Pages

Wednesday, June 30, 2010

ಜೀವನ ಬುನಾದಿ -೪-


ಯಜುರ್ವೆದದಲ್ಲಿ ನಾವು ಈ ಸ್ಪಷ್ಟವಾದ ಮಂತ್ರವನ್ನು ಕಾಣುತ್ತೇವೆ:
ತಸ್ಮಾದ್ಯಜ್ಞಾತ್ ಸರ್ವಹುತ: ಋಚ: ಸಾಮಾನಿ ಜಜ್ಞಿರೇ|
ಛಂದಾಂಸಿ ಜಜ್ಞಿರೇ ತಸ್ಮಾದ್ಯಜುಸ್ತಸ್ಮಾದಜಾಯತ (ಯಜು.೩೧.೭)
[ತಸ್ಮಾತ್ ಸರ್ವಹುತಃ ಯಜ್ಞಾತ್] ಆ ಸರ್ವದಾತೃವೂ, ಉಪಾಸನೀಯನೂ ಆದ ಭಗವಂತನಿಂದ [ಋಚ ಸಾಮಾನಿ ಜಜ್ಞಿರೇ] ಋಗ್ವೇದ, ಸಾಮವೇದಗಳು ಪ್ರಕಟವಾದವು. [ತಸ್ಮಾತ್ ಛಂದಾಂಸಿ ಜಜ್ಞಿರೇ] ಅವನಿಂದ ಅಥರ್ವ ಮಂತ್ರಗಳು ಪ್ರಕಟವಾದವು. [ತಸ್ಮಾತ್ ಯಜುಃ ಅಜಾಯತ] ಅವನಿಂದ ಯಜುರ್ವೇದವು ಪ್ರಕಾಶಿತವಾಯಿತು. ಪುನಃ ನಾವು ಅಥರ್ವ ವೇದದಲ್ಲಿ ಈ ಸ್ಪಷ್ಟಾರ್ಥ ಬೋಧಕವಾದ ಮಂತ್ರವನ್ನು ನೋಡುತ್ತೇವೆ:
ಯಸ್ಮಾದೃಚೋ ಅಪಾತಕ್ಷನ್ಯಜುರ್ಯಸ್ಮಾದಪಾಕಷನ್
ಸಾಮಾನಿ ಯಸ್ಯ ಲೋಮಾನ್ಯಥರ್ವಾಂಗಿರಸೋ ಮುಖಂ
ಸ್ಕಂಭಂ ತಂ ಬ್ರೂಹಿ ಕತಮ ಸ್ವಿದೇವ ಸಃ || (ಅಥರ್ವ.೧೦.೭.೨೦)
[ಯಸ್ಮಾತ್] ಯಾವನಿಂದ [ಋಚಃ ಅಪಾತಕ್ಷನ್] ಋಗ್ವೇದ ಮಂತ್ರಗಳು ಪ್ರಕಾಶಿತವಾದವೋ [ಯಸ್ಮಾತ್] ಯಾವನಿಂದ [ಯಜುಃ ಅಪಾಕಷನ್] ಯಜುರ್ವೇದ ಪ್ರಕಟವಾಯಿತೋ [ಸಾಮಾನಿ] ಸಾಮ ಮಂತ್ರಗಳು [ಯಸ್ಯ ಲೋಮಾನಿ] ಯಾವನ ಸೂಕ್ಷ್ಮ ನಾಳಗಳಂತಿವೆಯೋ [ಅಥರ್ವಾಂಗಿರಸಃ] ಅಂಗಿರಾ ಋಷಿಯಿಂದ ಹೊರ ಬಂದ ಅಥರ್ವ ವೇದವು [ಮುಖಮ್] ಯಾವನ ಮುಖದಿಂದ ಮುಖ್ಯವಾಗಿದೆಯೋ [ತಂ ಸ್ಕಂಭಂ ಬ್ರೂಹಿ] ಅವನನ್ನು ವಿಶ್ವಾಧಾರನೆಂದು ಹೇಳು. [ಸಃ] ಅವನು [ಕತಮಃ ಸ್ವಿತ್ ಏವ] ಅತ್ಯಂತ ಆನಂದಸ್ವರೂಪನೇ ಆಗಿದ್ದಾನೆ.
ಈ ಎರಡು ಮಂತ್ರಗಳೂ ಸ್ಪಷ್ಟವಾಗಿ ನಾಲ್ಕು ವೇದಗಳ ಪ್ರಕಾಶಕನೂ ಪರಮಾತ್ಮನೇ ಎಂದು ಸಾರುತ್ತಿವೆ. ನಾಲ್ಕು ವೇದಗಳೂ ಅಪೌರುಷೇಯ ಜ್ಞಾನಸಾಗರಗಳಾಗಿವೆ. ಆ ವೇದಗಳು ಪೂರ್ಣತಃ ಬುದ್ಧಿಯುಕ್ತವೂ, ವೈಜ್ಞಾನಿಕವೂ, ಸರ್ವಹಿತಸಾಧಕವೂ ಆದ ದಿವ್ಯಜ್ಞಾನದಿಂದ ಪರಿಪ್ಲುತವಾಗಿವೆ. ಕೇವಲ ಯಾವುದೋ ಒಂದು ಕಾಲದ, ಯಾವುದೋ ಒಂದು ದೇಶದ, ಯಾವುದೋ ಒಂದು ಜನಾಂಗದ ಶಾಸ್ತ್ರಗಳಾಗಿರದೆ, ಸಾರ್ವಕಾಲಿಕವೂ, ಸಾರ್ವಭೌಮವೂ, ಸಮಸ್ತ ಮಾನವಸಮಾಜಕ್ಕೂ ಏಕಪ್ರಕಾರವಾಗಿ ಅನ್ವಯಿಸುವಂತಹುದೂ ಆದ ನಿರ್ಮಲಜ್ಞಾನದ ವಿಶಾಲ ಆಕರಗಳಾಗಿವೆ.
-ಕವಿ ನಾಗರಾಜ್

Friday, June 25, 2010

॥ निर्वाण षटकम्॥

ನಿರ್ವಾಣ ಷಟ್ಕ ವನ್ನು ಈ ಹಿಂದೆಯೂ ಪ್ರಕಟಿಸಿದ್ದರೂ ಸಹ ಪುನ: ಪ್ರಕಟಿಸಲಾಗಿದೆ.


॥ निर्वाण षटकम्॥
मनो बुद्ध्यहंकारचित्तानि नाहम् न च श्रोत्र जिह्वे न च घ्राण नेत्रे
न च व्योम भूमिर् न तेजॊ न वायु: चिदानन्द रूप: शिवोऽहम् शिवॊऽहम् ॥

न च प्राण संज्ञो न वै पञ्चवायु: न वा सप्तधातुर् न वा पञ्चकोश:
न वाक्पाणिपादौ न चोपस्थपायू चिदानन्द रूप: शिवोऽहम् शिवॊऽहम् ॥

न मे द्वेष रागौ न मे लोभ मोहौ मदो नैव मे नैव मात्सर्य भाव:
न धर्मो न चार्थो न कामो ना मोक्ष: चिदानन्द रूप: शिवोऽहम् शिवॊऽहम् ॥

न पुण्यं न पापं न सौख्यं न दु:खम् न मन्त्रो न तीर्थं न वेदा: न यज्ञा:
अहं भोजनं नैव भोज्यं न भोक्ता चिदानन्द रूप: शिवोऽहम् शिवॊऽहम् ॥

न मृत्युर् न शंका न मे जातिभेद: पिता नैव मे नैव माता न जन्म
न बन्धुर् न मित्रं गुरुर्नैव शिष्य: चिदानन्द रूप: शिवोऽहम् शिवॊऽहम् ॥

अहं निर्विकल्पॊ निराकार रूपॊ विभुत्वाच्च सर्वत्र सर्वेन्द्रियाणाम्
न चासंगतं नैव मुक्तिर् न मेय: चिदानन्द रूप: शिवोऽहम् शिवॊऽहम् ॥

Thursday, June 24, 2010

ಮನದ ಮಾತು


ವೇದಸುಧೆಯ ಅಭಿಮಾನಿಗಳಿಗೆ ಕೃತಜ್ಞತೆಗಳನ್ನು ತಿಳಿಸುವುದಕ್ಕಾಗಿ ನಾಲ್ಕು ಮಾತನಾಡಬೇಕೆನಿಸಿದೆ. ಶ್ರೀ ಸುಧಾಕರ ಶರ್ಮರು ೬-೭ ವರ್ಷಗಳ ಹಿಂದೆ ಹಾಸನ ಜಿಲ್ಲೆಯ ಬೇಲೂರಿನಲ್ಲಿ ಪುರುಷಸೂಕ್ತದ ಬಗ್ಗೆ ಮಾಡಿದ್ದ ಉಪನ್ಯಾಸದ ಕ್ಯಾಸೆಟ್ ನ್ನು ನನ್ನ ಮಿತ್ರ ವಿಶ್ವನಾಥಶರ್ಮರು ನನಗೆ ಕೊಟ್ಟು ಕೇಳಿಸಿದ್ದರು. ವೇದವನ್ನು ಇಷ್ಟು ಸರಳವಾಗಿ ವಿವರಿಸಿದ ಅವರ ಮಾತಿನ ಶೈಲಿ ನನ್ನನ್ನು ಆಕರ್ಶಿಸಿತು. ಅದನ್ನು ಎಂ.ಪಿ-೩ ಕ್ಕೆ ಕನ್ವರ್ಟ್ ಮಾಡಿ "ಎಲ್ಲರಿಗಾಗಿ ವೇದ" ಎಂಬ ತಲೆಬರಹದೊಡನೆ ನನ್ನ ಮಿತ್ರರಿಗೆಲ್ಲಾ ಮೇಲ್ ಮಾಡಿ ಹಲವರಿಗೆ ಕೇಳಿಸಿದೆ. ಅಷ್ಟೇ ಅಲ್ಲ ಅದರ ಬರಹ ರೂಪವನ್ನು ಸಂಪದ ಹಾಗೂ ವಿಸ್ಮಯನಗರಿ ಗಳಲ್ಲಿ ಪ್ರಕಟಿಸಿದೆ.ಅನೇಕ ಮಿತ್ರರ ಪ್ರೋತ್ಸಾಹ ನನಗೆ ಸ್ಪೂರ್ತಿಯಾಗಿ ಅದನ್ನು ಬಿನ್ ಫೈರ್ ಡಾಟ್ ಕಾಮ್ ಎಂಬ ತಾಣಕ್ಕೆ ಪೇರಿಸಿ ಅದರ ಕೊಂಡಿಗಳನ್ನು ಸ್ನೇಹಿತರಲ್ಲಿ ಹಂಚಿಕೊಂಡೆ.ಹೀಗೆ ಶರ್ಮರ ಧ್ವನಿಯನ್ನು ಹಲವರು ಅಂತರ್ಜಾಲದಲ್ಲಿ ಕೇಳುವಂತಾಯ್ತು. ೨೩.೯.೨೦೦೯ ರಂದು ಸುಧಾಕರ ಶರ್ಮರನ್ನು ಹಾಸನಕ್ಕೆ ಕರೆಸಿ ನವರಾತ್ರಿ ಕಾರ್ಯಕ್ರಮದಲ್ಲಿ ಅವರ ಉಪನ್ಯಾಸವನ್ನು ಏರ್ಪಡಿಸಿದೆ. ಹಾಸನದ ಜನತೆಯು ಅವರ ಉಪನ್ಯಾಸವನ್ನು ಮೆಚ್ಚಿಕೊಂಡಿದ್ದರಿಂದ ಖುಷಿಗೊಂಡೆ. ಇದೆಲ್ಲದರಿಂದ ಹತ್ತಿರವಾಗಿದ್ದ ಶ್ರೀ ಸುಧಾಕರ ಶರ್ಮರು ವೇದಭಾಷ್ಯ ಬಿಡುಗಡೆ ಸಮಾರಂಭದಲ್ಲಿ " ಅಂತರ್ಜಾಲದಲ್ಲಿ ವೇದ" ಎಂಬ ವಿಚಾರವಾಗಿ ಮಾತನಾಡಲು ನನ್ನನ್ನು ಆಹ್ವಾನಿಸಿದ್ದರು. ವೇದ ಪ್ರಚಾರಕ್ಕಾಗಿ ನಾನು ಮಾಡಿರುವುದಾದರೂ ಏನು? ನನ್ನನ್ನು ಕರೆದುಬಿಟ್ಟಿದ್ದಾರಲ್ಲಾ! ಸರಿ ಏನಾದರೂ ನನ್ನ ಕೈಲಾದದ್ದನ್ನು ಮಾಡೋಣವೆಂದು ೬.೨.೨೦೧೦ ರಂದು"ವೇದಸುಧೆ"ಯನ್ನು ಆರಂಭಿಸಿದೆ. ಬ್ಲಾಗ್ ಮೂಲಕ ಶರ್ಮರ "ಎಲ್ಲರಿಗಾಗಿ ವೇದ "ಉಪನ್ಯಾಸವನ್ನು ಹಲವರಿಗೆ ಕೇಳಿಸಬೇಕೆಂಬ ಮಹದಾಸೆಯಿಂದ ಆರಂಭವಾದ ಬ್ಲಾಗ್ ನಲ್ಲಿ ಬಿನ್ ಫೈರ್ ಡಾಟ್ ಕಾಮ್ ನಲ್ಲಿನ ಕೊಂಡಿಯನ್ನು ನೀಡಿದೆ. ಹಲವರಿಗೆ ಕೊಂಡಿ ತೆರೆಯಲಾಗದೆ ಅದನ್ನು ತೆರೆಯುವುದು ಹೇಗೆಂಬ ಶಿಶುಪಾಠ ವನ್ನು ಬ್ಲಾಗ್ ನಲ್ಲಿ ಬರೆದೆ. ಅಂತರ್ಜಾಲದ ಉಪಯೋಗ ಹೇಗೆ ಪಡೆಯಬೇಕೆಂಬ ಸಂಪೂರ್ಣ ಜ್ಞಾನವಿಲ್ಲದಿದ್ದರೂ ಮಕ್ಕಳಾಟದಂತೆ ನನ್ನ ಪ್ರಯತ್ನ ಸಾಗುತ್ತಿತ್ತು. ಆನಂತರ ಹುಡುಕಾಟ ಆರಂಭವಾಯ್ತು. ಅದರಲ್ಲಿ ಒಂದಿಷ್ಟು ಯಶಸ್ಸೂ ಸಿಕ್ಕಿದೆ. ವೇದದ ಬಗ್ಗೆ ಕೇವಲ ಸದ್ಭಾವನೆ ಇದ್ದು ವೇದದ ಪ್ರಥಮ ಪಾಠವೂ ಆಗದ ನನ್ನಂತಹ ಸಾಮಾನ್ಯನು ಆರಂಭಿಸಿದ ಬ್ಲಾಗ್ ಕೇವಲ ನಾಲ್ಕು ತಿಂಗಳುಗಳಲ್ಲಿ ಐದು ಸಾವಿರ ಇಣುಕುಗಳನ್ನು ಕಂಡಿದೆ! ಎಂದರೆ , ವೇದದ ಬಗ್ಗೆ ಜನರಿಗಿರುವ ಆಸಕ್ತಿಯನ್ನು ಕಂಡು ಆಶ್ಚರ್ಯವಾಗಿದೆ. ಸಂಪದದ ಮೂಲಕ ಅಂತರ್ಜಾಲ ತಾಣಗಳ ಸಂಪರ್ಕಕ್ಕೆ ಬಂದ ನನಗೆ ಜನರ ಅಭಿರುಚಿಯ ಪರಿಚಯ ಅಲ್ಪ ಸ್ವಲ್ಪ ಇದೆ. ಸಂಪದದಲ್ಲಿ ಸಾಕಷ್ಟು ಲೇಖನಗಳನ್ನು ಬರೆದಿರುವ ನಾನು ಧರ್ಮ, ಸಂಸ್ಕೃತಿ, ಸಮಾಜ..ಇತ್ಯಾದಿ ವಿಷಯಗಳಬಗ್ಗೆ ಲೇಖನಗಳನ್ನು ಬರೆದಾಗ ಹೆಚ್ಚೆಂದರೆ ೩೦೦ ಇಣುಕುಗಳನ್ನು ಕಂಡರೆ ಅದೊಂದು ಉತ್ತಮ ಬರಹವೆಂದೇ ಹೇಳುವ ಪರಿಸ್ಥಿತಿ ಕಂಡಿದ್ದೇನೆ. ಆದರೆ ಜನರನ್ನು ಕೆರಳಿಸುವ ಲೇಖನಗಳಾದರೆ ಸಾವಿರಾರು ಇಣುಕುಗಳು,ನೂರಾರು ಪ್ರತಿಕ್ರಿಯೆಗಳು ಸಾಮಾನ್ಯವಾಗಿರುತ್ತದೆ. ಇಂತಹ ಪರಿಸ್ಥಿತಿ ಇರುವಾಗ ವೇದಸುಧೆಗೆ ನಾಲ್ಕು ತಿಂಗಳಲ್ಲಿ ಐದು ಸಹಸ್ರ ಇಣುಕುಗಳಾಗಿವೆ!!
ಆದರೂ ವೇದಸುಧೆಯು ನಾಲ್ಕು ತಿಂಗಳು ತುಂಬಿದ ಶಿಶು. ಅದಿನ್ನೂ ಬೆಳೆಯಬೇಕಿದೆ -ಎಂಬ ಅರಿವು ವೇದಸುಧೆಬಳಗಕ್ಕಿದೆ. ಮಕ್ಕಳನ್ನು ಲಾಲಿಸುವುದು ಹಿರಿಯರ ಸಹಜ ಗುಣ. ಅದರಂತೆ ಈಗ ನಡೆದಿದೆ. ಆದರೆ ಮಗು ಬೆಳೆದಂತೆ ಅದಕ್ಕೆ ಶಿಕ್ಷೆ ಕಟ್ಟಿಟ್ಟ ಬುತ್ತಿ.ಅದು ಹಿರಿಯರ ಜವಾಬ್ದಾರಿ ಕೂಡ. ಇದೆಲ್ಲವನ್ನೂ ನಿರೀಕ್ಷಿಸಿಯೇ ವೇದಸುಧೆಯು ತನ್ನ ಅಂಬೆಗಾಲನ್ನು ಇಡುತ್ತಿದೆ. ಅಂಬೆಗಾಲಿಡುವಾಗ ಬೀಳದಿದ್ದರೂ ನಡೆಯುವಾಗ ಬೀಳದೆ ನಡೆಯನ್ನು ಕಲಿಯಲಾರದು. ಅಂತೂ ಬಿದ್ದು-ಎದ್ದು ನಡಿಗೆಯನ್ನು ಕಲಿಯುವಾಗ ಕೈ ಹಿಡಿದು ನಡೆಸುವ ದೊಡ್ದವರು ಇದ್ದೇ ಇರುತ್ತಾರೆಂಬ ಭರವಸೆಯು ವೇದಸುಧೆಗೆ ಇದೆ. ಕೈ ಹಿಡಿದು ನಡೆಸುತ್ತಿರುವ ಎಲ್ಲರಿಗೂ ವೇದಸುಧೆಯು ಕೃತಜ್ಞತೆಗಳನ್ನು ಸಲ್ಲಿಸುತ್ತಾ ಇದೇ ಪ್ರೀತಿಯು ಮುಂದೂ ಇರಲಿ, ಎಂದು ಆಶಿಸುತ್ತದೆ.ವೇದಸುಧೆಯ ಆರಂಭದಲ್ಲಿ ಅದಕ್ಕೆ ರೂಪವನ್ನು ಕೊಟ್ಟ ಶ್ರೀ ವಿ.ಆರ್. ಭಟ್, ಸಲಹೆಗಳನ್ನು ನೀಡಿದ ಶ್ರೀ ವಿಶಾಲ್, ಪೂಜಾ ವಿಧಾನ ಡಾಟ್ ಕಾಮ್ ತಾಣದ "ಶ್ರೀ" ಹಾಗೂ ವೇದಸುಧೆಯ ಆರಂಭಕ್ಕೆ ಕಾರಣ ಕರ್ತರಾದ ವೇದಾಧ್ಯಾಯೀ ಸುಧಾಕರ ಶರ್ಮರಿಗೆ ಕೃತಜ್ಞತೆಗಳು ಸಲ್ಲುತ್ತದೆ. ಶ್ರೀ ಶರ್ಮರಿಂದ ಸ್ಪೂರ್ತಿ ಪಡೆದು ವೇದಸುಧೆಯು ಆರಂಭವಾಗಿದೆಯಾದರೂ ಅನೇಕ ವಿಚಾರಗಳಲ್ಲಿ ತಾತ್ವಿಕ ಬಿನಾಭಿಪ್ರಾಯಗಳಿದ್ದೂ ಸಹ ಲಭ್ಯವಾಗುವ ಶರ್ಮರ ಎಲ್ಲಾ ಉಪನ್ಯಾಸಗಳನ್ನು ಪ್ರಕಟಿಸುತ್ತದೆ.ಅಲ್ಲದೆ ಎಲ್ಲೆಲ್ಲಿ ವೇದದ ಬಗೆಗೆ ಲೇಖನಗಳು, ಆಡಿಯೋಗಳು ಲಭ್ಯವಾಗುತ್ತದೋ ಅದೆಲ್ಲವನ್ನೂ ಪ್ರಕಟಿಸುವ ಕೆಲಸವನ್ನು ಮಾಡುತ್ತಲೇ ಸಾಗುತ್ತದೆ. ಎಲ್ಲಾ ಓದುಗರೂ
ವೇದಸುಧೆಯಲ್ಲಿ ಬರೆಯಬೇಕೆಂಬುದು ವೇದಸುಧೆಯ ಅಪೇಕ್ಷೆ. ಮತ್ತೊಮ್ಮೆ ಎಲ್ಲಾ ಅಭಿಮಾನಿಗಳಿಗೂ ಕೃತಜ್ಞತೆಗಳು.
-ಹರಿಹರಪುರಶ್ರೀಧರ್
[ವೇದಸುಧೆ ಬಳಗದ ಪರವಾಗಿ]

Sunday, June 20, 2010

ನಿಮಗೆ ಇಷ್ಟವಾಯ್ತೇ?

ವೇದಸುಧೆಯಲ್ಲಿ ಇತ್ತೀಚೆಗೆ ಒಂದಿಷ್ಟು ಬದವಾವಣೆಗಳಾಗಿವೆ. ನಿಮಗೆ ಇಷ್ಟವಾಯ್ತೇ? ಅಥವಾ ಹೇಗಿದ್ದರೆ ಚೆನ್ನ? ಎರಡುಮಾತಲ್ಲಿ ತಿಳಿಸುವಿರಾ?
-----------------------------------------------------
ಮೊಳಕಾಲ್ನೂರ್ ನಿಂದ ಡಾ|| ಜ್ಞಾನದೇವ್ ಹೀಗೆ ಹೇಳಿದ್ದಾರೆ......
"ಇತ್ತೀಚಿನ ವೇದಸುಧೆಯ ನೂತನ ಅವತಾರ ತು೦ಬಾ ಆಪ್ಯಾಯಮಾನವಾಗಿದೆ. ನಯನ ಮನೋಹರವಾಗಿದೆ, ಹಾಗೆಯೇ ಸುಶ್ರಾವ್ಯದ ಮ೦ತ್ರಗಳ ಮಧುರ ಗಾನ ಮನಸ್ಸನ್ನು ಅಲೌಕಿಕತೆಗೆ ಕರೆದೊಯ್ಯುವುದರಲ್ಲಿ ನನಗೆ ಸ೦ದೇಹವಿಲ್ಲ. ನಿಮ್ಮ ಈ ಸತತ ಪ್ರಯತ್ನಗಳು ಪ್ರಶ೦ಸನೀಯ. ನನಗೆ ಸಾಧ್ಯವಿದ್ದಾಗಲೆಲ್ಲಾ ವೇದಸುಧೆಗೆ ಖ೦ಡಿತ ಬರೆಯುತ್ತೇನೆ ಶ್ರೀಧರ್. ವ೦ದನೆಗಳೊ೦ದಿಗೆ,"

---------------------------------------------------------

Thursday, June 17, 2010

ಪ್ರಾಚೀನ ಭಾರತದ ವಿಜ್ಞಾನ ವೈಭವ

ಜೀವನ ಬುನಾದಿ - ೩

ಜೀವನ ಬುನಾದಿ - ೩

ಹೀಗೆ ತರ್ಕಿಸಿ ಚಿಂತನಶೀಲರಾದಾಗ ಯಾವುದೋ ಒಂದು ದಿವ್ಯ ನಿಮಿತ್ತದ ಕಡೆ ನಮ್ಮ ದೃಷ್ಟಿ ಹೊರಳುತ್ತದೆ. ನಮ್ಮ ಆಧ್ಯಾತ್ಮಿಕ - ಭೌತಿಕ ವಿಕಾಸಗಳೆರಡಕ್ಕೂ ನೆರವಾಗುವ ಪೂರ್ಣ ನಿರ್ದೋಷವಾದ ದಿವ್ಯ ನೈಮಿತ್ತಿಕ ಜ್ಞಾನವನ್ನು ನಮಗೆ ನೀಡಬಲ್ಲ ದಿವ್ಯನಿಮಿತ್ತ ಸರ್ವಜ್ಞನಾದ ಪರಮಾತ್ಮನನ್ನು ಬಿಟ್ಟರೆ ಬೇರಾವುದೂ ಇಲ್ಲ. ವಸ್ತುತಃ ನಮ್ಮೆಲ್ಲರ ಪ್ರಭುವಾದ, ಆ ಸರ್ವಜ್ಞ ಪರಮಾತ್ಮನೇ ಸದಿವ್ಯನಿಮಿತ್ತವಾಗಿ ಸೃಷ್ಟಿಯ ಆದಿಯಲ್ಲಿ ದಿವ್ಯ ನೈಮಿತ್ತಕ ಜ್ಞಾನವನ್ನು ಕರುಣಿಸಿದ್ದಾನೆ. ಆ ದಿವ್ಯ ನೈಮಿತ್ತಕ ಜ್ಞಾನದ ಅಮೂಲ್ಯ ನಿಧಿಗಳೇ, ಅಖಂಡ ಭಂಡಾರಗಳೇ ಚತುರ್ವೇದಗಳು. ಸ್ವತಃ ಋಗ್ವೇದವೇ ಮೊಳಗುತ್ತಲಿದೆ:-

ಆಪ್ರಾ ರಜಾಂಸಿ ದಿವ್ಯಾನಿ ಪಾರ್ಥಿವಾ ಶ್ಲೋಕಂ
ದೇವಃ ಕೃಣುತೇ ಸ್ವಾಯ ಧರ್ಮಣೇ
ಪ್ರ ಬಾಹೂ ಅಸ್ರಾಕ್ ಸವಿತಾ ಸವೀಮನಿ ನಿವೇಶಯನ್ ಪ್ರಸುವನ್ನಕ್ತುಭಿಜರ್ಗತ್
(ಋಕ್. ೪.೫೩.೩)

[ದೇವಃ] ಪ್ರಕಾಶಮಯನೂ, ಸರ್ವದಾತೃವೂ ಆದ ಭಗವಂತನು, [ದಿವ್ಯಾನಿ ಪಾರ್ಥಿವಾ ರಜಾಂಸಿ] ದಿವ್ಯಲೋಕಗಳಲ್ಲಿಯೂ, ಮೃಣ್ಮಯವಾದ ಲೋಕಗಳಲ್ಲಿಯೂ, [ಆಪ್ರಾಃ] ವ್ಯಾಪಕನಾಗಿದ್ದಾನೆ. [ಸ್ವಾಯಧರ್ಮಣೇ] ತನ್ನ ಧರ್ಮದ ಪ್ರಕಾಶನಕ್ಕಾಗಿ, [ಶ್ಲೋಕಂ ಕೃಣುತೇ] ಮಂತ್ರಸಮೂಹವನ್ನು ಪ್ರಕಟಪಡಿಸುತ್ತಾನೆ. [ಸವಿತಾ] ಸರ್ವೋತ್ಪಾದಕನೂ, ಸರ್ವಪ್ರೇರಕನೂ ಆದ ಭಗವಂತನು [ಸವೀಮನಿ] ಸೃಷ್ಟಿಯಲ್ಲಿ [ಜಗತ್]ನಲೋಕವನ್ನು [ಅಕ್ಷುಭಿಃ] ಸ್ಫುಟ ಲಕ್ಷಣಗಳೊಂದಿಗ್ದಿಗೆ [ನಿವೇಶಯನ್] ನೆಲೆಗೊಳಿಸುತ್ತಾ [ಪ್ರಸುವನ್] ಉತ್ಪಾದಿಸುತ್ತಾ [ಬಾಹೂ ಪ್ರ ಅಸ್ರಾಕ್] ತನ್ನ ಉತ್ಪಾದನ, ಪಾಲನ ಸಾಮರ್ಥ್ಯಗಳನ್ನು ವ್ಯಕ್ತಪಡಿಸುತ್ತಾನೆ. ಇದು ಬುದ್ಧಿಗಮ್ಯವಾದ ಘೋಷಣೆಯೇ ಸರಿ. ಶಾಸನಗಳನ್ನೇ ಪ್ರಕಾಶಪಡಿಸದೆ ಯಾವನಾದರೂ ಶಾಸಕನು ಪ್ರಜೆಗಳನ್ನು ದಂಡಿಸತೊಡಗಿದರೆ ಅದನ್ನು ಉಚಿತವೆನ್ನಲಾದೀತೆ? ಜಗತ್ಸಾಮ್ರಾಟನಾದ ಭಗವಂತನು ಆದಿಯಲ್ಲಿಯೇ ವಿಧಿ - ನಿಷೇದಗಳನ್ನು ವ್ಯಕ್ತಪಡಿಸದೆ, ಸತ್ಯಾಸತ್ಯ - ಪಾಪಪುಣ್ಯ - ಧರ್ಮಾಧರ್ಮಗಳ ವಿಧಾನವನ್ನೇ ವ್ಯಕ್ತಗೊಳಿಸದೆ ಜೀವಾತ್ಮರನ್ನು ಅಪರಾಧಿಗಳು - ನಿರಪರಾಧಿಗಳು ಎಂದು ವಿಭಜಿಸಲು ಸಾಧ್ಯವೇ? ಅದು ಸಾಧುವೇ?
-ಕವಿ ನಾಗರಾಜ್

Tuesday, June 15, 2010

ಸಂಜೆಯಾಯ್ತು ದೇವರ ದೀಪ ಹಚ್ಚಬೇಡವೇ?

ಎರಡು ಮೂರು ವರ್ಷದ ಹಿಂದಿನ ಘಟನೆ.ಮಿತ್ರರೊಬ್ಬರು ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಬೇಕಾಯ್ತು.ಆಗ ಸಮಯ ಸಂಜೆ ಐದುಗಂಟೆ. ಮಿತ್ರರ ಮಡದಿ ಹಾಗೂ ಮೂರ್ನಾಲ್ಕು ಜನ ಹತ್ತಿರದ ಬಂಧುಗಳು ಹಾಗೂ ನಾನು ಮತ್ತು ನನ್ನ ಮಡದಿ ಆಸ್ಪತ್ರೆಯಲ್ಲಿ ಜೊತೆಗಿದ್ದೆವು.ವೈದ್ಯರಿಂದ ತಪಾಸಣೆಯಾಯ್ತು. ಮೂರ್ನಾಲ್ಕು ಪರೀಕ್ಷೆಗಳಾದವು.ಆ ಹೊತ್ತಿಗೆ ಸಮಯ ೬.೩೦. ಒಬ್ಬ ಬಂಧು ಸತ್ಸಂಗಕ್ಕೆಂದು ಹೊರಟರು. ಮಿತ್ರನ ಸೋದರನಾದರೋ ಸಂಧ್ಯಾವಂದನೆ ಮಾಡಲು ಸಮಯವಾಯ್ತೆಂದು ಹೊರಟ.ಮಿತ್ರನ ತಂಗಿ ಯೋಗಾಸನಕ್ಕೆಂದು ಹೊರಟಳು. ಹೀಗೆ ಒಬ್ಬಬ್ಬರಾಗಿ ಎಲ್ಲರೂ ಖಾಲಿ. ಮಿತ್ರನ ಮಡದಿ ಜೊತೆಗೆ ನಾವಿಬ್ಬರು ಮಾತ್ರ. ನನ್ನ ಪತ್ನಿ ಹೇಳಿದಳು" ಸಂಜೆಯಾಯ್ತು ದೇವರ ದೀಪ ಹಚ್ಚಬೇಡವೇ?" ನಾನು ಹೇಳಿದೆ" ನೀನು ದೇವರಿಗೆ ದೀಪ ಹಚ್ಚಲೇ ಬೇಕೆಂದರೆ ಹೋಗು, ನಾನು ತಡೆಯಲಾರೆ. ಆದರೆ ಆನಂದನನ್ನು[ನನ್ನ ಮಿತ್ರ] ಒಮ್ಮೆ ನೋಡು. ಅವನ ಇಂತಹಾ ಪರಿಸ್ಥಿತಿಯಲ್ಲಿ ಬಿಟ್ಟು ಹೋಗಬೇಕೆಂದರೆ ಹೇಳು"
ಎರಡು ನಿಮಿಷ ಯೋಚಿಸಿದ ನನ್ನಾಕೆ ಇಲ್ಲಾರೀ, ನಾವು ಹೋಗ್ಬಿಟ್ರೆ, ಆನಂದನನ್ನು ನೋಡುವವರು ಯಾರ್ರೀ?...............
ಆನಂದನ ಪತ್ನಿಯ ಕಣ್ಣಲ್ಲಿ ನೀರು ಕಂಡ ನನ್ನಾಕೆ ಹೇಳಿದಳು" ಇಲ್ಲ, ನಿರ್ಮಲಾ, ಅಳಬೇಡ, ನಾವು ಹೋಗುವುದಿಲ್ಲ. ರಾತ್ರಿ ಇಲ್ಲೇ ನಿದ್ರೆಗೆಟ್ಟರೂ ಚಿಂತೆ ಇಲ್ಲ, ನಿನ್ನೊಬ್ಬಳನ್ನೇ ಬಿಟ್ಟು ಹೋಗುವುದಿಲ್ಲ........

............ಆನಂದನ ಆಯಸ್ಸು ಗಟ್ಟಿಯಾಗಿತ್ತು, ಬದುಕುಳಿದ. ಈಗ ನಾವೆಂದರೆ ಪಂಚ ಪ್ರಾಣ.

Sunday, June 13, 2010

ಭಾರತದ ಹಿರಿಮೆ

ವಿಜ್ಞಾನಿ ಡಾ. ಎಂ. ಗೋಪಾಲಕೃಷ್ಣರ ಮಾತುಗಳಲ್ಲಿ ಭಾರತದ ಹಿರಿಮೆ ಕೇಳಲು ಬಲು ಚೆಂದ.


ಮೂರ್ತಿಪೂಜಾ ಜಿಜ್ಞಾಸೆ?

ಪಂ.ಸುಧಾಕರ ಚತುರ್ವೇದಿಗಳ " ಮೂರ್ತಿಪೂಜಾ ಜಿಜ್ಞಾಸೆ? " ಕಿರುಹೊತ್ತಿಗೆಯಲ್ಲಿನ ಒಂದು ವೇದ ಮಂತ್ರ ಹೀಗಿದೆ.

ನ ತಂ ವಿದಾಥ ಯ ಇಮಾ ಜಜಾನಾSನ್ಮದ್ಯುಷ್ಮಾಕಮಂತರಂ ಬಭೂವ|
ನೀಹಾರೇಣ ಪ್ರಾವೃತಾ ಜಲ್ಪ್ಯಾ ಚಾSಸುತೃಪ ಉಕ್ಥಶಾಸಶ್ಚರಂತಿ||
[ಋಕ್.೧೦.೮೨.೭]
ಅರ್ಥ:
ಯಾವನು ಈ ಸೃಷ್ಟಿಯನ್ನು ರಚಿಸಿದ್ದಾನೋ ಮತ್ತು ಯಾವನು ನಿಮ್ಮ ಅಂತರಂಗದಲ್ಲಿಯೂ ವ್ಯಾಪಿಸಿದ್ದಾನೋ ಆ ಪರಮಾತ್ಮನನ್ನು ನೀವು ತಿಳಿದಿಲ್ಲ. ಅಜ್ಞಾನದ ಮೊಬ್ಬಿನಲ್ಲಿ ಮಾನವರು ವ್ಯರ್ಥವಾಗಿ ವಿತಂಡವಾದಮಾಡುತ್ತಾ ಕಟ್ಟುಕಳೆಗಳನ್ನು ನಿರ್ಮಿಸುತ್ತಾ ಓಡಾಡುತ್ತಾರೆ. ಸರ್ವಾಂತರ್ಯಾಮಿಯಾದ ಜಗದೀಶ್ವರನಿಗೆ ಆಕಾರ ಕಲ್ಪಿಸುವುದು ಬರಿಯದೊಂದು ಕಲ್ಪನೆ ಮಾತ್ರ.

Saturday, June 12, 2010

ಬುನಾದಿ -೨-

ವೇದೋಕ್ತ ಜೀವನಪಥ
ಜೀವನ ಬುನಾದಿ -೨-
ನೈಮಿತ್ತಿಕ ಜ್ಞಾನದ ಅನಿವಾರ್ಯತೆ ಬಗ್ಗೆ ಪಂ. ಸುಧಾಕರ ಚತುರ್ವೇದಿಯವರ ಮಾತು:
ನೈಮಿತ್ತಿಕ ಜ್ಞಾನ ಗುರುಹಿರಿಯರಿಂದ, ಋಷಿಮುನಿಗಳಿಂದ, ವಿದ್ವಜ್ಜನರಿಂದ ನಮಗೆ ಲಭಿಸಬಹುದು; ವಿಶ್ವದ ವಿವಿಧ ಘಟನೆಗಳನ್ನು ನೋಡುವುದರಿಂದ ಹಾಗೂ ಕೇಳುವುದರಿಂದ,ಇಲ್ಲವೇ ಘಟನೆಗಳಲ್ಲಿ ಭಾಗವಹಿಸುವುದರಿಂದ ಲಭಿಸಬಹುದು. ಬಗೆಯ ನೈಮಿತ್ತಿಕ ಜ್ಞಾನ ಸಾಮಾನ್ಯ ದೃಷ್ಟಿಯಿಂದ ನೋಡಿದಾಗ, ಜಗತ್ತಿನಲ್ಲಿ ಸಾಧಾರಣತಃ ಗೌರವದಿಂದ ಜೀವಿಸಲು ಸಾಕಾದಷ್ಟು ಸಾಮರ್ಥ್ಯವನ್ನು ಮಾನವನಿಗೆ ಒದಗಿಸಲೂಬಹುದು. ಆದರೆ ಇನ್ನೂ ಗಂಭೀರ ದೃಷ್ಟಿಯಿಂದ ಅವಲೋಕಿಸಿದಾಗ ಬಗೆಯ ನೈಮಿತ್ತಕಜ್ಞಾನ ಇಂದ್ರಿಯಗಮ್ಯವಾದ ಭೌತಿಕವಸ್ತುಗಳಲ್ಲೇ ಸಂಚರಿಸುತ್ತದಯೇ ಹೊರತು, ಅತೀಂದ್ರಿಯ ವಿಷಯಗಳಾದ ಪರಮಾತ್ಮ, ಜೀವಾತ್ಮ, ಬಂಧ, ಮೋಕ್ಷ, ಧರ್ಮ - ಮೊದಲಾದ ತತ್ವಗಳ ಆಂತರ್ಯವನ್ನು ಸ್ಪರ್ಶಿಸಲಾರದು - ಎಂಬಂಶ ಸ್ಫುಟವಾಗಿ ಗೋಚರಿಸುತ್ತದೆ. ವಿಕಸಿತ ಮನಸ್ಕನಾದ ಮಾನವನ ಜೀವನಕ್ಕೆ ಕೇವಲ ಇಂದ್ರಿಯಗಮ್ಯಗಳಾದ ಪದಾರ್ಥಗಳ ನೆರವೇ ಸಾಲದು; ಅತೀಂದ್ರಿಯ ತತ್ವಗಳ ಆಶ್ರಯವೂ ಬೇಕೇ ಬೇಕು. ಆದಕಾರಣ ಅನ್ಯಜೀವರಿಂದ ಹಾಗೂ ವಿಶ್ವದಆಗು ಹೋಗುಗಳಿಂದ ಲಭಿಸುವ ನೈಮಿತ್ತಿಕ ಜ್ಞಾನಕ್ಕಿಂತ ಮಿಗಿಲಾಗಿ, ದಿವ್ಯ ನೈಮಿತ್ತಿಕ ಜ್ಞಾನ ಮಾನವನ ಜೀವನದ ಪರಿಪೂರ್ಣ ವಿಕಾಸಕ್ಕೆ ಆವಶ್ಯಕ ಮಾತ್ರವಲ್ಲ, ಅನಿವಾರ್ಯವೂ ಆಗಿದೆ.
-ಕವಿ ನಾಗರಾಜ್

Wednesday, June 9, 2010

ಅನೌಪಚಾರಿಕ ಚರ್ಚೆ

ದಿನಾಂಕ ೬.೬.೨೦೧೦ ರಂದು ಬೆಂಗಳೂರಿನ ವಿಜಯನಗರದಲ್ಲಿ ನಡೆದ ಸತ್ಸಂಗದಲ್ಲಿ ಸುಧಾಕರ ಶರ್ಮರು ಪ್ರವಚನ ಮಾಡಿದನಂತರ ಅನೌಪಚಾರಿಕ ಚರ್ಚೆ ನಡೆಯಿತು. ಚರ್ಚೆಯಲ್ಲಿ ಭಾಗವಹಿಸಿದ್ದ ಹಲವರಲ್ಲಿ " ತಮ್ಮ ವಿಚಾರಧಾರೆಯನ್ನು ತಮ್ಮ ಮನೆಗಳಲ್ಲಿಒಪ್ಪಿಲ್ಲವೆಂಬ ಬೇಸರ ಅವರ ಮಾತುಗಳಿಂದಲೇ ವ್ಯಕ್ತವಾಗುತ್ತಿತ್ತು. " ಇನ್ನೂ ಮೂರ್ತಿ ಪೂಜೆ ಮಾಡುತ್ತಾರಲ್ಲಾ!!" ಎಂಬುದುಅವರಿಗೆ ಸಹಿಸಲು ಅಸಾಧ್ಯವಾದ ಸಂಗತಿಯಾಗಿತ್ತು. ಈ ಬಗ್ಗೆ ಸ್ವಲ್ಪ ನಿಷ್ಟುರವಾಗಿಯೇ ಚರ್ಚೆಗಿಳಿದ ನನ್ನಿಂದ ಸತ್ಸಂಗಿಗಳಿಗೆ ಸ್ವಲ್ಪಬೇಸರವೂ ಆಗಿರಬಹುದು. ಯಾರಿಗದರೂ ಬೇಸರವಾಗಿದ್ದರೆ ಈ ಮೂಲಕ ನಾನು ಅವರ ಕ್ಷಮೆಕೋರುತ್ತಾ ಆನಂತರ ಶರ್ಮರೊಡನೆಹಾಗೂ ವಿಶಾಲ್ ಇವರೊಡನೆ ಈ ಮೇಲ್ ಮೂಲಕ ಮಾಡಿದ ಮಾತುಕತೆಯನ್ನು ಎಲ್ಲರ ಗಮನಕ್ಕೆ ತರಬಯಸುವೆ.
--------------------------------------------------------
I wanted to thankyou for yesterday's invitation,I really enjoyed
the discussion as it brought out so many new things.

Please express my thanks to your sister & family also and yea
the food was superb.

Regards,


ವಿಶಾಲ್
----------------------------------------------------
ನಿಜ ಹೇಳುವೆ ವಿಶಾಲ್, ನಿನ್ನೆಯ ಚರ್ಚೆಯಿಂದ ನನಗೆ ಬಹಳ ಸಮಾಧಾನವಾಯ್ತು-ಎಂದೇನೂ ಇಲ್ಲ. ನನ್ನ ಸ್ವಭಾವ ವಿಚಿತ್ರ. ಚರ್ಚೆಶುಷ್ಕವೆನಿಸಿತು.ಅಲ್ಲಿದ್ದವರಿಗೆ ಮೂರ್ತಿ ಪೂಜೆ ಮಾಡುವವರ ಬಗೆಗೆ ಇರುವ ಆಕ್ರೋಶವನ್ನು ಕಂಡು ನನಗೆ ಹಿತವೆನಿಸಲಿಲ್ಲ. ಸಮಾಜದಲ್ಲಿ ಹೆಂಡ ಸಾರಾಯಿ ಕುಡಿದು ತೂರಾಡುವವರನ್ನು ಕಾಣುವಂತೆಯೇ ಮೂರ್ತಿ ಪೂಜಕರನ್ನೂ ಕಾಣುವ ಪರಿ ನನಗೆಇಷ್ಟವಾಗಲಿಲ್ಲ. ನಾನು ನಿತ್ಯವೂ ವಿಗ್ರಹ ಪೂಜೆ ಮಾಡುತ್ತಿದ್ದೀನಾ? ಎಂದರೆ ಖಂಡಿತಾ ಇಲ್ಲ. ಆದರೆ ಅದರಲ್ಲಿ ಹಲವಾರು ವರ್ಷಸಂತೋಷ ಅನುಭವಿಸಿರುವೆ. ಅದು ಒಂದು ಹಂತವೆಂದು ಭಾವಿಸುವೆ.ಅದಕ್ಕಿಂತ ಹೆಚ್ಚೇನೂ ಹೇಳಲಾರೆ.
ಶರ್ಮರ "ಎಲ್ಲರಿಗಾಗಿ ವೇದ " ಪ್ರವಚನದಿಂದ ಆಕರ್ಶಿತನಾದ ನಾನು ಅವರ ಜೀವನ ಶೈಲಿಯನ್ನು ಮೆಚ್ಚುತ್ತೇನೆ. ಆದರೆ......
ಅರಿಶಿನ-ಕುಂಕುಮ,ಹೂವು, ಬಳೆ ಇತ್ಯಾದಿ ವಸ್ತುಗಳನ್ನು ಹೆಣ್ಣಿನ ಅಲಂಕಾರ ಸಾಮಗ್ರಿಗಳ ಪಟ್ಟಿಗೆ ಸೇರಿಸುವೆ. ಅವುಗಳು ಅವಳಿಗೆಪ್ರಿಯವಾದ ವಸ್ತುಗಳು. ಅವುಗಳಿಂದ ಅವಳು ಸಾಕ್ಷಾತ್ ಲಕ್ಷ್ಮಿಯಂತೆ ಕಂಗೊಳಿಸುತ್ತಾಳೆ. ಅವುಗಳಿಲ್ಲದ ಹೆಣ್ಣು ನನ್ನ ಕಣ್ಣಿಗೆಶುಷ್ಕಳಾಗಿ, ನಿಸ್ತೇಜಳಾಗಿ ಕಾಣುತ್ತಾಳೆ. ಇದು ನನ್ನ ಕಣ್ಣಿನ ದೋಶವೆಂದರೆ ನಾನೇನೂ ಪ್ರತಿಭಟಿಸುವುದಿಲ್ಲ.ಈ ಬಗ್ಗೆಯೂ ಹೆಚ್ಚುಹೇಳಲಾರೆ.
ಶರ್ಮರಿಗೆ ಇದರ ಪ್ರತಿಯನ್ನು ಕಳಿಸುತ್ತಿರುವೆ. ಅವರೇ ಸಮಾಧಾನ ಹೇಳಬೇಕು.
ಶ್ರೀಧರ್
----------------------------------------------


ಪ್ರೀತಿಯ ಶ್ರೀಧರ್ ಜೀ!
ಯಾವುದೇ ವಿಚಾರವಿರಬಹುದು, ವ್ಯಕ್ತಿ ಸ್ವಾತಂತ್ರ್ಯ, ವಿಚಾರ ಸ್ವಾತಂತ್ರ್ಯವನ್ನು ನಾನು ಸದಾ ಗೌರವಿಸುತ್ತೇನೆ.
ಭಿನ್ನಾಭಿಪ್ರಾಯವಿದ್ದರೆ ಇರಲಿ. ಅದು ದ್ವೇಷವೂ ಆಗಬಾರದು, ಅಸಹ್ಯವೂ ಆಗಬಾರದು.
ಸಮಾಧಾನದಿಂದ ಸತ್ಯದ ಅನ್ವೇಷಣೆ ಮಾಡುತ್ತಾ, ಅದರಂತೆ ನಡೆಯುತ್ತಾ ಸಾಗಿದಾಗ ಒಂದು ದಿನ ಅವರಿಗೂ ಅಥವಾ ನಮಗೂಸತ್ಯದ ಸಾಕ್ಷಾತ್ಕಾರವಾದಾಗ ಎಲ್ಲರಿಗೂ ಹಿತವಾಗುತ್ತದೆ.
ಪ್ರತಿಯೊಂದು ಮಂಡನೆಯೂ ಹಿಂದಿನದರ ಖಂಡನೆಯೇ!
ಹಿಂದಿನದನ್ನು ಖಂಡಿಸುವ ವಿಚಾರಗಳಿಲ್ಲದಿದ್ದರೆ ಹೊಸ ಸಿದ್ಧಾಂತಕ್ಕೆ ಅರ್ಥವೇನು?!!
ಇರಲಿ. ಆದರೆ Let all our criticisms be
1. without malice
2. in good faith
3. constructive
4. without prejudice.
ಬಹುಶಃ ಇದೊಂದೊ ಸಮನ್ವಯ ಸೂತ್ರವಾಗಬಹುದು.
ಹೆಚ್ಚಿನ ವಿಚಾರಗಳನ್ನು ಮತ್ತೊಮ್ಮೆ ವಿವರವಾಗಿ ಚರ್ಚಿಸೋಣ.


ಜ್ಞಾನಾರ್ಜನೆ, ಬೆಳವಣಿಗೆಯ ಹಂತ, ಅನುಭವದ ಕೊರತೆ, ಆತ್ಮಪರಿಶೀಲನೆಯ ಅಗತ್ಯಗಳು ಇನ್ನೂ ಇರುವಾಗ
ಮಾತಿನಲ್ಲಿ ಸ್ವಲ್ಪ ಜೋರೂ, ಇತರರ ಬಗ್ಗೆ ಸ್ವಲ್ಪ ಅಸಹನೆಯೂ ಕಾಣುತ್ತದೆ.
ಕ್ರಮೇಣ ಸರಿಹೋಗುತ್ತದೆ!
-------------------------------------


ಶರ್ಮಾಜಿ
ನಮಸ್ತೆ,
ಇಷ್ಟುಬೇಗ ನಿಮ್ಮಿಂದ ಉತ್ತರ ನಿರೀಕ್ಷಿಸಿರಲಿಲ್ಲ. ವೇದಸುಧೆಯಲ್ಲಿ ನಿನ್ನೆಯ ಆಡಿಯೋ ಕೇಳಿ. ಅಂತೆಯೇ ಹಿಂದಿನ ಪ್ರಶ್ನೆಗಳಿಗೆವೇದಸುಧೆಯಲ್ಲಿ ಉತ್ತರ ನಿರೀಕ್ಷಿಸುವೆ.ಬಹಳ ದಿನಗಳಿಂದ ನಾನು ಅಪೇಕ್ಷಿಸುತ್ತಿರುವ ಅಗ್ನಿಹೋತ್ರ ದ ಬಗ್ಗೆ ಒಂದು ಲೇಖನದಯಮಾಡಿ ಕಳುಹಿಸಿಕೊಡಿ.
ಶ್ರೀಧರ್
-----------------------------------
I can understand your concerns sir.


But if you ask me I am in between your thoughts and the people who
were present yesterday.To be frank I feel you want to be in a feel good
position where in you dont want to get away with some traditions at the
same time you want to bring in few logical/rational thoughts what sharmaji
expresses.Ideally your thoughts are perfect blend and need of the hour.


Having said that, I ll also say that it leads to lots of unanswerable questions.
Sharmaji goes to the ultimate level goes deep into the issue and we know that
it cant be proven wrong.But so many things looks awkward and are unacceptable
for the current society.So instead of looking at brighter part, people go away by
looking at the awkward part.


What I feel awkward may not be for many,I feel awkward when its said,
Girls should go through upanayana(logically it may be right but I cant imagine)
Separate food serving at religious places like Udupi,dharmastala,shringeri,mantralaya etc.


And similar things....


But most of the things we have to agree and I agree as they are logical and rational
and helps people come out of the fear.


Regards,


Vishal
---------------------------------------------------
ಸೀತಾರಾಮ. ಕೆ.

ಚೆ೦ದದ ಮಥನವೊ೦ದರ ಸಾರಾ೦ಶದಿ೦ದ ಮಥನ ಎಷ್ಟು ರೋಚಕವಾಗಿರಬೇಕೆ೦ದು ಕುತೂಹಲವಾಯಿತು. ಸಮನ್ವಯಸೂತ್ರಗಳು ಚೆನ್ನಾಗಿವೆ. ಆದರೇ ವಾದ-ವಿವಾದದಲ್ಲಿ ಅಹ೦-ಗಳು ಇಳಿದಾಗ ಅಳವಡಿಕೆ ಕಷ್ಟ. ಅಹ೦-ಗಳಿಲ್ಲದ ವಾದಗಳುನೀರಸವಲ್ಲವೇ!?
June 11, 2010 3:59 PM

--------------------------------------------------------

ಶ್ರೀ ಸೀತಾರಾಮ್,
ನಿಮ್ಮ ಅಭಿಪ್ರಾಯ ತಿಳಿಸಿದ್ದೀರಿ. ಧನ್ಯವಾದಗಳು.


[ಅಹ೦-ಗಳಿಲ್ಲದ ವಾದಗಳುನೀರಸವಲ್ಲವೇ!?]
ಇಲ್ಲಿ ಅಹಂ ನುಸುಳುವುದಿಲ್ಲ. ಕಾರಣ ಎಲ್ಲರೂ ಸೇರಿ ಅವರವರ ಅಭಿಪ್ರಾಯ ವ್ಯಕ್ತಪಡಿಸಲು ಸ್ವತಂತ್ರರು.ಕೆಲವರು ಗ್ರಂಥಾಧ್ಯಯನಮಾಡಿ ತಮ್ಮ ವಿಚಾರ ತಿಳಿಸಿದರೆ, ಕೆಲವರು ಜೀವನಾನುಭವ ವ್ಯಕ್ತಪಡಿಸುವರು.ಅಂತೂ ಮಂಥನದಿಂದ ಪ್ರಯೋಜನವಿದೆ ಎಂಬಅನುಭವ ಕಾಣುತ್ತಿದೆ. ಕೇವಲ ಚರ್ಚೆಗಾಗಿ ಚರ್ಚೆ ಮಾಡುವಂತಹ ಬುದ್ಧಿವಂತರು ಇಲ್ಲಿ ಇಣುಕುವುದು ವಿರಳ.
-ಹರಿಹರಪುರಶ್ರೀಧರ್


June 12, 2010 7:07 AM

Tuesday, June 8, 2010

ಪುರೋಹಿತರ ಮನ ಕರಗಲೇ ಇಲ್ಲ!

ನಮ್ಮ ಸೋದರತ್ತೆ ಗೌರಮ್ಮ ನವರು ತಮ್ಮ ಹತ್ತನೆಯ ವರ್ಷದಲ್ಲೇ ಬಾಲ್ಯವಿವಾಹವಾಗಿ ಹನ್ನೆರಡನೆಯ ವಯಸ್ಸಿಗೆ ಪತಿಯನ್ನು ಕಳೆದುಕೊಂಡು, ವಿಧವೆ ಪಟ್ಟ ಕಟ್ಟಿಕೊಂಡು ನಮ್ಮ ಮನೆಯಲ್ಲೇ ತಮ್ಮ ಉಳಿದ ದೀರ್ಘ ಜೀವನವನ್ನು ಅವರ ತಮ್ಮನ ಮಕ್ಕಳಾದ ನಮ್ಮನ್ನೇ ಮಕ್ಕಳೆಂದು ತಿಳಿದು ನಮ್ಮ ಹೆತ್ತ ತಾಯಿ ಗಿಂತಲೂ ಹೆಚ್ಚು ಪ್ರೀತಿಯಿಂದ ನಮ್ಮನ್ನೆಲ್ಲಾ ಬೆಳೆಸುವುದರಲ್ಲೇ ಅವರ ಜೀವನದ ಸಾರ್ಥಕತೆ ಕಂಡುಕೊಂಡ ಮಹಾನ್ ವ್ಯಕ್ತಿ. ೭೫ ನೆಯ ವಯಸ್ಸಿನಲ್ಲಿ ಅವರು ನಮ್ಮ ಮನೆಯಲ್ಲೇ ಕೊನೆಯುಸಿರೆಳೆದರು. ಈ ಘಟನೆ ನಡೆದು ಇಪ್ಪತ್ತೈದು ವರ್ಷಗಳು ಕಳೆದುಹೋಯ್ತು. ಆ ಸಂದರ್ಬದಲ್ಲಿ ನಡೆದ ಒಂದು ಘಟನೆಯನ್ನು ವೇದಸುಧೆಯ ಅಭಿಮಾನಿಗಳ ಗಮನಕ್ಕೆ ತರಬೇಕೆನಿಸುತ್ತಿದೆ.
ಈಗಾಗಲೇ ತಿಳಿಸಿದಂತೆ ನಮ್ಮತ್ತೆ ಗೌರಮ್ಮ ನವರಿಗೆ ಸ್ವಂತ ಮಕ್ಕಳಿಲ್ಲ. ಅವರ ಶ್ರಾದ್ಧ ಕರ್ಮಗಳನ್ನು ಮಾಡುವವರಾರು? ನಮ್ಮ ತಂದೆಗೂ ವಯಸ್ಸಾಗಿದೆ. ಶರೀರದಲ್ಲಿ ತ್ರಾಣವಿಲ್ಲ. ನಾವು ಮಾಡಬೇಕೆಂದರೆ ಅಪ್ಪ-ಅಮ್ಮ ಬದುಕಿರುವಾಗ ನೀವು ಮಾಡಕೂಡದೆಂದು ಹಿರಿಯರು ನಮ್ಮನ್ನು ಕಟ್ಟಿ ಹಾಕಿದರು. ಆಗ ಯಾವ ಶಾಸ್ತ್ರದಲ್ಲಿತ್ತೋ ಗೊತ್ತಿಲ್ಲ ಒಬ್ಬ ಕರ್ತೃವನ್ನು ನೇಮಿಸಿಕೊಂಡಿದ್ದಾಯ್ತು. ಅವರಾರೋ ಮೂರನೆಯ ಸಂಬಂಧವಿಲ್ಲದ ವ್ಯಕ್ತಿ. ಅವರು ಕರ್ತೃವಿನ ಜಾಗದಲ್ಲಿದ್ದು ಶ್ರಾದ್ಧಕರ್ಮಗಳು ನಮ್ಮತ್ತೆ ಮರಣಹೊಂದಿದ ಐದನೆಯ ದಿನ ಶುರುವಾಯ್ತು. ಎರಡು ದಿನಗಳಷ್ಟೇ ಕಳೆದಿದೆ. ಕರ್ತೃ ನಾಪತ್ತೆ ಯಾಗಿಬಿಟ್ಟರು. ಕರ್ಮ ನಡೆಯುವಂತಿಲ್ಲ. ಎಲ್ಲರಿಗೂ ಗಾಭರಿ! ಇದನ್ನೆಲ್ಲಾ ಅತಿಯಾಗಿ ನಂಬಿದ್ದ ನನಗೆ ಆತಂಕ. ಏನಾಗಿ ಬಿಡುತ್ತೋ ಏನೋ!! ಸರಿ, ಕರ್ತೃವನ್ನು ಹೇಗಾದರೂ ಕರೆತರಲು ನನ್ನ ಪ್ರಯತ್ನ ಶುರುವಾಯ್ತು. ನಮ್ಮ ಹುಟ್ಟೂರು ಹರಿಹರಪುರವೆಂಬ ಹಳ್ಳಿ. ಅಲ್ಲಿಗೆ ಸುಮಾರು ಎಂಟು ಮೈಲು ದೂರದ ಹೊಳೆನರಸೀಪುರದಲ್ಲಿ ಕರ್ತೃವಿನ ಮನೆ. ಹೊಳೆನರಸೀಪುರಕ್ಕೆ ಅವರ ಮನೆಗೆ ಹೋದೆ. ಅಲ್ಲಿಲ್ಲ. ಒಬ್ಬ ಪುರೋಹಿತರ ಮನೆಯಲ್ಲಿರುವುದಾಗಿ ತಿಳಿದು ಅಲ್ಲಿ ಹೋದೆ. ಆತ ಆ ಪುರೋಹಿತರೊಡನೆ ಒಂದು ದೇವಸ್ಥಾನಕ್ಕೆ ಹೋಗಿದ್ದಾನೆ. ಅಲ್ಲಿ ಹೋಗಿ ವಿಚಾರಿಸಲಾಗಿ ಪಕ್ಕದಲ್ಲಿದ್ದ ಪುರೋಹಿತರೆಡೆಗೆ ಅವರ ದೃಶ್ಟಿ ಹೋಯ್ತು.
" ಏನು ಗುರುಗಳೇ, ಮೊನ್ನೆಯಿಂದ ನಮ್ಮತ್ತೆ ಕರ್ಮಾದಿಗಳನ್ನು ಕರ್ತೃವಾಗಿ ಮಾಡುತ್ತಿರುವ ಇವರು ಇಂದು ಬಾರದೆ ದಿಕ್ಕೇ ತೋಚದಾಗಿದೆ. ದಯವಿಟ್ಟು ಕಳಿಸಿಕೊಡಿ."-- ನನ್ನ ಕಣ್ಣು ಅದಾಗಲೇ ತೇವವಾಗಿತ್ತು.
ಆ ಪುರೋಹಿತರು ಹೇಳಿದರು" ಅದ್ಯಾವನೋ ಮಾಡಿಸ್ತಾ ಇದಾನಲ್ಲಾ! ಅವನನ್ನೇ ಕೇಳು, ಹೇಗಾದರೂ ಮಾಡಿಕೊಳ್ಳಲಿ, ಇವನನ್ನು ಕಳಿಸುಲ್ಲ."
ನಾನಂತೂ ಧರೆಗೆ ಇಳಿದುಹೋದೆ. ದೇವಸ್ಥಾನದ ಮುಂದೆ ರಸ್ತೆಯಲ್ಲೇ ಆ ಪುರೋಹಿತರ ಪಾದಕ್ಕೆ ಸಾಸ್ಟಾಂಗ ನಮಸ್ಕಾರ ಮಾಡುತ್ತಾ ಕಣ್ಣೀರಿಟ್ಟೆ. ಪುರೋಹಿತರ ಮನ ಕರಗಲೇ ಇಲ್ಲ. ಕೊನೆಗೆ ನಮ್ಮ ಸಂಬಂಧಿಕರೊಬ್ಬರ ಸಹಕಾರದಿಂದ ಬೇರೆ ದಾರಿಯಾಯ್ತು. ಅದು ಬೇರೆ ವಿಚಾರ. ಆದರೆ ಅಂದು ನನಗಾದ ಮಾನಸಿಕ ನೋವು ಈ ಪುರೋಹಿತ ವ್ಯವಸ್ಥೆ ಮೇಲೆ ಕಿಡಿ ಕಾರುವಂತಾಗಿದೆ. ಆದರೂ ಉತ್ತಮ ಮನೋಧರ್ಮದ ಪುರೋಹಿತರುಗಳನ್ನೂ ಕಂಡಿದ್ದೇನೆ. ಹಾಗಾಗಿ ನಾನು ಬಂಡೆದ್ದಿಲ್ಲ!! ಅಂದು ಆ ಪುರೋಹಿತರು ಹಾಗೆ ವರ್ತಿಸಿದ್ದೇಕೆ ಎಂಬುದು ನಿಮಗೆ ತಿಳಿಯಿತಲ್ಲವೇ?
ನೀವೇನು ಹೇಳ್ತೀರಿ?

-ಹರಿಹರಪುರ ಶ್ರೀಧರ್
--------------------------------------------------------------
ಯಾರು ಏನು ಹೇಳಿದರು?
ಸಾಗರದಾಚೆಯ ಇಂಚರ:
ನಿಜಕ್ಕೂ ಕೆಲವೊಮ್ಮೆ ಪುರೋಹಿತರ ಮೇಲೆ ನಂಗೂ ಕೋಪ ಬಂದಿದೆ
ದಿನಕ್ಕೆ ಒಂದೇ ಪೂಜೆ ಯಿದ್ದರೆ ತಾಸು ಬೇಕು,
ಅದೇ ಪೂಜೆ ದಿನಕ್ಕೆ ೧೦ ಇದ್ದರೆ, ೩೦ ನಿಮಿಷ ಸಾಕು
ನಿಮ್ಮ ಘಟನೆ ಮನ ತಟ್ಟುವಂತಿದೆ
June 9, 2010 1:40 PM
--------------------------------------------------------------
ವಿ.ಆರ್.ಭಟ್ :

This Habbit of Purohits are bad, they must understand atleast now! nice article
June 9, 2010 3:14 PM
-------------------------------------------------------------
ವಿಶಾಲ್:
This is a clear example of fear within us.Purohit's arrogance was because of the position he has which he doesn't deserve.Who gave him that position, its we.Why did we give,because of Ignorance and fear.
Lets hope that the society realizes this soon and get out of that dogma.

---------------------------------------------------------

Venkatakrishna.K.K.

ಅಪ್ಪ ಪುರೊಹಿತ, ಆದಕಾರಣ ಮಗ ಪುರೊಹಿತ. ದಕ್ಷಿಣೆಗೆ ತಕ್ಕ ಪ್ರದಕ್ಷಿಣೆ. ವಿಚಾರವಿಲ್ಲದ ಆಚಾರ.ಅನಾಚಾರದ ವಿಚಾರ.ಗೊಡ್ಡು ಸಂಪ್ರದಾಯ ಗೊತ್ತಿದೆ,ಶಾಸ್ತ್ರವಿಚಾರ ಗೊತ್ತಿಲ್ಲ. ಇದು ಇಂದಿನ ನೂರಾರು ಪುರೊಹಿತರ ಕತೆ.
June 13, 2010 6:45 PM

------------------------------------------------------------
ತಮ್ಮ ಅಭಿಪ್ರಾಯಗಳನ್ನು ತಿಳಿಸಿರುವ ಸಾಗರದಾಚೆಯ ಇಂಚರ. ಶ್ರೀಯುತ ವಿ.ಆರ್. ಭಟ್ Venkatakrishna.K.K. ಮತ್ತು ಶ್ರೀ ವಿಶಾಲ್ ಅವರುಗಳಿಗೆ ಧನ್ಯವಾದಗಳು. ನಡೆದ ನೈಜ ಘಟನೆಯನ್ನು ಯಥಾವತ್ತಾಗಿ ಬರೆಯಲು ಕಾರಣವಿದೆ. ಇಪ್ಪತ್ತೈದು ವರ್ಷಗಳ ಹಿಂದಿನ ನನ್ನ ಮಾನಸಿಕತೆಗೂ ಇಂದಿನ ಮಾನಸಿಕತೆಗೂ ಅಜಗಜಾಂತರ ವೆತ್ಯಾಸವಿದೆ. ಇರಲಿ. ಶ್ರಾದ್ಧದ ನಿಜಾರ್ಥವನ್ನು ವೇದಾಧ್ಯಾಯೀ ಸುಧಕರಶರ್ಮರು ವೇದದ ಹಿನ್ನೆಲೆಯಲ್ಲಿ ತಿಳಿಸಬೇಕೆಂದು ವಿನಂತಿಸುವೆ.
-ಶ್ರೀಧರ್


Thursday, June 3, 2010

ಮುಕ್ತವಾಗಿ ಮಾತನಾಡೋಣ ಬನ್ನಿ.

ವೇದಸುಧೆಯ ಅಭಿಮಾನಿಗಳೇ,
ದಿನದಿಂದ ದಿನಕ್ಕೆವೇದಸುಧೆಗೆ ಇಣುಕುವವರ ಸಂಖ್ಯೆ ಹೆಚ್ಚುತ್ತಿರುವುದನ್ನು ಕಂಡು ಸಂತಸವಾಗಿದೆ. ಶ್ರಮದ ಸಾರ್ಥಕತೆ ಕಾಣುತ್ತಿದೆ. ಡಾ|| ಜ್ಞಾನದೇವ್ ಮುಂತಾದ ಆತ್ಮೀಯರು ಹಿಂದಿನ ಬರಹಗಳಿಗೆಲ್ಲಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಓದುತ್ತಿರುವ ಹಾಗೂ ವೇದಸುಧೆಯ ಮುನ್ನೆಡೆಗೆ ಪ್ರತ್ಯಕ್ಷ ಪರೋಕ್ಷ ಕಾರಣರಾಗಿರುವ ಎಲ್ಲಾ ಮಿತ್ರರಿಗೂ ಕೃತಜ್ಞತೆಗಳು. ಹೀಗೆಯೇ ಸಹಕಾರ ವಿರಲಿ. ನಿಮ್ಮ ಒಂದೆರಡು ಪದಗಳು ವೇದಸುಧೆಯನ್ನು ಸದಾ ಜಾಗೃತವಾಗಿರಲು ಸ್ಪೂರ್ಥಿಯಾಗುತ್ತವೆಂಬುದನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ. ವೇದಸುಧೆಯಲ್ಲಿ ಬರೆದದ್ದೇ / ಕೇಳಿದ್ದೇ ಅಂತಿಮ ಸತ್ಯವೆಂದು ಭಾವಿಸಬೇಕಿಲ್ಲ. ನಿಮ್ಮ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವೇದಸುಧೆಯೊಡನೆ ಹಂಚಿಕೊಳ್ಳಿ. ನಿತ್ಯ ಕರ್ಮಗಳು/ವ್ರತ ಕಥೆಗಳು/ಹಬ್ಬ ಹರಿದಿನಗಳು/ಶ್ರಾದ್ಧಕರ್ಮಗಳು/ ಹವನ-ಹೋಮಗಳು... ಮುಂತಾದ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡೋಣ ಬನ್ನಿ. ಯಾರ ಮನ ನೋಯಿಸುವುದೂ ವೇದಸುಧೆಯ ಉದ್ಧೇಶವಲ್ಲ. ಜ್ಞಾನಿಗಳಿಂದ ವಿಚಾರ ತಿಳಿದುಕೊಳ್ಳಲು ವೇದಸುಧೆಯೊಂದು ವೇದಿಕೆಯಾಗಲಿ, ಎಂಬುದು ಅಪೇಕ್ಷೆ. ಅಂತಿಮವಾಗಿ ಮನುಷ್ಯನ ನೆಮ್ಮದಿಯ ಬದುಕೇ ವೇದಸುಧೆಯ ಪರಮೋದ್ಧೇಶ.

ಶರ್ಮರೊಡನೆ ಮುಕ್ತ ಮಾತುಕತೆ

ಕಳೆದ ೨೯.೫.೨೦೧೦ ಶನಿವಾರ ಶ್ರೀ ಸುಧಾಕರ ಶರ್ಮರು ಹಾಸನಕ್ಕೆ ಬಂದಿದ್ದರು. ರಾತ್ರಿ ಊಟವಾದ ನಂತರ ವೇದಸುಧೆಬಳಗವು ಅವರೊಡನೆ ಮುಕ್ತಮಾತುಕತೆ ನಡೆಸಿತು. ಮಾತುಕತೆಯಲ್ಲಿ ಹಾಸನದ ಶ್ರೀರಾಮಸ್ವಾಮಿ,ಶ್ರೀನಟರಾಜ್ ಪಂಡಿತ್, ಶ್ರೀ ಕವಿ ನಾಗರಾಜ್ ಮತ್ತು ಶ್ರೀಧರ್ ಹಾಗೂ ಬೆಂಗಳೂರಿನ ಡಾ|| ವಿವೇಕ್ ಮತ್ತು ಕೃಷ್ಣಮೂರ್ತಿ ಇದ್ದರು. ಶ್ರೀ ಶರ್ಮರ ನಿಷ್ಠುರ ನುಡಿಗಳಿಗೆ ನಮ್ಮ ನಿಷ್ಠುರ ಪ್ರಶ್ನೆಗಳು. ಆದರೆ ಯಾರಿಗೂ ಮನಸ್ಸಿಗೆ ನೋವಾಗದಂತೆ ಮಾತುಕತೆ ಮುಕ್ತಾಯ. ಅದರ ಫಲಶೃತಿಯೇ ಈ ಧ್ವನಿ ಸುರುಳಿ. ಧ್ವನಿಯನ್ನೇ ನೀವು ನೇರವಾಗಿ ಕೇಳುವಾಗ ಅದರ ವಿವರ ಅನಗತ್ಯ. ಆದರೆ ಮುಕ್ತ ಮಾತುಕತೆ ಕೇಳಿದ ನಿಮ್ಮಿಂದ ಫೀಡ್ ಬ್ಯಾಕ್ ಬೇಕು. ಆಗ ಮಾತ್ರ ಈ ಪ್ರಯತ್ನ ಸಾರ್ಥಕವಾದೀತು.



---------------------------------------------------------------
ಡಾ||ಜ್ಞಾನದೇವ್ ಅಭಿಪ್ರಾಯ ಕೇಳಿ

---------------------------------------------------------------
ಸು೦ದರ ಅಪರೂಪದ
ಆಕರ್ಶಕ ಅಸಕ್ತಿಕರ ಮಾತುಕತೆಯನ್ನು ಬಹು ಕುತೂಹಲದಿ೦ದ ಆಲಿಸಿದೆ. ನಿಜಕ್ಕೂಮನಸ್ಸನ್ನು ವಿಸ್ತಾರಗೊಳಿಸುವ ವಿವಸ್ತ್ರಗೊಳಿಸುವ ಮಾತುಕತೆಯೂ ಹೌದು. ಶರ್ಮಾರವರ ಉತ್ತರಗಳು ಉತ್ತಮವಾಗಿದ್ದರೂಎಲ್ಲೋ ಒ೦ದು ಕಡೆ ತುಸು ಉದ್ಧಟನದ ಛಾಯೆ ಕ೦ಡುಬರುತ್ತದೆಯೇನೋ ಎ೦ದು ನನಗೆ ಭಾಸವಗುತ್ತದೆ. ನಿಮ್ಮ ಪ್ರಶ್ನೆಗಳು, ನಿಮ್ಮ ಮಾತಿನ ಶೈಲಿ ಶಬ್ದಗಳ ಗಾ೦ಭೀರ್ಯ ನಿಮ್ಮ ಪ್ರಾಮಾಣಿಕತೆ, ನಿಮ್ಮ ಆಳವಾದ ಧ್ವನಿ ಎಲ್ಲವೂ ನನಗೆ ಬಹು ಮೆಚ್ಚುಗೆಯಾದಅ೦ಶಗಳು. ಕೆಲವೆಡೆ ಶರ್ಮಾರವರ ಉತ್ತರಗಳು ಸಮ೦ಜಸವಾಗಿದ್ದರೂ ಇನ್ನು ಕೆಲವೆಡೆ ಹಾರಿಕೆ ಉತ್ತರಗಳೇನೋ ಎನಿಸುತ್ತವೆ. ಒಟ್ಟಾರೆ ಒ೦ದು ಎನ್ಲೈಟನಿ೦ಗ್ ಹರಟೆ ಅದು. ಸತ್ಯವನ್ನು ಅ೦ತಿಮವಾಗಿ ಮನುಷ್ಯನೇ ಕ೦ಡುಕೊಳ್ಳಬೇಕಾದರೂ ಆ ನಿಟ್ಟಿನಲ್ಲಿಅವನಿಗೆ ಬೆಳಕಿನ ಅಗತ್ಯವಿದೆ ಎ೦ಬುದನ್ನು ಯಾರೂ ಅಲ್ಲಗಳೆಯಲಾರು. ಅ ಬೆಳಕು ವೇದದಿ೦ದಲಾಗಲೀ ಇತರಧರ್ಮಗ್ರ೦ಥಗಳಿ೦ದಾಗಲೀ ಅಥವಾ ಬದುಕಿನ ಅನನ್ಯ ಅನುಭವಗಳಿ೦ದಲೂ ವ್ಯಕ್ತಿಗಳ ವೈಯುಕ್ತಿಕ ಪ್ರಭಾವಗಳಿ೦ದಲೂಬರಬಹುದು. ಏನೇ ಆಗಲೀ ಒಬ್ಬ ಹೇಳಿದ ಮಾತ್ರಕ್ಕೇ ಅದು ನಮ್ಮ ಪಾಲಿಗೆ ಸತ್ಯವಾಗಲಾರದು. ಅದು ನಮ್ಮ ಬದುಕಿನ ಅನುಭವದಮೂಸೆಯಲ್ಲಿ ಬೆ೦ದು ಹೊರಬ೦ದಾಗ ಮಾತ್ರ ಅ೦ಥ ಸತ್ಯಕ್ಕೆ ಬೆಲೆ ಅರ್ಥ. ಇದು ನನ್ನ ಭಾವನೆ. ನಿಮ್ಮ ನ೦ಬಿಕೆಗಳಿಗೆ ಶ್ರದ್ಧೆಗಳಿಗೆನನ್ನ ಅಪಾರ ಗೌರವವಿದೆ
ನಿಮ್ಮ ಈ ಸಚ್ಚಿ೦ತನ ಸತ್ ಪ್ರಯತ್ನಗಳು ನಿಜಕ್ಕೂ ಅನುಕರಣೀಯ ಶ್ಲಾಘನೀಯ ಶ್ರೀಧರ್.
ವ೦ದನೆಗಳೊ೦ದಿಗೆ
ನಿಮ್ಮ ಆತ್ಮೀಯ
ಡಾ||ಜ್ಞಾನದೇವ್

----------------------------------------------------
ಶ್ರೀ ವಿಶಾಲ್ ತಮ್ಮ ಅಭಿಪ್ರಾಯವನ್ನು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ. ಅವರ ಮಾತನ್ನು ನೋಡಿ. ನಿಮ್ಮ ಅಭಿಪ್ರಾಯವನ್ನೂ ತಿಳಿಸಿ--------------------------------------------------
Sir,
Pardon me for writing this comment in English.
First of all the conversation was really interesting,it brought out so many questions and answers we all are searching for.

But at the same time I feel that we aren't going deep enough to understand what all sharmaji says.Our previous belief, faith & fear are the biggest roadblocks to understand the ultimate truth.So we were misguided by people who are greedy and dumb,all in the name of God.

As sharmaji rightly says(ofcourse from vedas), a person can
be misguided easily if
1.He is Ignorant
2.He has got fear
3.He has lots of desires.
We all have certain amount of these things which is acting againstus to accept the ultimate truth.

Its really sad that people think a lot about what other people think about them rather than understanding self.The fear what we have is always temporary if its seen in broader sense.

Life is all about the options we get and the choices we make.We have the option now,choosing the right thing is upto the individual.


Regards,

Vishal
June 4, 2010 6:45 PM

Wednesday, June 2, 2010

ಏನಂತೀರಾ?

ಇಲ್ಲೊಂದು ಧ್ವನಿಸುರುಳಿ ಕೇಳಿ. ನಮ್ಮ-ನಿಮ್ಮ ಮನೆಗಳಲ್ಲಿ ಸಾಮಾನ್ಯವಾಗಿ ನಡೆಯುವ ಹೋಮ,ಪೂಜೆ ಇತ್ಯಾದಿ ಸಂದರ್ಭಗಳಲ್ಲಿಮಾತು- ಮಂತ್ರಗಳು ನಮ್ಮ ಕಿವಿಗೆ ಹೀಗೇ ಕೇಳುತ್ತವಲ್ಲವೇ? ಹೀಗೆ ಮಂತ್ರಗಳೇ ಕಿವಿಗೆ ಬೀಳದಂತೆಮಾತು,ಮಾತು,ಮಾತು......ಏನ್ಪ್ರಯೋಜನ ಅಲ್ವಾ?




ವಟುವಿಗೆ ಏನು ಹೇಳಿಕೊಡಬೇಕಿತ್ತು? ಏನು ಹೇಳಿಕೊಟ್ಟೆವು?
ದ್ವಿತೀಯ ಪರಾರ್ಧೇ? ದ್ವಿತೀಯ ಪ್ರಹಾರಾರ್ಧೇ?

Tuesday, June 1, 2010

ಜೀವನ ಬುನಾದಿ -1

ಮಾನವನು ಮಾನವೇತರ ಜೀವರಿಗಿಂತ ಒಂದು ವಿಷಯದಲ್ಲಿ ಭಿನ್ನನಾಗಿದ್ದಾನೆ. ಮಾನವೇತರ ಜೀವರಾದ ಪಶು-ಪಕ್ಷಿ-ಕ್ರಿಮಿ-ಕೀಟಗಳಲ್ಲಿಯೂ ಚೇತನನಾದ ಆತ್ಮವಿರುವುದರಿಂದ ಅವುಗಳಲ್ಲಿಯೂ ಜ್ಞಾನವಿದೆ. ಅದರೆ, ಅದು ಸ್ವಾಭಾವಿಕ ಜ್ಞಾನ. ಶರೀರಧಾರಿಗಳಾದ ಚೇತನಮಾತ್ರರಿಗೆ ಹಸಿವಾದಾಗ ತಿನ್ನಬೇಕು, ಬಾಯಾರಿದಾಗ ಕುಡಿಯಬೇಕು, ತನಗೆ ಸಂಭವಿಸಬಹುದಾದ ಅಪಾಯಕ್ಕೆ ಹೆದರಬೇಕು,ಆತ್ಮರಕ್ಷಣೆಗಾಗಿ ಹೆಣಗಬೇಕು; ವಂಶ ಪರಂಪರೆಯ ರಕ್ಷಣೆಗಾಗಿ ತನ್ನ ಜಾತಿಯ ಭಿನ್ನ ಲಿಂಗದ ಪ್ರಾಣಿಯೊಂದಿಗೆ ದೈಹಿಕ ಸಂಬಂಧ ಹೊಂದಬೇಕು - ಈ ಮೊದಲಾದ ಅರಿವು ಸ್ವಾಭಾವಿಕವಾಗಿಯೇ ಇರುತ್ತವೆ. ಚೇತನಮಾತ್ರರಲ್ಲಿ ಮಾನವನ ಗಣನೆಯೂ ಆಗುವುದರಿಂದ, ಮಾನವನಲ್ಲಿಯೂ ಈ ಸ್ವಾಭಾವಿಕ ಜ್ಞಾನವಿದ್ದೇ ಇರುತ್ತದೆ. ಆದರೆ ಈ ಸ್ವಾಭಾವಿಕ ಜ್ಞಾನದಿಂದಲೇ ಮಾನವನು ತೃಪ್ತನಾಗಲಾರನು. ಏಕೆಂದರೆ "ಏಕೆ? ಹೇಗೆ?" ಎಂಬ ಪ್ರಶ್ನೆಗಳನ್ನು ಕೇಳಬಲ್ಲ ವಿಕಾಸದ ಸ್ಥಿತಿಯನ್ನು ಮುಟ್ಟಿರುತ್ತದೆ ಮಾನವನ ಮನಸ್ಸು. ಪ್ರಶ್ನೆ ಕೇಳುವ ಭಾಗ್ಯ ಮತ್ತು ಅದಕ್ಕೆ ಉತ್ತರ ಹುಡುಕುವ ಅಭಿಲಾಷೆ ಕೇವಲ ಮನುಷ್ಯನಿಗೆ ಸಿಕ್ಕಿರುವ ಸಂಪತ್ತು. ಈ ಜಿಜ್ಞಾಸೆಯಿಂದಾಗಿ ಮಾನವನು ಅನ್ಯ ಜೀವರಿಗಿಂತ ಉನ್ನತ ಸ್ತರದಲ್ಲಿದ್ದಾನೆ.ಈ ಜಿಜ್ಞಾಸೆಯ ಪರಿಣಾಮವಾಗಿ, ಮಾನವನು ನೈಮಿತ್ತಿಕಜ್ಞಾನವನ್ನು ಪಡೆದುಕೊಳ್ಳಲು ಸಮರ್ಥನಾಗಿದ್ದಾನೆ. ನೈಮಿತ್ತಿಕ ಜ್ಞಾನಕ್ಕೆ ಆಶಿಸದೆ, ಕೇವಲ ಸ್ವಾಭಾವಿಕಜ್ಞಾನವೇ ಸಾಕೆಂಬ ತೃಪ್ತ ಮನೋಭಾವವನ್ನು ಸೂಚಿಸುವ ಮಾನವನ ಬೆಳವಣಿಗೆ ಅಲ್ಲಿಗೇ ನಿಂತು ಹೋಗಿ, ಅವನು ಶರೀರದ ಆಕಾರದಿಂದ ಮಾನವನಂತೆಯೇ ಕಂಡುಬಂದರೂ, ಆಂತರಿಕ ವಿಕಾಸದ ದೃಷ್ಟಿಯಿಂದ ಪಶುಪಕ್ಷಿ-ಕ್ರಿಮಿಕೀಟಗಳ ಮಟ್ಟದಲ್ಲಿಯೇ ಉಳಿದು ಹೋಗುತ್ತಾನೆ.ಮಾನವನ ನಿಜವಾದ ಸರ್ವಾಂಗೀಣ ವಿಕಾಸಕ್ಕೆ ಅನಿವಾರ್ಯವಾದ ಸಾಧನ ನೈಮಿತ್ತಿಕಜ್ಞಾನವೇ. ಬೇರೆ ನಿಮಿತ್ತಗಳಿಂದ, ಕಾರಣಗಳಿಂದ ಲಭಿಸುವ ಜ್ಞಾನವೇ ನೈಮಿತ್ತಿಕ ಜ್ಞಾನ.ಸ್ವಾಭಾವಿಕ ಜ್ಞಾನ, "ಹುಟ್ಟಿದ; ಇದ್ದ;ಸತ್ತ"- ಎಂದು ಮಾನವನ ಜೀವನವನ್ನು ಚಿತ್ರಿಸಬೇಕಾದರೆ ಸಾಕು."ಮಾನವ ಕೇವಲ ಹುಟ್ಟಿ, ಇದ್ದು ಸಾಯಲಿಲ್ಲ. ಏನೋ ಆಗಿ, ತಾನೂ ಬೆಳಗಿ, ಬೇರೆಯವರನ್ನೂ ಬೆಳಗಿಸಿ,ಶರೀರತ್ಯಾಗ ಮಾಡಿ ಅಮರನಾಗಿ ಹೋದ"- ಎಂದು ಮಾನವಚರಿತ್ರೆಯನ್ನು ಬರೆಯಬೇಕಾದರೆ, ನೈಮಿತ್ತಕ ಜ್ಞಾನ ಅವನ ಬಾಳಿಗೆ ಹೊಸೆದುಕೊಂಡು ಬರಲೇಬೇಕು; "ಹೇಗೆ? ಏಕೆ?" ಗಳಿಗೆ ಉತ್ತರ ಹುಡುಕಲು ಅವನು ನೈಮಿತ್ತಿಕ ಜ್ಞಾನಕ್ಕೆ ಶರಣಾಗಲೇಬೇಕು.
-ಕವಿ ನಾಗರಾಜ್

ಅಪರಾಧ ಮಾಡಿದ್ದೇನೆ! ಕ್ಷಮಿಸು!- ಜಿಜ್ಞಾಸೆ-೨

ಶ್ರೀ ಶರ್ಮಾಜಿ,
ನಮಸ್ತೆ,

ಅಪರಾಧ ಮಾಡಿದ್ದೇನೆ! ಕ್ಷಮಿಸು!- ಒಂದು ಜಿಜ್ಞಾಸೆ ಬರಹಕ್ಕೆ ನೀವು ಬರೆದಿರುವ ಅಭಿಪ್ರಾಯಗಳನ್ನಾದರಿಸಿ ನಿಮಗೆ ಕೆಲವುಪ್ರಶ್ನೆಗಳನ್ನು ಅದೇ ಬರಹದಲ್ಲಿ ಹಾಕಲಾಗಿದೆ. ದಯಮಾಡಿ ಅದಕ್ಕೆ ಉತ್ತರಿಸಿ. ನಿಮ್ಮ ಸಮಯದ ಅಭಾವದ ಅರಿವು ನನಗಿದೆ. ಆದರೂಸಮಯಮಾಡಿಕೊಂಡು ನೀವು ಉತ್ತರಿಸುವುದು ನಮಗೆ ಅನಿವಾರ್ಯವಾಗಿದೆ.