Pages

Friday, February 4, 2011

ಸಂಧ್ಯೋಪಾಸನಾ ವೇದಮಂತ್ರಗಳು

ನಿತ್ಯ ಸಂಧ್ಯೋಪಾಸನೆಗೆ ಅನುಕೂಲವಾಗುವ ಕೆಲವು ವೇದಮಂತ್ರಗಳನ್ನು ಅಭ್ಯಾಸ ಮಾಡಲು ಅನುಕೂಲವಾಗುವಂತೆ ಇಲ್ಲಿ ಪ್ರಕಟಿಸಿರುವೆ.


ವೇದಸುಧೆಗೆ ಮೇಲ್ ಮಾಡಿ

ವೇದಸುಧೆಯ ಅಭಿಮಾನಿ ಬಂಧುಗಳೇ,
ಎಲ್ಲರಿಗೂ ನಮಸ್ಕಾರಗಳು.  ತನ್ನ ಪ್ರಥಮ ವಾರ್ಷಿಕೋತ್ಸವವನ್ನು ವೇದಸುಧೆಯು ವಿಶಿಷ್ಟವಾಗಿ ಆಚರಿಸಿಕೊಂಡು ಅನೇಕರ ಅಭಿಪ್ರಾಯದಂತೆ ಅಂತರ್ಜಾಲ ಕ್ಷೇತ್ರದಲ್ಲಿ ಒಂದು ವಿನೂತನ ಕಾರ್ಯಕ್ರಮಕ್ಕೆ ನಾಂದಿಯನ್ನು ಹಾಡಿತು.ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು ಅದರ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ನನ್ನ ಕೃತಜ್ಞತೆಗಳು.ನಮ್ಮೆಲ್ಲರಿಗೂ ಸತ್ಯಪಥದಲ್ಲಿ ಹೆಜ್ಜೆ ಇಡಲು ಕಾರಣರಾಗಿರುವ ಶ್ರೀ ಸುಧಾಕರ ಶರ್ಮರಿಗೆ ವೇದಸುಧೆಯು ಆಭಾರಿ. ನಮ್ಮ ನಿರೀಕ್ಷೆಗೂ ಮೀರಿ ಅಭಿಮಾನಿಗಳು ಪಾಲ್ಗೊಂಡಿದ್ದರಿಂದ ಅನೇಕರನ್ನು ವೈಯಕ್ತಿಕವಾಗಿ ಮಾತನಾಡಿಸಲು/ಯೋಗಕ್ಷೇಮವನ್ನು ವಿಚಾರಿಸಲೂ ಕೂಡ ಸಾಧ್ಯವಾಗಲಿಲ್ಲ.ಕಾರಣ ನಾವು ಹಾಕಿಕೊಂಡಿದ್ದ ವಿಶಿಷ್ಟ ಕಾರ್ಯಕ್ರಮಗಳ ಒತ್ತಡ. ಕಾರ್ಯಕ್ರಮದ ಸೊಬಗನ್ನು ಅನುಭವಿಸಿದವರು  ಸಂತಸಗೊಂಡಿರಬಹುದು, ಆದರೆ ಅದರ ವ್ಯವಸ್ಥೆಯಲ್ಲಿದ್ದವರು ಕದಿಗುದಿಯಲ್ಲಿದ್ದೆವು.ಹಾಗಾಗಿ  ನನಗಾಗಲೀ ಕವಿನಾಗರಾಜರಿಗಾಗಲೀ, ರಾಮಸ್ವಾಮಿಯವರಿಗಾಗಲೀ, ಕವಿ ಸುರೇಶರಿಗಾಗಲೀ ಅಲ್ಲದೆ ನನ್ನ ಅನೇಕ ಮಿತ್ರರಿಗೆ ಸಂಪೂರ್ಣವಾಗಿ ಕಾರ್ಯಕ್ರಮದ ಸೊಬಗನ್ನು ಅನುಭವಿಸಲು ಸಾಧ್ಯವಾಗಲಿಲ್ಲ. ಆದರೆ ಸಂಪೂರ್ಣವಾಗಿ ವೀಡಿಯೋ ಕವರೇಜ್ ಆಗಿರುವುದರಿಂದ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳಲಾಗದಿದ್ದವರು  ಈಗ ನಿಧಾನವಾಗಿ ಅದರ ಸವಿಯನ್ನು ಅನುಭವಿಸಲು ಸಾಧ್ಯವಿದೆ.ಆದರೆ ಬ್ಲಾಗ್ ನಲ್ಲಿ ವೀಡಿಯೋ ಅಪ್ ಲೋಡ್ ಮಾಡಿದರೆ ಅದು ತೆರೆದುಕೊಳ್ಳುವುದು ಬಲು ಕಷ್ಟ. ಅದನ್ನೆಲ್ಲಾ ಆಡಿಯೋ ಗೆ ಕನ್ವರ್ಟ್ ಮಾಡಿ ಇನ್ನೊಂದು ವಾರದಲ್ಲಿ ಎಲ್ಲಾ ಉಪನ್ಯಾಸಗಳನ್ನೂ ಉಣಬಡಿಸಲಿದ್ದೇವೆ. ಅಲ್ಲಿಯ ವರಗೆ ಕೆಲವು ಫೋಟೋ ಗಳನ್ನೂ ಹಾಗೂ ಪಾಲ್ಗೊಂಡಿದ್ದವರ ಅನಿಸಿಕೆಗಳನ್ನು ನೀವು ವೇದಸುಧೆಯಲ್ಲಿ ನೋಡಬಹುದು.
ವಾರ್ಷಿಕೋತ್ಸವದ ಹಿಂದಿನದಿನ ಮತ್ತು ವಾರ್ಷಿಕೋತ್ಸವದ ದಿನ ಬೆಳಿಗ್ಗೆ ನಡೆದ ಅಗ್ನಿಹೋತ್ರವಂತೂ ಜನರ ಬಲು ಮೆಚ್ಚುಗೆಗೆ ಪಾತ್ರವಾಯ್ತು." ಹೀಗೂ ಮಾಡಬಹುದೇ? ಇಷ್ಟು ಸರಳವಾಗಿ, ಯಜ್ಞ ಮಾಡಬಹುದಾದರೆ ನಿತ್ಯವೂ ಮಾಡುತ್ತಾ ಆರೋಗ್ಯವಂತರಾಗಿರಬಹುದಲ್ಲಾ!! " ಇದು ಅಗ್ನಿಹೋತ್ರದಲ್ಲಿ ಪಾಲ್ಗೊಂಡಿದ್ದವರ ಮನದ ಮಾತು. ವಾರ್ಷಿಕೋತ್ಸವವು ಕಾಟಾಚಾರಕ್ಕೆ ಮಾಡದೆ ಅಲ್ಲಿ ನಡೆದ ವಿಚಾರಸಂಕಿರಣ, ದೀಪ ನೃತ್ಯ, ಗೀತ ಗಾಯನ, ಉಪನ್ಯಾಸಗಳು ಎಲ್ಲರ ಮನಸೆಳೆದವು.
ದೂರದ ಶಿವಮೊಗ್ಗದ ಕವಿಸುರೇಶ್ ರ ಪುತ್ರಿ ಕು|| ಬಿ.ಎಸ್.ಆರ್. ಅಂಬಿಕಳು ನಡೆಸಿಕೊಟ್ಟ  ವೈಯೋಲಿನ್ ಕಛೇರಿಯು ಎಲ್ಲರ ಆಕರ್ಷಣೆಗೆ ಕಾರಣವಾಯ್ತು.    ಕು|| ಬಿ.ಎಸ್.ಆರ್. ಅಂಬಿಕಳಿಗೆ ಎಲ್ಲರ ಹೃದಯ ಪೂರ್ವಕ ಆಶೀರ್ವಾದವನ್ನಲ್ಲದೆ ಮತ್ತೇನನ್ನು ನೀಡಲು ಸಾಧ್ಯ?
ಮನವಿ:
1. ವಾರ್ಷಿಕೋತ್ಸವದ ಡಿ.ವಿ.ಡಿ ಬೇಕೆಂದು ಇಚ್ಛೆ ಪಡುವವರಿಗೆ ಅವರ ವಿಳಾಸವನ್ನು ತಿಳಿಸಿದರೆ ಕೊರಿಯರ್ ಮೂಲಕ ಕಳಿಸಿಕೊಡುವ ವ್ಯವಸ್ಥೆ ಮಾಡಲಾಗುವುದು. ಅದರ ಮೌಲ್ಯ ಈಗಿನ್ನೂ ಗೊತ್ತಾಗಿಲ್ಲ. ಆದರೂ ಕೇವಲ ಕಾಪಿ ಮಾಡಲು ಅಗತ್ಯವಾದ ಕನಿಷ್ಟ ಬೆಲೆಯನ್ನು ಕೊಡಬೇಕಾಗಬಹುದು. ಬೇಡಿಕೆ ಗೊತ್ತಾದರೆ ಎಷ್ಟು ಬೇಕೋ ಅಷ್ಟು ಕಾಪಿ ಮಾಡಿಸುವ ವ್ಯವಸ್ಥೆ ಮಾಡಬಹುದು.
2. ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದ ಅನೇಕರು ಮುಂದೆ ಯಾವಾಗ ಇಂತಹ ಕಾರ್ಯಕ್ರಮ ಮಾಡುವಿರಿ, ತಿಳಿಸಿ, ಖಂಡಿತಾ ಬರುತ್ತೇವೆಂದು ಕರೆ ಮಾಡುತ್ತಿದ್ದಾರೆ. ಅವರೆಲ್ಲರ ಕೋರಿಕೆಯಂತೆ ಶ್ರೀ ಸುಧಾಕರ ಶರ್ಮರ ಸಮಯಾವಕಾಶವನ್ನು ಗಣನೆಗೆ ತೆಗೆದುಕೊಂಡು ಮೂರು  ದಿನಗಳ ಶಿಬಿರವನ್ನು ಮಾಡಬೇಕೆಂಬ ಯೋಜನೆ ಇದೆ. ಶಿಬಿರದಲ್ಲಿ.......
1. ಅಗ್ನಿಹೋತ್ರ  ಕಲಿಕೆ
2. ಆರೋಗ್ಯಕರ ಬದುಕಿಗೆ ಅಗತ್ಯವಾದ ಕನಿಷ್ಟತಮ ಯೋಗ ಶಿಕ್ಷಣ-ಧ್ಯಾನ,    
      ಪ್ರಾಣಾಯಾಮಗಳು
3. ವೇದದ ಪ್ರಾಥಮಿಕ ಪರಿಚಯ

ಹೀಗೆ ಒಂದುಕಾರ್ಯಾಗಾರವನ್ನು ಕೇವಲ 15-20  ಆಸಕ್ತರಿಗಾಗಿ ನಡೆಸುವ ಚಿಂತನೆ ಇದೆ.ಸ್ಥಳ, ದಿನ ಎಲ್ಲವನ್ನೂ ಇನ್ನೂ ತೀರ್ಮಾನಿಸಬೇಕಾಗಿದೆ.  ಪಾಲ್ಗೊಳ್ಳಲು  ಆಸಕ್ತಿ ಇರುವವರು  ತಮ್ಮ ಹೆಸರು, ಈ -ಮೇಲ್ ಐ.ಡಿ ಮತ್ತು ಮೊಬೈಲ್ ನಂಬರ್ ಗಳನ್ನು ಒಳಗೊಂಡ ವಿವರವನ್ನು ವೇದಸುಧೆಗೆ ಮೇಲ್ ಮಾಡಿದರೆ ಎಲ್ಲರ ಅಭಿಪ್ರಾಯ ಪಡೆದು ದಿನಾಂಕ ಮತ್ತು ಸ್ಥಳವನ್ನು  ನಿರ್ಧರಿಸಲಾಗುವುದು.
 ನಿಮ್ಮ ಸಲಹೆ/ಮುಕ್ತ ಅಭಿಪ್ರಾಯವನ್ನು  ನಿರೀಕ್ಷಿಸುವ
-ಹರಿಹರಪುರ ಶ್ರೀಧರ್
ಸಂಪಾದಕ, "ವೇದಸುಧೆ"