Pages

Monday, December 13, 2010

ವೇದಸುಧೆಯ ಅಭಿಮಾನಿಗಳಲ್ಲಿ ನಮಸ್ಕಾರಗಳು

ಶ್ರೀ ಶ್ರೀನಾಥ್  ಇವರು ಕೇಳಿದ್ದ ಪ್ರಶ್ನೆಗಳಿಗೆ ಶ್ರೀ ಸುಧಾಕರಶರ್ಮರು ನೀಡಿರುವ ಉತ್ತರವನ್ನು ಶರ್ಮರ ಪುಟದಲ್ಲಿ ಪ್ರಕಟಿಸಲಾಗಿದೆ. ಹೀಗೆಯೇ ಇಲ್ಲಿಯರೆಗೆ ಪ್ರಕಟವಾಗಿರುವ ಉಪನ್ಯಾಸಗಳಬಗ್ಗೆ ನಿಮ್ಮ ಸಂದೇಹಗಳನ್ನು ಕೇಳುವುದರಿಂದ ಹಲವರ ಸಂದೇಹಗಳು ಪರಿಹಾರವಾಗುತ್ತವೆ.ಅಲ್ಲದೆ ಇಲ್ಲಿ ನೀಡಿರುವ ಉತ್ತರಗಳನ್ನು ಒಪ್ಪಬೇಕೆಂಬ ಒತ್ತಾಯವೇನಿಲ್ಲ. ಮತ್ತೆ ಮತ್ತೆ ಪ್ರಶ್ನೆಗಳನ್ನು ಕೇಳಲು ಅವಕಾಶಗಳು ಇದ್ದೇ ಇದೆ. ಬಾಲಪ್ರತಿಭೆ ಕುಮಾರಿ ಸಹನಾ-ಇವರ ಪ್ರತಿಭೆಯನ್ನು ಮೆಚ್ಚಿ ಆಶೀರ್ವದಿಸಿರುವ ಹಿರಿಯರಿಗೆ ಸಹನಳ ಪರವಾಗಿ ಕೃತಜ್ಞತೆಗಳು. ಬರುವ ಫೆಬ್ರವರಿ ಆರರಂದು ಹಾಸನದಲ್ಲಿ ನಡೆಯಲಿರುವ ವೇದಸುಧೆಯ ವಾರ್ಷಿಕೋತ್ಸವದಲ್ಲಿ ಇಂತಹ ಬಾಲಪ್ರತಿಭೆಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶವನ್ನು ನೀಡಲುದ್ಧೇಶಿಸಲಾಗಿದೆ.
-ಶ್ರೀಧರ್
ಸಂಪಾದಕ

ಬಾಲ ಪ್ರತಿಭೆ ಕುಮಾರಿಸಹನಾ

ಪುಟಾಣಿ ಸಹನ ಹಾಡ್ತಾಳೆ ಅಂತಾ ಕೇಳಿದ್ದೆ. ಆದರೆ ಆ ಪುಟ್ಟಿಯನ್ನು ನೋಡಲು ಅವಕಾಶ ಸಿಕ್ಕಿದ್ದು ಮೊನ್ನೆ. ನನ್ನ ಮಿತ್ರ ಶ್ರೀಯುತ ರಂಗೇಗೌಡ ಮತ್ತು ಶ್ರೀ ಮತಿ ಪುಷ್ಪಲತಾ ದಂಪತಿಗಳಿಗೆ ಚಿನ್ನದಂತಾ ಇಬ್ಬರು ಮಕ್ಕಳು. ಹಿರಿಯ ಮಗ ಭರತ್ ಏಳನೆಯ ತರಗತಿಯಲ್ಲಿ ಓದುತ್ತಿದ್ದು ಜೊತೆಯಲ್ಲಿ ವೇಣುವಾದನ ಕಲಿಯುತ್ತಿದ್ದಾನೆ. ತಂಗಿಯ ಹಾಡಿಗೆ ಸೊಗಸಾಗಿ ಕೊಳಲು ನುಡಿಸುತ್ತಾನೆ.ಎರಡನೆಯ ಮಗಳು ಕು|| ಸಹನಾ. ಇವತ್ತಿನ ನಮ್ಮ ಅತಿಥಿ.ನಾಲ್ಕನೇ ತರಗತಿ ಓದುತ್ತಿರುವ ಈ ಮಗುವನ್ನು ಯಾವಾಗಿನಿಂದ ಸಂಗೀತವನ್ನು ಅಭ್ಯಾಸ ಮಾಡುತ್ತಿದ್ದೀಯಾ? ಎಂದರೆ ತನ್ನ ಎಲ್.ಕೆ.ಜಿ.ತರಗತಿಯಿಂದ ಎಂದು ಉತ್ತರಿಸುತ್ತಾಳೆ.ಶಾಲೆಯಲ್ಲಿ ಟಾಪರ್. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಜೂನಿಯರ್ ಮುಗಿಸಿರುವ ಈಕೆ ಭರತನಾಟ್ಯ ಹಾಗೂ ವೀಣಾವಾದನವನ್ನೂ ಕಲಿಯುತ್ತಿದ್ದಾಳೆ.ಇಂದು ಆಕೆಯ ಮೊದಲನೆ ಕಂತನ್ನು ಕೇಳಿ.