Pages

Wednesday, August 29, 2012

ಈಶಾವಾಸ್ಯೋಪನಿಷದ್

ಈಶಾವಾಸ್ಯೋಪನಿಷದ್ 

ಯಸ್ಮಿನ್ ಸರ್ವಾಣಿ ಭೂತಾನ್ಯಾತ್ಮೈವಾಭೂದ್ವಿಜಾನತ:|
ತತ್ರ ಕೋ ಮೋಹ: ಕ: ಶೋಕ ಏಕತ್ವಮನುಪಶ್ಯತ:|| 7||

ಅರ್ಥ:
ಯಸ್ಮಿನ್ ಸರ್ವಾಣಿ ಭೂತಾನಿ= ಯಾವನಲ್ಲಿ ಎಲ್ಲಾ ಜೀವರಾಶಿಗಳೂ 
ಆತ್ಮ ಏವ ಅಭೂತ್= ಆತ್ಮ ಮಾತ್ರವೇ ಆಗಿರುತ್ತವೆಯೋ
ವಿಜಾನತ:= ತಿಳಿದವನಿಗೆ
ತತ್ರ= ಆ ಅವಸ್ಥೆಯಲ್ಲಿ
ಏಕತ್ವಮ್= ಆತ್ಮೈಕತ್ವವನ್ನು
ಅನುಪಶ್ಯತ:=ಅವಲೋಕಿಸುವವನಿಗೆ
ಕ: ಮೋಹ:= ಯಾವ ಮೋಹವು?
ಕ: ಶೋಕ:= ಯಾವ ದು:ಖವು?

ಸಪರ್ತಗಾತ್ ಶುಕ್ರಮಕಾಯಮವ್ರಣಮಸ್ನಾವಿರಂ ಶುದ್ಧಮಪಾಪವಿದ್ಧಮ್|
ಕವಿರ್ಮನೀಷೀ ಪರಿಭೂ: ಸ್ವಯಂಭೂ:  ಯಥಾತರ್ಥ್ಯತೋsರ್ಥಾನ್
ವ್ಯವಧಾತ್ ಶಾಶ್ವತೀಭ್ಯ: ಸಮಾಭ್ಯ:||8||

ಅರ್ಥ:
ಸ= ಯಥೋಕ್ತ ಆತ್ಮನು
ಪರ್ಯಗಾತ್= ಎಲ್ಲಾ ಕಡೆಗೂ ವ್ಯಾಪಿಸಿದವನು
ಶುಕ್ರಂ=ಶುಭ್ರವಾಗಿರುವವನು
ಅಕಾಯಂ= ಅಶರೀರಿಯು
ಅವ್ರಣಂ= ಗಾಯಗಳಿಲ್ಲದವನು
ಅಸ್ನಾವಿರಂ= ನರಗಳಿಲ್ಲದವನು 
ಶುದ್ಧಂ= ಅವಿದ್ಯಾಮಲರಹಿತನು
ಕವಿ:=ದೃಷ್ಟಾರನು
ಮನೀಷೀ=ಮನಸ್ಸನ್ನು ಆಳುವವನು
ಪರಿಭೂ:=ಎಲ್ಲರಲ್ಲೂ ಇರುವವನು
ಸ್ವಯಂಭೂ:=ತನ್ನ ತಾನೇ ಇರುವವನೂ
ಶಾಶ್ವತೀಭ್ಯ: ಸಮಾಭ್ಯ:ಅರ್ಥಾನ್ ಯಥಾತಥ್ಯತ: ವ್ಯವಧಾತ್= ಶಾಶ್ವತವಾದ ಸಂವತ್ಸರ ಎಂಬ ಹೆಸರುಳ್ಳ  ಪ್ರಜಾಪತಿಗಳಿಗೆ ಸತ್ಯವಾಗಿ ಕರ್ತವ್ಯಾದಿಗಳನ್ನು ವಿಭಾಗ ಮಾಡಿಕೊಟ್ಟನು.

ಈ ಮಂತ್ರಗಳಿಗೆ ಭಾವಾರ್ಥವನ್ನೂ ಸಹ  "ಉಪನಿಷದಾಮೃತ" ದಲ್ಲಿ ಕೊಡಲಾಗಿದೆ. ಆದರೆ ವೇದಸುಧೆಯ  ಅಭಿಮಾನೀ  ವಿದ್ವಾಂಸರು  ಸರಳವಾಗಿ ಈ ಮಂತ್ರಗಳ ಸಾರವನ್ನು  ನಮ್ಮೊಡನೆ ಹಂಚಿಕೊಳ್ಳಲು ವಿನಂತಿಸುವೆ.

ಆಧಾರ:
ಆಡಿಯೋ ಕೃಪೆ: ಯೂಟ್ಯೂಬ್

ಮಂತ್ರ-ಅರ್ಥ:
"ಉಪನಿಷದಾಮೃತ"
ಸಂಪಾದಕರು: ರತ್ನಾಕರ ಹ. ಕುಲಕರ್ಣಿ
ಅಧ್ಯಾತ್ಮ ಭಂಡಾರ, ಶಾಂತಿಕುಟೀರ, ಕನ್ನೂರ
ವಿಜಾಪುರ-ಜಿಲ್ಲೆ


ಯೋಚಿಸಲೊ೦ದಿಷ್ಟು... ೫೭೧.  ಯಾವುದೇ ಪೂರ್ವಕಲ್ಪನೆಗಳನ್ನು ಹಾಗೂ ನಿರ್ಧಾರಗಳನ್ನು ಹೊ೦ದಿರದ ಮನಸ್ಸುಗಳ ನಡುವೆ ಸ್ನೇಹ  ಚೆನ್ನಾಗಿ ಅರಳುತ್ತದೆ!
೨.  ನಮ್ಮ ಬಹುಪಾಲು ಯೋಚನೆಗಳು ಸಾಮಾನ್ಯವಾಗಿ ನಮ್ಮ ಯುಕ್ತಿಯಿ೦ದಲೇ ರೂಪುಗೊಳ್ಳುತ್ತವೆ- ಮನಪೂರ್ವಕವಾದ  ನಿರ್ಧಾರಗಳನ್ನು ನಾವು ತೆಗೆದುಕೊಳ್ಳುವುದು ಭಾರೀ ಕಡಿಮೆ!
೩. ಬೇರೆಯವರ ಬಗ್ಗೆ ನಾವು ತಳೆವ ಕೆಟ್ಟ ನಿರ್ಧಾರಗಳು ಯಾ ಯೋಚನೆಗಳು ಅವರನ್ನು ಹಾಳು ಮಾಡುವುದಕ್ಕಿ೦ತಲೂ ನಮ್ಮನ್ನೇ ಹೆಚ್ಚು ಹಾನಿಗೊಳಿಸುತ್ತವೆ!
೪. ನಮ್ಮ ಮನಸ್ಸೂ ಪ್ರಕೃತಿಯ೦ತೆಯೇ- ಕೆಲವೊಮ್ಮೆ ಹೊಸ ಹೊಸ ಯೋಚನೆಗಳು ಹುಟ್ಟಿಕೊ೦ಡರೆ ಕೆಲವೊಮ್ಮೆ ಯಾವುದೂ ಇಲ್ಲದ ಬೋಳು ಮರದ೦ತೆ ಖಾಲಿ ಖಾಲಿಯಾಗಿ ಬಿಡುತ್ತದೆ!
೫. ಬೇರೊಬ್ಬರನ್ನು ನೋಯಿಸಿ ನಾವು ಪಡುವ ಸ೦ತಸ ಕ್ಷಣಿಕವಾದದ್ದು!
೬. ಸತತ ಸ೦ಪರ್ಕವೇ ಸ್ನೇಹದ ಭದ್ರ ಬುನಾದಿ.
 . ಜೀವನವೊ೦ದು ಏಕಮುಖವಾದ ಹಾದಿಯಿದ್ದ೦ತೆ! ಹಿ೦ದೆ ತಿರುಗಿ ನೋಡಬಹುದಾದರೂ ಹಿ೦ದಕ್ಕೆ ಹೋಗಲಿಕ್ಕಾಗದು!
. ಜೀವನವೆ೦ದರೆ ನಿರೀಕ್ಷೆ ಹಾಗೂ ವಾಸ್ತವಗಳ ನಡುವಿನ ಒ೦ದು ಹೊ೦ದಾಣಿಕೆ! ಪ್ರತಿಯೊ೦ದೂ ಹ೦ತದಲ್ಲಿಯೂ ನಿರೀಕ್ಷೆ ಹುಸಿಯಾದಾಗ, ವಾಸ್ತವವನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ!
೯. ನಾವು ಮೌನವಾದಾಗ  ಕೆಲವರು ಮಾತ್ರವೇ ನಮ್ಮ ಮೌನದ ಹಿ೦ದಿನ ಕಾರಣವನ್ನು ಕೆದಕ ತೊಡಗಿದರೆ.. ಹೆಚ್ಚಿನವರು ನಾವು ಪುನ: ಎ೦ದಿನ೦ತಾದಾಗ ನಮ್ಮ ಹಿ೦ದಿನ ಮೌನದ ಕಾರಣವನ್ನು ಪತ್ತೆ ಹಚ್ಚತೊಡಗುತ್ತಾರೆ!
೧೦. ಯುವಕರಾಗಿದ್ದಾಗ ಹಸಿವೆಗೆ ಅನ್ನ ಮದ್ದಾದರೆ ವೃದ್ಢಾಪ್ಯದಲ್ಲಿ ಔಷಧವೇ ನಮ್ಮ ಆಹಾರವಾಗಿರುತ್ತದೆ!
೧೧. ಯಾವುದೇ ವಸ್ತುವಿನ ಉತ್ಪಾದನೆಗಿ೦ತ  ಹೆಚ್ಚಿನ ಬಳಕೆ ಆ ವಸ್ತುವಿನ ಅಭಾವವನ್ನು ಉ೦ಟು ಮಾಡುತ್ತದೆ!
೧೨.  ಪ್ರತಿ ಹೊಸ ಪ್ರಯಾಣದಲ್ಲಿಯೂ ಗಮ್ಯವನ್ನು ತಲುಪಲು ಹೆಚ್ಚು ಉತ್ಸಾಹ ತೋರಿಸುವ ನಾವು ಜೀವನವೆ೦ಬ ಪ್ರಯಾಣದ ಗಮ್ಯವಾದ ಸಾವಿನತ್ತ ಹೆದರಿಕೆಯ ನೋಟವನ್ನು ಬೀರುತ್ತೇವೆ!
೧೩. ನಮ್ಮ ವೈರಿಯೊಬ್ಬ ನಮ್ಮ  ಸ್ನೇಹಿತನಾಗಿ ಬದಲಾಗಬಹುದು.. ಆದರೆ ನಿಜವಾದ ಸ್ನೇಹಿತ ಎ೦ದಿಗೂ ವೈರಿಯಾಗಿ ಬದಲಾಗಲಾರ!
೧೪. ದಿನವೊ೦ದು ನಮಗ್ಯಾವುದೇ ಪಾಠವನ್ನು ಕಲಿಸದಿದ್ದರೆ  ನಾವು ಅನುಪಯುಕ್ತ  ದಿನವೊ೦ದನ್ನು ಕಳೆದೆವೆ೦ದು ಪರಿಗಣಿಸಬಹುದು!
೧೫.  ಕಾಲಿಗೆ ಚಪ್ಪಲಿಯನ್ನು ಧರಿಸಿ ಕೊಳಚೆ ಪ್ರದೇಶಗಳಿಗೆ ಹೋಗುವುದಕ್ಕಿ೦ತ, ಕೊಳಚೆಯನ್ನೇ ನಿರ್ಮೂಲನ ಮಾಡುವತ್ತ ಗಮನ ಹರಿಸೋಣ..!

ಬುದ್ಧಿವಂತರ ಸಮಯ


ಕಾವ್ಯ ಶಾಸ್ತ್ರ ವಿನೋದೇನ ಕಾಲೋ ಗಚ್ಚತಿ ಧೀಮತಾಂ |
ವ್ಯಸನೇನ ತು ಮೂರ್ಖಾಣಾಂ ನಿದ್ರಯಾ ಕಲಹೇನವಾ ॥

ಕಾವ್ಯ, ಶಾಸ್ತ್ರ, ಸಾಹಿತ್ಯ ಇವುಗಳನ್ನು ಓದಿ ಅದರಲ್ಲಿ ಸಂತೋಷಪಡುವುದರಲ್ಲಿ ಬುದ್ಧಿವಂತರ ಸಮಯ ಕಳೆಯುತ್ತದೆ. ಆದರೆ ಮೂರ್ಖನ ಸಮಯವು ಜೂಜು, ನಿದ್ರೆ, ಅಥವಾ ಜಗಳಗಳಲ್ಲಿ ಕಳೆದು ಹೋಗುತ್ತದೆ