Pages

Friday, September 25, 2015

RSS ನ ಪೂಜ್ಯ ಸರಸಂಘಚಾಲಕರು " ವೇದದ ಅರಿವು ಪಡೆಯಲು ಸಂಘದ ಶಾಖೆಗಳಿಗೆ ಬನ್ನಿ" ಎಂದು ಕೊಟ್ಟಿರುವ ಕರೆಗೆ ಮಿತ್ರರೊಬ್ಬರು ಹೀಗೆ ಪ್ರತಿಕ್ರಿಯಿಸಿದ್ದಾರೆ. " ಮೋಹನ್ ಜಿ ಭಾಗವತ್ ಅವರ ವೇದದ ಕಲ್ಪನೆ ಎಂದರೆ ವಿಗ್ರಹಾರಾಧನೆಗೆ ಮಹತ್ವ ಕೊಡುವುದು" ಎಂದು. ಆದರೆ ಹಾಗೆ ಹೇಳಿಲ್ಲ. ಜನರಿಗೆ ವೇದದ ನಿಜವಾದ ಅರಿವು ಮೂಡಿದರೆ ಇಡೀ ವಿಶ್ವ ನೆಮ್ಮದಿಯಿಂದ ಬದುಕ ಬಹುದು.ಅಷ್ಟು ಉತ್ಕೃಷ್ಠವಾಗಿದೆ. ವೇದವೆಂದರೆ ಕೇವಲ ಪೂಜಾ ಪುನಸ್ಕಾರದ ಅಥವಾ ಶ್ರಾದ್ಧ ಕರ್ಮಗಳ ಮಂತ್ರವಲ್ಲ. ನೆಮ್ಮದಿಯ ಜೀವನಕ್ಕೆ ಅಗತ್ಯವಾದ ಬದುಕಿನ ಮಾರ್ಗದರ್ಶನ ವೇದದಲ್ಲಿದೆ. ಅದರ ಪರಿಚಯಆಗಬೇಕೆಂಬುದು ಸನ್ಮಾನ್ಯ ಶ್ರೀ ಮೋಹನ್ ಜಿ ಭಾಗವತ್ ಅವರ ಅಪೇಕ್ಷೆ. ವೇದಭಾರತಿಯು ಅದೇ ನಿಟ್ಟಿನಲ್ಲಿ ಕೆಲಸಮಾಡುತ್ತಿದೆ. ಈಗ ಸರಸಂಘಚಾಲಕರ ಮಾತು ನಮ್ಮ ಕೆಲಸಕ್ಕೆ ಹೆಚ್ಚು ಉತ್ಸಾಹ ತುಂಬಿದೆ. ಸಂಘದ ಎಲ್ಲಾ ಕಾರ್ಯಕರ್ತರು ಎಷ್ಟು ಬೇಗ ಸರಸಂಘಚಾಲಕರ ಮಾತನ್ನು ಅರ್ಥಮಾಡಿಕೊಳ್ಳುತ್ತಾರೋ ಅಷ್ಟು ಒಳ್ಳೆಯದು. ಇದಕ್ಕೆ ಪೂರಕವಾಗಿ ಬಾಬಾ ರಾಮ್ ದೇವ್ ಅವರು ನಡೆಸುವ ಯೋಗಶಿಬಿರಗಳಲ್ಲಿ ವೇದದ ಅರಿವು ಮೂಡಿಸಲಾಗುತ್ತಿದೆ.ಅಗ್ನಿಹೋತ್ರವನ್ನು ಸಾರ್ವತ್ರೀಕರಣ ಗೊಳಿಸಲಾಗಿದೆ. ಅಗ್ನಿಹೋತ್ರದ ಬಗ್ಗೆ ಒಂದು ಮಾತು ಸ್ನೇಹಿತರ ಗಮನಕ್ಕೆ ತರುವುದು ಅವಶ್ಯಕವಾಗಿದೆ. ಅಗ್ನಿಹೋತ್ರದಿಂದ ಹಲವು ಖಾಯಿಲೆಗಳು ದೂರವಾಗುತ್ತದೆಂಬುದು ನಿಜ. ಆ ಕಾರಣ ದಿಂದ ಪಾಶ್ಚಿಮಾತ್ಯರೆಲ್ಲಾ ಅಗ್ನಿಹೋತ್ರ ಮಾಡುವುದನ್ನು ಆರಂಭಿಸಿದ್ದಾರೆ. ಅವರೆಲ್ಲಾ ಅಗ್ನಿಹೋತ್ರ ಮಾಡುವುದು ಕೇವಲ ಐದು ನಿಮಿಷಗಳಲ್ಲಿ ಮುಗಿದು ಹೋಗುತ್ತದೆ. ಓಂ ಸೂರ್ಯಾಯ ಸ್ವಾಹಾ| ಓಂ ಪ್ರಜಾಪತಯೇ ಸ್ವಾಹಾ| ಮಂತ್ರಗಳನ್ನು ಸೂರ್ಯೋದಯದಲ್ಲೂ , ಅಗ್ನಯೇ ಸ್ವಾಹಾ| ಓಂ ಪ್ರಜಾಪತಯೇ ಸ್ವಾಹಾ ಮಂತ್ರಗಳನ್ನು ಸೂರ್ಯಾಸ್ತದಲ್ಲೂ ಹೇಳುತ್ತಾ ಅಗ್ನಿಹೋತ್ರ ಮಾಡುತ್ತಾರೆ. ಆದರೆ ಮಹರ್ಷಿ ದಯಾನಂದ ಸರಸ್ವತೀ ಅವರು ರಚಿಸಿರುವ ಅಗ್ನಿಹೋತ್ರ ವಿಧಿಯು ಬಲು ಸೊಗಸಾಗಿದೆ. ಸುಮಾರು 15 ನಿಮಿಷಗಳ ವಿಧಿ. ಅದಕ್ಕೆ ಪೂರ್ವದಲ್ಲಿ ಈಶ್ವರಸ್ತುತಿ ಹಾಗೂ ಶಾಂತಿಮಂತ್ರಗಳ ಪಠಣ. ಇದು ಅದ್ಭುತ. ವೇದಭಾರತಿಯು ಮಹರ್ಷಿ ದಯಾನಂದ ಸರಸ್ವತೀ ರೂಪಿಸಿರುವಂತೆ ಅಗ್ನಿಹೋತ್ರವನ್ನು ನಿತ್ಯವೂ ನಡೆಸುತ್ತಿದೆ. ಮಂತ್ರಗಳನ್ನು ಶೃಂಗೇರಿ ಪರಂಪರೆಯಂತೆ ಸ್ವರಬದ್ಧವಾಗಿ ಪಠಿಸುವಾಗ ಆನಂದವಾಗುತ್ತದೆ. ಯಾವ ಜಾತಿ-ಮತ-ಲಿಂಗ ವಯಸ್ಸಿನ ಭೇದವಿಲ್ಲದೆ ನಡೆಯುತ್ತಿರುವ ವೇದಭಾರತಿಯ ಅಗ್ನಿಹೋತ್ರ ಸತ್ಸಂಗದಲ್ಲಿ ಸುಮಾರು ಐವತ್ತು ಜನರು ನಿತ್ಯವೂ ಭಾಗವಹಿಸುತ್ತಾರೆ. ಅಲ್ಲದೆ ಹಾಸನದ ಪತಂಜಲಿ ಯೋಗ ಕೇಂದ್ರಗಳಲ್ಲಿ ಆಗಿಂದಾಗ್ಗೆ ಅಗ್ನಿಹೋತ್ರ ಮತ್ತು ವೇದದ ಪರಿಚಯ ನಡೆಯುತ್ತಿದೆ.
Vasudevarao Rao ಸಂಘದ ಶಾಖೆಗಳಲ್ಲಿ ವೇದದ ಬಗ್ಗೆ ಅರಿವು ಮೂಡಬೇಕಾದರೆ ವೇದದಲ್ಲಿ ಏನಿದೆ ಎನ್ನುವುದು ಮೊದಲು ತಿಳಿಯಬೇಕು. ಸಂಧ್ಯಾ ಮತ್ತು ಅಗ್ನಿಹೋತ್ರ ಮಿಗಿಲಾಗಿ ವೇದಗಳಲ್ಲಿ ಎಷ್ಟು ಉದಾತ್ತ ಮತ್ತು ನಿತ್ಯ ಪ್ರೇರಕ ವಿಷಯಗಳನ್ನು ತಿಳಿಯಲು ದಿ|| ಜಗದೀಶ್ವರಾನಂದ ಸರಸ್ವತಿಯವರು ಬರೆದ ವೈದಿಕ ಉದಾತ್ತ ಭಾವನೆಗಳು ಎಂಬ ಪುಸ್ತಕವನ್ನು ಒಂದು ಪಠ್ಯಪುಸ್ತಕವಾಗಿ ಮತ್ತು ಅದಕ್ಕೆ ಪೂರಕವಾಗಿ ಚತುರ್ವೇದಿಗಳು ಬರೆದ ವೇದೋಕ್ತ ಜೀವನ ಪಥ ಪುಸ್ತಕವನ್ನು ಕಡ್ಡಾಯವಾಗಿ ಇಡಬೇಕು ವೈದಿಕ ಉದಾತ್ತ ಭಾವನೆಗಳು ಪುಸ್ತಕದಲ್ಲಿ 52 ವಿಷಯಗಳ ಬಗ್ಗೆ ವೇದಗಳ ವಿಚಾರವನ್ನು ಪ್ರಸ್ತುತ ಪಡಿಸುತ್ತದೆ. ಉದಾ, ಸ್ವಾವಲಂಬನೆ, ದೇಶ ಪ್ರೇಮ, ಸಾಹಸ, ಭ್ರಾತೃಪ್ರೇಮ, ಸಂಸಾರದಲ್ಲಿ ಯಶಸ್ಸು, ವೀರತೆಯ ತರಂಗ, ಇತ್ಯಾದಿ ವಿಷಯಗಳು ಸದಾ ಪ್ರೇರಕವಾಗಿವೆ. ಇದನ್ನು ಓದಿದ ಯಾವುದೇ ವಿಚಾರವಾದಿಯು ವೇದಗಳನ್ನು ಶ್ಲಾಘಿಸದೇ ಇರಲಾರ. ಅಂದ ಹಾಗೆ ಈ ಪುಸ್ತಕ ಕನ್ನಡಕ್ಕೆ ಕೃಷ್ಣ ಮೂರ್ತಿಯವರು ಅನುವಾದಿಸಿದ್ದು ಇದನ್ನು ಆರ್ಯಸಮಾಜ 1995 ರಲ್ಲಿಯೇ ಪ್ರಕಟಮಾಡಿತು. ಸದ್ಯ ಇದರ ಪ್ರತಿಗಳು ಅಲಭ್ಯ. ಸಂಘವು ಈ ಪುಸ್ತಕವನ್ನು ಮತ್ತು ಚತುರ್ವೇದಿಗಳ ಪುಸ್ತಕಗಳನ್ನು ಮರು ಪ್ರಕಟಣೆ ಮಾಡಿ, ಇದನ್ನು ಎಲ್ಲಾ ಶಾಖೆಗಳಿಗೆ ಹಂಚಬೇಕು. ನನಗೆ ಗೊತ್ತಿರುವಂತೆ ಬಹುಪಾಲು ಪ್ರಚಾರಕರಕರಿಗೂ ವೇದಗಳ ಬಗ್ಗೆ ಇರುವ ಜ್ಞಾನ ತುಂಬಾ ಸೀಮಿತವಾದದ್ದು. ಮತ್ತು ಅದೂ ಸಹ ಪೌರಾಣಿಕ ಜಗತ್ತಿನ ಹಿನ್ನೆಲೆಯಿಂದ ಕೂಡಿದ್ದು. ವೇದಗಳು ಸಾರ್ವಕಾಲಿಕ, ಸಾರ್ವಜನಿಕ ಮತ್ತು ಸಾರ್ವಭೌಮ ಸಾಹಿತ್ಯವಾಗಲು ಕ್ಷಮತೆಯಿದ್ದು ಈ ನಿಟ್ಟಿನಲ್ಲಿ ಮುಂದುವರೆದರೆ ಸಮಾಜಕ್ಕೆ ಮತ್ತು ರಾಷ್ಟ್ರಕ್ಕೆ ಉಪಕಾರವಾದೀತು. ಸೆಕ್ಯುಲರ್ ಬುದ್ಧಿ ಜೀವಿಗಳು ಸಹ ಆಕ್ಷೇಪ ವೆತ್ತುವ ಪ್ರಸಂಗವೇ ಒದಗಿಬರದು.

ವೇದ ಸುಧೆ Vasudevarao Rao ಸಂಘವು ಈ ಸುಧೀರ್ಘ ಪಯಣದಲ್ಲಿ ಹಿಂದು ಸಮಾಜವನ್ನು ಗಟ್ಟಿ ಮಾಡಲು ಯಾವ ಆಚರಣೆಗಳನ್ನೂ ವಿರೋಧಿಸದೇ ಅವರಲ್ಲಿ ಹಿಂದುತ್ವ ಮತ್ತು ರಾಷ್ಟ್ರಭಕ್ತಿಯನ್ನು ತುಂಬುತ್ತಿದೆ. ವಿಗ್ರಹಾರಾಧನೆ ವಿರೋಧ ಮುಂತಾದ ಕೆಲವು ನಂಬಿಕೆಗಳನ್ನು ವಿರೋಧಿಸುವ ವಿಚಾರಗಳು ಚತುರ್ವೇದಿಗಳ ಸಾಹಿತ್ಯದಲ್ಲಿ ಮ್ರಮುಖ ಸ್ಥಾನ ಪಡೆಯುತ್ತವೆ. ಶತಶತಮಾನಗಳ ನಂಬಿಕೆಗಳನ್ನು ಹೋಗಲಾಡಿಸುವುದು ಅಷ್ಟು ಸುಲಭದ ಮಾತಲ್ಲ. ಅದಕ್ಕಾಗಿಯೇ RSS ಆರ್ಯಸಮಾಜದ ಹಾದಿಯಲ್ಲಿ ಸಾಗುವುದಿಲ್ಲ. ಆದರೆ ಇಂದಲ್ಲಾ ನಾಳೆ ವೇದದ ಆಧಾರದಲ್ಲಿಯೇ ಸಮಾಜವು ನಡೆಯುವಂತೆ ಮಾಡುವ ಶಕ್ತಿ ಸಂಘಕ್ಕೆ ಇದೆ. ಆದರೆ ಸಂಘವು ಬಹಳ ಪ್ರಬುದ್ಧವಾಗಿ ಚಿಂತನೆ ನಡೆಸಿ ಒಂದೊಂದೇ ಹೆಜ್ಜೆ ಇಡುತ್ತಾ ಹೋಗುತ್ತದೆ. ಸಂಘವನ್ನು ಹತ್ತಿರದಲ್ಲಿ ಗಮನಿಸಿದವರಿಗೆ ಇದು ಗೊತ್ತಾಗುತ್ತದೆ.

ಸಂಘದ ಶಾಖೆಗಳಲ್ಲಿ ವೇದದ ಪರಿಚಯ