ಶ್ರೀ ಸುಧಾಕರಶರ್ಮರ ಮಾತುಗಳನ್ನು ಕೇಳಿದ ಕೆಲವರು ನನಗೆ ಮೇಲ್ ಮಾಡುತ್ತಾರೆ, ಕೆಲವರು ದೂರವಾಣಿಯಲ್ಲೂ ಮಾತನಾಡುತ್ತಾರೆ "ಸಾರ್ ಶರ್ಮರು ಹೇಳುವ ವಿಷಯಗಳು ಸತ್ಯವಾಗಿ ಕಾಣುತ್ತಿವೆ, ಆದರೆ ತಲೆತಲಾಂತರದಿಂದ ನಮ್ಮ ಮನೆಗಳಲ್ಲಿ ನಡೆಸಿಕೊಂಡುಬಂದಿರುವ ಆಚರಣೆಗಳನ್ನು ಬಿಡಬೇಕಾಗುತ್ತದಲ್ಲಾ! ಬಲು ಗೊಂದಲ ಉಂಟಾಗಿದೆ"
ಹೌದು, ನೂರಾರು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಆಚರಣೆಗಳನ್ನು ಬದಲಿಸುವುದು ಬಹಳ ಕಷ್ಟ. ಆದರೆ ನನ್ನ ವಿಚಾರ ತಿಳಿಸಿ ಬಿಡುವೆ.ನಾನೂ ನಿಮ್ಮಂತ ಸ್ಥಿತಿಯಲ್ಲಿರುವವನೇ ಹೌದು. ಆದರೆ ನಾನು ಹೀಗೆ ಚಿಂತನೆ ಮಾಡುತ್ತೇನೆ" ನಾವು ಏನೇ ಮಾಡಿದರೂ ಅದರ ಫಲ ಸಿಗಬೇಕು, ತಾನೇ? ಅದರಿಂದ ನಮಗೆ ನೆಮ್ಮದಿ, ಮಾನಸಿಕ-ದೈಹಿಕ ಆರೋಗ್ಯ ಸಿಗಬೇಕು, ತಾನೇ? ಬದುಕು ನಡೆಸಲು ಹಗಲು ರಾತ್ರಿ ದುಡಿಯುವ ನಾವು ಬದುಕಿಗೊಂದು ಅರ್ಥವನ್ನೂ ತಿಳಿಯಲೇ ಬೇಕಲ್ಲವೇ? ಅಲ್ಲದೆ ಪತಿ-ಪತ್ನಿ ಸಮೇತ ಕಷ್ಟಪಟ್ಟು ದುಡಿಮೆ ಮಾಡುತ್ತಿರುವಾಗ ನಮಗಿರುವ ಸಮಯ, ಹಣ ಎಲ್ಲವನ್ನೂ ಯೋಚಿಸಿಯೇ ಖರ್ಚುಮಾಡಬೇಕಲ್ಲವೇ? ಹೀಗೆ ಆಲೋಚಿಸಿದಾಗ ಶರ್ಮರ ಮಾತುಗಳು ನನಗೆ ಆಪ್ಯಾಯಮಾನವಾಗಿ ಕಾಣುತ್ತವೆ, ನಮ್ಮ ಚಿಂತನೆಗಳು ಹೇಗಿರಬೇಕು, ನಮ್ಮ ದಿನಚರಿ ಹೇಗಿದ್ದರೆ ಆರೋಗ್ಯಕರ ಬದುಕು ನಡೆಸಲು ಸಾಧ್ಯ! ಯಾವ ದೈನಂದಿನ ಪೂಜೆ ಪುನಸ್ಕಾರಗಳಿಂದ ನಮಗೆ ಮಾನಸಿಕ, ದೈಹಿಕ ಹಾಗೂ ಆಧ್ಯಾತ್ಮಿಕ ಸುಖ ಸಿಗುತ್ತದೋ ಅಂತಹ ಆಚರಣೆಗಳನ್ನು ಮಾಡಿದರಾಯ್ತು. ಎಲ್ಲೆಲ್ಲೂ ವ್ಯಾಪಿಸಿರುವ ಹಾಗೂ ಸರ್ವಶಕ್ತನಾದ ಭಗವಂತನು ನಮ್ಮಿಂದ ಏನುತಾನೇ ಅಪೇಕ್ಷಿಸಿಯಾನು? ನಿತ್ಯ ತೃಪ್ತನೂ, ನಿತ್ಯ ಶುದ್ಧನೂ, ಸ್ವಯಂ ಪ್ರಕಾಶನೂ ಆದ ಭಗವಂತನಿಗೆ ನಾವು ಮಾಡುವ ನೈವೇದ್ಯ, ಅಭಿಶೇಕ, ಮಂಗಳಾರತಿ ಅಗತ್ಯ ವಿದೆಯೇ? ಎಲ್ಲವೂ ನಮಗಾಗಿ, ಅಲ್ಲವೇ? ಹಾಗಾಗಿ ಸದ್ವಿಚಾರ ಚಿಂತನೆ ಮಾಡುತ್ತಾ, ಸಾಧ್ಯವಾದಷ್ಟೂ ಪರೋಪಕಾರಿಯಾಗಿ ಜೀವಿಸುತ್ತಾ, ಪ್ರಕೃತಿಯ ಶೋಷಣೆಯನ್ನು ಆದಷ್ಟೂ ಕಡಿಮೆ ಮಾಡುತ್ತಾ, ಪ್ರಕೃತಿಗೆ ಪೂರಕವಾದ ಬದುಕು ನಡೆಸುತ್ತಾ ನಮ್ಮ ಜೀವನ ಸಾಗಿದರೆ ಅದು ನಿಜವಾದ ಯಜ್ಞ ಆಗಲಾರದೇ?