ಕಳೆದ ಕೆಲವಾರು ತಿಂಗಳುಗಳಿಂದ ಕೆಲಸಗಳ ಒತ್ತಡವೂ ಒಂದು ಕಾರಣವಿರಬಹುದು, ಅಂತೂ ಆರೋಗ್ಯ ಅಷ್ಟು ಚೆನ್ನಾಗಿಲ್ಲ. ಹಾಗಾಗಿ ನನ್ನ ವೇದಸುಧೆ ತಾಣವನ್ನು ಅಪ್ ಡೇಟ್ ಮಾಡಲು ಸಾಧ್ಯವಾಗಿಲ್ಲ . ಈಗ ತಾಣವನ್ನು ರಿನ್ಯೂ ಮಾಡುವ ಸಮಯ ಬಂದಿದೆ. ಒಮ್ಮೆ ಹೀಗೇ ಯೋಚಿಸಿದೆ " ಯಾಕಾಗಿ ಇಷ್ಟೆಲ್ಲಾ ಕಷ್ಟಪಡಬೇಕು?" ಜನರಿಗೆ ವೇದದಲ್ಲಿ ಆಸಕ್ತಿ ಕಡಿಮೆ. ನನ್ನ ಶ್ರಮಕ್ಕೆ ತಕ್ಕಂತೆ ಓದುಗರು ಇದ್ದರೆ, ಅದರ ಪ್ರಯೋಜನ ವಾದರೆ, ಪರವಾಗಿಲ್ಲ, ಇಲ್ಲವಾದರೆ! ವೇಸ್ಟ್ ಅಲ್ಲವೇ? ಎಂದು ಯೋಚಿಸುತ್ತಿರುವಾಗಲೇ ಉಡುಪಿಯ ಸಮೀಪದ ಹೊನ್ನಾಳದ ನವೀನ್ ಎಂಬ ಯುವಕನೊಬ್ಬ ಅದ್ಭುತವಾದ ಪತ್ರ ಒಂದನ್ನು ಬರೆದಿದ್ದಾನೆ. ಅದನ್ನು ನೋಡಿದ ಮೇಲೆ ಸಾವಿರ ಜನರು ಓದಿದರೆ ಆಗುವಷ್ಟು ಸಮಾಧಾನವಾಯ್ತು. ಹಾಗಾಗಿ ಜವಾಬ್ಧಾರಿ ಇನ್ನೂ ಹೆಚ್ಚಾಯ್ತು,ಎನಿಸಿತು.ಇನ್ನು ಸುಮ್ಮನಿರಲು ಸಾಧ್ಯವೇ! ಆ ತರುಣನ ಪತ್ರವನ್ನು ನೀವೂ ಓದಿ.
Naveen Honnala
ಶ್ರೀ ಶ್ರೀಧರ್ ಜಿ,
ನಾನು ಹೆಚ್ಚು ಕಡಿಮೆ ಎಲ್ಲಾ ಆಡಿಯೋಗಳನ್ನು ಕೇಳಿ ಆಗಿದೆ. ಬ್ಲಾಗ್ ನಲ್ಲಿ ಡೌನ್ ಲೋಡ್ ಆಗಬಹುದಾದಂತ ಎಲ್ಲಾ ಆಡಿಯೋಗಳನ್ನು ನಾನು save ಮಾಡಿಕೊಂಡಿರುತ್ತೇನೆ ಮತ್ತು ನನಗೆ ಪ್ರಶ್ನೆಗಳು ಮೂಡಿದಾಗ ಅದನ್ನು ಪುನಹ ಕೇಳುತ್ತಿರುತ್ತೇನೆ. ನನ್ನ ಗೆಳೆಯರಿಗೂ vedasudhe blog ಬಗ್ಗೆ ತಿಳಿಸಿದ್ದೇನೆ ಮತ್ತು ನನ್ನಲ್ಲಿರುವ ಆಡಿಯೋಗಳನ್ನು ನೀಡಿರುತ್ತೇನೆ. ಸುಧಾಕರ ಶರ್ಮರ ಮಾತುಗಳಿಂದ ಅನೇಕ ಗೊಂದಲಗಳ ಪರಿಹಾರವಾಗಿವೆ.
ಸುಮಾರು ಒಂದು ವರ್ಷದ ಹಿಂದೆ ಕುಟುಂಬದಲ್ಲಿ ಸಮಸ್ಯೆಗಳ ಸರಮಾಲೆಯೇ ಎದುರುಗೊಂಡಿತ್ತು. ಭಗವದ್ಗೀತೆಯಿಂದಲೂ ಉತ್ತರ ಸಿಕ್ಕಿರಲಿಲ್ಲ. ಹೀಗೆ ತಡಕಾಡುತ್ತಿರುವಾಗ ನಿಮ್ಮ blog ನ್ನು ಪ್ರವೇಶಿಸಿದೆ. ಅಲ್ಲಿಂದ ನನ್ನ ಜೀವನದಲ್ಲೇ ಹೊಸ ಬದಲಾವಣೆ ಉಂಟಾಗಿದೆ. ಮನೆಯ ಎಲ್ಲಾ ಸಮಸ್ಯೆಗಳನ್ನು ಖುದ್ದು ನಾನೇ ನಿಂತು ಪರಿಹರಿಸಿದೆ, ವಯಸ್ಸಿನಲ್ಲಿ ಚಿಕ್ಕವನಾದರೂ ಎಲ್ಲರೂ ನನ್ನ ಮಾತು ಕೇಳುವಂತೆ ಮಾಡಲು, ವೇದಸುಧೆ ಮತ್ತು ಸುಧಾಕರ ಶರ್ಮರ ಕೃಪೆಯಿಂದ ಸಾಧ್ಯವಾಯಿತು. ತುಂಬಾ ದಿನಗಳಿಂದ ಶರ್ಮರವರ ಆಡಿಯೋ ಸಿಗುತ್ತಿಲ್ಲ. ಹಿಂದನ್ನದೆಲ್ಲವನ್ನು ಕೇಳಿರುತ್ತೇನೆ. ಅದಕ್ಕಾಗಿಯೇ ಪುಸ್ತಕವನ್ನು ಕೇಳಿದ್ದು. ಶರ್ಮರ ಪುಸ್ತಕ ಲಭ್ಯವಿಲ್ಲದ ಪಕ್ಷದಲ್ಲಿ ನಿಮ್ಮ ವೇದಸುಧೆಯ ವಾರಪತ್ರಿಕೆ, ಮಾಸಪತ್ರಿಕೆ ಅಥವಾ ಇನ್ನಿತರ ಯಾವುದೇ ಪುಸ್ತಕ ಕಳುಹಿಸಿ ಕೊಡಿ. ನಾನು ಚಂದಾಧಾರನಾಗ ಬಯಸುತ್ತೇನೆ. ಆರ್ಥಿಕವಾಗಿ ಮನೆಯವರು ಹೆಚ್ಚಾಗಿ ನನ್ನನ್ನು ಅವಲಂಬಿಸಿರುವುದರಿಂದ ಮತ್ತು ಕೆಲಸದಲ್ಲಿ ಹೆಚ್ಚಿನ ಒತ್ತಡ ಇರುವುದರಿಂದ ರಜೆ ಹಾಕಿ ಬರಲು ಸ್ವಲ್ಪ ಕಷ್ಟ ಸಾಧ್ಯ. ದಯವಿಟ್ಟು ಈ ಬಗ್ಗೆ ಸ್ವಲ್ಪ ವಿಶೆಷವಾಗಿ ಗಮನಹರಿಸಿ. ನನ್ನ ಸಮಸ್ಯೆಗಳ ಒತ್ತಡ ಸ್ವಲ್ಪ ಕಡಿಮಿಯಾದ ಕೂಡಲೇ ನಾನು ಹಾಸನಕ್ಕೆ ಬಂದು ಶಿಬಿರದಲ್ಲಿ ಪಾಲ್ಗೊಳ್ಳುವ ಬಯಕೆ ಹೊಂದಿರುತ್ತೇನೆ. ಕುಳಿತ ಸ್ಥಳದಲ್ಲೇ ವೇದ ಜ್ಞಾನವನ್ನು ನೀಡಿ ಬದುಕಿನ ದಾರಿ ಕಂಡು ಕೊಳ್ಳುವಲ್ಲಿ ಸಹಾಯ ಮಾಡಿದ ವೇದಸುಧೆಗೆ ನನ್ನ ನಮನ.