Pages

Sunday, June 17, 2012

सुभाषितानि

१.
"गौरवं प्राप्यते दानात् न तु वित्तस्य सञ्चयात् !
 स्थितिरुच्चै: पयोदानां पयोधीनामधः स्थिति:!!"


"ಗೌರವವು ದಾನದಿಂದ ಪ್ರಾಪ್ತವಾಗುವುದೇ ಹೊರತು ಕೂಡಿಟ್ಟುಕೊಳ್ಳುವುದರಿಂದ ಅಲ್ಲ, ಹೇಗೆಂದರೆ ಮೋಡವು ನೀರನ್ನೆಲ್ಲ ಭುವಿಗೆ ಸುರಿಸುವುದರಿಂದ ಅದಕ್ಕೆ ಮೇಲಿನ (ಉಚ್ಛ) ಸ್ಥಾನವಿದೆ, ಸಮುದ್ರವು ನೀರನ್ನ ತನ್ನಲ್ಲೇ ಸಂಗೃಹಿಸಿ ಇಟ್ಟುಕೊಳ್ಳುವುದರಿಂದ ಅದಕ್ಕೆ ಕೆಳಗಿನ (ನೀಚ) ಸ್ಥಾನವಿದೆ."

ಯಾವತ್ತೂ ಕೂಡ ದಾನದಿಂದ ನಮಗೆ ಉಚ್ಛ ಸ್ಥಾನ ಪ್ರಾಪ್ತವಾಗುವುದು, ಇಲ್ಲದಿದ್ದರೆ ಎಂದಿಗೂ ನಾವು ಕೆಳಗೆ ಉಳಿಯುವೆವು,ಇದರ ಅರ್ಥ ಎಲ್ಲವನ್ನೂ ದಾನ ಮಾಡಬೇಕೆಂದು ಅಲ್ಲ,ಆದರೆ ನಾವು ಉಪಯೋಗಿಸದೆ ಪರರಿಗೂ ನೀಡದೆ ಇರುವುದು ಸರಿಯಲ್ಲ.