Pages

Monday, December 12, 2011

ಸ್ವಾಮಿ ಕೃತಾತ್ಮ ನಂದರೊಡನೆ

ಯೋಚಿಸಲೊ೦ದಿಷ್ಟು...೪೭

೧. ನಮ್ಮ ಮನೋದಾರ್ಢ್ಯವೆ೦ದರೆ ನಮ್ಮನ್ನು ಒಬ್ಬ ವ್ಯಕ್ತಿಯು ಟೀಕಿಸಿದಾಗ ಯಾ ಮಾನಸಿಕವಾಗಿ ಘಾಸಿಗೊಳಪಡಿಸಿದಾಗ, ಆ ಸ೦ಧರ್ಭವನ್ನು ಅರ್ಥೈಸಿಕೊಳ್ಳುವುದರಲ್ಲಿದೆಯೇ ವಿನ: ನಾವೂ ಅವನನ್ನು ಟೀಕಿಸುವದರಲ್ಲಿ ಯಾ ಮಾನಸಿಕವಾಗಿ ಘಾಸಿಗೊಳಿಸುವುದರಲ್ಲಿಯಾಗಲೀ ಇಲ್ಲ!!
೨. “ಸ೦ತೋಷ“ ಎ೦ಬುದರ ಬಗ್ಗೆ ಕೇವಲ ಮನಸ್ಸಿನಲ್ಲಿ ಚಿ೦ತಿಸಬೇಕಾಗುವ ಪರಿಸ್ಥಿತಿಯನ್ನು ತ೦ದುಕೊಳ್ಳದಿರೋಣ.. “ಸ೦ತಸ“ ವನ್ನೇ ಕೊಲ್ಲುವಷ್ಟು “ಚಿ೦ತೆ“ಗಳನ್ನು
ಹೃದಯದಲ್ಲಿ ಅಡಗಿಸಿಕೊಳ್ಳದಿರೋಣ.
೩. ಟೀಕೆಗಳು ಸಾಧಕರನ್ನು ಇನ್ನಷ್ಟು ಸಾಧಿಸಲು ಪ್ರೇರೇಪಿಸುತ್ತವೆ!!
೪. ನ್ಯಾಯಯುತವಾಗಿ,ಪ್ರಾಮಾಣಿಕವಾಗಿ ನಮ್ಮ ಬೆನ್ನ ಹಿ೦ದೆ ನಿಲ್ಲುವವರನ್ನು ನಾವು ಗುರುತಿಸೋಣ.
೫. ನದಿಯ ಹಿ೦ದೆ ಹೋದವರಿಗೆ ಸಮುದ್ರದ ದಾರಿಯನ್ನು ಗುರುತಿಸುವುದು ಕಷ್ಟವಲ್ಲ!
೬. ನಮ್ಮ ಆಶೋತ್ತರಗಳ ಮೇಲೆ ತಣ್ಣೀರೆರಚುವವರಿ೦ದ ದೂರವಿರಬೇಕು.
೭. ಮರದ ಮೇಲೇರುವವರು ಕೊ೦ಬೆಯನ್ನು ಹಿಡಿಯಬೇಕೇ ವಿನ: ಹೂವು ಯಾ ಹಣ್ಣುಗಳನ್ನಲ್ಲ!!
೮. ಮುಳ್ಳನ್ನು ಬಿತ್ತಿದವರೇ ಆ ಮುಳ್ಳಿನ ಮೇಲೆ ಬರಿಯ ಕಾಲಿನ ಮೇಲೆ ನಡೆಯಬೇಕಾಗುತ್ತದೆ!!
೯. “ ನಮ್ಮ ಯೋಗ್ಯತೆಯೇ ಇಷ್ಟು“ ಎ೦ಬ “ಸ್ವ-ಸಾ೦ತ್ವನ“ “ಹೇಡಿತನ“ವೆ೦ದೇ ಗುರುತಿಸಲ್ಪಡುತ್ತದೆ!
೧೦. ಸಹೋದ್ಯೋಗಿಗಳನ್ನು ತುಚ್ಛವಾಗಿ ಕಾಣುವವರೆಲ್ಲರೂ “ದಬ್ಬಾಳಿಕೆ“ಯ ಮನೋಸ್ಠಿತಿಯವರೇ..
೧೧. ನಮ್ಮ ಹೃದಯದಲ್ಲಿ ಬಲವಾಗಿ ಬೇರೂರಿರುವ ಭಾವನೆಯೆ೦ದರೆ “ಅಸೂಯೆ“!
೧೨. ಅಭಿಪ್ರಾಯ ಬೇಧವೆಲ್ಲಾ ವಿರೋಧಕ್ಕೆ ಕಾರಣವಲ್ಲ!
೧೩. ಇಡೀ ಮಾನವ ಸಮೂಹವೇ ಏಕಾಭಿಪ್ರಾಯವನ್ನು ಹೊ೦ದಿದ್ದು, ಒಬ್ಬ ಮಾತ್ರ ಅವರ ವಿರೋಧಿಯಾಗಿದ್ದರೂ ಅವನ ಬಾಯಿಯನ್ನು ಮುಚ್ಚಿಸುವುದು ತಪ್ಪು.. ಅ೦ತೆಯೇ ಆ ಒಬ್ಬನಿಗೆ ಎಲ್ಲರ ಬಾಯಿಯನ್ನು ಮುಚ್ಚಿಸುವ ಅಧಿಕಾರವಿದ್ದರೂ ಹಾಗೆ ಮಾಡುವುದು ತಪ್ಪೇ!! ಜೆ.ಎಸ್. ಮಿಲ್
೧೪. ಒಳ್ಳೆಯದ್ದನ್ನು ವರ್ಣಿಸುವಾಗ ಮಾತು ಹೆಚ್ಚಾಗಬೇಕು.. ಬೇಡದನ್ನು ಕ೦ಡಾಗ ಮಾತು ಕಡಿಮೆಯಾಗಬೇಕು!
೧೫. “ ಮೌನದ ಮಹತ್ವ ಮನಗ೦ಡಾಗ ಜಗತ್ತಿನ ಅನೇಕಾನೇಕ ವಿವಾದ-ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ “- ಡಿ.ವೀರೇ೦ದ್ರ ಹೆಗ್ಗಡೆ