Pages

Saturday, August 25, 2012

"ಅಹಂ"ಮತ್ತು "ದುರಹಂಕಾರ"

ಶುದ್ಧ ಅರಿವು ಎಲ್ಲಿ ಇರುತ್ತದೋ ಅಲ್ಲಿ ದುರಹಂಕಾರ ಇರುವುದಿಲ್ಲ.ಅಜ್ಞಾನ ಇರುವಲ್ಲಿ ಮಾತ್ರ ದುರಹಂಕಾರ ಇರುತ್ತದೆ.ಅಹಂಕಾರ ಇನ್ನೊದು ಅರ್ಥದಲ್ಲಿ ಲೌಕಿಕ ಅನುಭೂತಿ ಎಂತಲೂ ಆಗುತ್ತದೆ. ಅದರಲ್ಲೇ ಮುಳುಗಿ ಅದೇ ಸತ್ಯವೆಂಬ ತೀವ್ರವಾದ ನಂಬಿಕೆಯೇ ದುರ-ಅಹಂಕಾರ ಯೆನ್ನಲ್ಪಡುವುವುದು.ಅಲ್ಲಿ ಯಾವುದೇ ಬೇರೆಯ ಅಸ್ತಿತ್ವದ ಬಗ್ಗೆ ವಿಚಾರವಿಲ್ಲದಂತೆ ಕಡಿವಾಣ ಹಾಕಿಕೊಂಡಿರಲಾಗುತ್ತದೆ ಮನಸ್ಸು ಬೇರೆಯದಕ್ಕೆ ತೆರೆದಿರುವುದಿಲ್ಲ. ತಾನು ನಂಬಿರುವುದೇ ಸತ್ಯ ಎಂಬ ಪ್ರಭಲವಾದ ನಂಬಿಕೆಯೇ ದುರ-ಅಹಂಕಾರ ಎಂದು ಕರೆಯಲ್ಪಟ್ಟಿದೆ. 

"ಬದುಕಿನುದ್ದಕ್ಕೂ ಜಂಜಾಟ"

ಬದುಕಿನುದ್ದಕ್ಕೂ ಜಂಜಾಟ ಎನ್ನುವುದು ನಮ್ಮ ಭಾವನೆಗಳಿಗೆ ಸಂಬಂಧಪಟ್ಟದ್ದು.ಇನ್ನು ಬದುಕಬೇಕು ಎನ್ನುವುದು, ಮನಸ್ಸಿನ ಭಾವ. ಎಂಥಹ ಕುರುಡರು, ಕುಂಟರೂ, ಅಂಗವಿಕಲರು, ರೋಗಿಗಳೂ, ಕೂಡ ಬದುಕಬೇಕು ಎಂದು ಬಯಸುವುದು ಅದೇ ಭಾವದಿಂದಾ ಆಗಿರುತ್ತದೆ. ವೈರಾಗ್ಯ ಎನ್ನುವುದು ಬುದ್ಧಿಯ ಭಾವ.ಜೀವ ಎನ್ನುವುದು ವಿಧಿಯ ಸಂಕಲ್ಪ "ವಿಧಿ" ಎಂದರೆ "ಪರಮಾತ್ಮ" ಅಥವ ಪ್ರಕೃತಿ ನಿಯಮ ಎಂದು ಬೇಕಾದರೂ ಕರೆಯಬಹುದು. 

ರಾಜ ಧರ್ಮ.

ನ್ಯಾಯೇನಾರ್ಜನಮರ್ಥಸ್ಯ ವರ್ಧನಂ ಪಾಲನಂ ತಥಾ ।
ಸತ್ಪಾತ್ರೇ ಪ್ರತಿಪತ್ತಿಶ್ಚ ರಾಜವೃತ್ತಂ ಚತುರ್ವಿಧಮ್ ॥

ನ್ಯಾಯವಾದ ಮಾರ್ಗದಲ್ಲಿ ಹಣಸಂಪಾದಿಸುವುದು, ಸಂಪಾದಿಸಿದ ಹಣವನ್ನು ವರ್ಧಿಸುವುದು, ವರ್ಧಿಸಿದ ಹಣವನ್ನು ಕಾಪಾಡುವುದು, ಹಾಗೆಯೆ ರಾಜ್ಯನಿರ್ವಹಣೆಗೆ ಅರ್ಹರಾದವರಲ್ಲಿ ಆ ಹಣವನ್ನು ಕೊಡುವುದು. ಇವು ನಾಲ್ಕು ರಾಜನು ನಿರ್ವಹಿಸಬೇಕಾದ ಧರ್ಮ. 

ಪಂಡಿತ್ ಜಿ ಬಗ್ಗೆ ಅಮೆರಿಕರ ಒಲವುಇಲ್ಲಿ ನೋಡಿ ಅಮೆರಿಕೆಯ ವ್ಯಕ್ತಿ ಡಾ.ಜೆಸ್ಸೀ ಪಂಡಿತ್ ಸುಧಾಕರ ಚತುರ್ವೇದಿಯವರ ಫೋಟೋ ವನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ವೇದಸುಧೆಯ ಪರಿಚಯ ಮಾಡಿಕೊಂಡ ಡಾ.ಜೆಸ್ಸೀ ವೇದಸುಧೆಯನ್ನು ಸಂಪರ್ಕಿಸಿ ನನ್ನೊಡನೆ ಶ್ರೀ ಸುಧಾಕರ್ ಶರ್ಮ ಮತ್ತು ಚತುರ್ವೇದಿಯವರನ್ನು ಭೇಟಿ ಮಾಡಿದ್ದರು. ವೇದಸುಧೆಯೊಡನೆ ಸದಾ ಸಂಪರ್ಕದಲ್ಲಿರುವ ಡಾ.ಜೆಸ್ಸೀ ಇಲ್ಲಿನ ಹಲವು ಆಡಿಯೋಗಳನ್ನು ಕೇಳಿಸಿಕೊಂಡು ತಮ್ಮ ಬೆಂಗಳೂರಿನ ಶಿಷ್ಯೆ ಯಿಂದ ಅರ್ಥವನ್ನು ತಿಳಿದುಕೊಳ್ಳುತ್ತಾರೆ.

Jessie Mercay
February 6 via mobile 
121 year old vedic scholar.

This is a photo of an amazing vedic scholar whom i met in Bangalore India. He has memorized the content and meaning of all the vedas. He says that the vedas are not written on sanskrit. They were written in a special language he calls vedic language from which sanskrit was derived. I would ask him to recite a specific verse at random and he could without a pause. Christina Brennon is with me.
 — with Christina Brennan.