ವೇದಸುಧೆಯ ಅಭಿಮಾನಿಗಳೇ,
ಕಳೆದ ವರ್ಷ ಫೆಬ್ರವರಿ ಮೊದಲ ವಾರದಲ್ಲಿ ಆರಂಭವಾದ ವೇದ ಸುಧೆಯಲ್ಲಿ ಈ ಒಂಬತ್ತು ತಿಂಗಳಲ್ಲಿ ೧೫ ಸಾವಿರ ಇಣುಕುಗಳಾಗಿರುವುದನ್ನು ಕಂಡು ಅಚ್ಚರಿಯಾಗಿದೆ. ಈ ಸಂಖ್ಯೆಯಲ್ಲಿ ಬಳಗದ ಇಣುಕುಗಳು ದಿನದಲ್ಲಿ ಹತ್ತಾರು ಇದ್ದರೂ ಉಳಿದಂತೆ ವೇದಸುಧೆಯ ಅಭಿಮಾನಿಗಳ ಸಂಖ್ಯೆಗೇನೂ ಕೊರತೆ ಇಲ್ಲ. ವೇದಸುಧೆಯ ಒಂದು ನಿರ್ದಿಷ್ಟ ಉದ್ದೇಶವು ಹಲವು ಜನರಿಗೆ ತಲುಪುವುದರಲ್ಲಿ ವೇದಸುಧೆಯು ಯಶಸ್ವಿಯಾಗಿದೆ, ಎಂಬ ಸಮಾಧಾನವು ವೇದಸುಧೆಗೆ ಇದೆ. ಸಮಾಜದ ಒಳಿತೇ ಪರಮ ಗುರಿ ಎಂದು ಭಾವಿಸುವ ವೇದಸುಧೆಯು ತನ್ನ ವಿಚಾರಗಳನ್ನು ತಲುಪಿಸಲು ಒಂದು ಬಳಗವನ್ನೇ ಹೊಂದಿದೆ. ಬಳಗದ ಹಲವು ಸದಸ್ಯರಿಗೆ ಪರಸ್ಪರ ಪರಿಚಯವೇ ಇಲ್ಲ. ಆದರೂ ವೇದಸುಧೆಯ ಉದ್ದೆಶವನ್ನು ಅರ್ಥಮಾಡಿಕೊಂಡು ಈ-ಮೇಲ್ ಮೂಲಕವೇ ತಮ್ಮ ಸಮ್ಮತಿಯನ್ನು ಸೂಚಿಸಿ ಬಳಗದ ಸದಸ್ಯರಾಗಿ ವೇದಸುಧೆಯನ್ನು ಮುನ್ನಡೆಸುತ್ತಿದ್ದಾರೆ. ೨೦೧೧ ಫೆಬ್ರವರಿ ಮಾಸದ ಮೊದಲವಾರದಲ್ಲಿ ವೇದಸುಧೆಯು ತನ್ನ ಎರಡನೆಯ ವರ್ಷಕ್ಕೆ ಅಂಬೆಗಾಲಿಡುತ್ತಿದೆ.ಆಸಂದರ್ಭದಲ್ಲಿ ಅದರ ವಾರ್ಷಿಕೋತ್ಸವನ್ನು ಹಾಸನದಲ್ಲಿ ಆಚರಿಸಲು ಸಲಹೆಗಳು ಬಂದಿವೆ. ವಾರ್ಷಿಕೋತ್ಸವ ಸಂದರ್ಭದಲ್ಲಾದರೂ ಬಳಗದ ಎಲ್ಲರೂ ಒಟ್ಟಿಗೆ ಸೇರಬೇಕೆಂದು ವೇದಸುಧೆಯು ಆಶಿಸುತ್ತದೆ. ಹೊರದೇಶದಲ್ಲಿರುವ ಹಂಸಾನಂದಿಯವರು ಹಾಗೂ ಉಳಿದವರು ಅನುಕೂಲವಾದರೆ ಪಾಲ್ಗೊಳ್ಳಲೂ ಬಹುದು ಅಥವಾ ಅಂತರ್ಜಾಲದ ಮೂಲಕವೇ ನಮ್ಮೊಡನಿರಲು ಸಾಧ್ಯ. ದೀಪಾವಳಿಯ ಶುಭಸಂದರ್ಭದಲ್ಲಿ ಶ್ರೀಯುತ ಕವಿ ನಾಗರಾಜ್ ಮತ್ತು ಶ್ರೀ ಪ್ರಭಾಕರರೊಂದಿಗೆ ಕುಳಿತು ಮೊದಲ ಸುತ್ತಿನ ಮಾತುಕತೆ ನಡೆದಿದೆ. ಅಂದು ಚರ್ಚಿಸಿದ ಕೆಲವು ಅಂಶಗಳನ್ನು ಬಳಗದ ಎಲ್ಲಾ ಸದಸ್ಯರ ಹಾಗೂ ವೇದಸುಧೆಯ ಅಭಿಮಾನಿಗಳ ಗಮನಕ್ಕೂ ತರುತ್ತಾ ಎಲ್ಲರ ಸಲಹೆಗಳನ್ನೂ ವೇದಸುಧೆಯು ಸ್ವಾಗತಿಸುತ್ತದೆ.
ವಾರ್ಷಿಕೋತ್ಸವದ ಬಗ್ಗೆ ಬಂದಿರುವ ಸಲಹೆಗಳು:
೧. ಎಂದು: ೬.೨.೨೦೧೧ ಭಾನುವಾರ
೨.ಸ್ವರೂಪ: ಬೆಳಗಿನ ೯.೦೦ ರಿಂದ ಸಂಜೆ ೫.೦೦ ರವರಗೆ
೨. ಎಲ್ಲಿ: ಹಾಸನದಲ್ಲಿ
೩. ಉದ್ಧೇಶಿತ ಕಾರ್ಯಕ್ರಮಗಳು:
* ಬಳಗದ ಸದಸ್ಯರ ಸಭೆ
*. ಶ್ರೀ ಸುಧಾಕರಶರ್ಮರಿಂದ "ಎಲ್ಲರಿಗಾಗಿ ವೇದ"ಉಪನ್ಯಾಸ-ಪ್ರಶ್ನೋತ್ತರ-ಚರ್ಚೆ
* ಶ್ರೀ ಕವಿನಾಗರಾಜರ ಮೂಢ ಉವಾಚ ಪುಸ್ತಕ ಲೋಕಾರ್ಪಣೆ
* ಶ್ರೀ ಶರ್ಮರು ಹಾಸನದಲ್ಲಿ ಮಾಡಿದ ಉಪನ್ಯಾಸಗಳ ಸಿ.ಡಿ ಬಿಡುಗಡೆ [ ಈಗಾಗಲೇ ಸ್ಥಳೀಯವಾಗಿ ಸಿದ್ಧಪಡಿಸಿದ ೩೦ ಸಿಡಿಗಳು ವಿತರಣೆ ಯಾಗಿದ್ದು ಜನರ ಮೆಚ್ಚುಗೆ ಪಡೆಯುವುದರಲ್ಲಿ ಯಶಸ್ವಿಯಾಗಿದೆ]
* ಸಾಸ್ಕೃತಿಕ ಕಾರ್ಯಕ್ರಮ[ವೀಣಾವಾದನ / ಪಿಟೀಲು ವಾದನ/ಶಾಸ್ತ್ರೀಯ ಸಂಗೀತ ಕಛೇರಿ/ ಭಾವಗೀತೆಗಳು/ನೃತ್ಯ....ಯಾವುದಾದರೂ ಒಂದು]
* ಕವಿಗೋಷ್ಠಿ: ಹಾಸನದ ಮನೆ ಮನೆ ಕವಿಗೋಷ್ಠಿಯ ಸಹಕಾರದೊಂದಿಗೆ
*ಉಪಹಾರ-ಪಾನೀಯ-ಊಟದ ವ್ಯವಸ್ಥೆ: ಸ್ಥಳೀಯವಾಗಿ [ಅಗತ್ಯವಿದ್ದವರಿಗೆ ಉಳಿಯುವ ವ್ಯವಸ್ಥೆಯೂ ಸೇರಿದಂತೆ]
*ತಾಂತ್ರಿಕ ವ್ಯವಸ್ಥೆ: ಆಕಾಶವಾಣಿ ರೆಕಾರ್ಡಿಂಗ್, ಸ್ಥಳೀಯ ಚಾನಲ್ ಉಪಯೋಗ, ಆಡಿಯೋ/ ವೀಡಿಯೋ ರೆಕಾರ್ಡಿಂಗ್ /ಸಾಧ್ಯವಾದರೆ ಅಂತರ್ಜಾದ ಮೂಲಕ ಅಭಿಮಾನಿಗಳು ಪಾಲ್ಗೊಳ್ಳುವಂತೆ ವ್ಯವಸ್ಥೆ
ಇಷ್ಟು ಕಣ್ಮುಂದೆ ಬಂದಿರುವ ಸಲಹೆಗಳು. ಈ ಬಗ್ಗೆ ಬಳಗದ ಎಲ್ಲಾ ಸದಸ್ಯರೂ ಮತ್ತು ವೇದಸುಧೆಯ ಅಭಿಮಾನಿ ಬಂಧುಗಳು ತಮ್ಮ ಅಮೂಲ್ಯಸಲಹೆಗಳನ್ನು ಆದಷ್ಟೂ ಬೇಗ ನೀಡಿದರೆ ಈ ತಿಂಗಳ ಕೊನೆಯಲ್ಲೊಮ್ಮೆ ಕುಳಿತು ಚರ್ಚಿಸಿ ನಂತರವೂ ಎರಡು-ಮೂರು ಸಭೆಯನ್ನು ನಡೆಸಿ ಸಮಾಲೋಚಿಸಿ ಅಂತಿಮವಾಗಿ ತೆಗೆದುಕೊಂಡ ನಿರ್ಧಾರವನ್ನು ಪ್ರಕಟಿಸಲಾಗುವುದು. ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆಸಿದರೆ ಹಲವು ಬಂಧುಗಳಿಗೆ ಅನುಕೂಲ ವಾಗಬಹುದು. ಆದರೆ ಹಲವು ವ್ಯವಸ್ಥೆಗಳು ಬೆಂಗಳೂರಿನಲ್ಲಿ ದುಬಾರಿಯಾಗಬಹುದು.ಈ ಒಂದು ಚಿಂತನೆಯಿಂದ ಹಾಸನದಲ್ಲಿ ನೆಲಸಿರುವ [ ಕವಿನಾಗರಾಜ್, ಪ್ರಭಾಕರ್ ಹಾಗೂ ಶ್ರೀಧರ್] ಬಳಗದ ಸದಸ್ಯರು ಸಮಾಲೋಚಿಸಿ ಈ ಒಂದು ಯೋಜನೆ ರೂಪಿಸಲಾಗಿದೆ. ಹಾಸನದಲ್ಲಿ ಸ್ಥಳೀಯವಾಗಿ ೧೫೦-೨೦೦ ಅಭಿಮಾನಿಗಳಾದರೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಸ್ಥಳ ಹಾಗೂ ಉಳಿದ ವ್ಯವಸ್ಥೆಗಳಿಗೆ ಅನುಕೂಲಗಳಿವೆ. ಆದರೂ ಅಂತಿಮವಾಗಿ ನಿರ್ಧರಿಸಿದಮೇಲೆಯೇ ಮುಂದಿನ ವ್ಯವಸ್ಥೆಗೆ ಮುಂದುವರೆಯಲಾಗುವುದು. ಎಲ್ಲಾ ಬಂಧುಗಳ ಸಲಹೆಗಳಿಗೂ ಸ್ವಾಗತವಿದೆ. ನಿಮ್ಮ ಸಲಹೆಗಳನ್ನು ಎದುರು ನೋಡುತ್ತಾ...
ವಂದನೆಗಳೊಂದಿಗೆ,
-ಹರಿಹರಪುರಶ್ರೀಧರ್
ನಿರ್ವಾಹಕ
----------------------------------------------------------
ಪತ್ರಕರ್ತರೂ ವೇದಸುಧೆಯ ಬಳಗದ ಸದಸ್ಯರೂ ಆದ ಶ್ರೀ ಎಚ್.ಎಸ್. ಪ್ರಭಾಕರ, ಅವರು ದಾವಣಗೆರೆಯಿಂದ ಪತ್ರಒಂದನ್ನು ಬರೆದಿದ್ದಾರೆ, ಅದನ್ನು ಯಥಾವತ್ತಾಗಿ ಇಲ್ಲಿ ಪ್ರಕಟಿಲಾಗಿದೆ.ವೇದಸುಧೆಯ ಅಭಿಮಾನಿಗಳಿಗೆ ಪ್ರತಿಕ್ರಿಯೆ ಬರೆಯುವುದರಲ್ಲಿ ತಾಂತ್ರಿಕ ಅಡಚಣೆಗಳಾಗಿದ್ದರೆ ದಯಮಾಡಿ ವೇದಸುಧೆಗೊಂದು ಮೇಲ್ ಮಾಡಲು ಕೋರುವೆ.
-ಹರಿಹರಪುರಶ್ರೀಧರ್
--------------------------------------------------
ಶ್ರೀಧರ್ ಅವರಿಗೆ ವಂದನೆಗಳು.
ಕಾರ್ಯಕ್ರಮ ರೂಪುರೇಷೆ ಚೆನ್ನಾಗಿದೆ. ಇದರ ಜತೆಗೆ, ಆಸಕ್ತ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕಾರ್ಯಕ್ರಮಕ್ಕೆ ಪೂರ್ವಭಾವಿ ಪ್ರಚಾರ ಹಾಗೂ ಉತ್ತರೋತ್ತರ ಪ್ರಚಾರದ ಅಗತ್ಯವೂ ಇದೆ. ಹೀಗಾಗಿ ಮಾಧ್ಯಮ ಮಿತ್ರರಿಗೆ ಪೂರ್ವಭಾವಿ ಹೇಳಿಕೆ ನೀಡುವ ಹಾಗೂ ಕಾರ್ಯಕ್ರಮಕ್ಕೆ ಆಹ್ವಾನಿಸುವ ಅಗತ್ಯವೂ ಇದೆ ಎಂದು ನನ್ನ ಅನಿಸಿಕೆ. `ವೇದ ಸುಧೆ'ಗೆ ಪ್ರಚಾರದ ಅಗತ್ಯವಿದೆಯೇ ಅಥವಾ ಇಲ್ಲವೇ- ಬೇಕೆ ಬೇಡವೇ ಎಂಬುದರ ಬಗ್ಗೆಯೂ ಚಿಂತನೆಯಾಗಲೆಂದು ಆಶಿಸುವೆ.
ಎಚ್.ಎಸ್. ಪ್ರಭಾಕರ, ದಾವಣಗೆರೆ.
(ಅಂದಹಾಗೆ, ಲೇಖನಗಳಿಗೆ ಪ್ರತಿಕ್ರಿಯೆ ನೀಡುವ ವಿಧಾನದ ಬಗ್ಗೆ ತಾಂತ್ರಿಕ ತಿಳಿವಳಿಕೆ ನೀಡಬೇಕಾಗಿ ಪ್ರಾರ್ಥನೆ. ಲಾಗಿನ್ ಆಗಿದ್ದರೂ ಸಹ ಪ್ರತಿಕ್ರಿಯೆ ಕಾಲಂನಲ್ಲಿ ಟೈಪ್ ಮಾಡಿ ಪ್ರೊಫೈಲ್ ಆಯ್ಕೆ ಮಾಡಿ ಅಪ್ ಲೋಡ್ ಮಾಡಿದರೂ ಸಹ ಅದು ಅಪ್ ಲೋಡ್ ಆಗುತ್ತಿಲ್ಲ. ನಾಗರಾಜ್ ಅವರ ವೇದ ಸುಧೆಯಲ್ಲಿನ `ಸಸ್ಯಾಹಾರಿ' ಲೇಖನ ಹಾಗೂ `ಕವಿಮನ'ದಲ್ಲಿನ `ಸರಳುಗಳ ಹಿಂದೆ' ಲೇಖನಗಳಿಗೆ 2 ಬಾರಿ ಪ್ರತಿಕ್ರಿಯೆಗಳನ್ನು ಟೈಪ್ ಮಾಡಿ ಇದೇ ರೀತಿ ವಿಫಲನಾಗಿದ್ದೇನೆ. ನಾನು ಏನು ಮಾಡಬೇಕು?)