Pages

Saturday, May 30, 2015

ವೇದ ಚಿಂತನಗೋಷ್ಠಿ:

ವಿಶೇಷ ಅಗ್ನಿಹೋತ್ರ :
 ವೇದಭಾರತಿಯ ಸದಸ್ಯರಿಂದ

ವೇದ ಚಿಂತನಗೋಷ್ಠಿ:
 ವೇದಾಧ್ಯಾಯೀ ಶ್ರೀ ಸುಧಾಕರಶರ್ಮರಿಂದ

ಸ್ಥಳ: ವಂದೇಮಾತರಮ್ ಹೋಟೆಲಿನ ಕಾನ್ಫೆರೆನ್ಸ್ ಹಾಲ್, ಇಸ್ಕಾನ್ ಸಮೀಪ, ರಾಜಾಜಿ ನಗರ,  ಬೆಂಗಳೂರು

ಸಮಯ : 31.5.2015 ಭಾನುವಾರ ಬೆಳಿಗ್ಗೆ 9.30 ರಿಂದ ನಧ್ಯಾಹ್ನ 4.00 ರ ವರಗೆ

 ಸಂಜೆ 5.00 ಕ್ಕೆ :  ಪಂಡಿತ್ ಸುಧಾಕರಚತುರ್ವೇದಿಗಳ ಭೇಟಿ-ಅವರ ಮನೆಯಲ್ಲಿ

ಹೆಚ್ಚಿನ ಮಾಹಿತಿ ಪಡೆಯಲು -ಹರಿಹರಪುರಶ್ರೀಧರ್, ಸಂಯೋಜಕ, ವೇದಭಾರತೀ, ಹಾಸನ 

ಮೊಬೈಲ್:  9663572406 ಸಂಪರ್ಕಿಸಿ

                                                   

Monday, May 18, 2015

ವಿಶ್ವ ಯೋಗದಿನ
ಯೋಗೇನ ಚಿತ್ತಸ್ಯ ಪದೇನವಾಚಾಂ ಮಲಂ ಶರೀರಸ್ಯ ಚ ವೈದ್ಯಕೇನ |
yogena chittasya, padena vachan malam sharirasya cha vaidyakena | योगेन चित्तस्य, पदेन वाचां मलं शरीरस्य च वैद्यकेन । yogena cittasya, padena vācāṁ malaṁ śarīrasya ca vaidyakena | Through Yoga the Chitta, through grammar the language, and through medicine the physical body | yogena (योगेन, yogena) = (instr. sg.) through Yoga chittasya (चित्तस्य, cittasya) = (gen. sg.) the Chitta; Chitta is everything variable of humans: Thoughts, Emotions, physical body padena (पदेन, padena) = (instr. sg.) through Grammar vacham (वाचां, vācāṁ) = (gen. sg.) the Language malam (मलं, malaṁ) = Evil, Illnesses sharirasya (शरीरस्य, śarīrasya) = (gen. sg.) of the body, the human’s shell cha (च, ca) = and vaidyakena (वैद्यकेन, vaidyakena) = (instr. sg.) through Medicine yo'pakarot tam pravaram muninan patanjalim pranjalir anato'smi ||

ಯೋಪಾಕರೋತ್ತಮ್ ಪ್ರವರಂ ಮುನೀನಾಂ ಪತಂಜಲಿಂ ಪ್ರಾಂಜಲಿರಾನತೋಸ್ಮಿ

योऽपाकरोत् तं प्रवरं मुनीनां पतञ्जलिं प्राञ्जलिर् आनतोऽस्मि ॥ yo'pākarot taṁ pravaraṁ munīnāṁ patañjaliṁ prāñjalir ānato'smi || who among all those Sages handed this over I respectfully bow to Patanjali. yah (यः, yaḥ) = (pronomen: nom. sg. m.) who apakarot (अपाकरोत्, apākarot) = (impf.) handed over tam (तं, taṁ) = this pravaram (प्रवरं, pravaraṁ) = (gen. pl.) in the group of the, among muninam (मुनीनां, munīnāṁ) = (gen. pl.) the Sages, Wise men patanjalim (पतञ्जलिं, patañjaliṁ) = (akk. sg.) Patanjali pranjalih (प्रञ्जलिः, prañjaliḥ) = worship, the hands closed to the salutation anatah (आनतः, ānataḥ) = bowed asmi (अस्मि, asmi) = (1.pers. sig.) I am abahu purushakaran shankhachakrasi dharinam | आबाहु पुरुषाकारं शङ्खचक्रासि धारिणम् । ābāhu puruṣākāraṁ śaṅkhacakrāsi dhāriṇam | The upper body of human shape, carrying a mussel horn (original tone), a discus (infinity) and a sword (power of differentiation) abahu (आबाहु, ābāhu) = upper body purusha (पुरुष, puruṣa) = (m.) human being, man, soul akaram (आकारम्, ākāram) = (acc. of akara (आकर, ākara)) shape, appearance, form shhankha (श्हङ्ख, śhaṅkha) = (acc.) mussel horn. The horn symbolises the tone ँौं that is considered to be the original tone and the basis of all that is. chakra (चक्र, cakra) = (acc.) Wheel, Discus. The Chakra represents infinity asi (असि, asi) = (acc.) Sword, because sword represents the power of differentiation. Not applicable here: you are (2. pers. sg.), because of the word order dharinam (धारिणम्, dhāriṇam) = holding, carrying sahasra shirasam shvetan pranamami patanjalim || सहस्र शिरसं श्वेतं प्रणमामि पतञ्जलिम् ॥ sahasra śirasaṁ śvetaṁ praṇamāmi patañjalim || having 1000 bright heads, I bow to Patanjali. sahasra (सहस्र, sahasra) = 1000 shirasam (शिरसं, śirasaṁ) = (akk. sg.) Head shvetam (श्वेतं, śvetaṁ) = (akk. sg.) white, bright pranamami (प्रणमामि, praṇamāmi) = (1. pers. sg.) I bow patanjalim (पतञ्जलिम्, patañjalim) = (akk. sg.) to Patanjali, the Author of the Yoga-Sutra. This work is considered to be one of the most important philosophical basis' of Ashtanga-Vinyasa-Yoga

HEALING AMAZING MIND POWER ::: OM (AUM) CHANTING MANTRA

Yoga Sutra Chant-Srivatsa Ramaswami

Wednesday, May 13, 2015

ಶರ್ಮರಿಗೆ ನಿಮ್ಮ ಪ್ರಶ್ನೆ

ಯಾವುದೇ ವಿಚಾರಗಳ ಬಗ್ಗೆ ಚಿಂತನ-ಮಂಥನ ನಡೆಸಿದಾಗ ಅದರಲ್ಲಿ ಪಾಲ್ಗೊಂಡಿದ್ದವರಲ್ಲಿ ಒಬ್ಬಿಬ್ಬರು    ತಮ್ಮ ಅಭಿಪ್ರಾಯಗಳನ್ನು ಬದಲಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ ಉಳಿದ ಸಮಾಜಕ್ಕೆ ಈ ವಿಚಾರಗಳು ಮುಂಚೆ ಹೇಗಿತ್ತೋ ಈಗಲೂ ಹಾಗೆಯೇ ಇರುತ್ತದೆ. ಉಧಾಹರಣೆಗೆ ನನ್ನ ವಿಚಾರದಲ್ಲಿ ಹೇಳಬೇಕೆಂದರೆ ಸುಮಾರು ಹತ್ತು ವರ್ಷಗಳು ಸುಧಾಕರಶರ್ಮರೊಡನೆ ನಡೆಸಿದ ಮಾತುಕತೆಯಿಂದ ನನ್ನ ವಿಚಾರಗಳಲ್ಲಿ ಕೆಲವು ಬದಲಾಗಿವೆ. ಬಹುಪಾಲು ಮುಂಚಿನಂತೆಯೇ ಇವೆ. ಆದರೆ ಹತ್ತು ವರ್ಷಗಳ   ಹಿಂದೆ  ಈ ವಿಚಾರಗಳು ಸಮಾಜದಲ್ಲಿ ಹೇಗಿತ್ತೋ ಈಗಲೂ ಹಾಗೆಯೇ ಇದೆ.  ವಿದ್ಯಾವಂತರಲ್ಲಿ ಮೌಢ್ಯ ಹೆಚ್ಚಾಗಿದೆ,. ಅದಕ್ಕೆ ಉಧಾಹರಣೆಗಳನ್ನು ನಿತ್ಯವೂ ಟಿ.ವಿ ಚಾನಲ್ ಗಳಲ್ಲಿ ನೋಡಬಹುದು. ಇರಲಿ. ಇಷ್ಟೆಲ್ಲಾ ಯಾಕೆ ಹೇಳುತ್ತಿದ್ದೀನೆಂದರೆ ಸುಧಾಕರಶರ್ಮರಿಂದ ಒಂದು ಚಿಂತನ ಗೋಷ್ಠಿಯನ್ನು ಮೇ 31 ರಂದು ಬೆಂಗಳೂರಿನಲ್ಲಿ  ಹಾಸನ ವೇದಭಾರತಿಯು ಆಯೋಜಿಸಿರುವ ವಿಷಯವು ನಿಮ್ಮ ಗಮನಕಕ್ಕೆ ಬಂದಿರಬಹುದು. ಇದುವರೆವಿಗೆ ಆ ಬಗ್ಗೆ ವಿಚಾರ ಮಾಡಿದ್ದರಲ್ಲಿ ನನಗೆ ತಿಳಿದ ಅಂಶವೆಂದರೆ 98% ಜನರಿಗೆ ಹೊರಗೆ ಬರುವ ಇಚ್ಚೆ ಇಲ್ಲ. face book ನಲ್ಲಿ ಹಾಕಿದರೆ ನೋಡಲು ತಮ್ಮ ಕಾಮೆಂಟ್ ಹಾಕಲು ತಯಾರ್. ಹಾಗಾಗಿ ಅಂದಿನ ಗೋಷ್ಠಿಯಲ್ಲಿ ಚರ್ಚೆ ನಡೆಸಲು ನಿಮ್ಮಿಂದಲೇ ವಿಷಯಗಳನ್ನು ಆಹ್ವಾನಿಸಿದರೆ ಸೂಕ್ತವೆಂದು ನನ್ನ ಭಾವನೆ. ನಿಮ್ಮ ಪ್ರಶ್ನೆಗಳನ್ನು ಶರ್ಮರಿಗೆ ಈ ಮೂಲಕವೇ ಕೇಳುವಿರಾ? ಕೇಳುವುದಕ್ಕೆ ಮುಂಚೆ ನನ್ನದೊಂದು ಮನವಿ. ವಿಗ್ರಹಾರಾದನೆ ನೀವು ಒಪ್ಪುತ್ತೀರಾ? ಒಪ್ಪದಿದ್ದರೆ ಅದಕ್ಕೆ ವೇದದ ಆಧಾರ ಕೊಡಿ- ಇಂತಾ ಪ್ರಶ್ನೆಗಳು ಬೇಡ. ನಮ್ಮ ಅಂದಿನ ಚರ್ಚೆಯಲ್ಲಿ ವಿಗ್ರಹಾರಾಧನೆ ವಿಚಾರ ಚರ್ಚೆ ಬೇಡ. ಆವಿಚಾರ ಬಂದರೆ ಇಡೀ ದಿನ ಅದೇ ಸಮಯವನ್ನು ನುಂಗಿಹಾಕುತ್ತದೆ. ಅದಕ್ಕೆ ಹೊರತಾಗಿ........

1. ಹುಟ್ಟು-ಸಾವು
2. ಆತ್ಮೋನ್ನತಿ
3. ಶ್ರಾದ್ಧ ಕರ್ಮಗಳು
4. ಪಾಪ-ಪುಣ್ಯ
5. ಆರೋಗ್ಯ
6. ಭೂತ-ಪ್ರೇತ ಇದೆಯೇ?
7. ಕರ್ಮಫಲ

ಈ ವಿಚಾರಗಳನ್ನೊಳಗೊಂಡಂತೆ  ನಿಮ್ಮ ಹೆಸರು-ಫೋನ್ ನಂಬರ್-ಊರು  ವಿವರಗಳೊಂದಿಗೆ ಪ್ರಶ್ನೆಗಳನ್ನು ಕೇಳುವಿರಾ?

ನಿಮ್ಮ ಪ್ರಶ್ನೆಗಳನ್ನು ಇಲ್ಲೂ ಬರೆಯಬಹುದು. ಅಥವಾ    vedasudhe@gmail.com ಗೆ ಮೇಲ್ ಮಾಡಬಹುದು.

ಆದರೆ ನೀವೇ ಹಾಜರಾದಾಗ ಶರ್ಮರ ಮಾತಿಗೆ ನೀವು ಮರು ಪ್ರಶ್ನೆ ಹಾಕಲು ಅವಕಾಶ ಇರುತ್ತೆ.ಅಲ್ಲವೇ?
-----------------------------------------------------------------------------------------------

ಪ್ರಶ್ನೆ-1
Raveesh Karnur ಮುಕ್ತವಾಗುವುದು,ಅಥವಾ ಮೋಕ್ಷ ಹಿಂದು ಚಿಂತನೆಯ ಪ್ರಕಾರ ಅಂತಿಮ ಗಮ್ಯ.ಸ್ವರ್ಗ,ನರಕ,ಕೈಲಾಸ,ವೈಕುಂಠ ಅಲ್ಲ.ಯಾಕೆಂದರೆ ಅಲ್ಲಿನ ಅಧಿಪತಿಗಳೂ ಖಾಯಂ ಅಲ್ಲಿರಲ್ಲ.ಈ ಮುಕ್ತಿ ಅಥವಾ ಮೋಕ್ಷಕ್ಕೇನಾದರೂ ಸುಲಭವಾಗಿ ಅರ್ಥವಾಗುವ ವ್ಯಾಖ್ಯಾನ ಇದೆಯೇ?

 ಪ್ರಶ್ನೆ-2
ವಿ ಭಾ :  ಕರ್ಮಫಲ ಈ ಜನ್ಮಕ್ಕೋ? ಮರುಜನ್ಮಕ್ಕೋ?

Sunday, May 10, 2015

ಆ ಹಳ್ಳಿಯ ಅವಿದ್ಯಾವಂತ ಮುದುಕಿಯ ನಡೆಯು ವೇದಕ್ಕನುಗುಣವಾಗಿಯೇ ಇದೆ-ಅಲ್ಲವೇ?

ಆ ತಾಯಿ ಹಳ್ಳಿ ಮುದುಕಿ ಗಂಡನ ಶವದ ಮುಂದೆ ಕುಳಿತಿದ್ದಳು. ಮಗಳು ರೋಧಿಸುತ್ತಿದ್ದಳು " ಅಪ್ಪಾ! ನೀನು ಹೋಗಿ ಬಿಟ್ಯೆಲ್ಲಾ!! ಇನ್ನು ತೌರಮನೆಗೆ ನಾನು ಹ್ಯಾಗ್ ಬರಲಿ? ನನ್ನ ಸುಖ -ದುಃಖ ಕೇಳೋರ್ಯಾರು? -ಹೆಣ್ಣು ಮಗಳ  ರೋದನ ಮುಗಿಲು ಮುಟ್ಟಿತ್ತು. ಎಷ್ಟಾದರೂ ಹೆಣ್ಣು ಮಕ್ಕಳಿಗೆ ಅಪ್ಪನ ಬಗ್ಗೆ ಬಲು ವಾಂಚಲ್ಯ.
ಸ್ವಲ್ಪ ಹೊತ್ತು ಮಗಳು ಅಳುವುದನ್ನು ಕೇಳಿದ ತಾಯಿ ಮಗಳನ್ನು ತಬ್ಬಿಕೊಂಡಳು " ಸುಮ್ಕಿರು ಮಗ , ಅವ್ನು ಒಂಟು ಬಿಟ್ಟಾ ಅಂದ್ರೆ ಈ ಜೀವ ಬದುಕಿಲ್ವಾ? ನನ್ನ ಕೈಲಿ ಸಕ್ತಿ ಇರೋವರ್ಗೂ ಕೂಲಿನಾರೂ ಮಾಡಿ ನಿಂಗೆ ಗೌರಿಕಾಯಿ ಕೊಡ್ತೀನಿ.ಬಿಡಾಕಿಲ್ಲ, ಸುಮ್ಕಿರು ಅಳ್ ಬ್ಯಾಡ. ಆ ಮಗಿನ್ ಕಡೆ ನೋಡು, ಆ ಮಗಿಗ್ ಏನಾದ್ರೂ ಕುಡ್ಯಕ್ಕಾರು ಕೊಡು"
ಅಯ್ಯಪ್ಪ! ಆ ತಾಯಿ ಅಲ್ಲಿರೋ ತನ್ ಮಕ್ಕಳಿಗೆಲ್ಲಾ ಸಾಂತ್ವನ ಹೇಳುತ್ತಿದ್ದಳು.ಅವಳ ಗಂಡು ಮಕ್ಕಳೂ ಕೂಡ ಬಿಕ್ಕಿ ಬಿಕ್ಕಿ ಅಳುತ್ತಿದ್ದರೆ " ಏಳ್ಲಾ ಮಗ, ಮಾಡ  ಜಬಾಬ್ದಾರಿ ಮಾಡು"

-ಈ ಮಾತು ಕೇಳುವಾಗ ನನಗೆ ವೇದಮಂತ್ರ ಒಂದರ ನೆನಪಾಯ್ತು

ಮಾ ಗತಾನಾಮಾ ದಿಧೀಥಾ ಯೇ ನಯಂತಿ ಪರಾವತಮ್|
ಆ ರೋಹ ತಮಸೋ ಜ್ಯೋತಿರೇಹ್ಯಾ ತೇ ಹಸ್ತೌರಭಾಮಹೇ
[ಅಥರ್ವ ವೇದ ಕಾಂಡ-೮,  ಸೂಕ್ತ-೧ , ಮಂತ್ರ- ೮ ]

ಅರ್ಥ:-
ಹೇ ಜೀವಾತ್ಮನೇ, ಶರೀರಧಾರಿಯಾದ ಪುರುಷನೇ,
ಯೇ ಪರಾವತಮ್ = ಯಾರು ಪರಲೋಕವನ್ನು
ನಯಂತಿ = ತಲುಪಿರುತ್ತಾರೋ ಅವರಿಗಾಗಿ
ಮಾ ದೀಧೀಥಾಃ = ನೀನು ನೆನೆನೆನೆದು ಹಂಬಲಿಸುತ್ತಾ ಕೂಡದಿರು
ಗತಾನಾಮ್ ಮಾ  ಆ ದಿಧೀಥಾಃ = ಗತಿಸಿದವರ ಬಗ್ಗೆ ದುಃಖಿಸುತ್ತಾ ಕೂಡದಿರು
ತಮಃ ಆರೋಹ = ತಮಸ್ಸಿನಿಂದ ಮೇಲೇಳು
ಜ್ಯೋತಿಃ ಆ ಇಹಿ = ಬೆಳಕಿನತ್ತ ಪಯಣಿಸು
ತೇ ಹಸ್ತೌ ರಭಾಮಹೇ = ನಿನ್ನ ಕೈಗಳನ್ನೆತ್ತಿ ನಾವು ಹಿಡಿದು ಉದ್ಧರಿಸುತ್ತೇವೆ

ಭಾವಾರ್ಥ:-
ಹೇ ಜೀವಾತ್ಮನೇ, ಶರೀರಧಾರಿಯಾದ ಪುರುಷನೇ,ಯಾರು ಪರಲೋಕವನ್ನು ತಲುಪಿರುತ್ತಾರೋ ಅವರಿಗಾಗಿ  ನೀನು ನೆನೆನೆನೆದು ಹಂಬಲಿಸುತ್ತಾ ಕೂಡದಿರು, ಗತಿಸಿದವರ ಬಗ್ಗೆ ದು:ಖಿಸುತ್ತಾ ಕೂಡದಿರು. ತಮಸ್ಸಿನಿಂದ ಮೇಲೇಳು ಬೆಳಕಿನತ್ತ ಪಯಣಿಸು ನಿನ್ನ ಕೈಗಳನ್ನೆತ್ತಿ ನಾವು ಹಿಡಿದು ಉದ್ಧರಿಸುತ್ತೇವೆ.
ಈ ಮಂತ್ರವು ಗತಿಸಿದವರ ಬಗ್ಗೆ ದು:ಖಿಸುವುದನ್ನು  ಅಜ್ಞಾನವೆಂದೇ ಹೇಳುತ್ತದೆ. ವೇದದ ಈ ಮಾತನ್ನು ಅರಗಿಸಿಕೊಳ್ಳುವುದು ಕಷ್ಟವೇ ಹೌದು. ಹಾಗಾದರೆ ಗತಿಸಿದವರ ಬಗ್ಗೆ ದುಃಖಿಸಬಾರದೇ? ಒಬ್ಬ ವ್ಯಕ್ತಿ ಮರಣ ಹೊಂದಿದಾಗ ಅವನ ಸಂಬಂಧಿಕರು ಶೋಕಿಸದಿದ್ದರೆ ಸುತ್ತಮುತ್ತಲ ಜನರಾದರೂ ಏನೆಂದಾರು? ಇವರಿಗೆ ಮನುಷ್ಯತ್ವವೇ ಇಲ್ಲವೇ? ಇಷ್ಟೇನಾ ಸಂಬಂಧ? ಇವರ ಮುಖದಲ್ಲಿ ದುಃಖದ ಛಾಯೆಯೇ ಇಲ್ಲವಲ್ಲಾ!!
ನಾವು ಅತ್ಯಂತ ಮಹತ್ವಉಳ್ಳ ಈ ವಿಷಯದ ಬಗ್ಗೆ ಅತ್ಯಂತ ಗಂಭೀರವಾಗಿ ವಿಚಾರ ಮಾಡಬೇಕು. ಸತ್ತವರ ಬಗ್ಗೆ ಶೋಕಿಸುತ್ತಾ ಕೂರುವುದು ಅಜ್ಞಾನವೆಂದು ವೇದವು ಹೇಳುವುದು ಸತ್ಯವಾಗಿದೆ. ನಾವು ಶವದ ಮುಂದೆ ಕುಳಿತು ಅಳುವುದರಿಂದ ಪ್ರಯೋಜನವಾದರೂ ಏನು? ನಮ್ಮೊಳಗಿನ ದುಃಖವು ಕಡಿಮೆಯಾಗಬಹುದು ನಿಜ. ಆದರೆ ನಮಗೆ ದುಃಖವಾಗಿರುವುದನ್ನೇ ವೇದವು ತಮಸ್ಸು ಎಂದು ಹೇಳುತ್ತದೆ. ಈ ಕತ್ತಲಿನಿಂದ ಬೆಳಕಿನ ಕಡೆಗೆ ಅರ್ಥಾತ್ ಜ್ಞಾನದ ಕಡೆಗೆ ಪಯಣಿಸು ನಿನ್ನ ಕೈಗಳನ್ನು ನಾನು ಹಿಡಿದು ಮೇಲೆತ್ತುತ್ತೇನೆಂದು ಭಗವಂತನು ನುಡಿಯುತ್ತಾನೆ.
ಸಾವು ಯಾರ ವಯಸ್ಸನ್ನೂ ಕೇಳುವುದಿಲ್ಲ. ಆದರೆ ವಯಸ್ಸಾದಮೇಲೆ ಬರುವುದು ಸಹಜ ಸಾವು.   ಹೆತ್ತ ಅಪ್ಪ-ಅಮ್ಮನನ್ನು ಅವರ ವೃದ್ಧಾಪ್ಯದಲ್ಲಿ ನೋಡಿಕೊಳ್ಳಬೇಕಾದ್ದು ಮಕ್ಕಳ ಕರ್ತವ್ಯ. ಮಕ್ಕಳು ವೃದ್ಧ ತಂದೆ-ತಾಯಿಯರ ಸೇವೆಮಾಡುತ್ತಿರುವಾಗ ಸಹಜವಾಗಿ ಸಾವು ಬಂದರೆ ಮಕ್ಕಳು ಅಳುತ್ತಾ ಕುಳಿತುಕೊಳ್ಳುವ ಅವಶ್ಯಕತೆ ಇಲ್ಲ. ಬದುಕಿದ್ದಾಗ ತಂದೆ-ತಾಯಿಯರ ಸೇವೆ ಮಾಡಿದ ಸಮಾಧಾನವಿರುತ್ತದೆ. ಆದರೆ ಸೇವೆ ಮಾಡಬೇಕಾದಾಗ ಸೇವೆ ಮಾಡದೆ ಅಪ್ಪ-ಅಮ್ಮ ಸತ್ತಾಗ ಮೃತದೇಹದ ಮುಂದೆ ಕುಳಿತು ಕಣ್ಣೀರು ಹಾಕಿದರೇನು ಪ್ರಯೋಜನ? ಆಗ ನಿರ್ವಹಿಸಬೇಕಾದ ಜವಾಬ್ದಾರಿಯೇ ಬೇರೆ. ಮೃತದೇಹವನ್ನು ಪಂಚಭೂತಗಳಲ್ಲಿ ಲೀನವಾಗಿಸಲು ಅಗತ್ಯವಾದ ಅಂತ್ಯಸಂಸ್ಕಾರ ಕ್ರಿಯೆಗಳು. ಅಷ್ಟೆ.

 ಪುನರಪಿ ಜನನಮ್-ಪುನರಪಿ ಮರಣಮ್ ಪುನರಪಿ ಜನನೀ ಜಠರೇ ಶಯನಮ್, ಇಹಸಂಸಾರೇ ಬಹುದುಸ್ತಾರೇ  ಕೃಪಯಾ ಪಾರೇ ಪಾಹಿ ಮುರಾರೇ,ಭಜಗೋವಿಂದಮ್, ಭಜಗೋವಿಂದಮ್, ಗೋವಿಂದಮ್ ಭಜ ಮೂಢಮತೇ-ಎಂದು ಶಂಕರರು ಹೇಳುತ್ತಾರೆ.

ಮತ್ತೆ ಹುಟ್ಟುವುದು ಮತ್ತೆ ಸಾಯುವುದು ಮತ್ತೆ ತಾಯಿಯ ಗರ್ಭದಲ್ಲಿ ಸೇರಿ ಮಲಗುವುದು, ಈ ರೀತಿಯ ಸಂಸಾರಕ್ಕೆ ಪಾರವೇ ಇಲ್ಲ. ಬಹಳ ಸುಲಭವಾಗಿ ಈ ಹುಟ್ಟು-ಸಾವುಗಳ ಚಕ್ರದಿಂದ ಹೊರಬರಲಾಗುವುದಿಲ್ಲ.ಆದ್ದರಿಂದ ಹುಟ್ಟಿರುವಾಗ ಆ ಭಗವಂತನ ಸ್ಮರಣೆಯನ್ನು ಮಾಡು, ಎಂದು ಶಂಕರರು ಹೇಳುತ್ತಾರೆ.
ಅಂದರೆ ಹುಟ್ಟು-ಸಾವುಗಳನ್ನು ಯಾರೂ ತಪ್ಪಿಸುಕೊಳ್ಳಲು ಸಾಧ್ಯವೇ ಇಲ್ಲ. ಹುಟ್ಟಿದವನು ಸಾಯಲೆ ಬೇಕು. ಸತ್ತವನು ಹುಟ್ಟಲೇ ಬೇಕು.  ಈ ಹುಟ್ಟು ಸಾವುಗಳೆಲ್ಲಾ ಜಡ ಶರೀರಕ್ಕೇ ಹೊರತೂ ಆತ್ಮಕ್ಕಲ್ಲ. ಆದ್ದರಿಂದ ಶೋಕಿಸುವ ಅಗತ್ಯವಿಲ್ಲ.

ಭಗವದ್ಗೀತೆಯಲ್ಲಿ ಶ್ರೀಕೃಷ್ಣನ ಈ ಮಾತುಗಳನ್ನು ಕೇಳಿ..
[ಸಾಂಖ್ಯಾಯೋಗ ಶ್ಲೋಕ - ೨೭]

ಜಾತಸ್ಯ ಹಿ ಧ್ರುವೋ ಮೃತ್ಯುಃ ಧ್ರುವಂ ಜನ್ಮ ಮೃತಸ್ಯ ಚ |
ತಸ್ಮಾದಪರಿಹಾರ್ಯೇಽರ್ಥೇ ನತ್ವಂ ಶೋಚಿತು ಮರ್ಹಸಿ ||
ಹುಟ್ಟಿದವನಿಗೆ ಮರಣವು ನಿಶ್ಚಯವು ಮತ್ತು ಸತ್ತವನಿಗೆ ಜನ್ಮವು ನಿಶ್ಚಯವು. ಆದುದರಿಂದ ಪರಿಹರಿಸಲಾಗದ ಈ ವಿಷಯದಲ್ಲಿ ನೀನು ಶೋಕಿಸಬಾರದು.

ದೇಹೀ ನಿತ್ಯ ಮವಧ್ಯೋಽಯಂ ದೇಹೇ ಸರ್ವಸ್ಯ ಭಾರತ |
ತಸ್ಮಾತ್ ಸರ್ವಾಣಿ ಭೂತಾನಿ ನ ತ್ವಂ ಶೋಚಿತುಮರ್ಹಸಿ ||
[ಸಾಂಖ್ಯಾಯೋಗ ಶ್ಲೋಕ - ೩೦]

ಎಲ್ಲರ ದೇಹದಲ್ಲೂ ಇರುವ ಈ ಆತ್ಮನು ಎಂದಿಗೂ ನಾಶವಾಗುವುದಿಲ್ಲ. ಆದ್ದರಿಂದ ನೀನು ಸಮಸ್ತ ಪ್ರಾಣಿಗಳನ್ನು ಕುರಿತು ಶೋಕಿಸಬಾರದು.  ಹೀಗೆ ಸಾವಿನ ಬಗ್ಗೆ ವೇದವು ಏನು ಹೇಳಿದೆಯೋ ಅದನ್ನೇ ಶ್ರೀ ಕೃಷ್ಣನೂ ಹೇಳಿದ್ದಾನೆ.  ಶಂಕರಾಚಾರ್ಯರೂ ಹೇಳಿದ್ದಾರೆ.
ಗತಿಸಿದವರ ಬಗ್ಗೆ ಶೋಕಿಸದಿರು,ತಮಸ್ಸಿನಿಂದ ಮೇಲೇಳು, ನಿನ್ನ ಕೈ ಹಿಡಿದು ನಾನು ಮೇಲೆತ್ತುತ್ತೇನೆ- ಎಂಬ  ಭಗವಂತನ ಮಾತು ನಮಗೆ ಧೈರ್ಯವನ್ನು ಕೊಡುವಂತಹದ್ದು. ತನ್ನ ಚಿಕ್ಕ ಪ್ರಾಯದಲ್ಲಿ ಪತಿಯನ್ನು ಕಳೆದುಕೊಂಡು ಚಿಕ್ಕಪುಟ್ಟ ಮಕ್ಕಳೊಡನೆ ಒಬ್ಬ ಸ್ತ್ರೀ ಬದುಕಬೇಕಾದ ಅನಿವಾರ್ಯ ಪರಿಸ್ಥಿಗಳು ಬಂದಿರುವ ಹಲವು ಉಧಾಹರಣೆಗಳನ್ನು ಕಾಣಬಹುದು. ಆ ಸಂದರ್ಭದಲ್ಲಿ ತಾಯಿಯಾದವಳು ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ನಡೆಸಬೇಕೋ ಅಥವಾ ಸತ್ತ ಪತಿಯ ಬಗ್ಗೆ ಶೋಕಿಸುತ್ತಾ ಕುಳಿತುಕೊಳ್ಳಬೇಕೋ. ಇಂತಹ ಸಂದರ್ಭದಲ್ಲಿ ವೇದವು ನಮಗೆ ಸಹಾಯಕ್ಕೆ ಬರುತ್ತದೆ. ಇಂತಹಾ ದು:ಖದ ಸ್ಥಿತಿಯಲ್ಲೂ ತಾಯಿಯಾದವಳು ಮಕ್ಕಳ ಅಭ್ಯುದಯದ ಬಗ್ಗೆ ಯೋಚಿಸಬೇಕೇ ಹೊರತೂ ಸತ್ತ ಪತಿಯ ಬಗ್ಗೆ ದು:ಖಿಸುತ್ತಾ ಕುಳಿತುಕೊಳ್ಳಕೂಡದು. ಅಂತಹಾ ತಮಸ್ಸಿನಿಂದ ಹೊರ ಬರಲು ವೇದವು ಕರೆಕೊಡುತ್ತದೆ. ಸಮಾಜದಲ್ಲಿ ತನ್ನ ಬಗ್ಗೆ ಜನರು ಏನು ಅಂದುಕೊಂಡಾರೋ ಎಂಬ ಭೀತಿಯಲ್ಲಿ ತಮ್ಮ ಜೀವನವನ್ನು ಹಾಳುಮಾಡಿಕೊಳ್ಳುವ ಅನೇಕ ಸ್ತ್ರೀಯರನ್ನು ಸಮಾಜದಲ್ಲಿ ಕಾಣಬಹುದು. ಅಂತಹಾ ಸೋದರಿಯರಿಗೆಲ್ಲಾ ವೇದವು ಮಾನಸಿಕವಾಗಿ ಶಕ್ತಿಯನ್ನು ತುಂಬುತ್ತದೆ.
 ಒಬ್ಬ ವ್ಯಕ್ತಿಯ ಸಾವಿನಿಂದ ಕುಟುಂಬದವರು ಶೋಕಸಾಗರದಲ್ಲಿ ಮುಳುಗಿದಾಗ  ಅಂತವರಿಗೆ ವೇದವು ಹೇಳುತ್ತದೆ.. . . .

ಮೈತಂ ಪಂಥಾಮನು ಗಾ ಭೀಮ ಏಷ ಯೇನ ಪೂರ್ವಂ ನೇಯಥ ತಂ ಬ್ರವೀಮಿ|
ತಮ ಏತತ್ ಪುರುಷ ಮಾ ಪ್ರ ಪತ್ಥಾ ಭಯಂ ಪರಸ್ತಾದಭಯಂ ತೇ ಅರ್ವಾಕ್ ||
[ಅಥರ್ವ ವೇದ ಕಾಂಡ-೮, ಸೂಕ್ತ-೧, ಮಂತ್ರ-೧೦]

ಅನ್ವಯಾರ್ಥ:
ಏತಮ್ ಪಂಥಾನಮ್ ಮಾ ಅನುಗಾಃ = ಈ ಪಲಾಯನವಾದದ ಮಾರ್ಗವನ್ನು ಅನುಸರಿಸದಿರು
ಭೀಮ ಏಷ: = ಇದು ಭಯಾನಕವಾಗಿದೆ
ಯೇನ ಪೂರ್ವಮ್ ನ ಇಯಥ = ಯಾವ ಮಾರ್ಗದಲ್ಲಿ ನೀನು ಮೊದಲಿನಿಂದಲೂ ಹೋಗಿಲ್ಲವೋ
ತಮ್ ಬ್ರಮೀಮಿ = ಅದನ್ನು ಕುರಿತು ನಿನಗೆ ಹೇಳುತ್ತೇನೆ
ಏತತ್ ತಮಃ = ಈ ಮೌಢ್ಯದ ಮಾರ್ಗವು ತಮಸ್ಸಿನಿಂದ ತುಂಬಿದೆ
ಪುರುಷ = ಹೇ ಜೀವ ಪುರುಷನೇ
ಮಾ ಪ್ರಪತ್ಥಾಃ = ನೀನು ಕತ್ತಲೆಯಲ್ಲಿ ಹೋಗದಿರು,ಕೆಳಗೆ ಬೀಳದಿರು [ಏಕೆಂದರೆ]
ಪರಸ್ಥಾತ್ ಭಯಮ್ = ಅದರಾಚೆಗೆ ಭಯವಿದೆ
ತೇ ಅರ್ವಾಕ್ ಅಭಯಮ್ = ಮುಂದೆ ಮುನ್ನಡೆದರೆ ನಿನಗೆ ಅಭಯವಿದೆ,ಬೆಳಕಿದೆ.

ಭಾವಾರ್ಥ:-
ಯಾರೇ ಸತ್ತರೂ ದುಃಖಿಸಿ ಕೂರುವಂತಹ ಪಲಾಯನ ವಾದವನ್ನು ಅನುಸರಿಸಬೇಡ.ಏಕೆಂದರೆ ಆ ಮಾರ್ಗವು ಆತ್ಮಘಾತಕವೂ, ಭಯಕಾರವೂ ಆದುದಾಗಿದೆ. ನಿರ್ಭಯವಾದ ಸ್ವಚ್ಚ ಬೆಳಕಿನಲ್ಲಿ ಮುನ್ನಡೆದೆಯಾದರೆ  ಅಲ್ಲಿ ಅಭಯವೂ ಇದೆ, ಬೆಳಕೂ ಇದೆ.
ಈ ವೇದ ಮಂತ್ರದ ಅರ್ಥವನ್ನು ಅರಿಯುತ್ತಾ ಹೋದಂತೆ ರೋಮಾಂಚನವಾಗದಿರದು. ಯಾವುದೇ ದುಃಖದ ಸಮಯದಲ್ಲಿ ಶೋಕಿಸುತ್ತಾ ಕುಳಿತರೆ ಆ ಪರಿಸ್ಥಿತಿಯು  ಸರಿಹೋಗುವುದಿಲ್ಲ.ಬದಲಿಗೆ ಭಯವು ಹೆಚ್ಚಾಗುತ್ತದೆ. ತನ್ನ ಬದುಕಿನ ಬಗ್ಗೆ ಬೇಸರಮೂಡುತ್ತದೆ. ಇದನ್ನೇ ವೇದವು ತಮಸ್ಸು ಎನ್ನುತ್ತದೆ. ಬದಲಿಗೆ ದುಃಖಿಸದೆ ಮುಂದೆ ಮುನ್ನಡೆದರೆ ದಾರಿ ಕಾಣುತ್ತದೆ, ಪರಿಸ್ಥಿಯನ್ನು ಮೆಟ್ಟಿ ನಿಲ್ಲುವಂತಹ ಸಾಮರ್ಥ್ಯವು ತಾನೇ ತಾನಾಗಿ ಬರುತ್ತದೆ. ನಾನು ಕೈ ಹಿಡಿದು ಮೇಲೆತ್ತುತ್ತೇನೆ ಎಂಬ ಭಗವಂತನ  ಅಭಯದ ಮಾತು ಎಷ್ಟು ಶಕ್ತಿಯನ್ನು ಕೊಡುತ್ತದೆ! ಅಲ್ಲವೇ?

ಆ ಹಳ್ಳಿಯ ಅವಿದ್ಯಾವಂತ ಮುದುಕಿಯ ನಡೆಯು ವೇದಕ್ಕನುಗುಣವಾಗಿಯೇ ಇದೆ-ಅಲ್ಲವೇ?

ಈ ಸಂದರ್ಭದಲ್ಲಿ ಹತ್ತಿರದ ಹಂಪಾಪುರದಲ್ಲೇ ಇಪ್ಪತ್ತು ವಯಸ್ಸಿನ ಮಗನನ್ನು ಕಳೆದುಕೊಂಡು ತಾಯಿಯು ಅವನ ಕೊರಗಿನಲ್ಲಿ ಹಾಸಿಗೆ ಹಿಡಿದಾಗ RSS ಪ್ರಚಾರಕರೊಬ್ಬರ ಸಲಹೆಯಂತೆ ನಾಲ್ಕು ಹಸುಗಳನ್ನು ಸಾಕಲು ಆರಂಭಿಸಿದವರು, ಈಗ ಗೋಶಾಲೆಯನ್ನೇ ನಡೆಸುತ್ತಾ ಗೋವುಗಳಲ್ಲೇ ಮಗನನ್ನು ಕಂಡು ಗೋ ಸೇವೆ ಮಾಡಿಕೊಂಡು ಸಮಾಜ ಮುಖಿ ಕೆಲಸದಲ್ಲಿ ಪೂರ್ಣ ತೊಡಗಿಸಿಕೊಂಡಿದ್ದಾರೆ.ಕಳೆದ ಕೆಲವು ದಿನಗಳಲ್ಲಿ ನನ್ನ ಸಂಬಂಧಿಗಳು ಮೂರು ಜನ ಕ್ಯಾಲಿಕಟ್ ಬೀಚ್ ನಲ್ಲಿ ಸಮುದ್ರದ ಅಲೆಗೆ ಸಿಕ್ಕಿ ಕೊನೆಯುಸಿರೆಳೆದರು. ಒಂದು ಮನೆಯ ಇಬ್ಬರು ಅಳಿಯಂದಿರು ಮತ್ತು ಒಬ್ಬ ಮೊಮ್ಮಗ. ಆ ಅತ್ತೆ-ಮಾವ ಮೌನವಾಗಿ ಎಲ್ಲವನ್ನೂ ಸಹಿಸಿದರೆ  ಅಪ್ಪ-ಅಮ್ಮಂದಿರು ಕಂಗಾಲಾಗಿದ್ದರು. ಎಲ್ಲರಿಗೂ ವೇದದ ಹಾದಿಯೊಂದೇ ಪರಿಹಾರ. ಭಗವಂತನ ಮೇಲಿನ ಅಚಲ ನಂಬಿಕೆಯೇ ಅವರನ್ನೆಲ್ಲಾ ಮಕ್ಕಳ ಅಗಲುವಿಕೆಯ ನೋವಿನಿಂದ ಪಾರುಮಾಡಬೇಕು.

Friday, May 8, 2015

ವೇದ ಚಿಂತನ ಗೋಷ್ಠಿ

ಓಂ
ವೇದಭಾರತೀ, ಹಾಸನ , ಪ್ರಸ್ತುತಪಡಿಸುತ್ತಿದೆ
ವೇದಾಧ್ಯಾಯೀ ಶ್ರೀ ಸುಧಾಕರಶರ್ಮರ ಮಾರ್ಗದರ್ಶನದಲ್ಲಿ
ವೇದ-ಚಿಂತನಗೋಷ್ಠಿ
ದಿನಾಂಕ:೩೧.೫.೨೦೧೫ ಭಾನುವಾರ ಬೆಳಿಗ್ಗೆ ೯.೩೦ ರಿಂದ ಮಧ್ಯಾಹ್ನ ೪.೦೦
ಸ್ಥಳ: ವಂದೇಮಾತರಮ್ ಹೋಟೆಲಿನ ಕಾನ್ಫೆರೆನ್ಸ್ ಹಾಲ್,
 ಇಸ್ಕಾನ್ ಸಮೀಪ, ರಾಜಾಜಿ ನಗರ, ಬೆಂಗಳೂರು
ಮನವಿ: ಸುಧಾಕರಶರ್ಮರ ವಿಚಾರಗಳನ್ನು ಒಪ್ಪದಿರುವವರೂ ಬನ್ನಿ-ಒಪ್ಪುವವರೂ ಬನ್ನಿ-ವೇದದ ಬೆಳಕಿನಲ್ಲಿ ವಿಚಾರ ಮಾಡೋಣ ಬನ್ನಿ. ಪರಸ್ಪರ ಸದ್ಭಾವನೆಯನ್ನು ಮೂಡಿಸೋಣ  ಬನ್ನಿ.

ಪ್ರವೇಶ ಶುಲ್ಕ ರೂ: 1000.00 ವನ್ನು ಈ ಕೆಳಗಿನ ಬ್ಯಾಂಕ್ ಖಾತೆಗೆ  20.5.2015 ರೊಳಗೆ  ಜಮಾಮಾಡಿ ಪ್ರವೇಶ ಪಡೆಯಬಹುದು

ಸಂಗ್ರಹವಾದ ಪ್ರವೇಶಶುಲ್ಕದಲ್ಲಿ ಅಂದಿನ ಕಾರ್ಯಕ್ರಮಕ್ಕೆ ಕನಿಷ್ಠ ಖರ್ಚು ಮಾಡಿ ಉಳಿದ ಮೊತ್ತವನ್ನು ಶ್ರೀ ಸುಧಾಕರಶರ್ಮರ ವೈದ್ಯಕೀಯ ವೆಚ್ಚಕ್ಕಾಗಿ ವಿನಿಯೋಗಿಸಲಾಗುವುದು

ಬ್ಯಾಂಕ್ ಖಾತೆ ವಿವರ

Name of the Bank: Punjab National Bank
Branch: Hassan
Type of Account : S.B
Name of the Account Holder : Vedabharatee, Hassan
SB.A/C No: 2004000100149348
IFSC: PUNB 0200400

ಖಾತೆಗೆ ಜಮಾಮಾಡಿ ಹರಿಹರಪುರಶ್ರೀಧರ್ , ಸಂಯೋಜಕರು, ವೇದಭಾರತೀ, ಹಾಸನ ಇವರ ಮೊಬೈಲ್ ನಂಬರ್ 9663572406 ಗೆ ಕರೆಮಾಡಿ ಹೆಸರು ನೊಂದಾಯಿಸಿಕೊಳ್ಳ ಬಹುದು .


E-Mail: vedasudhe@gmail.com