Pages

Wednesday, July 21, 2010

ವೇದೋಕ್ತ ಜೀವನ ಪಥ

ವೇದೋಕ್ತ ಜೀವನ ಪಥ
ಜೀವನ ಬುನಾದಿ - 7

ಶಾಸ್ತ್ರೀಯ ಔದಾರ್ಯ ಇದಕ್ಕಿಂತ ಮುಂದೆ ಹೋಗಲಾರದು. ವೇದಗಳು ಜ್ಞಾನಮಯ ತಾನೇ? ಜ್ಞಾನಮಾರ್ಗದಲ್ಲಿ ಅಂಧವಿಶ್ವಾಸಕ್ಕೆ, ಕುರುಡು ನಂಬಿಕೆಗೆ ಎಡೆಯೆಲ್ಲಿ? ಸತ್ಯವೇ ನಿಮ್ಮ ಶಕ್ತಿ, ಅದರ ನೆರವಿಂದಲೇ ಸತ್ಯಾನ್ವೇಷಣಕ್ಕೆ ಮುಂದಣ ಹೆಜ್ಜೆಯಿಡಿರ ಎಂದು ಕರೆ ಕೊಡುತ್ತದೆ ಋಗ್ವೇದ:
ಯೂಯಂ ತತ್ ಸತ್ಯಶವಸ ಆವಿಷ್ಕರ್ತ ಮಹಿತ್ವನಾ| ವಿಧ್ಯತಾ ವಿದ್ಯುತಾ ರಕ್ಷಃ|| (ಋಕ್.1.86.9)
[ಸತ್ಯಶವಸಃ] ಸತ್ಯವನ್ನೇ ಶಕ್ತಿಯಾಗಿ ಹೊಂದಿರುವ ಧೀರರೇ! ಸತ್ಯವಾದ ಶಕ್ತಿಯಿಂದಲೇ ವಿರಾಜಿಸುವ ಧನ್ಯ ಜೀವರೇ! [ಯೂಯಂ] ನೀವು, [ಮಹಿತ್ವನಾ] ನಿಮ್ಮ ಸ್ವಂತ ಮಹಿಮೆಯಿಂದಲೇ [ತತ್ ಆವಿಷ್ಕರ್ತ] ಆ ಸತ್ಯವನ್ನು ಆವಿಷ್ಕರಿಸಿರಿ, ಬೆಳಕಿಗೆ ತನ್ನಿರಿ. [ರಕ್ಷಃ] ದುಷ್ಕಾಮನೆಯನ್ನು [ವಿದ್ಯುತಾ] ನಿಮ್ಮ ಜ್ಞಾನಜ್ಯೋತಿಯಿಂದ [ವಿಧ್ಯತ] ಸೀಳಿಹಾಕಿರಿ. ಒಂದೊಂದು ಮಾತಿನಲ್ಲಿಯೂ ಸ್ಫೂರ್ತಿ ಉಕ್ಕಿ ಬರುತ್ತದೆ. ಹೌದು, ಅಜ್ಞಾನದ ಅಂಧಕಾರ ಕವಿದಿರುವವರೆಗೆ, ಆತ್ಮವನ್ನು ಕುಕ್ಕಿ ತಿನ್ನುವ ರಾಕ್ಷಸೀ ಭಾವನೆ ದೂರವಾಗಲಾರದು.

ಸಾಧನೆಯ ಹಾದಿಯಲ್ಲಿ.....

ಅರಿತು ಬಾಳುವಾಗಲೇ ಹೆಜ್ಜೆ ಹೆಜ್ಜೆಯಲೂ ಆಪತ್ತು!
ಅದನೆದುರಿಸಿ ನಡೆವಲ್ಲಿಯೇ ಇದೆ ನೆಮ್ಮದಿಯ ಗುಟ್ಟು!

ಒಮ್ಮೆ ಜಾರಿ ಬಿದ್ದರೇನು?
ನಡೆಯಲಿ ಹತ್ತಾರು ಬಾರಿ ಮೇಲೇಳಲು ಪ್ರಯತ್ನ!

ನಿಮ್ಮ ಸಮಯ ನಿಮ್ಮಲ್ಲಿಯೇ ಇದೆ!
ಸಮಯವಿದೆಯೆ೦ದು ಮಾಡಿದರೆ ನಿಧಾನ!
ಆಗುವುದು ಬಾಳೂ ಸಾವಧಾನ!

ಸೋಮಾರಿತನವೆ೦ಬುದು ಶಾಪ !
ಇರಲಿ ಚುರುಕು- ನೆನಪಿರಲಿ,
ಅತಿವೇಗವೇ ಅಪಘಾತಕ್ಕೆ ಕಾರಣ!

ನಿಮ್ಮದೇ ದಾರಿ ಬೇರೆ೦ಬ ಗೊ೦ದಲ ಬೇಡ!
ಬಿದ್ದರೆ ಮೇಲೆತ್ತಲಾರೂ ಇಲ್ಲವೆ೦ಬ ಅನುಮಾನವೂ ಬೇಡ!
ನಿಮ್ಮ ಬೆನ್ನ ಹಿ೦ದಿದೆ ನಿಮ್ಮ ಪ್ರಯತ್ನದ ಜೇಡ!

ಬಿದ್ದರೆ ನೀವೇ ಏಳುವಿರಿ! ಮೇಲೆದ್ದು ಮತ್ತೆ ನಡೆಯುವಿರಿ!
ಅ೦ಜಿಕೆ ಬೇಡ. ಸಾಧನೆಯ ಹಾದಿಯಲ್ಲೆ೦ದಿಗೂ
ಉಲ್ಲಾಸದ ಹೆಜ್ಜೆಗಳಿರಲಿ! ಆಪತ್ತು ಬರದಿರದು!
ಅದನೆದುರಿಸುವ ಸ್ಥೈರ್ಯವೊ೦ದಿರಲಿ!

ಕಾಲ ನಡೆಸುತ್ತದೆ ನಿಮ್ಮನ್ನು!
ಹೆಚ್ಚೆಚ್ಚು ಅನುಭವಗಳ ಬುತ್ತಿಯೊ೦ದಿಗೆ!
ಸಾಧಿಸಿದ ನ೦ತರದ ದಿನವೆಲ್ಲಾ ನಗುವಿನ ಬುಗ್ಗೆಯೊ೦ದಿಗೆ!