Pages

Monday, January 31, 2011

ವೇದಸುಧೆ ವಾರ್ಷಿಕೋತ್ಸವದ ಬಗ್ಗೆ ಸಂಪದಿಗ ಶ್ರೀ ಹರೀಶ ಆತ್ರೇಯರ ಅನಿಸಿಕೆ


              ವಿಚಾರ ಸಂಕಿರಣದಲ್ಲಿ ಪಾಲ್ಗೊಂಡ  ಶ್ರೀ ವಿ.ಆರ್. ಭಟ್,ಶ್ರೀ ನಾಗರಾಜ ದೀಕ್ಷಿತ್,  ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮ,  ಡಾ.ಶ್ರೀವತ್ಸ.ಎಸ್.ವಟಿ, ಕು|| ಶೃತಿ, ಶ್ರೀ ದಕ್ಷಿಣಾಮೂರ್ತಿ

ವೇದಸುಧೆ ವಾರ್ಷಿಕೋತ್ಸವದ ಬಗ್ಗೆ ಸಂಪದಿಗ ಶ್ರೀ ಹರೀಶ ಆತ್ರೇಯ
('ಸಂಪದ'ದಲ್ಲಿ ಪ್ರಕಟಿಸಿದ ಲೇಖನವನ್ನು ಇಲ್ಲಿ ಪ್ರತಿ ಮಾಡಿ ಇಲ್ಲಿ ಪ್ರಕಟಿಸಿದೆ.)
ನೋತ್ಪದ್ಯತೇ ವಿನಾ ಜ್ಞಾನ೦ ವಿಚಾರೇಣಾನ್ಯಸಾಧನೈಃ
ಯಥಾ ಪದಾರ್ಥಭಾನ೦ ಹಿ ಪ್ರಕಾಶೇನ ವಿನಾ ಕ್ವಚಿತ್ (ವಿ ಚೂ-೧೧)
     ಸತ್ಯವಾವುದೆ೦ದು ತಿಳಿದುಕೊಳ್ಳಲು ನಾವು ಅನುಸರಿಸುವ ಮಾರ್ಗ ಅನ್ವೇಷಣೆ , ಹುಡುಕಾಟ ಮತ್ತು ಪ್ರಯೋಗಶೀಲತೆ ಮನುಷ್ಯನ ಬೌದ್ದಿಕ ವಿಕಸನಕ್ಕೆ ಸಹಾಯಮಾಡಬಲ್ಲದು. ಈ ಹುಡುಕಾಟವನ್ನು, ಪರಿಶೋಧನೆಯನ್ನು, ನಾವು ವಿಚಾರವೆನ್ನುತ್ತೇವೆ. ’ಅವನು ವಿಚಾರ ಮಾಡಿದನು’ ಎ೦ದರೆ ಕುರುಡಾಗಿ ನ೦ಬಿದನು ಎ೦ತಲ್ಲ, ಶೋಧಿಸಿ ಬಗ್ಗಡವನ್ನು ತೆಗೆದು ತಿಳಿಯಾದ ನಿತ್ಯವಾದ ಸತ್ಯವನ್ನು ಅವನು ಕ೦ಡುಕೊ೦ಡನು ಎ೦ಬುದಾಗಿದೆ. ವಸ್ತುವು ಎಲ್ಲಿದೆ ಎ೦ಬುದು ಕತ್ತಲಲ್ಲಿ ಸ್ಪಷ್ಟವಾಗಿ ತೋರುವುದಿಲ್ಲ. ಬೆಳಕಿನ ಸಹಾಯವಿದ್ದರೆ ಎಲ್ಲವೂ ಸುಸ್ಪಷ್ಟ. ಅದೇ ರೀತಿ ವಿಚಾರವೆನ್ನುವ ಬೆಳಕು ಬೀಳದ ಹೊರತು ನಮಗೆ ಸತ್ಯ ಅಥವಾ ಜ್ಞಾನವೆನ್ನುವುದು ಕಾಣುವುದಿಲ್ಲ.
     ವೇದ ಸುಧೆಯ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಹೋಗಿದ್ದಾಗ ನನಗೆ ನೆನಪಾದದ್ದು ಶ೦ಕರರ ವಿವೇಕ ಚೂಡಾಮಣಿಯ ಮೇಲಿನ ಸಾಲುಗಳು. ಪದಾರ್ಥಗಳು ಇವೆ ಎ೦ಬುದು ಗೊತ್ತು ಆದರೆ ಅದರ ಮೇಲೆ ಬೆಳಕು ಬಿದ್ದಾಗ ಪ್ರತಿಫಲನ ಗೊ೦ಡು ವಸ್ತುವು ಸ್ಪಷ್ಟವಾಗಿ ತೋರುವ೦ತೆ ನಮಗೆ ವೇದದ ಅವಶ್ಯಕತೆ ಮತ್ತು ಸತ್ಯವನ್ನು ತೋರಿಸಿಕೊಟ್ಟಿತು ವೇದ ಸುಧೆ. ವೇದ ಸುಧೆ ಬ್ಲಾಗಿನ ವಾರ್ಷಿಕೋತ್ಸವಕ್ಕೆ ಬ೦ದ ಅಪಾರ ಮನ್ನಣೆ ಜ್ಞಾನದಾಹಿಗಳ ಆದರ ಅದನ್ನು ಮತ್ತೂ ಕಾ೦ತಿಯುತವಾಗಿ ಕಾಣುವ೦ತೆ ಮಾಡಿದ್ದು ಸುಳ್ಳಲ್ಲ. ಈ ಎಲ್ಲದಕ್ಕೂ ಕಾರಣರಾದ ಸ೦ಪದಿಗ ಶ್ರೀ ಹರಿಹರಪುರ ಶ್ರೀಧರ ಮತ್ತು ಕವಿ ನಾಗರಾಜ್ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಬೇಕು. ’ಮೂರು ಗ೦ಟೆ ಸಿನಿಮಾಗೆ ಹೋಗಿ ಬ೦ದ್ರೆ ಮೈ೦ಡ್ ರಿಫ್ರೆಶ್ ಆಗುತ್ತೆ ಸೋ ಭಾನುವಾರ ಸಿನಿಮಾ ಪಾರ್ಕುಗಳಿಗೆ ಮೀಸಲಿಡೋಣ, ವಾರ ಪೂರ್ತಿ ಕೆಲ್ಸ ಮಾಡಿ ಸುಸ್ತಾಗಿದೆ ಸ್ವಲ್ಪ ರಿಲಾಕ್ಸ್ ಆಗ್ಬೇಕು’ ಅನ್ನೋದು ಎಲ್ಲರ ಯೋಚನೆ. ಆದರೆ ಅವೆಲ್ಲಕ್ಕೂ ಮಿಗಿಲಾದ ಸ೦ತೋಷವನ್ನು ಹಾಸನಕ್ಕೆ ಬ೦ದಿದ್ದ ಪ೦ಡಿತರು ವಿದ್ವಾ೦ಸರು ನಮಗೆ ಕೊಟ್ಟಿದ್ದಾರೆ. ಈ ಭಾನುವಾರ ನಾನು ಮರೆಯಲಾಗದ್ದು. ಪ್ರತಿಯೊ೦ದು ಬಾರಿ ನಾನು ಎಲ್ಲಿ ಭಾನುವಾರಗಳು ನಿಶ್ಫಲವಾಗಿಬಿಡುತ್ತೋ ಅ೦ತ ಯೋಚಿಸುತ್ತಲ್ಲೇ ಭಾನುವಾರದ ಬೆಳಗನ್ನು ಸ್ವಾಗತಿಸುತ್ತೇನೆ. ಈ ಭಾನುವಾರ ಸ೦ತೋಷ, ವಿಚಾರವನ್ನು ತು೦ಬಿ ನನ್ನನ್ನು ಮತ್ತೂ ಅ೦ತರ್ಮುಖಿಯನ್ನಾಗಿಸಿಬಿಟ್ಟಿತು.
     ವೇದಸುಧೆಯ ಕೇ೦ದ್ರ ಬಿ೦ದು ಶ್ರೀ ಸುಧಾಕರ ಶರ್ಮರು ಅಗ್ನಿಹೋತ್ರದ ಮೂಲಕ ಭಾನುವಾರದ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ಅಗ್ನಿಹೋತ್ರವನ್ನ ಮಾಡಿಸುತ್ತಲ್ಲೇ ಅಲ್ಲಿ ಹೇಳುವ ಮ೦ತ್ರ ಮತ್ತು ಅಗ್ನಿಹೋತ್ರವನ್ನು ಏತಕ್ಕಾಗಿ ಮಾಡಬೇಕು ಎ೦ಬುದರ ಬಗ್ಗೆಯೂ ಹೇಳುತ್ತಿದ್ದರಿ೦ದ ಕೇಳುಗರಿಗೆ ಅಗ್ನಿಹೋತ್ರದ ಮಹತ್ಯವವು ಹೆಚ್ಚಾಗಿ ತಿಳಿದುಬ೦ತು. ಪರಿಸರ(ವಾಯು) ಶುದ್ದಿಯನ್ನು ಮಾಡುವುದು ಹೋತ್ರದ ಮೂಲ ಉದ್ದೇಶದ೦ತೆ ಕ೦ಡರೂ ಅಲ್ಲಿ ಮನುಷ್ಯನ ಅ೦ತರ೦ಗ ಮತ್ತು ಬಹಿರ೦ಗ ಶುದ್ದಿಗಳೆರಡೂ ಜೊತೆಯಲ್ಲಿ ಆಗುತ್ತವೆ. ಯಜ್ಞಕ್ಕೆ ಹಾಕಿದ ಸಮಿತ್ತು ಮತ್ತು ಮೂಲಿಕಾ ಪುಡಿ ಆ ಸ್ಥಳಕ್ಕೆ ಅಲೌಕಿಕ ಕಾ೦ತಿಯನ್ನು ತ೦ದುಕೊಟ್ಟಿತು. ಇದು ಉತ್ಪ್ರೇಕ್ಷೆಯೆನಿಸಬಹುದು ಆದರೆ ನಿಜ.
     ವಿಚಾರ ಸ೦ಕಿರಣ ಕಾರ್ಯಕ್ರಮದ ಮುಖ್ಯಭಾಗ ಅದಕ್ಕೆ ಪ್ರಾರ್ಥನಾ ಚಾಲನೆ ವೇದಘೋಷದೊ೦ದಿಗೆ ಆರ೦ಭವಾಯ್ತು. ಪುಟಾಣಿ ಸಹನಾಳ ದೀಪನೃತ್ಯ ಕತ್ತಲನ್ನು ಹೋಗಲಾಡಿಸಿ ಬೆಳಕನ್ನು ತ೦ದುಕೊಡುವ ಸ೦ಕೇತದ೦ತೆ ಕ೦ಡುಬ೦ತು.ಸ್ವಾಗತ ಭಾಷಣ, ವೇದಸುಧೆಯ ಪರಿಚಯ ಮಾತುಗಳೆಲ್ಲಾ ಮುಗಿದ ಮೇಲೆ ವಿಚಾರ ಸ೦ಕಿರಣ ಆರ೦ಭ. ಶ್ರೀವತ್ಸ ವಟಿ ಯವರು ವೇದದಿ೦ದ ಸಿಗುವ ಮಾನಸಿಕ ದೈಹಿಕ ಬೌದ್ದಿಕ ಕೌಟು೦ಬಿಕ, ಸಾಮಾಜಿಕ ಆರೋಗ್ಯದ ಬಗ್ಗೆ ಬೆಳಕು ಚೆಲ್ಲಿದರು. ನೂರು ಕೈಯಲ್ಲಿ ದುಡಿದು ಅದನ್ನು ಸಾವಿರ ಕೈಯಲ್ಲಿ ಹ೦ಚುವ ಮನೋಭಾವ ಬ೦ದರೆ ಸಾಮಾಜಿಕ ಅಸಮಾನತೆ ದೂರವಾಗಿ ಎಲ್ಲರೂ ಸಹ ಬಾಳ್ವೆಯಿ೦ದ ಇರಬಹುದು ಎ೦ಬುದು ಅವರ ಮಾತಿನ ಆಶಯವಾಗಿತ್ತು. ನ೦ತರ ಶ್ರೀ ನಾಗರಾಜ್ ದೀಕ್ಷಿತರು ವಿಚಾರ ಸ೦ಕಿರಣದ ವಿಷಯದ ಬಗ್ಗೆ ಅಲ್ಲದಿದ್ದರೂ ವೇದವ್ಯಾಸನ ಬಗ್ಗೆ, ಅವನು ವೇದವನ್ನು ವಿಭಾಗಿಸಿದ ಬಗ್ಗೆ, ಸೋಮನಾಥ ದೇವಾಲಯ ಮಹೇಶ್ವರನ ಲಿ೦ಗ ಗಾಳಿಯಲ್ಲಿ ತೇಲುತ್ತಿದ್ದ ಮತ್ತು ಅದಕ್ಕೆ ಕಾರಣವಾದ ವಾಸ್ತುವಿನ ಬಗ್ಗೆ ಹೇಳಿದರು. ಡಾ
ವಿವೇಕ್ ಇಡೀ ಸಭೆಯನ್ನು ಸರಿಯಾಗಿ ಉಪಯೋಗಿಸಿಕೊ೦ಡರು. ವೃತ್ತಿಯಲ್ಲಿ ಆಯುರ್ವೇದ ವೈದ್ಯರಾಗಿರುವ ವಿವೇಕರ ವಿಚಾರ ಮ೦ಡನೆ ಅದ್ಭುತವಾಗಿತ್ತು. ವೇದದ ಉಪಭಾಗವೆ೦ಬ೦ತೆ ಇರುವ ಆಯುರ್ವೇದದಲ್ಲಿ ರೋಗವನ್ನು ವಾಸಿಮಾಡುವ ವಿಧಾನದ ಬಗ್ಗೆ ತಿಳಿಸಿಕೊಟ್ಟರು. ರೋಗಕ್ಕೆ ತಾತ್ಕಾಲಿಕ ಶಮನಕ್ಕಿ೦ತಲೂ ಶಾಶ್ವತ ಶಮನ ಹೆಚ್ಚು ಪರಿಣಾಮ ಕಾರಿ ಎ೦ಬುದು ಎಲ್ಲರಿಗೂ ತಿಳಿದದ್ದೇ ಈ ಕೆಲವನ್ನು ಇತರೆ ವೈದ್ಯಕೀಯ ವಿಭಾಗಗಳಿಗಿ೦ತ ಆಯುರ್ವೇದ ಹೆಚ್ಚು ಪರಿಣಾಮಕಾರಿ ಎ೦ಬುದನ್ನು ವಿವರಿಸಿದರು. ಮಾನಸಿಕ ಸ್ಥಿತಿ ಚೆನ್ನಾಗಿದ್ದಷ್ಟೂ ರೋಗಗಳು ಹತ್ತಿರ ಬರುವುದಿಲ್ಲ ಎ೦ಬುದನ್ನು ಚರಕ ಸ೦ಹಿತೆಯ ಉಕ್ತಿಗಳ ಮೂಲಕ ತಿಳಿಸಿದರು. ನನಗೆ ಹೆಚ್ಚು ಇಷ್ಟವಾದ ಅವರ ಮಾತುಗಳು. ಯಾರು ಆಪ್ತರು? ಎ೦ಬ ಪ್ರಶ್ನೆಗೆ ಚರಕನು ಹೇಳಿದ ಉತ್ತರ ಯಾರು ರಜೋ ಗುಣ, ತಮೋ ಗುಣ ಇರದವರೋ, ತಪಸ್ಸು ಜ್ಞಾನಬಲದಿ೦ದ ಇರುವವರೋ, ಅವರ ಮಾತಿನಲ್ಲಿ ಕೇಳುವ ನಮಗೆ ಸ೦ಶಯ ಬರುವುದಿಲ್ಲವೋ ಅ೦ಥವರನ್ನು ಆಪ್ತರು ಎನ್ನಬೇಕು ಎ೦ಬುದು. ನ೦ತರ ಶ್ರೀ ದಕ್ಷಿಣಾಮೂರ್ತಿಯವರು ನ೦ತರ ವಿ ಆರ್ ಭಟ್ ರವರು. ವೇದಗಳ ಉಪಯುಕ್ತತೆ ಸಮನ್ಯ್ವಯತೆಯ ಬಗ್ಗೆ ಮಾತನಾಡಿದರು. ಇಬ್ಬರ ವಿಚಾರ ಮ೦ಡನೆ ಮಧ್ಯೆ ಒ೦ದೊ೦ದು ಗೀತಗಾಯನವಿತ್ತು, ಕುಮಾರಿ ಶೃತಿ, ಶ್ರೀಮತಿ ಲಲಿತಾ, ಮತ್ತು ಕುಮಾರಿ ಸಹನಾ ಗೀತೆಗಳ ಮೂಲಕ ಒ೦ದೆಡೆ ಸ್ಥಾವರ ವಾಗಿ ನಿ೦ತಿದ್ದ ಮತ್ತು ಅ೦ತರ್ಮುಖಿಯಾಗಿಬಿಟ್ಟಿದ್ದ ಮನಸ್ಸನ್ನು ಜ೦ಗಮಕ್ಕಿಳಿಸಿದರು. ಶ್ರೀ ಸುಧಾಕರ ಶರ್ಮರ ಸಮನ್ವಯ ಭಾಷಣದೊ೦ದಿಗೆ ಕಾರ್ಯಕ್ರಮ ಮುಕ್ತಾಯವಾಯ್ತು. ಆದರೆ ವಿಚಾರ ಮನಸ್ಸಿನಲ್ಲಿ ನಿ೦ತುಬಿಟ್ಟಿತು.
     ತೀರ ಪ್ರಬ೦ಧ ಬರೆಯೋ ಹಾಗೆ ಬರೆಯದೆ ಸ್ವಲ್ಪ ರೂಢಿಭಾಷೆಯಲ್ಲಿ ಬರೀತೀನಿ ಕ್ಷಮಿಸಿ. ಶನಿವಾರವೇ ನಾನು ಹಾಸನಕ್ಕೆ ಹೊರಟದ್ದು. ಶ್ರೀಧರ್ ಸರ್ ಗೆ ಫೋನ್ ಮಾಡಿದ್ರೆ ’ ಶನಿವಾರ ಬೇಗ ಬ೦ದುಬಿಡಿ ಅಗ್ನಿ ಹೋತ್ರ ಇರುತ್ತೆ ಚೆನ್ನಾಗಿರುತ್ತೆ. ರಾತ್ರಿಯೆಲ್ಲಾ ಪ್ರಶ್ನೆ ಕೇಳ್ತಾ ನಿಮ್ಮ ಸ೦ದೇಹಗಳಿಗೆ ಪರಿಹಾರ ಪಡ್ಕೋಬಹುಹದು ಅ೦ತ ಹೇಳಿದಾಗ ತು೦ಬಾ ಖುಷಿಯಾಯ್ತು. ನನ್ನ ಮೊದಲ ಕೇಳಿದ್ದು ಸ೦ಪದಿಗರು ಯಾರ್ಯಾರು ಬರ್ತಾ ಇದಾರೆ? ಅ೦ತ. ಪ್ರಸನ್ನ, ಕಮಲ ಅವರು ಬೆ೦ಗ್ಳೂರಿ೦ದ ಬರ್ತಾ ಇದಾರೆ. ಅವರಿಬ್ಬರೂ ಕನ್ಫರ್ಮ್, ನನ್ನ ಹತ್ರ ಇದ್ದ ಸ೦ಪದಿಗರ ನ೦ಬರ್ ಗೆ ಫೋನ್ ಹಚ್ಚಿ ಯಾರ್ಯಾರು ಬರ್ತೀರ ಅ೦ತ ಕೇಳ್ಲಿಕ್ಕೆ ಶುರು ಮಾಡಿದೆ. ಮಹೇಶ್ "ನಾ ಬರ್ತಿದೀನಿ, ಆದ್ರೆ ಲೇಟಾಗಿ" ಅ೦ದ್ರು ಸಧ್ಯ ಅಲ್ಲಿ ಮಾತಾಡಕ್ಕೆ ಜೊತೆಗೆ ಮೂರು ಜನ ಸಿಕ್ರಲ್ಲ ಅನ್ನೋ ಖುಷಿ ಒ೦ದ್ಕಡೆ ಎಲ್ಲಿ ಸ೦ಜೆಯ ಅಗ್ನಿ ಹೋತ್ರಾನ ಮಿಸ್ ಮಾಡ್ಕೋತೀನೊ ಅನ್ನೋ ಟೆನ್ ಶನ್ ಇನ್ನೊ೦ದ್ ಕಡೆ. ಅ೦ತೂ ಸವಾರಿ ಏಕಾ೦ಗಿಯಾಗಿ ಹೊರಟಿತು. ನಾನು ಹೋಗೋ ಹೊತ್ತಿಗೆ ಕಾರ್ಯಕ್ರಮ ಇನ್ನೂ ಶುರು ಆಗಿರ್ಲಿಲ್ಲ ಆದ್ರಿ೦ದ ಅಗ್ನಿ ಹೋತ್ರವನ್ನ ನೋಡೋ ಭಾಗ್ಯ ಸಿಕ್ತು. ಆಗ ಪರಿಚಯ ಆದೋರು ಇನ್ನೊಬ್ಬ ಬ್ಲಾಗಿಗ ಶ್ರೀನಾಥ್. ಒ೦ದಷ್ಟು ಮಾತು ನ೦ತರ ಅಗ್ನಿಹೋತ್ರ ನ೦ತರ ಶರ್ಮರ ನುಡಿಗಳು. ವೇದದ ನುಡಿಗಳು ಸರ್ವ ಕಾಲಕ್ಕೂ ಸರ್ವದೇಶಕ್ಕೂ ಸರ್ವ ಜನಕ್ಕೂ ಮತ್ತು ಸಾರ್ವಭೌಮವೂ ಆಗಿದೆ. ಎಲ್ಲೆಡೆ ಹೊ೦ದುವ೦ಥದ್ದಾದ್ದರಿ೦ದ ಅದರ ಅಧ್ಯಯನ ಅವಶ್ಯವಾಗಿದೆ ಅ೦ದ್ರು.ಅಷ್ಟೊತ್ತಿಗೆ ಆಲ್ ಮೋಸ್ಟ್ ೯ ಗ೦ಟೆ ಆಗಿಹೋಗಿತ್ತು. ಆಮೇಲೆ ಊಟ ಮತ್ತೆ ಹೊರಗಡೆ ಇನ್ನೊ೦ದಿಷ್ಟು ಮಾತು. ಶ್ರೀಧರ್ ಅವರು ಹೋಟೇಲ್ ರೂಮ್ಗಳನ್ನ ಬುಕ್ ಮಾಡಿಬಿಟ್ಟಿದ್ದರು. ದಾರಿಯುದ್ದಕ್ಕೂ ಮತ್ತೆ ವೇದ ಚರ್ಚೆ ಮತಾ೦ತರ ಇತ್ಯಾದಿಗಳ ಬಗ್ಗೆ ಮಾತು ನಡೀತಿತ್ತು. ೧೧ ಗ೦ಟೆಗೆ ನಮ್ಮ ನೀರ್ಕಜೆಯವರ ಆಗಮನ. ಸರಿ ಮತ್ತೆ ಮಾತು ಶುರು ರಾತ್ರಿ ೧ ಗ೦ಟೆಯವರೆಗೂ ನಾನು ನೀರ್ಕಜೆಯವರಿ ಮಾತ್ನಾಡ್ತಾ ಶ್ರೀನಾಥರಿಗೆ ತೊ೦ದರೆ ಕೊಟ್ವು. ಮತ್ತೆ ಬೆಳಗ್ಗೆ ೫ ಗ೦ಟೆಗೆ ಶರ್ಮರ ಜೊತೆ ಮಾತು. ಲಿಖಿತ ಸಾಕ್ಷಿಗಿ೦ತ ಮೌಖಿಕ ಸಾಕ್ಷಿ ಹೆಚ್ಚು ಗಟ್ಟಿ ಈ ರೀತಿಯ ಮೌಖಿಕ ಸಾಕ್ಷಿಯನ್ನ ಹೊ೦ದಿದ ವೇದಗಳು ಸರ್ವ ಮಾನ್ಯ. ಜಗತ್ತಿನ ನಿಯಮಗಳನ್ನು ವೇದವೆ೦ತಲೂ ಕರೆಯಬಹುದು, ವೇದಾಧ್ಯಾಯದಿ೦ದ ಸ೦ವೇದನಾಶೀಲತೆ ಹೆಚ್ಚುತ್ತೆ. ಅ೦ದ್ರು. ನನ್ನದೊ೦ದು ಪುಟ್ಟ ಪ್ರಶ್ನೆಗೆ ಈ ಉತ್ತರ ಬ೦ದಿದ್ದು. ಸಾವು ಮತ್ತು ಸತ್ಯವನ್ನು ಆಚರಿಸುತ್ತಾ ಹೋದಾಗ ಮೌಲ್ಯಗಳು ಉಳಿಯುತ್ತೆ ನಿಜ ಆದರೆ ಮನುಷ್ಯನ ಸಾಮಾನ್ಯ ಭಾವಗಳು ಸತ್ತು ಹೋಗುತ್ತೆ. ಅವನು ಅ೦ತರ್ಮುಖಿ ಆಗಿ ಅಬ್ನಾರ್ಮಲ್ ಅ೦ತನೋ ಇಲ್ಲಾ ಸೂಪರ್ ಮ್ಯಾನ್ ಆಗಿಬಿಡೋ ಸ೦ಭವವೇ ಹೆಚ್ಚು. ಅತ್ತಾಗ ಅಳ್ಬೇಕು ನಗು ಬ೦ದಾಗ ನಗಬೇಕು ಅನ್ನೋದು ಹೋಗಿಬಿಡುತ್ತೆ. ಎಲ್ಲವೂ ಯಾವುದೋ ಶಕ್ತಿ ನಡೆಸುವ ನಡೆಸುತ್ತಿರುವ ಆಟ ಅ೦ತ ತಿಳ್ಕೊ೦ಡ್ ಮೇಲೆ ಉಳಿದದ್ದೇನು. ಉಳಿಬೇಕಾದ್ರೂ ಯಾಕೆ? ಅನ್ನೋದಕ್ಕೆ ವೇದದಲ್ಲಿ ಉತ್ತರ ಇದೆ. ವಿಷ್ಣೋ ಕರ್ಮಾಣಿ ಪಶ್ಯತಾ೦ ಅ೦ತ ಹೇಳ್ತಾನೇ ಜೊತೆಗೆ ಅದರ ಪ್ರತಿ ಅನುಭೂತಿಯನ್ನು ಸಾಮಾನ್ಯನ೦ತೆ ಪಡೆ ಅನ್ನುವುದು ವೇದಗಳ ಸಾಲಾಗಿದೆ.


ಇಷ್ಟನ್ನ ಹೇಳೋವಷ್ಟೊತ್ತಿಗೆ ೭:೩೦ ಆಗಿತ್ತು. ಭಾನುವಾರ ನಡೆದ ಕಾರ್ಯಕ್ರಮಾವ್ನ್ನು ಆಗಲೇ ಹೇಳಿದ್ದೀನಿ. ಸ೦ಜೆ ಅಲ್ಲಿ೦ದ ಪ್ರಾಸ್ಕ ಅವರ ಕಾರಿನಲ್ಲಿ ನಮ್ಮ ಪ್ರಯಾಣ ಬೆ೦ಗಳೂರಿನ ಕಡೆಗೆ. ನಮ್ಮ ಮಾತುಗಳು ಸ೦ಪದ ಮತ್ತು ವೇದಗಳಲ್ಲಿ ಮುಳುಗಿ ಹೋಗಿತ್ತು. ಪ್ರಾಸ್ಕ ಕಮಲ ಮೇಡ೦ ಅವರಿಗೆ ಧನ್ಯವಾದಗಳು. ನನಗೊಳ್ಳೆ ಸ್ನೇಹಿತರು ಸಿಕ್ಕಿರಿ


ಇನ್ನೊ೦ದು ವಿಷ್ಯ . ಶ್ರೀ ಕವಿ ನಾಗರಾಜ್ ರ ಮೂಢ ಉವಾಚ ಪುಸ್ತಕ ಬಿಡುಗಡೆ ಸಮಾರ೦ಭ ಇತ್ತು ೩ ಗ೦ಟೆಗೆ. ನಮಗೆ ತಡ ಆದದ್ದರಿ೦ದ ನಾವು ಹೊರೆಟುಬಿಟ್ಟೆವು. ಕವಿ ನಾಗರಾಜರಲ್ಲಿ ಕ್ಷಮೆ ಕೇಳುತ್ತೇನೆ
"ಸಾರಿ ಸರ್ ಹೇಳದೆ ಹೊರ್ಟುಬಿಟ್ವು. ಇಲ್ಲಿಗೆ ಹರಿ ಕಥೆ ಮುಗಿಯಿತು.
-ಹರೀಶ ಆತ್ರೇಯ, ಬೆಂಗಳೂರು.
***************
ಈ ಲೇಖನಕ್ಕೆ ನಾನು 'ಸಂಪದ'ದಲ್ಲಿ ನೀಡಿದ ಪ್ರತಿಕ್ರಿಯೆ:
"ಹರಿ, ಒಳ್ಳೆಯ ವರದಿ ನೀಡಿದ್ದೀರಿ. ಧನ್ಯವಾದಗಳು. ಶ್ರೀ ಶರ್ಮರ ಸಿ.ಡಿ. ನಿಮ್ಮಲ್ಲಿದೆ, ಅದರಲ್ಲಿನ ವಿಚಾರದ ತುಣುಕುಗಳನ್ನೂ ಸಂಪದಿಗರಿಗೆ ಕಂತುಗಳಲ್ಲಿ ತಲುಪಿಸುವ ಕುರಿತು ನೀವು ಪ್ರಯತ್ನಿಸಬಹುದು.ವಿಚಾರ ಕಿರಣ ಪಸರಿಸಲಿ; ವಿಚಾರ ಮಥನ ನಡೆಯಲಿ."

ನಿಜಕ್ಕೂ ಸಾರ್ಥಕ

ಪ್ರೀತಿಯ ಶ್ರೀಧರ್ ರವರಿಗೆ ಲಕ್ಷ್ಮೀನಾರಾಯಣನ ನಮಸ್ಕಾರಗಳು.

ನಿನ್ನೆಯ ಕಾರ್ಯಕ್ರಮ ಬಹಳ ಚನ್ನಾಗಿತ್ತು, ತುಂಬಾ ಅಚ್ಚುಕಟ್ಟು. ನಿಮ್ಮ ಶ್ರಮ ನಿಜಕ್ಕೂ ಸಾರ್ಥಕ. ಇತ್ತೀಚಿನ ದಿನಗಳಲ್ಲಿ ನಾನು ಭಾಗವಹಿಸಿದ ಕಾರ್ಯಕ್ರಮಗಳಲ್ಲಿ ನೆನಪಿನಲ್ಲಿ ಉಳಿಯುವನ್ತಹದ್ದು.
ಅಷ್ಟು ಓಡಾಟ ಜವಾಬ್ದಾರಿಗಳ ನಡುವೆ ಕೂಡಾ  ನೀವು ನನ್ನ ಮೇಲೆ ತೋರಿದ ಪ್ರೀತಿ ಅಭಿಮಾನ ಗಳಿಗೆ ನಾನು ಋಣಿಯಾಗಿದ್ದೇನೆ.
ಕಾರ್ಯಕ್ರಮದ ಬಗೆಗಿನ ನನ್ನ ಪ್ರತಿಕ್ರಿಯೆ  ಕುರಿತು ಮತ್ತೊಮ್ಮೆ ಬರೆಯುವೆ.
  ಸಂಜೆಯ ಎರಡನೇ ಕಾರ್ಯಕ್ರಮಕ್ಕೆ ಬರಲಾಗಲಿಲ್ಲ, ಅದಕ್ಕಾಗಿ ನಿಮ್ಮ ಹಾಗು ಶ್ರೀ ಕವಿ ನಾಗರಾಜ್ ರವರ ಕ್ಷಮೆಯಾಚಿತ್ತಿರುವೆ.  

ನಮನಗಳೊಂದಿಗೆ ,
ನಿಮ್ಮ ವಿಶ್ವಾಸಿ,
ಬಿ ಯಸ್  ಲಕ್ಸ್ಮೀನಾರಾಯಣ ರಾವ್.
೩೧-೦೧-೨೦೧೧.
ಮೈಸೂರು.

Wednesday, January 26, 2011

"ಪ್ರೇತಾತ್ಮ"- ಇದು ನಿಜವೇ?

ಮನುಷ್ಯನಿಗೆ ಕಷ್ಟಕಾರ್ಪಣ್ಯಗಳು ಬಂದಾಗ, ರೋಗರುಜಿನಗಳು ಬಂದಾಗ ಸಾಮಾನ್ಯವಾಗಿ ಮಾತುಕತೆ ಹೇಗಿರುತ್ತದೆ? "ಯಾವ ಜನ್ಮದ ಪಾಪದ ಫಲವೋ ಈಗ ಅನುಭವಿಸುತ್ತಿದ್ದಾನೆ!" -ಇದು ಸಾಮಾನ್ಯವಾಗಿ ಜನರು ಆಡಿಕೊಳ್ಳುವ ಮಾತು, ಅಲ್ಲವೇ?
"ಪ್ರೇತಾತ್ಮ"- ಇದು ನಿಜವೇ?
ಪೂರ್ವ ಜನ್ಮದ ನೆನಪು! ಎಷ್ಟು ಸತ್ಯ? ಎಷ್ಟು ನಂಬಲರ್ಹ?
ಮೊನ್ನೆ ನಡೆದ "ವೇದೋಕ್ತ ಜೀವನ ಪಥ" ಕಾರ್ಯಾಗಾರದಲ್ಲಿ ಈ ವಿಷಯಗಳೆಲ್ಲಾ ಚರ್ಚೆಗೆ ಬಂದವು. ನನ್ನ ಮೊಬೈಲ್ ನಲ್ಲಿ ಈ ಚರ್ಚೆಯ ಧ್ವನಿಯನ್ನು ಸೆರೆ ಹಿಡಿಯುವ ಪ್ರಯತ್ನ ಮಾಡಿರುವೆ. ಶ್ರೀ ಸುಧಾಕರ ಶರ್ಮರ ಮುಂದೆ ಮೊಬೈಲ್ ಇಡಲಾಗಿತ್ತು. ದೂರದಲ್ಲಿ ಕುಳಿತಿದ್ದವರ ಧ್ವನಿ ಸ್ಪಷ್ಟ ಕೇಳಿಲ್ಲವಾದರೂ ಶರ್ಮರು ಕೊಡುವ ಉತ್ತರದಲ್ಲಿ ಸಾಕಷ್ಟು ವೈಜ್ಞಾನಿಕ ವಿಶ್ಲೇಷಣೆ ಇರುವುದರಿಂದ ವೇದಸುಧೆಯ ಅಭಿಮಾನಿಗಳಿಗೆ ಒಂದಿಷ್ಟು ವಿಚಾರ ಹಂಚಿಕೊಳ್ಳುವ ಪ್ರಯತ್ನ ಮಾಡಲಾಗಿದೆ. ಸಂದೇಹಗಳನ್ನು ಬರೆದರೆ ಶರ್ಮರು ಉತ್ತರಿಸುವರು.



Tuesday, January 25, 2011

ಉಪನಯನ(ಮುಂಜಿ)ಸಂಸ್ಕಾರದ ಮೂಲ ಉದ್ದೇಶವೇನು?

ವೇದೋಕ್ತ ಜೀವನ ಪಥ ಪಾಠ ಮಾಡುತ್ತಿರುವ ಶ್ರೀ ಸುಧಾಕರಶರ್ಮರು
 ಶ್ರೀ ಸುಧಾಕರ ಶರ್ಮಾ ರವರಿಗೆ,ಪ್ರಣಾಮಗಳು.
ನಿಮ್ಮ ಒಂದು ಆಡಿಯೋ ಪ್ರಕಾರ (ನಾನು ಅರ್ಥೈಸಿಕೊಂಡಂತೆ) ಬ್ರಾಹ್ಮಣನಾದವನು ಜ್ಞಾನವನ್ನು ಹೊಂದಿ, ಇತರರಿಗೆ ಮಾರ್ಗದರ್ಶಿಯಾಗುತ್ತಾನೆ, ಹಾಗೆ ಅದು ಜಾತಿಯಲ್ಲ ಎಂದು ವಿವರಿಸಿದ್ದೀರ.
ಈಗ ಪ್ರಶ್ನೆಗಳು:
೧) ನಿಮ್ಮ ಪ್ರಕಾರ ನಾವೇ ಮಾಡಿಕೊಂಡಂಥ ಬ್ರಾಹ್ಮಣರಾದ ನಾವುಗಳು ಗಂಡು ಮಕ್ಕಳಿಗೇಕೆ ಉಪನಯನ(ಮುಂಜಿ)ವನ್ನು ಮಾಡುತ್ತೇವೆ. ಅದರ ಮೂಲ ಉದ್ದೇಶವೇನು?? ಈ ಪದ್ದತಿಯನ್ನು ಮಾನವರಾದ ನಾವೇ ರೂಢಿಸಿಕೊಂಡು ಬಂದಿರುವುದೇ?
೨) ಉಪನಯನದಲ್ಲಿ ಜನಿವಾರವನ್ನು (ಎಳೆಯನ್ನು) ಹಾಕುತ್ತೇವೆ. ಅದರ ವೈಶಿಷ್ಟ್ಯವೇನು?
೩) ಉಪನಯನದ ನಂತರ ಸಂಧ್ಯಾವಂದನೆಯ ಬಗ್ಗೆ ಕೂಡ ವಿವರಿಸುವಿರಾ?
- ಚಿತ್ರ 
-------------------------------------------------
 
ಬ್ರಾಹ್ಮಣ್ಯ ಹುಟ್ಟಿನಿಂದ ಬರುತ್ತದೆ - ಎಂಬಲ್ಲಿಂದ ಚಿಂತನೆ ವೇದಗಳಿಂದ ದೂರಸರಿದಿದೆ. ನಮ್ಮ ಗುಣ, ಸ್ವಭಾವ, ಕರ್ಮಗಳನ್ನು, ನಮ್ಮ ಸೇವಾಕ್ಷೇತ್ರವನ್ನು ನೋಡಿ ನಾವು ಬ್ರಾಹ್ಮಣರೋ ಮತ್ತೇನೋ ಆಗುತ್ತೇವೆ. ಇವುಗಳಲ್ಲಿ ಮೇಲು-ಕೀಳುಗಳಿಲ್ಲ. ಬ್ರಾಹ್ಮಣನು ಎಷ್ಟು ಶ್ರೇಷ್ಠನೋ ಶೂದ್ರನೂ ಅಷ್ಟೇ ಶ್ರೇಷ್ಠ!!! ಉಪನಯನ ಮತ್ತು ವೇದಾರಂಭಸಂಸ್ಕಾರ = ಗುರುಕುಲವಾಸ ಮತ್ತು ಶಿಕ್ಷಣ. ಶಿಕ್ಷಣ ಯಾರ ಸ್ವತ್ತು? ಸಮಾಜ ಚೆನ್ನಾಗಿರಬೇಕಾದರೆ ಪ್ರತಿಯೊಬ್ಬರಿಗೂ - ಯಾವುದೇ ಭೇದಭಾವವಿಲ್ಲದೆ - ಶಿಕ್ಷಣ ಸಿಗಬೇಕು. (ಇಂದು ಸರ್ಕಾರೀ ಪೋಷಿತ ಶಿಕ್ಷಣವಲ್ಲ, ವೇದಗಳು ಸಾರುವ ಮಾನವೀಯ ಶಿಕ್ಷಣ, ವ್ಯಕ್ತಿತ್ವ ರೂಪಕ ಶಿಕ್ಷಣ.) ಉಳಿದೆಲ್ಲವೂ ನಾವೇ ಅರೆಬರೆ ಜ್ಞಾನದಿಂದ ರೂಢಿಸಿಕೊಂಡಿರುವ ಚಿಂತನೆಯಿಲ್ಲದ ಸಂಪ್ರದಾಯ! ಮೊದಲನೆಯ ಎಳೆ - ದೇವಋಣ - ಪರಮಾತ್ಮನಿಂದ ಪಡೆದುಕೊಂಡಿರುವ ಎಲ್ಲ ಸೌಲಭ್ಯಗಳ ವಿಚಾರದಲ್ಲಿ ಕೃತಜ್ಞತೆ. ಈ ಋಣವನ್ನು ತೀರಿಸುವ ಸಂಕಲ್ಪ. ಆ ಎಲ್ಲ ಕೊಡುಗೆಗಳನ್ನೂ ಶುದ್ಧವಾಗಿ ರಕ್ಷಿಸುವುದು, ಇತರರೊಡನೆ ಹಂಚಿಕೊಳ್ಳುವುದು ವಿಧಾನ. (ನೀರು, ಗಾಳಿ, ಜ್ಞಾನ, ಪ್ರಕೃತಿಸಂಪತ್ತು ಇತ್ಯಾದಿ) ಜ್ಞಾನ. ಮಾನವ ಇತರ ಪ್ರಾಣಿಗಳಿಗಿಂತ ಭಿನ್ನವಾಗಿರುವುದೇ ಈ ಜ್ಞಾನದ ಕಾರಣದಿಂದ. ಇತರ ಪ್ರಾಣಿಗಳಲ್ಲಿ ಕೇವಲ ಸ್ವಾಭಾವಿಕ ಜ್ಞಾನವಿದ್ದರೆ, ಮನುಷ್ಯನಲ್ಲಿ ಅದರೊಂದಿಗೆ, ನೈಮಿತ್ತಿಕ್ ಜ್ಞಾನ, ಆಥ್ಯಾತ್ಮಿಕ ಜ್ಞಾನಗಳೂ ಸೇರಿವೆ. ಈ ಜ್ಞಾನಗಳನ್ನು ಸಂಪಾದಿಸುವೆ ಎಂಬ ಸಂಕಲ್ಪ. ಮನಸ್ಸಿನ ಶುದ್ಧಿ. ನಮ್ಮ ಅಂತರಂಗದಲ್ಲಿ ಕೊಳೆ ಇರುವವರೆಗೂ ಶಾಂತಿ, ಆನಂದಗಳ ಅನುಭವ ಉಂಟಾಗುವುದಿಲ್ಲ. ಆ ಕೊಳೆಗಳನ್ನು ಕಳೆದುಕೊಂಡು ಶುದ್ಧತೆಯನ್ನು ಗಳಿಸುತ್ತೇನೆ ಎಂಬ ಸಂಕಲ್ಪ. ಎರಡನೆಯ ಎಳೆ - ಪಿತೃ ಋಣ. ತಂದೆ-ತಾಯಿಗಳು, ಪಾಲಕ ಪೋಷಕರು ನಮ್ಮ ಬಾಲ್ಯ ಕಾಲದಲ್ಲಿ ಕಿಂಚಿತ್ತೂ ಬೇಸರಿಸಿಕೊಳ್ಳದೆ, ಅಸಹ್ಯಪಟ್ಟುಕೊಳ್ಳದೆ ನಮಗೆ ಆಶ್ರಯ, ಆಹಾರ, ಬಟ್ಟೆ, ಪ್ರೀತಿ ಮೊದಲಾದುವನ್ನು ಕೊಟ್ಟಿದ್ದಾರೆ. ನಮ್ಮ ಮಲ-ಮೂತ್ರಗಳನ್ನು ಶುಚಿಗೊಳಿಸಿದ್ದಾರೆ. ಈ ಬಗ್ಗೆ ನಮ್ಮ ಕೃತಜ್ಞತೆ ಆವಶ್ಯಕ. ಅವರ ವೃದ್ಧಾಪ್ಯದಲ್ಲಿ (ಅವರು ಬದುಕಿರುವಾಗ) ನಮ್ಮ ಕೈಯಿಂದಲೇ ಅವರ ಸೇವೆಯನ್ನು ಅದೇ ಭಾವನೆಯಿಂದ ಮಾಡುವುದು ಈ ಋಣವನ್ನು ತೀರಿಸಿಕೊಳ್ಳುವ ಬಗೆ. ಕೇವಲ ಜ್ಞಾನ ನಿರುಪಯುಕ್ತ. ಅದು ಆಚರಣೆಗೆ ಇಳಿಯಬೇಕು. ಅದನ್ನೇ ಕರ್ಮ ಎನ್ನುತ್ತಾರೆ. ಮಾನವಜೀವನದಲ್ಲಿ ಇದೂ ಪ್ರಮುಖಸ್ಥಾನವನ್ನು ಪಡೆಯುತ್ತುದೆ. ಮಾತಿನ ಶುದ್ಧಿಯೂ ಅತ್ಯಗತ್ಯ. ನಮ್ಮ ಮಾತು ತೂಕವಾಗಿರಬೇಕು. ಮಾತಿನಲ್ಲಿ ಸತ್ಯ, ಪ್ರಿಯ ಮತ್ತು ಹಿತದ ಪ್ರಮಾಣ ಹೆಚ್ಚಿದಂತೆ ತೂಕವೂ ಹೆಚ್ಚುತ್ತಾ ಹೋಗುತ್ತದೆ. ಮೂರನೆಯ ಎಳೆ - ಆಚಾರ್ಯ ಋಣ. ಯಾರು ಯಾರು ನಮಗೆ ಜೀವನ ಶಿಕ್ಷಣವನ್ನು ಕೊಟ್ಟಿದ್ದಾರೋ ಅವರೆಲ್ಲರೂ ಆಚಾರ್ಯರೇ. ಅವರ ಸಾಧನೆ, ಜ್ಞಾನ, ಅನುಭವಗಳ ಸಾರವನ್ನು ಅಮಗೆ ಧಾರೆಯೆರೆದಿರುತ್ತಾರೆ. (ನಾನಿಲ್ಲಿ ಆಚಾರ್ಯ ಹೆಸರನ್ನು ಇಟ್ಟುಕೊಂಡಿರುವ ಬಗ್ಗೆಯಾಗಲೀ, ಸಂಬಳಕ್ಕೆ ಪಾಠ ಮಾಡುವ Teachers ಬಗ್ಗೆಯಾಗಲೀ ಹೇಳುತ್ತಿಲ್ಲ) ಅವರ ಕೊಡುಗೆಯ ಬಗ್ಗೆ ಕೃತಜ್ಞತೆ. ಆ ಜ್ಞಾನವನ್ನು ರಕ್ಷಿಸಿ, ನಮ್ಮ ಸಾಧನೆ, ಜ್ಞಾನ, ಅನುಭವಗಳಿಂದ ಸಮೃದ್ಧಿಗೊಳಿಸಿ ಮುಂದಿನ ಜನಾಂಗಕ್ಕೆ ನೀಡುವುದೇ ಆಚಾರ್ಯ ಋಣವನ್ನು ತೀರಿಸುವ ಬಗೆ. ಅದಕ್ಕಾಗಿ ಸಂಕಲ್ಪ. ಜ್ಞಾನ, ಕರ್ಮಗಳೊಂದಿಗೆ, ಸರ್ವವ್ಯಾಪಿಯೂ,ಸರ್ವಶಕ್ತವೂ, ಸರ್ವಜ್ಞವೂ, ಸಾರ್ವಭೌಮವೂ, ಆನಂದಸ್ವರೂಪವೂ ಆದ ಒಂದು ಪರಮಾತ್ಮಶಕ್ತಿ ಸದಾ ನಮ್ಮೊಂದಿಗಿದೆ ಎಂಬ ದೃಢ ಅರಿವು, ಅದರ ಆಧಾರದ ಮೇಲೆ ಮೂಡುವ ಆತ್ಮವಿಶ್ವಾಸ, ಜೀವನೋತ್ಸಾಹಗಳೇ ಉಪಾಸನೆ. ಇದೂ ಮಾನವಜೀವನದ ಸಾರ್ಥಕತೆಗೆ ಅನಿವಾರ್ಯ. ನಮ್ಮ ಎಲ್ಲ ಕರ್ಮಗಳೂ ಈ ಉಪಾಸನೆಯ ಭಾವನೆಯಿಂದ ನಡೆದಲ್ಲಿ ಕಾಯಶುದ್ಧಿ ಸಾಧಿಸಿದಂತೆ. ಈ ಸಂಕಲ್ಪ, ಸಾಧನೆಗಳನ್ನು ನೆನಪಿಸುವುದಕ್ಕಾಗಿ ಮೂರು ಎಳೆಯ ಯಜ್ಞೋಪವೀತ - ಸತ್ಕರ್ಮಗಳನ್ನು ಮಾಡಲು ದೃಢನಿರ್ಧಾರ ಕೈಗೊಂಡಿರುವ ಸಂಕೇತ. ಅವರವರ ಕರ್ತವ್ಯಗಳನ್ನು ಅವರವರೇ ಮಾಡಬೇಕು. ಹೆಂಡತಿಯ ಜನಿವಾರವನ್ನು ಗಂಡ ಹಾಕಿಕೊಳ್ಳುವುದು ಈ ಹಿನ್ನೆಲೆಯಲ್ಲಿ ಅಜ್ಞಾನ ಎಂಬುದು ಸುಲಭವಾಗಿ ತಿಳಿಯುತ್ತದಲ್ಲವೇ? ಅಂತೆಯೇ ಇದು ಸಕಲ ಮಾನವರಿಗೂ ಕೊಡಬೇಕಾದ ಸಂಸ್ಕಾರ ಎಂಬುದನ್ನೂ ಹೇಳದೆಯೇ ತಿಳಿಯಬಹುದಲ್ಲವೇ? ಉಪನಯನ, ವೇದಾರಂಭ ಸಂಸ್ಕಾರಗಳಲ್ಲಿ ತಿಳಿಹೇಳುವ (ಮೇಲಿನ ಜ್ಞಾನದೊಂದಿಗೆ ಇನ್ನೂ ಇವೆ) ವಿಚಾರಗಳನ್ನು ದಿನವೂ ಬೆಳಿಗ್ಗೆ, ಸಂಜೆ ನೆನಪಿಸಿಕೊಳ್ಳುವುದೇ ಸಂಧ್ಯಾವಂದನೆ. ಸಹಜವಾಗಿಯೇ ನಮಗೆ ಮರೆವಿರುತ್ತದೆ. ಅದನ್ನು ಮೀರುವ ಒಂದು ವಿಧಾನವಿದು. (ಮತ್ತೊಮ್ಮೆ ಯಾವಾಗಲಾದರೂ ಸಂಧ್ಯೋಪಾಸನೆಯ ಮಂತ್ರಗಳ ಬಗ್ಗೆ ವಿಚಾರ ಮಾಡೋಣ.)  -ಸುಧಾಕರ ಶರ್ಮಾ

Monday, January 24, 2011

ನಮ್ಮ ಆಯಸ್ಸು ಪೂರ್ವ ನಿರ್ಧಾರಿತವೇ?

ಪುನರ್ಜನ್ಮ-ಒಂದು ವಿವರಣೆ
ನಮ್ಮ ಆಯಸ್ಸು ಪೂರ್ವ ನಿರ್ಧಾರಿತವೇ?



ವೇದಾಧ್ಯಾಯೀ ಸುಧಾಕರ ಶರ್ಮರ ಮಾತುಗಳೇ ಹಾಗೆ . ಮನ ಮುಟ್ಟುತ್ತವೆ. ಮನ ತಟ್ಟುತ್ತವೆ. ವೇದದ ಬಗೆಗೆ ಮಾತನಾಡುವಾಗ  ಹೀಗೂ ಮಾತನಾಡಲು ಸಾಧ್ಯವೇ?ಎಂಬ ಆಶ್ಚರ್ಯ ಮತ್ತು ಕುತೂಹಲವು ಒಟ್ಟಿಗೆ ಮೂಡುತ್ತವೆ ಈಗ ಕೇಳಿ , ಶರ್ಮರ ಹತ್ತು ನಿಮಿಷದ ಮಾತುಗಳನ್ನು.ನಿಮ್ಮ ಪ್ರಾಮಾಣಿಕ ಅನಿಸಿಕೆಗಳು ಮುಂದಿನ ನಮ್ಮ ಪ್ರಯತ್ನಗಳಿಗೆ ಪ್ರೇರಕವೆಂಬುದು ನೆನಪಿರಲಿ.

Sunday, January 23, 2011

Saturday, January 22, 2011

ಸತ್ಯದ ಹುಡುಕಾಟದಲ್ಲಿ

ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ದೊಡ್ಡಮಗ್ಗೆ ಗ್ರಾಮದಲ್ಲಿ ವೇದೋಕ್ತ ಜೀವನ ಪಥ ಕುರಿತು ಮೂರು ದಿನಗಳ ಕಾರ್ಯಾಗಾರ ಆರಂಭವಾಗಿದೆ. ಶ್ರೀ ಸುಧಾಕರ ಶರ್ಮರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ಶಿಬಿರದಲ್ಲಿ ವೇದಸುಧೆಯ ಸಂಪಾದಕ ಹರಿಹರಪುರ ಶ್ರೀಧರ್ ಸೇರಿದಂತೆ ೧೫ ಆಸಕ್ತರು ಪಾಲ್ಗೊಂಡಿದ್ದಾರೆ. ಶಿಬಿರಾರ್ಥಿಗಳು ಊಟ, ಉಪಹಾರ, ಕೆಲಸ ಕಾರ್ಯಗಳನ್ನು ಸ್ವತಃ ತಾವೇ ನಿರ್ವಹಿಸಿಕೊಂಡು ಅಧ್ಯಯನ, ಚರ್ಚೆಗಳಲ್ಲಿ ತೊಡಗಿರುವುದು ಅಪೂರ್ವ ಅನುಭವವೇ ಸರಿ. ಪರಮಾತ್ಮ, ಜೀವಾತ್ಮ, ಜಡವಸ್ತುಗಳ ಕುರಿತು ವೇದ ಏನು ಹೇಳುತ್ತದೆ ಎಂಬ ಬಗ್ಗೆ, ಪ್ರಚಲಿತ ಸಂಪ್ರದಾಯಗಳು, ನಂಬಿಕೆಗಳು, ಇತ್ಯಾದಿಗಳ ವಿಚಾರಗಳಲ್ಲಿ ಮುಕ್ತ ಮತ್ತು ಪೂರ್ವಾಗ್ರಹವಿಲ್ಲದ ಚರ್ಚೆ ಸಾಗುತ್ತಿದೆ. ದಿನಾಂಕ ೨೨-೦೧-೧೧ರಂದು ನಡೆದ ಶಿಬಿರದ ಕೆಲವು ದೃಷ್ಯಗಳು ವೇದಸುಧೆ ವೀಕ್ಷಕರಿಗಾಗಿ:


ಮುಕ್ತ ಸಂವಾದ

                                                          ಅಗ್ನಿ ಹೋತ್ರ








ಶಿಭಿರಾರ್ಥಿಗಳ ಸಂದೇಹಗಳ ಸಮಾಧಾನ ಶ್ರೀ ಸುಧಾಕರ ಶರ್ಮರಿಂದ
    

Friday, January 21, 2011

ವಾರ್ಷಿಕೋತ್ಸವ ಮಾಹಿತಿ

ವೇದಸುಧೆಯ ಆತ್ಮೀಯ ಅಭಿಮಾನಿಗಳೇ,
ವಾರ್ಷಿಕೋತ್ಸವ ದಿನವು ಸಮೀಪಿಸುತ್ತಿದ್ದಂತೆ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳಲು ಹಾಸನಕ್ಕೆ ಬರಲು ಉತ್ಸುಕರಾಗಿರುವ ಅನೇಕರು ಮೇಲ್ ಮೂಲಕ ಹಾಗೂ  ದೂರವಾಣಿಯ ಮೂಲಕ ವೇದಸುಧೆಯ ಸಂಪರ್ಕದಲ್ಲಿದ್ದಾರೆ.ವಾರ್ಷಿಕೋತ್ಸವದ ಹಿಂದಿನ ದಿನ ಸಂಜೆ ಶ್ರೀ ಸುಧಾಕರಶರ್ಮರ ಉಪನ್ಯಾಸವೊಂದು ಯೋಜಿಸಲ್ಪಟ್ಟಿರುವುದರಿಂದ ಹಲವರು ಆಹೊತ್ತಿಗೇ ಬರುವುದಾಗಿ ತಿಳಿಸಿದ್ದಾರೆ. ಬೆಂಗಳೂರಿನಿಂದ ನಲವತ್ತಕ್ಕೂ ಹೆಚ್ಚು ಅಭಿಮಾನಿಗಳು ಹೊರಟಿದ್ದರೂ ಬೇರೆ ಬೇರೆ ಸಮಯದಲ್ಲಿ ಅವರವರ ಅನುಕೂಲಕ್ಕೆ ತಕ್ಕಂತೆ ಹೊರಡುತ್ತಿರುವುದರಿಂದ ಒಟ್ಟಾಗಿ ಒಂದು ವಾಹದಲ್ಲಿ ಹೊರಡುವ ಚಿಂತನೆ ಕಾರ್ಯರೂಪಕ್ಕೆ ಬರುತ್ತದೋ ಇಲ್ಲವೋ ತಿಳಿಯದು.ಈ ಮಧ್ಯೆ  ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ದೊಡ್ದಮಗ್ಗೆ  ಸಮೀಪ ಒಂದು ಹಳ್ಳಿಯಲ್ಲಿ ಶ್ರೀ ಸುಧಾಕರಶರ್ಮರ ಮಾರ್ಗದರ್ಶನದಲ್ಲಿ ವೇದೋಕ್ತ ಜೀವನ ಕಾರ್ಯಾಗಾರ ಒಂದು ಇಂದು ರಾತ್ರಿ [21.01.2011] ಆರಂಭವಾಗಿ 25.01.2011 ರಂದು ಬೆಳಿಗ್ಗೆ ವರಗೆ ನಡೆಯಲಿದೆ.ಆ ಕಾರ್ಯಾಗಾರದಲ್ಲಿ ನಾನೂ ಕೂಡ ಪಾಲ್ಗೊಳ್ಳುತ್ತಿದ್ದೇನಾದ್ದರಿಂದ 
25.01.2011ರವರಗೆ ದೂರವಾಣಿಯಾಗಲೀ ಅಥವಾ ಅಂತರ್ಜಾಲ ಸಂಪರ್ಕವಾಗಲೀ ದೊರೆಯುವ ಅವಕಾಶಗಳು ಕಡಿಮೆ ಇರಬಹುದು. ಆದರೆ ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿನಾಗರಾಜರು ಅಂತರ್ಜಾಲ ಸಂಪರ್ಕಕ್ಕೂ ದೂರವಾಣಿ ಸಂಪರ್ಕಕ್ಕೂ ಲಭ್ಯವಿರುತ್ತಾರಾದ್ದರಿಂದ ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ ಅವರನ್ನು ದಯಮಾಡಿ ಸಂಪರ್ಕಿಸಿ. 
kavinagaraj2010@gmail.com
Mo: 9448501804
29.01.2011 ರಂದು ರಾತ್ರಿ ವಸತಿ ಹಾಗೂ ಊಟೋಪಚಾರದ ವ್ಯವಸ್ಥೆ ಇರುವುದರಿಂದ ಶನಿವಾರ ಸಂಜೆ 6.00 ಗಂಟೆಯೊಳಗೆ  ಶರ್ಮರ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆಯೇ ಬರಲು ಕೋರುತ್ತೇನೆ.
-ಹರಿಹರಪುರ ಶ್ರೀಧರ್
ಸಂಪಾದಕ,
  ವೇದಸುಧೆ

Thursday, January 20, 2011

ವೇದೋಕ್ತ ಜೀವನ ಪಥ: ಜೀವಾತ್ಮ ಸ್ವರೂಪ-4

ಭಗವಂತನ ಪ್ರೇರಣೆಯಂತೆಯೇ ಜೀವಾತ್ಮರು ಬೇರೆ ಬೇರೆ ಶರೀರಗಳಲ್ಲಿ ಜನ್ಮವೆತ್ತುತ್ತಾರೆ. ಕೇಳಿರಿ:-


ಅನಚ್ಛಯೇ ತುರಗಾತು ಜೀವಮೇಜತ್ ಧೃವಂ ಮಧ್ಯ ಆ ಹಸ್ತ್ಯಾನಾಮ್|
ಜೀವೋ ಮೃತಸ್ಯ ಚರತಿ ಸ್ವಧಾಭಿರಮರ್ತ್ಯೋ ಮರ್ತ್ಯೇನಾ ಸಯೋನಿಃ|| (ಋಕ್. ೧.೧೬೪.೩೦.)
     [ತುರಗಾತು] ವೇಗಶಾಲಿಯೂ [ಧೃವಮ್] ಧೃಢವೂ ಆದ ಪರಮಾತ್ಮ ತತ್ವವು, [ಅನತ್] ಎಲ್ಲರಿಗೂ ಜೀವದಾನ ಮಾಡುತ್ತಿದೆ. [ಶಯೇ] ಅಂತಃಸ್ಥಿತವಾಗಿದೆ. [ಜೀವಮ್] ಜೀವಾತ್ಮನನ್ನು [ಆಪಸ್ತ್ಯಾನಾಂ ಮಧ್ಯೇ] ಲೋಕಲೋಕಾಂತರಗಳ ನಡುವೆ [ಏಜತ್] ಪ್ರವೇಶಗೊಳಿಸುತ್ತದೆ. [ಮೃತಸ್ಯ ಜೀವಃ] ಮೃತನಾದವನ ಜೀವಾತ್ಮವು [ಅಮರ್ತ್ಯಃ] ಸ್ವತಃ ಅಮರವಾಗಿದ್ದು [ಮರ್ತ್ಯೇನಾ ಸಂಯೋನಿಃ] ಮೃತ್ಯುವಿಗೀಡಾಗುವ ಶರೀರದೊಂದಿಗೆ ಸಹಜೀವಿಯಾಗಿ [ಸ್ವಧಾಭಿಃ] ತನಗೆ ಪ್ರಾರಬ್ಧ ರೂಪದಲ್ಲಿ ಲಭಿಸಿದ ಅನ್ನ-ಜಲಗಳೊಂದಿಗೆ, [ಚರತಿ] ಸಂಚರಿಸುತ್ತದೆ.
     ಇದು ವೇದೋಕ್ತವಾದ ಸತ್ಯ. ಇದೆಂದಿಗೂ ಸುಳ್ಳಾಗಲಾರದು. ಈ ರೀತಿ ಜನ್ಮವೆತ್ತಿ ಅದೆಷ್ಟು ಸಾರಿ ಜಗತ್ತಿಗೆ ಬರುತ್ತಾರೋ, ಅಮರರಾದ ಜೀವಾತ್ಮರು. ಋಗ್ವೇದದ ಈ ಮಂತ್ರವೂ ಮನನೀಯವೇ ಆಗಿದೆ.


ಅಪಶ್ಯಂ ಗೋಪಾಮನಿಪದ್ಯಮಾನಮಾ ಚ ಪರಾ ಪಥಿಭಿಶ್ಚರಂತಮ್|
ಸ ಸಧ್ರೀಚೀಃ ಸ ವಿಷೂಚೀರ್ವಸಾನ ಆ ವರೀವರ್ತಿ ಭುವನೇಷ್ವಂತಃ|| (ಋಕ್. ೧.೧೬೪.೩೧.)
     [ಆ ಚ ಪರಾ ಚ ಪಥಿಭಿಃ ಚರಂತಮ್] ಆ ಮಾರ್ಗ ಈ ಮಾರ್ಗಗಳಿಂದ ಸಂಚರಿಸುವ [ಆನಿಪದ್ಯಮಾನಮ್] ಅವಿನಾಶಿಯಾದ [ಗೋಪಾಮ್] ಇಂದ್ರಿಯಗಳ ಪಾಲಕನಾದ ಜೀವಾತ್ಮನನ್ನು [ಆಪಶ್ಯಮ್] ನಾನು ನೋಡುತ್ತಿದ್ದೇನೆ. [ಸಃ] ಅವನು [ಸಧ್ರೀಚೀಃ] ನೇರವಾಗಿ ನಿಂತು ನಡೆಯುವ ಶರೀರಗಳನ್ನೂ [ಸಃ[ ಅವನೇ [ವಿಷೂಚೀಃ] ತೆವಳಿಕೊಂಡು ಹೋಗುವ ಶರೀರಗಳನ್ನೂ [ವಸಾನಃ] ನೆಲೆಗೊಳಿಸುತ್ತಾ [ಭುವನೇಷು ಅಂತಃ] ಲೋಕಗಳ ಒಳಕ್ಕೆ [ಆ ಪರೀವರ್ತಿ] ಬಂದು ಹೋಗಿ ಮಾಡುತ್ತಿರುತ್ತಾನೆ.
      ಇದೀಗ ಸ್ಪಷ್ಟ ತತ್ತ್ವ ದರ್ಶನ. ಅಥರ್ವವೇದದ ಇನ್ನೆರಡು ಮಂತ್ರಗಳನ್ನು ಉದ್ಧರಿಸಿದರೆ ಜೀವಾತ್ಮನ ನಿಜವಾದ ಸ್ವರೂಪ ಪಾಠಕರ ಚಿತ್ತಭಿತ್ತಿಗಳ ಮೇಲೆ ಸ್ಫುಟವಾಗಿ ಅಂಕಿತವಾಗುತ್ತದೆ.


ತ್ವಂ ಸ್ತ್ರೀ ತ್ವಂ ಪುಮಾನಸಿ ತ್ವಂ ಕುಮಾರ ಉತ ವಾ ಕುಮಾರೀ|
ತ್ವಂ ಜೀರ್ಣೋ ದಂಡೇನ ವಂಚಸಿ ತ್ವಂ ಜಾತೋ ಭವಸಿ ವಿಶ್ವತೋಮುಖಃ|| (ಅಥರ್ವ.೧೦.೮.೨೭)


     ಓ ಜೀವಾತ್ಮನ್! [ತ್ವಂ ಸ್ತ್ರೀ] ನೀನು ಸ್ತ್ರೀಯಾಗಿದ್ದೀಯೆ. [ತ್ವಂ ಪುಮಾನ್ ಅಸಿ] ನೀನು ಪುರುಷನಾಗಿದ್ದೀಯೆ. [ತ್ವಂ ಕುಮಾರಃ] ನೀನು ಕುಮಾರನಾಗಿದ್ದೀಯೆ. [ಉತ ವಾ] ಮತ್ತು [ಕುಮಾರೀ] ಕುಮಾರಿಯಾಗಿದ್ದೀಯೆ. [ತ್ಮ್] ನೀನು [ಜೀರ್ಣಃ] ವೃದ್ಧನಾಗಿ [ದಂಡೇನ ವಂಚಸಿ] ಕೋಲನ್ನೂರಿ ತಡವರಿಸುತ್ತಾ ನಡೆಯುತ್ತೀಯೆ. [ತ್ವಮ್] ನೀನು [ಜಾತಃ] ಜನ್ಮವೆತ್ತಿ [ವಿಶ್ವತೋಮುಖಃ ಅಸಿ] ಎಲ್ಲೆಡೆಯೂ ಮುಖ ಮಾಡುತ್ತೀಯೆ.
     ಪರಮಾತ್ಮನೆಂತೋ ಜೀವಾತ್ಮನೂ ಅಂತೆಯೇ ಲಿಂಗರಹಿತನು. ಆದರೆ ಧರಿಸಿದ ಶರೀರದ ದೃಷ್ಟಿಯಿಂದ ಸ್ತ್ರೀ ಅಥವಾ ಪುರುಷ, ಕುಮಾರ ಅಥವಾ ಕುಮಾರೀ ಎನ್ನಿಸಿಕೊಳ್ಳುತ್ತಾನೆ.


ಉತೈಷಾಂ ವಿತೋತ ವಾ ಪುತ್ರ ಏಷಾಮುತೈಷಾಂ ಜ್ಯೇಷ್ಠ ಉತ ವಾ ಕನಿಷ್ಠಃ|
ಏಕೋ ಹ ದೇವೋ ಮನಸಿ ಪ್ರವಿಷ್ಟಃ
ಪ್ರಥಮೋ ಜಾತಃ ಸ ಉ ಗರ್ಭೇ ಅಂತಃ|| (ಅಥರ್ವ.೧೦.೮.೨೮)


     [ಉತ] ಮತ್ತು [ಏಷಾಂ ಪಿತಾ] ಇವರ ತಂದೆ [ಉತ ವಾ] ಅಥವಾ [ಏಷಾಂ ಪುತ್ರಃ] ಇವರ ಮಗ [ಉತ] ಅಥವಾ [ಏಷಾಂ ಜ್ಯೇಷ್ಠಃ] ಇವರ ಅಣ್ಣ [ಉತ ವಾ] ಅಥವಾ [ಕನಿಷ್ಠಃ] ತಮ್ಮ [ಹ] ನಿಜವಾಗಿ [ಏಕ ದೇವಃ] ಒಬ್ಬನೇ ಜ್ಞಾನವಂತ ಚೇತನನು [ಮನಸಿ ಪ್ರವಿಷ್ಟಃ] ಮನಃಕಾಮನೆಯ ಒಳಹೊಕ್ಕಿದ್ದಾನೆ. [ಪ್ರಥಮಃ] ಆ ಶ್ರೇಷ್ಠ ಆತ್ಮನು [ಜಾತಃ] ಜನ್ಮವೆತ್ತಿದನು. [ಸ ಉ] ಅವನೇ ಮತ್ತೆ [ಗರ್ಭೇ ಅಂತಃ] ಗರ್ಭದಲ್ಲಿ ಪ್ರವೇಶ ಮಾಡಿದ್ದಾನೆ.
     ಪಾಠಕರಿಗೆ ಈಗ ಜೀವಾತ್ಮನ ವಿಷಯದಲ್ಲಿ ಒಂದು ಸ್ಪಷ್ಟ ಕಲ್ಪನೆ ಬಂದಿರಬಹುದು. ಹೀಗೆಯೇ ಜನ್ಮವೆತ್ತುತ್ತಾ, ಎತ್ತುತ್ತಾ ಕ್ರಮಕ್ರಮವಾಗಿ ವಿಕಾಸ ಹೊಂದಿ, ಪರಿಶುದ್ಧ ಧರ್ಮದ ಆಚರಣೆಯಿಂದ ವಿಶುದ್ಧ ಜ್ಞಾನ ಗಳಿಸಿ, ನಿಜವಾದ ಭಗವದುಪಾಸನೆ ಮಾಡಿ, ಸತ್ಕರ್ಮನಿಷ್ಠನಾಗಿ, ಪೂರ್ಣ ಪವಿತ್ರತೆಯನ್ನು ಗಳಿಸಿ, ಕೊನೆಗೆ ಮೋಕ್ಷ ಪಡೆಯುತ್ತಾನೆ. ಮೋಕ್ಷದ ಸ್ವರೂಪವೇನೆಂಬುದನ್ನು ಪಾಠಕರು ಮುಂದೆ ಓದುವರು. ಇಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯಾಂಶವಿದೆ. ಆ ದೇವಪುತ್ರನನ್ನು ನಂಬು, ಈ ದೇವದೂತನಿಗೆ ಶರಣಾಗು, ಈಮತಹ ಸಾಧು-ಸಂತರ ಸೇವೆ ಮಾಡು, ಅವರ ದಯೆಯಿಂದ, ಅವರ ಮಧ್ಯಸ್ತಿಕೆಯಿಂದ ದೇವರು ನಿನಗೆ ಮೋಕ್ಷ ನೀಡುವನು - ಈ ಮೊದಲಾದ ಅರ್ಥರಹಿತವಾದ, ಪಾಮರಕೋಟಿಯ ಕಣ್ಣಿಗೆ ಮಣ್ಣೆರಚುವ, ಆತ್ಮಘಾತುಕವಾದ ಟೊಳ್ಳು ಸಿದ್ಧಾಂತಗಳನ್ನು ವೇದಗಳು ಒಪ್ಪುವುದಿಲ್ಲ.

ವೇದಸುಧೆಯ ವಾರ್ಷಿಕೋತ್ಸವಕ್ಕೆ ಬನ್ನಿ

ಆತ್ಮೀಯ ವೇದಸುಧೆಯ ಅಭಿಮಾನಿ ಬಂಧುಗಳೇ, ನಮಸ್ತೆ,
    ವೇದಸುಧೆಯ ಪ್ರಥಮ ವಾರ್ಷಿಕೋತ್ಸವದ ಆಮಂತ್ರಣ ಇಲ್ಲಿದೆ. ದಯಮಾಡಿ ನಿಮ್ಮ  ಅಂಚೆಯ ವಿಳಾಸವನ್ನು ವೇದಸುಧೆಗೆ ಮೇಲ್ ಮಾಡಿದರೆ ಅಂಚೆಯ ಮೂಲಕ ಕೂಡ ನಿಮಗೆ ಆಮಂತ್ರಣ ಪತ್ರಿಕೆಯನ್ನು  ಕಳುಹಿಸಿಕೊಡಲಾಗುವುದು. ವಾರ್ಷಿಕೋತ್ಸವವು ಹಾಸನದಲ್ಲಿ ನಡೆಯುತ್ತಿರುವುದರಿಂದ ಈಗಾಗಲೇ ವೇದಸುಧೆಯ ಸಂಪರ್ಕದಲ್ಲಿರುವವರಿಗೆ  ಹಾಸನ ಬಹಳ ದೂರವೇನೂ ಆಗಲಾರದೆಂದು ಭಾವಿಸುವೆ.ಆದರೂ ಸಕಾಲಕ್ಕೆ ನೀವು ಬರಬೇಕಾದ್ದರಿಂದ ಕೆಳಗಿನ  ಕೆಲವು ಅಂಶಗಳನ್ನು ವೇದಸುಧೆಗೆ ಮೇಲ್ ಮೂಲಕ ತಿಳಿಸಿದರೆ ಸಾಧ್ಯವಾದಷ್ಟೂ ಉತ್ತಮ ವ್ಯವಸ್ಥೆ ಮಾಡಲಾಗುವುದು. ಬೆಂಗಳೂರಿನಿಂದ ಹಾಗೂ ಶಿವಮೊಗ್ಗಗಳಿಂದ ಬರುವವರು  ನಿಮ್ಮೂರಿನ ಬಸ್ ನಿಲ್ದಾಣದಿಂದ ಮುಂಜಾನೆ 5.30 ಕ್ಕೆ ಬಸ್ ನಲ್ಲಿ ಹೊರಟರೆ  ಸಕಾಲದಲ್ಲಿ ಹಾಸನ ತಲುಪಬಹುದು. ಸ್ವಂತ ಕಾರ್ ನಲ್ಲಿ ಬರುವವರಿಗೆ ಮೂರುವರೆ ಇಂದ ನಾಲ್ಕು ಗಂಟೆ ಬೇಕಾಗಬಹುದು.
ಆಮಂತ್ರಣದಲ್ಲಿ ಕಾರ್ಯಕ್ರಮಗಳ ವಿವರ ಇದೆ. 
ಇತರೆ ವ್ಯವಸ್ಥೆ ಗಳು:
* ಉಪಹಾರ: ಪ್ರಾತ: ಕಾಲ 8.30 ರಿಂದ 9.15
* ಚಹ/ಕಾಫೀ/ಬಾದಾಮಿ ಹಾಲು: ಕಾರ್ಯಕ್ರಮದ ನಡುವೆ ಬೆಳಿಗ್ಗೆ 11.00 ಕ್ಕೆ
ಮತ್ತು  ಮಧ್ಯಾಹ್ನ 4.00 ಕ್ಕೆ
* ಭೋಜನ: ಮಧ್ಯಾಹ್ನ 1.30 ರಿಂದ 2.30
* ಸಮಾರಂಭದ ಸ್ಥಳದಲ್ಲಿ ವೇದದ ಸಾಹಿತ್ಯಗಳು ಮಾರಾಟಕ್ಕೆ ಲಭ್ಯವಿರುತ್ತದೆ.
*  ಹಾಸನ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಾದ ಬೇಲೂರು, ಹಳೇಬೀಡು ಮತ್ತು ಶ್ರವಣ ಬೆಳಗೊಳ  ಗಳನ್ನು ನೋಡಬಯಸುವವರಿಗೆ ಬಾಡಿಗೆ ಕಾರ್ ವ್ಯವಸ್ಥೆ ಬೇಕಾದರೆ ಮುಂಚಿತವಾಗಿ ತಿಳಿಸಿ.
* ಶನಿವಾರ ರಾತ್ರಿ ಬರುವವರಿಗೆ ಉಳಿಯುವ ಮತ್ತು ಊಟೋಪಚಾರದ ಸಾಮಾನ್ಯ ವ್ಯವಸ್ಥೆ ಇರುತ್ತದೆ. ವಿಶೇಷವಾಗಿ ಹೋಟೆಲ್ ನಲ್ಲಿ ರೂಮ್ ಮಾಡಬಯಸುವವರು ಮುಂಚಿತವಾಗಿ ತಿಳಿಸಿದರೆ ಆರಕ್ಷಣೆ ಮಾಡಲಾಗುವುದು. 
----------------------------------------

*  ಹೆಸರು:
*  ಊರು:
*  ಮೊಬೈಲ್ ನಂಬರ್:
*  ನಿಮ್ಮೊಡನೆ ಎಷ್ಟು ಜನ ಬರುವರು?
*  ಯಾವ ಸಮಯಕ್ಕೆ ಹಾಸನ ತಲುಪುವಿರಿ?
*  29.1.2011 ರಂದು ರಾತ್ರಿ ಹಾಸನದಲ್ಲಿ  ವಸತಿ ವ್ಯವಸ್ಥೆ ಬೇಕೇ?
*  ನಿಮ್ಮ ಸ್ನೇಹಿತರುಗಳನ್ನು ಆಹ್ವಾನಿಸಲು ನಿಮಗೆ ಹೆಚ್ಚು ಆಮಂತ್ರಣ    
ಪತ್ರಿಕೆಗಳು ಬೇಕೆ?










ವಾರ್ಷಿಕೋತ್ಸವ ಬೆಳಗಿನ ಅವಧಿ


1. ವೇದಘೋಷ: 9.30-9.35
2. ಸ್ವಾಗತ ಪರಿಚಯ: 9.35-9.40
3. ಪ್ರಾಸ್ತಾವಿಕನುಡಿ: 9.40-9.50
4. ದೀಪ ನೃತ್ಯ ಮತ್ತು ಉದ್ಘಾಟನೆ: 9.50-10.00
5. ಉದ್ಘಾಟನಾ ಭಾಷಣ: 10.00-10.10
6. ಸಿ.ಡಿ ಪರಿಚಯ: 10.10-10.20
7. ಸಿ.ಡಿ ಬಿಡುಗಡೆ: 10.20-10.25
8. ಅಧ್ಯಕ್ಷರ ನುಡಿ: 10.25-10.35
9. ಚಹಾ ವಿರಾಮ: 10.35-10.40
10. ವಯೊಲಿನ್ ವಾದನ: 10.40-11.10
11. ವಿಚಾರ ಸಂಕಿರಣ   [1 ಗಂಟೆ]

11.10-12.30
12.ಗೀತಗಾಯನ [ 20 ನಿಮಿಷ]
13. ಸುಧಾಕರ    
      ಶರ್ಮರನುಡಿ:
 12.30- 1.20
14. ಅಭಿನಂದನೆ: 1.20-1.25
15. ಶಾಂತಿಪಾಠ: 1.25-1.30

Wednesday, January 19, 2011

ವಿಶೇಷ ಉಪನ್ಯಾಸ

ರಾಷ್ಟ್ರ ಗೌರವ ಸಂರಕ್ಷಣ ಪರಿಷತ್ ,ಹಾಸನ ಜಿಲ್ಲಾ ಘಟಕದ  ಸಂಚಾಲಕರಾದ ಶ್ರೀ ಕೆ.ವಿ ರಾಮಸ್ವಾಮಿ ಮತ್ತು ಶ್ರೀ ಟಿ.ವಿ ನಟರಾಜ್ ಇವರು  ವೇದಸುಧೆ ವಾರ್ಷಿಕೋತ್ಸವದ ಹಿಂದಿನ ಸಂಜೆ ಒಂದು ಉತ್ತಮವಾದ ಉಪನ್ಯಾಸ ಕಾರ್ಯಕ್ರಮವನ್ನು ಹಾಸನದಲ್ಲಿ ಏರ್ಪಡಿಸಿರುತ್ತಾರೆ. ವೇದಸುಧೆಯ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳುವ ಅಭಿಮಾನಿಗಳು ಈ ಕಾರ್ಯಕ್ರಮದಲ್ಲೂ ಪಾಲ್ಗೊಳ್ಳುವ ಸದವಕಾಶ. ಹೊರಊರುಗಳಿಂದ ಅಂದು ಬರುವ ಅಭಿಮಾನಿಗಳಿಗೆ ಊಟೋಪಚಾರದ ಹಾಗೂ ಉಳಿಯುವ ವ್ಯವಸ್ಥೆ ಮಾಡಲಾಗುವುದು. ಒಂದೆರಡು ದಿನ ಮುಂಚಿತವಾಗಿ ತಿಳಿಸಿದರೆ ವ್ಯವಸ್ಥೆ ಮಾಡಲು ಅನುಕೂಲವಾದೀತು.
----------------------------------------------------------------

ರಾಷ್ಟ್ರ ಗೌರವ ಸಂರಕ್ಷಣ ಪರಿಷತ್
ಹಾಸನ ಜಿಲ್ಲಾ ಘಟಕ
ಬೆಂಗಳೂರಿನ
 ವೇದಾಧ್ಯಾಯೀ ಸುಧಾಕರಶರ್ಮರಿಂದ
ವಿಶೇಷ ಉಪನ್ಯಾಸ
ವಿಷಯ:
“ಮಾನವಕುಲದ ಅಭ್ಯುದಯಕ್ಕಾಗಿ ವೇದದ ಅನಿವಾರ್ಯತೆ”

ದಿನಾಂಕ: 29.01.2011 ಶನಿವಾರ ಸಂಜೆ 6.00 ಗಂಟೆಗೆ

ಸ್ಥಳ: ಶ್ರೀ ಭಾರತೀತೀರ್ಥ ಸಭಾಂಗಣ
ಶೃಂಗೇರಿ ಶ್ರೀ ಶಂಕರಮಠದ ಆವರಣ, ಹಾಸನ

ಮಿತ್ರರೊಡಗೂಡಿ ಬನ್ನಿ

C.S.ಕೃಷ್ಣಸ್ವಾಮಿ
 ಅಧ್ಯಕ್ಷರು

K.V. ರಾಮಸ್ವಾಮಿ                          T.V.ನಟರಾಜ ಪಂಡಿತ್
ಸಂಚಾಲಕರು                                  ಸಂಚಾಲಕರು

Tuesday, January 18, 2011

॥ निर्वाण षटकम्॥

मनो बुद्ध्यहंकारचित्तानि नाहम् न च श्रोत्र जिह्वे न च घ्राण नेत्रे
न च व्योम भूमिर् न तेजॊ न वायु: चिदानन्द रूप: शिवोऽहम् शिवॊऽहम् ॥
न च प्राण संज्ञो न वै पञ्चवायु: न वा सप्तधातुर् न वा पञ्चकोश:
न वाक्पाणिपादौ न चोपस्थपायू चिदानन्द रूप: शिवोऽहम् शिवॊऽहम् ॥
न मे द्वेष रागौ न मे लोभ मोहौ मदो नैव मे नैव मात्सर्य भाव:
न धर्मो न चार्थो न कामो ना मोक्ष: चिदानन्द रूप: शिवोऽहम् शिवॊऽहम् ॥
न पुण्यं न पापं न सौख्यं न दु:खम् न मन्त्रो न तीर्थं न वेदा: न यज्ञा:
अहं भोजनं नैव भोज्यं न भोक्ता चिदानन्द रूप: शिवोऽहम् शिवॊऽहम् ॥
न मृत्युर् न शंका न मे जातिभेद: पिता नैव मे नैव माता न जन्म
न बन्धुर् न मित्रं गुरुर्नैव शिष्य: चिदानन्द रूप: शिवोऽहम् शिवॊऽहम् ॥
अहं निर्विकल्पॊ निराकार रूपॊ विभुत्वाच्च सर्वत्र सर्वेन्द्रियाणाम्
न चासंगतं नैव मुक्तिर् न मेय: चिदानन्द रूप: शिवोऽहम् शिवॊऽहम् ॥

ವೇದಸುಧೆ ವಾರ್ಷಿಕೋತ್ಸವ ಯೋಜಿತ ವೇಳಾ ಪಟ್ಟಿ

ವಾರ್ಷಿಕೋತ್ಸವ ಬೆಳಗಿನ ಅವಧಿ


1. ವೇದಘೋಷ: 9.30-9.35
2. ಸ್ವಾಗತ ಪರಿಚಯ: 9.35-9.40
3. ಪ್ರಾಸ್ತಾವಿಕನುಡಿ: 9.40-9.50
4. ದೀಪ ನೃತ್ಯ ಮತ್ತು ಉದ್ಘಾಟನೆ: 9.50-10.00
5. ಉದ್ಘಾಟನಾ ಭಾಷಣ: 10.00-10.10
6. ಸಿ.ಡಿ ಪರಿಚಯ: 10.10-10.20
7. ಸಿಡಿ ಬಿಡುಗಡೆ: 10.20-10.25
8. ಅಧ್ಯಕ್ಷರ ನುಡಿ: 10.25-10.35
9. ಚಹಾ ವಿರಾಮ: 10.35-10.40
10. ವಯೊಲಿನ್ ವಾದನ: 10.40-11.10
11. ವಿಚಾರ ಸಂಕಿರಣ   [1 ಗಂಟೆ]

11.10-12.30
12.ಗೀತಗಾಯನ [ 20 ನಿಮಿಷ]
13. ಸುಧಾಕರ    
      ಶರ್ಮರನುಡಿ:
 12.30- 1.20
14. ಅಭಿನಂದನೆ: 1.20-1.25
15. ಶಾಂತಿಪಾಠ: 1.25-1.30

Monday, January 17, 2011

"ನಿಜವ ತಿಳಿಯೋಣ"

30.01.2011 ರಂದು ಹಾಸನದಲ್ಲಿ ನಡೆಯಲಿರುವ ವೇದಸುಧೆಯ ವಾರ್ಷಿಕೋತ್ಸವದಲ್ಲಿ ವೇದಾಧ್ಯಾಯೀ ಶ್ರೀ ಸುಧಾಕರಶರ್ಮರ "ನಿಜವ ತಿಳಿಯೋಣ" ಪ್ರವಚನ ಮಾಲಿಕೆ ಸಿಡಿ ಬಿಡುಗಡೆಯಾಗಲಿದ್ದು ಬೇಲೂರಿನ ವೇದಾಧ್ಯಾಯೀ ಶ್ರೀ ವಿಶ್ವನಾಥಶರ್ಮರು ಅದರ ಪರಿಚಯವನ್ನು ಮಾಡಿಕೊಡಲಿದ್ದಾರೆ. ಅದರ ಒಂದು ಕ್ಲಿಪ್ ವೇದಸುಧೆಯ ಅಭಿಮಾನಿಗಳಿಗಾಗಿ



ಸತ್ಯಪಥವ ಹುಡುಕಬೇಕಲ್ಲಾ!

ನಮ್ಮ ಸಮಾಜ ಬಲು ವಿಚಿತ್ರ. ಬೆಳಗಿನಿಂದ ರಾತ್ರಿಯವರೆಗೂ ದುಡಿದು ಸೋತು ಸೊಪ್ಪಾಗಿ ರಾತ್ರಿ ಮನೆಗೆಬಂದು ಹಾಸಿಗೆಯಲ್ಲಿ ಕಾಲು ಚಾಚುವವರು ಕೆಲವರು. ಅವರಿಗೆ ದುಡಿಮೆಯೇ ಜೀವನ.ಇಂತವರು ಯಾವಾಗಲಾದರೊಮ್ಮೆ ಸಾವಿರಾರು ರೂಪಾಯಿಗಳನ್ನು ಖರ್ಚುಮಾಡಿ ಯಾವುದಾದರೂ ದೇವಾಲಯಗಳಲ್ಲಿ ಸೇವೆ ಮಾಡಿಸಿ ಸಮಾಧಾನ ಪಡುವುದುಂಟು. ಇನ್ನೊಂದು ವರ್ಗವಿದೆ.ಜೀವನದಲ್ಲಿ ನೈತಿಕ ಮೌಲ್ಯಗಳನ್ನುಳನ್ನು ಬಿಟ್ಟು ವಾಮಮಾರ್ಗಗಳಲ್ಲಿ ಹಣ ಸಂಪಾದಿಸುವುದು, ಆದರೆ ಧಾರ್ಮಿಕ ಕೆಲಸಗಳಿಗೆ ಸಾವಿರಾರು ರೂಪಾಯಿ ಖರ್ಚು ಮಾಡುವುದು. ಮತ್ತೊಂದು ವರ್ಗವಿದೆ. ಪ್ರಾಮಾಣಿಕವಾಗಿ ದುಡಿದು ನಮ್ಮ ಪರಂಪರೆಯಲ್ಲಿ ಬಂದಿರುವ ಎಲ್ಲಾ ವ್ರತಾಚರಣೆಗಳು, ಹಬ್ಬ ಹರಿದಿನಗಳನ್ನು ಆಚರಿಸುತ್ತಾ ತಾವು ಆಚರಿಸುತ್ತಿರುವ ಯಾವ ಆಚರಣೆಯನ್ನೂ ವೈಜ್ಞಾನಿಕವಾಗಿ ವಿಶ್ಲೇಷಿಸದೆ ಸುಮ್ಮನೆ ಅನುಸರಿಸುವುದು. ಇದು ದೊಡ್ಡ ಸಮೂಹ. ನಮ್ಮ ಹಿಂದಿನವರು ಹೀಗೆ ಮಾಡುತ್ತಿದ್ದರು. ನಾವೂ ಮಾಡುತ್ತೇವೆ. ನಮ್ಮ ಮಕ್ಕಳಿಗೂ ಮಾಡಲು ಕಲಿಸುತ್ತೇವೆ, ಎನ್ನುವ ಈ ವರ್ಗ ಯಾವುದಕ್ಕೂ ತಲೆ ಕೆಡಸಿಕೊಳ್ಳುವುದಿಲ್ಲ. ಭಯದಿಂದ ಧರ್ಮಾಚರಣೆ ಮಾಡುವ ಕೆಲವರು. ಪ್ರತೀ ವರ್ಷವೂ ತಮ್ಮ ಮನೆದೇವರಿಗೆ ಯಾತ್ರೆ ಮಾಡುವ ಕೆಲವರು ಕಾರಣಾಂತರದಿಂದ ಒಂದು ವರ್ಷ ಯಾತ್ರೆ ಮಾಡದಿದ್ದಾಗ ಅವರ ಮನೆಯಲ್ಲಿ ಯಾವುದಾದರೂ ಅಪತ್ತು ಎದುರಾದರೆ ಅದಕ್ಕೆ ಅವರು ಮನೆ ದೇವರ ದರ್ಶನವನ್ನು ಮಾಡದಿದ್ದುದೇ ಕಾರಣವೆಂದು ತಿಳಿದು ತಪ್ಪು ಕಾಣಿಕೆಯನ್ನು ತಮ್ಮ ಮನೆಯೆ ಪೂಜಾಗೃಹದಲ್ಲಿ ದೇವರ ಮುಂದಿಟ್ಟು " ಭಗವಂತಾ, ನನ್ನ ತಪ್ಪು ಕ್ಷಮಿಸಿ ನಮ್ಮ ಮನೆಯನ್ನು ಕಾಪಾಡು, ಮುಂದಿನ ವರ್ಷ ಮನೆಮಂದಿಯೆಲ್ಲಾ ಬಂದು ನಿನ್ನ ಸೇವೆ ಮಾಡಿಸಿ ಕೊಂಡು ಬರುತ್ತೇವೆಂದು" ಮನ: ಪೂರ್ವಕ ದೇವರಲ್ಲಿ ಬೇಡುವ ಒಂದು ಮುಗ್ಧ ವರ್ಗ.
ಭಗವಂತನ ಪೂಜೆಯನ್ನು ನೂರಾರು ರೀತಿಯಲ್ಲಿ ತಮ್ಮದೇ ಸರಿ ಎನ್ನುತ್ತಾ ನಿತ್ಯವೂ ತಮ್ಮದೇ ರೀತಿಯಲ್ಲಿ ಪೂಜೆಮಾಡುವ ಹಲವಾರು ಸಮೂಹ. ಅಷ್ಟೇ ಅಲ್ಲ, ಧರ್ಮದ, ದೇವರ, ಮತದ, ಮಠದ ಹೆಸರಲ್ಲಿ ಬಡಿದಾಡುವ ಗುಂಪುಗಳು.
ನಿತ್ಯವೂ ಪುರಾಣ ಪಠಣ-ಶ್ರವಣ ಮಾಡುತ್ತಾ,ಇದೇ ಸರಿಯಾದ ಮಾರ್ಗವೆಂದು ಭಾವಿಸಿರುವ ಒಂದು ಸಮೂಹ. ಪುರಾಣವೇ ಸುಳ್ಳು, ಅದು ಬರೀ ಕಟ್ಟುಕಥೆ ಎನ್ನುವ ಒಂದು ಗುಂಪು.ಇಷ್ಟೇ ಅಲ್ಲ, ಇನ್ನೂ ಸಾಕಷ್ಟು ಗೊಂದಲಗಳು.ಇವುಗಳ ಮಧ್ಯೆದಲ್ಲೇ ಇದ್ದು ಸತ್ಯಪಥವ ಹುಡುಕಬೇಕಲ್ಲಾ! ಹಿಂದಿನಿಂದ ನಡೆದು ಬಂದಿರುವ ಎಲ್ಲವನ್ನೂ ಸಾರಾಸಗಟಾಗಿ ತಿರಸ್ಕರಿಸದೆ, ಕುರುಡು ಆಚರಣೆ ಎಂದು ಮನವರಿಕೆ ಆದದ್ದನ್ನು ಬಿಡುತ್ತಾ, ಯಾವುದು ಅನೈತಿಕವೆಂದು ನಮ್ಮ ಅಂತರಾತ್ಮ ತಿಳಿಯುತ್ತದೋ ಅದರಿಂದ ದೂರವಿರುತ್ತಾ, ಒಂದು ಸತ್ಯದ ಹಾದಿಯಲ್ಲಿ ಸಾಗುವುದೇ ಒಂದು ಮಹಾನ್ ಯಜ್ಞ. ಅಂತಾ ಒಂದು ಯಾತ್ರೆಯಲ್ಲಿ ಸಾಗುವುದೇ ವೇದಸುಧೆಯ ಉದ್ಧೇಶ. ಹಲವು ಗೊಂದಲಗಳು ಎದುರಾದರೂ ಸತ್ಯದ ಶೋಧನೆಯಲ್ಲಿ ಮುಂದುವರೆಯೋಣ ಬನ್ನಿ.ಇದೊಂದು ಸತ್ಯದ ಹಾದಿಯನ್ನು ಹುಡುಕುವ ವೇದಿಕೆಯಾದ್ದರಿಂದ ಯಾರು ಏನೇ ಅಭಿಪ್ರಾಯ ಹೊರಹಾಕಿದರೂ ಅದರ ಬಗ್ಗೆ ವಿಮರ್ಷೆ ಮಾಡೋಣ. ಯಾವುದನ್ನೂ ವೈಯಕ್ತಿಕನೆಲೆಯಲ್ಲಿ ನೋಡದೆ ವೈಚಾರಿಕ ಹಿನ್ನೆಲೆಯಲ್ಲಿ ಚರ್ಚಿಸಿದಾಗ ಒಂದಲ್ಲಾ ಒಂದು ದಿನ ಋಜುಮಾರ್ಗದಲ್ಲಿ ಸಾಗುವುದು ಯಾರಿಗೂ ಕಷ್ಟವಾಗಲಾರದು.

Sunday, January 16, 2011

ಹಸಿವು

ಹಸಿದವಗೆ ಹುಸಿ ವೇದಾಂತ ಬೇಡ|
ಕಥೆ ಕವನ ಸಾಹಿತ್ಯ ಬೇಡವೇ  ಬೇಡ||
ಬಳಲಿದ ಉದರವನು ಕಾಡಬೇಡ|
ಮುದದಿ ಆದರಿಸಿ ಮೋದಪಡು ಮೂಢ||

ಹೊಟ್ಟೆಯ ತೊಟ್ಟಿಯದು ತುಂಬುವುದು ಎಂದು?
ಹಸಿವು ಮಾಡಿಸುವ ಕುಕರ್ಮಗಳೆನಿತೊಂದು||
ಬಂಧಗಳ ಹೆಣೆಯುವುದು ಪಾಶಗಳ ಬೀಸುವುದು|
ಆತ್ಮಾಭಿಮಾನ ಮರೆಸುವುದೊ ಮೂಢ||

ಹಸಿವಿನಿಂ ಬಳಲುತಿರೆ ಹೊನ್ನು ಬೇಕೇನು?
ಹಸಿವಿನಿಂ ನರಳುತಿರೆ ಹೆಣ್ಣು ಬೇಕೇನು?
ಹಸಿವು ಹಿಂಗಿಸಲು ಅನ್ನವೇ ಬೇಕು|
ಹೊಟ್ಟೆ ತುಂಬಿರಲೆಲ್ಲವೂ ಬೇಕು ಮೂಢ||

ಪರಮಾತ್ಮನೆಂಬುವನು ಎಲ್ಲಿಹನು ಕೇಳಿ|
ದೇವಭಕ್ತರೆ ಹೇಳಿ ಅರಿತವರೆ ತಿಳಿ ಹೇಳಿ||
ದೇವನಿರದಿಹನೆ ಜೀವಿಗಳ ಉದರದಲಿ|
ಹಸಿವಿರದಿರೆ ಪರಮಾತ್ಮನೆಲ್ಲಿ ಮೂಢ||


 ರಾಗ ಸಂಯೋಜಿಸಿ ಹಾಡಿದ್ದಾರೆ ಶ್ರೀಮತಿ ಲಲಿತಾ ರಮೇಶ್,ಹಾಸನ

Saturday, January 15, 2011

ವೇದಸುಧೆ ವಾರ್ಷಿಕೋತ್ಸವದಲ್ಲಿ ಭಾಗವಹಿಸುವ ಬೆಂಗಳೂರಿನ ಅಭಿಮಾನಿಗಳ ಗಮನಕ್ಕಾಗಿ

ವೇದಸುಧೆವಾರ್ಷಿಕೋತ್ಸವವು ನಡೆಯುವ ದಿನ 30.01.2011 ರಂದು ಭಾನುವಾರ ಬೆಳಗ್ಗೆ 5.30 ರ ಸುಮಾರಿಗೆ ಬೆಂಗಳೂರಿನಿಂದ ಹೊರಟು ಹಾಸನವನ್ನು 9.00 ಗಂಟೆಗೆ ತಲುಪನುಕೂಲವಾಗುವಂತೆ ಒಂದು ವಾಹನದ ವ್ಯವಸ್ಥೆ ಮಾಡಬೇಕೆಂಬ ಯೋಜನೆ ಇದೆ. ವಾಹನವು ಯಾವುದಾಗಿರಬೇಕೆಂಬುದು ಹೊರಡುವ ಸಂಖ್ಯೆಯನ್ನು ಅವಲಂಭಿಸಿದೆ. ಹಾಗೊಂದು ವೇಳೆ ಬೆಂಗಳೂರಿನಿಂದ ವಾಹನವು ಹೊರಟರೆ  ಬಸವನಗುಡಿ, ವಿಜಯನಗರ ಮತ್ತು ಇನ್ನೊಂದೆರಡು ಪಿಕ್ ಅಪ್ ಪಾಯಿಂಟ್ ಗಳನ್ನು ಗುರುತಿಸಿ ಕರೆದುಕೊಂಡು ಬರುವ ವ್ಯವಸ್ಥೆ ಮಾಡಲಾಗುವುದು. ಸಮಾರಂಭವು ಮುಗಿದ ಮೇಲೆ ಹೊರಟು ಬೆಳಿಗ್ಗೆ ಬೆಂಗಳೂರಿನಲ್ಲಿಪಿಕ್ ಅಪ್ ಮಾಡಿದ ಸ್ಥಳಗಳಿಗೆ ರಾತ್ರಿ  ಡ್ರಾಪ್ ಮಾಡುವ ಉದ್ಧೇಶವಿದೆ. ಸಾಮಾನ್ಯವಾಗಿ ಈ ದಿನಗಳಲ್ಲಿ ಅಯ್ಯಪ್ಪಸ್ವಾಮಿ ಯಾತ್ರೆಗಾಗಿ  ವಾಹನಗಳು ಬಾಡಿಗೆಗೆ ಹೋಗುವುದರಿಂದ ಆದಷ್ಟು ಬೇಗ ನಮ್ಮ ಈ  ಪ್ರವಾಸಯೋಜನೆ ಫಿಕ್ಸ್ ಆಗಬೇಕು.ಇಲ್ಲವಾದರೆ ಸ್ವಂತ ವಾಹನದಲ್ಲೋ ಸರ್ಕಾರಿ ಬಸ್ ನಲ್ಲೋ ಹೊರಡಬೇಕಾಗುತ್ತದೆ. ಸಾಮೂಹಿಕವಾಗಿ ಒಂದು ಮಿನಿ ಬಸ್ ನಲ್ಲೋ ಅಥವಾ ಸಂಖ್ಯೆ ಹೆಚ್ಚಾದರೆ ದೊಡ್ದ ಬಸ್ ನಲ್ಲೋ ಹೊರಟರೆ ಎಲ್ಲರ ಪರಿಚಯ, ಮಾತುಕತೆ, ಹರಟೆ, ವಿಚಾರ ವಿನಿಮಯಕ್ಕೆ ಅವಕಾಶಗಳಿರುತ್ತದೆ. ಆದ್ದರಿಂದ ಬೆಂಗಳೂರಿನಿಂದ ಹೊರಡುವ  ಅಭಿಮಾನಿಗಳು  ಇಲ್ಲಿ ಪ್ರತಿಕ್ರಿಯೆ ಬರೆಯುವುದರ ಮೂಲಕ ಅಥವಾ ಕೆಳಗಿನ ಫೋನ್ ನಂಬರುಗಳಿಗೆ ದಿನಾಂಕ 20.01.2011 ರೊಳಗಾಗಿ ಕರೆಮಾಡಿ ತಿಳಿಸಬೇಕಾಗಿ ಕೋರುವೆ.
ಈಗಾಗಲೇ ವೇದಸುಧೆಯ ಗಮನಕ್ಕೆ ಬಂದಿರುವಂತೆ ಹಾಸನಕ್ಕೆ ಕುಟುಂಬ ಸಹಿತರಾಗಿ  ಹೊರಟಿರುವ ಅಭಿಮಾನಿಗಳ ಪಟ್ಟಿ
೧] ವೇದಾಧ್ಯಾಯೀ ಸುಧಾಕರ ಶರ್ಮ
೨] ಶ್ರೀ ವಿಷ್ಣುಭಟ್ 
೩] ಶ್ರೀ ವಿಶಾಲ್ 
೪] ಜಗದೀಶ್
೫] ಎಂ.ಡಿ.ಎನ್ ಪ್ರಭಾಕರ್ 
೬] ಶ್ರೀ ಹರೀಶ್ ಆತ್ರೇಯ
೭] ಶ್ರೀಮತಿ ಚಿತ್ರ ಮತ್ತು ಶ್ರೀ ಪ್ರಸನ್ನ
೮] ಶ್ರೀ ಕೃಷ್ಣಮೂರ್ತಿ
೯] ಡಾ|| ವಿವೇಕ್
೧೦] ಶ್ರೀ ದಕ್ಷಿಣಾಮೂರ್ತಿ

ಸಂಪರ್ಕಿಸಲು ದೂರವಾಣಿ:
ಶ್ರೀಸುಧಾಕರಶರ್ಮ: 9448842474 / 08022421950
ಶ್ರೀ ವಿಶಾಲ್:   9880455251
ಶ್ರೀ ಹರಿಹರಪುರಶ್ರೀಧರ್:  9663572406/ 08172250566
ಮೇಲ್ ಮೂಲಕ ಕೂಡ ನಿಮ್ಮೊಡನೆ  ಹಾಸನಕ್ಕೆ ಬರುವವರ ವಿವರವನ್ನು ದಿನಾಂಕ 20.01.2011 ರೊಳಗೆ ನೀಡಬಹುದಾಗಿದೆ.
ನಮ್ಮ ಮೇಲ್ ವಿಳಾಸ:  vedasudhe@gmail.com

ಹೊಸಬೆಳಕು











ವೇದಾಭಿಮಾನಿಗಳೇ,
ನಿನ್ನೆ ರಾತ್ರಿ [14.01.2011]ಚಂದನ ವಾಹಿನಿಯಲ್ಲಿ ಪ್ರಸಾರವಾಗಬೇಕಿದ್ದ ಈ ದಾರಾವಾಹಿಯು ಕಾರಣಾಂತರಗಳಿಂದ  ಎರಡುವಾರಗಳು ಮುಂದೂಡಲ್ಪಟ್ಟಿದೆ. ಬರುವ 28.01.2011 ರಿಂದ ಪ್ರತೀ ಶುಕ್ರವಾರ ರಾತ್ರಿ 8.00 ರಿಂದ 8.30 ರವರಗೆ ಪ್ರಸಾರವಾಗಲಿರುವ ಈ ದಾರಾವಾಹಿಯನ್ನು ನಿಮ್ಮ ಪರಿಚಿತರೆಲ್ಲರಿಗೂ ನೋಡುವಂತೆ ತಿಳಿಸಿ.ನಮ್ಮ ಜೀವನಕ್ಕೆ ಬೆಳಕಾಗಬಲ್ಲ ಈ ದಾರಾವಾಹಿಯು ಇಂದಿನ ದಿನಗಳಲ್ಲಿ ಒಂದು ಅತ್ಯಂತ ವಿನೂತನ ಮತ್ತು ಉತ್ತಮವಾದ ಪ್ರಯತ್ನ. ಸುಮಾರು 30 ಕ್ಕೂ ಹೆಚ್ಚು  ಕಂತುಗಳಲ್ಲಿ ಪ್ರಸಾರವಾಗಲಿರುವ  ಈ ದಾರಾವಾಹಿಯ ಬಗ್ಗೆ ನಿಮ್ಮ ಅನಿಸಿಕೆ  ಅಭಿಪ್ರಾಯಗಳನ್ನು ನೇರವಾಗಿ ಚಂದನ ವಾಹಿನಿಗೂ ಮತ್ತು ವೇದಸುಧೆಗೂ ಬರೆಯಿರಿ. ವೇದಸುಧೆಗೆ ಬರೆದ ನಿಮ್ಮ ಅಭಿಪ್ರಾಯಗಳನ್ನು ಗೌರವಪೂರ್ವಕವಾಗಿ ಪ್ರಕಟಿಸಲಾಗುವುದು. ಅಗತ್ಯವಿದ್ದರೆ ಈ ದಾರಾವಾಹಿಗಾಗಿಯೇ ಒಂದು ಪುಟ ತೆರೆಯಲಾಗುವುದು.

Friday, January 14, 2011

ಸತ್ತ ಕೈ ಮತ್ತೆ ಬಂದಾಗ, ಭಾಗ-೨

ನನ್ನ ಕೈಗೆ ಪುನರ್ಜೀವ ಬಂದ ಪವಾಡದ ಬಗ್ಗೆ ಇಂದು ಬರೆಯುತ್ತೇನೆಂದು  ನಿನ್ನೆ ತಿಳಿಸಿದ್ದೆ. ಏನ್ ಸಾರ್ ಅದು ಪವಾಡ? ಯಾವ ಸ್ವಾಮೀಜಿ ಹತ್ತಿರ ಹೋಗಿದ್ರಿ? ಅಂತಾ ನನ್ನ ಪರಿಚಯದವರು ಆಗಲೇ ನನಗೆ ಫೋನಿನಲ್ಲಿ ಕೇಳಿದ್ದಾಯ್ತು. ಪವಾಡ! ಆಬಗ್ಗೆ  ನಾನು ಏನೂ ಬರೆಯುವುದಿಲ್ಲ. ಆದರೆ ನನಗೆ ಪವಾಡವಾಗಿ ಗುಣಪಡಿಸಿದ್ದು ಪ್ರಾಣಾಯಾಮ!!    ಡಾ|| ಅರುಣಾಚಲಯ್ಯ  ಎಂಬ ವೈದ್ಯರೊಬ್ಬರು ಹಾಸನದಲ್ಲಿದ್ದರು. ಈಗ ಬೆಂಗಳೂರಿನಲ್ಲಿದ್ದಾರೆಂದು ಕಾಣುತ್ತೆ. ಒಂದು ಪ್ರಾಣಾಯಾಮ ತರಗತಿಯಲ್ಲಿ  ನನ್ನ ಅನುಭವವನ್ನು ಹೇಳಿದಾಗ, ಅವರು ಗೇಲಿ ಮಾಡಿ ಬಿಟ್ಟರು. ನಾನೇನೂ ಸುಮ್ಮನಾಗಲಿಲ್ಲ. "ಅಲ್ಲಾ ಡಾಕ್ಟ್ರೇ, ಪ್ರಾಣಾಯಾಮ ಅಭ್ಯಾಸ ಮಾಡುತ್ತಲೇ ನನ್ನ  ಕೈಗೆ ಪುನರ್ಜೀವ ಬಂದು ಈಗ ನಾನೂ ಎಲ್ಲರಂತೆ  ಸಾಕ್ಷಿಯಾಗಿ ಎದುರಿಗೇ ನಿಂತಿರುವಾಗ ,ನೀವು ತಮಾಶೆ ಮಾಡ್ತೀರಲ್ಲಾ! ಹಾಗಾದರೆ ನನ್ನ ಅನುಭವವೇ ಸುಳ್ಳೇ?"-ಎಂದು ಗಟ್ಟಿಯಾಗೇ ಹೇಳಿದಾಗ ಅವರು ಸುಮ್ಮನಾಗಬೇಕಾಯ್ತು. ಅಷ್ಟೇ ಅಲ್ಲ, ಅವರೂ ಪ್ರಾಣಾಯಾಮ ತರಗತಿಗಳಿಗೆ ಬರಲು ಆರಂಭಿಸಿ ಈಗ ಅವರು ಆರ್ಟ್ ಆಫ್ ಲಿವಿಂಗ್ ನಲ್ಲಿ ಟೀಚರ್  ಆಗಿರಬಹುದು.
ಈಗ ನನ್ನ ಕಥೆ ಮತ್ತೆ ಶುರು ಮಾಡುವೆ. ನನ್ನ ಎಡಗೈ ನಿತ್ರಾಣದಿಂದ  ನಾನು ಮಾನಸಿಕವಾಗಿ ಕುಸಿದುಹೋಗಿದ್ದೆ. ಒಂದು ದಿನ ಬೆಳಿಗ್ಗೆ ನ್ಯೂಸ್ ಪೇಪರ್ ಜೊತೆಯಲ್ಲಿ ಒಂದು ಕರಪತ್ರವು  ನನ್ನ ಮನೆ ಬಾಗಿಲಲ್ಲಿ ಬಿದ್ದಿತ್ತು.  ಎಸ್.ಎಸ್.ವೈ [ಸಿದ್ಧ ಸಮಾಧಿ ಯೋಗ] ತರಗತಿಯು ಆರಂಭವಾಗುವ ಬಗ್ಗೆ ಪ್ರಕಟಣೆ ಅದರಲ್ಲಿತ್ತು. ನೋಡಿದೆ"ಬಿ.ಪಿ. ಶುಗರ್, ಹೃದ್ರೋಗ, ಇತ್ಯಾದಿ ಯಾವುದೇ ಹಳೆಯ ರೋಗಗಳಿಗೆ ಯಾವ ಔಷಧ ವಿಲ್ಲದೆ ಚಿಕಿತ್ಸೆ"
ಕರಪತ್ರ ನೋಡಿದೊಡನೆ  ಧ್ಯಾನ-ಪ್ರಾಣಾಯಾಮ ತರಗತಿಯನ್ನು ಸೇರಲು ನಿರ್ಧರಿಸಿದೆ. ಹಾಸನದ ಜವೇನಹಳ್ಳಿ ಮಠದಲ್ಲಿ ಆರಂಭವಾದ ಆ ಶಿಭಿರವನ್ನು ನಡೆಸಿಕೊಟ್ಟವರು ಶ್ರೀ ಸುರೇಶ್ ಗುರೂಜಿ. ತರಗತಿ ಪ್ರಾರಂಭವಾಯ್ತು. ವಜ್ರಾಸನದಲ್ಲಿ ಕುಳಿತು ಪ್ರಾಣಾಯಾಮ ಅಭ್ಯಾಸ ಶುರುಮಾಡಬೇಕು. ಎರಡೂ ಹಸ್ತಗಳನ್ನು ಸೊಂಟದ ಮೇಲಿಡಬೇಕು. ಬಲಗೈ ಇಡಲು ಸಾಧ್ಯ, ಎಡಗೈ?    ಎಡ ಹಸ್ತವನ್ನು ಬಲಹಸ್ತದ ಸಹಾಯದಿಂದ ಸೊಂಟದ ಮೇಲಿಟ್ಟೆ. ವಿಭಾಗಶ: ಪ್ರಾಣಾಯಾಮ ಶುರುವಾಯ್ತು. ಅಂದು ಕಳೆಯಿತು. ಎರಡನೆಯ ದಿನವೂ ಆರಂಭದಲ್ಲಿ ಸೊಂಟದ ಮೇಲೆ ಎಡಹಸ್ತವನ್ನು ಬಲಹಸ್ತದ ಸಹಾಯದಿಂದಲೇ ಇಟ್ಟು  ಪ್ರಾಣಾಯಾಮ ಶುರು ಮಾಡಿದೆ. ಆನಂತರ ಹಸ್ತಗಳನ್ನು ಕೊಂಕಳಲ್ಲಿ ಇಡಬೇಕು. ಮತ್ತೆ ಅದೇ ರೀತಿ  ಎಡಗೈಯ್ಯನ್ನು  ಬಲಗೈ ಸಹಾಯದಿಂದ ಇಟ್ಟೆ. ಹೀಗೆ ಎರಡೂ ಸ್ಥಿತಿಯ ಪ್ರಾಣಾಯಾಮಗಳನ್ನು ಎರಡೂ ದಿನ ನಾಲ್ಕಾರು ಭಾರಿ ಪ್ರಯತ್ನ ಪೂರ್ವಕವಾಗಿ ಮಾಡಿದೆ. ಮೂರನೆಯ ದಿನ ಪ್ರಾಣಾಯಾಮ ತರಗತಿಯ ಆರಂಭದಲ್ಲಿ ಸ್ವಲ್ಪ ಎಡಗೈಯ್ಯನ್ನು  ಬಲಗೈ ಸಹಾಯದಿಂದಲೇ ಸ್ವಲ್ಪ ಸುಲಭವಾಗಿ ಸೊಂಟದಮೇಲಿಡಲು ಸಾಧ್ಯವಾಯ್ತು. ಆದಿನ ನನ್ನ ಜೀವನದಲ್ಲಿ ಮರೆಯಲಾಗದ ದಿನ.ಆಶ್ಚರ್ಯ! ಪ್ರಾಣಾಯಾಮ ಅಭ್ಯಾಸ ಮಾಡುತ್ತಾ ಮಾಡುತ್ತಾ ಕೈಯಲ್ಲಿ ಶಕ್ತಿಯ ಸಂಚಾರ ಆರಂಭ!! ಚಕಿತನಾದೆ. ಎನೋ ಒಂದು ಶಕ್ತಿಯು ಪ್ರವಹಿಸುವಂತೆ ಭಾಸವಾಯ್ತು. ಅಬ್ಭಾ! ಅದೆಷ್ಟು ದಿಗಳಿಂದ ಕಳೆದುಕೊಂಡಿದ್ದ ಕೈಯ್ಯನ್ನು ನಿಧಾನವಾಗಿ ಆಡಿಸುವಂತಾಯ್ತು. ಅಂದು ನನಗೆ ಹಬ್ಬ!!
ನೋಡಿ, ಮನುಷ್ಯನಿಗೆ ಎಲ್ಲಾ ಚೆನ್ನಾಗಿದ್ದಾಗ ಜೀವನ ಸಪ್ಪೆ ಎನಿಸುತ್ತೆ. ಕೊಟ್ಟಿದ್ದನ್ನು ಭಗವಂತ ಕಿತ್ತುಕೊಂಡು ಮತ್ತೆ ಕೊಟ್ಟಾಗ ನಮಗೆ ಅದರ ಮಹತ್ವ ಅರ್ಥವಾಗುತ್ತೆ. ಕ್ರಮೇಣ ದಿನಕಳೆದಂತೆ ಅದರ ಮಹತ್ವ ಮರೆಯಾಗುತ್ತಾ ಬರುತ್ತೆ. ನಾನು ಈ ವಿಚಾರದಲ್ಲಿ ಒಬ್ಬ ಪಕ್ಕಾ  ಉಧಾಹರಣೆಗೆ ಯೋಗ್ಯ. ಕಾರಣವೇನೆಂದರೆ ಧ್ಯಾನ-ಪ್ರಾಣಾಯಾಮವನ್ನು ಸತತವಾಗಿ ಎರಡು-ಮೂರು ವರ್ಷಗಳು ಮಾಡಿಕೊಂಡು ನೆಮ್ಮದಿಯ ಜೀವನ ಮಾಡುತ್ತಿದ್ದ ನಾನು ಕ್ರಮೇಣ ಅನ್ಯಾನ್ಯ ಸಾಮಾಜಿಕ ಕಾರ್ಯಕ್ರಮದಲ್ಲಿ ನನ್ನನ್ನು ತೊಡಗಿಸಿಕೊಂಡವನು ನನ್ನ ಜೀವನ ಕ್ರಮವನ್ನು ವೆತ್ಯಾಸ ಮಾಡಿಕೊಂಡೆ. ಈಗ ಸಣ್ಣಪುಟ್ಟ  ರೋಗಗಳು ನನ್ನನ್ನು ಭಾಧಿಸುತ್ತವೆ. ಎಲ್ಲಕ್ಕೂ ನನ್ನಲ್ಲೇ ಪರಿಹಾರವಿದೆ, ಆದರೆ ನಾನೊಬ್ಬ ಭಾವುಕ. ಯವುದೋ ವಿಚಾರಕ್ಕೆ ಅಂಟಿಕೊಂಡರೆ  ನನ್ನ ಎಲ್ಲಾ ಸಮಯವನ್ನೂ ಅದಕ್ಕೆ ಮೀಸಲು ಮಾಡಿ ನನ್ನನ್ನು ನಾನು ಮರೆಯುತ್ತೇನೆ. ನೀವು ಹೀಗಾಗಬೇಡಿ ಎಂದು ವಿನಂತಿಸಲೇ ನಾನು ಈ ಪುಟ್ಟ  ಬರಹವನ್ನು  ಮುಕ್ತಾಯ ಮಾಡುವೆ.
--------------------------------------
 ಪ್ರಾಣಾಯಾಮದಿಂದ ನನಗೆ ಗುಣವಾಯ್ತೆಂದರೆ  ಸೋದರಿ ಚಿತ್ರನಂಬಲಾಗುತ್ತಿಲ್ಲವೆಂದು ತಿಳಿಸಿದ್ದಾರೆ. ಯಾವ ಪ್ರಾಣಾಯಾಮ? ಎಂದಿದ್ದಾರೆ. ಎಸ್.ಎಸ್.ವೈ ನಲ್ಲಿ ಹೇಳಿಕೊಡಲಾಗುವ ಈ ಪ್ರಾಣಾಯಾಮವನ್ನು "ವಿಭಾಗೀಯ ಪ್ರಾಣಾಯಾಮಗಳು" ಎನ್ನುತ್ತಾರೆ. ಯೋಗಶಾಸ್ತ್ರದಲ್ಲಿ ಏನಿದೆಯೋ ನನಗೆ ತಿಳಿಯದು. ಆದರೆ ನನಗೆ ವರವಾದ ವಿಭಾಗೀಯ ಪ್ರಾಣಾಯಾಮದ ಒಂದು ಚಿಕ್ಕ ಕ್ಲಿಪ್ ಇಲ್ಲಿ ಹಾಕಿರುವೆ ಸೋದರಿ ಚಿತ್ರ ಇವರಿಗಾಗಿ. ಎಸ್.ಎಸ್.ವೈ ನಲ್ಲಿ ಹೇಳಿಕೊಡಲಾಗುವ ಪ್ರಾಣಾಯಾಮಗಳಲ್ಲಿ  ಇದು ಒಂದು. ಇಲ್ಲಿ ನನಗೆ ಯಾರ ಬಗ್ಗೆಯೂ  ಪ್ರಚಾರಕೊಡಬೇಕೆಂಬ ಆಸೆ ಇಲ್ಲ. ಆದರೆ ನನ್ನ ಅನುಭವವನ್ನು ಮುಕ್ತವಾಗಿ ಹಂಚಿಕೊಂಡಿರುವೆ ಅಷ್ಟೆ.


Thursday, January 13, 2011

ಸತ್ತ ಕೈ ಮತ್ತೆ ಬಂದಾಗ

ಸಾಮಾನ್ಯವಾಗಿ ಭಾವಜೀವಿಗಳಲ್ಲಿ ಒಂದು ಕೊರತೆ ಕಾಣುತ್ತೆ. ಯಾವುದೋ ಒಂದು ಭಾವಕ್ಕೆ ಬಂಧಿಯಾಗಿದ್ದರೆ ಉಳಿದದ್ದೆಲ್ಲವನ್ನೂ ಕಡೆಗಣಿಸುವ ಪ್ರವೃತ್ತಿ.ಉಧಾಹರಣೆಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಅನೇಕರನ್ನು ನೋಡಿದ್ದೇನೆ. ಸರಿಯಾದ ಸಮಯಕ್ಕೆ  ಸ್ನಾನವಿಲ್ಲ, ಸರಿಯಾದ ಸಮಯಕ್ಕೆ ಆಹಾರವಿಲ್ಲ, ಸರಿಯಾದ ನಿದ್ರೆ ಇಲ್ಲ.ಶರೀರ ಮನಸ್ಸುಗಳಿಗೆ ಅಗತ್ಯವಾದ ವ್ಯಾಯಾಮವಿಲ್ಲ. ಆದರೆ ಎಲ್ಲದರಬಗ್ಗೆ ಬರೆಯುವುದಂತೂ ನಿಜ. ಮನುಷ್ಯನಿಗೆ ತನ್ನ ದೈಹಿಕ-ಮಾನಸಿಕ ಆರೋಗ್ಯವು ತನ್ನ ನಿಯಂತ್ರಣದಲ್ಲಿಲ್ಲದಿದ್ದರೆ ಏನು ಮಾಡಿ ಏನು ಪ್ರಯೋಜನ? [ ಮದ್ಯಸೇವನೆಮಾಡಿ,ಧೂಮಪಾನಮಾಡುತ್ತಾ ಬರೆಯುವವರೂ ಇದ್ದಾರೆ. ಇವರ ಬಗ್ಗೆ ಚರ್ಚಿಸುವುದಿಲ್ಲ]
ಸುಧಾಕರಶರ್ಮರಂತವರು ಅಪರೂಪ. ತಾವು ಯೋಗಿಯಂತೆ ಬದುಕುತ್ತಾ , ಆಹಾರವಿಹಾರಗಳಿಗೆ ಒಂದು ಪಥ್ಯವನ್ನು ಹಾಕಿಕೊಂಡು, ಪ್ರಾಣಾಯಾಮ-ಯೋಗವನ್ನು ಕಡೆಗಣಿಸದೆ, ಸಾಹಿತ್ಯಕೃಷಿ, ಅಧ್ಯಯನ ಮಾಡುತ್ತಾ, ಸಾಮಾಜಿಕ ಜಾಗೃತಿಗಾಗಿ ಚಟುವಟಿಕೆಗಳನ್ನು ನಡೆಸುತ್ತಾ ಮಾದರಿಯಾಗಿ ಬಾಳುವ ಕ್ರಮ.

           ನನಗಿರುವ ಕೊರತೆಗಳಿಗೆ ಪರಿಹಾರ ಹುಡುಕಲೆಂದೇ ಈ ಮಾತುಗಳು. 
ಒಂದು ಘಟನೆಯನ್ನು ವೇದಸುಧೆಯ ಎಲ್ಲಾ ಅಭಿಮಾನಿಗಳ ಗಮನಕ್ಕೆ ತಂದುಬಿಡುತ್ತೇನೆ. ಸುಮಾರು ೧೫ ವರ್ಷಗಳ ಹಿಂದೆ ಸರ್ವೈಕಲ್ ಸ್ಪಾಂಡಲೈಟಿಸ್ ಸಮಸ್ಯೆಯಿಂದಾಗಿ ಒಂದು ರಾತ್ರಿ ಇದ್ದಕ್ಕಿದ್ದಂತೆ ನನ್ನ ಎಡಗೈ  ಶಕ್ತಿಯನ್ನು ಕಳೆದುಕೊಂಡಿತು. ಅಂದರೆ ನನ್ನ ಪಾಲಿಗೆ ಅದು ಸತ್ತಂತಾಯ್ತು. ಕೈ ಒಂದಿಂಚೂ ಮೇಲೆತ್ತಲಾಗುತ್ತಿಲ್ಲ. ಗಾಭರಿಯಾಯ್ತು. ಬೆಳಿಗ್ಗೆ ಎದ್ದವನೇ ಆತಂಕದಿಂದ  ನನ್ನ ಮಿತ್ರರಾದ  ಹಾಸನದ " ಧರ್ಮಸ್ಥಳ ಆಯುರ್ವೇದಿಕ್ ಕಾಲೇಜಿನ " ಪ್ರಾಂಶುಪಾಲರಾದ ಡಾ|| ಪ್ರಸನ್ನರಾವ್ ಅವರಿಗೆ ಫೋನ್ ಮಾಡಿದೆ. ಗಾಭರಿ ಬೇಡ. ಬನ್ನಿ ಸರಿಮಾಡುತ್ತೇನೆಂದು ಭರವಸೆ ನೀಡಿದರು. ಆಯುರ್ವೇದಿಕ್ ಆಸ್ಪತ್ರೆಯಲ್ಲಿ ಎಂಟು ದಿನಗಳು ಸತತವಾಗಿ ಆಯಿಲ್ ಮಸ್ಸೇಜ್, ಸ್ಟೀಮ್  ಬಾತ್ ಎಲ್ಲಾ ಮಾಡಿದ್ದಾಯ್ತು. ಏನೂ ಪರಿಣಾಮ ಬೀರಲಿಲ್ಲ. ನನಗೆ ಆತಂಕ ಹೆಚ್ಚಾಯ್ತು. ನಾನೆಂದೆ "ಡಾಕ್ಟ್ರೇ, ಏನೂ ಸುಧಾರಿಸಲಿಲ್ಲವಲ್ಲಾ! ನನ್ನನ್ನು ನಿಮ್ಹ್ಯಾನ್ಸ್ ಗೆ [ಹೀಗೆಂದಾಗ ಹುಚ್ಚಾಸ್ಪತ್ರೆಗೆ ಎಂದು ಗೇಲಿ ಮಾಡಿದವರಿದ್ದಾರೆ] ಕಳಿಸಿ ಬಿಡಿ. ಅಲ್ಲಾದರೂ ತೋರಿಸುತ್ತೇನೆ" 
ಆಗ ಪ್ರಸನ್ನರಾಯರು ಹೇಳಿದರು" ನೋಡಿ ಶ್ರೀಧರ್ ನೀವು ಅಲ್ಲಿ ತೋರಿಸಿದೊಡನೆ ಕುತ್ತಿಗೆ ಭಾಗದಲ್ಲಿ ಆಪರೇಶನ್ ಮಾಡಬೇಕೆಂದು ಹೇಳುತ್ತಾರೆ. ಆದರೆ ನೀವು ಆಪರೇಶನ್ ಮಾಡಿಸಿಕೊಳ್ಳಬೇಡಿ. ನನಗೆ ಫೋನ್ ಮಾಡಿ ಬೇರೆ ದಾರಿ ಹುಡುಕೋಣ ವೆಂದರು.ನಿಮ್ಹ್ಯಾನ್ಸ್ ನಲ್ಲಿ ಮೊದಲು ಪರೀಕ್ಷಿಸಿದ ವೈದ್ಯರು ಸುಮಾರು ಐನೂರು ರೂಪಾಯಿಗಳ ಮಾತ್ರೆ ಬರೆದುಕೊಟ್ಟರು. ಮೂರು ದಿನಗಳ ನಂತರ  ನನ್ನನ್ನು ಪರೀಕ್ಷಿಸಿದ ಹಿರಿಯ ವೈದ್ಯರು ಈ ಮಾತ್ರೆ ಬೇಡ " ಒಂದು ಆಪರೇಶನ್ ಆಗಬೇಕು, ಅದೂ ನೂರಕ್ಕೆ ನೂರು ಭರವಸೆ ಇಲ್ಲ. ಪ್ರಯತ್ನ ಮಾಡಬೇಕಷ್ಟೆ." ಎಂದರು . ಆಗ ಬೇರೆ ದಾರಿ  ಇಲ್ವಾ ಡಾಕ್ಟ್ರೇ ಎಂದಾಗ ಫಿಸಿಯೋ ತೆರೆಫಿ ಪ್ರಯತ್ನಿಸಬಹುದು ಅದು ತುಂಬಾ ನಿಧಾನ. ಸುಧಾರಣೆ ಕಷ್ಟ. ಎಂದರು.ಆದರೂ ಫಿಸಿಯೋ ತೆರೆಫಿ ಚಿಕಿತ್ಸೆ ಆರಂಭಿಸಲಾಯ್ತು. ಅಲ್ಲೂ ಸುಧಾರಿಸಲೇ ಇಲ್ಲ. ಆಗ ಸುಮಾರು ಆರು ತಿಂಗಳು ನನ್ನ ಸ್ಥಿತಿ ದೇವರೇ ಬಲ್ಲ. ಒಂದು ಕೈಯಲ್ಲಿ ಎಲ್ಲಾ ಕೆಲಸ ಮಾಡಬೇಕು. ಹೆಚ್ಚು ದಿನ ರಜೆ ಹಾಕುವಂತಿಲ್ಲ.
ಈ ಮಧ್ಯೆ ನನ್ನ ಮಿತ್ರರೊಬ್ಬರು ಒಂದು ಸಲಹೆ ನೀಡಿದರು. ಮುಂಬಯಿಯಲ್ಲಿ ಒಬ್ಬ ಸ್ಪಿರಿಚುಯಲ್ ಹೀಲರ್ ಇದ್ದಾರೆ. ಅವರಹತ್ತಿರ ಹೋದರೆ ಕೇವಲ ಸ್ಪರ್ಷಮಾತ್ರದಿಂದ ಗುಣಪಡಿಸುತ್ತಾರಂತೆ. ಫೋನ್ ನಂಬರ್ ಪಡೆದು ಅವರನ್ನು ಹುಡುಕಿದೆ. ಅವರು ಧಾರವಾಡದಲ್ಲಿ ಕ್ಯಾಂಪ್ ಮಾಡಿದ್ದರು. ಮುಳುಗುವವನಿಗೆ ಕಡ್ಡಿ ಕಂಡರೂ ಹಿಡಿದುಕೊಳ್ಳುವಂತೆ  ಅವರ ಬಳಿ ಹೋದೆ. ರಾತ್ರಿ ಟ್ರೈನ್ ನಲ್ಲಿ ಪ್ರಯಾಣಮಾಡುವಾಗ ಅನುಭವಿಸಿದ ನೋವು ಅವರ ಸ್ಪರ್ಷದ ನಂತರ ಸ್ವಲ್ಪ ಕಾಲ ಇರಲಿಲ್ಲ. "ನಾಲ್ಕೈದು ಭಾರಿ ಬಂದರೆ ಗುಣಪಡಿಸುವೆ" ಎಂದರು..... ಮತ್ತೆ ಅವರ ಬಳಿ ಹೋಗಲಾಗಲಿಲ್ಲ. ಆದರೂ ಔಷಧಿ-ಮಾತ್ರೆ ಇಲ್ಲದೆ, ಆಪರೇಶನ್ ಇಲ್ಲದೆ ನಾನು ಸಂಪೂರ್ಣ ಗುಣಮುಖನಾದೆ. ಅದು ಹೇಗೆ? ಆ ಪವಾಡವನ್ನು ನಾಳೆ ಬರೆಯುವೆ.

ಶ್ರೀ ಶೃತಿಪ್ರಿಯರೊಂದಿಗೆ ಕೇವಲ ನಾಲ್ಕು ನಿಮಿಷಗಳ ಮಾತುಕತೆ

ವೇದತರಂಗ ಪತ್ರಿಕೆಯ ಸಂಪಾದಕರಾದ ಶ್ರೀ ಶೃತಿಪ್ರಿಯರೊಂದಿಗೆ ವೇದಾಧ್ಯಾಯೀ ಸುಧಾಕರ ಶರ್ಮರ ಕೇವಲ ನಾಲ್ಕು ನಿಮಿಷಗಳ ಮಾತುಕತೆ ವೇದಸುಧೆಗಾಗಿ...

ಆಹಾರವನ್ನು ಹೇಗೆ ಸೇವಿಸಬೇಕು? Part-3

ಮೊದಲನೆಯ ಸುವರ್ಣ ಸೂತ್ರ - ಚೆನ್ನಾಗಿ ಅಗಿದು ಸೇವಿಸಬೇಕು.
ತಿನ್ನುವ ಪದಾರ್ಥ ಮೆತ್ತಗಿದ್ದರೂ ಅಗಿಯಲೇಬೇಕು. ಮೆತ್ತಗೆ/ನುಣ್ಣಗೆ ಮಾಡುವುದು ಅಷ್ಟು ಮುಖ್ಯವಾದ ಉದ್ದೇಶವಲ್ಲ! ತಿನ್ನುವ ಆಹಾರದೊಂದಿಗೆ ಸಾಕಷ್ಟು ಜೊಲ್ಲು ಸೇರಿಸಬೇಕೆಂಬುದು ಮುಖ್ಯ ಉದ್ದೇಶ. ಸಸ್ಯಾಹಾರಿಗಳಲ್ಲಿ, ಮಾನವನೂ ಶಾರೀರಿಕವಾಗಿ ಸಸ್ಯಾಹಾರಿಯೇ ಆದ್ದರಿಂದ, ಜೀರ್ಣಕ್ರಿಯೆ ಪ್ರಾರಂಭವಾಗುವುದು ಬಾಯಿಯಲ್ಲಿ! ಸರಿಸುಮಾರು 30ರಿಂದ 40-50 ಸಲ ಜಗಿಯಬೇಕು. Eat the Liquids and Drink the Solids ಎಂಬುದು ಒಂದು ವಿಚಿತ್ರವಾದ ಸೂತ್ರ! ದ್ರವಗಳನ್ನು ಗಟ್ಟಿಪದಾರ್ಥವೆಂಬಂತೆ ಬಾಯಲ್ಲಿ ಆಡಿಸಬೇಕು. ಗಟ್ಟಿ ಪದಾರ್ಥಗಳನ್ನು ನೀರಾಗುವವರೆಗೂ ಬಾಯಲ್ಲಿಯೇ ಆಡಿಸಿ ಕುಡಿಯಬೇಕು!
ಜೊಲ್ಲು ಒಂದು ಅದ್ಭುತ ರಚನೆ. ಬಾಯಿಯಿಂದ ಹಿಡಿದು ಗುದದ್ವಾರದವರೆಗೆ Gastro intestinal trackನಲ್ಲಿ ಯಾವುದೇ ತೊಂದರೆ, ಹುಣ್ಣುಗಳಿದ್ದರೆ ಅದಕ್ಕೆ ಪ್ರಕೃತಿ ನೀಡಿರುವ ಪರಿಣಾಮಕಾರಿಯಾದ ಹಾಗೂ ಉಚಿತವಾದ ಔಷಧಿಯೇ ಈ ಜೊಲ್ಲು!
ಇನ್ನು ಆಹಾರಗಳ ಮಿಶ್ರಣ. ನಾಮಾನ್ಯವಾಗಿ ಹಣ್ಣು - ತರಕಾರಿಗಳನ್ನು ಮಿಶ್ರ ಮಾಡುವುದಿಲ್ಲ. ತಿಂದರೆ ಬರೀ ಹಸಿ ತರಕಾರಿ, ಅಥವಾ ಬರೀ ಹಣ್ಣು. ಅದರಲ್ಲೂ Melon alone ಎಂದೂ ಹೇಳುತ್ತಾರೆ. ಒಣಹಣ್ಣುಗಳನ್ನು ಪ್ರತ್ಯೇಕವಾಗಿ ತಿನ್ನುವುದೇ ಸರಿಯೆನಿಸುತ್ತದೆ.
ಇದರ ಹಿಂದಿನ ವಿಜ್ಞಾನ ಅರಿಯಲು ಕಷ್ಟವೇನಿಲ್ಲ. ಒಂದೊಂದು ಆಹಾರಪದಾರ್ಥವೂ ಜೀರ್ಣವಾಗಲು ತನ್ನದೇ ಆದ ಸಮಯವನ್ನು ತೆಗೆದುಕೊಳ್ಳುತ್ತದೆ. ಸುಮಾರು ಒಂದೇ ಸಮಯವನ್ನು ತೆಗೆದುಕೊಳ್ಳುವ ಆಹಾರಗಳನ್ನು ಮಿಶ್ರ ಮಾಡಿದರೆ ಸಮಸ್ಯೆಯಿಲ್ಲ. ವಿಭಿನ್ನ ಸಮಯ ತೆಗೆದುಕೊಳ್ಳುವ ಆಹಾರಗಳನ್ನು ಬೆರೆಸಿದರೆ ಭಾಗಶಃ ಅರಗುತ್ತದೆ, ಭಾಗಶಃ ಅರಗಿರುವುದಿಲ್ಲ. ಎಲ್ಲಿ ತಿನ್ನಬೇಕು?
(ಮುಂದುವರೆಯುತ್ತದೆ)
-ಸುಧಾಕರಶರ್ಮ

ವಿ.ಸೂ. ಆಹಾರದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಓದಿರಿ "ಮನುಜ! ಏನು ನಿನ್ನ ಆಹಾರ?" - ಲೇಖಕರು: ಶ್ರೀ ಜಿ.ವಿ.ವಿ.ಶಾಸ್ತ್ರಿ, ನಿಸರ್ಗ ಯೋಗ ಧಾಮ, 11ನೇ ಕ್ರಾಸ್, ಎಸ್.ಎಸ್.ಪುರಂ, ತುಮಕೂರು - 572102. ಫೋನ್: 0816-2278499. 

Wednesday, January 12, 2011

" ಅದಕ್ಕಿನ್ನೂ ಕಾಲವಿದೆ" :

"ವೇದಸುಧೆ" ಎಂಬ ನನ್ನ ಬ್ಲಾಗ್ ಹೆಸರು  ಕೇಳಿದಾಗ [ಕ್ಷಮೆ ಇರಲಿ, ಇದು ವೇದಸುಧೆಬಳಗದ ಬ್ಲಾಗ್] ಹಲವರು ಹಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದನ್ನು ನಾನು ಕೇಳಿದ್ದೇನೆ.
* ಈಗತಾನೇ ಬಿ.ಇ.ಮುಗಿಸಿ ಒಂದು ಕಂಪನಿಯಲ್ಲಿ ಕೆಲಸವನ್ನು ಮಾಡುತ್ತಿರುವ ನನ್ನ ಮಗನಿಗೆ ಹೇಳಿದೆ" ನನ್ನ ಬ್ಲಾಗ್ "ವೇದಸುಧೆ ಯನ್ನು ನೋಡು." ಅದರ ಬಗೆಗೆ ಪೂರ್ಣ ವಿಚಾರ ತಿಳಿಯಲು ವ್ಯವಧಾನವಿಲ್ಲದ ಅವನು ಹೇಳಿದ " ಅದಕ್ಕಿನ್ನೂ ಕಾಲವಿದೆ" " ನಾನೂ ನಿನ್ನ ವಯಸ್ಸಿಗೆ ಬಂದಾಗ ಅದೆಲ್ಲಾ  ಶುರುಮಾಡುವೆ
* ವೇದಸುಧೆ ಹೆಸರು ಕೇಳಿದೊಡನೆ ಪುರೋಹಿತರೊಬ್ಬರು " ಎಲ್ಲಾ ವ್ರಥಕಥೆಗಳ ಬಗ್ಗೆಯೂ ಹಾಕಿದ್ದೀರಾ?
* ಸಾಮಾನ್ಯ ಗೃಹಸ್ತರೊಬ್ಬರು ಯಾವುದೋ ಪೂಜಾ ವಿಧಾನದ ಬಗ್ಗೆ ತಮ್ಮ ಸಂಶಯ ಕೇಳಿದರು
* ಆಸ್ತಿಕರೊಬ್ಬರು ಯಜ್ಞ ಯಾಗಾದಿಗಳ ಫೋಟೋಗಳನ್ನು ಕಳುಹಿಸಿಕೊಟ್ಟರು
* ನಮ್ಮ ಮಕ್ಕಳಿಗೆ ಪುರಾಣಪುಣ್ಯಕಥೆಗಳ ಬಗ್ಗೆ ತಿಳಿಸಬೇಕೆಂದವರು ಕೆಲವರು
* ನಮ್ಮ ಯುವ ಪೀಳಿಗೆಗೆ ಹಬ್ಬ ಹರಿದಿನಗಳ ಬಗೆಗೆ  ವೇದಸುಧೆಯಲ್ಲಿ ಪರಿಚಯ ಮಾಡಿಸಬೇಕೆಂದವರು ಕೆಲವರು
* ನೋಡಿ ಬ್ರಾಹ್ಮಣಿಕೆ ಹಾಳಾಗಿ ಹೋಗುತ್ತಿದೆ- ಅದನ್ನು ಉಳಿಸುವ ಕೆಲಸವಾಗಬೇಕೆಂದವರು ಒಬ್ಬ ಹಿರಿಯರು
         ವೇದವೆಂಬ ಎರಡಕ್ಷರವನ್ನು ಕೇಳಿದಾಗ ಹಲವರಿಂದ ಬಂದ ಹಲವು ಅಭಿಪ್ರಾಯಗಳಿವು. ಇವು ಅನೇಕರ ಅಭಿಪ್ರಾಯಗಳಿರಬಹುದು.ಒಂದೊಂದನ್ನೇ ವಿಮರ್ಶಿಸುತ್ತಾ ವಿಚಾರ ಮಾಡೋಣ.
" ಅದಕ್ಕಿನ್ನೂ ಕಾಲವಿದೆ" :
    ಒಂದು ಅತ್ಯಂತ ಬಡತನದ ಮನೆಯಲ್ಲಿ ಹುಟ್ಟಿದ್ದರಿಂದ ನನಗೆ  ಜೀವನಾನುಭವ ಸಾಕಷ್ಟು ಆಗಿದೆಯಾದ್ದರಿಂದ "   ನಿಜ ಮನುಷ್ಯನನ್ನು ಮಾಡುವ ನಿಜವಾದ ವೇದಾಧ್ಯಯನವು  ನನ್ನ ಬಾಲ್ಯದಿಂದಲೇ ಆಗಿದೆ ಎಂಬ ಸಮಾಧಾನ ನನಗಿದೆ" ನನ್ನ ಜೀವನದ ಪಾಠವು  ವೇದದಲ್ಲಿದೆ ಎಂಬುದು ಈಗೀಗ ಅರ್ಥವಾಗುತ್ತಿದೆ.ಆದ್ದರಿಂದ  ತುತ್ತು ಅನ್ನಕ್ಕೆ ಪರಿತಪಿಸುವ ಮನೆಯಲ್ಲಿ ನನ್ನ ಜನ್ಮಕ್ಕೆ ಕಾರಣನಾದ ಆ ಭಗವಂತ ಮತ್ತು ನನಗೆ ಬಡತನದ ಬದುಕು ಹೇಗಿರುತ್ತದೆಂದು ಅನುಭವ ನೀಡಿದ ನನ್ನ ಮಾತಪಿತೃಗಳೇ ನನಗೆ ನಿಜವಾದ ವೇದಾಧ್ಯಯನ ಮಾಡಿಸಿದ ಆಚಾರ್ಯರೆಂದು ತಿಳಿದು ಅವರನ್ನು ಸದಾಸ್ಮರಿಸುತ್ತೇನೆ.ಆದರೆ ನನ್ನ ಮಗ ಒಬ್ಬ ಸ್ಥಿತಿವಂತನ ಮನೆಯಲ್ಲಿ ಹುಟ್ಟಿದ[ಆಹೊತ್ತಿಗೆ ನನ್ನ ಬಡತನದ ಬೇಗೆ ಮಾಯವಾಗಿತ್ತು] ಅವನಿಗೆ ನನ್ನಂತೆ ಜೀವನಾನುಭವವೂ ಆಗಲಿಲ್ಲ. ವೇದಾಧ್ಯಯನವೂ ಆಗಲಿಲ್ಲ. ಅವನಿಗೆ ನಿಜವಾಗಿ ಸಮಯ ಜಾರುತ್ತಿದೆ. "ವೇದಸುಧೆಯಲ್ಲಿ ನೆಮ್ಮದಿಯ ಬದುಕಿಗಾಗಿ ವೇದ ಜ್ಞಾನದ ಬಗೆಗೆ ಸುಧಾಕರಶರ್ಮರು ಸಾಕಷ್ಟು ತಿಳುವಳಿಕೆ ನೀಡುತ್ತಿದ್ದಾರೆ. ಅವನಂತ ಯುವಕರಿಗೆ ಖಂಡಿತವಾಗಿಯೂ "ವೇದಸುಧೆಯು" ದಾರಿ ದೀಪವಾಗಬಲ್ಲದು. ಆದರೆ ಶರ್ಮರ ಉಪನ್ಯಾಸಗಳನ್ನಾದರೂ ನಿತ್ಯವೂ ಅರ್ಧಗಂಟೆಯಾದರೂ ಕೇಳಬೇಕು.
" ಎಲ್ಲಾ ವ್ರಥಕಥೆಗಳ ಬಗ್ಗೆಯೂ ಹಾಕಿದ್ದೀರಾ?
ವೇದದ ನಿಜವಾದ ಅರ್ಥವನ್ನು ತಿಳಿದಾಗ ವ್ರಥಕಥೆಗಳ ಮಾತೇ ಬರುವುದಿಲ್ಲ.
ಪೂಜಾ ವಿಧಾನ:
ನಿತ್ಯಬದುಕೇ ಒಂದು ಆರಾಧನೆ, ಒಂದು ಯಜ್ಞ.ಸಮಾಜಮುಖಿಯಾಗಿ ಬಾಳುವುದನ್ನು ವೇದವು ನಮಗೆ ಕಲಿಸಿಕೊಡುತ್ತದೆ, ನಾವೀಗ ಮಾಡುತ್ತಿರುವ ಪೂಜಾವಿಧಾನವೇ ಬದಲಾಗುತ್ತದೆ.
ಪುರಾಣಪುಣ್ಯಕಥೆಗಳ ಬಗ್ಗೆ :
ನನಗನಿಸುವಂತೆ  ಪೂರ್ವದಲ್ಲಿ ರಾಮಾಯಣ ಮಹಾಭಾರತದ ಯುದ್ಧ ಕಾಲದಲ್ಲಿ ವೇದ ಪ್ರಸಾರಕ್ಕೆ ಧಕ್ಕೆ ಬಂದಿದೆ[ ಇದನ್ನು ಬಲ್ಲವರು ಸರಿಯಾಗಿ ವಿವರಿಸ ಬೇಕು] ಆನಂತರ ಜನರು ಧರ್ಮಬ್ರಷ್ಠರಾಗುತ್ತಾರೆಂದು ಅರಿತ ಕೆಲವು ಋಷಿಗಳು[ಋಷಿ ಎಂಬ ಪದ ಉಚಿತವೋ ಅಲ್ಲವೋ ತಿಳಿಯದು] ಭೀತಿಯಿಂದ ಭಗವಂತನಲ್ಲಿ ನಂಬಿಕೆಬರುವಂತೆ ಸರಳವಾಗಿ ರಚಿಸಿರುವ ಕಥೆಗಳಿರಬಹುದು.ಯಾವುದೋ ಆಪತ್ಕಾಲಕ್ಕೆ ಮಾಡಿರುವ ಆ ಪ್ರಯತ್ನವು ತಲೆತಲಾಂತರಗಳಲ್ಲೂ ಮುಂದುವರೆದು ವೇದ-ಪುರಾಣಗಳೆಂಬ ಮಟ್ಟಿಗೆ ಬೆಳೆದದ್ದು ಸುಳ್ಳಲ್ಲ.  ವೇದವು ಆ ಸಂದರ್ಭದಲ್ಲಿ ನಾಶವಾಗಿಲ್ಲ. ಬದಲಿಗೆ ಯಾವುದೋ ಒಂದು ವರ್ಗಕ್ಕೆ ಸೀಮಿತವಾಗಿ ಅದರ ಪರಿಣಾಮವಾಗಿ  ವೇದವನ್ನು ಬ್ರಾಹ್ಮಣರ ಹೊರತಾಗಿ ಅನ್ಯ ವರ್ಗದ ಜನರ ಕಿವಿಯ ಮೇಲೂ ಬೀಳಬಾರದೆಂಬ ಮಟ್ಟಿಗೆ ನಡೆದುಕೊಂಡದ್ದು ಕಥೆಯಲ್ಲ-ವಾಸ್ತವ.ಆದರೆ ಬ್ರಾಹ್ಮಣ ಪದದ ಅರ್ಥವೇ ಬೇರೆ. ಅದು ಒಂದು ಜಾತಿಯ ಹೆಸರಲ್ಲ. ಅದನ್ನು ವೇದಸುಧೆಯ ಶರ್ಮರ ಪುಟದಲ್ಲಿ ಆಡಿಯೋ ಕೇಳಿ ಅರ್ಥ ಮಾಡಿಕೊಳ್ಳಬಹುದು. ಆದ್ದರಿಂದ ಪುರಾಣಪುಣ್ಯಕಥೆಗಳೆಂಬ ಕಟ್ಟು ಕಥೆಗಳ ಹಿಂದೆ ಬಿದ್ದು ನಿಜವಾದ ವೇದವನ್ನು ಮರೆತಿರುವುದು ಸರಿಯೇ? ಚಿಂತನೆ ಮಾಡಬೇಕು.
ಹಬ್ಬ ಹರಿದಿನಗಳ ಬಗೆಗೆ
 ಎಷ್ಟು ಓದಿದರೇನು? ನಾವಿನ್ನೂ ಕಂದಾಚಾರಗಳಿಗೇ ಕಟ್ಟು ಬಿದ್ದಿದ್ದೇವೆ.ಮೊನ್ನೆ ನನ್ನ ತಂಗಿಯ  ಮನೆಯಲ್ಲಿ "ಸುಬ್ರಹ್ಮಣ್ಯ ಷಷ್ಠಿ" ಯ ಆಚರಣೆ. .ಊಟದಲ್ಲಿ ಅಡಿಗೆಗೆ ಖಾರವನ್ನೇ ಹಾಕಿಲ್ಲ. ಬರಿ ಸಪ್ಪೆ. ಮಾಡಿದ್ದು ಹಲವು ಬಗೆ ಅಡಿಗೆ. ಅದರಲ್ಲಿ ಒಂದು  ಅವರೆ ಕಾಳಿನ ಸಾಂಬಾರ್ ಇರಬಹುದು.ಬರಿ ಸಪ್ಪೆ. ನಾನು ಉಪ್ಪಿನ ಕಾಯಿ ಹಾಕ್ತೀರಾ? ಎಂದೆ " ಇವತ್ತು ಹಾಕುವಂತಿಲ್ಲ" ಎಂದರು.
ನೋಡಿ ನಮ್ಮ ಆಚರಣೆಗಳ ಫಲ! ಬಹುಷ: ಆರೋಗ್ಯದ ಕಾರಣಕ್ಕೆ ಯಾವ ಕಾಲದಲ್ಲೋ ಯಾರೋ ಒಬ್ಬರು "ಸುಬ್ರಹ್ಮಣ್ಯ ಷಷ್ಠಿ"ಯ ಹೆಸರಲ್ಲಿ ಆರೋಗ್ಯಕರವಾದ ಅಡಿಗೆ ಹೇಳಿರಬಹುದು. ಆದರೆ ಕಡೆಯಲ್ಲಿ ಉಳಿದಿದ್ದೇನು? ಅಂದು ಅಡಿಗೆಗೆ  ಖಾರವನ್ನೇ ಹಾಕಬಾರದು. ಆದರೆ ಅವರೇ ಕಾಳಿನ ಸಾಂಬಾರ್ ಮಾಡಬಹುದೇ? ಚಿಂತಿಸಲೇ ಇಲ್ಲ.ನಮ್ಮ ಹಬ್ಬಗಳ ಆಚರಣೆ ಹೀಗಿದೆ. ಅರ್ಥ ಕಳೆದುಕೊಂಡಿದೆ ಎನಿಸುತ್ತಿಲ್ಲವೇ?
ಬ್ರಾಹ್ಮಣಿಕೆ ಹಾಳಾಗಿ ಹೋಗುತ್ತಿದೆ
ಪ್ರಶ್ನೆ ಕೇಳಿದವರು ಬ್ರಾಹ್ಮಣ ಎಂದರೆ ಒಂದು ಜಾತಿಯನ್ನು ಉದ್ಧೇಶಿಸಿ ಕೇಳಿದ್ದರು. ಅದರೆ ಬ್ರಾಹ್ಮಣ ಪದಕ್ಕೆ ಅರ್ಥವೇ ಬೇರೆ. ಬ್ರಹ್ಮಜ್ಞಾನವನ್ನು ಪಡೆಯುವವ ಬ್ರಾಹ್ಮಣ.ಹೌದು ಬ್ರಹ್ಮಜ್ಞಾನದ ಪ್ರಸಾರವಾಗಬೇಕು.

ವೇದಸುಧೆಯಲ್ಲಿ ನಿಜವಾದ ವೇದಾರ್ಥಪ್ರಸಾರವಾಗಬೇಕು, ಬದುಕಿಗೆ ನಿಜವಾದ ಮಾರ್ಗದರ್ಶನ ವೇದಗಳಿಂದ ಸಿಗಬೇಕೆಂಬ ಮಹತ್ವಾಕಾಂಕ್ಷೆಯಿಂದ ವೇದಸುಧೆ ಆರಂಭವಾಗಿದೆ. ಆಪ್ರಯತ್ನದಲ್ಲಿ ಅವಿರತ ಶ್ರಮಿಸುತ್ತಿದೆ. ಇಂತಹ ವೇದಸುಧೆಯನ್ನು ಯಾವ ವಯಸ್ಸಿನಿಂದ  ಓದಬೇಕು? ಬಹಳ ಪ್ರೀತಿಂದ ಒಂದು ಮಾತು ಹೇಳಿ ಈ ಬರಹ ಮುಗಿಸುವೆ" ವೇದಸುಧೆಗೆ ತಾಂತ್ರಿಕ ಸಲಹೆ ನೀಡುತ್ತಿರುವ ನಮ್ಮ ಮಿತ್ರ ಪ್ರಸನ್ನ  ಪಿ.ಯು.ಸಿ ವಿದ್ಯಾರ್ಥಿ.
ಒಂದು ಮಾತು: ವೇದಸುಧೆಯಲ್ಲಿ ನಾನೊಬ್ಬ ಅಂಚೆ ಪೇದೆ. ನಿಮಗೆ ಏನೇ ಸಂಶಯವಿರಲಿ. ಕೇಳಿ ವೇದಾಧ್ಯಾಯೀ ಸುಧಾಕರಶರ್ಮರು ಉತ್ತರ ನೀಡುವರು. ಕಾರಣ ಅವರು ಮೂರು ದಶಕಗಳಿಂದ ವೇದಾಧ್ಯಯನ ಮಾಡುತ್ತಿದ್ದಾರೆ. ಅವರೇ ಸಮರ್ಥರು.

Tuesday, January 11, 2011

ನನ್ನ೦ತೆ ನನ್ನ ಜಗತ್ತು....

ನಾನು ಕದ ತಟ್ಟಿದಲ್ಲೆಲ್ಲಾ ಬಾಗಿಲು ತೆರೆಯಲಾಗಿದೆ
ನಾನು ಅಲೆದಾಡಿದಲ್ಲೆಲ್ಲಾ ಒ೦ದು ದಾರಿ ಸೃಷ್ಟಿಯಾಗಿದೆ
ನಾನು ಪ್ರೀತಿಸಿದಲ್ಲೆಲ್ಲಾ ಜಗತ್ತು ಮಧುರವಾಗಿ ಕ೦ಡಿದೆ
ನಾನು ದ್ವೇಷಿಸಿದಾಗಲೆಲ್ಲಾ ಪ್ರಪ೦ಚ ಕುರೂಪಿಯಾಗಿ ಕ೦ಡಿದೆ
ನಾನು ನಕ್ಕಾಗಲೆಲ್ಲಾ ಸ್ವರ್ಗ ನನ್ನ ಬಳಿ ಬ೦ದಿದೆ
ನಾನು ಕಣ್ಣೀರಿಟ್ಟಾಗಲೆಲ್ಲ ಒ೦ದು ಸಾ೦ತ್ವನದ ಸ್ಪರ್ಶ ನನ್ನನ್ನು ಹಗುರಾಗಿಸಿದೆ
ನಾನು ಗೊಣಗಿದಾಗ ಈ ಜಗತ್ತು ಕರ್ಕಶವಾಗಿ ಕ೦ಡಿದೆ
ನಾನು ಪೂಜಿಸಿದಾಗ ದೇವರು ನನ್ನೊಳಗೇ ನುಸುಳಿದ್ದಾನೆ..
ನಾನು ಮೌನಕ್ಕೆ ಮೊರೆಹೋದಾಗಲೆಲ್ಲ ಪ್ರಕೃತಿಯ ನಾದ ಕೇಳಿದ್ದೇನೆ..

ನನ್ನ೦ತೆ ನನ್ನ ಜಗತ್ತು....
ಇದೇ ನನ್ನ ಜೀವನ ದರ್ಶನ..

ಡಾ||ಜ್ಞಾನದೇವ್

Sunday, January 9, 2011

ವೇದ ದೀವಿಗೆ


ವೇದ ದೀವಿಗೆ

ಸೇರು ಸಜ್ಜನರನ್ನು ದೂರಗಳ ಮಿತಿಯಿರದೇ
ಸಾರು ಅವರಿರುವೆಡೆಗೆ ದಾರಿ ಹುಡುಕುತಲಿ
ನಾರು ಹೂವಿನ ಜೊತೆಗೆ ದೇವಮುಡಿಗೈದಂತೆ
ಏರು ಆ ಎತ್ತರಕೆ | ಜಗದಮಿತ್ರ

ಯಾರಿಗೂ ಕಮ್ಮಿಯೇಂ ಎಂಬ ಭಾವವು ಬೇಡ
ದಾರಿಹೋಕರು ನಾವು ತಿಳಿಮೊದಲು ಅದನು
ಹೀರುತ್ತ ಈ ಜಗದ ಅಪವಿತ್ರ ಬಳುವಳಿಯ
ಜಾರುವುದು ತರವಲ್ಲ | ಜಗದಮಿತ್ರ

ಹೇರಿ ನಡೆವುದು ಕತ್ತೆ ಭಾರವನು ದೂರದೆಡೆ
ಯಾರದೋ ವಸ್ತುಗಳು ಅದಕೆ ಅರಿವಿರದೇ
ಊರೂರು ಸುತ್ತುವುದು ಭಾರೀ ಪೆಟ್ಟಿಗೆ ಹೆದರಿ
ಕೇರಿ ಬೇಕಾದ್ದು ಪಡೆ | ಜಗದಮಿತ್ರ

ಸೂರು ಸಂತತಿ ಸಂಪದಭಿವೃದ್ಧಿಯಲಿ ತೊಡಗಿ
ತೇರೆತ್ತರದ ಬಯಕೆ ರಾಶಿಗಳ ನಡುವೆ
ಮೀರುತ್ತ ಕರ್ತವ್ಯ ಮಿತಿಯ ಸ್ವಾರ್ಥಕ್ಕಾಗಿ
ತೂರಿ ಪುನರಪಿ ಬರುವೆ | ಜಗದಮಿತ್ರ

ಯಾರೂ ಹೇಳುವುದಿಲ್ಲ ಬೇರೇ ಮಾರ್ಗವದಿಲ್ಲ
ಪಾರಾಗಲದುವೊಂದೇ ಜ್ಞಾನದ್ಹಾಯ್ದೋಣಿ
ಬೇರು ಎಲ್ಲಿಹುದೆಂದು ಹುಡುಕುತ್ತ ಮುನ್ನಡೆದು
ಭೂರಿ ಆನಂದ ಪಡೆ | ಜಗದಮಿತ್ರ

ಹಾರಿಹೋಗುವ ಮೊದಲು ಅರಿಯುತ್ತ ವೇದಗಳ
ದಾರಿದೀವಿಗೆಯಾಗಿ ಬಳಸು ತತ್ವಗಳ
ಖಾರ-ಉಪ್ಪುಗಳತಿಯ ಹಿಂಸೆಯಿರುವಶನಗಳ
ದೂರವಿಡು ತಿನ್ನದಲೇ | ಜಗದಮಿತ್ರ

ವಾರವಾರಕು ನವ್ಯ ವರುಷವರುಷಕು ದಿವ್ಯ
ಯಾರೋ ಕವಿ-ಸಾಹಿತಿಯ ಸೃಷ್ಟಿಯಂತಲ್ಲ
ನೂರಾರು ಯುಗಗಳನು ದಾಟುತ್ತ ನಡೆತಂದು
ಸೋರಿಕರಗದು ವೇದ |
ಜಗದಮಿತ್ರ


- ನಿಮ್ಮೊಡನೆ ವಿ.ಆರ್.ಭಟ್ ವಿಭಾಗದ ’ಜಗದಮಿತ್ರನ ಕಗ್ಗ ’ ಸಂಕಲನದಿಂದ



Saturday, January 8, 2011

ಊಟವನ್ನು ಏಕೆ ಮಾಡಬೇಕು?ಯಾವಾಗ ಮಾಡಬೇಕು?ಏನು ಸೇವಿಸಬೇಕು? Part-2

(ಮುಂದುವರೆದಿದೆ)
ಪ್ರಕೃತಿಯು ಮನುಷ್ಯರಿಗಾಗಿ ಸಿದ್ಧಪಡಿಸಿರುವ ಆಹಾರವು ಅತ್ಯಂತ ಸತ್ವಭರಿತ, ಶ್ರೇಷ್ಠ. ಅವೇ ಹಣ್ಣುಗಳು. ಮಾನವರು ಶರೀರರಚನೆಯ ಆಧಾರದ ಮೇಲೆ ವೈಜ್ಞಾನಿಕವಾಗಿ ಹೇಳುವುದಾದರೆ ಬರೀ Vegetarian ಅಷ್ಟೇ ಅಲ್ಲ, Frutarian! Dry Fruits ಮತ್ತು Nuts ಕೂಡ ಇದರೊಂದಿಗೆ ಸೇರುತ್ತದೆ.
ಆ ಹಣ್ಣುಗಳನ್ನು ಬೆರೆಸುವ, ಅವಕ್ಕೆ ಸ್ವಲ್ಪ ಹಾಲು, ಬೆಲ್ಲ, ಜೇನು, ಕಾಯಿತುರಿ ಇತ್ಯಾದಿಗಳನ್ನು ಬೆರೆಸಿ/ಸಂಸ್ಕರಿಸಿ ಬಳಸಿದರೂ Good. ಮೊಳಕೆ ಬರಿಸಿ ಸೇವಿಸಿದರೂ Good. ಆದರೆ, ಸತ್ವಭರಿತದಲ್ಲೇ ಎರಡನೆಯ ದರ್ಜೆ.
ಆಹಾರವನ್ನು ಬೇಯಿಸಿ ತಿನ್ನುವುದು ಮುಂದಿನ ಕೆಳದರ್ಜೆ. ಈ ದರ್ಜೆಯಲ್ಲಿ ಬೇಯಿಸಿರುವುದಷ್ಟೇ. ಆದರೆ ಸಪ್ಪೆ. ಅಥವಾ ಅತ್ಯಂತ ಸ್ವಲ್ಪ ಉಪ್ಪು, ಹುಳಿ, ಖಾರ.
ಇಲ್ಲಿಂದ ಮುಂದೆ ಸೇವಿಸಲು ಅರ್ಹವಾದದ್ದಿಲ್ಲ. ಅವುಗಳ ವಿವರ ಹೀಗಿದೆ.
ಬೇಯಿಸಿದ ಆಹಾರ. ಯದ್ವಾತದ್ವಾ ಉಪ್ಪು, ಹುಳಿ, ಖಾರಗಳನ್ನು ಹಾಕಿ ತಿನ್ನುವುದು. (ಆದರೂ ಪರವಾಗಿಲ್ಲ! ಕಾಲಾನಂತರದಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದಾಗ ಬಿಡಲೇಬೇಕಾಗುತ್ತದೆ!!)
ಮುಂದಿನದು ನಿಷಿದ್ಧ ಆಹಾರ.
ಹಿಂಸೆಯ ಪರಿಣಾಮವಾಗಿ ಬರುವ ಮಾಂಸಾಹಾರ.
(ಈ ಬಗ್ಗೆ ವ್ಯಾಪಕ ಚರ್ಚೆ ಯಾವಾಗಲೂ ನಡೆಯುತ್ತಿರುತ್ತದೆ. ಮಾಂಸಾಹಾರವನ್ನು ಸಮರ್ಥಿಸುವವರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ತಮ್ಮ ನಾಲಿಗೆಗೆ/ಚಪಲಕ್ಕೆ ಸಿಲುಕಿರುತ್ತಾರೆ. ಹೃದಯವಾಗಲೀ, ಮಿದುಳಾಗಲೀ ಕೆಲಸ ಮಾಡುತ್ತಿರುವುದಿಲ್ಲ!)
ಇದರ ಬಗ್ಗೆ ಮತ್ತೊಮ್ಮೆ ವ್ಯಾಪಕವಾಗಿ ಚಿಂತಿಸೋಣ.
Golden Rule ಹೀಗಿದೆ -
ಪ್ರಕೃತಿಗೆ ಎಷ್ಟು ಹತ್ತಿರವಾಗಿರುತ್ತೇವೋ, ಸಂಸ್ಕರಣ ಎಷ್ಟು ಕಡಿಮೆಯಿರುತ್ತದೋ (Zero ಕೂಡ ಆಗಬಹುದು) ಅಷ್ಟೂ ಆ ಆಹಾರ ಸೇವಿಸಲು ಹೆಚ್ಚು ಹೆಚ್ಚು ಯೋಗ್ಯವಾಗಿರುತ್ತದೆ.
ಮುಂದಿನ ಪ್ರಶ್ನೆ ಹೇಗೆ ಸೇವಿಸಬೇಕು?
(ಮುಂದುವರೆಯುವುದು)
Sudhakarasharma

Thursday, January 6, 2011

ಮೊರೆ

ರಚನೆ: ಕವಿ ನಾಗರಾಜ್
ಗಾಯಕಿ: ಶ್ರೀಮತಿ ಲಲಿತಾರಮೇಶ್


ಸರಿಸಿಬಿಡು ಮೂಢಮನ ಆವರಿತ ಪೊರೆಯಾ
ತೆರೆದುಬಿಡು ಕಿಟಕಿಯನು ಒಳಬರಲಿ ಬೆಳಕು|
ರೂಢಿರಾಡಿಯಡಿ ಸಿಲುಕಿ ತೊಳಲಾಡುತಿರಲಾಗಿ
ಕರುಣೆದೋರೈ ದೇವ ಸತ್ಪಥದಿ ಮುನ್ನಡೆಸು||

ಬಲ್ಲಿದರ ನುಡಿ ಕೇಳಿ ನೇರಮಾರ್ಗದಿ ನಡೆದೆ
ಬಸವಳಿದಿದೆ ಮನವು ಕಷ್ಟಗಳ ಕೋಟಲೆಗೆ|
ಅರಿಗಳಾರರ ಬಂದಿ ದಿಕ್ಕೆಟ್ಟು ಕುಸಿದಿರುವೆ
ಸದ್ಗುರುವೆ ಕೃಪೆದೋರಿ ಹಿಡಿದೆತ್ತಿ ಸಂತಯಿಸು||

ಪಂಡಿತನು ನಾನಲ್ಲ ಪಾಂಡಿತ್ಯವೆನಗಿಲ್ಲ
ಒಳಮನದ ನುಡಿಯೊಂದೆ ಆಸರೆಯು ನನಗೆಲ್ಲ|
ಹುಲುಮನುಜ ನಾನಾಗಿ ಭಾವಬಂದಿಯು ನಾನು
ಸಮಚಿತ್ತ ಕರುಣಿಸೈ ನೆಮ್ಮದಿಯ ನೀನೀಡು||