Pages

Wednesday, September 24, 2014

ಶ್ರೀ ಅಶೋಕ್‌ಕುಮಾರ್ ರವರಿಂದ ಉಪನ್ಯಾಸ

ಓಂ
ವೇದಭಾರತೀ,ಹಾಸನ

ಸಾಪ್ತಾಹಿಕ ವಿಶೇಷ ಸತ್ಸಂಗ

೨೪.೯.೨೦೧೪ ಬುಧವಾರ ಸಂಜೆ ೬.೦೦ ಕ್ಕೆ

ಸ್ಥಳ: ಈಶಾವಾಸ್ಯಮ್,ಹೊಯ್ಸಳನಗರ,ಹಾಸನ

ಉಪನ್ಯಾಸ: ಶ್ರೀ ಅಶೋಕ್‌ಕುಮಾರ್

ವಿಷಯ : ದೇಹವೇ ದೇವಾಲಯ

ಮಿತ್ರರೊಡಗೂಡಿ ಬನ್ನಿ.

ವೇದಮಂತ್ರ ಪಠಣ

           ವೇದಮಂತ್ರಗಳನ್ನು ಇಂತಾ ಮಹಾತ್ಮರ ಕಂಠದಿಂದ ಕೇಳಲು ಬಲು ಹಿತವಾಗುತ್ತೆ. ನಮ್ಮ "ವೇದಭಾರತಿಯ" "ಎಲ್ಲರಿಗಾಗಿ ವೇದ" ಎಂಬ ಧ್ಯೇಯವನ್ನು ಕೇಳಿದ ಹಲವರು "ಇದು ಸಾಧ್ಯವೇ?" ವೇದಾಭ್ಯಾಸ  ಮಾಡಲು  ಎಷ್ಟು ಅರ್ಹತೆಗಳು ಬೇಕು!! ಇದೆಲ್ಲಾ ಶಾಸ್ತ್ರೋಕ್ತವಾಗಿ ಒಂದೆರಡು ದಶಕಗಳು ಕಲಿತಿರುವ ಗುರುಮುಖೇನ ಮಾಡಬೇಕಾದ್ದು ಎಂಬ ಅಭಿಪ್ರಾಅಯವನ್ನು ಪ್ರೀತಿಯಿಂದಲೇ ವ್ಯಕ್ತ ಪಡಿಸುತ್ತಾರೆ. ನನಗೂ ಹೌದೆನಿಸುತ್ತದೆ.ಆದರೆ ವೇದಭಾರತಿಯ ಪ್ರಯತ್ನವೇನೆಂದರೆ  "ಸಾಮಾನ್ಯ ಜನರಿಗೂ ವೇದದ ಅರಿವು ಮೂಡಿಸುವುದು" ಇದರರ್ಥ ವೇದಮಂತ್ರವನ್ನು ಕಲಿಸಬೇಕೆಂದಲ್ಲ. ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳದವರು ವೇದಭಾರತಿಯಿಂದ ವೇದಮಂತ್ರವನ್ನು ಕಲಿಸಿಕೊಡಿ ಎಂದು ದಂಬಾಲು ಬೀಳುತ್ತಾರೆ. ನಮ್ಮ ಪ್ರಯತ್ನದಲ್ಲಿ ಗುರು ಮುಖೇನವೇ ಸಾಮಾನ್ಯವಾಗಿ ಮಾಡುವಂತಹ "ದೈನಂದಿನ ಅಗ್ನಿಹೋತ್ರ " ಮತ್ತು ಅದರೊಟ್ಟಿಗೆ ಕೆಲವು ಸರಳವಾದ ಸೂಕ್ತಗಳನ್ನು   ಕಲಿಸಿಕೊಡಲಾಗುತ್ತಿದೆ. ನಮ್ಮ ಪ್ರಮುಖ ಉದ್ದೇಶವೇ  ಮನುಷ್ಯನ ನೆಮ್ಮದಿಯ ಆರೋಗ್ಯಕರವಾದ ಬದುಕಿಗಾಗಿ ವೇದದ ಮಾರ್ಗದರ್ಶನದ ಅರಿವು ಮೂಡಿಸುವುದಾಗಿದೆ. ಅದರರ್ಥ ಪರಂಪರೆಯಿಂದ ಬಂದಿರುವ ಇಂತಹ ಪಂಡಿತರಿಗೆ ಇದು ಪರ್ಯಾಯವಲ್ಲ. ಇಂತಾ ಘನಕಾರ್ಯ ಯಾವಾಗಲೂ ಇನ್ನೂ ಹೆಚ್ಚು ಮುಂದುವರೆಯಬೇಕುವೇದಸುಧೆಯ ನಿರ್ವಹಣಾ ತಂಡಕ್ಕೆ ಸೇರ್ಪಡೆ


 ವೇದಸುಧೆಯ ಆತ್ಮೀಯ ಅಭಿಮಾನಿಗಳೇ,

          ವೇದಾಧ್ಯಾಯೀ ಶ್ರೀ ಸುಧಾಕರಶರ್ಮರ ಪ್ರೇರಣೆಯಿಂದ ಆರಂಭವಾದ "ವೇದಸುಧೆ"ಯಲ್ಲಿ ಶ್ರೀ ಶರ್ಮರ ಉಪನ್ಯಾಸಗಳು,ಲೇಖನಗಳು,ವೀಡಿಯೋಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಪ್ರಕಟಿಸಲಾಗಿದೆ. ಸಧ್ಯಕ್ಕೆ ಶರ್ಮರ ಅನಾರೋಗ್ಯದಿಂದ ಅವರ ಲೇಖನಗಳನ್ನು  ಹೆಚ್ಚು  ಪ್ರಕಟಿಸಲು ಸಾಧ್ಯವಾಗಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ಪ್ರತೀ ವರ್ಷವೂ  ಓದುಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಈಗಾಗಲೇ ಓದುಗರ ಸಂಖ್ಯೆಯು ಒಂದು ಲಕ್ಷವನ್ನು ದಾಟಿ 1,35,000 ಪುಟಗಳ ವೀಕ್ಷಣೆಯಾಗಿದೆ ಎಂದು ತಿಳಿಸಲು ಹರ್ಷವಾಗುತ್ತದೆ. ಕಳೆದೆರಡು ವರ್ಷದಿಂದ ಪತ್ರಿಕೆಗಳಲ್ಲಿಯೂ ಸಾಮಾನ್ಯಜನರಿಗೆ ವೇದದ ಅರಿವು ಮೂಡಿಸುವ ಪ್ರಯತ್ನವಾಗಿ  ರಾಜ್ಯಮಟ್ಟದ ವಾರ ಪತ್ರಿಕೆಯಾದ " ವಿಕ್ರಮದಲ್ಲಿ "   "ಜೀವನವೇದ" ಎಂಬ ಅಂಕಣವನ್ನು ಬರೆಯಲಾಗುತ್ತಿದೆಯಲ್ಲದೆ ಹಾಸನದ ಸ್ಥಳೀಯ ಪತ್ರಿಕೆಗಳಾದ  "ಜನಮಿತ್ರ" ಮತ್ತು ಜನಹಿತ" ಪತ್ರಿಕೆಗಳ ಲ್ಲಿಯೂ ಪ್ರತೀ ವಾರ   ಅಂಕಣಗಳನ್ನು   ಬರೆಯಲಾಗುತ್ತಿದೆ. ಜೊತೆಗೆ ವೇದಭಾರತಿಯ ಹೆಸರಲ್ಲಿ ನಿತ್ಯವೂ ಅಗ್ನಿಹೋತ್ರ ಮತ್ತು ಸತ್ಸಂಗ ,ಪ್ರತೀ ಬುಧವಾರ ವಿಶೆಷ ಸತ್ಸಂಗದಲ್ಲಿ ಉಪನ್ಯಾಸಗಳ ಯೋಜನೆ, ಪ್ರತೀ ವಾರ ವೇದ ಪಾಠ ,ಅಲ್ಲದೆ  ಆಗಿಂದಾಗ್ಗೆ  ವಿಶೇಷ ಉಪನ್ಯಾಸಕಾರ್ಯಕ್ರಮಗಳನ್ನು  ನಡೆಸಲಾಗುತ್ತಿದೆ. ಈ ಎಲ್ಲಾ  ಕೆಲಸಗಳ  ಒತ್ತಡದಲ್ಲಿ  ವೇದಸುಧೆಯ ನಿರ್ವಹಣೆ ಸ್ವಲ್ಪ ಕಷ್ಟವಾಗಿತ್ತು. ಅದಕ್ಕಾಗಿ ಓದುಗರ ಸಹಕಾರವನ್ನು ಅಪೇಕ್ಷಿಸಿದ್ದೆವು. ಅದರಂತೆ  ವೇದಾಭಿಮಾನಿಗಳಾದ ಶ್ರೀಮತಿ ಪ್ರಿಯಾಭಟ್ ಅವರು ವೇದಸುಧೆಯನ್ನು ಅಚ್ಚುಕಟ್ಟಾಗಿಡಲು ಸಹಕರಿಸುವುದಾಗಿ ಒಪ್ಪಿ ಕೆಲಸವನ್ನು ಆರಂಭಿಸಿದ್ದಾರೆ. ಈಗಾಗಲೇ   ನಮ್ಮ ಗುಂಪಿನಲ್ಲಿ ಶ್ರೀಮತಿ ಪ್ರಿಯಾಭಟ್ ಅವರು ವೇದಸುಧೆಯ ನಿರ್ವಹಣೆಯಲ್ಲಿ ತಮ್ಮ ಯೋಗದಾನವನ್ನು ನೀಡಲು ಆರಂಭಿಸಿದ್ದಾರೆಂದು ತಿಳಿಸಲು ಹರ್ಷಿಸುತ್ತಾ ವೇದಸುಧೆಯ ಎಲ್ಲಾ ಆತ್ಮೀಯ ಅಭಿಮಾನಗಳ ಪರವಾಗಿ ಅವರನ್ನು ವೇದಸುಧೆಯ ನಿರ್ವಹಣಾ  ತಂಡಕ್ಕೆ    ಆಹ್ವಾನಿಸುತ್ತೇನೆ

-ಹರಿಹರಪುರಶ್ರೀಧರ್
 ಸಂಪಾದಕ