Pages

Friday, November 19, 2010

ವೇದಿಕ್ ಜುಗುಲ್ಬಂಧಿ

ಮೂಢ ಉವಾಚ -12

ಮೂಢ ಉವಾಚ -12ಮತಿಗೆಟ್ಟು ಅರಚಾಡಿ ಬಂದ ಫಲವೇನು?
ಸಿಟ್ಟಿನಿಂ ನಡುನಡುಗಿ ಗುಡುಗಿದರೆ ಬಂತೇನು?||
ತಪ್ಪು ಒಪ್ಪುಗಳ ತಳ್ಳಿ ಪ್ರತಿಭಟಿಸದಿರರೇನು?|
ಸಮಚಿತ್ತದಕ್ಕರೆಯೊಂದೆ ಒಲಿಸುವುದು ಮೂಢ||


ನೀ ಸರಿಯಾಗಿದ್ದರದುವೆ ಸಾಕು|
ಪರರ ಗೊಡವೆ ನಿನಗೇಕೆ ಬೇಕು?||
ತಿದ್ದುವ ಹಂಬಲಕೆ ಕಡಿವಾಣ ಹಾಕು|
ಮನವನನುಗೊಳಿಸಿ ಶಾಂತನಿರು ಮೂಢ||


ಕೇಳಲೊಲ್ಲದ ಕಿವಿಗೆ ನೀತಿಪಾಠವದೇಕೆ?
ತಿನ್ನಲೊಲ್ಲದ ಬಾಯಿಗೆ ಷಡ್ರಸವದೇಕೆ?
ಮೆಚ್ಚಿದವರೊಡನಾಡು ಹಸಿದವರಿಗನ್ನವಿಡು|
ಪಾತ್ರಾಪಾತ್ರರನರಿತಡಿಯಿಡು ಮೂಢ||


ಹುಂಬರೊಟ್ಟಾಗಿ ಹಂಗಿಸುತ ಜರೆದಿರಲಿ|
ಮನೆಮಂದಿಯೇ ನಿನ್ನ ಹೀಗಳೆಯುತಿರಲಿ||
ಕೆರಳದಿರಲಿ ಕೊರಗದಿರಲಿ ಮನವು|
ಧೃತಿಗೆಟ್ಟು ದಾರಿ ತಪ್ಪದಿರಲಿ ಮೂಢ||
**************
-ಕವಿನಾಗರಾಜ್.

ಯೋಚಿಸಲೊ೦ದಿಷ್ಟು... ೧೮

೧. ಜೀವನದಲ್ಲಿ ಹೊಸಬರಾಗಮನ ಸ೦ತಸವನ್ನೇ ತ೦ದರೂ,ಅವರೆ೦ದೂ ನಮ್ಮಿ೦ದ ದೂರಾದವರ ಸ್ಥಾನವನ್ನು ತು೦ಬ ಲಾರರು.

೨. ಕೇವಲ ಯಶಸ್ಸಿಗಾಗಿ ಹೋರಾಡಿದವರು “ನಾಯಕ“ ರಾದರೆ, ಆತ್ಮತೃಪ್ತಿಗಾಗಿ ಹಾಗೂ ಪರ ಒಳಿತಿಗಾಗಿ ಹೋರಾಡಿದವರು “ದ೦ತಕಥೆ“ ಯಾಗುತ್ತಾರೆ

೩. ನಮ್ಮ ಹೆತ್ತವರ ಮೊಗದಲ್ಲಿ ನಗುವನ್ನು ಕಾಣುವುದು ನಮಗೆ ತೃಪ್ತಿಯನ್ನು ನೀಡಿದರೆ, ಅವರ ಮೊಗದಲ್ಲಿನ ಆ ಸ೦ತಸಕ್ಕೆ ನಾವೇ ಕಾರಣರೆ೦ದು ಅರಿತರೆ, ನಮ್ಮ ಬದುಕೂ ಸಾರ್ಥಕವಾಗುತ್ತದೆ.

೪. ಸಮುದ್ರದ ಸು೦ದರ ದೃಶ್ಯ ದಡದಲ್ಲಿ ನಿ೦ತು ನೋಡುವವರಿಗೆ ಮಾತ್ರವೇ ಹೊರತು ಮುಳುಗುವವರಿಗಲ್ಲ!

೫. ಜಯದ ಗುಟ್ಟು ಗುರಿಯ ಸ್ಥಿರತೆಯಲ್ಲಿದೆ!

೬. ಜ್ಞಾನಕ್ಕೆ ಸಮನಾದ ಪವಿತ್ರವಾದ ವಸ್ತು ಬೇರೊ೦ದಿಲ್ಲ.

೭. ಜ್ಞಾನವೃಕ್ಷವೆ೦ಬುದು ಒಳಿತಿನ ವೃಕ್ಷದ೦ತೆಯೇ ಕೆಡುಕಿನದ್ದೂ ಆಗಿಬಿಡಬಹುದು. ಮುದ್ರಿತ ಪುಟಗಳಲ್ಲಿ ಸತ್ಯಕ್ಕೆ ಸುಳ್ಳಿಗಿ೦ತ ಉತ್ತಮ ಅವಕಾಶ ಮತ್ತೊ೦ದಿಲ್ಲ! ವ್ಯಾಕವಾಗಿ ಓದುವವರಿಗೆ ಮಾತ್ರವೇ ಈ ಸೂಕ್ಷ್ಮಗ್ರಹಣದ ಸಾಮರ್ಥ್ಯವಿರುತ್ತದೆ.

೮. ಅಜ್ಞಾನಿಗಳ ಜೊತೆಗಿನ ಅಧಿಕ ಸ್ನೇಹಕ್ಕಿ೦ತ, ಸುಜ್ಞಾನಿಗಳೊ೦ದಿಗಿನ ಗುದ್ದಾಟವೇ ಲೇಸು!

೯. ನಾವಿರುವುದೇ ಪ್ರಯತ್ನಿಸಲು, ಸಾಹಸಮಾಡಲು ಹಾಗೂ ಸೋಲನ್ನೊಪ್ಪಿಕೊಳ್ಳದೇ ಇರಲು!

೧೦. ಜಾತಿ ಹಾಗೂ ಧರ್ಮಗಳು ಜನರಿಗೆ ನಿತ್ಯ ಸತ್ಯವೂ,ರಾಜಕಾರಣಿಗಳಿಗೆ ನಿತ್ಯೋಪಯೋಗಿಯೂ ವೇದಾ೦ತಿಗಳಿಗೆ ನಿತ್ಯ ಮಿಥ್ಯೆಯೂ ಆಗಿರುತ್ತದೆ!

೧೧. ನಮಗಿಷ್ಟವಾದ೦ತೆ ನಾವು ಜೀವಿಸಲಾಗುವುದಿಲ್ಲ. ಬದಲಾಗಿ ನಮಗೆ ಸಾಧ್ಯವಾದ೦ತೆ ನಾವು ಜೀವಿಸಬಹುದು!

೧೨.ಎಲ್ಲರೂ ತಪ್ಪು ಮಾಡುವವರೇ,ಸ್ವ-ಬೆಳವಣಿಗೆಯನ್ನು ಬಯಸುವ ಕೆಲವರು ತಪ್ಪನ್ನು ಒಪ್ಪಿಕೊ೦ಡು ತಿದ್ದಿಕೊ೦ಡರೆ, ಉಳಿದವರು ತಪ್ಪಿನ “ಸಮರ್ಥನೆ“ಯಲ್ಲಿ ತೊಡಗುತ್ತಾ ದೊರಕಬಹುದಾದ ಅನುಕ೦ಪದತ್ತ ದೃಷ್ಟಿಸುತ್ತಾರೆ.

೧೩. ತಪ್ಪು ಮಾಡಿದುದನ್ನು ತಿದ್ದುಕೊಳ್ಳದಿರುವುದೂ ಮತ್ತೊ೦ದು ತಪ್ಪೇ!

೧೪. ತ್ಯಾಗ ಬಡವನಿಗೆ ಅತಿ ಸುಲಭವಾದದ್ದು!

೧೫. ಜೀವನದಲ್ಲಿನ ಪ್ರತಿಯೊ೦ದು ಸಮಸ್ಯೆಯೂ ತನ್ನೊ೦ದಿಗೆ ಒ೦ದು ಕೊಡುಗೆಯನ್ನು ಇಟ್ಟುಕೊ೦ಡೇ ಎದುರಾಗುತ್ತದೆ!

A Story of Appreciation - A MUST READ FOR EVERYONE!!!


 ಶ್ರೀ ಮಂಜುನಾಥ್,ಇವರು ನನಗೆ ಕಳುಹಿಸಿರುವ ಈಮೇಲ್ ಓದುವಾಗ ನನ್ನ ಕಣ್ಣಲ್ಲಿ ನೀರು ಬಂತು, ಕೂಡಲೇ ವೇದಸುಧೆಗೆ ಹಾಕಿರುವೆ. ನೀವೂ ಓದಿ.....

This is a powerful message in our modern society. We seemed to have lost our bearing & our sense of direction.

One young academically excellent person went to apply for a managerial position in a big company.

He passed the first interview, the director did the last interview, made the last decision.

The director discovered from the CV that the youth's academic achievements were excellent all the way, from the secondary school until the postgraduate research, never had a year when he did not score.

The director asked, "Did you obtain any scholarships in school?" the youth answered "none".

The director asked, " Was it your father who paid for your school fees?" The youth answered, "My father passed away when I was one year old, it was my mother who paid for my school fees.

The director asked, " Where did your mother work?" The youth answered, "My mother worked as clothes cleaner. The director requested the youth to show his hands. The youth showed a pair of hands that were smooth and perfect.

The director asked, " Have you ever helped your mother wash the clothes before?" The youth answered, "Never, my mother always wanted me to study and read more books. Furthermore, my mother can wash clothes faster than me.

The director said, "I have a request. When you go back today, go and clean your mother's hands, and then see me tomorrow morning.*

The youth felt that his chance of landing the job was high. When he went back, he happily requested his mother to let him clean her hands. His mother felt strange, happy but with mixed feelings, she showed her hands to the kid.

The youth cleaned his mother's hands slowly. His tear fell as he did that. It was the first time he noticed that his mother's hands were so wrinkled, and there were so many bruises in her hands. Some bruises were so painful that his mother shivered when they were cleaned with water.

This was the first time the youth realized that it was this pair of hands that washed the clothes everyday to enable him to pay the school fee. The bruises in the mother's hands were the price that the mother had to pay for his graduation, academic excellence and his future.

After finishing the cleaning of his mother hands, the youth quietly washed all the remaining clothes for his mother.

That night, mother and son talked for a very long time.

Next morning, the youth went to the director's office.

The Director noticed the tears in the youth's eyes, asked: " Can you tell me what have you done and learned yesterday in your house?"

The youth answered, " I cleaned my mother's hand, and also finished cleaning all the remaining clothes'

The Director asked, " please tell me your feelings."

The youth said, Number 1, I know now what is appreciation. Without my mother, there would not the successful me today. Number 2, by working together and helping my mother, only I now realize how difficult and tough it is to get something done. Number 3, I have come to appreciate the importance and value of family relationship.

The director said, " This is what I am looking for to be my manager.
I want to recruit a person who can appreciate the help of others, a person who knows the sufferings of others to get things done, and a person who would not put money as his only goal in life. You are hired.

Later on, this young person worked very hard, and received the respect of his subordinates. Every employee worked diligently and as a team. The company's performance improved tremendously.

A child, who has been protected and habitually given whatever he wanted, would develop "entitlement mentality" and would always put himself first. He would be ignorant of his parent's efforts. When he starts work, he assumes that every person must listen to him, and when he becomes a manager, he would never know the sufferings of his employees and would always blame others. For this kind of people, who may be good academically, may be successful for a while, but eventually would not feel sense of achievement. He will grumble and be full of hatred and fight for more. If we are this kind of protective parents, are we really showing love or are we destroying the kid instead?*

You can let your kid live in a big house, eat a good meal, learn piano, watch a big screen TV. But when you are cutting grass, please let them experience it. After a meal, let them wash their plates and bowls together with their brothers and sisters. It is not because you do not have money to hire a maid, but it is because you want to love them in a right way. You want them to understand, no matter how rich their parents are, one day their hair will grow gray, same as the mother of that young person. The most important thing is your kid learns how to appreciate the effort and experience the difficulty and learns the ability to work with others to get things done.

You would have forwarded many mails to many and many of them would have back mailed you too...but try and forward this story to as many as possible...this may change somebody's fate...

-H.N.Manjunath

ಸಾರ್ಥಕ ಬದುಕಿಗಾಗಿ ಜಿಜ್ಞಾಸೆ

ವೇದಸುಧೆಯಲ್ಲಿ ಹೀಗೆಲ್ಲಾ ಬರೆಯಬಹುದೇ? ಓದುಗರ ಮನದ ಮೇಲೆ ಏನೆಲ್ಲಾ ಪರಿಣಾಮ ಬೀರೀತು! ನೀವು ಹೀಗೆ ಬರೆಯ ಬಾರದು! ವೇದಸುಧೆಯ ಅಭಿಮಾನಿಗಳು ತಪ್ಪು ತಿಳಿದಾರು!!

ಮಿತ್ರರೂ ವೇದಸುಧೆಯ ಮಾರ್ಗದರ್ಶಿಗಳೂ ಆದ ಶ್ರೀ ವಿಷ್ಣು ಭಟ್ಟರು ಯಾವಾಗಲೂ ಕೈತುಂಬ ಕೆಲಸವಿಟ್ಟುಕೊಂಡು ರಾತ್ರಿ ನಿದ್ರೆಗೆಟ್ಟು ಬರವಣಿಗೆ ಮಾಡಿಕೊಂಡು ಬ್ಲಾಗ್ ಲೋಕದಲ್ಲಿ ಒಬ್ಬ ವಿಶಿಷ್ಟ ಸ್ಥಾನವನ್ನು ಪಡಿದಿರುವ ಚಿಂತಕರು.ನಿನ್ನೆ ನಾನು ಬರೆದ  "ನಿತ್ಯ ಸತ್ಯ"  ಕವನ ವನ್ನು  ನೋಡಿದೊಡನೆ  ಹಿರಿಯರಾದ  ಕವಿನಾಗರಾಜರು ಕವನದ ಎರಡು ಸಾಲುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮರು ಕ್ಷಣವೇ ಆತಂಕದಿಂದ ಪ್ರತಿಕ್ರಿಯಿಸಿದವರು ಶ್ರೀ ಭಟ್ಟರು. "ಏನು ಶ್ರೀಧರ್ ಮರವೇರಿ ಅದರ ಕೊಂಬೆಯಮೇಲೆ ನಿಂತು ಅದಕ್ಕೇ ಕೊಡಲಿ ಹಾಕಿದ್ದೀರಲ್ಲಾ!"-  ಭಟ್ಟರು  ನಿಜವಾಗಿ ಆತಂಕ ಗೊಂಡಿದ್ದರು. ಆತುರದಲ್ಲಿ  ಯಾವುದೋ ಬರವಣಿಗೆಯಲ್ಲಿ ತೊಡಗಿದ್ದರೂ ನಡು ನಡುವೆ ನನ್ನ ಕವನಕ್ಕೆ ಅವರು ಬರೆದ ಪ್ರತಿಕ್ರಿಯೆಗಳಿಗೆ ನಾನೇನು ಉತ್ತರ ಕೊಟ್ಟಿದ್ದೀನೆಂದು ಕಾತುರದಿಂದಲೇ ನೋಡುತ್ತಾ ಮರು ಕ್ಷಣವೇ " ಹಾಗಲ್ಲಾ , ಶ್ರೀಧರ್ ವೇದಸುಧೆಯು ವೇದಾಭಿಮಾನಿಗಳಲ್ಲಿ  ಸಂದೇಹಗಳನ್ನು ಮೂಡಿಸಬಾರದು, ಎಂಬ ವಿವೇಕವನ್ನು ಹೇಳುತ್ತಾ ಪ್ರತಿಕ್ರಿಯಿಸುತ್ತಿದ್ದರು.
ನಿಜವಾಗಿ ಅವರ ಕಳಕಳಿಯನ್ನು ಗಮನಿಸಿದಾಗ " ವೇದಸುಧೆಯನ್ನು " ಅಭಿಮಾನಿಗಳು ಇಷ್ಟು ಸೀರಿಯಸ್ ಆಗಿ ತೆಗೆದುಕೊಂಡಿದ್ದಾರಲ್ಲಾ! ಎಂಬ ಸಂತೋಷವೂ ಆತಂಕವೂ ಒಟ್ಟಿಗೇ ಆಯ್ತು.
ಈಗ ವೇದಸುಧೆಯ ಉದ್ಧೇಶದ ಬಗ್ಗೆ ಮತ್ತೊಮ್ಮೆ  ಮೆಲುಕು ಹಾಕುವೆ. ವೇದಸುಧೆಯನ್ನು ಆರಂಭಿಸಿದೊಡನೆ  ಅನೇಕರು ಹೇಗೆ ಭಾವಿಸಿದರೆಂದರೆ "ಇಲ್ಲಿ ವೇದಮಂತ್ರಗಳು, ವ್ರತಕಥಾದಿಗಳು, ಧಾರ್ಮಿಕ ಆಚರಣೆಗಳು, ಸ್ತೋತ್ರಗಳು"  ಇತ್ಯಾದಿ ವಿಚಾರಗಳು ಪ್ರಕಟವಾಗುತ್ತವೆಂದು ತಿಳಿದು ಕೆಲವರಂತೂ  ನನಗೆ ಕರೆಮಾಡಿ ಒಂದು ಪೂಜಾಕ್ರಮದ ಬಗ್ಗೆ  ವಿಚಾರಿಸಿದರು. ಸುಧಾಕರ ಶರ್ಮರ ವಿಚಾರಗಳನ್ನು ಕೇಳಿದವರು ಈ ವಿಚಾರಗಳ ಬಗ್ಗೆ ಸಿ.ಡಿ. ಇದೆಯೇ ,ಇಲ್ಲದಿದ್ದರೆ ನನಗೆ ಬೇಕಲ್ಲಾ! ಎಂದು ಬೇಡಿಕೆ ಇಟ್ಟರು. ಕಳೆದ ಒಂದು ತಿಂಗಳಿನಿಂದ  ಸುಧಾಕರ ಶರ್ಮರ ಉಪನ್ಯಾಸಗಳನ್ನು  ಎರಡು ಮೂರು ಸಿ.ಡಿ. ಬರೆದು ಕೊಡುವುದು ನನ್ನ ನಿತ್ಯ ಕಾಯಕವಾಗಿ ಬಿಟ್ಟಿದೆ. ಒಂದು  ವಿಚಾರವನ್ನು ನಾನು ಸ್ಪಷ್ಟಗೊಳಿಸಲೇ ಬೇಕು. ವೇದಸುಧೆಯ ಆರಂಭಕ್ಕೆ ಕಾರಣಕರ್ತರು ಶ್ರೀ ಸುಧಾಕರ ಶರ್ಮರೇ. ಬೇಲೂರಿನಲ್ಲಿ ಈಗ್ಗೆ ನಾಲ್ಕೈದು ವರ್ಷಗಳ ಹಿಂದೆ ನಡೆದ ಉಪನ್ಯಾಸ ಒಂದರ ಆರು ಕ್ಯಾಸೆಟ್ ಗಳನ್ನು ಮಿತ್ರರಾದ ಬೇಲೂರು ವಿಶ್ವನಾಥಶರ್ಮರು ನನಗೆ ಕೇಳಿಸಿದ್ದರಿಂದ ಅದರಿಂದ ಆಕರ್ಶಿತನಾದ ನಾನು ಅವುಗಳನ್ನೆಲ್ಲಾ  ಎಂ.ಪಿ-೩  ಕ್ಕೆ ಕನ್ವರ್ಟ್ ಮಾಡಿ ಹಲವು ಮಿತ್ರರಿಗೆ ಕೇಳಿಸಿ "ಸಂಪದ" " ವಿಸ್ಮಯ" ಮುಂತಾದ ಅಂತರ್ಜಾಲದ ತಾಣಗಳಲ್ಲಿಯೂ ನನ್ನ " ನೆಮ್ಮದಿಗಾಗಿ"  ಬ್ಲಾಗ್ ನಲ್ಲಿಯೂ  ಅವುಗಳನ್ನೆಲ್ಲಾ  ಅಪ್ ಲೋಡ್ ಮಾಡಿದ ನಂತರ ಬಂದ ಮೆಚ್ಚುಗೆಯಿಂದ " ವೇದಸುಧೆಯ" ಆರಂಭವಾಯ್ತು.
ನಂತರ ವೇದಸುಧೆಗೆ ಹಲವು ಚಿಂತಕರನ್ನು ಆಹ್ವಾನಿಸಿಈ ತಾಣವನ್ನು ಒಂದು ಬಳಗದ "ತಾಣವಾಗಿ" ವಿಸ್ತರಿಸಲಾಯ್ತು. ಆಗ  ಹಲವು ರೀತಿಯ  ಬರಹಗಳು ಹರಿದು ಬಂದವು. ಒಂದು ಧಾರ್ಮಿಕ ಕಾರ್ಯಕ್ರಮದ ಬಗ್ಗೆ ಪ್ರಕಟವಾದ ಲೇಖನಕ್ಕೆ  " ವೇದಸುಧೆಯಲ್ಲಿ   ಒಂದು ಕಟ್ಟುಪಾಡಿನ ಆಚರಣೆಯನ್ನು ಪ್ರಕಟಿಸುವುದು ಸೂಕ್ತವೇ? ಎಂಬ ಬಗ್ಗೆ ಪ್ರಶ್ನೆಗಳೂ ಹರಿದು ಬಂತು" ಆನಂತರ  ಹತ್ತಿರವಿದ್ದು  ನನಗೆ ಮಾರ್ಗದರ್ಶನ ಮಾಡುತ್ತಿರುವ ಹಿರಿಯರಾದ ಕವಿ ನಾಗರಾಜರೊಡನೆ ಕುಳಿತು ಚರ್ಚಿಸಿ ನಾವಿಬ್ಬರೂ ಸೇರಿ ಒಂದು ನಿರ್ಧಾರಕ್ಕೆ ಬಂದೆವು " ವೇದಸುಧೆಯು  ಒಂದು ಚಿಂತನ-ಮಂಥನ ವೇದಿಕೆಯಾದರೆ ತಪ್ಪಿಲ್ಲ"  ನೂರಾರು ವರ್ಷಗಳಿಂದ ನಡೆದುಕೊಂದು ಬಂದಿರುವ ಕೆಲವು  ಆಚರಣೆಗಳಿಗೆ ವೇದದ ಹಿನ್ನೆಲೆಯೇ ಇಲ್ಲ, ಅರ್ಥ ಹೀನ ಆಚರಣೆಗಳು, ಎಂಬ ವಾದ ಒಂದೆಡೆ ಇದ್ದರೆ, ನಮ್ಮ ಆಚರಣೆಗಳಿಂದ ನಿಮಗೇನು ತೊಂದರೆ ಸ್ವಾಮಿ, ನಮ್ಮಷ್ಟಕ್ಕೆ ನೆಮ್ಮದಿಯಾಗಿರಲು ನಮ್ಮನ್ನು ಬಿಡಿ, ಎಂಬ ಮಾತುಗಳೂ ಕೇಳಿಬಂದವು. ಇದು ಸಹಜ. ಸಾವಿರಾರು ವರ್ಷಗಳಿಂದ ಇಂತಹ ಜಿಜ್ಞಾಸೆ ಇದ್ದೇ ಇದೆ. ಇದಕ್ಕೆ ಕೊನೆ ಎಂಬುದು ಬರಲಾರದು. ಹಾಗಾಗಿಯೇ " ಮೊನ್ನೆ ಅವರವರ ಭಾವಕ್ಕೆ " ಎಂಬ ವಿಚಾರದ ಬಗ್ಗೆ  ವೇದಸುಧೆಯಲ್ಲಿ ಚರ್ಚೆ ಮಾಡಿದ್ದಾಯ್ತು.
ಹೀಗೆ ಚಿಂತನೆ ಮಾಡುತ್ತಾ ವೇದಸುಧೆಯು ಸಧ್ಯಕ್ಕೆ ಒಂದು ನಿರ್ಧಾರಕ್ಕೆ ಬಂದಿದೆ  " ವೇದದಲ್ಲಿ ಏನು ಹೇಳಿದೆ, ಎಂಬುದರ ಬಗ್ಗೆ  ಸುಧಾಕರ ಶರ್ಮರು ಹಲವು ವಿವರಣೆ ನೀಡಿರುವ  ಉಪನ್ಯಾಸದ ತುಣುಕುಗಳನ್ನು ಪ್ರಕಟಿಸುತ್ತಾ ಹೋಗುತ್ತದೆ" ಈ ಬಗ್ಗೆ ಚರ್ಚೆ ನಡೆಯಬೇಕು. ಹಾಗೆಯೇ ವೇದಗಳ ಬಗ್ಗೆ ಬೇರೆ ಯಾರೇ ವಿದ್ವಾಂಸರು ಉಪನ್ಯಾಸವನ್ನು ನೀಡಿದರೂ ಕೂಡ ಅದರ ಆಡಿಯೋ/ ವೀಡಿಯೋ ತುಣುಕುಗಳನ್ನು ವೇದಸುಧೆಯಲ್ಲಿ ಬರೆಯಲವಕಾಶವಿರುವ ಬಳಗದ ಯಾವುದೇ ಸದಸ್ಯರೂ ಪ್ರಕಟಿಸಲು ಸ್ವತಂತ್ರರು. ಅವುಗಳ ಬಗ್ಗೆಯೂ ಚರ್ಚೆ ನಡೆಯಬೇಕು. ಅಂತಿಮವಾಗಿ  ಅವುಗಳಿಂದ ನಮ್ಮ ಬದುಕನ್ನು ಹಸನುಗೊಳಿಸುವ ಕೆಲವು ಸೂತ್ರಗಳು ಲಭ್ಯವಾಗಬೇಕಷ್ಟೆ.  ಶೀ ಶರ್ಮರು" ಶ್ರಾದ್ಧ " ದ ಬಗ್ಗೆ ಭಿನ್ನವಾಗಿ ಮಾಡಿರುವ ಉಪನ್ಯಾಸವು ಈಗಾಗಲೇ ವೇದಸುಧೆಯು ಪ್ರಕಟಿಸಿದೆ. ಅದನ್ನು ನಾವು ಒಪ್ಪಬೇಕೆಂದೇನೂ ಆಗ್ರಹವಿಲ್ಲ. ಆದರೆ ಇತಹ ವಿಚಾರಗಳಬಗ್ಗೆ ಒಂದು ಆರೋಗ್ಯಕರವಾದ ಚರ್ಚೆ ನಡೆಯ ಬೇಡವೇ? ಒಟ್ಟಿನಲ್ಲಿ ಬದುಕನ್ನು ಗೊಂದಲಮಯವಾಗಿ ಮಾಡಿಕೊಳ್ಳದೆ  ಸಾರ್ಥಕ ಬದುಕಿಗೆ ನೆರವಾಗುವ ಯಾವುದೇ ಆರೋಗ್ಯಕರ ಚರ್ಚೆಯು  ವೇದಸುಧೆಯಲ್ಲಿ ನಡೆಯಬೇಕೆಂಬುದು ವೇದಸುಧೆಯ ಅಪೇಕ್ಷೆ. 
ಅಂತೂ ವೇದಸುಧೆಯಲ್ಲಿ  ವೈಚಾರಿಕವಾಗಿ ಎರಡು ಭಾಗಗಳಿರುತ್ತವೆ. ಒಂದರಲ್ಲಿ ಅನೂಚಾನವಾಗಿ ನಡೆದುಕೊಂಡು ಬಂದಿರುವ ಪೂಜೆ ಪುನಸ್ಕಾರಗಳು, ಧಾರ್ಮಿಕ ಚರಣೆಗಳ ಬಗ್ಗೆ  ಲೇಖಕರು ಪ್ರಕಟಿಸಲು ಅವಕಾಶ ಇರುತ್ತದೆ. ಮತ್ತೊಂದರಲ್ಲಿ  ವೇದದ ವಿಚಾರಗಳ ಚಿಂತನೆಗಳಿರುತ್ತವೆ. ಯಾವುದೇ ಬರಹಗಳಬಗ್ಗೆ ಚರ್ಚೆಯಂತೂ ನಡೆಯಲು ಅವಕಾಶವು ಇದ್ದೇ ಇದೆ. ಚರ್ಚೆಗಳು ಹಳಿತಪ್ಪುವ ಸಂದರ್ಭ ಒದಗಿಬಂದರೆ  ವೇದಸುಧೆಯ ಬಳಗವು ಕೂಡಿ ಬಹುಮತದ ತೀರ್ಮಾನ ತೆಗೆದುಕೊಳ್ಳುತ್ತದೆ.ಇಷ್ಟೆಲ್ಲಾ ಬರೆದ ಮೇಲೆ ಇನ್ನು ನಿಮ್ಮ ಅಭಿಪ್ರಾಯವನ್ನು ತಿಳಿಸಬೇಕಲ್ಲವೇ?