ಹಾಸನದಲ್ಲಿ ದಿನಾಂಕ 16.8.2014 ರಂದು ಉದ್ಘಾಟನೆಗೊಂಡ ವೇದಭಾರತಿಯ ದ್ವಿತೀಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾದಿಗ ದಂಡೋರ ಸಮಿತಿಯ ರಾಜ್ಯ ಅಧ್ಯಕ್ಷರೂ, ವಿ.ಹಿಂ.ಪರಿಷತ್ತಿನ ರಾಜ್ಯ ಉಪಾಧ್ಯಕ್ಷರೂ ಆದ ಶ್ರೀ ಶಂಕರಪ್ಪನವರ ಹೃದಯಾಂತರಾಳದ ಮಾತುಗಳು ಇಲ್ಲಿವೆ.
----------------------------------------------------------------------------
ಹಿಂದು ಧರ್ಮ ನನ್ನ ತಾಯಿ.ಹಿಂದೂ ಧರ್ಮವನ್ನು ನಾಶಪಡಿಸಲು ವೈರಿಗಳು ಕಾದಿದ್ದಾರೆ. ಪರಕೀಯರು ನಮ್ಮ ದೇಶವನ್ನು ಆಳಿದ ಕಾಲಕ್ಕಿಂತಲೂ ಇಂದು ಹಿಂದೂ ಧರ್ಮಕ್ಕೆ ಹೆಚ್ಚು ಗಂಡಾಂತರವಿದೆ. ನಮ್ಮ ನಮ್ಮಲ್ಲಿ ಶತೃತ್ವ ಬೆಳೆಸುತ್ತ ತನ್ಮೂಲಕ ನಮ್ಮ ಧರ್ಮವನ್ನು ನಾಶಮಾಡುವ ಶಡ್ಯಂತ್ರವನ್ನು ಅನ್ಯ ಮತೀಯರು ಹೆಣಿದಿದ್ದಾರೆ. ಆದ್ದರಿಂದ ಈಗ ಹಿಂದೆಂದಿಗಿಂತಲೂ ನಾವು ಎಚ್ಚರವಾಗಿರುವುದು ಅನಿವಾರ್ಯವಾಗಿದೆ.
ಭಾರತಮಾತೆಯ ಮಕ್ಕಳಾದ ನಮ್ಮಲ್ಲಿ ಪರಸ್ಪರಾನ್ಯೋನ್ಯತೆ, ಸಾಮರಸ್ಯ, ಪ್ರೀತಿ ಉಳಿಯದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಧರ್ಮಕ್ಕೆ ದುರಂತ ಕಾದಿದೆ. ಈ ಧರ್ಮವನ್ನು ಉಳಿಸಲು ರಾ.ಸ್ವ.ಸಂಘದ ಸಾವಿರಾರು ಕಾರ್ಯಕರ್ತರು ತಮ್ಮ ಜೀವನವನ್ನು ಮುಡಿ[ಪಾಗಿಟ್ಟಿರುವುದು ನಿಜ. ಆದರೆ ಧರ್ಮರಕ್ಷಣೆಯ ಈ ಕೆಲಸದ ಪ್ರಮಾನ ಸಾಲದು. ಇನ್ನೂ ಹೆಚ್ಚು ರಬಸದಿಂದ ಧರ್ಮವನ್ನು ಉಳಿಸುವ ಕೆಲಸ ನಡೆಯಬೇಕಾಗಿದೆ. ಇಲ್ಲಿಯವರಗೆ ರಾ.ಸ್ವ.ಸಂಘದ ಕಾರ್ಯದಲ್ಲಿ ತೊಡಗಿಸಿಕೊಂಡಿರುವವರ ಸಂಖ್ಯೆ ದೇಶದ ಜನರ ಪ್ರತಿಶತ ಒಂದಕ್ಕಿಂತ ಕಮ್ಮಿ ಇರಬಹುದು.ಇನ್ನೂ ಪ್ರತಿಶತ 99 ಜನರಿಗೆ ಈ ಜ್ಞಾನವನ್ನು ಮುಟ್ಟಿಸಬೇಕಾಗಿದೆ. ಆದ್ದರಿಂದ ನಮ್ಮ ಸ್ವಂತ ಜೀವನದ ಜೊತೆಗೆ ಭಾರತಮಾತೆಗಾಗಿ ನಾವೆಲ್ಲರೂ ನಮ್ಮ ಸ್ವಲ್ಪ ಸಮಯವನ್ನು ಕೊಟ್ಟರೆ ನಮ್ಮ ಜನ್ಮ ಸಾರ್ಥಕವಾಗುತ್ತದೆ.ನಾವು ಕುಳಿತಲ್ಲೇ ದೇಶದ ಮಾತನಾಡಿದರೆ ಸಾಲದು, ಮಹಾಪುರುಷರನ್ನು ಹೊಗಳಿದರೆ ಸಾಲದು.
ನಮಗೆ ಒಂದು ನಂಬಿಕೆ ಇದೆ. ಧರ್ಮದ ಅಧಃಪಥನವಾಗುವ ಸಂದರ್ಭದಲ್ಲಿ ಶ್ರೀಮನ್ನಾರಾಯಣನು ಧರೆಗಿಳಿದುಬಂದು ಧರ್ಮದ ಪುನರುತ್ಥಾನ ಮಾಡುತ್ತಾನೆಂದು. ಆದರೆ ಪ್ರಪಂಚದಲ್ಲಿ ನಾವು 160 ಕೋಟಿಗಿಂತಲೂ ಹೆಚ್ಚು ಹಿಂದುಗಳಿದ್ದೇವೆ.ನಾವೆಲ್ಲಾ ಕಣ್ಮುಚ್ಚು ಕುಳಿತು ನಾರಾಯಣನನ್ನು ಎದುರು ನೋಡುತ್ತಿದ್ದೇವೆ. ಭಗವಂತನ ಅಂಶವೇ ಆದ ನಾವು ನಾರಾಯಣನು ಮಾಡುವ ಕಾರ್ಯದಲ್ಲಿ ಪ್ರತಿಶತ ಒಂದನ್ನು ನಾವೆಲ್ಲಾ ಮಾಡಿದರೂ ಪ್ರತಿಶತ 160 ಕೋಟಿಗಿಂತಲೂ ಹೆಚ್ಚು ಕಾರ್ಯವನ್ನು ನಾವು ಮಾಡಲು ಸಾಧ್ಯವಿಲ್ಲವೇ?
ಕ್ರೈಸ್ತ ಮತ್ತು ಮುಸಲ್ಮಾನರು ಅವರ ಧರ್ಮ ಉಳಿಸಲು ಬದುಕುತ್ತಾರೆ
ಆದರೆ ಕ್ರೈಸ್ತ ಮತ್ತು ಮುಸಲ್ಮಾನರ ಚಿಂತನೆ ಇದಕ್ಕೆ ವಿರುದ್ಧವಾದುದು. ಅವರಾದರೋ ತಮ್ಮ ಧರ್ಮದ ರಕ್ಷಣೆಗಾಗಿಯೇ ಏಸು ಅಥವಾ ಪಗಂಬರ್ ಈ ಭೂಮಿಗೆ ತಮ್ಮನ್ನು ಕಳಿಸಿಕೊಟ್ಟಿದ್ದಾರೆಂದು ಭಾವಿಸುತ್ತಾರೆ. ಅದಕ್ಕಾಗಿ ಪ್ರತಿಯೊಬ್ಬರೂ ಅವರ ಧರ್ಮಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ತಮ್ಮ ವೈಯಕ್ತಿಕ ಬದುಕಿನ ಜೊತೆಗೆ ಅವರ ಧರ್ಮದ ಉಳಿವಿಗಾಗಿ ಅವರು ಬದುಕುತ್ತಾರೆ. ಆದ್ದರಿಂದ ಅವರ ಧರ್ಮಗಳು ಬೆಳೆಯುತ್ತಿವೆ.
ನಾವೂ ಕೂಡ ನಮ್ಮ ಧರ್ಮಕ್ಕಾಗಿ ಬದುಕುವುದನ್ನು ಪರಧರ್ಮೀಯರಿಂದ ಕಲಿಯಬಾರದೇ? ಹೀಗೆ ಮಾಡಿದರೆ ಪರ ಧರ್ಮೀಯರು ನಮ್ಮ ಮೇಲೆ ಅವರ ವಕ್ರ ದೃಷ್ಟಿ ಹರಿಸುವ ಧೈರ್ಯಮಾಡಿಯಾರೇ?
ನಮ್ಮ ಮಠಾಧಿಪತಿಗಳು ಜನರನ್ನು ತಲುಪಬೇಕು
ನಮ್ಮಲ್ಲಿ ಸಾವಿರಾರು ಮಠಾಧಿಪತಿಗಳು, ಸ್ವಾಮೀಜಿಗಳು ಇದ್ದಾರಲ್ಲವೇ? ಆದರೂ ನಮ್ಮ ಧರ್ಮ ನಶಿಸುತ್ತಿರುವುದೇಕೇ? ಎಲ್ಲೋ ಏನೋ ಲೋಪವಿರಬೇಕಲ್ಲವೇ! ಆದ್ದರಿಂದ ನನ್ನ ಕಳಕಳಿಯ ಮನವಿ ಏನೆಂದರೆ ಪೂಜ್ಯ ಸ್ವಾಮೀಜಿಗಳು ಜನರ ಹತ್ತಿರ ಬರಬೇಕು. ಅವರಲ್ಲಿ ಧರ್ಮ ಜಾಗೃತಿ ಉಂಟುಮಾಡಬೇಕು.ನನ್ನ ಸಮಾಜದ ಜನರನ್ನು ವೇದಭಾರತಿಯಂತಹ ಸಂಸ್ಥೆಗಳ ಹತ್ತಿರ ತರಲು ನಾನೂ ಸಹ ಸರ್ವ ಪ್ರಯತ್ನವನ್ನು ಮಾಡುತ್ತೇನೆ. ಈ ನನ್ನ ಪ್ರಯತ್ನವನ್ನು ನೋಡಿದ ನಮ್ಮ ಜನಾಂಗದ ಜನರು ನನ್ನನ್ನು ಠೀಕಿಸುತ್ತಿದ್ದಾರೆ.ಸಾವಿರಾರು ವರ್ಷಗಳು ನಮ್ಮ ಜನಾಂಗವನ್ನು ಮೂಲೆಗುಂಪು ಮಾಡಿದ್ದ ಜನರೊಡನೆ ಸೇರಿದ್ದೇನೆಂದು ನಮ್ಮ ಸಮಾಜದ ಬುದ್ಧಿಜೀವಿಗಳು ನನಗೆ ಕೇಳುತ್ತಿದ್ದಾರೆ. ಅವರಿಗೆ ನಾನು ಕೇಳುತ್ತಿದ್ದೇನೆ " ರಾ.ಸ್ವ.ಸಂಘವು ಈ ದೇಶದಲ್ಲಿ ಹಿಂದು ಧರ್ಮವನ್ನು ಉಳಿಸಲು ಕೆಲಸಮಾಡುತ್ತಿರುವ ಸಂಘಟನೆ. ನಾನು ಅವರೊಡನೆ ಹೋಗದೆ ಅಮೆರಿಕೆಯ ಒಬಾಮರ ಹತ್ತಿರ ಹೋಗಬೇಕೇ? ಸದ್ದಾಂ ಹುಸೇನನ ಹತ್ತಿರ ಹೋಗಬೇಕೇ?
ನಾನೊಬ್ಬ ಹಿಂದುವಾಗಿ ಹಿಂದು ಸಂಘಟನೆಗಳ ಜೊತೆ ಕೈ ಜೋಡಿಸದೆ ಮುಸಲ್ಮಾನ, ಕ್ರೈಸ್ತ ಸಂಘಟನೆಗಳ ಜೊತೆ ಕೈ ಜೋಡಿಸಬೇಕೆ? ನಮ್ಮ ಪೂರ್ವಜರಲ್ಲಿ ಯಾರಿಂದಲೋ ಯಾವಾಗಲೋ ತಪ್ಪಾಗಿದೆ ನಿಜ, ಆದರೆನಾವೀಗ ಬುದ್ಧಿವಂತರಾಗಿಲ್ಲವೇ? ನಾವು ತಪ್ಪನ್ನು ಸರಿಪಡಿಸಿಕೊಳ್ಳಬಾರದೇ?
ಹಿಂದಿನ ವರ್ಣಾಶ್ರಮ ಧರ್ಮ ಈಗ ಉಳಿದಿದೆಯೇ?
ನಮ್ಮ ಸಮಾಜದವರ ಹತ್ತಿರ ನಾನು ಕೇಳುತ್ತಿದ್ದೇನೆ." ಹಿಂದಿನ ವರ್ಣಾಶ್ರಮದಂತೆ ಈಗ ಸಮಾಜ ಇದೆಯೇ? ನಾವು ಬುದ್ಧಿವಂತರಾಗಿ ಕ್ಷತ್ರಿಯರಂತೆ ದೇಶವಾಳುತ್ತಿಲ್ಲವೇ? ವೈಶ್ಯರಂತೆ ವ್ಯಾಪಾರ ಮಾಡುತ್ತಿಲ್ಲವೇ? ಬ್ರಾಹ್ಮಣರಂತೆ ವಿದ್ಯೆ ಹೇಳಿಕೊಡುವ ಅಧ್ಯಾಪಕ ಕೆಲಸ ಮಾಡುತ್ತಿಲ್ಲವೇ?ಶೂದ್ರರಂತೆ ವ್ಯವಸಾಯ ಮಾಡುತ್ತಿಲ್ಲವೇ? ಇಂತಹ ಸಂದರ್ಭದಲ್ಲಿ ನಾವ್ಯಾಕೆ ಈಗಿನ ಬ್ರಾಹ್ಮಣ ಪಂಗಡದವರೊಡನೆ ಬೆರೆತು ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬಾರದು? ಅದರಿಂದ ನಮ್ಮ ಸಮಾಜ ಉದ್ಧಾರವಾಗುವುದಿಲ್ಲವೇ? ಹಾಗೆ ಮಾಡದೆ ನಾವು ಕ್ರೈಸ್ತರೊಡನೆಯೋ, ಮುಸಲ್ಮಾನರೊಡನೆಯೋ ಸೇರಿ ಪಾಪಿಗಳಾಗಿ ಬದುಕುವುದಕ್ಕಿಂತ ಸ್ವಧರ್ಮದಲ್ಲಿದ್ದುಕೊಂಡು ಅದನ್ನೂ ಶುದ್ಧಮಾಡುತ್ತಾ ನಾವು ಯಾಕೆ ಬಲಿಷ್ಠರಾಗಬಾರದು!" -ಈ ನನ್ನ ಮಾತಿನಿಂದ ಯಾರು ಕ್ರಿಶ್ಚಿಯನ್ ಮಿಶನರಿಗಳಿಂದ ಸಹಾಯ ಪಡೆಯುತ್ತಿದ್ದಾರೋ ಅವರು ನನ್ನನ್ನು ದ್ವೇಶಿಸುತ್ತಿದ್ದಾರೆ. ಆದ್ದರಿಂದ ನನ್ನ ಸಮಾಜದ ಮತ್ತು ಉಳಿದೆಲ್ಲಾ ಹಿಂದೂ ಮಠಾಧಿಪತಿಗಳನ್ನು ನಾನು ದಲಿತ ಕಾಲೊನಿಗಳಿಗೆ ಪದಾರ್ಪಣೆ ಮಾಡಿ ಅಲ್ಲಿ ಧ್ರಮ ಜಾಗೃತಿ ಮಾಡಬೇಕೆಂದು ಪ್ರಾರ್ಥಿಸುತ್ತಿದ್ದೇನೆ. ಮಠಾಧಿಪತಿಗಳು ದಲಿತ ಕಾಲೊನಿಗಳಿಗೆ ಕಾಲಿಟ್ಟರೆ ಅನ್ಯ ಮತೀಯರು ಅಲ್ಲಿ ಪ್ರವೇಶಿಸಿ ಮತಾಂತರ ಮಾಡಲು ಹೆದರುತ್ತಾರೆ.
ನದಿಗಳು ಸಾಗರಸೇರಿದಂತೆ ಎಲ್ಲಾ ಜಾತಿಗಳೂ ಹಿಂದೂ ಧರ್ಮದಲ್ಲಿ ಐಕ್ಯವಾಗಬೇಕು.
ಮೇಲ್ಜಾತಿಯವರು ದಯಮಾಡಿ ಕೆಳ ಜಾತಿಯವರ ಸಮೀಪ ಬರುವ ಕೆಲಸ ಆಗಬೇಕು. ಹಾಗೆಯೇ ಕೆಳಜಾತಿಯವರೂ ಮೇಲ್ಜಾತಿಯವರ ಹತ್ತಿರ ಬರುವ ಪ್ರಯತ್ನ ಮಾಡಿ, ಬರುಬರುತ್ತಾ ಎರಡೂ ಪಂಗಡಗಳ ನಡುವೆ ಅಂತರ ಕಡಿಮೆಯಾಗುತ್ತಾ ಬಂದರೆ ಒಂದು ದಿನ ಹಿಂದು ಸಮಾಜವು ಇನ್ನೂ ಸದೃಢವಾಗಿ ನಿಲ್ಲುವುದರಲ್ಲಿ ಸಂಶಯವಿಲ್ಲ.
ಧರ್ಮ ಜಾಗೃತಿಯ ಕೆಲಸ ಆರಂಭವಾದ ಮೇಲೆ ನಿಲ್ಲಬಾರದು. ನದಿಯಂತೆ ಹರಿಯುತ್ತಿರಬೇಕು
ಮೈಸೂರಿನಲ್ಲಿ ಒಂದು ಪ್ರಯತ್ನ ನಡೆಯಿತು. ನಮ್ಮ ಸಮಾಜದ ಪೂಜ್ಯರಾದ ಮಾದಾರಚೆನ್ನಯ್ಯ ಸ್ವಾಮೀಜಿಯವರು ಒಂದು ದಿನ ಬ್ರಾಹ್ಮಣ ಕೇರಿಯಲ್ಲಿ ಪಾದಯಾತ್ರೆ ಮಾಡಿದರು. ಉಡುಪಿಯ ಪೂಜ್ಯ ಪೇಜಾವರ ಶ್ರೀಗಳು ದಲಿತ ಕಾಲೊನಿಯಲ್ಲಿ ಒಂದು ದಿನ ಪಾದಯಾತ್ರೆ ಮಾಡಿದರು.ಆದರೆ ಅದರ ಪರಿಣಾಮ ಹಿಂದು ಸಮಾಜಕ್ಕಿಂತಲೂ ಅನ್ಯ ಮತೀಯರ ಮೇಲೆ ಹೆಚ್ಚಾಯ್ತು. ಅವರು ಜಾಗೃತರಾದರು. ಅವರ ಕೆಲಸ ಇನ್ನೂ ರಬಸಗೊಂಡಿತು.ಅನ್ಯಮತೀಯರು ದಲಿತರಿಗೆ ಹೆಚ್ಚು ಹೆಚ್ಚು ಆಮಿಶಗಳನ್ನು ತೋರಿಸಿ ಮತಾಂತರದ ಸಂಖ್ಯೆ ಹೆಚ್ಚು ಮಾಡಿದರು. ಕಾರಣ ಏನೆಂದರೆ ನಮ್ಮ ಸ್ವಾಮೀಜಿಗಳು ಒಂದು ದಿನ ದಲಿತ /ಬ್ರಾಹ್ಮನ ಕೇರಿಯಲ್ಲಿ ಪಾದಯಾತ್ರೆ ಮಾಡಿ ತಮ್ಮ ಈ ಕೆಲಸವನ್ನು ನಿಲ್ಲಿಸಿಬಿಟ್ಟರು.ಅದು ಮುಂದುವರೆದಿದ್ದರೆ ಅನ್ಯಮತೀಯರು ತಮ್ಮ ದುಸ್ಸಾಹಸಕ್ಕೆ ಕೈ ಹಾಕಲು ಹೆದರುತ್ತಿದ್ದರು.ಇಂತಹ ಧರ್ಮ ಜಾಗೃತಿಯ ಕೆಲಸ ಆರಂಭವಾದಮೆಲೆ ನಿಲ್ಲಬಾರದು. ನದಿಯಂತೆ ಹರುತ್ತಿರಬೇಕು.ಅದು ನಿಂತರೆ ಅನ್ಯಮತೀಯರಿಂದ ದಲಿತರಿಗೆ ಆಮಿಷ ತೋರಿಸಿ ಮತಾಂತರ ಮಾಡುವ ಕೆಲಸವು ನಡೆಯುತ್ತದೆ. ಆದ್ದರಿಂದ ನಮ್ಮ ಹಿಂದೂ ಧರ್ಮದ ಸ್ವಾಮೀಜಿಗಳು ದಿನದಲ್ಲಿ ಒಂದು ಗಂಟೆಯಾದರೂ ದಲಿತ ಕಾಲೊನಿಗಳಿಗೆ ಹೋಗಿ ಧರ್ಮ ಜಾಗೃತಿಯ ಪವಿತ್ರ ಕೆಲಸವನ್ನು ಮಾಡಬೇಕು- ಎಂಬುದು ಸ್ವಾಮೀಜಿಗಳಲ್ಲಿ ನನ್ನ ಕಳಕಳಿಯ ಮನವಿ.
ಅನ್ಯಮತಕ್ಕೆ ಒಬ್ಬ ಮತಾಂತರನಾದನೆಂದರೆ ನಮ್ಮ ಮನೆಯೊಳಗೆ ಒಂದು ಹಾವು ಬಂದಂತೆ.
ಅನ್ಯಮತಕ್ಕೆ ಒಬ್ಬ ಮತಾಂತರನಾದನೆಂದರೆ ನಮ್ಮ ಮನೆಯೊಳಗೆ ಒಂದು ಹಾವು ಬಂದಂತೆ.ಅದು ಕಚ್ಚುವುದು ಕಟ್ಟಿಟ್ಟಬುತ್ತಿ. ಆದ್ದರಿಂದ ಅದನ್ನು ಅಪಾಯವಿಲ್ಲದಂತೆ ಹಿಡಿದು ಕಾಡಿಗೆ ಬಿಡಬೇಕು ಅಥವಾ ಆಗದಿದ್ದರೆ ಕೊಲ್ಲಬೇಕು. ಇಲ್ಲದಿದ್ದರೆ ಅದು ನಮ್ಮನ್ನು ಕಚ್ಚಿ ಸಾಯಿಸುವುದು ಖಚಿತ. ವೇದದ ಅರಿವಿನ ಕೆಲಸವು ದಲಿತ ಕಾಲೊನಿಗಳಲ್ಲೂ ಆಗಬೇಕು. ಕ್ರೈಸ್ತರಲ್ಲಿ ಒಂದು ಯೋಜನೆ ಇದೆ. ಒಬ್ಬ ಕ್ರೈಸ್ತ ಒಂದು ತಿಂಗಳಲ್ಲಿ ಒಂದು ಹಿಂದು ಕುಟುಂಬವನ್ನು ತನ್ನ ಮತಕ್ಕೆ ಮತಾಂತರ ಮಾಡಲೇ ಬೇಕು.ಅಂದರೆ ಒಬ್ಬ ಕ್ರೈಸ್ತ ಒಂದು ವರ್ಷಕ್ಕೆ 12 ಹಿಂದು ಕುಟುಂಬಗಳನ್ನು ಮತಾಂತರ ಮಾಡಬೇಕು.ಗುಡ್ದಗಾಡು ಪ್ರದೇಶಗಳಲ್ಲಿ, ಅಲೆಮಾರಿ ಜನಾಂಗಗಳಲ್ಲಿ, ದಲಿತ ಕಾಲೊನಿಗಳಲ್ಲಿ ಈ ಮತಾ೦ತರದ ಕೆಲಸ ನಡೆಯುತ್ತಿದೆ.
ದಲಿತರಿಗೆ ಸಾಮಾಜಿಕ ಭಹಿಷ್ಕಾರ ಹಾಕಿದ ಜಾಗದಲ್ಲೆಲ್ಲಾ ಮತಾಂತರ ಹೆಚ್ಚಾಗಿ ನಡೆದಿದೆ.
ಯಾವ ಯಾವ ಹಳ್ಳಿಗಳಲ್ಲಿ ಸಾರ್ವಜನಿಕ ಭಾವಿಗಳಲ್ಲಿ ನೀರು ಸೇದಲು ದಲಿತರನ್ನು ಬಿಡುವುದಿಲ್ಲವೋ, ಎಲ್ಲೆಲ್ಲಿ ದೇವಸ್ಥಾನಗಳಲ್ಲಿ ಪ್ರವೇಶವನ್ನು ನಿರಾಕರಿಸಲಾಗುತ್ತದೋ, ಎಲ್ಲೆಲ್ಲಿ ದಲಿತರಿಗೆ ಕ್ಷೌರ ಮಾದಲು ನಿರಾಕರಿಸುತ್ತಾರೋ, ಅಲ್ಲೆಲ್ಲಾ ಮತಾಂತರದ ಚಟುವಟಿಕೆಗಳು ಹೆಚ್ಚಾಗಿವೆ, ಎಂಬುದನ್ನು ನಾವು ಮನಗಾಣಬೇಕು. ಯಾವ ಯಾವ ಊರುಗಳಲ್ಲಿ ದಲಿತರು ಸಾಮಾಜಿಕ ಭಹಿಷ್ಕಾರಕ್ಕೆ ಒಳಗಾಗಿದ್ದಾರೆ, ಅಲ್ಲೆಲ್ಲಾ ಅದರ ಮರುವರ್ಷವೇ ಪ್ರತಿಶತ 25 ಭಾಗ ದಲಿತರು ಅನ್ಯಮತಕ್ಕೆ ಮತಾಂತರವಾಗಿರುತ್ತಾರೆ!! ಎಂಬ ವಿಷಯವು ಎಲ್ಲರಿಗೂ ತಿಳಿಯುವುದಿಲ್ಲ. ನೀವೆಲ್ಲಾ ಪತ್ರಿಕೆಗಳಲ್ಲಿ ಅಂತಾ ಸುದ್ಧಿಯನ್ನು ಓದಿದರೆ ನಾನು ಅದೇ ಸಮಾಜದ ಮಧ್ಯ ಇದ್ದುಕೊಂಡು ಪ್ರತ್ಯಕ್ಷ ನೋಡುತ್ತಿದ್ದೇನೆ. ಇಂತಹ ಪರಿಸ್ಥಿತಿಯಲ್ಲಿ ದಲಿತರು ಯಾರ ಹತ್ತಿರ ಹೋಗಬೇಕು, ನೀವೇ ಹೇಳಿ. ನಾನು ನನ್ನ ಸಮಾಜದ ಸಂಕತವನ್ನು ಸಪಡಿಸಲು ಅನ್ಯಮತೀರನ್ನು ಕೇಳಬೇಕೋ, ಅಥವಾ ನಮ್ಮ ಧರ್ಮದ ಮೇಲ್ವರ್ಗದವರನ್ನು ಕೇಳಬೇಕೋ .ನೀವೇ ಹೇಳಿ.ನಾವೇ ಈ ಸಂಕಟವನ್ನು ಬರದಂತೆ ಎಚ್ಚರ ವಹಿಸಬೇಕು.ಇಲ್ಲದಿದ್ದರೆ ನಮ್ಮ ಹಿಂದು ಧರ್ಮಕ್ಕೆ ದುರಂತ ತಪ್ಪಿದ್ದಲ್ಲ.