Pages

Sunday, July 15, 2012

ಪುನರ್ಜನ್ಮ-ಒಂದು ವಿವರಣೆ ನಮ್ಮ ಆಯಸ್ಸು ಪೂರ್ವ ನಿರ್ಧಾರಿತವೇ?ವೇದ ಗೋಷ್ಠಿಯ ನೆನಪು

ಹಳೆಯ ನೆನಪುಗಳು
ಬೆಂಗಳೂರಿನಲ್ಲಿ ನಡೆದ ವೇದ ಗೋಷ್ಠಿಯಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದ ಚನ್ನೇನಹಳ್ಳಿಯ ವೇದ ವಿಜ್ಞಾನ ಗುರುಕುಲದ ಶ್ರೀಮತಿ ಅಮೃತವರ್ಷಿಣಿ, ಶ್ರೀ ಮಹಿಮಾ ಪಟೇಲ್, ಶ್ರೀ ಹರಿಹರಪುರಶ್ರೀಧರ್, ಕಾರ್ಯಕ್ರಮದ ರೂವಾರಿ ಸುಧಾಕರಶರ್ಮ.

ಧರ್ಮದ ಕುರಿತು ಶ್ರೀ ಕೃತಾತ್ಮಾನಂದರು

ನನಗಾ ......ಎಂಬತ್ತೆಂಟು

ಇವತ್ತು ಬೆಳಿಗ್ಗೆ ಪೇಟೆಗೆ ಹೋಗಿದ್ದವನು ಮನೆಗೆ ಹಿಂದಿರುಗುತ್ತಿದ್ದೆ. ಆರ್.ಸಿ.ರಸ್ತೆಯಲ್ಲಿ ಬರುತ್ತಿದ್ದಾಗ ಮುದುಕಿಯೊಬ್ಬರು ಸೌತೆಕಾಯಿ  ಮಾರುತ್ತಿದ್ದುದನ್ನು ಕಂಡೆ. ಕೈಲಿ ಮೂರು ಚಿಕ್ಕ ಚಿಕ್ಕ ಸೌತ್ಕಾಯಿ ತೆಗೆದು ಕೊಂಡೆ. " ಅಮ್ಮಾ, ಎಷ್ಟು ಕೊಡಬೇಕು?" ಎಂದೆ. ಕೈನಿಲ್ಲಿದ್ದ ಮೂರು ಸೌತೆಕಾಯಿ ನೋಡಿದ ಅಜ್ಜಿ ಹೇಳಿದರು" ಹತ್ತು ರೂಪಾಯಿಗೆ ಬರುಲ್ಲ ಕಂದ" ನಾನೆಂದೆ" ನಾನೆಲ್ಲಿ ಹತ್ತು ರೂಪಾಯಿಗೆ ಕೊಡಿ ಎಂದೆ? " ಎಂದು ಹೇಳಿ ೨೦ ರೂಪಾಯಿ ಕೈಲಿತ್ತೆ. ಐದು ರೂಪಾಯಿ ವಾಪಸ್ ಕೊಡಬೇಕೆಂದು ತನ್ನಲ್ಲಿದ್ದ ಚಿಲ್ಲರೆ ಎಲ್ಲಾ ತಡಕಾಡಿತು ಮುದುಕಿ. ನಾನೆಂದೆ " ಪರವಾಗಿಲ್ಲ ಬಿಡಜ್ಜಿ. ನೋಡು ನಾಲ್ಕು ರೂಪಾಯಿ ಐತೆ, ನಿನ್ನ ಒಂದು ರೂಪಾಯಿ ನಾನ್ಯಾಕೆ ಇಟ್ಟುಕೊಳ್ಳಲಿ? ಸ್ವಲ್ಪ ತಡಿ ಕೊಡ್ತೀನಿ, ಅಂತಾ ತನ್ನ ಬಟ್ಟೆ ಚೀಲದಲ್ಲೆಲ್ಲಾ ತಡಕಾಡಿ ಕೊನೆಗೂ ಐದು ರೂಪಾಯಿ ಅಡ್ಜಸ್ಟ್ ಮಾಡಿ ನನ್ನ ಕೈಲಿತ್ತಮೆಲೆಯೇ ಆಮುದುಕಿಗೆ ನಿರಾಳ.
ಆ ಅಜ್ಜಿ ನೋಡಿ ನನಗೆ ಕುತೂಹಲ ಮೂಡಿತು. ಆ ಅಜ್ಜಿಯೊಡನೆ ಮಾತನಾಡಬೇಕೆನಿಸಿತು." ಅಜ್ಜಿ ನಿನ್ನ ವಯಸ್ಸೆಷ್ಟು? " ನನಗಾ...ಎಂಬತ್ತೆಂಟು ಮಗಾ" ಇಪ್ಪತ್ತೈದು ವರ್ಷದಿಂದ ಇಲ್ಲಿ ಸೌತೆಕಾಯಿ ಮಾರ್ತಾ ಇವ್ನಿ. ನನ್ ಬಡ್ಡೆಗೆ ಬಂದು ಅಂಗಡಿ ಹಾಕ್ತಾಳಲ್ಲಾ! ಅವ್ಳು!

"ಇರಲಿ, ಬಿಡಜ್ಜಿ, ನಿನ್ ಯಾಪಾರ ನಿನಗೆ ಆಯ್ತದೆ"
"ಹಂಗಲ್ಲಾ ಮಗ ಬರೋರ್ಗೆಲ್ಲಾ  ಆ ಮುದುಕಿತವ  ಸೌತೆ ಕಾಯಿ ಚೆನ್ದಾಗಿಲ್ಲಾ, ಇಲ್ ಬನ್ನಿ ಅಂತಾ ಕರೀತಾಳಲ್ಲಾ! ನಾನೆಲ್ಲಿ ಹೋಗಲೀ? ಅಥವಾ ನಾನೇನಾದ್ರೂ ಮೋಸ-ದಾಗ ಮಾಡ್ತಾ ಇದ್ದೀನಾ?

ವೇದದಲ್ಲಿ ಗೋಮಾಂಸ ಸೇವನೆ ಇಲ್ಲ

[ಕೃಪೆ ಅಗ್ನಿವೀರ್]

ಈ ಕೆಳಗೆ ಮಂಡಿಸಿರುವ ವಿಷಯವು ಪೂರ್ಣವಾಗಿ ಹಾಗು ನಿಷ್ಪಕ್ಷಪಾತವಾಗಿ ವೇದಗಳು, ಅದರ ಅನ್ವಯ, ವ್ಯಾಕರಣ, ಭಾಷೆ ಮತ್ತು ಅದಕ್ಕೆ ಸಂಬಂಧಿಸಿದ ವೇದ ಮಂತ್ರಗಳ ಹಾಗು ಅದರ ಸರಿಯಾದ ಉದ್ದೇಶವನ್ನು ಆದರಿಸುವಂತಾದ್ದಾಗಿದೆ. ಆದ್ದರಿಂದ ಇದು ಮಾಕ್ಸ್ ಮುಲ್ಲರ್, ಗ್ರಿಫ಼ತ್, ವಿಲ್ಸನ್, ವಿಲಿಯಂಸ್ ಹಾಗು ಇತರ ಭಾರತ ದೇಶದ ಅನ್ವೇಶಕರ ಅಭಿಪ್ರಾಯವನ್ನು ಕುರುಡಾಗಿ ಪ್ರತಿಬಿಂಬಿಸುತ್ತಿಲ್ಲ. ಇವರ ಅನ್ವೇಷಣೆಯು ಪಾಶ್ಚಾತ್ಯ ದೇಶದಲ್ಲಿ ಪ್ರಸಿದ್ದಿ ಹೊಂದಿದ್ದರು ನಮಗೆ ಹಲವಾರು ಬಲವಾದ ಕಾರಣಗಳಿಂದ ಅವರ ಅನ್ವೇಷಣೆಯು ಕಪೋಲಕಲ್ಪಿತ ಹಾಗು ನ್ಯಾಯಯುತವಾಗಿಲ್ಲ ಎಂದು ತಿಳಿದು ಬಂದಿದೆ. ಇದಕ್ಕೆ ಸಂಭಂಧಿಸಿದಂತೆ ನಾವು ಹೆಚ್ಚಿನ ವಿಷಯವನ್ನು ಈ ವರದಿ ಯಲ್ಲಿ ವಿಮರ್ಶಿಸುತ್ತಿದ್ದೇವೆ.

ವೇದಗಳು – ಪ್ರಪಂಚದ ಮೊದಲನೆಯ ಜ್ಞಾನದ ಪುಸ್ತಕ. ನಮ್ಮ ಮೊದಲನೆ ಭಾಗವಾದ ವೇದಗಳಿಗೆ ಸಂಭಂಧಿಸಿದಂತ ತಪ್ಪು ಗ್ರಹಿಕೆಗಳ ವಿಮರ್ಶೆಗೆ ನಿಮಗೆ ಸ್ವಾಗತ.

ಹಿಂದುಗಳ ಪವಿತ್ರ ಗ್ರಂಥವಾದ ವೇದವು ಶತಕಗಳಿಂದ ಹಲವಾರು ರೀತಿಯಲ್ಲಿ ಹಲವಾರು ಜನರಿಂದ ನಿಂದನೆಗೆ ಗುರಿಯಾಗಿದೆ. ಇವರ ತಪ್ಪು ಗ್ರಹಿಕೆಯಿಂದ ಬಹಳಾ ಅಪವಿತ್ರ ವಿಷಯಗಳನ್ನು ಸೇರಿಸಿ ಜನರನ್ನು ನಂಬಿಸುತ್ತಿದ್ದಾರೆ. ಇವರ ನಿಂದನೆಗಳನ್ನು ಪೂರ್ಣವಾಗಿ ನಂಬಿದರೆ ಹಿಂದುಗಳ ತತ್ವಜ್ಞಾನ, ಸಂಸ್ಕೃತಿ, ಪದ್ಧತಿ, ಕೇವಲ ಬರ್ಬರತೆ, ಅಸಭ್ಯತೆ, ಕ್ರೌರ್ಯತೆ ಹಾಗು ನರಭಕ್ಷತೆಗೆ ಮೀಸಲೆಂದು ಅನಿಸುತ್ತದೆ.

ಹಿಂದುಗಳ ಮೂಲ ಬೇರಾದ ವೇದವು, ಪ್ರಪಂಚದ ಜ್ಞಾನದ ಮೊದಲನೆಯ ಮೂಲವಾಗಿದೆ. ಈ ವೇದಗಳು ಮನುಷ್ಯನ ಪರಮಾನಂದಕ್ಕೆ ಕೈಪಿಡಿಯಾಗಿದೆ. ಇದನ್ನು ಇಷ್ಟಪಡದ ಕೆಲವರು ವೇದಗಳ ಪಾವಿತ್ರ್ಯತೆಯನ್ನು ಹಾಳುಮಾಡುವ ಸಲುವಾಗಿ ಹುಚ್ಚುಹುಚ್ಚಾದ, ಅರ್ಥ ಗರ್ಭಿತವಲ್ಲದ ವಿಷಯಗಳಿಗೆ ವೇದಗಳೆ ಆಧಾರವೆಂದು ಹೇಳಿ ಜನರಿಗೆ ಮೋಸ ಮಾಡುತ್ತಿದ್ದಾರೆ.

ಇವರ ಈ ಪ್ರಯತ್ನದಿಂದ ಬಡವರು ಹಾಗು ಅನಕ್ಷರಸ್ಥರು ಭಾರತದ ಮೂಲ ಆಧಾರವಾದ ವೇದವು ಹೆಂಗಸರ ಮೇಲೆ ದೌರ್ಜನ್ಯ, ಮಂಸ ಭಕ್ಷಣೆ, ಬಹು ಪತ್ನಿತ್ವ, ಜಾತೀಯತೆ ಹಾಗು ಇದೆಲಕ್ಕಿಂತ ಹೆಚ್ಚಾಗಿ ಗೋಮಾಂಸ ಭಕ್ಷಣೆಯನ್ನು ಪ್ರೊತ್ಸಾಹಿಸುತ್ತದೆ ಎಂದು ಅರ್ಥೈಸಿಕೊಳುತ್ತರೆ.

ಯಜ್ಞಗಳಂತಹ ಇತರೆ ಉತ್ಸವಗಳಲ್ಲಿ ಪ್ರಾಣಿಗಳನ್ನು ಬಲಿದಾನ ಮಾಡಲು ವೇದಗಳು ಪ್ರೋತ್ಸಾಹಿಸುವುದು ಎಂಬ ಆಪಾದನೆಗೆ ವೇದಗಳು ಗುರಿಯಾಗಿವೆ. ವಿದೇಶಿಯರಷ್ಟೆ ಅಲ್ಲ, ನಮ್ಮ ದೇಶದ ಎಷ್ಟೊ ಬುದ್ಧಿಜೀವಿಗಳು ಈ ಹಿಂದೆ ಉಲ್ಲೇಖಿಸಿದ ವಿದೇಶಿ ಅನ್ವೇಷಕರ ಪುಸ್ತಕಗಳನ್ನೇ ಆಧಾರವಾಗಿಟ್ಟುಕೊಂಡು ವೇದಗಳಲ್ಲಿ ಪಾಂಡಿತ್ಯ ಹೊಂದಿದವರಂತೆ ವರ್ತಿಸಿ ವೇದಗಳ ಮೇಲೆ ಹಲವಾರು ಆಪಾದನೆ ಹೊರಸಿದ್ದಾರೆ.

ಗೋಮಾಂಸ ಭಕ್ಷಣೆಯನ್ನು ವೇದವು ಓಪ್ಪುತ್ತದೆ ಎಂಬ ಘನಘೋರ ಸುಳ್ಳನ್ನು ಹೇಳಿ, ಗೋವಿನ ಮೇಲಿರುವಂತಹ ಗೌರವವನ್ನು ಹಾಳುಮಾಡುತಿದ್ದಾರೆ. ಎಲ್ಲಿಯವರಗೆ ವೇದಗಳ ಸಂಪೂರ್ಣ ಜ್ಞಾನ ಹೊಂದಿರುವುದಿಲ್ಲವೊ ಅಲ್ಲಿಯವರೆಗೆ ಸನಾತನ ಧರ್ಮಿಯ ಅನುಯಾಯಿಗಳಾದ ಹಿಂದುಗಳು ಈ ವಿದೇಶಿ ಬೇಟೆಗಾರರಿಗೆ ಸುಲಭ ತುತ್ತಾಗಬಹುದು.

ಸಂಪೂರ್ಣವಾಗಿ ವೇದಗಳನ್ನರಿಯದ ಲಕ್ಷಾಂತರ ಹಿಂದುಗಳು ವಿದೇಶಿಯರು ಮಂಡಿಸುವ ವಿತಂಡವಾದಗಳಿಗೆ, ಹುಚ್ಚು ತರ್ಕಗಳಿಗೆ ಹಾಗು ಸುಳ್ಳಿನ ಸರಮಾಲೆಗೆ ಸೋತು ಶರಣಾಗುತ್ತಿದ್ದಾರೆ.

ವೇದಗಳನ್ನು ಕಲ್ಮಶಗೊಳಿಸಲು ಕೇವಲ ವಿದೇಶಿಯರು ಹಾಗು ಬುದ್ದಿಜೀವಿಗಳು ಮಾತ್ರ ಹೊಣೆಯಲ್ಲ, ಇವರ ಜೊತೆಗೆ ಹಿಂದುಗಳಲ್ಲೆ ಕೆಲವು ಪಂಗಡಗಳು ಆರ್ಥಿಕ ಹಾಗು ಸಾಮಾಜಿಕ ಬಲಹೇನರಾಗಿರುವ ಹಲವು ಪಂಗಡಗಳನ್ನು ವೇದಗಳ ಕಾರಣ ಹೇಳಿ ಅನುಚಿತ ಉಪಯೊಗ ಪಡೆದುಕೊಂಡಿದ್ದರೆ. ವೇದಗಳನ್ನರಿತ್ತಿದ್ದ ಈ ಜನರು, ಅದರ ಜ್ಞಾನವನ್ನು ಇತರರಿಗೆ ಹಂಚದೆ ತಮ್ಮ ಸ್ವಪ್ರಯೊಜನಕ್ಕಾಗಿ ತಾವೆ ಶ್ರೇಷ್ಠರು ಎಂಬ ನಂಬಿಕೆಯನ್ನು ಇತರ ಪಂಗಡಗಳಿಗೆ ಹುಟ್ಟುಹಾಕಿದ್ದಾರೆ.

ವೇದಗಳ ಈ ಎಲ್ಲಾ ಆಪಾದನೆಗಳಿಗೆ ಮುಖ್ಯಕಾರಣವೆಂದರೆ, ಮಧ್ಯಕಾಲೀನ ಬರಹಗಾರರಾದ ಮಾಹಿಧರ್, ಉವಾತ್ ಹಾಗು ಸಾಯನ್ ರ ವ್ಯಾಖ್ಯಾನಗಳ ಟೇಕೆಗಳಿಂದ ಹಾಗು ವೇದಗಳು ಕೇವಲ ವಾಮಾಚಾರ, ಗೂಢಾಚಾರ, ಮಾಟಮಂತ್ರಗಳಿಗೆ ಸೀಮಿತ ಎಂದು ಹಬ್ಬಿಸಿರುವುದು ಇದಕ್ಕೆ ಕಾರಣವಾಗಿದೆ. ವೇದಗಳ ಪಾವಿತ್ರ್ಯತೆಯನ್ನು ಮತ್ತಷ್ಟು ಉಲ್ಬಣಗೊಳಿಸಲು, ಅರ್ಧಜ್ಞಾನ ಹೊಂದಿದ ವಿದೇಶಿ ಅನ್ವೇಶಕರು, ಮಾಹಿಧರ್, ಉವಾತ್ ಹಾಗು ಸಾಯನ್ ರ ವ್ಯಾಖ್ಯಾನಗಳ ಟೇಕೆಯನ್ನು ಭಾಷಾಂತರಿಸಿ ವೇದಗಳನ್ನೇ ಭಾಷಾಂತರ ಮಾಡಿದುದಾಗಿ ಹೇಳಿಕೊಂಡರು.

ಸಂಸ್ಕೃತದ ಬಗ್ಗೆ ಅರ್ಧಜ್ಞಾನ ಹೊಂದಿದಂತಹ ವಿದೇಶಿ ಭಾಷಾಂತರರು ವೇದಗಳನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿಕೊಳ್ಳಲು ಬಹು ಅವಶ್ಯಕವಾಗಿರುವಂತಹ ಭಾಷಾಧ್ವನಿ ರೂಪಕ(Phonetic), ನಿಘಂಟು(Vocabulary), ಛಂದಸ್ಸು(Prosody), ಜ್ಯೋತಿಷ್ಯ ಶಾಸ್ತ್ರ(Astronomy), ಮತ್ತು ಇತರ ವಿಷಯಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಓಮ್ಮೆ ಮೂಲ ವೇದಗಳನ್ನು ಓದಿದರೆ ಅವರ ಈ ತಪ್ಪುಗಳನ್ನು ಬಹಳ ಸುಲಭವಾಗಿ ಕಂಡುಹಿಡಿಯಬಹುದಾಗಿದೆ.

ನಮ್ಮ(ಅಗ್ನಿವೀರ್) ಪ್ರಯತ್ನದ ಹಿಂದಿರುವ ಉದ್ದೇಶವೇನೆಂದರೆ, ವೇದಗಳ ತಪ್ಪು ಗ್ರಹಿಕೆಗಳನ್ನು ಹೋಗಲಾಡಿಸಿ, ಅದರ ಪಾವಿತ್ರ್ಯತೆಯನ್ನು ಕಾಪಡುವುದು ಹಾಗು ವೇದಗಳು ಕೇವಲ ಹಿಂದುಗಳಿಗೆ ಮಾತ್ರ ಸೀಮಿತವಲ್ಲದೆ ಪ್ರಪಂಚದ ಎಲ್ಲಾ ಮಾನವರಿಗು ಅನ್ವಯಸುತ್ತದೆ ಎಂದು ತಿಳಿಸುವಂತದ್ದಾಗಿದೆ.


ಭಾಗ – ೧                ಪ್ರಾಣಿ ಹಿಂಸೆ ಮಹಾ ಪಾಪ

ಯಜುರ್ವೇದ ೪೦.೭

ಯಾರು,ಎಲ್ಲಾ ಜೀವಿಗಳು ಒಂದೇ ಆತ್ಮನೆಂದು ತಿಳಿಯುತ್ತಾರೊ ಅವರು ದಡ್ಡತನದಿಂದಾಗಲಿ, ಯಾತನೆಯಿಂದಾಗಲಿ ಬಳಲುವುದಿಲ್ಲ ಏಕೆಂದರೆ ನಾವೆಲ್ಲರೂ ಒಂದೇ ಎಂಬ ಅನುಭವವನ್ನು ಹೊಂದಿರುತ್ತಾರೆ.

ಯಾವ ಮನುಷ್ಯರು ಅನಶ್ವರ ಹಾಗು ಪುನರ್ಜನ್ಮ ಸಿದ್ಧಾಂತಗಳನ್ನು ನಂಬುತ್ತರೊ, ಅವರು ಪ್ರಾಣಿಗಳನ್ನು ಯಜ್ಞಗಳಲ್ಲಿ ಕೊಲ್ಲಲು ಧೈರ್ಯವಾದರೊ ಹೇಗೆ ಮಾಡಿಯಾರು? ಯಾಕೆಂದರೆ ಆ ಪ್ರಾಣಿಗಳಲ್ಲಿ ಒಂದಾನೊಂದು ಸಮಯದಲ್ಲಿ ತಮಗೆ ಹತ್ತಿರವಾಗಿದ್ದ, ಪ್ರೀತಿ ಪಾತ್ರರಾಗಿದ್ದ ಆತ್ಮಗಳನ್ನು ನೋಡುತ್ತಾರೆ.

ಮನುಸ್ಮೃತಿ ೫.೫೧

ಪ್ರಾಣಿಗಳನ್ನು ಕೊಲ್ಲಲು ಅನುಮತಿ ಕೊಡುವವರು, ಬಲಿಕೊಡಲೆಂದೆ ಪ್ರಾಣಿಗಳನ್ನು ತರುವವರು, ಪ್ರಾಣಿಗಳನ್ನು ಕೊಲ್ಲುವವರು, ಮಾಂಸವನ್ನು ಮಾರುವವರು, ಮಾಂಸವನ್ನು ಕೊಂಡುಕೊಂಡವರು, ಮಾಂಸದಿಂದ ಅಡುಗೆ ಮಾಡುವವರು, ಮಾಂಸದ ಅಡುಗೆಯನ್ನು ಬಡಿಸುವವರು ಮತ್ತು ಮಾಂಸವನ್ನು ತಿನ್ನುವವರನ್ನು ಕೊಲೆಗೆಡುಕರೆಂದೆ ಪರಿಗಣಿಸಲಾಗುವುದು.

ಅಥರ್ವಣ ವೇದ ೬.೧೪೦.೨

ಓ ಹಲ್ಲುಗಳೆ, ನೀವು ಅನ್ನವನ್ನು ತಿನ್ನಿ, ಗೋಧಿಯನ್ನು ತಿನ್ನಿ ಹಾಗು ಎಳ್ಳನ್ನು ತಿನ್ನಿ. ಈ ಧವಸಧಾನ್ಯಗಳು ನಿಮ್ಮ ಸೇವನೆಗೆಂದೇ ಇರುವುದು. ತಂದೆ ಅಥವ ತಾಯಿಯಾಗಲು ಶಕ್ತವಿರುವವರನ್ನು ಎಂದಿಗು ಕೊಲ್ಲಬೇಡಿ.

ಅಥರ್ವಣ ವೇದ ೮.೬.೨೩

ಹಸಿ ಮಾಂಸವಾಗಲಿ ಅಥವ ಬೇಯಿಸಿದ ಮಾಂಸವಾಗಲಿ, ಮಾಂಸ ತಿನ್ನುವುದನ್ನು ನಾಶಪಡಿಸಬೇಕು. ಮಾಂಸವೆಂದರೆ ಗಂಡಾಗಲಿ, ಹೆಣ್ಣಾಗಲಿ, ಭ್ರೂಣವಾಗಲಿ ಅಥವ ಮೊಟ್ಟೆಯಾಗಲಿ ನಾಶಪಡಿಸುವುದನ್ನು ನಿಲ್ಲಿಸಬೇಕು.

ಅಥರ್ವಣ ವೇದ ೧೦.೧.೨೯

ಅಮಾಯಕರನ್ನು ಕೊಲ್ಲುವುದು ಮಹಾಪಾಪ. ಹಸು, ಕುದುರೆ ಅಥವ ಮನುಷ್ಯರನ್ನು ಎಂದಿಗು ಕೊಲ್ಲಬೇಡಿ.

ವೇದಗಳು, ಪ್ರಾಣಿಹಿಂಸೆ ಮಾಡುವುದು ನಿಷೇಧಿಸಲಾಗಿದೆ ಎಂದು ಇಷ್ಟು ಪರಿಪಕ್ವವಾಗಿ ಹೇಳಿದರೂ ಸಹ ಗೋವು ಮತ್ತು ಇತರ ಪ್ರಾಣಿಗಳನ್ನು ಕೊಲ್ಲಿ ಎಂದು ಹೇಳುವುದು ಎಷ್ಟು ನ್ಯಾಯಯುತವಾಗಿದೆ? ಇದು ನಂಬುವಂತಹ ವಿಷಯವಲ್ಲ.

ಯಜುರ್ವೇದ ೧.೧

“ಓ ಮಾನವನೆ! ಪ್ರಾಣಿಗಳನ್ನು ಕೊಲ್ಲುವುದಕ್ಕಾಗಿ ಅಲ್ಲ, ಪ್ರಾಣಿಗಳನ್ನು ರಕ್ಷಿಸು”

ಯಜುರ್ವೇದ ೬.೧೧

ಪ್ರಾಣಿಗಳನ್ನು ರಕ್ಷಿಸು

ಯಜುರ್ವೇದ ೧೪.೮

ದ್ವಿಪಾದ ಹಾಗು ಚತುಷ್ಪಾದ ಜೀವಿಗಳನ್ನು ರಕ್ಷಿಸು

ಕ್ರವಿದ         -    ಕ್ರವ್ಯ (ಕೊಂದ ನಂತರ ಬರುವ ಮಾಂಸ) + ಅದ (ತಿನ್ನುವವನು) = ಮಾಂಸ ತಿನ್ನುವವನು

ಪಿಶಾಚ        –     ಪಿಸಿತ (ಮಾಂಸ) + ಅಶ (ತಿನ್ನುವವನು)  = ಮಾಂಸ ತಿನ್ನುವವನು

ಅಸುತೃಪ     –     ಅಸು (ಉಸಿರಾಡುವ ಜೀವಿ) + ತೃಪ (ತನ್ನನ್ನು ತಾನೆ ತೃಪ್ತಿಪಡಿಸಿ ಕೊಳ್ಳುವವನು)    = ಇನ್ನೊಂದು ಜೀವಿಯನ್ನು                                                                                          ಆಹಾರಕ್ಕೆಂದು ಬಳಸುವವನು

ಗರ್ಭದ ಮತ್ತು ಅಂಡದ –     ಗರ್ಭವನ್ನು ಅಥವ ಮೊಟ್ಟೆಯನ್ನು ತಿನ್ನುವವನು

ವೇದ ಲಿಪಿಗಳಲ್ಲಿ ಮಾಂಸ ತಿನ್ನುವವರನ್ನು ಯಾವಾಗಲು ನೀಚ ದೃಷ್ಟಿಯಿಂದ ನೋಡಲಾಗಿದೆ. ಮಾಂಸ ತಿನ್ನುವವರನ್ನು ರಾಕ್ಷಸ, ಪಿಷಾಚಿ, ಹಾಗು ಇತರೆ ಪ್ರೇತಗಳಿಗೆ ಸಮಾನಾರ್ಥಕವಾಗಿದೆ ಹಾಗು ಇವೆಲ್ಲರನ್ನು ನಾಗರೀಕ ಸಮಾಜದಿಂದ ಹೊರಗಿಡಿಸಲಾಗಿದೆ.

ಯಜುರ್ವೇದ ೧೧.೮೩

ಎಲ್ಲಾ ದ್ವಿಪಾದಿಗಳು ಹಾಗು ಚತುಷ್ಪಾದಿಗಳು ಶಕ್ತಿಗೊಂಡು ಬೆಳೆಯಲಿ

ಈ ಮೇಲಿನ ಮಂತ್ರವನ್ನು ಹಿಂದುಗಳು ಪ್ರತಿ ಊಟದ ಮೂದಲು ಪಟಿಸುತ್ತಾರೆ. ಯಾವ ತತ್ವಶಾಸ್ತ್ರವು ಪ್ರತಿ ಆತ್ಮದ ಸೌಖ್ಯಕ್ಕಾಗಿ ಪ್ರಾರ್ಥಿಸುತ್ತದೊ ಅಂತಹ ತತ್ವಶಾಸ್ತ್ರವು ಪ್ರಾಣಿಗಳನ್ನು ಕೊಲ್ಲಲು ಅನುಮತಿ ನೀಡಲು ಹೇಗೆ ಸಾಧ್ಯ?


ಭಾಗ – ೨                            ಯಜ್ಞಗಳಲ್ಲಿ ಹಿಂಸೆ ಸಲ್ಲದು

ಜನಪ್ರಿಯವಾಗಿ ತಿಳಿದಿರುವಂತೆ, ಯಜ್ಞಗಳಲ್ಲಿ ಪ್ರಾಣಿ ಬಲಿಯಾಗುವುದಿಲ್ಲ. ವೇದಗಳಲ್ಲಿ ಯಜ್ಞಗಳೆಂದರೆ ಶ್ರೇಷ್ಟ ಕಾರ್ಯ ಅಥವ ಉನ್ನತವಾಗಿ ಶುದ್ಧಿಕರಿಸುವ ಕಾರ್ಯ.

ಯಾಸ್ಕ ಆಚಾರ್ಯರು ಹೇಳಿರುವಂತೆ ವೇದಗಳ ಭಾಷಾಶಾಸ್ತ್ರ ಅಥವ ನಿರುಕ್ತದ ಪ್ರಕಾರ ಯಜ್ಞದ ಇನ್ನೊಂದು ಅರ್ಥವೇ ಅಧ್ವಾರ. ಧ್ವಾರ ಎಂದರೆ ಹಿಂಸೆ ಅಥವ ದೌರ್ಜನ್ಯದ ಕೃತ್ಯ. ಅಧ್ವಾರ ಎಂದರೆ ಹಿಂಸೆ ಅಥವ ದೌರ್ಜನ್ಯವಿಲ್ಲದ ಕೆಲಸ. ವೇದಗಳಲ್ಲಿ ಅಧ್ವಾರ ಎಂಬ ಪದದ ಬಳಕೆ ಬಹಳಾ ಉಪಯೋಗಿಸಲಾಗಿದೆ.

ಮಹಾಭಾರತ ನಂತರದ ಕಾಲದಲ್ಲಿ ವೇದಗಳನ್ನು ಅಪವ್ಯಾಖ್ಯಾನಿಸಲಾಗಿದೆ, ಹಾಗು ಮೂಲ ಗ್ರಂಥಕ್ಕೆ ಹೊಸ ವಿಚಾರಗಳನ್ನು ಸೇರಿಸಿ ಅಪಮೌಲ್ಯಗೊಳಿಸಲಾಗಿದೆ. ಶಂಕರಾಚಾರ್ಯರು ವೇದದ ಮೌಲ್ಯಗಳನ್ನು ಮರುಸ್ಥಾಪಿಸಲು ಶ್ಲಾಘನೀಯ ಕೆಲಸಗಳನ್ನು ಮಾಡಿದ್ದಾರೆ.

ಆಧುನಿಕ ಭಾರತದ ಪಿತಾಮಹ ಎಂದೇ ಪ್ರಖ್ಯಾತರಾದಂತಹ ಸ್ವಾಮಿ ದಯಾನಂದ ಸರಸ್ವತಿಯವರು, ಅಧಿಕೃತ ಸಾಕ್ಷಾಧಾರಗಳನಿಟ್ಟುಕೊಂಡು ಸರಿಯಾದ ಭಾಷಾ ವಿಧಿ ವಿಧಾನಗಳೊಂದಿಗೆ ವೇದಗಳನ್ನು ವ್ಯಾಖ್ಯಾನಿಸಿದ್ದಾರೆ. ಇವರ ಸಾಹಿತ್ಯದಲ್ಲಿ ವೇದಗಳ ವಿವರಣೆ, ಸತ್ಯರ್ಥ್ ಪ್ರಕಾಶ್ ರವರು ಶಿಥಿಲವಾಗಿ ಭಾಷಾಂತರಿಸಿದ “ಸತ್ಯದ ಬೆಳಕು”(Light of truth), ವೇದಗಳ ಪರಿಚಯ ಮತ್ತು ಇತರೆ ಪಠ್ಯಗಳು ಜನಪ್ರಿಯಗೊಂಡು ವೇದ ತತ್ವಶಾಸ್ತ್ರದ ಅನ್ವಯ ಸಾಮಾಜಿಕ ಬದಲಾವಣೆ ತರುವಲ್ಲಿ ಹಾಗು ಅದಕ್ಕೆ ಅಂಟಿದ್ದಂತಹ ಕಳಂಕವನ್ನು ಗಮನಾರ್ಹವಾಗಿ ಹೋಗಲಾಡಿಸಲು ಸಾಧ್ಯವಾಯಿತು.

ಈ ಭಾಗದಲ್ಲಿ ನಮ್ಮ ಪವಿತ್ರ ವೇದಗಳು ಯಜ್ಞದ ಬಗ್ಗೆ ಏನು ಹೇಳುತ್ತದೆ ಎಂದು ತಿಳಿದುಕೊಳ್ಳೊಣ.

ಋಗ್ವೇದ: ೧.೧.೪

ಓ ಕಾಂತಿಯುತವಾದ ದೇವರೆ! ನೀನು ಆಜ್ಞಾಪಿಸುವಂತಹ, ಎಲ್ಲಾ ಕಡೆಗಳಿಂದಲೂ ಮಾಡುವಂತಹ ಅಹಿಂಸೆಯ ಈ ಯಜ್ಞವು ಎಲ್ಲಾರಿಗೂ ಬಹಳ ಉಪಯೋಗಕಾರಿಯಾಗಿದೆ ಮತ್ತು ಈ ಯಜ್ಞವು ಆಧ್ಯಾತ್ಮ ತ್ರೈರಾಶಿಯನ್ನು ಹಾಗು ಕೀರ್ತಿವಂತ ಆತ್ಮಗಳನ್ನು ಮುಟ್ಟುತ್ತದೆ.

ಋಗ್ವೇದವು, ಮೊದಲಿನಿಂದಲು ಕೊನೆಯವರೆಗೂ ಯಜ್ಞವನ್ನು ಅಧ್ವಾರ ಅಥವ ಅಹಿಂಸೆ ಎಂದು ವರ್ಣಿಸಲಾಗಿದೆ, ಅಷ್ಟೇ ಅಲ್ಲದೆ ಎಲ್ಲಾ ವೇದಗಳಲ್ಲೂ ಸಹ ಪ್ರಾಣಿ ಹಿಂಸೆಯನ್ನು ವಿರೋಧಿಸಲಾಗಿದೆ. ಹೀಗಿರುವಾಗ ಹಿಂಸೆಯಾನ್ನಾಗಲಿ ಅಥವ ಪ್ರಾಣಿ ಬಲಿಯನ್ನಾಗಲಿ ವೇದಗಳು ನೇರವಾಗಿ ಅಥವ ಪರೋಕ್ಷವಾಗಿ ಸಮ್ಮತಿಸಲು ಹೇಗೆ ತಾನೆ ಸಾಧ್ಯ? ಹಲವಾರು ದುಶ್ಟರ ಪ್ರಯತ್ನದಿಂದ ವೇದಗಳನ್ನು ತಿರುಚಲು ಪ್ರಯತ್ನಿಸಿ, ವೇದಗಳ ಮೇಲೆ ಇಲ್ಲದ ಆರೋಪ ಹೊರಿಸುತ್ತಿದ್ದರೆ.

ಅತಿ ದೊಡ್ಡ ಆಘಾತಕಾರಿ ಆಪಾದನೆ ಏನೆಂದರೆ, ಯಜ್ಞಗಳಲ್ಲಿ ಜಾನುವಾರು ಬಲಿಗಳನ್ನು ಮಾಡುತ್ತಾರೆ, ಅದರಲ್ಲಿಯೂ ಅಶ್ವಮೇಧ ಯಜ್ಞ, ಗೋಮೇಧ ಯಜ್ಞ ಹಾಗು ನರಮೇಧ ಯಜ್ಞಗಳಲ್ಲಿ ಹಿಂಸೆಯು ಸರ್ವೆ ಸಾಮಾನ್ಯ ಎಂದು ತಪ್ಪು ತಿಳಿದಿದ್ದಾರೆ ಆದರೆ ಮೇಧ ಎಂಬ ಪದವು ಯಾವುದೆ ಕಾರಣದಿಂದಲು ಬಲಿ ಎಂದು ಅನ್ವಯಿಸುವುದಿಲ್ಲ.

ಯಜುರ್ವೇದವು ಕುದುರೆಗಳ ಬಗ್ಗೆ ಏನು ಹೇಳುವುದೆಂದು ತಿಳಿಯುವುದು ಮುಖ್ಯ

ಯಜುರ್ವೇದ ೧೩.೪೮

ಈ ಗೊರಸುಳ್ಳ, ಹೇಷಾರವ ಮಾದುತ್ತಾ ಇತರೆ ಪ್ರಾಣಿಗಳಿಗಿಂತಲು ವೇಗವಾಗಿ ಚಲಿಸುವಂತ ಪ್ರಾಣಿಯನ್ನು ಸಂಹಾರ ಮಾಡಬೇಡಿ.

ಅಶ್ವಮೇಧ ಯಜ್ಞ ಎಂದರೆ ಕುದುರೆಯನ್ನು ಬಲಿಕೊಡುವುದಲ್ಲ. ಯಜುರ್ವೇದವು ಕುದುರೆ ಬಲಿಯನ್ನು ಮಾಡಲೇಬಾರದೆಂದು ಸ್ಪಷ್ಟವಾಗಿ ಹೇಳಿದೆ.

ಶಥಪಥದಲ್ಲಿ ಅಶ್ವ ಎಂದರೆ ದೇಶ ಅಥವ ಸಾಮ್ರಾಜ್ಯ ಎಂದರ್ಥ.

ಮೇಧ ಎಂಬ ಪದದ ಅರ್ಥ ಸಂಹಾರ ಎಂದಲ್ಲ. ಅದರ ಮೂಲಾರ್ಥದಲ್ಲಿ ಮೇಧ ಎಂದರೆ ವಿವೇಕದಿಂದ ಮಾಡಿದಂತಹ ಕೆಲಸ ಒಟ್ಟು ಗೂಡುಸುವಿಕೆ.

ಸ್ವಾಮಿ ದಯಾನಂದ ಸರಸ್ವತಿಯವರು ತಮ್ಮ ಸತ್ಯದ ಬೆಳಕಿನಲ್ಲಿ ಹೀಗೆ ಬರೆಯುತ್ತಾರೆ “ಅಶ್ವಮೇಧ ಯಜ್ಞವು ರಾಷ್ಟ್ರದ, ದೇಶದ ಅಥವ ಒಂದು ಸಾಮ್ರಾಜ್ಯದ ವೈಭವ, ಸುಖ – ನೆಮ್ಮದಿ ಹಾಗು ಸಮೃದ್ಧಿಗೆ ಅರ್ಪಿಸಲಾಗುತ್ತದೆ.

ಗೋಮೇಧ ಯಜ್ಞ ಎಂದರೆ ನಮ್ಮ ಆಹಾರವನ್ನು ಶುಚಿಯಾಗಿಡಲಿ ಅಥವ ನಮ್ಮ ಇಂದ್ರಿಯಗಳನ್ನು ಹಿಡಿತದಲ್ಲಿಡಲು / ಸ್ಥಿತ ಪ್ರಜ್ಞರಾಗಲು ಅಥವ ಆಹಾರವನ್ನು ಶುಚಿಮಾಡಲು ಅಥವ ಸೂರ್ಯನ ಕಿರಣಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ಅಥವ ಭೂಮಿಯನ್ನು ಮಲಿನತೆ ಇಂದ ಕಾಪಾಡಿಕೊಳ್ಳುವುದು. ಗೋ ಪದದ ಇನ್ನೊಂದು ಅರ್ಥ ಭೂಮಿ ಎಂದು ಹಾಗು ಭೂಮಿಯನ್ನು ಶುಚಿಯಾಗಿಡಲು ಮಾಡುವ ಯಜ್ಞವೇ ಗೋಮೇಧ ಯಜ್ಞ.

ನರಮೇಧ ಯಜ್ಞ ಎಂದರೆ, ಸತ್ತ ಮನುಷ್ಯನ ದೇಹವನ್ನು ವೇದಗಳ ವಿಧಿ – ವಿಧಾನದ ಪ್ರಕಾರ ಅಂತ್ಯಸಂಸ್ಕಾರ ಮಾಡುವುದು.


ಭಾಗ – ೩            ವೇದಗಳಲ್ಲಿ ಗೋಮಾಂಸ ಸೇವನೆ ಇಲ್ಲ.

ವೇದಗಳು ಪ್ರಾಣಿಸಂಹಾರವನ್ನು ವಿರೋಧಿಸುತ್ತದೆ, ಅದರಲ್ಲಿಯೊ ಗೋ ಸಂಹಾರವನ್ನು ತೀವ್ರವಾಗಿ ವಿರೋಧಿಸುವುದಲ್ಲದೆ, ಗೋಸಂಹಾರವನ್ನು ನಿಷೇಧಿಸಿದೆ.

ಯಜುರ್ವೇದ ೧೩.೪೯

ರಕ್ಷಣೆಗೆ ಅರ್ಹರಾಗಿರುವಂತಹ ಹಸು ಹಾಗು ಎತ್ತುಗಳನ್ನು ಕೊಲ್ಲಬೇಡಿ

ಋಗ್ವೇದ ೭.೫೬.೧೭

ಋಗ್ವೇದದಲ್ಲಂತೂ ಗೋ ಹತ್ಯೆಯನ್ನು ಮಾನವಹತ್ಯೆಗೆ ಸಮವೆಂದು ಘೋಷಿಸಲ್ಪಟ್ಟಿದೆ. ಇಂತಹ ಹೀನ ಕೃತ್ಯ ಮಾಡಿದವರನ್ನು ಶಿಕ್ಷೆಗೆ ಗುರಿಪಡಿಸಬೇಕೆಂದು ಹೇಳುತ್ತದೆ.

ಋಗ್ವೇದ ೧.೧೬೪.೪೦, ಅಥರ್ವಣ ವೇದ೭.೭೩.೧೧, ಅಥರ್ವಣ ವೇದ ೯.೧೦.೨೦

ಪಾವಿತ್ರ್ಯತೆ, ಜ್ಞಾನ ಹಾಗು ಐಶ್ವರ್‍ಯವನ್ನು ಏತೇಚ್ಛವಾಗಿ ಪಡೆಯಲು ಆಜ್ಞ – ಅಂದರೆ ಹಸುಗಳನ್ನು ಕೊಲ್ಲದೆ ಅವುಗಳಿಗೆ ಹಸಿ ಹುಲ್ಲನ್ನು ಹಾಗು ಶುದ್ಧ ನೀರನ್ನು ನೀಡಿ ಅವುಗಳನ್ನು ಆರೋಗ್ಯಕರ ರೀತಿಯಲ್ಲಿ ರಕ್ಷಿಸತಕ್ಕದ್ದು. ವೇದಗಳ ಶಬ್ದಕೋಶದಲ್ಲಿ ಅಥವ ನಿಘಂಟಿನಲ್ಲಿ ಗೋ ಅಥವ ಹಸುವಿಗೆ ಸಮಾನಾರ್ಥಕವಾಗಿ ಆಜ್ಞ, ಅಹಿ ಮತ್ತು ಅದಿತಿ ಎಂದಿ ಬಳಸಲಾಗಿದೆ.

ಯಾವುದನ್ನು ಕೊಲ್ಲಬಾರದೊ ಅದನ್ನು ಆಜ್ಞ ಎನ್ನುತ್ತಾರೆ

ಯಾವುದನ್ನು ಸಂಹಾರಮಾಡಬಾರದೊ ಅದನ್ನು ಅಹಿ ಎನ್ನುತ್ತಾರೆ

ಯಾವುದನ್ನು ತುಂಡುತುಂಡಾಗಿ ಕತ್ತರಿಸಬಾರದೊ ಅದನ್ನು ಅದಿತಿ ಎನುತ್ತಾರೆ

ಈ ಮೂರು ಪದಗಳು ಹಸುಗಳನ್ನು ಯಾವುದೇ ರೀತಿಯಲ್ಲಿ ಹಿಂಸಿಸುವಂತಿಲ್ಲ ಎಂದು ಅರ್ಥೈಸುತ್ತದೆ. ಹಸುಗಳಿಗೆ ಸಂಬಂಧಿಸಿದಂತೆ ವೇದಗಳಲ್ಲಿ ಈ ಪದಗಳು ಎತೇಚ್ಛವಾಗಿ ಬಳಸಲಾಗಿದೆ.

ಋಗ್ವೇದ ೧.೧೬೪.೨೭

ಗೋ – ಆಜ್ಞ – ಆರೋಗ್ಯ ಮತ್ತು ಐಶ್ವರ್‍ಯವನ್ನು ತರುವುದು

ಋಗ್ವೇದ ೫.೮೩.೮

ಆಜ್ಞ – ಗೋವುಗಳಿಗೆ ಶುದ್ಧ ನೀರನ್ನು ಪೂರೈಸಲು ಅತ್ಯುತ್ತಮ ಸೌಲಭ್ಯವನ್ನು ಕಲ್ಪಿಸಬೇಕು.

ಋಗ್ವೇದ ೧೦.೮೭.೧೬

ಯಾರು ಮಾನವರನ್ನು, ಕುದುರೆಗಳನ್ನು ಅಥವ ಇತರೆ ಪ್ರಾಣಿಗಳ ಮಾಂಸವನ್ನು ಆಹಾರಕ್ಕೆಂದು ಬಳಸುತ್ತಾರೊ ಹಾಗು ಹಾಲು ಕೊಡುವ ಆಜ್ಞ ಹಸುಗಳನ್ನು ನಾಶ ಪಡಿಸುತ್ತಾರೊ ಅವರನ್ನು ತೀವ್ರವಾಗಿ ಶಿಕ್ಷಿಸಬೇಕು.

ಋಗ್ವೇದ ೮.೧೦೧.೧೫

ಗೋವುಗಳನ್ನು ಕೊಲ್ಲಬೇಡಿ. ಗೋವು ಬಹಳಾ ಮುಗ್ಧ ಪ್ರಾಣಿ. ಅವುಗಳನ್ನು ತುಂಡುತುಂಡಾಗಿ ಕತ್ತರಿಸಬೇಡಿ.

ಯಜುರ್ವೇದ ೧೨.೭೩

ಆಜ್ಞ ಹಸುಗಳು ಹಾಗು ಎತ್ತುಗಳು ಸಮೃದ್ಧಿತರುತ್ತದೆ.

ಯಜುರ್ವೇದ ೩೦,೧೮

ಗೋವುಗಳನ್ನು ಕೊಲ್ಲುವವರನ್ನು ನಾಶ ಮಾಡು

ಅಥರ್ವಣ ವೇದ ೧.೧೬.೪

ಯಾರಾದರೊ ಹಸುಗಳನ್ನು, ಕುದುರೆಗಳನ್ನು ಅಥವ ಮನುಷ್ಯರನ್ನು ನಾಶಪಡಿಸಿದರೆ ಅವರನ್ನು ಸೀಸದ ಗುಂಡಿನಿಂದ ಕೊಲ್ಲಬೇಕು.

ಅಥರ್ವಣ ವೇದ ೩.೩೦.೧

ಆಜ್ಞ – ಕೊಲ್ಲಬಾರದಂತಹ ಗೋವು ಹೇಗೆ ತನ್ನ ಕರುವನ್ನು ಪ್ರೀತಿಸುತ್ತದೋ ಹಾಗೆಯೇ ಒಬ್ಬರನ್ನೊಬ್ಬರು ಪ್ರೀತಿಸಿ.

ಅಥರ್ವಣ ವೇದ ೧೧.೧.೩೪

ಹಸುವು ಎಲ್ಲಾ ದಯೆಯ ಉಗಮಸ್ಥಾನ.

ಋಗ್ವೇದದ, ಆರನೆಯ ಮಂಡಲದ, ೨೮ನೆಯ ಎಲ್ಲಾ ಸೂಕ್ತಗಳು ಅಥವ ಸ್ತೂತ್ರಗಳು ಗೋವಿನ ಕೀರ್ತಿ ಮಹಿಮೆಯನ್ನು ಹಾಡಿಹೊಗಳುತ್ತದೆ.

೧. ಹಸುಗಳನ್ನು ಆರೋಗ್ಯಕರ ರೀತಿಯಲ್ಲಿದಯೇ, ಅವುಗಳು ತೊಂದರೆಗಳಿಂದ ದೂರವಿದಯೇ, ಅವುಗಳು ಸುಭದ್ರವಾಗಿದಯೇ ಎಂದು ನೊಡಿಕೊಳ್ಳುತ್ತಿರಬೇಕು.

೨. ಹಸುಗಳ ಬಗ್ಗೆ ಕಾಳಜಿ ವಹಿಸುವವರನ್ನು ದೇವರು ಆಶೀರ್ವದಿಸುತ್ತದೆ.

೩. ಶತ್ರುಗಳು ಸಹ ಹಸುಗಳ ಮೇಲೆ ಅಸ್ತ್ರಗಳನ್ನು ಪ್ರಯೋಗಿಸಬಾರದು.

೪. ಯಾರೊಬ್ಬರು ಹಸುಗಳನ್ನು ಹತ್ಯೆಮಾಡಬಾರದು.

೫. ಹಸುವು ಸಮೃದ್ಧಿ ಹಾಗು ಶಕ್ತಿಯನ್ನು ತರುತ್ತದೆ.

೬.ಹಸುಗಳು ಖುಶಿಯಾಗಿ ಹಾಗು ಆರೋಗ್ಯಕರ ರೀತಿಯಲ್ಲಿ ಇಟ್ಟಲ್ಲಿ ಗಂಡಸರು ಹಾಗು ಹೆಂಗಸರು ರೋಗ ರುಜಿನಗಳಿಂದ ದೂರವಿದ್ದು ಅಭಿವೃದ್ಧಿ ಹೊಂದುತ್ತಾರೆ.

೭. ಹಸುವು ಹಸಿ ಹುಲ್ಲನ್ನು ಹಾಗು ಶುದ್ಧ ನೀರನ್ನು ಸೇವಿಸಲು ಅವುಗಳನ್ನು ಯಾರು ಕೊಲ್ಲದೆ ನಮಗೆ ಸಮೃದ್ಧಿಯನ್ನು ನೀಡಲಿ

ವೇದಗಳಲ್ಲಿ ಕೇವಲ ಹಸುಗಳನಲ್ಲದೆ ಸಕಲ ಜೀವಜಂತುಗಳನ್ನು ಉತ್ತಮವಾಗಿ ಪ್ರಶಂಸಿಸಲಾಗಿದೆ ಹಾಗು ಪ್ರಾಣಿ ಹಿಂಸೆಯನ್ನು ಖಂಡಿಸಲಾಗಿದೆ ಎಂದು ಸಾಬೀತು ಪಡಿಸಲು ಯಾರಿಗಾದರೊ ಇದಕ್ಕಿಂತ ಹೆಚ್ಚಿನ ಸಾಕ್ಷಾಧಾರಗಳನ್ನು ನೀಡಬೇಕೆ?

ಯಾವುದೇ ಅಮಾನವೀಯ ಕೃತ್ಯಗಳಿಗೆ ವೇದಗಳು ಸಂಪೂರ್ಣ ವಿರೋಧ ವ್ಯಕ್ತಪಡಿಸುತ್ತದೆ ಎಂಬುದನ್ನು ಈ ಎಲ್ಲಾ ಸಾಕ್ಷಾಧಾರಗಳು ಧೃಢಪಡಿಸುತ್ತದೆ. ಅದರಲ್ಲೂ ಗೋಮಾಂಸ ಭಕ್ಷಣೆ ಮತ್ತು ಗೋಹತ್ಯೆ ಬಗ್ಗೆ ವೇದಗಳ ಪೂರ್ಣ ವಿರ್‍ಓಧವಿದೆ. ಆದ್ದರಿಂದ ವಿದ್ಯಾವಂತ ಓದುಗರೆ, ವೇದಗಳಲ್ಲಿ ಪ್ರಾಣಿ ಹಿಂಸೆ ಇದಯೇ? ಅಥವ ಇಲ್ಲವೇ? ಎಂಬುದನ್ನು ನೀವೇ ನಿರ್ಧರಿಸಿ.

೧೪ನೇ ಎಪ್ರಿಲ್ ೨೦೧೦ – ಹೆಚ್ಚೋಲೆ

ಈ ಲೇಖನ ಪ್ರಕಟವಾದ ನಂತರ, ವೇದಗಳ ಪಾವಿತ್ರ್ಯತೆಯನ್ನು ಹಾಗು ನಮ್ಮ ಪುರಾತನ ಸಂಸ್ಕೃತಿಯನ್ನು ಸಹಿಸದ ಕೆಲವರು ನಾನಾ ಕಡೆಗಳಿಂದ ತೀವ್ರವಾದ ಪ್ರತಿರೋಧ ವ್ಯಕ್ತ ಪಡಿಸಿದ್ದಾರೆ. ಈ ನಮ್ಮ ಲೇಖನವು ತಪ್ಪೆಂದು ತೋರಿಸಲು ಹೆಚ್ಚಿನ ಆಧಾರಗಳನ್ನು ನೀಡಿ ನಮಗೆ ಹಲವಾರು ಅಂಚೆಗಳು ಬಂದಿವೆ. ಇದರಲ್ಲಿ ಮುಖ್ಯವಾಗಿ ಋಗ್ವೇದದ ೨ ಮಂತ್ರಗಳು, ಮನುಸ್ಮೃತಿಯ ಕೆಲವು ಶ್ಲೋಕಗಳು ಹಾಗು ಇತರೆ ಮೂಲಗಳು.

ನಾವು ನಿಮ್ಮ ಸಂಶಯಗಳನ್ನು ಬಗೆಹರಿಸಲು ಈ ಕೆಳಗಂಡಂತೆ ಹೆಚ್ಚಿನೆ ವಿವರಣೆ ನೀಡುತ್ತಿದ್ದೇವೆ.

೧. ಈ ಲೇಖನವು ಮನುಸ್ಮೃತಿಯ ಆಧಾರವನ್ನು ಉಲ್ಲೇಖಿಸಿದೆ. ಅದರಂತೆ ಯಾರಾದರು ಕೊಲ್ಲಲು ಅನುಮತಿ ಕೊಟ್ಟರೂ ಅವರನ್ನು ಕೊಲೆಗೆಡುಕರೆಂದೆ ಪರಿಗಣಿಸಲಾಗುವುದು. ಆದ್ದರಿಂದ ಈ ಹಿಂದೆಯೇ ಹೇಳಿದಂತೆ ಎಷ್ಟೊ ಶ್ಲೋಕಗಳು ಹಾಗು ವಿಷಯಗಳನ್ನು ಹೊಸದಾಗಿ ಸೇರಿಸುವ ಪ್ರಯತ್ನ ಮಾಡಿದ್ದಾರೆ. ಹಾಗೆಯೇ ಈ ನಿಮ್ಮ ಸಂಶಯವು ಕಲಬೆರಕೆ ಮನುಸ್ಮೃತಿಯನ್ನೋ ಅಥವ ತಪ್ಪು ವ್ಯಾಖ್ಯಾನ ಮಾಡಿದಂತಹ ಕೃತಿಯಿಂದಲೋ ಬಂದಂತಾಗಿದೆ. ಮೊಟ್ಟಮೊದಲಾಗಿ ಮನುಸ್ಮೃತಿಯಲ್ಲಿ ಪ್ರಾಣಿಹಿಂಸೆಯನ್ನು ತೀವ್ರವಾಗಿ ವಿರೋಧಿಸಲಾಗಿದೆ.

http://www.vedicbooks.com  ನಲ್ಲಿ ಸಿಗುವಂತಹ ಡಾ. ಸುರ್‍ಏಂದ್ರ ಕುಮಾರ್ ರವರ ಮನುಸ್ಮೃತಿಯನ್ನು ಓದಲು ಶಿಫ಼ಾರಸ್ಸು ಮಾಡುತ್ತೇವೆ.

೨.ಇಲ್ಲಿ ಕೆಲವರು ಗೋಮಾಂಸ ಸೇವನೆಯು ವೇದಗಳಲ್ಲಿ ಅಥವ ಸನಾತನ ಪಠ್ಯಗಳಲ್ಲಿ ಉದಾಹರಣೆಗಳನ್ನು ತೋರಿಸಲೇಬೇಕೆಂಬ ಹುಚ್ಚು ಹಠವಾದಿಗಳು ಮಾನ್ಸ ವನ್ನು ಮಾಂಸ ಎಂದು ಅರ್ಥೈಸಿಕೊಂಡಿದ್ದಾರೆ. ನೈಜತೆಯಲ್ಲಿ ಮಾನ್ಸ ಎಂಬ ಪದವು ಮೆತ್ತಗಿರುವ ತಿರುಳು ಎಂದರ್ಥ. ಈ ಮೆತ್ತಗಿರುವ ತಿರುಳು ಹಣ್ಣಿನದಾಗಿರಬಹುದು, ತರಕಾರಿಯದಾಗಿರಬಹುದು ಅಥವ ಮಾಂಸದಾದರೊ ಆಗಿರಬಹುದು. ವೇದಗಳಲ್ಲಿ ಪ್ರಾಣಿ ಹಿಂಸೆಯನ್ನು ಅಷ್ಟು ತೀವ್ರವಾಗಿ ವಿರೋಧಿಸಿರುವುದರಿಂದ, ಈ ಮಾನ್ಸ ಎಂಬ ಪದಾದ ಅರ್ಥ ಖಂಡಿತ ಮಾಂಸವಾಗಿರಲು ಸಾಧ್ಯವೇ ಇಲ್ಲ.

೩. ಇನ್ನು ಕೆಲವರು ಸತ್ಯಕ್ಕೆ ದೂರವಿರುವಂತಹ, ಪ್ರಮಾಣವಲ್ಲದ ಪಠ್ಯಗಳನ್ನೇ ಆಧಾರವಾಗಿಟ್ಟುಕೊಂಡು ಅದೇ ಉತ್ತಮ ಸಾಕ್ಷಿಗಳೆಂದು ಬಣ್ಣಿಸಿದ್ದಾರೆ. ಇವರು ಮಾಡುವಂತಹ ಕೆಲಸ ಬಹಳಾ ಸುಲಭ. ಯಾವುದಾದರೋ ಸಂಸ್ಕೃತದಲ್ಲಿ ಬರೆದಂತಹ ಪಠ್ಯಗಳನ್ನೊ, ವಾಕ್ಯಗಳನ್ನೊ ಧರ್ಮವೆಂದೇ ತಿಳಿದು ಅವರಿಗೆ ಬೇಕಾದ ರೀತಿಯಲ್ಲಿ ಭಾಷಾಂತರಿಸಿ ನಮ್ಮ ಈ ಸನಾತನ ಧರ್ಮವೇ ತಪ್ಪೆಂದು ಧೃಡಪಡಿಸಲು ಪ್ರಯತ್ನಿಸುತ್ತಿದ್ದಾರೆ. ಹೀಗೆಯೇ ನಮ್ಮನ್ನು ನಮ್ಮ ಶಾಲಾ ಪಠ್ಯಪುಸ್ತಕಗಳಲ್ಲಿ ತಿರುಚಿದ ಸಾಕ್ಷಾಧಾರಗಳನ್ನು ತೋರಿಸಿ ಮೂರ್ಖರನ್ನಾಗಿ ಮಾಡುತಿದ್ದಾರೆ.

೪. ಇವರು ಹೇಳುವಂತಹಾ ೨ ಋಗ್ವೇದದ ಮಂತ್ರಗಳನ್ನು ವಿಶ್ಲೇಶಿಸೋಣ;

ಪ್ರತಿಪಾದನೆ : ಋಗ್ವೇದ ೧೦.೮೫.೧೩

ಮಗಳ ಮದುವೆಯ ಸಮಾರಂಭದಲ್ಲಿ ಎತ್ತುಗಳನ್ನು ಹಾಗು ಹಸುಗಳನ್ನು ಬಲಿಕೊಡುತ್ತಾರೆ.

ಸತ್ಯಾಂಶ: ಋಗ್ವೇದದ ಈ ಮಂತ್ರದಲ್ಲಿ ” ಸೊರ್ಯನಕಿರಣವು ಚಳಿಗಾಲದಲ್ಲಿ ಬಲಹೀನಗೊಂಡು, ವಸಂತ ಋತುವಿನಲ್ಲಿ ಮತ್ತೆ ಬಲಶಾಲಿಯಾಗುತ್ತದೆ” ಎಂದು.

ಹಸುವನ್ನು ಸಹಾ ಗೋ ಎಂದು ಕರೆಯಲಾಗುವುದು. ಆದ್ದರಿಂದ ಸೂರ್ಯನ ಕಿರಣಗಳಿಗೆ ಬದಲಾಗಿ ಗೋವು ಎಂದೇ ಮಂತ್ರದಲ್ಲಿ ಭಾಷಾಂತರಿಸಿದ್ದಾರೆ. ಈ ಮಂತ್ರದಲ್ಲಿ ಬಲಹೀನ ಎಂಬುದಕ್ಕೆ ಸಂಸ್ಕೃತದಲ್ಲಿ ಹನ್ಯತೆ ಎಂಬ ಪದ ಉಪಯೋಗಿಸಲಾಗಿದೆ. ಇದರ ಇನ್ನೊಂದರ್ಥ ಕೊಲ್ಲುವುದು ಎಂದು. ಕೆಲವರು ಬೇಕೆಂದಲೆ ಈ ಮಂತ್ರವನ್ನು ಸಂಪೂರ್ಣವಾಗಿ ಹೇಳದೆ, ಅವರಿಗೆ ಬೇಕೆಂದ ಹಾಗೆ ಅರ್ಥೈಸಿಕೊಳ್ಳುತ್ತಾರೆ. ಇಂತಹ ಅಜ್ಞಾನಿ ಮೋಸಗಾರರಿಗೆ ಕೇಳುವುದಿಷ್ಟೇ, ಚಳಿಗಾಲದಲ್ಲಿ ಕೊಂದಂತಹ ಹಸುವು ಪುನಃ ವಸಂತ ಋತುವಿನಲ್ಲಿ ಬಲಶಾಲಿಯಾಗಲು ಹೇಗೆ ತಾನೆ ಸಾಧ್ಯ?

೫. ಪ್ರತಿಪಾದನೆ : ಋಗ್ವೇದ ೬.೧೭.೧

ಇಂದ್ರನು ಹಸು, ಕುರಿ, ಕುದುರೆ ಹಾಗು ಎಮ್ಮೆಗಳ ಮಾಂಸವನ್ನು ತಿನ್ನುತ್ತಿದ್ದ.

ಸತ್ಯಾಂಶ : ಋಗ್ವೇದದ ಈ ಮಂತ್ರವು “ಹೇಗೆ ಮರದ ಸೌದೆಯು ಯಜ್ಞದ ಬೆಂಕಿಯನ್ನು ಹೆಚ್ಚಿಸುತ್ತದೊ ಹಾಗೆಯೇ ಉತ್ತಮ ವಿಧ್ವಾಂಸರು ಪ್ರಪಂಚವನ್ನು ಪ್ರಾಕಾಶಿಸುತ್ತಾರೆ” ಎಂದು ಹೇಳುತ್ತದೆ.

ಈ ಮಂತ್ರದಲ್ಲಿ ಅದು ಹೇಗೆ ಇಂದ್ರ, ಹಸು, ಕುರಿ, ಕುದುರೆ ಹಾಗು ಎಮ್ಮೆಗಳು ಬಂದವೊ ಇವರ ದಡ್ಡತಲೆಗಳಿಗೆ ಮಾತ್ರ ತಿಳಿದಿರುವಂತದ್ದು.

ಕೊನೆಯದಾಗಿ ನಾನು ಎಲ್ಲಾರಿಗೂ ಸವಾಲು ಹಾಕುತ್ತೇನೆ, ವೇದಗಳ ಯಾವುದಾದರೋ ಮಂತ್ರಗಳಲ್ಲಿ ಗೋಮಾಂಸ ಸೇವನೆಯನ್ನು ಪರೋಕ್ಷವಾಗಾದರೋ ಸಮ್ಮತಿಸಿದ್ದು ಅದು ಧೃಡಪಟ್ಟಲ್ಲಿ ಅವರು ಹೇಳಿದಂತಹ ಧರ್ಮಕ್ಕೆ ಮತಾಂತರಗೊಳ್ಳುತ್ತೇನೆ, ಇಲ್ಲವಾದಲ್ಲಿ ಅವರು ವೇದಗಳ ನಿಜಸಾರವನ್ನು ಬೆಂಬಲಿಸಲು  ಒಪ್ಪಿಕೊಂಡು ವೇದಗಳ ಅನುಯಾಯಿಯಾಗಬೇಕು.

[ಅಗ್ನಿವೀರ್ ತಾಣದಿಂದ ಬಂದಿರುವ ಮೇಲ್  ನ್ನು ಇಲ್ಲಿ ಯಥಾವತ್ತಾಗಿ ಪ್ರಕಟಿಸಲಾಗಿದೆ]

putta kannugalalli dodda kanasugalu

ಗಂಗಾದಿ ತೀರ್ಥೆಶು


ಗಂಗಾದಿ ತೀರ್ಥೆಶು ವಸಂತಿ ಮತ್ಸ್ಯಾ: ದೇವಾಲಯೇ ಪಕ್ಷಿಗನಾಶ್ಚ ನಿತ್ಯಂ |
ತೆ ಜ್ಞಾನ ಹೀನಾ ನ ಫಲಂ ಲಭಂತೆ ತೀರ್ಥಾನಿ ದೇವಾಯತನಾನಿ ಭಾವಾಃ ||

ಗಂಗೆ ಮೊದಲಾದ ವಿವಿಧ ಪುಣ್ಯ ನದಿಗಳಲ್ಲಿ ಮೀನುಗಳು ಇರುತ್ತವೆ. ದೇವಾಲಯಗಳಲ್ಲಿ ಹಕ್ಕಿಗಳು ಗೂಡು ಕಟ್ಟಿಕೊಂಡು ವಾಸಿಸುತ್ತವೆ. ಆದರೆ ಇವುಗಳಿಗೆ ಜ್ಞಾನದ ಕೊರತೆ ಇದೆ ಆದುದರಿಂದ ಅವುಗಳು ಯಾವುದೇ ಫಲಗಳನ್ನು ಪಡೆಯಲಾರವು , ಒಳ್ಳೆಯ ಭಾವನೆಯೇ ನಮಗೆ ಪುಣ್ಯ ತೀರ್ಥಗಳು ಮತ್ತು ದೇವಾಲಯಗಳೆನಿಸುತ್ತವೆ. ನಮ್ಮ ಮನಸ್ಸಿನಲ್ಲಿರುವ ಭಾವನೆಯೇ ಪ್ರಧಾನ.

ಮೃತಃ ಕೀರ್ತಿಂ ನಜಾನಾತಿ


ಮೃತಃ ಕೀರ್ತಿಂ ನಜಾನಾತಿ ಜೀವನ ಕೀರ್ತಿಂ ಸಮುಶ್ನುತೆ |
ಮೃತಸ್ಯ ಕೀರ್ತಿರ್ಮರ್ತ್ಯಸ್ಯ ಯಥಾ ಮಾಲಾ ಗತಾಯುಶಃ ||

ಸತ್ತವನಿಗೆ ತನ್ನ ಕೀರ್ತಿಗೊತ್ತಗುವುದಿಲ್ಲ: ಬದುಕಿದ್ದರೆ ಕೀರ್ತಿಯನ್ನು ಅನುಭವಿಸುತ್ತಾನೆ, ಸತ್ತ ಮನುಷ್ಯನ ಕೀರ್ತಿ, ಸತ್ತವನಿಗೆ ಅಲಂಕಾರ ಮಾಡಿದ ಮಾಲೆಯನ್ತೆಯೇ ಅದು ವ್ಯರ್ಥ

ಬೆಳೆಗೆರೆ ಕೃಷ್ಣ ಶಾಸ್ತ್ರಿಗಳೊಡನೆ ಮಾತುಕತೆ ಭಾಗ-1


ಕಳೆದ ಭಾನುವಾರ ನಾವು ಕೆಲವು ಮಿತ್ರರು   ಶ್ರೀ ಬೆಳೆಗೆರೆ ಕೃಷ್ಣ ಶಾಸ್ತ್ರಿಗಳನ್ನು ಅವರ ಬೆಂಗಳೂರು ನಿವಾಸದಲ್ಲಿ  ಭೇಟಿಯಾಗಿ ಮಾತುಕತೆ ನಡೆಸಿದೆವು. ಅದರ ಆಡಿಯೋ /ವೀಡಿಯೋ  ಕ್ಲಿಪ್  ಇಲ್ಲಿದೆ. ಆಡಿಯೋ ಮತ್ತು ವೀಡಿಯೋ ಕ್ಲಿಪ್ ಗಳು  ಬೇರೆ ಬೇರೆ ವಿಷಯಗಳನ್ನೊಳಗೊಂಡಿದ್ದು  , ಅವರ 97  ರ ವೃದ್ಧಾಪ್ಯದಲ್ಲಿ ಯೂ      ಮುಕುಂದೂರು ಸ್ವಾಮಿಗಳ ಬಗ್ಗೆ ಅವರಿಗಿರುವ  ಶ್ರದ್ಧೆ  ಅವರ ಮಾತುಗಳಿಂದ ವ್ಯಕ್ತವಾಗುತ್ತಿತ್ತು.  ವೇದಸುಧೆಯ ಮತ್ತು  ಮಿತ್ರ ಬ್ಲಾಗ್ ಗಳ ಓದುಗರು  ಇದರ ಉಪಯೋಗ ಪಡೆಯ ಬೇಕೆಂದು ವಿನಂತಿಸುವೆ.
ನಮ್ಮ ಒಳಗೇ ಇರುವ ಪರಮಾತ್ಮನ ಅನುಭವ ನಮಗೇಕೆ ಆಗುತ್ತಿಲ್ಲ?


  "ಪರಮಾತ್ಮ ಸರ್ವವ್ಯಾಪಿ, ಆನಂದಸ್ವರೂಪಿ. ಈ ಪರಮಾತ್ಮ ಎಲ್ಲೆಲ್ಲೂ ಇರುವಂತೆ ನಮ್ಮೊಳಗೂ ಇರುವಾಗ ಆ ಪರಮಾತ್ಮನ ಆನಂದದ ಅನುಭವ ನಮಗೇಕೆ ಆಗುತ್ತಿಲ್ಲ" ಎಂಬ ಸಂದೇಹಕ್ಕೆ ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರವರ ಸಮಾಧಾನ ಇದೋ ಇಲ್ಲಿ:

-ಕ.ವೆಂ.ನಾಗರಾಜ್.

ಶತೇಶು ಜಾಯತೇ ಶೂರಃ

ಶತೇಶು  ಜಾಯತೇ ಶೂರಃ ಸಹಸ್ರೆಷು ಚ ಪಂಡಿತಃ |
ವಕ್ತಾ ದಶ ಸಹಸ್ರೆಷು ದಾತಾ ಭವತಿ ವಾ ನ ವಾ ||

ನೂರು ಜನರಲ್ಲೊಬ್ಬನು ಶೂರನು ಜನಿಸುತ್ತಾನೆ, ಸಾವಿರಕ್ಕೆ ಒಬ್ಬನು ವಿದ್ವಾಂಸ ನಾಗುತ್ತಾನೆ , ಭಾಷಣಕಾರನು  ಹತ್ತು  ಸಾವಿರಗಳಿಗೆ ಒಬ್ಬನು ಸಿಗುತ್ತಾನೆ ಆದರೆ ದಾನ ಮಾಡುವವನು ಇರುತ್ತಾನೋ ಇಲ್ಲವೋ. ದಾನದ ತ್ಯಾಗದ ಗುಣ ಅನ್ನುವುದು ಅಷ್ಟು ದೊಡ್ಡ ದಾದ ಗುಣ ನಿಸ್ವಾರ್ಥ ದಾನ ಮಹತ್ತರವಾದ ಶ್ರೇಯಸ್ಸನ್ನು ಕೊಡ ಬಲ್ಲದು

-ಸದ್ಯೋಜಾತ ಭಟ್ಟ