್ಯವಿವೆ. ಅವೆಂದರೆ: ಭೋಜದೇವ(೧೧ನೇ ಶತಮಾನ) ಬರೆದ 'ರಾಜಮಾರ್ತಾಂಡಾವೃತ್ತಿ';
ಭಾವಗಣೇಶನು ರಚಿಸಿದ 'ಯೋಗಸೂತ್ರಪದೀಪಿಕಾ'; ನಾಗೋಜಿ ಭಟ್ಟನ 'ಯೋಗಸೂತ್ರಾವೃತ್ತಿ'; ರಾಮಾನಂದ ಯತಿಗಳ
'ಯೋಗಮಣಿಪ್ರಭಾ', ನಾರಾಯಣ ತೀರ್ಥ ವಿರಚಿತ 'ಯೋಗಸಿದ್ಧಾಂತಚಂದ್ರಿಕಾ'; ಮತ್ತು ಸದಾಶಿವ ಬ್ರಹ್ಮೇಂದ್ರ
(೧೮ನೇ ಶತಮಾನ) ವಿರಚಿತ, 'ಯೋಗಸುಧಾಕರ'.
ಯೋಗಸೂತ್ರಗಳ
ಸಿದ್ಧಾಂತ
ಪತಂಜಲಿ ವಿರಚಿತ ಯೋಗಸೂತ್ರವು ಮೂಲವಾಗಿ ಅಧ್ಯಾತ್ಮಿಕ
ಸಾಧನೆ ಮತ್ತು ನಿಯಮಗಳ ಬಗ್ಗೆ ಪ್ರತಿಪಾದಿಸಿದರೂ ಕೂಡ ಅದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕಾದರೆ
ಅದರ 'ಸಾಂಖ್ಯ'ದ ಹಿನ್ನಲೆಯ ಮೂಲವನ್ನು ಸ್ವಲ್ಪ ತಿಳಿದುಕೊಂಡಿರುವುದು ಒಳಿತು.
ಯೋಗದರ್ಶನವು ಮೂಲತಃ ಮೂರು ರೀತಿಯ ವಾಸ್ತವತೆಗಳನ್ನು
ಒಪ್ಪಿಕೊಳ್ಳುತ್ತದೆ. ಅವೆಂದರೆ, ಈಶ್ವರ, ಪುರುಷರು ಮತ್ತು ಪ್ರಧಾನ ಅಥವಾ ಪ್ರಕೃತಿ. ಪುರುಷರು ಎಂದರೆ
ಪ್ರತ್ಯೇಕ ಜೀವಿಗಳು. ಅವುಗಳು ಚಿದ್ರೂಪರು ಅಥವಾ ಪ್ರಜ್ಞಾ ಸ್ವರೂಪವನ್ನುಳ್ಳವರು ಮತ್ತು ಇವುಗಳು ಅಸಂಖ್ಯಾತವಾಗಿವೆ.
ಈಶ್ವರನನ್ನು 'ಪುರುಷವಿಶೇಷ' - ವಿಶೇಷ ಪುರುಷ ಅಥವಾ ಅದ್ವಿತೀಯ ಪುರುಷ ಎಂದು ಕರೆಯಲಾಗಿದೆ ಮತ್ತವನ
ಇರುವಿಕೆಯನ್ನು ಶಾಸ್ತ್ರಮುಖೇನ ಮಾತ್ರವೇ ಕಂಡುಕೊಳ್ಳಬಹುದು. ಅವನು ಸರ್ವಜ್ಞನು ಅಥವಾ ಎಲ್ಲದರ ಬಗ್ಗೆಯೂ
ಜ್ಞಾನವನ್ನು ಹೊಂದಿದವನು. ಪ್ರಕೃತಿಯ ಶೃಂಖಲೆಗಳಿಂದ ಬಂಧನಕ್ಕೊಳಗಾಗದೇ ಇರುವ ಅವನು ನಿತ್ಯಮುಕ್ತನು.
ಅವನೇ ಆದಿಗುರು - ಪ್ರಥಮ ಶಿಕ್ಷಕ. ಪ್ರಣವ ಅಥವಾ ಓಂ ಎನ್ನುವುದು ಅವನ ಪ್ರತೀಕ. ಅವನ ಇಚ್ಛೆಯಿಂದ ಪುರುಷರ
ಕರ್ಮಕ್ಕನುಗುಣವಾಗಿ ಮೂರುಗುಣಗಳಾದ - ಸತ್ವ, ರಜೋ ಹಾಗು ತಮೋ ಗುಣಗಳಿಂದೊಡಗೂಡಿದ ಪ್ರಕೃತಿಯ ಸಮಾಗಮದಿಂದ
ಸೃಷ್ಠಿಯ ಉಗಮವಾಗುತ್ತದೆ. ಪ್ರಕೃತಿಯ ಉತ್ಪನ್ನಗಳಾದ, ಮಹತ್ (ವಿಶ್ವದ ಬುದ್ಧಿ), ಅಹಂಕಾರ(ನಾನು ಎನ್ನುವ
ಭಾವನೆ), ಮನಸ್(ವಿಶ್ವದ ಮನಸ್ಸು), ತನ್ಮಾತ್ರೆಗಳು(ಸೂಕ್ಷ್ಮ ಧಾತುಗಳು) ಮೊದಲಾದವುಗಳು ಸಾಂಖ್ಯ ಪದ್ಧತಿಯಲ್ಲಿ
ಪ್ರತಿಪಾದಿಸಿರುವಂತೆ ರೂಪುಗೊಳ್ಳುತ್ತವೆ.
ಪುರುಷನು ಅದು ಹೇಗೋ ಅವಿದ್ಯಾ ಅಥವಾ ಅಜ್ಞಾನದ ಪ್ರಭಾವಕ್ಕೊಳಗಾಗಿ
ತನ್ನ ನಿಜ ಸ್ವರೂಪವಾದ ಚಿದ್ರೂಪವನ್ನು ಮರೆತು; ಪ್ರಕೃತಿಯ ವಿವಿಧ ರೂಪಾಂತರಗಳೊಳಗೆ ಸಿಲುಕಿ ಹುಟ್ಟು,
ಸಾವು ಮತ್ತವುಗಳ ಸ್ಥಿತ್ಯಂತರಗಳನ್ನು ಅನುಭವಿಸುತ್ತಾನೆ. ಆದರೆ ಜೀವಿಯು ಸಾಧನೆಗಳನ್ನು ಅಂದರೆ ಅಷ್ಟಾಂಗ
ಅಥವಾ ಯೋಗದ ಎಂಟು ಸೋಪಾನಗಳನ್ನು ಕೈಗೊಂಡಾಗ ಅವನು ತನ್ನ ಸ್ವರೂಪವನ್ನು ಅರಿಯುತ್ತಾನೆ ಮತ್ತು ತಕ್ಷಣವೇ
ಸಂಸಾರದ ಹುಟ್ಟು ಸಾವುಗಳ ಸ್ಥಿತ್ಯಂತರಗಳಿಂದ ಬಿಡುಗಡೆ ಹೊಂದುತ್ತಾನೆ. ಆತ್ಮನು ತನ್ನೊಳಗೆ ಐಕ್ಯಗೊಂಡು,
ಸಂಸಾರದಿಂದ ಬಿಡುಗಡೆ ಹೊಂದುವುದನ್ನೇ ಕೈವಲ್ಯವೆನ್ನುತ್ತಾರೆ.
"ಚಿತ್ತವೃತ್ತಿಗಳನಿರೋಧ"ವಾಗಿ
ಯೋಗ
ಪತಂಜಲಿಯು "ಚಿತ್ತವೃತ್ತಿಗಳನಿರೋಧ"ವೇ
'ಯೋಗ'ವೆಂದು ಕರೆದಿದ್ದಾನೆ (ಯೋಗಸೂತ್ರ ೧.೨). ಚಿತ್ತ ಅಥವಾ ಮನಸ್ಸಿನ ಎಲ್ಲಾ
ವೃತ್ತಿ ಅಥವಾ ಮಾರ್ಪಾಟುಗಳನ್ನು ನಿಯಂತ್ರಣ ಮತ್ತು
ನಿಗ್ರಹ(ನಿರೋಧ)ದಲ್ಲಿಟ್ಟರೆ ಪುರುಷ ಅಥವಾ ಆತ್ಮನ ನೈಜ ಸ್ವರೂಪವು ಅನಾವರಣಗೊಳ್ಳುತ್ತದೆ. ಚಿತ್ತವು
ಮನಸ್ಸಿನ ಪದಾರ್ಥವಾಗಿದ್ದು ಅದನ್ನು ಅಂತಃಕರಣ (ಒಳಗಿನ ಸಾಧನ), ಮನಸ್ (ಮನಸ್ಸು) ಅಥವಾ ಬುದ್ಧಿ ಮೊದಲಾದ
ಶಬ್ದಗಳಿಂದ ಕರೆಯಲಾಗಿದೆ. ಜ್ಞಾನೇಂದ್ರಿಯಗಳಾದ ಕಣ್ಣು, ಕಿವಿ ಮೊದಲಾದವುಗಳ ಮುಖಾಂತರ ವಿಷಯ ವಸ್ತುಗಳು
ಮನಸ್ಸಿನ ಒಳಗೆ ಉಂಟು ಮಾಡುವ ಆಲೋಚನಾ ತರಂಗಗಳು, ಭಾವನೆಗಳು ಮತ್ತು ಉದ್ವೇಗಗಳನ್ನೇ ಚಿತ್ತವೃತ್ತಿಗಳೆಂದು
ಕರೆದಿದ್ದಾರೆ. ಈ ಚಿತ್ತವೃತ್ತಿಗಳು ಅಸಂಖ್ಯಾತವೆಂದು ಕಂಡುಬಂದರೂ ಕೂಡ ಅವುಗಳನ್ನು ಐದು ವರ್ಗಗಳಾಗಿ
ವಿಂಗಡಿಸಬಹುದು. ಅವೆಂದರೆ, 'ಪ್ರಮಾಣ'(ನೈಜ ಜ್ಞಾನದ ಮೂಲಗಳು), 'ವಿಪರ್ಯಯ'(ಅಸಂಬದ್ಧ ಜ್ಞಾನ), 'ವಿಕಲ್ಪ'(ಒಂದು
ಶಬ್ದವನ್ನು ಕೇಳಿದಾಗ ಮನಸ್ಸಿನಲ್ಲಿ ಮೂಡುವ ಚಿತ್ರ), 'ನಿದ್ರಾ'(ನಿದ್ದೆ) ಮತ್ತು 'ಸ್ಮೃತಿ'(ನೆನಪು).
'ಪ್ರಮಾಣ'ವೆಂದರೆ ಸರಿಯಾದ ಜ್ಞಾನವನ್ನು ಹೊಂದಲು
ಇರುವ ಮಾಧ್ಯಮ. ಪ್ರಮಾಣಗಳು ಮೂರು - ಪ್ರತ್ಯಕ್ಷ (ನೇರವಾದ ಅನುಭವ), ಅನುಮಾನ (ನಿಷ್ಕರ್ಷೆ ಅಥವಾ ಕ್ರಮಬದ್ಧ
ಜ್ಞಾನ) ಮತ್ತು ಆಗಮ (ನಂಬಲರ್ಹ ವ್ಯಕ್ತಿಯ ಮಾತು ಹಾಗೂ ಶ್ರುತಿಗಳ ವಾಕ್ಯಗಳು). 'ವಿಪರ್ಯಯ'ವೆಂದರೆ
ಅಸಂಬದ್ಧ (ಅಸ್ಪಷ್ಟ)ವಾದ ಜ್ಞಾನ - ಹಗ್ಗವನ್ನು ಹಾವೆಂದು ಅರೆಕತ್ತಲಿನಲ್ಲಿ ತಿಳಿಯುವಂತೆ. 'ವಿಕಲ್ಪ'ವೆಂದರೆ
ಒಂದು ಶಬ್ದ ಅಥವಾ ಶಬ್ದಗಳನ್ನು ಕೇಳಿದೊಡನೆ ಮನಸ್ಸಿನಲ್ಲಿ ಮೂಢುವ ಚಿತ್ರ; ಉದಾಹರಣೆಗೆ "ರಾಹುವಿನ
ತಲೆ" (ಕುಗ್ರಹವಾದ ರಾಹುವಿಗೆ ತಲೆಮಾತ್ರವಿದ್ದು ದೇಹದ ಉಳಿದ ಭಾಗವು ಇರುವುದಿಲ್ಲ). 'ನಿದ್ರಾ'
ಅಥವಾ ನಿದ್ದೆಯ ಸ್ಥಿತಿಯೆಂದರೆ ತಮಸ್ಸಿನ ಆಧಿಪತ್ಯದಿಂದ ಮನಸ್ಸಿನಲ್ಲಿ ಏಳುವ ವಿಕಾರಗಳು. 'ಸ್ಮೃತಿ'ಯೆಂದರೆ
ಹಿಂದಿನ ಅನುಭವಗಳ ನೆನಪು.
ಚಿತ್ತವೃತ್ತಿಗಳು ಪುರುಷನಿಗೆ ಅವಿದ್ಯೆ(ಅಜ್ಞಾನ),
ಅಸ್ಮಿತಾ(ತಾನೆ ಎನ್ನುವ ಅಹಂಭಾವ) ಮೊದಲಾದವುಗಳಿಂದ 'ಕ್ಲೇಷ' ಅಥವಾ ದುಃಖವನ್ನು ಉಂಟು ಮಾಡಿದಾಗ ಅವನ್ನು
'ಕ್ಲಿಷ್ಟ'ವೆನ್ನುತ್ತಾರೆ. ಯಾವಾಗ ಚಿತ್ತವೃತ್ತಿಗಳು ಪುರುಷನು ಅವುಗಳಿಂದ ಬಿಡುಗಡೆಹೊಂದಲು ಸಹಾಯ
ಮಾಡುತ್ತವೆಯೋ ಆಗ ಅವು 'ಅಕ್ಲಿಷ್ಟ'ವೆನಿಸುತ್ತವೆ.
ಚಿತ್ತ ಅಥವಾ ಮನಸ್ಸಿಗೆ ಐದು ಹಂತಗಳಿವೆ: ಕ್ಷಿಪ್ತ(ಚುರುಕು),
ಮೂಢ(ನಿರಾಸಕ್ತಿ), ವಿಕ್ಷಿಪ್ತ (ಚಂಚಲ ಅಥವಾ ಚದುರಿದ), ಏಕಾಗ್ರ (ತಲ್ಲೀನ) ಮತ್ತು ನಿರುದ್ಧ (ನಿರ್ಲಿಪ್ತ
ಅಥವಾ ನಿಗ್ರಹ). ಮೊದಲ ಮೂರು ಹಂತಗಳಲ್ಲಿ ಯೋಗವು ಸಾಧ್ಯವಿಲ್ಲ ಏಕೆಂದರೆ ಮನಸ್ಸು ಆಗ ರಜಸ್ಸು ಹಾಗು
ತಮಸ್ಸಿನ ಆಧೀನಕ್ಕೊಳಪಟ್ಟಿರುತ್ತದೆ. ಯಾವಾಗ ಸತ್ವದ ಆಧಿಪತ್ಯವು ಉಂಟಾಗುತ್ತದೋ ಅದು ಮನಸ್ಸಿನ ಮೇಲೆ
ಹತೋಟಿಯನ್ನು ಸಾಧಿಸಿ ಅದನ್ನು ಏಕಾಗ್ರತೆಯಿಂದ 'ಸಂಪ್ರಜ್ಞತ-ಸಮಾಧಿ'ಯ(ನಿಖರವಾದ ಧ್ಯಾನದಿಂದ ಲಕ್ಷದ
ಬಗ್ಗೆ ಸ್ಪಷ್ಟ ತಿಳುವಳಿಕೆ ಉಂಟಾಗುವ ಸ್ಥಿತಿ) ಕಡೆಗೆ ಕೊಂಡೊಯ್ಯುತ್ತದೆ. ಕಡೆಯದಾದ ನಿರುದ್ಧ ಸ್ಥಿತಿಯಲ್ಲಿ
ಯಾವುದೇ ರೀತಿಯ ಚಿತ್ತವೃತ್ತಿಗಳು ಉತ್ಪನ್ನವಾಗದೆ ಮನಸ್ಸು 'ಅಸಂಪ್ರಜ್ಞ-ಸಮಾಧಿ'ಯ ಸ್ಥಿತಿಗೆ ಕೊಂಡೊಯ್ಯಲ್ಪಡುತ್ತದೆ.
ಈ ಸ್ಥಿತಿಯಲ್ಲಿ ಯಾವುದೇ 'ಲಕ್ಷ್ಯ'ದ ಬಗ್ಗೆ ಪುರುಷನಿಗೆ ಪರಿವೆಯಿರುವುದಿಲ್ಲ ಆದರೆ ಅವನು ತನ್ನೊಳಗೆ
ಅಂದರೆ ಆತ್ಮದ ಸ್ವರೂಪದೊಂದಿಗೆ ಸಂಪೂರ್ಣ ತನ್ಮಯನಾಗುತ್ತಾನೆ. ಆವಾಗ ಪುರುಷನು ಮುಕ್ತನಾಗುತ್ತಾನೆ;
ಅಂದರೆ ಬಂಧನದಿಂದ ಬಿಡುಗಡೆಗೊಂಡ ಆತ್ಮನಾಗುತ್ತಾನೆ - ಅಂದರೆ ಪ್ರಕೃತಿಯ ಎಲ್ಲಾ ಸಂಕಷ್ಟಗಳಿಂದ ಪಾರಾದವನಾಗಿರುತ್ತಾನೆ.
ಯೋಗಕ್ಕೆ
ಬರುವ ಪ್ರತಿರೋಧಗಳು
ಪತಂಜಲಿಯು ಯೋಗಕ್ಕೆ ಬರುವ ಅಡ್ಡಿಗಳನ್ನು 'ಅಂತರಾಯ'(ಮಧ್ಯದಲ್ಲಿ
ಬರುವವು)ಗಳೆಂದು ಕರೆಯುತ್ತಾನೆ ಮತ್ತು ಅವು ಒಂಭತ್ತು
ವಿಧವಾದವುಗಳು ಎಂದು ಪಟ್ಟಿ ಮಾಡುತ್ತಾನೆ (೧.೩೦). ಅವೆಂದರೆ, ವ್ಯಾಧಿ
(ರೋಗ/ಖಾಯಿಲೆ), ಸ್ಥ್ಯಾನ(ಅಯಿಷ್ಟತೆ/ನಿರಾಸಕ್ತಿ), ಸಂಶಯ (ಶಂಖೆ), ಪ್ರಮಾದ (ಅವಘಡ), ಆಲಸ್ಯ(ಸೋಮಾರಿತನ),
ಅವಿರತಿ (ವೈರಾಗ್ಯ ಹೀನತೆ/ಪ್ರಾಪಂಚಿಕ ವಸ್ತುಗಳಲ್ಲಿ ಆಸಕ್ತಿ), ಭ್ರಾಂತಿದರ್ಶನ (ತಪ್ಪು ತಿಳುವಳಿಕೆ/ಅನುಭವ),
ಅಲಬ್ಧಭೂಮಿಕತ್ವ(ಯೋಗದ ವಿವಿಧ ಹಂತಗಳನ್ನು ಮುಟ್ಟಲಾಗದೇ ಇರುವುದು) ಮತ್ತು ಅನವಸ್ಥಿತತ್ವ (ಯೋಗದ ಸ್ಥಿತಿಯಲ್ಲಿ
ನಿಲ್ಲಲಾಗದೇ ಇರುವುದು).
ಖಾಯಿಲೆಯನ್ನು ಸೂಕ್ತವಾದ ಚಿಕಿತ್ಸೆಯಿಂದ ಶಮನಗೊಳಿಸಬೇಕು.
ನಿರಾಸಕ್ತಿಯನ್ನು ಮನೋಬಲವನ್ನು ಗಟ್ಟಿಗೊಳಿಸಿಕೊಳ್ಳುವುದರ ಮೂಲಕ ನಿವಾರಿಸಿಕೊಳ್ಳಬೇಕು. ಸಂಶಯವನ್ನು
ಶ್ರುತಿಗಳ ಮತ್ತು ಗುರುಗಳ ಮೇಲೆ ನಂಬಿಕೆಯಿರಿಸಿ ಹೊಡೆದೋಡಿಸಬೇಕು. ನಿರಂತರ ಎಚ್ಚರಿಕೆಯಿಂದ ಪ್ರಮಾದಗಳು
ಸಂಭವಿಸದಂತೆ ನೋಡಿಕೊಳ್ಳಬೇಕು. ಆಲಸ್ಯತನ ಅಥವಾ ಸೋಮಾರಿತನವನ್ನು ನಿರಂತರ ಚಟುವಟಿಕೆಯಿಂದ ಗೆಲ್ಲಬೇಕು.
ಅವಿರತಿಯನ್ನು ವಿವೇಕ (ಒಳ್ಳೆಯದು ಮತ್ತು ಕೆಟ್ಟದ್ದರ ಬಗ್ಗೆ ವಿವೇಚನೆ) ಮತ್ತು ವೈರಾಗ್ಯ(ಪ್ರಾಪಂಚಿಕತೆಯನ್ನು
ತೊರೆಯುವುದು) ಇವುಗಳ ಮೂಲಕ ಶೂನ್ಯವಾಗಿಸಬೇಕು. ಕಡೆಯ ಮೂರು ಪ್ರತಿರೋಧಗಳಾದ ಭ್ರಾಂತಿದರ್ಶನ, ಅಲಬ್ಧಭೂಮಿಕತ್ವ
ಮತ್ತು ಅನವಸ್ಥಿತತ್ವಗಳನ್ನು ಯೋಗ್ಯ ಗುರುವಿನ ಮಾರ್ಗದರ್ಶನದಂತೆ ನಡೆದು ಇಲ್ಲವಾಗಿಸಿಕೊಳ್ಳಬೇಕು.
ಪತಂಜಲಿಯು ಮನಸ್ಸನ್ನು ವಿಚಲಿತಗೊಳಿಸುವ ಇನ್ನೂ
ಐದು ಅಂತರಾಯಗಳನ್ನು ಈ ಪಟ್ಟಿಗೆ ಸೇರಿಸುತ್ತಾನೆ. ಅವೆಂದರೆ: ದುಃಖ (ಯಾತನೆ/ನೋವು), ದೌರ್ಮನಸ್ಯ
(ಹತಾಶೆ/ಆಶಾಭಂಗ), ಅಂಗಮೆಜಯತ್ವ(ದೇಹದ ಅಂಗಗಳ/ಕೈಕಾಲುಗಳ ಅವಿಶ್ರಾಂತತೆ), ಶ್ವಾಸ ಮತ್ತು ಪ್ರಶ್ವಾಸ
(ಲಯಬದ್ಧವಾಗಿ ಉಸಿರನ್ನು ಬಿಡುವುದು ಮತ್ತು ತೆಗೆದುಕೊಳ್ಳುವುದಕ್ಕೆ
ಉಂಟಾಗುವ ತೊಂದರೆ). ಇವುಗಳನ್ನು ಕೂಡ ಸೂಕ್ತ ಕ್ರಮಗಳಿಂದ ನಿವಾರಿಸಿಕೊಳ್ಳಬೇಕು.
ಅನುಸರಿಸಬಹುದಾದ
ಕೆಲವು ಸೂಚನೆಗಳು
ಪತಂಜಲಿಯು ಯೋಗಾಸಕ್ತರಿಗೆ ಹಲವಾರು ಸಲಹೆ ಸೂಚನೆಗಳನ್ನು
ಕೊಡುತ್ತಾನೆ; ಇದರಿಂದ ಯೋಗ ಮಾರ್ಗದಲ್ಲಿರುವ ಅಂತರಾಯಗಳನ್ನು ಹೋಗಲಾಡಿಸಿಕೊಂಡು ಹೆಚ್ಚಿನ ಏಕಾಗ್ರತೆಯನ್ನು
ಗಳಿಸಿಕೊಂಡು ಅಂತಿಮವಾಗಿ ಸಮಾಧಿ ಅಥವಾ ತನ್ನ/ಆತ್ಮದ ಕುರಿತಾದ ಅಸಾಮಾನ್ಯ ಅನುಭವಡೆಗೆ ಸಾಗಬಹುದು.
ಇವುಗಳಲ್ಲಿ ವೈರಾಗ್ಯ ಮತ್ತು ಅಭ್ಯಾಸಗಳು ಮೊದಲು ಬರುತ್ತವೆ. ಮೊದಲನೆಯದಾದ ವೈರಾಗ್ಯವು ಪ್ರಾಪಂಚಿಕತೆಯನ್ನು
ತೊರೆಯುವುದು ಅಥವಾ ವಿಷಯ ವಸ್ತುಗಳ ಕಡೆಗೆ ಅನಾಸಕ್ತಿಯನ್ನು ಬೆಳೆಸಿಕೊಳ್ಳುವುದರೆಡೆಗೆ ಮನಸ್ಸನ್ನು
ಕೊಂಡೊಯ್ದರೆ; ಅಭ್ಯಾಸ (ನಿರಂತರ ಪ್ರಯತ್ನ)ವು ದೇವರೆಡೆಗೆ ಅಥವಾ ಆತ್ಮನನ್ನು ತಿಳಿಯುವುದರೆಡೆಗೆ ಕೊಂಡೊಯ್ಯುತ್ತದೆ.
ಬೇರೆ ಕೆಲವು ಸೂಚನೆಗಳೆಂದರೆ: ಯಾರು ಸಂತೋಷದಿಂದ
ಇರುತ್ತಾರೋ ಅವರ ಬಗ್ಗೆ ಮತ್ಸರ ತಳೆಯದೆ ಅವರೊಡನೆ ಸ್ನೇಹಭಾವ(ಮೈತ್ರಿ) ಇಟ್ಟುಕೊಳ್ಳುವುದು; ಕಷ್ಟಕಾರ್ಪಣ್ಯದಿಂದ
ಬಳಲುವವರನ್ನು ಅನುಕಂಪದಿಂದ (ಕರುಣೆಯಿಂದ) ಕಾಣುವುದು; ಕ್ರಮಬದ್ಧ ಉಸಿರಾಟದಿಂದ ಪ್ರಾಣಶಕ್ತಿಯನ್ನು
ನಿಯಂತ್ರಣದಲ್ಲಿಟ್ಟುಕೊಳ್ಳುವುದು; ತನ್ನ ಹೃದಯ ಮಧ್ಯದಲ್ಲಿರುವ ಬೆಳಕಿನ ಮೇಲೆ ಧ್ಯಾನಿಸುವುದು; ಮಹಾತ್ಮರ
ಮನಸ್ಸಿನ ಬಗೆಗೆ ಚಿಂತನೆ ಮಾಡುವುದು; ಉಚ್ಛಸ್ಥಿತಿಗೆ ಕೊಂಡೊಯ್ದ ಕನಸುಗಳೇನಾದರೂ ಬಿದ್ದಿದ್ದರೆ ಅವುಗಳನ್ನು
ಮೇಲಿಂದ ಮೇಲೆ ಜ್ಞಾಪಿಸಿಕೊಳ್ಳುವುದು; ದೇವ-ದೇವತೆಗಳ ರೂಪಗಳ ಬಗ್ಗೆ ಅಥವಾ ಚಂದ್ರನಂತಹ ಗ್ರಹಗಳ ಬಗ್ಗೆ
ಅಥವಾ ತನ್ನ ದೇಹದಲ್ಲಿರುವ ಮನೋಬಿಂದುಗಳ ಬಗ್ಗೆ ಎಡಬಿಡದೆ ಮನನ ಮಾಡುವುದು.
ಮೇಲೆ ತಿಳಿಸಿದ ಎಲ್ಲಾ ವಿಧಾನಗಳು ಆಧ್ಯಾತ್ಮ ಪಿಪಾಸುಗಳಿಗೆ
ಮನಃಶಾಂತಿಯನ್ನುಂಟು ಮಾಡುವುದಲ್ಲದೆ ಮನಸ್ಸಿನ ಮೇಲೆ ಹತೋಟಿಯನ್ನು ಸಾಧಿಸಲು ಸಹಾಯಕವಾಗುತ್ತವೆ.
ಅಷ್ಟಾಂಗ
ಅಥವಾ ಎಂಟು ಸೋಪಾನಗಳು
ಪುರುಷ ಅಥವಾ ಜೀವಾತ್ಮನು (ಪ್ರತ್ಯೇಕ ಆತ್ಮನು)
ಪ್ರಕೃತಿಯ ಉತ್ಪನ್ನವಾದ "ಮನೋದೈಹಿಕ ಸಂಕೀರ್ಣ"(ಮನಸ್ಸಿನಿಂದ ಕೂಡಿದ ದೇಹ)ದ ಜೊತೆಗೆ ಹೊಂದಿದ
ಅತಿಯಾದ ಮಮತೆಯಿಂದಾಗಿ ಭಂದನಕ್ಕೊಳಗಾಗಿದ್ದಾನೆ. ಯೋಗದ ಗುರಿಯು ವಿಯೋಗ ಅಂದರೆ ಪ್ರಕೃತಿಯ ಪಾಶದಿಂದ
ಪುರುಷನನ್ನು ಬಿಡುಗಡೆಗೊಳಿಸುದೇ ಆಗಿದೆ. ಈ ಮುಕ್ತಿಯು ವಿವೇಕಖ್ಯಾತಿಯಿಂದ ಬರುತ್ತದೆ. (ವಿವೇಕ=ಯುಕಾಯುಕ್ತ
ವಿವೇಚನೆ ಮತ್ತು ಖ್ಯಾತಿ=ಜ್ಞಾನ).
ಯೋಗಸೂತ್ರಗಳು ಹಂತ ಹಂತವಾಗಿ ಎಂಟು ಹೆಜ್ಜೆಗಳುಳ್ಳ
ಶಿಕ್ಷಣ ಕ್ರಮವನ್ನು ಸೂಚಿಸುತ್ತವೆ. ಅವುಗಳೆಂದರೆ: ಯಮ (ನಿಗ್ರಹ), ನಿಯಮ (ಕಟ್ಟಳೆ), ಆಸನ (ಭಂಗಿ),
ಪ್ರಾಣಾಯಾಮ (ಪ್ರಾಣಶಕ್ತಿಗಳ ನಿಯಂತ್ರಣ), ಪ್ರತ್ಯಾಹಾರ(ಹಿಂತೆಗೆದುಕೊಳ್ಳುವ ಪ್ರಕ್ರಿಯೆ), ಧಾರಣ(ಒಟ್ಟುಗೂಡಿಸುವಿಕೆ
ಅಥವಾ ಕೇಂದ್ರೀಕರಿಸುವಿಕೆ), ಧ್ಯಾನ (ಏಕಾಗ್ರಗೊಳಿಸುವಿಕೆ ಅಥವಾ ಲಕ್ಷದ ಮೇಲೆ ಗಮನಕೊಡುವಿಕೆ), ಮತ್ತು
ಸಮಾಧಿ (ಸಂಪೂರ್ಣ ತಲ್ಲೀನತೆ/ತನ್ಮಯವಾಗುವಿಕೆ). ಯೋಗ ಸ್ಥಿತಿಯ ಪ್ರಾಪ್ತಿಯಲ್ಲಿ ಇವುಗಳಲ್ಲಿ ಮೊದಲ
ಐದು ನಿಯಮಗಳನ್ನು 'ಬಹಿರಂಗ' (ಬಾಹ್ಯ) ಮತ್ತು ಕಡೆಯ ಮೂರನ್ನು 'ಅಂತರಂಗ' (ಒಳಗಿನ) ಸಾಧನೆಗಳೆನ್ನುತ್ತಾರೆ.
ಅಹಿಂಸಾ (ನೋವುಂಟು ಮಾಡದೇ ಇರುವುದು), ಸತ್ಯ (ನಿಜವನ್ನು
ನುಡಿಯುವುದು), ಅಸ್ತೇಯ (ಕಳ್ಳತನ ಮಾಡದೇ ಇರುವುದು), ಬ್ರಹ್ಮಚರ್ಯ(ಇಂದ್ರಿಯ ನಿಗ್ರಹ) ಮತ್ತು ಅಪರಿಗ್ರಹ
(ದಾನವನ್ನು ಸ್ವೀಕರಿಸದೇ ಇರುವುದು) ಇವುಗಳು ಮೊದಲನೆಯ ಹಂತವಾದ ಯಮದ ನಿಯಮಾವಳಿಗಳು.
ಎರಡನೇ ಹಂತವಾದ ನಿಯಮದಲ್ಲಿ ಶೌಚ (ಪರಿಶುದ್ಧತೆ),
ಸಂತೋಷ(ತೃಪ್ತಿ), ತಪಸ್ಸು(ತ್ರಿಕರಣ ಶುದ್ಧತೆ ಅಂದರೆ ಕಾಯ, ವಾಚ, ಮನಸಾ ನಿಗ್ರಹವನ್ನು ಹೊಂದಿರುವುದು),
ಸ್ವಾಧ್ಯಾಯ (ವೇದ ಶಾಸ್ತ್ರಗಳ ಪಾರಾಯಣ ಮತ್ತು ಓಂ ಮುಂತಾದ ಮಂತ್ರಗಳ ಪುನರುಚ್ಛಾರಣೆ ಮಾಡುವುದು),
ಮತ್ತು ಈಶ್ವರಪ್ರಣಿಧಾನ (ದೇವರ ಮೇಲೆ ಭಕ್ತಿಯನ್ನಿರಿಸುವುದು) ಇವುಗಳನ್ನು ಒಳಗೊಂಡಿದೆ.
ಶೌಚವು ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಿದರೆ
ಎರಡನೆಯದಾದ ಸಂತೋಷವು ವೈಯ್ಯಕ್ತಿಕ ಪರಿಶುದ್ಧತೆಯನ್ನು ಉಂಟು ಮಾಡುತ್ತವೆ. ಇತರ ಮೂರು ನಿಯಮಗಳಾದ ತಪಸ್ಸು,
ಸ್ವಾಧ್ಯಾಯ ಮತ್ತು ಈಶ್ವರಪ್ರಣಿಧಾನಗಳನ್ನು ಒಟ್ಟುಗೂಡಿಸಿ ಅವುಗಳನ್ನು ಪತಂಜಲಿಯು 'ಕ್ರಿಯಾಯೋಗ'ವೆಂದು
ಕರೆದಿದ್ದಾನೆ. ಇದು ಯೋಗಕ್ಕೆ ಕೊಂಡೊಯ್ಯುವ ಪರಿಣಾಮಕಾರಿ ಮತ್ತು ಹತ್ತಿರದ ಮಾರ್ಗವಾಗಿದೆ.
ಆಸನವೆಂದರೆ ಯೋಗಾಭ್ಯಾಸವನ್ನು ಕೈಗೊಳ್ಳುವ ವ್ಯಕ್ತಿಯು
ಅನುಕೂಲಕರವಾಗಿ ಮತ್ತು ಸ್ಥಿರವಾಗಿ ಕುಳಿತುಕೊಳ್ಳಲು ಅನುವಾಗಿರುವ ಭಂಗಿ. ಪ್ರಾಣಾಯಾಮವೆಂದರೆ ಕ್ರಮಬದ್ಧ
ಉಸಿರಾಟದ ಮೂಲಕ ಜೀವನಾಧಾರವಾದ ಪ್ರಾಣವಾಯುಗಳನ್ನು ನಿಯಂತ್ರಿಸುವುದು. ಗ್ರಹಣೇಂದ್ರಿಯಗಳನ್ನು ಅಥವಾ
ಪಂಚೇಂದ್ರಿಯಗಳನ್ನು ವಿಷಯವಸ್ತುಗಳಿಂದ ಒಳಸೆಳೆದುಕೊಂಡಾಗ ಅವು ಯಾವುದೇ ಪ್ರತಿಕ್ರಿಯೆಯಿಲ್ಲದೆ ಮನಸ್ಸಿನೊಂದಿಗೆ
ಏಕೀಕರಣಗೊಳ್ಳುತ್ತವೆ; ಇದನ್ನೇ ಪ್ರತ್ಯಾಹಾರವೆಂದು ಕರೆಯುತ್ತಾರೆ.
ಮುಂದಿನ ಮೂರು ಹಂತಗಳಾದ ಧಾರಣ, ಧ್ಯಾನ ಮತ್ತು ಸಮಾಧಿಗಳು
ಒಂದೇ ಕ್ರಿಯೆಯ ಮುಂದುವರೆದ ಹೆಜ್ಜೆಗಳು. ಧಾರಣದಲ್ಲಿ ಮನಸ್ಸು ಲಕ್ಷ್ಯವಿಡಬೇಕಾದ ವಸ್ತುವಿನ ಮೇಲೆ
ಕೇಂದ್ರಿತವಾಗಿರುತ್ತದೆ. ಈ ಏಕಾಗ್ರತೆಯು ಒಂದು ಪಾತ್ರೆಯಿಂದ ಇನ್ನೊಂದು ಪಾತ್ರೆಗೆ ಸುರಿಯಲ್ಪಡುವ
ಎಣ್ಣೆಯಂತೆ ನಿರಾತಂಕವಾಗಿ ಹರಿಯುವಂತಹ ಸ್ಥಿತಿಯಲ್ಲಿದ್ದಾಗ ಅದು ಧ್ಯಾನವೆನಿಸುಕೊಳ್ಳುತ್ತದೆ. ಯಾವಾಗ
ಧ್ಯಾನವು ಪಕ್ವಗೊಂಡು ವ್ಯಕ್ತಿಯು ತನ್ನ ಇರಿವನ್ನು ಸಹ ಮರೆತು ಲಕ್ಷ್ಯದೊಂದಿಗೆ ತನ್ಮಯತೆಯನ್ನು ಹೊಂದುತ್ತಾನೋ
ಆ ಸ್ಥಿತಿಯನ್ನು ಸಮಾಧಿಯೆನ್ನುತ್ತಾರೆ. ಸಮಾಧಿ ಸ್ಥಿತಿಯು ಈಶ್ವರಪ್ರಣಿಧಾನ ಅಥವಾ ಭಗವದ್ಭಕ್ತಿಯಿಂದಲೂ
ಲಭ್ಯವಾಗುತ್ತದೆ.
ಧಾರಣ, ಧ್ಯಾನ ಮತ್ತು ಸಮಾಧಿ ಈ ಮೂರನ್ನೂ ಒಟ್ಟಾಗಿಸಿ
ಪತಂಜಲಿಯು ಅದನ್ನು 'ಸಂಯಮ'ವೆಂಬ ಶಬ್ದದಿಂದ ಕರೆದಿದ್ದಾನೆ. ಮತ್ತು ಈ ಸಂಯಮವು ಯಾವಗಲೂ ಒಂದೇ ಒಂದು
ವಸ್ತುವಿನ ಮೇಲಿರಬೇಕು.
ಯೋಗಸಿದ್ಧಿಗಳು
ತಪಸ್ಸು ಅಥವಾ ಭಗವದನುಗ್ರಹದಿಂದ ಅತೀಂದ್ರಿಯ ಶಕ್ತಿಗಳನ್ನು
ಪಡೆಯಬಹುದೆನ್ನುವ ನಂಬಿಕೆಯು ಬಹು ಪುರಾತನವಾದದ್ದು. ಪತಂಜಲಿಯು ಸತ್ಯಾನ್ವೇಷಕರ ಮನದಲ್ಲಿ ನಂಬಿಕೆಯನ್ನುಂಟು ಮಾಡಲು ತನ್ನ
ಎರಡನೆಯ ಮತ್ತು ಮೂರನೆಯ ಅಧ್ಯಾಯದಲ್ಲಿ ಇಂತಹ ಹಲವಾರು ವಿಶೇಷ ಶಕ್ತಿಗಳ ಬಗ್ಗೆ ಉಲ್ಲೇಖಿಸಿದ್ದಾನೆ.
ಉದಾಹರಣೆಗೆ ಯಾವ ಮನುಷ್ಯನು ಸಂಪೂರ್ಣವಾಗಿ ಅಹಿಂಸಾ ಗುಣಗಳನ್ನು ಒಂದಾಗಿಸಿಕೊಂಡಿರುತ್ತಾನೋ ಅವನ ಬಳಿಯಲ್ಲಿ
ಪರಸ್ಪರ ವೈರತ್ವವಿರುವ (ಹುಲಿ ಮತ್ತು ಹಸು) ಪ್ರಾಣಿಗಳೂ ಕೂಡ ಶಾಂತಿ ಮತ್ತು ಸೌಹಾರ್ದತೆಗಳಿಂದ ಜೀವಿಸುತ್ತವೆ.
ಯಾವ ವ್ಯಕ್ತಿಯಲ್ಲಿ ಸತ್ಯವು ಬೇರೂರಿರುತ್ತದೆಯೋ ಆ ವ್ಯಕಿಯ ಮಾತು ಸುಳ್ಳಾಗುವುದಿಲ್ಲ. ಯಾವ ವ್ಯಕ್ತಿಯು
ಕಠಿಣವಾಗಿ ಅಪರಿಗ್ರಹವನ್ನು(ದಾನವನ್ನು ಸ್ವೀಕರಿಸುವುದಿಲ್ಲವೋ) ಪರಿಪಾಲಿಸುತ್ತಾನೆಯೋ ಅವನಿಗೆ ತನ್ನ
ಪೂರ್ವ ಜನ್ಮದ ಜ್ಞಾನವುಂಟಾಗುತ್ತದೆ ಮತ್ತು ಅವನು ತನ್ನ ಮುಂದಿನ ಜನ್ಮಗಳ ಬಗ್ಗೆಯೂ ತಿಳಿದುಕೊಳ್ಳಬಲ್ಲ
(ನೋಡಿ ಯೋಗಸೂತ್ರ ೨.೩೫,೩೬ ಮತ್ತು ೩೯).
'ಸಂಯಮ'ದಿಂದ ಯೋಗಿಗೆ ಹಲವಾರು ಅತೀಂದ್ರಿಯ ಶಕ್ತಿಗಳು
ಪ್ರಾಪ್ತವಾಗುತ್ತವೆ. ಉದಾಹರಣೆಗೆ, ಪಂಚಭೂತಗಳಾದ ಪೃಥ್ವಿ(ಭೂಮಿ) ಮತ್ತು ಅಪ್(ನೀರು) ಇವುಗಳ ಮೇಲಿನ
'ಸಂಯಮ'ದಿಂದ ಯೋಗಿಯು ಅಷ್ಟಸಿದ್ಧಿ ಅಥವಾ ಎಂಟು ಸುತ್ತಿನ ಶಕ್ತಿಯನ್ನು ಪಡೆಯುತ್ತಾನೆ; 'ಅಣಿಮಾ'(ಅಣುವಿನಷ್ಟು
ಚಿಕ್ಕದಾಗುವಿಕೆ), 'ಮಹಿಮಾ'(ಎಷ್ಟು ಬೇಕೋ ಅಷ್ಟು ಎತ್ತರಕ್ಕೆ ಬೆಳೆಯುವುದು) ಮೊದಲಾದವು (ಯೋಗಸೂತ್ರ
೩.೪೪,೪೫). ಆ ಕೃತಿಯಲ್ಲಿ ಹೆಸರಿಸಿರುವ ಇನ್ನೂ ಕೆಲವು ಸಿದ್ಧಿಗಳೆಂದರೆ:
ಆಲೋಚನೆಯನ್ನು ಗ್ರಹಿಸುವುದು, ನೋಟದಿಂದ ಕಣ್ಮರೆಯಾಗುವುದು, ಅಸದಳ ಶಕ್ತಿಯನ್ನು ಹೊಂದುವುದು, ಪಶು-ಪಕ್ಷಾದಿಗಳ
ಭಾಷೆಯನ್ನು ಅರಿತುಕೊಳ್ಳುವುದು, ಮೊದಲಾದವು.
ಆದರೆ ಮನೋವಿಜ್ಞಾನಿಯಾಗಿದ್ದ ಪತಂಜಲಿಯು ಇವನ್ನು
ವಿವರಿಸಿದರೂ (ವಿಜ್ಞಾನದ ಭಾಗವಾಗಿರುವುದರಿಂದ ಅವುಗಳನ್ನು ವಿವರಿಸಿದ್ದಾನೆ); ಅವುಗಳನ್ನು ಹೊಂದುವುದರಲ್ಲಿ
ಆಸಕ್ತಿಯನ್ನು ತಳೆಯಬಾರದೆಂದು ಯೋಗಾಸಕ್ತರಿಗೆ ಎಚ್ಚರಿಸುತ್ತಾನೆ. ಏಕೆಂದರೆ ಇವುಗಳ ಪ್ರಲೋಭನೆ ಅಥವಾ
ಸೆಳೆತಕ್ಕೆ ಸಿಕ್ಕ ಯೋಗಾಭ್ಯಾಸಿಯು ಅವನ ಗುರಿಯಾದ 'ಕೈವಲ್ಯ' ಅಥವಾ 'ಮುಕ್ತಿ'ಯನ್ನು ಪಡೆಯುವ ಮಾರ್ಗದಿಂದ
ವಿಮುಖನಾಗಿಬಿಡುತ್ತಾನೆ. ಆದರೆ ಒಮ್ಮೆ 'ಕೈವಲ್ಯ' ಸ್ಥಿತಿಯನ್ನು ಪಡೆದ ವ್ಯಕ್ತಿಯು ತನ್ನ 'ಪ್ರಾರಬ್ಧ
ಕರ್ಮ'(ಈ ಜನ್ಮಕ್ಕೆ ಕಾರಣವಾದ ಕರ್ಮ)ಕ್ಕೆ ಅನುಸಾರವಾಗಿ ಇನ್ನೂ ಸ್ವಲ್ಪ ಕಾಲ ಜೀವಿಸಬಹುದು. ಈ ಸ್ಥಿತಿಯಲ್ಲಿ
ಅವನು ಯಾವುದೇ ಪ್ರಮಾದವಿಲ್ಲದೆ ಈ ಶಕ್ತಿಗಳನ್ನು ಮಾನವಸಂತತಿಯ
ಒಳಿತಿಗಾಗಿ ಬಳಸಬಹುದು.
ಸಮಾರೋಪ
ಯೋಗದರ್ಶನವು ಕೇವಲ ಪ್ರಾಚೀನವಾದ ಪದ್ಧತಿ ಮಾತ್ರವಾಗಿರದೆ
ಅನುಷ್ಠಾನಯೋಗ್ಯವೂ ಆಗಿದೆ. ವೇದಾಂತ ದರ್ಶನಗಳೂ ಕೂಡ ಅದರ ಸಾಧನಾ ಭಾಗಗಳನ್ನು ಒಪ್ಪಿಕೊಳ್ಳುತ್ತವೆ.
ಆಧುನಿಕ ಮನಃಶಾಸ್ತ್ರಜ್ಞರು ಕೂಡ ಮನಸ್ಸಿನ ಸ್ವಾಸ್ಥ್ಯವನ್ನು ಮತ್ತೆ ಪಡೆಯುವಲ್ಲಿ ಮತ್ತು ಅದನ್ನು
ಕಾಪಾಡಿಕೊಳ್ಳುವಲ್ಲಿ ಇದರ ಉಪಯುಕ್ತತೆಯ ಬಗ್ಗೆ ಸಂಶೋಧನೆಗಳನ್ನು ಕೈಗೊಂಡಿದ್ದಾರೆ. ಯೋಗದ ವಿಧಾನ ಮತ್ತು
ಕೌಶಲಗಳು ಪ್ರಪಂಚದಾದ್ಯಂತ ಇಂದು ಜನಪ್ರಿಯತೆಯನ್ನು ಗಳಿಸಿಕೊಳ್ಳುತ್ತಿವೆ. ಮೊದಲೆರಡು ನಿಯಮಾವಳಿಗಳಾದ
ಯಮ ಮತ್ತು ನಿಯಮಗಳು ವ್ಯಕ್ತಿಗೆ ಒಳಿತುಂಟು ಮಾಡುವುದಲ್ಲದೆ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಸಹಾಯಕವೆನಿಸುತ್ತವೆ.
ವಿವಿಧ ಆಸನಗಳು ಅಥವಾ ಚೆನ್ನಾಗಿ ಪ್ರಚಲಿತವಿರುವ ಯೋಗಾಸನಗಳು ವ್ಯಕ್ತಿಯ ಮಾನಸಿಕ ಆರೋಗ್ಯವನ್ನು ಮರಳಿ
ಪಡೆಯಲು ಪೂರಕವಾಗಿವೆ. ಆದ್ದರಿಂದ ಯೋಗ ಪದ್ಧತಿಯು ನಿಧಾನವಾಗಿ ಸಾರ್ವಜನಿಕ ಮನ್ನಣೆಯನ್ನು ಗಳಿಸಿಕೊಳ್ಳುತ್ತಿದೆ.
-ಶ್ರೀಧರ್ ಭಂಡ್ರಿ
Thursday, August 16, 2012
ಸಾಂಖ್ಯ ದರ್ಶನ
ಪರಿಚಯ:
ತನ್ನ ಚಿಂತನೆಗಳನ್ನು ಪ್ರತಿಪಾದಿಸಿ, ತದನಂತರ ಉಪನಿಷತ್ತುಗಳಲ್ಲಿ
ಉಲ್ಲೇಖಿಸಿರುವ ವಾಕ್ಯಗಳ ಆಧಾರದಿಂದ ಅವುಗಳನ್ನು ಗಟ್ಟಿಗೊಳಿಸಿ ಬ್ರಹ್ಮಸೂತ್ರವನ್ನು ರಚಿಸಿರುವ ಬಾದರಾಯಣನು
ತನ್ನ ಟೀಕೆಯನ್ನು ಸಾಂಖ್ಯ ಪದ್ಧತಿಯೊಂದಿಗೆ ಪ್ರಾರಂಭಿಸಿದ್ದಾನೆ (೨.೨.೧). ಬ್ರಹ್ಮಸೂತ್ರದ ೧.೪.೨೮ ಶ್ಲೋಕಕ್ಕೆ ಭಾಷ್ಯವನ್ನು ಬರೆಯುತ್ತಾ ಆದಿ ಶಂಕರರು (ಕ್ರಿ.ಶ. ೭೮೮-೮೨೦) ತಮ್ಮ ಟೀಕೆಗೆ ಸಾಂಖ್ಯ ಪದ್ಧತಿಯನ್ನು, "ಪ್ರಧಾನ-ಮಲ್ಲ-ನಿಭರ್ಹಣ-ನ್ಯಾಯೇನ"
ಅಂದರೆ "ಪ್ರಧಾನ ಜಟ್ಟಿಯನ್ನು ಸೋಲಿಸುವ ತರ್ಕ"ಕ್ಕನುಗುಣವಾಗಿ ಆರಿಸಿಕೊಂಡೆನೆಂದು ತಿಳಿಸುತ್ತಾರೆ.
"ಒಬ್ಬ ಹೆಸರುವಾಸಿಯಾದ ಜಟ್ಟಿಯು ತನ್ನ ವಿರುದ್ಧ ಪಾಳಯದ ಪ್ರಧಾನ ಜಟ್ಟಿಯನ್ನು ಮೊದಲು ಸೋಲಿಸಿದರೆ,
ಉಳಿದವರೊಂದಿಗೆ ಸೆಣಸುವ ಅವಶ್ಯಕತೆಯೇ ಇಲ್ಲದೆ ಅವರೆಲ್ಲರನ್ನೂ ಪರಾಭವಗೊಳಿಸಿದಂತೆ". ಇದು ಸಾಂಖ್ಯ
ದರ್ಶನದ ಪ್ರಾಮುಖ್ಯತೆಯನ್ನು ತೋರಿಸುತ್ತದೆ.
ಸನಾತನವಾಗಿ ಲಭ್ಯವಿರುವ ಆಧಾರದ(ಭಾಗವತ ೩.೨೫-೩೩) ಪ್ರಕಾರ ಈ ಪದ್ಧತಿಯು ಕಪಿಲ ಮುನಿಯಿಂದ ಸ್ಥಾಪಿಸಲ್ಪಟ್ಟಿತು. ಅವನ ಮೂಲಕ
ನಮಗೆ ಹರಿದು ಬಂದಿರುವ ಕೃತಿಯೆಂದರೆ 'ಸಾಂಖ್ಯಸೂತ್ರ'ಗಳು. ನಿರ್ವಿವಾದವಾಗಿ ಇದು ಇತ್ತೀಚಿನ ಕೃತಿ.
ಅದು ಆರು ಅಧ್ಯಾಯಗಳನ್ನು ಒಳಗೊಂಡು ಅವೆಲ್ಲವುಗಳಿಂದ ೫೨೬ ಸೂತ್ರಗಳನ್ನು
ಹೊಂದಿದೆ. ವಿಜ್ಞಾನಭಿಕ್ಷು (ಕ್ರಿ.ಶ. ೧೬ನೇ ಶತಮಾನ) ಇದಕ್ಕೆ 'ಸಾಂಖ್ಯ
ಪ್ರವಚನ ಭಾಷ್ಯ' ಎನ್ನುವ ವ್ಯಾಖ್ಯಾನ ಗ್ರಂಥವನ್ನು ಬರೆದಿದ್ದಾನೆ.
ಸಾಂಖ್ಯ ಪದ್ಧತಿಯ ಸಿದ್ಧಾಂತವು ಕಪಿಲನ ಶಿಷ್ಯನಾದ
ಆಸುರಿ ಮತ್ತವನ ಶಿಷ್ಯನಾದ ಪಂಚಶಿಖ ಇವರ ಮೂಲಕ ಪ್ರಾಮುಖ್ಯತೆ ಹಾಗು ಪ್ರಚುರತೆಯನ್ನು ಪಡೆಯಿತು. ಪಂಚಶಿಖನ
ಕೆಲವು ಸೂತ್ರಗಳನ್ನು ಕ್ರಿಸ್ತ ಶಕದಲ್ಲಿ ಬರೆಯಲ್ಪಟ್ಟಿರುವ ವ್ಯಾಸಭಾಷ್ಯ ಗ್ರಂಥದಲ್ಲಿ; ಪಾತಂಜಲಿಯ
ಯೋಗಸೂತ್ರ(ಕ್ರಿ.ಪೂ.೨೦೦)ಕ್ಕೆ ಬರೆದ ಟಿಪ್ಪಣಿಯಲ್ಲಿ ಉಲ್ಲೇಖಿಸಿರುವುದನ್ನು
ಕಾಣಬಹುದು. ಪಂಚಶಿಖನ ಸಂಪೂರ್ಣ ಕೃತಿಯು ನಮಗೆ ಇದುವರೆವಿಗೂ ಲಭ್ಯವಾಗಿಲ್ಲ.
ಈಶ್ವರಕೃಷ್ಣ (ಕ್ರಿ.ಶ. ೫ನೇ
ಶತಮಾನ) ರಚಿಸಿದ 'ಸಾಂಖ್ಯಕಾರಿಕಾ' ಕೃತಿಯೇ ಸಾಂಖ್ಯ ದರ್ಶನದ ಬಗ್ಗೆ ಇದುವರೆಗೆ ನಮಗೆ ದೊರೆತಿರುವ
ನಂಬಲರ್ಹವಾದ ಕೃತಿಯೆಂದು ನಿರ್ವಿವಾದವಾಗಿ ಹೇಳಬಹುದು. ಇದರಲ್ಲಿ ಆರ್ಯಛಂದಸ್ಸಿನಲ್ಲಿ ರಚಿಸಲ್ಪಟ್ಟಿರುವ
ಎಪ್ಪತ್ತು ಪಂಕ್ತಿಗಳಿವೆ, ಆದ್ದರಿಂದ ಅದನ್ನು ಕೆಲವೊಮ್ಮೆ 'ಸಾಂಖ್ಯ ಸಪ್ತತಿ' ಎಂದೂ ಕರೆದಿದ್ದಾರೆ.
ಇದರಲ್ಲಿ ಸಂಕ್ಷಿಪ್ತವಾದರೂ ವಿದ್ವತ್ಪೂರ್ಣವಾಗಿ ಮತ್ತು ಸರಳವಾಗಿ ಸಿದ್ಧಾಂತಗಳನ್ನು ಪ್ರಚುರಪಡಿಸಲಾಗಿದೆ.
'ಸಾಂಖ್ಯಕಾರಿಕಾ' ಕೃತಿಗೆ ಎರಡು ಪ್ರಸಿದ್ಧ ಭಾಷ್ಯಗಳು ಇವೆ, ಅವೆಂದರೆ ಗೌಡಪಾದ (ಕ್ರಿ.ಶ. ೭೦೦) ವಿರಚಿತ 'ಸಾಂಖ್ಯಕಾರಿಕಾ ಭಾಷ್ಯ' ಮತ್ತು ವಾಚಸ್ಪತಿಯ(ಕ್ರಿ.ಶ. ೮೪೦) 'ಸಾಂಖ್ಯತತ್ವ ಕೌಮುದಿ'. ವಿಜ್ಞಾನಭಿಕ್ಷುವಿನ 'ಸಾಂಖ್ಯಸಾರ' ಮತ್ತು ಅನಿರುದ್ಧನ(ಕ್ರಿ.ಶ.
೧೫ನೆ ಶತಮಾನ) 'ಸಾಂಖ್ಯಪ್ರವಚನಸೂತ್ರಾವೃತ್ತಿ' ಹೆಸರಿಸಬಹುದಾದ ಇತರ ಮುಖ್ಯ
ಕೃತಿಗಳು.
ಹೆಸರಿನ
ಪ್ರಾಮುಖ್ಯತೆ
ಸಾಂಖ್ಯ ಶಬ್ದದ ವ್ಯುತ್ಪತ್ತಿ ಒಂದು ಒಗಟಿನಂತೆ
ತೋರುತ್ತದೆ. ಈ ಪದ್ಧತಿಯು ಸೃಷ್ಟಿ ರಚನೆಯಲ್ಲಿ ೨೫ 'ಸಂಖ್ಯೆ'ಯ ಅಂತಿಮ
ತತ್ವಗಳಿವೆ ಎಂದು ಪ್ರತಿಪಾದಿಸುವುದರಿಂದ 'ಸಾಂಖ್ಯ' ಎನ್ನುವುದು 'ಸಂಖ್ಯಾ' ಶಬ್ದದಿಂದ ವ್ಯುತ್ಪತ್ತಿಯಾಗಿರಬೇಕೆಂದು
ಕೆಲವರು ಅಭಿಪ್ರಾಯ ಪಡುತ್ತಾರೆ. ಆದರೆ ಇತರರು ಅಭಿಪ್ರಾಯ ಪಡುವಂತೆ, ಸಾಂಖ್ಯ ದರ್ಶನವು 'ಜ್ಞಾನ' ಅಥವಾ
'ಅರಿವು' ಮಾತ್ರವೇ ಮುಕ್ತಿಗೆ ಸಾಧನವೆಂದು ಒತ್ತಿ ಹೇಳುವುದರಿಂದ ಈ ಶಬ್ದದ ವ್ಯುತ್ಪತ್ತಿಯು ಸಂಖ್ಯಾ
ಎಂದರೆ ಜ್ಞಾನ (ಸಮ್ಯಕ್ ಖ್ಯಾಯತೇ ಇತಿ ಜ್ಞಾನಃ) ಎನ್ನುವ ಧಾತುವಿನಿಂದ ಬಂದಿದೆ ಎನ್ನುವುದು ಹೆಚ್ಚು
ಸೂಕ್ತವಾಗಿದೆ.
ಪ್ರಮಾಣಗಳು
ಅಥವಾ ಜ್ಞಾನದ ವಿಧಗಳು
ಇತರೆ
ದರ್ಶನಗಳಂತಲ್ಲದೆ ಸಾಂಖ್ಯವು ಕೇವಲ ಮೂರು ಪ್ರಮಾಣಗಳು ಅಥವಾ ನಂಬಲರ್ಹವಾದ ಜ್ಞಾನದ ಮೂಲಗಳನ್ನು ಒಪ್ಪಿಕೊಳ್ಳುತ್ತದೆ.
ಅವೆಂದರೆ ಪ್ರತ್ಯಕ್ಷ (ನೇರವಾದ ಅನುಭವ), ಅನುಮಾನ (ಕ್ರಮಬದ್ಧ ನಿಷ್ಕರ್ಷೆ) ಮತ್ತು ಶಬ್ದ (ವಾಕ್ಯ
ಪ್ರಮಾಣ).
ಪ್ರತ್ಯಕ್ಷಾನುಭವವೆನ್ನುವುದು ಒಂದು ವಸ್ತುವು ಯಾವುದಾದರೊಂದು
ಗ್ರಹಣೇಂದ್ರಿಯದೊಂದಿಗೆ ಸಂಪರ್ಕಕ್ಕೆ ಬಂದಾಗ ಉಂಟಾಗುವ ನೇರವಾದ ಅರಿವು ಅಥವಾ ತಿಳುವಳಿಕೆ. ಉದಾಹರಣೆಗೆ:
ಕಣ್ಣು ಮೇಜನ್ನು ನೋಡುವುದು ಅಥವಾ ಕಿವಿಗಳು ಹಕ್ಕಿಗಳ ಚಿಲಿಪಿಲಿಯನ್ನು ಕೇಳುವುದು. ಮೊದಲನೆಯ ಸಂಪರ್ಕವು
ಸಾಮಾನ್ಯ ಜ್ಞಾನವನ್ನು ಒದಗಿಸಬಹುದು. ಇದನ್ನೇ 'ನಿರ್ವಿಕಲ್ಪಕ'(ಅಸ್ಪಷ್ಟ ಜ್ಞಾನ) ಎನ್ನುತ್ತಾರೆ.
ಯಾವಾಗ ವಸ್ತುವನ್ನು ಹತ್ತಿರದಿಂದ, ಗಮನ ಮತ್ತು ವಿವೇಚನೆಯಿಂದ ನೋಡುತ್ತೇವೆಯೋ ಆಗ ಆ ವಸ್ತುವಿನ ಬಗ್ಗೆ
ನಿಚ್ಚಳವಾದ ತಿಳುವಳಿಕೆ/ಅರಿವು ಉಂಟಾಗುತ್ತದೆ. ಅದನ್ನೇ 'ಸವಿಕಲ್ಪಕ'(ಸ್ಪಷ್ಟವಾದ ಜ್ಞಾನ) ಎನ್ನುತ್ತಾರೆ.
ಒಂದು ಮೇಜನ್ನು ನೋಡಿದಾಗ, ಬರುವ ಮೊದಲ ಪ್ರಕ್ರಿಯೆ 'ನಾನು ಒಂದು ವಸ್ತುವನ್ನು ನೋಡುತ್ತಿದ್ದೇನೆ',
ಆಮೇಲೆ ಅದರ ಬಗ್ಗೆ ಸ್ಪಷ್ಟತೆ ಮೂಡುತ್ತದೆ, "ಹ್ಞೋ! ಇದು ಒಂದು ಮರದಿಂದ ತಯಾರಾದ ಮೇಜು ಮತ್ತು
ಅದರ ಮೇಲೆ ಒಂದು ಕೆಂಪು ಬಟ್ಟೆಯು ಹೊದಿಸಲ್ಪಟ್ಟಿದೆ". ಇಲ್ಲಿ ಮೊದಲನೆಯದು 'ನಿರ್ವಿಕಲ್ಪಕ-ಪ್ರತ್ಯಕ್ಷ'
ಮತ್ತು ಎರಡನೆಯದು 'ಸವಿಕಲ್ಪಕ-ಪ್ರತ್ಯಕ್ಷ'.
ಅನುಮಾನ ಅಥವಾ ನಿಷ್ಕರ್ಷೆ ಎನ್ನುವುದು ಎರಡನೆಯ
ಜ್ಞಾನದ ಮೂಲ. ಮೊದಲು ಯಾವುದಾದರೂ ಸಂಜ್ಞೆಯನ್ನು (ಸಂಕೇತವನ್ನು) ನೋಡಿ ನಿಷ್ಕರ್ಷೆಮಾಡಿ ಅದರ ಹಿಂದಿರುವ
ಸತ್ಯವನ್ನು ತಿಳಿದುಕೊಳ್ಳುವುದು(ಜ್ಞಾನವನ್ನು ಪಡೆಯುವುದು) ಅನುಮಾನದ ವಿಧಾನ. ಬಹುತೇಕ ಎಲ್ಲ ತತ್ವಶಾಸ್ತ್ರಜ್ಞರು
ಅನುಮಾನಕ್ಕೆ ಕೊಡುವ ಸಾಮಾನ್ಯ ಉದಾಹರಣೆಯೆಂದರೆ, ದೂರದಲ್ಲಿರುವ ಬೆಟ್ಟದ
ಮೇಲೇಳುತ್ತಿರುವ ಹೊಗೆಯಿಂದ ಅಲ್ಲಿ ಬೆಂಕಿಯಿದೆ ಎಂದು ನಿಷ್ಕರ್ಷೆ ಅಥವಾ ಕ್ರಮಬದ್ಧವಾದ ಊಹೆಯಿಂದ ತಿಳಿದುಕೊಳ್ಳುವುದು. ನಮ್ಮ ಪೂರ್ವಾನುಭವವು ಎಲ್ಲೆಲ್ಲಿ ಹೊಗೆಯಿತ್ತೋ ಅಲ್ಲೆಲ್ಲಾ
ಬೆಂಕಿಯಿತ್ತು ಎನ್ನುವುದನ್ನು ಪ್ರತ್ಯಕ್ಷ ಗ್ರಹಿಕೆಯಿಂದ ತಿಳಿಸಿ ಕೊಟ್ಟಿರುತ್ತದೆ, ಆದ್ದರಿಂದ ಇಲ್ಲಿ
ಹೊಗೆಯನ್ನು ನೋಡಿ ಅಲ್ಲಿ ಬೆಂಕಿ ಇದೆ ಎನ್ನುವ ನಿರ್ಧಾರಕ್ಕೆ ಬರುತ್ತೇವೆ; ಬೆಂಕಿಯನ್ನು ಪ್ರತ್ಯಕ್ಷವಾಗಿ
ಕಾಣದಿದ್ದರೂ ಕೂಡ. ಗೋಚರವಾದ ವಸ್ತುವಿಗೆ ಮತ್ತು ಅಗೋಚರವಾದ ವಸ್ತುವಿಗೆ ಅವಿನಾಭಾವ ಅಥವಾ ಬೇರ್ಪಡಿಸಲಾಗದ
ಸಂಭಂದ (ಇಲ್ಲಿ ಹೊಗೆ ಮತ್ತು ಬೆಂಕಿ) ಇರಬೇಕಾದದ್ದು ಈ ಪದ್ಧತಿಯಲ್ಲಿನ ಪೂರ್ವನಿಯಮ.
ಶಬ್ದ ಅಥವಾ ವಾಕ್ಯದ ಆಧಾರವು ಪ್ರಮಾಣಗಳಲ್ಲಿ ಮೂರನೆಯದು
ಮತ್ತು ಅಂತಿಮವಾದದ್ದು. ಈ ಆಧಾರವು ಒಬ್ಬ ನಂಬಲರ್ಹ ವ್ಯಕ್ತಿಯ ನುಡಿ. ಇದನ್ನು 'ಅಲೌಕಿಕ ಶಬ್ದ' ಅಥವಾ 'ಆಪ್ತವಾಕ್ಯ' ಎಂದೂ ಕರೆಯುತ್ತಾರೆ. ನಂಬಲರ್ಹವಾದ ಆ ವ್ಯಕ್ತಿಯ ಗ್ರಹಿಕೆ
ಮತ್ತು ನಿಷ್ಕರ್ಷೆಯ ಮೇಲೆ ಇದು ಅವಲಂಬಿತವಾಗಿರುವದರಿಂದ, ಸಾಂಖ್ಯ
ಶಾಸ್ತ್ರವು ಈ ರೀತಿಯ ಆಧಾರವನ್ನು ಪ್ರತ್ಯೇಕ ಪ್ರಮಾಣವೆಂದು ಪರಿಗಣಿಸುವುದಿಲ್ಲ. ಆದರೆ ವಾಕ್ಯ ಅಥವಾ
ಶ್ರುತಿಗಳ ಪ್ರಮಾಣ ಅಂದರೆ ವೇದಗಳ ಆಧಾರಗಳನ್ನು ಸಾಂಖ್ಯ ದರ್ಶನವು ಪ್ರತ್ಯೇಕ ಮತ್ತು ಅಂತಿಮ ಪ್ರಮಾಣವೆಂದು
ಒಪ್ಪಿಕೊಳ್ಳುತ್ತವೆ. ವೇದಗಳು ನಮಗೆ ಇಂದ್ರಿಯಗೋಚರವಲ್ಲದ ಸತ್ಯಗಳ ಬಗ್ಗೆ ನಿಜವಾದ ಜ್ಞಾನವನ್ನು ಒದಗಿಸುತ್ತವೆ;
ಈ ಸತ್ಯಗಳು ನಮಗೆ 'ಪ್ರತ್ಯಕ್ಷ' ಅಥವಾ 'ಅನುಮಾನ' ಪ್ರಮಾಣಗಳ ಮೂಲಕ ಅರಿಯಲಾಗದವುಗಳು. ವೇದಗಳು ಅಪೌರುಷೇಯವೂ
(ಮನುಷ್ಯ ನಿರ್ಮಿತವಾಗಿರದೆ ಅಲೌಕಿಕವಾದವುಗಳಾಗಿವೆ) ಹಾಗು ದೋಷರಹಿತವಾದವುಗಳೂ ಆಗಿವೆ. ಇವುಗಳು
ಬ್ರಹ್ಮಜ್ಞಾನವನ್ನು ಕಂಡುಕೊಂಡ ಮಹಾನ್ ಋಷಿಗಳ ಆಂತರ್ಯದ ವಾಣಿಗಳಾಗಿವೆ.
ಪ್ರಮೇಯಗಳು
ಅಥವಾ ತಿಳಿಯಬೇಕಾದ ವಸ್ತುಗಳು
"ಗೋಚರದಿಂದ ಅಗೋಚರದೆಡೆಗೆ ಅಥವಾ ತಿಳಿದದ್ದರಿಂದ
ತಿಳಿಯದಿರುವದರೆಡೆಗೆ" ಎನ್ನುವ ತತ್ವವನ್ನಾಧರಿಸಿ ಸಾಂಖ್ಯ ಪಾರಮಾರ್ಥಿಕ ಶಾಸ್ತ್ರವು ನಮ್ಮ ಅನುಭವಕ್ಕೆ
ಬರುವ ಎಲ್ಲ ರೀತಿಯ ವಾಸ್ತವ ಸಂಗತಿಗಳನ್ನು ಮೂಲಭೂತವಾಗಿ ಎರಡು ನಿತ್ಯವಾದ ವಸ್ತುಗಳಿಗೆ ಇಳಿಸುತ್ತದೆ;
ಅವೆಂದರೆ ಪ್ರಕೃತಿ ಮತ್ತು ಪುರುಷ. ಪ್ರಧಾನ ಮತ್ತು ಅವ್ಯಕ್ತವೆಂದೂ ಕರೆಯಲ್ಪಡುವ - ಎಲ್ಲಾ ಜೀವರಹಿತ ಜಡ ವಸ್ತುಗಳು ಹಾಗೂ ಅವುಗಳ ಸಂಕೀರ್ಣತೆಗಳಿಂದೊಡಗೂಡಿ
'ಅಚೇತನ'ವಾಗಿರುವುದು 'ಪ್ರಕೃತಿ' ಮತ್ತು ಚೇತನದಿಂದೊಡಗೂಡಿದ ಜೀವಿ ಅಥವಾ ಆತ್ಮನೇ 'ಪುರುಷ'.
ಈ ರೀತಿ ಕೇವಲ ಎರಡು ನಿತ್ಯ ವಸ್ತುಗಳಿವೆ ಎಂಬ ನಿರ್ಣಯದ
ಹಿಂದಿರುವ ಮೂಲಭೂತವಾದ ವಾದವನ್ನು 'ಸತ್ಕಾರ್ಯವಾದ' ತತ್ವ ಎನ್ನುತ್ತಾರೆ. ಈ ತತ್ವವು 'ಕಾರ್ಯ'ವು ಅನಾವರಣಗೊಳ್ಳುವ
ಮೊದಲೇ 'ಕಾರಣ'ದಲ್ಲಿ 'ಪೂರ್ವದಲ್ಲಿಯೇ ಇತ್ತು' (ಸತ್) ಎಂದು ತಿಳಿಸುತ್ತದೆ. ಉದಾಹರಣೆಗೆ, ಒಂದು ಮಡಕೆಯನ್ನು
ನಾವು ಮಣ್ಣಿನಿಂದ ತಯಾರಿಸಿದಾಗ, ಆ ಮಣ್ಣಿನಲ್ಲಿ ಮಡಕೆಯು ಅದಾಗಲೇ ಇತ್ತು; ಸುಪ್ತಾವಸ್ಥೆಯಲ್ಲಿದ್ದರೂ
ಕೂಡಾ. ಇದರ ಹಿಂದಿರುವ ಮುಖ್ಯ ತರ್ಕವೆಂದರೆ ಯಾವುದೇ ವಸ್ತುವಿಲ್ಲದೇ ಇನ್ನೊಂದು ವಸ್ತುವನ್ನು ಸೃಷ್ಟಿಸಲಾಗದು
(ಶೂನ್ಯದಿಂದ ಏನನ್ನೂ ಸೃಷ್ಟಿಸಲಾಗದು).
ಈ ರೀತಿಯ ವಾದವನ್ನು ನಮ್ಮ ಅನುಭವಕ್ಕೆ ಬರುವ ಪ್ರಪಂಚದ
ವಿವಿಧ ವಸ್ತುಗಳಿಗೆ ಅನ್ವಯಿಸಿದಾಗ ಎಲ್ಲಾ ವಸ್ತುಗಳಿಗೆ ಮೂರು ರೀತಿಯ ಸ್ಥಿತಿಗಳಿವೆ - ಆನಂದ, ದುಃಖ
ಮತ್ತು ಅನಾಸಕ್ತಿ ಎಂದು ತಿಳಿಯುತ್ತದೆ. ಆದ್ದರಿಂದ ಸಾಂಖ್ಯ ದರ್ಶನವು ಈ ಮೂರು ಸ್ಥಿತಿಗಳು ಮೂಲಭೂತವಾಗಿ
ಯಾವುದೋ ಸೂಕ್ಷ್ಮ ವಸ್ತುವಿನಿಂದ ರೂಪುಗೊಂಡಿರಬೇಕೆಂದು ಭಾವಿಸುತ್ತದೆ. ಈ ಸ್ಥಿತಿಗಳನ್ನೇ ಸಾಂಖ್ಯವು
ಗುಣಗಳೆಂದು ಕರೆಯುತ್ತದೆ- ಸತ್ವಗುಣ (ಸಂತೋಷ ಅಥವಾ ಆನಂದವನ್ನು ಉಂಟುಮಾಡುತ್ತದೆ), ರಜೋಗುಣ (ನೋವು
ಅಥವಾ ಯಾತನೆಯನ್ನು ಉಂಟುಮಾಡುತ್ತದೆ) ಮತ್ತು ತಮೋಗುಣ (ಎರಡನ್ನೂ ಉಂಟುಮಾಡುವುದಿಲ್ಲ).
ಈ ಮೂರೂ ಗುಣಗಳು ಭೌತಿಕ ವಾಸ್ತವತೆಗಳಿಗೆ ಪ್ರತೀಕವಾಗಿವೆ.
ಸತ್ವವು ಎಲ್ಲಾ ಶುದ್ಧವಾದ ಒಳ್ಳೆಯ ವಸ್ತುಗಳನ್ನು ಪ್ರತಿನಿಧಿಸುತ್ತದೆ ಮತ್ತು ಜ್ಞಾನ ಹಾಗು ಆನಂದವನ್ನು
ಉಂಟು ಮಾಡುತ್ತದೆ. ರಜೋಗುಣವು ಯಾವಾಗಲೂ ಚಟುವಟಿಕೆಯಿಂದ ಕೂಡಿರುತ್ತದೆ. ಅದು ಎಲ್ಲಾ ರೀತಿಯ ಆಸೆ ಮತ್ತು
ಮಹತ್ವಾಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ಹಾಗೂ ಒಬ್ಬರು ಕಾರ್ಯತತ್ಪರರಾಗಿರಲು ಕಾರಣೀಭೂತವಾಗಿದೆ.
ತಮಸ್ಸು ಜಡತೆಯಿಂದ ಕೂಡಿದ್ದು ಪ್ರತಿರೋಧವನ್ನು ವ್ಯಕ್ತಪಡಿಸುತ್ತದೆ. ಅದು ನಿದ್ರೆ ಮತ್ತು ಆಲಸ್ಯಡೆಗೆ
ಕೊಂಡೊಯ್ಯುತ್ತದೆ.
ಈ ಮೂರೂ ಗುಣಗಳು ಯಾವಾಗಲೂ ಒಟ್ಟಿಗೇ ಇದ್ದು ಅವು
ಯಾವಾಗಲೂ ಬೇರ್ಪಡುವುದಿಲ್ಲ. ಯಾವಾಗ ಈ ಮೂರೂ ಗುಣಗಳು - ಮೇಲ್ನೋಟಕ್ಕೆ ತೋರುವಂತೆ ಯಾವಾಗಲೂ ಗೊಂದಲದಲ್ಲಿದ್ದಂತೆ
ಕಂಡುಬಂದರೂ, ವಾಸ್ತವವಾಗಿ ಇವು ನಿಶ್ಚಿತವಾದ ಸಮತುಲ್ಯ ಸ್ಥಿತಿಯಲ್ಲಿದ್ದು, ಒಂದಕ್ಕೆ ಮತ್ತೊಂದು ತೊಡಕುಂಟು
ಮಾಡದೆ, ತಮ್ಮೊಳಗೆ ನಿರಂತರ ಚಲನೆ ಅಥವಾ ನಿತ್ಯ ಚಟುವಟಿಕೆಯಿಂದ ಕೂಡಿರುತ್ತವೋ ಆಗ ಅದು ಪ್ರಕೃತಿ ಅಥವಾ
ಪ್ರಧಾನವಾಗುತ್ತವೆ. ಅಥವಾ ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಈ ಮೂರು ಗುಣಗಳ ನಿಶ್ಚಿತವಾದ ಸಮತುಲ್ಯ
ಸ್ಥಿತಿಯೇ ಪ್ರಕೃತಿ.
ಈ ಪ್ರಕೃತಿಯು ಮೂಲ ಧಾತು ಅಥವಾ ಪ್ರಾರಂಭಿಕ ವಸ್ತುವಾಗಿದ್ದು
ಇದರಿಂದಲೇ ವಿಶ್ವದ ಉಗಮವಾಗುತ್ತದೆ. ಅದು ಜಡ ಎಂದರೆ ಅಚೇತನವಾದದ್ದು. ಮತ್ತೊಂದು ವಸ್ತುವಾದ 'ಪುರುಷ'ನು
ಚೈತನ್ಯದಿಂದ ಒಡಗೂಡಿದ ವಸ್ತು ಅಥವಾ ಅದರ ಸ್ವಭಾವವೇ ಚೇತನ. 'ಪುರುಷ'ನು ನಿತ್ಯ ನಿರಂತರನಾಗಿದ್ದು,
ನಿತ್ಯ ಶುದ್ದನೂ, ನಿತ್ಯ ಮುಕ್ತನೂ (ಅಸಂಗನು ಅಥವಾ ಭಂದನಕ್ಕೊಳಗಾಗದವನು) ಮತ್ತು ಸರ್ವಾಂತರಯಾಮಿಯಾಗಿದ್ದಾನೆ.
ಎಷ್ಟು ಜೀವಿಗಳಿವೆಯೋ ಅಷ್ಟು ಲೆಕ್ಕವಿಲ್ಲದಷ್ಟು ಪುರುಷರು ಅಥವಾ ಆತ್ಮಗಳು ಇವೆ.
ವಿಶ್ವದ
ಉಗಮ
ಸೃಷ್ಟಿಯ ಅಥವಾ ವಿಶ್ವದ ಉಗಮ ಪ್ರಕೃತಿ ಮತ್ತು ಪುರುಷರ
'ಸಂಯೋಗ್ಯ' ಅಥವಾ 'ನಿಶ್ಚಿತವಾದ ಒಂದುಗೂಡುವಿಕೆ'ಯಿಂದ ಪ್ರಾರಂಭವಾಗುತ್ತದೆ. ಒಟ್ಟಾರೆಯಾಗಿ ಎಲ್ಲಾ
ಪುರುಷರ ಕರ್ಮವು (ಅದೃಷ್ಟವು) ಪ್ರಕೃತಿಯಲ್ಲಿರುವ ಗುಣಗಳ ಸಮತುಲ್ಯ ಸ್ಥಿತಿಯನ್ನು ವ್ಯತ್ಯಸ್ಥಗೊಳಿಸಿ
ಸೃಷ್ಟಿಯ ಪ್ರಕ್ರಿಯೆಯನ್ನು ಉಂಟುಮಾಡುತ್ತವೆ.
ಪ್ರಕೃತಿಯು ಜಡವಾಗಿದ್ದು (ಜೀವರಹಿತ ಮತ್ತು ಚೈತನ್ಯರಹಿತವಾಗಿದ್ದು)
ಮತ್ತು ಪುರುಷನು ಅಸಂಗನಾಗಿರುವಾಗ (ಸಂಪೂರ್ಣವಾಗಿ ಬಂಧನಕ್ಕೊಳಗಾಗದೇ ಇರುವಾಗ) ಇವೆರಡೂ ಅದು ಹೇಗೆ
ಸೃಷ್ಟಿಕ್ರಿಯೆಗೆ ಸಹಕರಿಸುತ್ತವೆ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ? ಈ ರೀತಿಯ ಸಹಕಾರವು ಒಬ್ಬ ಕುರುಡ
ಹಾಗು ಒಬ್ಬ ಕುಂಟ ಒಗ್ಗಟ್ಟಾಗಿ ಕಾಡಿನಿಂದ ಹೊರಬರುವ ತರದಲ್ಲಿರುತ್ತದೆ; ಕುರುಡನು ಹೆಳವನನ್ನು ಹೊತ್ತುಕೊಂಡು
ಅವನ ನಿರ್ದೇಶನದಂತೆ ಸರಿಯಾದ ರಸ್ತೆಗೆ ಬರುವಂತೆ. ಸಾಂಖ್ಯರು ತಮ್ಮ ವಾದವನ್ನು ಪ್ರತಿಪಾದಿಸಲು ಇನ್ನೊಂದು
ಉದಾಹರಣೆಯನ್ನು ಮುಂದಿಡುತ್ತಾರೆ - ತನ್ನ ಸಮೀಪದಲ್ಲಿ ಕರುವಿದ್ದಾಗ ಆಕಳ ಕೆಚ್ಚಲಿನಿಂದ ಅಪ್ರಚೋದಿತವಾಗಿ
ಹಾಲು ಸ್ರವಿಸುವಂತೆ.
ಪ್ರಕೃತಿಯಿಂದ ಸೃಷ್ಟಿಕ್ರಿಯೆಯ ಉಗಮವು ಈ ರೀತಿ
ಇರುತ್ತದೆ: ಗುಣಗಳು ಒಂದರೊಂದಿಗೆ ಮತ್ತೊಂದು ಸಂಕರಗೊಂಡಾಗ (ಕಲೆತಾಗ) ಪ್ರಕೃತಿಯಿಂದ ಲಬ್ದವಾಗುವ ಪ್ರಥಮ
ಸಂಕರವೇ ಮಹತ್ ಅಥವಾ ಬುದ್ಧಿ (ವಿಶ್ವದ ಬುದ್ಧಿ). ಈ ಮಹತ್ತಿನಿಂದ ಉಂಟಾಗುವುದೇ ಅಹಂಕಾರ (ವಿಶ್ವದ
ಅಹಂಕಾರ - ನಾನು ಎನ್ನುವ ತತ್ವ). ಅಹಂಕಾರದ ಸಾತ್ವಿಕ ಅಂಶದಿಂದ ಮನಸ್ (ವಿಶ್ವದ ಮನಸ್ಸು), ಐದು ಜ್ಞಾನೇಂದ್ರಿಯಗಳು
(ವಿಶ್ವದ - ಕಣ್ಣು, ಕಿವಿ ಮೊದಲಾದ ಜ್ಞಾನೇಂದ್ರಿಯಗಳು), ಮತ್ತು ರಾಜಸಿಕ ಅಂಶದಿಂದ
ಐದು ಕರ್ಮೇಂದ್ರಿಯಗಳು (ವಿಶ್ವದ ಕರ್ಮೇಂದ್ರಿಯಗಳಾದ ಕೈ, ಕಾಲು ಮೊದಲಾದವುಗಳು) ಉದ್ಭವಿಸುತ್ತವೆ.
ಅಹಂಕಾರದ ತಾಮಸಿಕ ಅಂಶದಿಂದ ಐದು ತನ್ಮಾತ್ರಗಳು (ಸೂಕ್ಷ್ಮ ರೂಪದ ಪೃಥ್ವಿ , ಜಲ ಮೊದಲಾದವುಗಳು) ಮತ್ತು
ಅವುಗಳಿಂದ ಸ್ಥೂಲ ರೂಪದ ಪಂಚ ಮಹಾಭೂತಗಳಾದ ಪೃಥ್ವಿ, ಅಪ್, ತೇಜ, ವಾಯು ಮತ್ತು ಆಕಾಶ ಇವುಗಳು ಉದ್ಭವಿಸುತ್ತವೆ.
ಒಟ್ಟಿನಲ್ಲಿ ಪ್ರಕೃತಿಯನ್ನು ಒಳಗೊಂಡು
೨೪ ಆಕಾಶ ತತ್ವಗಳು ಅಥವಾ ಧಾತುಗಳು ಉಂಟಾಗುತ್ತವೆ. ಉಳಿದ ಸೃಷ್ಟಿಕ್ರಿಯೆಯು ಈ ವಿವಿಧ ಧಾತುಗಳ ಸಂಕೀರ್ಣತಗೆಳಿಂದ
ಉಂಟಾದ ಸಂಯೋಜನೆಗಳಿಂದ ಒಡಗೂಡಿ ಪ್ರತಿಯೊಬ್ಬ ಪುರುಷನು ಒಂದು 'ಮನೋಭೌತಿಕ ಸಂಕೀರ್ಣ'(ಕಾಯ/ದೇಹ)ವನ್ನು
ತನ್ನ ಕರ್ಮಫಲಕ್ಕನುಗುಣವಾಗಿ ಪಡೆಯುವಲ್ಲಿ ಮುಗಿಯುತ್ತದೆ.
ಬಂಧನ ಮತ್ತು ಬಿಡುಗಡೆ
ಸೋಜಿಗದ ಸಂಗತಿಯೆಂದರೆ ಸಾಂಖ್ಯ ತತ್ವಸಿದ್ಧಾಂತದ
ಪ್ರಕಾರ ಈ ಪ್ರಪಂಚವನ್ನು ಸೃಷ್ಟಿಯು ಸೃಜಿಸುವುದರ ಹಿಂದಿರುವ ಮೂಲ ಉದ್ದೇಶ ಪುರುಷನಿಗೆ ಮುಕ್ತಿ ಹೊಂದಲು
ಮತ್ತೊಂದು ಅವಕಾಶವನ್ನು ಒದಗಿಸುವುದು. ಮತ್ತದೇ ಪ್ರಕೃತಿ ಮತ್ತದರ ಉತ್ಪನ್ನವಾದ ಈ ಪ್ರಪಂಚ ಅವನನ್ನು
ಮತ್ತೊಮ್ಮೆ ಬದ್ಧನಾಗಿಸುತ್ತದೆ (ಬಂಧನಕ್ಕೊಳಪಡಿಸುತ್ತದೆ)!
ಪುರುಷನು ಪ್ರಾಪಂಚಿಕತೆಯ ಸುಳಿಗೆ ಸಿಕ್ಕಿವುದು
ಮತ್ತು ದುಃಖವನ್ನು ಅನುಭವಿಸುವುದು 'ಅವಿವೇಕ' ಅಥವಾ 'ಅಜ್ಞಾನ'ದಿಂದಾಗಿ ಅಂದರೆ; ನಿತ್ಯಶುದ್ಧ ಮತ್ತು
ಚೈತ್ಯನ್ಯ ಸ್ವರೂಪಿಯಾದ 'ಪುರುಷ'ನು ತನಗೂ ಮತ್ತು ಜಡ ಹಾಗೂ ಚೈತನ್ಯರಹಿತವಾದ 'ಪ್ರಕೃತಿ'ಗೂ ಭೇದವನ್ನು
ಕಂಡುಕೊಳ್ಳದೇ ಹೋಗುವುದು. ಈ ಅಜ್ಞಾನದಿಂದಾಗಿಯೇ ಪುರುಷನು ಜನನ-ಮರಣಗಳ ಸ್ಥಿತಿಗಳಿಗೊಳಗಾಗುತ್ತಾನೆ
ಅಥವಾ ಕೊನೆಯಿಲ್ಲದ ಪುನರ್ಜನ್ಮಗಳ ಚಕ್ರಕ್ಕೆ ಸಿಲುಕುತ್ತಾನೆ.
ಈ ಗೊಂದಲದೊಳಗೆ ಹೇಗೆ ಮತ್ತು ಯಾವಾಗ
ಪುರುಷನು ಸಿಲುಕಿಕೊಂಡ ಎನ್ನುವುದನ್ನು ಉತ್ತರಿಸುವುದು ಸಾಧ್ಯವಿಲ್ಲ ಆದರೆ ಇದು 'ಅನಾದಿ' (ಪ್ರಾರಂಭರಹಿತವಾದದ್ದು)
ಆದರೂ ಇದು 'ಸಾಂತ'ವಾದದ್ದು(ಕೊನೆಯಿರುವಂಥಾದ್ದು).
'ಅವಿವೇಕ' ಅಥವಾ 'ಅಜ್ಞಾನ'ದಿಂದಾಗಿ
ಪುರುಷನು ಪ್ರಾಪಂಚಿಕ ಬಂಧನದಲ್ಲಿ ಸಿಲುಕುವುದರಿಂದ, 'ಕೈವಲ್ಯ' ಅಥವಾ 'ಮುಕ್ತಿ'ಯು ಕೇವಲ 'ವಿವೇಕಖ್ಯಾತಿ'
ಅಥವಾ ನಿಜವಾದ ಜ್ಞಾನದಿಂದ ಮಾತ್ರವೇ ಲಭ್ಯವಾಗುವುದು. 'ಖ್ಯಾತಿ' ಎಂದರೆ 'ಜ್ಞಾನ' (ಅಂದರೆ ನೇರವಾದ
ಗ್ರಹಿಕೆ ಎನ್ನುವ ಅರ್ಥದಲ್ಲಿ) ಮತ್ತು 'ವಿವೇಕ'ವೆಂದರೆ ಪುರುಷನು ತಾನು ಶುದ್ಧವಾದ ಚೇತನರೂಪಿಯೆಂದೂ
ಮತ್ತು ತನಗೂ ಹಾಗೂ ಅಚೇತನವಾದ ಜಡ ಪ್ರಕೃತಿಯು ಬೇರೆಯೆಂದು ಅರಿಯುವುದು. ಈ ತಿಳುವಳಿಕೆಯನ್ನು ಯೋಗದ
ಅಷ್ಟಾಂಗಗಳನ್ನು ಅನುಸರಿಸುವುದರಿಂದ ಗಳಿಸಿಕೊಳ್ಳಬಹುದು; ಇಲ್ಲಿ ಪುರುಷ ಅಥವಾ ಆತ್ಮವು ಧ್ಯಾನದ ವಸ್ತುವಾಗಿರುತ್ತದೆ.
ಸಾಂಖ್ಯ ದರ್ಶನವು ಎರಡು ವಿಧವಾದ ಮುಕ್ತಿಯನ್ನು
ಒಪ್ಪಿಕೊಳ್ಳುತ್ತದೆ, ಅವೆಂದರೆ 'ಜೀವನ್ಮುಕ್ತಿ' ಮತ್ತು 'ವಿದೇಹಮುಕ್ತಿ'. 'ಜೀವನ್ಮುಕ್ತಿ'ಯು ಜೀವಿಸಿರುವಾಗಲೇ
ಹೊಂದಲ್ಪಡುತ್ತದೆ; ಅಂದರೆ ದೇಹವು 'ಪ್ರಾರಬ್ಧ ಕರ್ಮ'ವು ಅಂದರೆ ಈ ಜನ್ಮಕ್ಕೆ ಕಾರಣವಾದ ಕರ್ಮವು ಅಂತ್ಯಗೊಳ್ಳುವ
ತನಕ ಇರುತ್ತದೆ. ಈ ಸ್ಥಿತಿಯಲ್ಲಿ ಮುಕ್ತ ಪುರುಷನು ಪ್ರಪಂಚದಲ್ಲಿ ಜೀವನವನ್ನು ಮುಂದುವರೆಸುತ್ತಾನೆ;
ಪ್ರಾಪಂಚಿಕತೆಯನ್ನು ಬದಿಗಿಟ್ಟು.
ಅಂತಿಮ ಮುಕ್ತಿಯು ದೇಹವು ಮರಣಿಸಿದ
ನಂತರ ಉಂಟಾಗುತ್ತದೆ ಆದ್ದರಿಂದ ಅದನ್ನು 'ವಿದೇಹಮುಕ್ತಿ' ಎನ್ನುತ್ತಾರೆ; ಇಲ್ಲಿ ಪುರುಷನು ಮತ್ತೆ
ಈ ದೈನಂದಿನ ಕಾರ್ಯ ಪ್ರಪಂಚಕ್ಕೆ ಹಿಂತಿರುಗುವುದಿಲ್ಲ.
ಅವನು ಎಲ್ಲಾ ವಿಧವಾದ ನೋವು ಮತ್ತು ಯಾತನೆಯಿಂದ ಪೂರ್ಣಮುಕ್ತಿಯನ್ನು ಹೊಂದಿದ ಸ್ಥಿತಿಯಲ್ಲಿರುತ್ತಾನೆ;
ಆದರೆ ನಿತ್ಯಾನಂದದಲ್ಲಿ ಅಲ್ಲ. ಆದರೆ ಚೈತನ್ಯ ಅಥವಾ ಪ್ರಜ್ಞೆಯು ಅವನ ಸ್ವರೂಪವಾದ್ದರಿಂದ ಅವನು ತನ್ನ
ಆ ಸ್ಥಿತಿಯಲ್ಲೇ ನಿತ್ಯವಾಗಿ ಇರುತ್ತಾನೆ.
******
Subscribe to:
Posts (Atom)