Pages

Wednesday, July 31, 2013

ಯಶಸ್ಸು ಕಂಡ ಗೀತಾಜ್ಞಾನಯಜ್ಞ











       ಹಾಸನದಲ್ಲಿ ಹದಿನೈದು ದಿನಗಳಿಂದ ಹಿಡಿದ ಮಳೆ ನಿಂತಿಲ್ಲ. ಆದರೂ ಪೂಜ್ಯ ಶ್ರೀ ಚಿದ್ರೂಪಾನಂದರು ನಡೆಸಿಕೊಟ್ಟ ಗೀತಾಜ್ಞಾನಯಜ್ಞಕ್ಕೆ ಜನರು ಛತ್ರಿಹಿಡಿದೇ ಬಂದರು. ಛಳಿ-ಮಳೆಯನ್ನು ಲೆಕ್ಕಿಸಲೇ ಇಲ್ಲ. ವೇದಭಾರತಿಯ ಕಾರ್ಯಕರ್ತರ ಮನಸ್ಸಿನಲ್ಲಿ ಸಂದೇಹವಿತ್ತು. ಈ ಬಿಡದ  ಮಳೆಯಲ್ಲಿ ಜನರು ಹೇಗಾದರೂ ಬರುತ್ತಾರೆ?! ಆದರೆ ಪೂಜ್ಯ ಚಿದ್ರೂಪಾನಂದರ ಮಾತನ್ನು ಒಮ್ಮೆ ಕೇಳಿದ ಮೇಲೆ  ರುಚಿಯರಿತವರು  ಅವಕಾಶವನ್ನು ತಪ್ಪಿಸಿಕೊಳ್ಳುವುದಿಲ್ಲ. ಹಾಗೇ ಆಯ್ತು. ಆರು  ದಿನಗಳು ನಡೆದ  ಗೀತಾಜ್ಞಾನಯಜ್ಞವು ಅತ್ಯಂತ  ಯಶಸ್ವಿಯಾಗಿ  ನಿನ್ನೆ ಸಮಾರೋಪ ಗೊಂಡಿತು.
             ಹಾಸನದ ಜನರಿಗೆ ಪೂಜ್ಯ ಶ್ರೀ ಚಿದ್ರೂಪಾನಂದರು ಹೊಸಬರಲ್ಲ. ಆದರೆ ಈ ಭಾರಿ ನಡೆದ ಗೀತಾಜ್ಞಾನಯಜ್ಞವು  ಹೊಸ ಸಂಪ್ರದಾಯವನ್ನು ಹಾಡಿತು.  ಸರಿಯಾಗಿ ಸಂಜೆ  6.00 ಗಂಟೆಗೆ  ಓಂಕಾರದೊಡನೆ ಆರಂಭವಾಗುತ್ತಿದ್ದ ಕಾರ್ಯಕ್ರಮದಲ್ಲಿ ಮೊದಲು ವೇದಭಾರತಿಯ ಸದಸ್ಯರಿಂದ ಅಗ್ನಿಹೋತ್ರ.  ಮಹಿಳಾ ವೇದಾಭ್ಯಾಸಿಗಳು, ಪುರುಷರು, ಕಿಶೋರರು ಸಾಮೂಹಿಕವಾಗಿ   ಸುಶ್ರಾವ್ಯವಾಗಿ ಪಠಿಸುತ್ತಿದ್ದ ವೇದ ಮಂತ್ರಗಳೊಂದಿಗೆ ನಡೆಯುತ್ತಿದ್ದ ಅಗ್ನಿಹೋತ್ರವು ಜನರ ಆಕರ್ಷಣೆಗೆ ಕಾರಣವಾಯ್ತು. ವೇದಭಾರತಿಯು ಆರಂಭವಾದದ್ದೇ "ಎಲ್ಲರಿಗಾಗಿ ವೇದ" ಎಂಬ ಉದ್ದೇಶದಿಂದ. ಕೇವಲ ಒಂದು   ತಿಂಗಳ  ಅಭ್ಯಾಸದಲ್ಲಿ  ನಡೆಸಿಕೊಟ್ಟ     ಅಗ್ನಿಹೋತ್ರವು ವೇದಾಧ್ಯಾಯಿಗಳಲ್ಲೂ ಭರವಸೆಯ ಭಾವವನ್ನು ತಂದರೆ ಜನರ ಆಕರ್ಷಣೆಗೂ ಕಾರಣವಾಯ್ತು. ಪೂಜ್ಯ ಸ್ವಾಮೀಜಿಯವರಂತೂ ವೇದವನ್ನು ಜನಸಾಮಾನ್ಯರೆಡೆಗೆ ತೆಗೆದುಕೊಂಡು ಹೋಗಲೇ ಬೇಕಾದ ಅನಿವಾರ್ಯತೆಯ ಬಗ್ಗೆ  ಒತ್ತುಕೊಟ್ಟು ಜನರಿಗೆ ಕೊಟ್ಟ ಕರೆಯು ಎಲ್ಲರ ಸಂತಸಕ್ಕೆ ಕಾರಣವಾಯ್ತು. ಪೂಜ್ಯರ ಆಡಿಯೋ ಗಳನ್ನು ಒಂದೆರಡು ದಿನಗಳಲ್ಲಿ ಇಲ್ಲಿ ಪ್ರಕಟಿಸಲಾಗುವುದು.

ತಪ್ಪದೆ ನೋಡಿ, ನಿಜವ ತಿಳಿಯಿರಿ!

Friday, July 26, 2013

ಗೀತಾ ಜ್ಞಾನಯಜ್ಞ : ಉಪನ್ಯಾಸ-2





“ನಿಜವ ತಿಳಿಯೋಣ” -2

                           
[ವೇದಾಧ್ಯಾಯೀ ಶ್ರೀ ಸುಧಾಕರಶರ್ಮರ ಉಪನ್ಯಾಸದ ನೇರ ಮಾತುಗಳು ]
ಪೀಠಿಕೆ
ವೇದವೆಂದರೆ ಲೌಕಿಕ ಮತ್ತು ಆಧ್ಯಾತ್ಮಿಕ ಜೀವನವನ್ನು  ಬೆಸೆದು  ಸಮತ್ವದಲ್ಲಿ ನಡೆಸಿಕೊಂಡು ಹೋಗುವ ಜೀವನವಿಜ್ಞಾನ. ವೇದವನ್ನೇ ಏಕೆ ಅನುಸರಿಸಬೇಕು? ಅದಕ್ಕೆ ಹೊರತಾಗಿ ಬೇಕಾದಷ್ಟು ಜ್ಞಾನಗಳಿಲ್ಲವೇ?, ಅನೇಕ ಮತಗ್ರಂಥಗಳಿವೆ ಅಲ್ಲವೇ? ಎಂಬ ಪ್ರಶ್ನೆ ಸಹಜವಾಗಿ ಮನುಷ್ಯನಲ್ಲಿ ಏಳಬಹುದು. ವೇದವು ಹೇಗೆ ಎಲ್ಲಾ ಮತ ಗ್ರಂಥಗಳಿಗೂ ಭಿನ್ನವಾಗುತ್ತದೆ! ಎಂಬುದನ್ನು ತಿಳಿದುಕೊಂಡಾಗ ವೇದದ ಶ್ರೇಷ್ಠತೆ ನಮಗೆ ಗೊತ್ತಾಗುತ್ತದೆ. ಈ ಬಗ್ಗೆ  ವಿಚಾರಮಾಡುತ್ತಾ ಸಾಗೋಣ.
ವೇದವು ಎಲ್ಲರಿಗಾಗಿ ತೆರೆದಿಟ್ಟ ಜ್ಞಾನಭಂಡಾರವಾಗಿದೆ.ಈ ವಿಚಾರವನ್ನು ದೃಢೀಕರಿಸಲು ಹಲವು ಮಂತ್ರಗಳ ಉಧಾಹರಣೆಯನ್ನು ಮುಂದೆ ನೋಡೋಣ. ಆದರೆ ಮತೀಯ ಗ್ರಂಥವನ್ನು ನೋಡಿದಾಗ. ಅದು ಎಲ್ಲರಿಗಾಗಿ ಅಲ್ಲ. ಯಾರು ಒಂದು ಮತವನ್ನು ನಂಬುತ್ತಾರೋ, ಯಾರು ಆ ಮತದ ಆಚಾರ ವಿಚಾರಗಳನ್ನು ಪಾಲಿಸುತ್ತಾರೋ ಅವರಿಗಾಗಿ ಈ ಮತ ಗ್ರಂಥಗಳು ಬರೆಯಲ್ಪಟ್ಟಿವೆ. ಆದರೆ ಈ ಯಾವ ಕಟ್ಟುಪಾಡುಗಳಿಲ್ಲದೆ ಇಲ್ಲಿರುವ  ವಿಚಾರವು ಸಕಲ ಮಾನವನ ಅಭ್ಯುದಯಕ್ಕಾಗಿ ಎಂಬ ಜ್ಞಾನಒಂದಿದ್ದರೆ ಅದು ವೇದಜ್ಞಾನ ಮಾತ್ರ. ಕಾರಣ ವೇದವನ್ನು ತಿಳಿಯಲು ಜಾತಿ ಕಟ್ಟುಪಾಡುಗಳಿಲ್ಲ, ಧರ್ಮದ ಕಟ್ಟುಪಾಡುಗಳಿಲ್ಲ, ಗಂಡು ಹೆಣ್ಣು ಭೇದವಿಲ್ಲ.ಮನುಷ್ಯ ಮಾತ್ರದ ಎಲ್ಲರಿಗಾಗಿ ತೆರೆದಿಟ್ಟ  ಜ್ಞಾನ ಯಾವುದಾದರೂ ಇದೆ ಎಂದಾದರೆ ಅದು ವೇದಜ್ಞಾನ ಮಾತ್ರ.ಇಷ್ಟು ವಿಶಾಲ ದೃಷ್ಟಿಕೋನದ ವೇದವನ್ನು ಕೆಲವರಿಗೆ ಸೀಮಿತ ಗೊಳಿಸಿಲ್ಲವೇ? ಎಂದರೆ ಹೌದು,ಹಾಗಾಗಿದೆ.  ಅದು ನಮ್ಮ ದೌರ್ಭಾಗ್ಯ.ವೇದವನ್ನು ಹೆಚ್ಚು ಬಲ್ಲವರೇ ಇಂತಾ ವೇದವಿರೋಧಿ ಮಾತುಗಳನ್ನಾಡುತ್ತಾರೆ. ಇದೇ ನಮ್ಮ ದುರಂತ.ನಮ್ಮ ಸಮಾಜದ ದು:ಸ್ಥಿತಿಗೆ ಇದೂ ಒಂದು ಮುಖ್ಯ ಕಾರಣ. ನಾವು ವೇದವನ್ನು ನೇರವಾಗಿ ಅಧ್ಯಯನ ಮಾಡಿದಾಗ ಸಹಜವಾಗಿ ನಮಗೆ ಇದು “ಎಲ್ಲರಿಗಾಗಿ ಇರುವ ಜ್ಞಾನ” ಎಂಬುದು ನಮ್ಮ ಅರಿವಿಗೆ ಬರುತ್ತದೆ. ನಾವೇ ನೇರವಾಗಿ ವೇದದ ಅಧ್ಯಯನ ಮಾಡಬೇಕು. ಯಾರದೋ ವ್ಯಾಖ್ಯೆಯನ್ನು ಓದಿ ಅವರ ಅಭಿಪ್ರಾಯವನ್ನೇ ವೇದದ ತಿರುಳು  ಎಂದು ಭಾವಿಸಿದರೆ   ನಮಗೆ ನಿಜವಾದ  ವೇದ ಜ್ಞಾನದ ಅರಿವು ಸಿಗಲಾರದು. [ಈ ಬರಹವು ಶ್ರೀ ಸುಧಾಕರ ಶರ್ಮರ ಉಪನ್ಯಾಸದ ನೇರ ನುಡಿಗಳು. ನಿಮಗೆ ಈ ಬರಹದಲ್ಲಿನ ಅವರ ಮಾತುಗಳು ಒಪ್ಪಿಗೆ ಯಾಗದಿದ್ದರೆ ಅಂದರೆ ಇದು ಸರಿಯಿಲ್ಲ, ವೇದಕ್ಕೆ ಅನುಗುಣವಾಗಿಲ್ಲ ಎಂದೆನಿಸಿದರೆ ನೀವು vedasudhe@gmail.com ಗೆ ನಿಮ್ಮ  ಸಂದೇಹವನ್ನು ಅಥವಾ ಪ್ರಶ್ನೆಯನ್ನು ತಿಳಿಸಿದರೆ ಶ್ರೀ ಸುಧಾಕರ ಶರ್ಮರಿಂದಲೇ ಉತ್ತರ ಕೊಡಿಸಲಾಗುವುದು]
ಕಣ್ಮುಚ್ಚಿಕೊಂಡು ಯಾವುದನ್ನೂ ನಂಬ ಬೇಡಿ. ಕಾರಣ ಪ್ರಪಂಚದಲ್ಲಿ  ಈ ರೀತಿಯ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಲಭ್ಯವಿರುವ, ಎಲ್ಲದಕ್ಕೂ ತೆರೆದುಕೊಳ್ಳುವ ಯಾವುದಾದರೂ ಗ್ರಂಥವಿದೆ ಎಂದರೆ ಅದು ವೇದ ಮಾತ್ರ.ಹೀಗೆ ಎಲ್ಲರ ಪ್ರಶ್ನೆಗಳಿಗೂ, ಎಲ್ಲರ ಪರೀಕ್ಷೆಗಳಿಗೂ, ಧಾರಾಳವಾಗಿ ತೆರೆದುಕೊಳ್ಳುವ ಜ್ಞಾನ ಭಂಡಾರವೆಂದರೆ ಅದು ವೇದ ಮಾತ್ರ. ಬೇರೆ ಯಾವ ಮತ ಗ್ರಂಥಗಳಿಗೂ ಈ ಸಾಮರ್ಥ್ಯ ಇಲ್ಲ. ಮುಂದಿನ ಉಪನ್ಯಾಸದ ಭಾಗವನ್ನು ಓದಿದ ನಂತರ ನೀವು ವೇದದ ವೈಶಿಷ್ಠ್ಯಗಳ ಪಟ್ಟಿ ಮಾಡಿಕೊಂಡು ಅದನ್ನು ಬೇರೆ ಯಾವ ಮತೀಯ ಗ್ರಂಥಗಳ ವೈಶಿಷ್ಠ್ಯಗಳ ಪಟ್ಟಿಯೊಡನೆ ಹೋಲಿಕೆ ಮಾಡಿ ನೋಡಿದಾಗ ಯಾವ ಜ್ಞಾನ ಎಲ್ಲರಿಗಾಗಿ ತೆರೆದಿದೆ? ಅಂದರೆ ಮನುಕುಲದ ಎಲ್ಲರ ಏಳಿಗಾಗಿ ಇದೆ ಎಂಬುದನ್ನು ವಾಚಕರು ಸುಲಭವಾಗಿ ಗ್ರಹಿಸಬಹುದು. ಆದರೆ ಈ ಉಪನ್ಯಾಸ ಮಾಲೆಯನ್ನು ಪೂರ್ಣ ಓದಿ ಮುಗಿಸುವ ವರೆಗೂ ವಾಚಕರು ಎರಡು ನಿಯಮಗಳನ್ನು ಪಾಲಿಸುವ ಅಗತ್ಯವಿದೆ. ಮೊದಲನೆಯ ನಿಯಮವೆಂದರೆ ಪೂರ್ವಾಗ್ರಹ ಇರಕೂಡದು, ಎರಡ  ನೆಯದು ಮುಕ್ತ ಮನಸ್ಸಿರಬೇಕು.
ಸಾಮಾನ್ಯವಾಗಿ ನಾವೆಲ್ಲಾ ಬೆಳೆದು ಬಂದಿರುವ ಪರಿಸರದಲ್ಲಿ ಹಲವಾರು ಆಚಾರ ವಿಚಾರಗಳನ್ನು ನಾವು ಆಚರಿಸಿಕೊಂಡು ಬಂದಿರುತ್ತೇವೆ. ಹಲವಾರು ಧಾರ್ಮಿಕ ನಂಬಿಕೆಗಳು, ಮತೀಯ ಭಾವನೆಗಳು, ಎಲ್ಲವೂ ನಮ್ಮಲ್ಲಿರುತ್ತವೆ. ಈ ಉಪನ್ಯಾಸವನ್ನು ಕೇಳುವಾಗ [ಬರಹ ಓದುವಾಗ]  ನಮ್ಮ ಧಾರ್ಮಿಕ ಭಾವನೆಗಳು/ನಮ್ಮ ನಂಬಿಕೆಗಳು ಸಹಜವಾಗಿ  ಮಧ್ಯೆ ಅಡ್ಡಿಯುಂಟುಮಾಡದೆ ಇರದು. ಆದರೆ ನನ್ನ [ಶರ್ಮರ] ಮನವಿ ಏನೆಂದರೆ ಈ ಉಪನ್ಯಾಸ ಮಾಲೆ ಮುಗಿಯುವ ವರೆಗೂ ಸ್ವಲ್ಪ ನಮ್ಮ ನಮ್ಮ ನಂಬಿಕೆಗಳು, ಆಚರಣೆಗಳನ್ನುಸ್ವಲ್ಪ ಸಮಯ ಪಕ್ಕಕ್ಕಿಟ್ಟು ಅವು ಮಧ್ಯದಲ್ಲಿ ಅಡ್ಡಿ ಉಂಟುಮಾಡದಂತೆ ಎಚ್ಚರ ವಹಿಸಿದರೆ  ಈ ಉಪನ್ಯಾಸದ ವಿಚಾರವು ಸ್ಪಷ್ಟವಾಗುತ್ತದೆ. ವೇದದ ವಿಚಾರವನ್ನು ನೇರವಾಗಿ ತಿಳಿದುಕೊಳ್ಳಲು ಸಹಾಯವಾಗುತ್ತದೆ.ವೇದವು ಎಲ್ಲರಿಗಾಗಿ ಎಂದು ಆರಂಭದಲ್ಲಿಯೇ ತಿಳಿಸಲಾಗಿದೆ. ಮತ್ತೊಂದು ಮುಖ್ಯ  ವಿಚಾರವೆಂದರೆ  ವೇದಜ್ಞಾನವು ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳಲು ಸಾಧ್ಯವಾದ ಜ್ಞಾನಭಂಡಾರ. ನಮ್ಮ ನೆಮ್ಮದಿಯ ಜೀವನಕ್ಕಾಗಿ ವೇದದಲ್ಲಿರುವ ವಿಚಾರಗಳನ್ನು ನೂರಕ್ಕೆ ನೂರು ಅಳವಡಿಸಿಕೊಳ್ಳಬಹುದು. ಇದು ಕಥೆಯಲ್ಲ.ಸಾಮಾನ್ಯವಾಗಿ ವೇದ ವೇದಾಂತಗಳ ವಿಚಾರದಲ್ಲಿ ಪ್ರವಚನಗಳನ್ನು ಕೇಳಿದ ಮೇಲೆ ಯಾರನ್ನೇ ಆಗಲೀ ಕೇಳಿದರೆ ಬರುವ ಉತ್ತರ “ಕೇಳಲು ತುಂಬಾ ಚೆನ್ನಾಗಿತ್ತು” ಆದರೆ ಜೀವನಕ್ಕೆ ಅಳವಡಿಸಿಕೊಳ್ಳುವ ವಿಚಾರ ಬಂದಾಗ  ಪ್ರವಚನ ಕೇಳುವ ಮುಂಚೆ ನಮ್ಮ ಜೀವನ ಹೇಗಿತ್ತೋ, ನಂತರವೂ ಹಾಗೇ ಇದೆ.ಬದಲಾವಣೆಯಾಗಲಿಲ್ಲ, ಅಂದರೆ ಪ್ರವಚನದ ವಿಚಾರಕ್ಕೂ ನಮ್ಮ ಜೀವನಕ್ಕೂ ಸಂಬಂಧವಿಲ್ಲದಂತಾಯ್ತು.ಕೇಳುವುದಕ್ಕೆ ಮಾತ್ರ ಚಂದ.ಹೀಗೂ ಹೇಳುವುದುಂಟು” ಈ ಪ್ರವಚನದ ಉಪಯೋಗ ಇವನು ಸತ್ತ ಮೇಲೆ “ಪುಣ್ಯದ ರೂಪದಲ್ಲಿ  ಆಗುತ್ತದೆ” ಆದರೆ ವೇದದ ವಿಚಾರದಲ್ಲಿ ಒಂದು ಗಂಟೆ  ಪ್ರವಚನ ಕೇಳಿದರೆ ಆ ಒಂದು ಗಂಟೆಯ ನಂತರ ಅವನಲ್ಲಿ ಅವನ ಆವರಗಿನ ಜೀವನದಲ್ಲಿ ಸುಧಾರಣೆಯಾಗಿರಬೇಕು, ನಮ್ಮ ಚಿಂತನೆಯಲ್ಲಿ ಒಂದಿಷ್ಟಾದರೂ ಪರಿವರ್ತನೆಯನ್ನು ಕಾಣಬೇಕು. ಸ್ವಲ್ಪವಾದರೂ ನಮ್ಮ ಬುದ್ಧಿ ಚುರುಕಾಗಬೇಕು.ಸ್ವಲ್ಪವಾದರೂ ಸತ್ಯವನ್ನು ಗುರುತಿಸುವ,   ಪ್ರಿಯವನ್ನು ಗುರುತಿಸುವ, ಹಿತವನ್ನು ಗುರುತಿಸುವ ಸಾಮರ್ಥ್ಯ ಹೆಚ್ಚಾಗಬೇಕು. ಈ ವಿಚಾರಗಳನ್ನು ಮನಸ್ಸಿಗೆ ಇಳಿಸಿಕೊಂಡಷ್ಟೂ  ಜೀವನದಲ್ಲಿ ಹೆಚ್ಚು ಹೆಚ್ಚು ಪರಿವರ್ತನೆಯನ್ನು  ಕಾಣಬಹುದು. ವೇದ ಎಂಬುದು ವಿಜ್ಞಾನ. ಇದಕ್ಕೆ ಆಧಾರವಾಗಿ ನಮಗೆ ಸಿಗುವಂತಹದ್ದು ವೇದ ಮಂತ್ರಗಳು.ವೇದವು ಪ್ರಪಂಚದ ಅತ್ಯಂತ ಹಳೆಯ ಜ್ಞಾನ ಭಂಡಾರ. ವೈದಿಕ ಸಾಹಿತ್ಯದ ಅರ್ಥವನ್ನು  ತಿರುಚಿದ   ಮ್ಯಾಕ್ಸ್ ಮುಲ್ಲರ್ ಕೂಡ ಒಂದು ಕಡೆ ಬರೆಯುತ್ತಾನೆ “ ಪ್ರಪಂಚದ ಅತ್ಯಂತ ಹಳೆಯ ಸಾಹಿತ್ಯವೆಂದರೆ ಋಗ್ವೇದ” ಅತ್ಯಂತ ಪ್ರಾಚೀನವಾದ ಜ್ಞಾನದ ಮೂಲ ವೇದಗಳು. ಮಿಕ್ಕೆಲ್ಲವೂ ವೇದದಿಂದ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಉಪಕೃತವಾಗಿರುವ ಸಾಹಿತ್ಯವೇ ಆಗಿವೆ. ಹಾಗಾಗಿ ವೇದವನ್ನು ಪರಮಪ್ರಮಾಣ ವೆಂತಲೂ ಅದರಿಂದ ಉಪಕೃತವಾಗಿರುವ ಗ್ರಂಥಗಳನ್ನು ಪರತ:ಪ್ರಮಾಣವೆಂತಲೂ ಅಳತೆಗೋಲಾಗಿಟ್ಟುಕೊಂಡು ಅರ್ಥಮಾಡಿಕೊಳ್ಳ ಬೇಕಾಗುತ್ತದೆ.
ವೇದ ವಿಜ್ಞಾನ:
ವೇದ ಎಂದೊಡನೆ ನಮ್ಮ ಕಣ್ಮುಂದೆ ಸಹಜವಾಗಿ  ಬರುವ ಅಂಶಗಳೆಂದರೆ ಯಜ್ಞ ಯಾಗಾದಿಗಳನ್ನು ಮಾಡಲು ಅಗತ್ಯವಾದ ಮಂತ್ರಗಳು, ಶ್ರಾದ್ಧ ಕರ್ಮಾದಿಗಳ ಮಂತ್ರಗಳು, ಇತ್ಯಾದಿ…ಇತ್ಯಾದಿ.. ಆದರೆ ವೇದವು ಅಷ್ಟಕ್ಕೇ ಸೀಮಿತವಾಗಿಲ್ಲ. ವೇದದಲ್ಲಿ ಸಮಸ್ತವೂ ಇದೆ. ವೇದ ವಿಜ್ಞಾನದ ಬಗ್ಗೆ ವಿಚಾರ ಮಾಡುತ್ತಾ ಹೋದಾಗ ಹಲವು ಹೊಸ ವಿಷಯಗಳು ನಮ್ಮ ಕಣ್ಮುಂದೆ ಬರುತ್ತವೆ. ಯಾವುದೇ ಸಂಪ್ರದಾಯ-ಆಚರಣೆಗಳಿಂದ ಮುಕ್ತವಾದ ಇವು ನೂರು ಪ್ರತಿಶತ ವೈಜ್ಞಾನಿಕ ಸತ್ಯ ಅಂಶಗಳು. ವಿಜ್ಞಾನವೆಂದರೆ ವಿಶೇಷ ಜ್ಞಾನ. ಈ ಅರ್ಥದಲ್ಲಿ ವಿಚಾರ ಮಾಡುವಾಗ ವೇದ ವಿಜ್ಞಾನದಲ್ಲಿ ಕಾಣಬರುವ ಮೊದಲ ಅಂಶವೆಂದರೆ “ಅಸ್ತಿತ್ವ”.  ಅಸ್ತಿತ್ವ ಎಂದರೆ ಇಂಗ್ಲೀಶ್ ನಲ್ಲಿ ಎಂಟಿಟಿ (ENTITY )ಎನ್ನುತ್ತಾರೆ. ಈ ಪದವನ್ನು ಈಗ ನಿಧಾನವಾಗಿ ಅರ್ಥ ಮಾಡಿಕೊಳ್ಳಬೇಕು. ಯಾವುದು ಅಸ್ತಿತ್ವದಲ್ಲಿದೆಯೋ ಅದು ಯಾವಾಗಲೂ ಅಸ್ತಿತ್ವದಲ್ಲಿರುತ್ತದೆ. ಅದನ್ನು ನಾಶ ಮಾಡಲೂ ಸಾಧ್ಯವಿಲ್ಲ. ಹೊಸ ದ್ರವ್ಯವನ್ನು ಸೃಷ್ಟಿಸಲೂ ಸಾಧ್ಯವಿಲ್ಲ. ಯಾವುದು ಇದೆಯೋ ಅದು ಇರುತ್ತದೆ. ಆದರೆ ಸಂದರ್ಭೋಚಿತವಾಗಿ ಬೇರೆ ಬೇರೆ ರೂಪಗಳನ್ನು ಪಡೆದು ರೂಪಾಂತರವಾಗಬಲ್ಲದು, ಅಷ್ಟೆ. ಆದರೆ ಮೂಲ  ದ್ರವ್ಯ ನಾಶವಾಗಲಾರದು.
 ಅಸ್ತಿತ್ವವನ್ನು ಒಂದು ವಸ್ತು ಎಂದು ತಿಳಿಯೋಣ. ಯಾವ ವಸ್ತುವೇ ಆಗಲಿ ಅದು ಆಗಿರುವುದು ದ್ರವ್ಯದಿಂದ.ಈ ದ್ರವ್ಯಕ್ಕೆ  ಮ್ಯಾಟರ್ ಎನ್ನುತ್ತಾರೆ.ದ್ರವ್ಯದ ಬಗ್ಗೆ  ವಿಜ್ಞಾನ ವಾದರೂ ಹೇಳುವುದೇನು “ದ್ರವ್ಯವನ್ನು ಸೃಷ್ಟಿಸಲೂ ಸಾಧ್ಯವಿಲ್ಲ, ನಾಶಪಡಿಸಲೂ ಸಾಧ್ಯವಿಲ್ಲ”. ಅಸ್ತಿತ್ವ ಎಂಬುದು ಒಂದೇ.ಆದರೆ ಅದರದೇ ರೂಪಾಂತರ ಅನೇಕ. ಉಧಾಹರಣೆಗೆ ಮಂಜಿನ ಗೆಡ್ಡೆ. ಅದು ಬಿಸಿಯಾದಾಗ  ನೀರಾಗುತ್ತದೆ,ಇನ್ನೂ ಹೆಚ್ಚಿನ ಉಷ್ಣತೆಯಲ್ಲಿ ಆವಿಯಾಗಿ ರೂಪಾಂತರವಾಗುತ್ತದೆ. ಮೂಲದಲ್ಲಿ ವಸ್ತು ಒಂದೇ ಅಲ್ಲವೇ? ಯಾವುದು ಇನ್ನೊಂದರ ಸಹಾಯವಿಲ್ಲದೆ ತನ್ನ ಗುಣ ಲಕ್ಷಣದಮೇಲೆ ಇರುತ್ತದೋ , ಅದನ್ನು ವಿಜ್ಞಾನದಲ್ಲಿ ಅಸ್ತಿತ್ವ ಎನ್ನುತ್ತಾರೆ. ವೇದವು  ಈ ಬಗ್ಗೆ ಏನು ಹೇಳುತ್ತದೆ, ಒಂದು ಮಂತ್ರ ನೋಡೋಣ.
ಅದಕ್ಕಿಂತ ಮುಂಚೆ ವೇದ ಮಂತ್ರವನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ಈ ಬಗ್ಗೆ ಸ್ವಲ್ಪ ವಿಚಾರ ಮಾಡಬೇಕಾಗುತ್ತದೆ. ಅನೇಕರು ಭಾವಿಸಿರುವಂತೆ ವೇದವು ಸಂಸ್ಕೃತದಲ್ಲಿಲ್ಲ. ವೇದವು ವೇದಭಾಷೆಯಲ್ಲಿದೆ, ಎಂದರೆ ಅಚ್ಚರಿಯಾಗಬಹುದು. ವೇದಭಾಷೆ ಎಂದರೇನು? ಪದದ ನಿರ್ಮಾಣ ಹೇಗಾಗುತ್ತದೆ? ಅದರ  ಹಿಂದಿನ ವಿಜ್ಞಾನವನ್ನು ನಾವು ಹೇಗೆ ಅರ್ಥ ಮಾಡಿಕೊಳ್ಳಬೇಕು, ಇತ್ಯಾದಿ ವಿಚಾರಗಳ ಬಗ್ಗೆ ಮುಂದಿನ ಭಾನುವಾರ ನೋಡೋಣ
[ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮರ ಉಪನ್ಯಾಸದ ಬರಹ ರೂಪ]

-ಹರಿಹರಪುರಶ್ರೀಧರ್

Thursday, July 25, 2013

Wednesday, July 24, 2013

ವೇದೋಕ್ತ ಜೀವನ ಶಿಬಿರ

ವೇದಭಾರತೀ, ಹಾಸನ

ವೇದೋಕ್ತ ಜೀವನ ಶಿಬಿರ

ಆಗಸ್ಟ್ 23,24 ಮತ್ತು 25

* ಹೊರ ಊರಿನಿಂದ ಶಿಬಿರ ಶುಲ್ಕ ಪಾವತಿಸಿರುವವರು 
1. ವಿಜಯಕುಮಾರ್ ಕಲ್ಯಾಣ್- ದೊಡ್ಡಬಳ್ಳಾಪುರ
2. ಸುಹಾಸ್ ದೇಶಪಾಂಡೆ,ಬೆಂಗಳೂರು
3. ಸುಬ್ರಹ್ಮಣ್ಯ, ಬೆಂಗಳೂರು
4. ಪುಷ್ಪಾ ಸುಬ್ರಹ್ಮಣ್ಯ, ಬೆಂಗಳೂರು 
5. ರಾಧೇಶ್ಯಾಮ್ ಸುಬ್ರಹ್ಮಣ್ಯ, ಬೆಂಗಳೂರು 
6. ಗಿರೀಶ್ ನಾಗಭೂಷಣ್, ಬೆಂಗಳೂರು
7. ವಿಶ್ವನಾಥ್ ಕಿಣಿ-ಪುಣೆ 
* ಹೊರ ಊರಿನಿಂದ  ದೂರವಾಣಿಯ/ಮೇಲ್  ಮೂಲಕ ನೊಂದಾಯಿಸಿಕೊಂಡಿರುವವರು
1.ಕೆ.ಜಿ.ಕಾರ್ನಾಡ್,ತುಮಕೂರು.
2. ಮೋಹನ್ ಕುಮಾರ್, ನಂಜನ ಗೂಡು
3.ಗುರುಪ್ರಸಾದ್, ಭದ್ರಾವತಿ
4. ಮಹೇಶ್, ಭದ್ರಾವತಿ
5. ಶಿವಕುಮಾರ್, ಬೆಂಗಳೂರು
6. ಚಿತ್ತರಂಜನ್,ಕೈಗಾ, ಉ.ಕ.ಜಿಲ್ಲೆ
7. ವಿನಯ್ ಕಾಶ್ಯಪ್, ಬೆಂಗಳೂರು
8 .ಶರಣಪ್ಪ, ಗದಗ್
9. ವಿಜಯ್ ಹೆರಗು, ಬೆಗಳೂರು
10. ಸುಬ್ರಹ್ಮಣ್ಯ ಹೆಚ್.ಎಸ್ , ಹಳೆಬೀಡು
ಹಾಸನ ದೂರವಾಣಿಯ/ಮೇಲ್  ಮೂಲಕ ನೊಂದಾಯಿಸಿಕೊಂಡಿರುವವರು
1. ಕವಿ ನಾಗರಾಜ್
2. ಶ್ರೀನಿವಾಸ್, AIR
3. ಹರಿಹರಪುರಶ್ರೀಧರ್
4. ಶ್ರೀ ಹರ್ಷ
5. ಚಿನ್ನಪ್ಪ
6. ಅಶೋಕ್
7. ನಟರಾಜ್ ಪಂಡಿತ್
8. ಶ್ರೀ ನಾಥ್        
9. ಸತೀಶ್
10.ಲೋಕೇಶ್
11.ಆದಿಶೇಷ್
12.ಕೇಶವಮೂರ್ತಿ
13.ಬೈರಪ್ಪಾಜಿ,
14. ಕೇಶವ ಮೂರ್ತಿ
15. ಪ್ರೇಮಾ ಭಗಿನಿ 

ಶಿಬಿರಶುಲ್ಕವನ್ನು ಈಗಾಗಲೇ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದು ಶುಲ್ಕ ಪಾವತಿಸಿರುವವರ ಪಟ್ಟಿಯಲ್ಲಿ ಹೆಸರು ಸೇರಿರದಿದ್ದಲ್ಲಿ ನೀವು ಶುಲ್ಕ ಪಾವತಿಸಿರುವ ಲಭ್ಯ ವಿವರವನ್ನು vedasudhe@gmail.com ಗೆ ಮೇಲ್ ಮೂಲಕ ತಿಳಿಸಲು ವಿನಂತಿಸುವೆ. 

ಒಟ್ಟು 40 ಶಿಬಿರಾರ್ಥಿಗಳಿಗೆ ಮಾತ್ರ ಅವಕಾಶವಿದ್ದು ಹೊರ ಊರುಗಳಿಂದ 15 ಜನರಿಗೆ ಮತ್ತು ಹಾಸನ ಜಿಲ್ಲೆಯಿಂದ 25 ಸಂಖ್ಯೆಗೆ ಮಿತಿಗೊಳಿಸಲಾಗುವುದು. 

Tuesday, July 23, 2013

ಗೀತಾ ಜ್ಞಾನಯಜ್ಞ


ವೇದಭಾರತಿಯಿಂದ ಗುರುಪೂರ್ಣಿಮಾ ಆಚರಣೆ


ಕಳೆದ ವರ್ಷ ಆಗಸ್ಟ್ 19ಕ್ಕೆ ಆರಂಭವಾದ "ಎಲ್ಲರಿಗಾಗಿ ವೇದ" ಸಾಪ್ತಾಹಿಕ ವೇದಪಾಠವು ಕೆಲವೇ ದಿನಗಳಲ್ಲಿ ನಿತ್ಯವೇದಪಾಠವಾಗಿ ಮುಂದುವರೆಯಿತು.ಕಳೆದ ಹನ್ನೊಂದು ತಿಂಗಳಲ್ಲಿ ಸ್ವರಗಳ ಪರಿಚಯದ ಜೊತೆಗೆ ಈಶ್ವರಸ್ತುತಿ ಪ್ರಾರ್ಥನಾ ಮಂತ್ರಗಳು,ಹಾಗೂ ಆರೇಳು ಸೂಕ್ತಗಳನ್ನು ಗುರುಗಳು ಕಲಿಸಿಕೊಟ್ಟಿದ್ದಾರೆ. ಬೇಲೂರಿನ ವೇದಾಧ್ಯಾಯೀ ಶ್ರೀವಿಶ್ವನಾಥಶರ್ಮರು ಹಾಕಿದ ಭದ್ರ ಬುನಾದಿಯಮೇಲೆ ಚನ್ನರಾಯಪಟ್ಟಣದ ವೇದಾಧ್ಯಾಯೀ ಶ್ರೀಪ್ರಸಾದ್ ಮತ್ತು ಹಾಸನದ ಶ್ರೀ ಅನಂತನಾರಾಯಣರು ವೇದಪಾಠವನ್ನು ಮುಂದುವರೆಸಿಕೊಂಡು ಹೋಗಿದ್ದಾರೆ.ಸಾಪ್ತಾಹಿಕ ಪಾಠನಡೆಯುವಾಗ ವಿಶ್ವನಾಥಶರ್ಮರು ಅಥವಾ ಪ್ರಸಾದ್ ಪಾಠವನ್ನು ನಡೆಸಿಕೊಂಡುಹೋಗುತ್ತಿದ್ದರು. ಆನಂತರ ಹಾಸನದವರೇ ಆದ ಮಿತ್ರ ಅನಂತನಾರಯಣರು ನಿತ್ಯವೂ ವೇದಪಾಠವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಸಹಜವಾಗಿ ಗುರುಪೂರ್ಣಿಮಾ ದಿನವು ಹತ್ತಿರವಾಗುತ್ತಿದ್ದಂತೆ ಎಲ್ಲಾ ಸದಸ್ಯರಿಗೂ ಗುರುಪೂಜಾ ಕಾರ್ಯಕ್ರಮವನ್ನು ಮಾಡುವ ತವಕ.ಗುರುಪೂರ್ಣಿಮೆಯ ದಿನವೇ ಮೂರೂ ಜನ ಗುರುಗಳನ್ನು ಕರೆದು ಅವರ ಮಾತುಗಳನ್ನು ಕೇಳುವ ಹಂಬಲ. ಎಲ್ಲರನ್ನೂ ಆಹ್ವಾನಿಸಿದೆವು.  ಕಾರ್ಯಕ್ರಮಕ್ಕೆ ವೇದ ಕಲಿಯುವ ಎಲ್ಲರೂ ಹಾಜರ್. ಆದರೆ ಒಬ್ಬರು ಮಾತ್ರ ಗುರುಗಳು ಬರಬೇಕಾಗಿದ್ದವರು ಅವರೂ ಬೇರೊಂದು ಕಾರ್ಯಕ್ರಮ ನಿಮಿತ್ತ ಬರಲಾಗಲಿಲ್ಲ.ಇಬ್ಬರು ಗುರುಗಳು ಮೊದಲೇ ತಾವು ಬರಲು ಸಮಯಾವಕಾಶವಿಲ್ಲವೆಂದು ಹೇಳಿದ್ದರು.ಸರಿ ಕಾರ್ಯಕ್ರಮ ಮಾಡಲು ಸಂಕಲ್ಪಿಸಿದ್ದಾಗಿದೆ. ಕವಿನಾಗರಾಜರೊಡನೆ ಚರ್ಚಿಸಿ ಒಂದು ಸ್ವರೂಪ ನೀಡಿದ್ದಾಯ್ತು. ಮೊದಲು ಸಾಂಗವಾಗಿ ಅಗ್ನಿಹೋತ್ರ ನಡೆಯಿತು. ಎಲ್ಲರೂ ಚೆನ್ನಾಗಿಯೇ ಈಶ್ವರಸ್ತುತಿಪ್ರಾರ್ಥನಾ ಮಂತ್ರವನ್ನು ಪಠಿಸಿ ನಂತರ ಅಗ್ನಿಹೋತ್ರ ಮಂತ್ರವನ್ನು ಸಾಮೂಹಿಕವಾಗಿಯೇ ಪಠಿಸಿದರು. ಅಗ್ನಿಹೋತ್ರವು ಸೊಗಸಾಗಿ ಸಂಪನ್ನಗೊಂಡಿತು.
ನಂತರ ಗುರುಪೂಜಾ ಕಾರ್ಯಕ್ರಮ. ಯಾವ ಗುರುವನ್ನು ಪೂಜಿಸುವುದು. ಗುರು ವ್ಯಕ್ತಿಯಾದರೆ ಶಾಶ್ವತನಲ್ಲ. ಹಾಗಾಗಿ ತತ್ವವನ್ನೇ ಆಯ್ದುಕೊಂಡೆವು. ನಮ್ಮೆಲ್ಲರಿಗೂ ಮಹಾನ್ ಗುರು ಭಗವಂತನೇ. ಅವನ ನುಡಿಯೇ ವೇದ. ವೇದವೇ ನಮಗೆ ಗುರು. ವೇದವನ್ನು ಪೂಜಿಸುವುದೆಂದರೆ ವೇದ ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು, ಬೇರೆಯವರಿಗೂ ಜ್ಞಾನವನ್ನು ನೀಡುವುದು. ಈ ಸ್ಪಷ್ಟವಿಚಾರವನ್ನು ಮನಸ್ಸಿನಲ್ಲಿ ಸಂಕಲ್ಪಿಸಿ ಸಾಂಕೇತಿಕ ವಾಗಿ ವೇದಭಾಷ್ಯ ಗ್ರಂಥವನ್ನೇ ಅರ್ಚಿಸಿದೆವು.[ ವೇದದಲ್ಲಿ ಹೂ ಅರ್ಚಿಸುವ ಪದ್ದತಿ ಎಲ್ಲಾ ಇಲ್ಲವೆಂದು ನನ್ನ ಅನಿಸಿಕೆ. ಆದರೆ ಸಾಂಕೇತಿಕವಾಗಿ ಮನದಲ್ಲಿ ವಿಚಾರವನ್ನು ಸಂಕಲ್ಪಿಸಿಕೊಂಡೇ ಮಾಡಿದೆವು] ಈ ವಿಚಾರಕ್ಕಾಗಿ ನನ್ನ ದುಡಿಮೆಯ ಒಂದು ಭಾಗವನ್ನು ಸಮರ್ಪಿಸುವುದು. ಎಲ್ಲರೂ ಈ ವಿವರಣೆ ಪಡೆದು ಅದರಂತೆ ಗುರುಪೂಜಾ ನಡೆಯಿತು. ನಂತರ ಎಲ್ಲಾ ಸದಸ್ಯರೂ ತಮ್ಮ ತಮ್ಮ ವಿಚಾರ ಹಂಚಿಕೊಂಡರು. ಆರಂಭದಲ್ಲಿ ರೆಕಾರ್ಡ ಮಾಡುವ ಯೋಜನೆ ಇರಲಿಲ್ಲ. ಕೆಲವರ ಆತ್ಮೀಯ ನುಡಿಗಳನ್ನು ಕೇಳಿದಂತೆ ರೆಕಾರ್ಡ ಮಾಡ ಬೇಕೆನಿಸಿತು. ನಮ್ಮ ವೆಬ್ ತಾಣ vedasudhe.com ನಲ್ಲಿ ರೆಕಾರ್ಡ್ ಆದ ಧ್ವನಿಯನ್ನು ಇಲ್ಲಿ ಹಂಚಿಕೊಂಡಿದ್ದೇವೆ.
 ಕೇಳಿ. ಈ ಅಪರೂಪದ ಗುಪೂಜಾ ಮೊದಲ ವರ್ಷದ ಕಾರ್ಯಕ್ರಮದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.
--

Saturday, July 20, 2013

ಹೆಸರೊಂದಿಟ್ಟರೆನಗೆ

ಹೆಸರೊಂದಿಟ್ಟರೆನಗೆ ಹೆಸರಿರದ ನನಗೆ
ಹೆಸರೊಂದಿಟ್ಟರೆನಗೆ || ಪ ||

ಎನಿತು ಜನನವೋ ಎನಿತು ಮರಣವೋ
ಯಾವ ಜೀವವೋ ಎಂಥ ಮಾಯೆಯೋ
ಆದಿ ಅಂತ್ಯವನರಿಯದವಗೆ ಹೆಸರೊಂದಿಟ್ಟರೆನಗೆ ||

ಹಿಂದೆ ಇರದ ಮುಂದೆ ಇರದಿಹ
ತನುವ ಕಣಕಣ ಚಣಚಣಕೆ ಬದಲು
ಇಂತಪ್ಪ ತನುವೆ ತಾನು ಎಂದವಗೆ ಹೆಸರೊಂದಿಟ್ಟರೆನಗೆ ||

ಪಂಚತತ್ವದ ದೇಹ ಬಣ್ಣ ಬಣ್ಣದ ಬಟ್ಟೆ
ಚೈತನ್ಯವಿಲ್ಲದಿರೆ ಬರಿಯ ಲೊಳಲೊಟ್ಟೆ
ಚೇತನದ ಚೆಲುವ ಕಂಡರಿಯದವಗೆ ಹೆಸರೊಂದಿಟ್ಟರೆನಗೆ ||

ಅವನ ಕರುಣೆ ನವರಸದ ಅರಮನೆ
ಚಲಿಪ ಅರಮನೆಗೊಡೆಯನೆಂದು
ಬೀಗಿ ರಾಗದಿ ನಿಜವ ಮರೆತವಗೆ ಹೆಸರೊಂದಿಟ್ಟರೆನಗೆ ||

ಎನಿತು ಪುಣ್ಯವೋ ಮನುಜನಾಗಿಹೆ
ಮತಿಯ ಬಿಟ್ಟರೆ ಜಾರಿಹೋಗುವೆ
ಅರಿಗೆ ಗುರಿಯಾಗಿರುವ ನರಗೆ ಹೆಸರೊಂದಿಟ್ಟರೆನಗೆ ||

ಹೆಸರು ಹೆಸರೆಂದು ಕೊಸರುತಿಹರು
ಅರಿತವರೆ ಬಿಡರು ಹೆಸರ ಹಂಬಲ
ಹೆಸರು ಹಸಿರೆಂದುಸಿರುವವಗೆ ಹೆಸರೊಂದಿಟ್ಟರೆನಗೆ ||

-ಕ.ವೆಂ.ನಾಗರಾಜ್.

Tuesday, July 16, 2013

ಅಭಿನಂದನೆಗಳು

     ಅಭಿನಂದನೆಗಳು. ಆತ್ಮೀಯ ಮಿತ್ರ ಹರಿಹರಪುರ ಶ್ರೀಧರ ಯಾವ ಮುಹೂರ್ತದಲ್ಲಿ ಈ ಬ್ಲಾಗ್ ಪ್ರಾರಂಭಿಸಿದರೋ, ಯಾವ ಉದ್ದೇಶದಿಂದ ಪ್ರಾರಂಭವಾಯಿತೋ ಅದು ಸಾರ್ಥಕ ರೀತಿಯಲ್ಲಿ ಮುನ್ನಡೆದಿದೆ. ಈ ವೈಚಾರಿಕ ತಾಣದ ಪುಟವೀಕ್ಷಣೆಗಳು ಒಂದು ಲಕ್ಷದ ಗಡಿ ದಾಟಿ ಮುನ್ನಡೆದಿರುವುದು ಶುಭ ಸಂಕೇತವೇ ಸರಿ. 'ವೇದಭಾರತೀ' ಅಡಿಯಲ್ಲಿ ನಡೆದಿರುವ,  ನಡೆಯುತ್ತಿರುವ ಮತ್ತು ಮುಂದೆ ನಡೆಯಲಿರುವ ಕಾರ್ಯಕ್ರಮಗಳಿಗೆ ಇದು ಸ್ಫೂರ್ತಿದಾಯಕವಾಗಿದೆ. ಹರಿಹರಪುರ ಶ್ರೀಧರರಿಗೆ, ಎಲ್ಲಾ ಸಹಕಾರಿಗಳಿಗೆ, ಓದುಗರಿಗೆ, ವೈಚಾರಿಕ ಜಿಜ್ಞಾಸೆ, ಚರ್ಚೆಗಳಲ್ಲಿ ಸಕ್ರಿಯರಾಗಿ ಪಾಲುಗೊಂಡ ಎಲ್ಲರಿಗೂ ಮನಃಪೂರ್ವಕ ಅಭಿನಂದನೆಗಳು.
-ಕ.ವೆಂ.ನಾಗರಾಜ್.

Sunday, July 14, 2013

ಮೆಚ್ಚುಗೆ ಅಥವಾ ತೆಗಳಿಕೆಯನ್ನು ಹೇಗೆ ಸ್ವೀಕರಿಸಬೇಕು?


 “ಸಮ: ಶತ್ರೌ ಚ ಮಿತ್ರೇ ಚ ತಥಾ ಮಾನಾಪಮಾನಯೋ:”  ಇದು ಶ್ರೀ ಕೃಷ್ಣನ ಮಾತು. ಮಾನ ಎಂದರೆ ಮರ್ಯಾದೆ, ಗೌರವ ಎಂಬ ಅರ್ಥದ ಜೊತೆಗೆ  ಅಳತೆಯ ಪ್ರಮಾಣವೆಂತಲೂ ಅರ್ಥವಿದೆ. ಅಪಮಾನ ಎಂದರೆ ಮಾನಕ್ಕೆ ವಿರುದ್ಧವಾದ ಅಗೌರವ, ಅವಮರ್ಯಾದೆ ಎಂದೂ ಅರ್ಥವಿದೆ.” ಶತ್ರು-ಮಿತ್ರರನ್ನು ಮತ್ತು ಮಾನಾಪಮಾನವನ್ನು ಸಮನಾಗಿ ಕಾಣು ಎಂಬುದು ಶ್ರೀ ಕೃಷ್ಣನ ಸಂದೇಶ. ಈ ಒಂದು ಸಂದೇಶವನ್ನು ನಮ್ಮ ಜೀವನಕ್ಕೆ ಹೆಗೆ ಅನ್ವಯಿಸಿಕೊಳ್ಳಬಹುದು, ಇಂದು ವಿಚಾರ ಮಾಡೋಣ.
ಯಾರಾದರೂ ನಮ್ಮನ್ನು ಹೊಗಳಿದಾಗ ನಮಗಾಗುವ ಸಂತೋಷಕ್ಕೆ ಪಾರವೇ ಇಲ್ಲ.ಹೊಗಳಿದವರ ಬಗ್ಗೆ ನಾವು ಮೆಚ್ಚಿದ್ದೇ ಮೆಚ್ಚಿದ್ದು!!  ಅದೇ ರೀತಿ ಯಾರಾದರೂ ನಮ್ಮನ್ನು ತೆಗಳಿದರೆ ನಾವು ಕುಸಿದೇ ಹೋಗಿಬಿಡುತ್ತೇವೆ.” ಎಂತಾ ಮನುಷ್ಯ ಈತ!  ನನ್ನನ್ನು ಹೀಗೆ ಅಂದು ಬಿಟ್ಟ   ನಲ್ಲಾ! ಅವನಿಗೆ ಸರಿಯಾಗಿ  ಬುದ್ಧಿ ಕಲಿಸದಿದ್ದರೆ ನನ್ನ ಹೆಸರು ……..ನೇ ಅಲ್ಲ! ಏನೋ ಇವನೇ  ಶ್ರೀರಾಮ ಚಂದ್ರನೇನೋ ಎಂಬಂತೆ ಹೆಸರನ್ನು ಪಣಕ್ಕೆ ಒಡ್ಡಿ ಬಿಡುತ್ತೇವೆ. ತೆಗಳಿದವನನ್ನು ಎಲ್ಲಾ ಶಬ್ಧಗಳಿಂದಲೂ ಠೀಕಿಸಿಬಿಡುತ್ತೇವೆ.ಸಾಮಾನ್ಯವಾಗಿ ನೊರಕ್ಕೆ  ನೂರರಷ್ಟು ಜನರ ಸ್ವಭಾವ ಇದೇ ತಾನೇ? ಹೊಗಳಿಕೆ ಮತ್ತು ತೆಗಳಿಕೆ ವಿಚಾರದಲ್ಲಿ ಈರೀತಿಯ ನಮ್ಮ ವರ್ತನೆಯಿಂದ ನಮಗೆ ತೊಂದರೆ ತಪ್ಪಿದ್ದಲ್ಲ. ಹಾಗಾದರೆ ನಾವು ಹೊಗಳಿಕೆ ತೆಗಳಿಕೆಯನ್ನು ಹೇಗೆ ಸ್ವೀಕರಿಸಬೇಕು? ಎರಡಕ್ಕೂ ನಾವು ತಟಸ್ಥವಾಗಿರಬೇಕು.ತಟಸ್ಥವಾಗಿರುವುದಾದರೂ ಹೇಗೆ? ಒಬ್ಬರು ನಮ್ಮನ್ನು ಹೊಗಳಿದಾಗ ಖುಷಿಪಡದೇ ಇರಲು ಸಾಧ್ಯವೇ?ಹೊಗಳುವುದಷ್ಟೇ ಅಲ್ಲ ಕೆಲವರು ಶಾಲು ಹೊದಿಸಿ ಸನ್ಮಾನವನ್ನೂ ಮಾಡುತ್ತಾರೆ,ಪತ್ರಿಕೆಯಲ್ಲಿ ಮೆಚ್ಚಿ ಬರೆಯುತ್ತಾರೆ. ಇಂತಾ ಸಂದರ್ಬದಲ್ಲಿ ನಾವು ಸುಮ್ಮನಿರಲು ಹೇಗೆ ಸಾಧ್ಯ? ನಮಗೆ ಭಾವನೆಯೇ ಇಲ್ಲವೇ? ಹಾಗೆಯೇ ಒಬ್ಬರು ನಮ್ಮನ್ನು ತೆಗಳಿದರೆ ನಮಗೆ ಬೇಸರವಾಗದಿರಲು ನಾವೇನು ಕಲ್ಲೇ? ನಮಗೆ ಭಾವನೆಗಳಿಲ್ಲವೇ, ಸ್ಪಂಧನ ಇಲ್ಲವೇ, ಹೊಗಳಿಕೆ-ತೆಗಳಿಕೆಗೆ ನಾವು ತತಸ್ಥವಾಗಿರುವುದು ಹೇಗೆ?
ತಟಸ್ಥವಾಗಿರಲು ಸಾಧ್ಯ. ಅದೇ  ಈಗ ವಿಚಾರಮಾಡಬೇಕಾದ ವಿಷಯ. ಮೊದಲು ನಾವು ಮಾಡಬೇಕಾದುದಾದರೂ ಏನು? ಆತ್ಮವಿಮರ್ಶೆ! ನಾನೇನು ಎಂಬುದನ್ನು ಮೊದಲು ತೀರ್ಮಾನ ಮಾಡಿಕೊಳ್ಳಬೇಕಾದವನು ನಾನೇ. ಹೊಗಳಿಕೆ ತೆಗಳಿಕೆ ಮಾತು ಒಂದುಕಡೆ ಇರಲಿ. ಆದರೆ ನಾನೇನು ಎಂಬುದನ್ನು ಕರಾರುವಾಕ್ಕಾಗಿ  ನಿರ್ಧರಿಸುವವನು ನಾನೇ! ಮತ್ಯಾರಿಂದಲೂ ಅದು ಸಾಧ್ಯವಿಲ್ಲ. ಏಕಾಂತದಲ್ಲಿ ಕುಳಿತು ನನ್ನ ಬಗ್ಗೆ ನಾನು ಯೋಚಿಸಬೇಕು? ನಾನು ಏನು ಎಂಬುದನ್ನು ಅರ್ಥಮಾಡಿಕೊಳ್ಳಲು ಕೆಲವು ಅಂಶಗಳನ್ನು ಅಳತೆ ಗೋಲಾಗಿ    ಇಟ್ಟುಕೊಳ್ಳಬೇಕು. ಅದರಲ್ಲಿ ಮೊದಲನೆಯ ಅಂಶ “ ಆಸೆ”
ನನ್ನಲ್ಲಿ ಆಸೆ ಎಷ್ಟಿದೆ? ಎಂಬುದನ್ನು ನಾನೇ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ನನಗೆ ಆಸೆ ಎಷ್ಟಿದೆ? ಯಾವ ಯಾವ ವಿಚಾರದಲ್ಲಿ ಆಸೆ ಇದೆ?ನನ್ನ ಅಗತ್ಯಕ್ಕೆ ತಕ್ಕಂತೆ ಆಸೆ ಇದೆಯೇ? ಅಗತ್ಯ ಪೂರೈಸಿದ ಕೂಡಲೇ ಸುಮ್ಮನಾಗುತ್ತೇನೆಯೇ? ಆಸೆ ಒಂದು ಮಿತಿಯಲ್ಲಿದೆಯೇ? ಹೆಚ್ಚಿದೆಯೇ? ಅಥವಾ ಕಡಿಮೆ ಇದೆಯೇ? ಅದನ್ನು ಗುರುತಿಸಿಕೊಳ್ಳಬೇಕು.
ಎರಡನೆಯ ಅಂಶ “ಕೋಪ”. ಕೋಪದ ವಿಚಾರದಲ್ಲೂ ಅಷ್ಟೆ. ಅದರ ಪ್ರಮಾಣ  ಎಷ್ಟು.ಕೋಪ ಯಾವ್ಯಾವ ಕಾರಣಕ್ಕೆ ಬರುತ್ತೆ?  ಒಂದು ಮಿತಿಯಲ್ಲಿದೆಯೇ? ಹೆಚ್ಚಿದೆಯೇ? ಅಥವಾ ಕಡಿಮೆ ಇದೆಯೇ? ಇದರ ಜೊತೆಗೇ ಕಂಡು ಬರುವ ಮತ್ತೊಂದು ಅಂಶ “ಸಹನೆ”. ಒಮ್ಮೊಮ್ಮೆ ಹೀಗೆ ಅನ್ನಿಸುವುದುಂಟು” ತಡಿಯುವ ವರೆಗೂ ತಡೆದೆ, ಇನ್ನೊಂದು ಮಾತನ್ನು ಆಮನುಷ್ಯ ಆಡಿದ್ದರೆ ಅವನ ಕಪಾಳಕ್ಕೆ ಭಾರಿಸುತ್ತಿದ್ದೆ!!”  ಇಂತಾ ಅನುಭವ ನಮಗೆ ಆಗಿದೆಯಲ್ಲವೇ?
ಮೂರನೆಯ ಅಂಶ “ನಾನು ಯಾವು ಯಾವುದಕ್ಕೆ ಎಷ್ಟೆಷ್ಟು ಅಂಟಿಕೊಂಡಿದ್ದೇನೆ?” ಒಮ್ಮೊಮ್ಮೆ ಹೀಗೆ ಅನ್ನಿಸದೇ ಇರದು” ನನಗೆ ಇದು ಆಗಲೇ ಬೇಕು, ಇದಾಗದಿದ್ದರೆ ನನಗೆ  ನನಗೆ ಸಹಿಸಲು ಸಾಧ್ಯವೇ ಇಲ್ಲ. ಹೀಗೆ ಯಾವ್ಯಾವ ವಿಚಾರಕ್ಕೆ, ಯಾವ್ಯಾವ ವಸ್ತುವಿಗೆ, ಯಾವ್ಯಾವ ವ್ಯಕ್ತಿಗೆ ಎಷ್ಟೆಷ್ಟು  ಅಂಟಿಕೊಂಡಿದ್ದೇನೆ? ಎಷ್ಟೆಷ್ಟು ಅಂಟು ಬಿಡಿಸಿಕೊಂಡಿದ್ದೇನೆ? ಅಥವಾ ಅಂಟಿಯೂ ಅಂಟದಂತೆ ಇದ್ದೇನೆ? ಇದನ್ನು ನಾನೇ ತೀರ್ಮಾನ ಮಾಡ  ಬೇಕಲ್ಲವೇ?
ನಾಲ್ಕನೆಯ ಅಂಶ “ನನ್ನಲ್ಲಿ ಎಷ್ಟು ಅಹಂಕಾರವಿದೆ?” ಮತ್ತೊಬ್ಬರ ಮಾತನ್ನು ಕೇಳುವಷ್ಟು ಮಟ್ಟಿಗೆ ನನ್ನ ಮಾನಸಿಕತೆ ಇದೆಯೇ?  ಮತ್ತೊಬ್ಬರು ಹೇಳಿದ ಮಾತಿನಲ್ಲಿ   ಸತ್ಯವನ್ನು ಸ್ವೀಕರಿಸುವ ಮನ:ಸ್ಥಿತಿ ನನಗಿದೆಯೇ? ಅಥವಾ ಒಬ್ಬರು ಹೇಳಿದ್ದನ್ನೆಲ್ಲಾ ಸತ್ಯ ಎಂದು ನಂಬುವ ಪೆದ್ದುತನ ಇದೆಯೇ?ಇದನ್ನೆಲ್ಲಾ ನನ್ನೊಳಗೇ ಪ್ರಶ್ನಿಸಿಕೊಳ್ಳಬೇಕು.
ಕೊನೆಯ ಅಂಶವೆಂದರೆ ಯಾರ್ಯಾರ ವಿಚಾರದಲ್ಲಿ ನನಗೆ ಹೊಟ್ಟೆಉರಿ ಇದೆ? ಯಾರ್ಯಾರ ವಿಚಾರದಲ್ಲಿ ನನಗೆ ಅಸಹನೆ ಇದೆ? ಒಬ್ಬರನ್ನು ನೋಡಿ ಅವರಿಗೆ ಅಷ್ಟೊಂದಿದೆ! ನನಗಿಲ್ಲವಲ್ಲಾ! ಅವರಿಗೆ ಸಿಕ್ಕಿರುವುದು ನನಗೆ ಸಿಕ್ಕಿಲ್ಲವಲ್ಲಾ! ಎಂದು ಹೋಲಿಕೆ ಮಾಡಿಕೊಂಡು ನನ್ನ ಮನಸ್ಥಿತಿಯನ್ನು ಎಷ್ಟರ ಮಟ್ಟಿಗೆ ನಾನು ಕೆಡಸಿಕೊಳ್ಳುತ್ತೇನೆ? ಎಂಬುದನ್ನು ಗುರುತಿಸಿಕೊಳ್ಳ ಬೇಕು.
ಈ ಮೇಲಿನ ಅಂಶಗಳ ಜೊತೆಗೆ ಇನ್ನೂ ಹಲವು ಪ್ರಶ್ನೆಗಳನ್ನು ನಮಗೆ ನಾವೇ ಹಾಕಿ ನಮ್ಮ ಉತ್ತರವನ್ನು ನಾವೇ ಹುಡುಕಿಕೊಳ್ಲಬಹುದು. ಹೀಗೆ ಮಾಡಿದಾಗ ನನ್ನ ಯೋಗ್ಯತೆ ಇಷ್ಟು, ನನ್ನ ಸಾಮರ್ಥ್ಯ ಇಷ್ಟು, ನನ್ನ ದೋಷಗಳು ಇಷ್ಟು, ಎಂದು ನನ್ನ ಬಗ್ಗೆ ನಾನೇ ಒಂದು ಚಿತ್ರವನ್ನು ಹಾಕಿಕೊಳ್ಳಲು  ಸಾಧ್ಯ. ಒಂದು ಎಚ್ಚರಿಕೆ ಇರಬೇಕು, ಇದನ್ನು ಮಾಡುವಾಗ ಪ್ರಾಮಾಣಿಕವಾಗಿ ಮಾಡಬೇಕು. ನನ್ನಲ್ಲಿರುವ ದೋಷವನ್ನು ನಾನು ಒಪ್ಪಿಕೊಳ್ಳಬೇಕು.ನನ್ನಲ್ಲಿರುವ ದೋಷವನ್ನು ಮರೆಮಾಚ ಬಾರದು, ಅಥವಾ ಈ ದೋಷಕ್ಕೆ ಕಾರಣ ನಾನಲ್ಲ, ಎಂದು ಬೇರೆ ಯಾರದೋ ಮೇಲೆ ಹೊರಿಸಲೂ ಬಾರದು.ನನ್ನಲ್ಲಿ ದೋಷ ಇಟ್ಟುಕೊಂಡು  ಬೇರೆಯವರ ಮೇಲೆ ಬೆಟ್ಟುಮಾಡಿ ತೋರಿಸುವುದು ಪ್ರಾಮಾಣಿಕತೆ ಎನಿಸುವುದಿಲ್ಲ. ಹೀಗೆ ಆತ್ಮವಿಮರ್ಶೆ ಮಾಡಿಕೊಂಡಾಗ ನನ್ನ ಯೋಗ್ಯತೆ ಎಷ್ಟು? ಎಂಬ ಪ್ರಮಾಣ ನಮಗೆ ಗೊತ್ತಾಗುತ್ತದೆ. ಪರಿಪೂರ್ಣತೆಗೆ ನೂರು ಅಂಕಗಳೆಂದಾದರೆ ಅದರಲ್ಲಿ ನನ್ನ ಯೋಗ್ಯತೆಗೆ  ನಲವತ್ತೈದು ಅಂಕ ಬರಬಹುದು ,ಎಂದು ನಾನು ಅಂದಾಜು ಮಾಡಿಕೊಳ್ಳುತ್ತೇನೆಂದು ಭಾವಿಸೋಣ. ಈಗ ಹೊಗಳಿಕೆ ಎಂದರೇನು? ವಿಚಾರ ಮಾಡೋಣ. ನನ್ನ ಯೋಗ್ಯತೆಗೆ ನಾನೇ ಕಟ್ಟಿದ ಬೆಲೆ ನಲವತ್ತೈದು, ಆದರೆ ಮತ್ತೊಬ್ಬರು ನನ್ನನ್ನು ಅತಿಯಾಗಿ ಹೊಗಳಿ ಅದು ಎಂಬತ್ತು ಎಂಬತ್ತೈದು ಪ್ರಮಾಣದ್ದೆಂದು ನನಗನ್ನಿಸಿದರೆ ಆಗ ನಾವು ಅಲ್ಲಿ ಸಂದೇಹ ಪಡಬೇಕು. ನನ್ನ ಯೋಗ್ಯತೆಗೆ ಮೀರಿ ಇವರು ನನ್ನನ್ನು ಹೊಗಳುತ್ತಿದ್ದಾರೆಂದರೆ ಇದು ಡೇಂಜರ್! ಎಂಬುದನ್ನು ನಾನು ಊಹಿಸಬೇಕು. ಇಲ್ಲೇನೋ ಅಪಾಯವಿದೆ! ನನ್ನ ಯೋಗ್ಯತೆಗಿಂತ ಹೆಚ್ಚಾಗಿ ಇವರು ನನ್ನನ್ನು ಉಬ್ಬಿಸುತ್ತಿದ್ದಾರೆಂದರೆ ಇವರು ಇಲ್ಲಿ ನನ್ನಿಂದೇನೋ ಲಾಭಪಡೆಯುವ ಉಪಾಯ ವಿರಬಹುದು! ಅಥವಾ ಇವರಿಗೆ ಅಂದಾಜುಮಾಡಲು ಗೊತ್ತಿಲ್ಲ, ಎಂದು ತಿಳಿದು ನಾವು ತಟಸ್ಥವಾಗಿ ಇರಬೇಕು.
ತೆಗಳಿಕೆ ವಿಚಾರದಲ್ಲೂ ಇದೇ ಸೂತ್ರ ಅನ್ವಯಿಸಿಕೊಳ್ಲಬೇಕಾಗುತ್ತದೆ. ನನ್ನ ಯೋಗ್ಯತೆ ನಲವತ್ತೈದೆಂದು ನನಗೆ ಗೊತ್ತಿದೆ. ಆದರೆ ನನ್ನನ್ನು ನಿಂದನೆ ಮಾಡಬೇಕೆಂಬ ವ್ಯಕ್ತಿ ನನ್ನೊಡನೆ ಬಹಳ   ಹೀನಾಯವಾಗಿ ವರ್ತಿಸುತ್ತಾನೆ. ನನ್ನ ಯೋಗ್ಯತೆಯನ್ನು ಇಪ್ಪತ್ತು ಅಂಕಕ್ಕಿಂತಲೂ ಕಡಿಮೆ ಬರುವಂತೆ ಅವನ ತೆಗಳಿಕೆ ಇರುತ್ತೆ. ಆಗಲೂ ನಾವು ಕುಸಿದುಹೋಗುವ ಅಗತ್ಯವಿಲ್ಲ. ನನ್ನ ನಿಜವಾದ ಯೋಗ್ಯತೆಗೆ ನಾನೆ ಬೆಲೆ ಕಟ್ಟಿಕೊಂಡಾಗಿದೆ. ಈ ಮನುಷ್ಯ ಇಷ್ಟು ಹೀನಾಯವಾಗಿ ಮಾತನಾದಬೇಕಾದರೆ ಅವನಿಗೆ ನನ್ನ ಯೋಗ್ಯತೆಯನ್ನು  ಅಳೆಯುವ ಯೋಗ್ಯತೆ ಇಲ್ಲ, ಎಂಬುದು ಮೊದಲನೆಯ ಅಂಶ. ಎರಡನೆಯದು ಇದರಲ್ಲೇನೋ ಒಂದು ದುರುದ್ಧೇಶವಿರಬಹುದು. ನಾನು ಅದನ್ನು ಸ್ವೀಕರಿಸಬೇಕಿಲ್ಲ. ಯೋಗ್ಯತೆಇಲ್ಲದವನು ಕಟ್ಟಿದ  ಬೆಲೆಗೆ ನಾನು ತಲೆಕೆದಸಿಕೊಳ್ಳಬೇಕಾಗಿಲ್ಲ. ಈಗಲೂ ನಾನು ತಟಸ್ಥನಾಗೇ ಇರಬೇಕು.ಕಾರಣ ನನ್ನ ಯೋಗ್ಯತೆಯನ್ನು ಅತಿಯಾಗಿ ಹೊಗಳುವ ಅಗತ್ಯವೂ ನನಗಿಲ್ಲ, ಹಾಗೂ ನನ್ನ ಯೋಗ್ಯತೆಯನ್ನು ಕೀಳಾಗಿ ಅಂದಾಜುಮಾಡಿದವರ ಬಗ್ಗೆಯೂ ನಾನು ತಲೆ ಕೆಡಸಿಕೊಳ್ಲಬೇಕಾಗಿಲ್ಲ. ಕಾರಣ  ಅವರಿಗೆ ನನ್ನನ್ನು ಅಂದಾಜು ಮಾಡುವ ಯೋಗ್ಯತೆ ಯಿಲ್ಲ ,ಎಂಬುದನ್ನು ನಾನು ಅರಿತುಕೊಳ್ಳಬೇಕು.
ಇನ್ನೊಂದು ಅತಿಮುಖ್ಯ ಸಂಗತಿಎಂದರೆ ಯಾರು ಎಷ್ಟೇ ಹೊಗಳಲಿ, ಅದರಲ್ಲಿ ಹೆಚ್ಚಿನದನ್ನು ಬಿಟ್ಟು ನನ್ನ ಯೋಗ್ಯತೆಗೆ ಎಷ್ಟು ಹೊಂದುತ್ತದೋ ಅಷ್ಟನ್ನು ಸ್ವೀಕರಿಸುವುದು. ಅಂದರೆ ನಾನೇ ನನಗೆ ಕೊಟ್ಟುಕೊಂಡಿ  ರುವ ಅಂಕ ನಲವತ್ತೈದು. ಅವರು ಎಂಬತ್ತು ಕೊಟ್ಟಿದ್ದರೂ ನಾನು ಸ್ವೀಕರಿಸಬೇಕಾಗಿರುವುದು ನಲವತ್ತೈದು ಮಾತ್ರ.ಹಾಗೆಯೇ ತೆಗಳುವವರು ಕೀಳಾಗಿ ತೆಗಳಿದ್ದರೂ ಅವರು ನನಗೆ ಇಪ್ಪತ್ತು ಅಂಕ ನೀಡಿದ್ದರೂ ನಾನು ಅದನ್ನು ಸ್ವೀಕರಿಸಬೇಕಾಗಿಲ್ಲ ,ನನ್ನ ಅಂಕ ನಲವತ್ತೈದೆಂಬುದನ್ನು ಆಗಲೂ ಅರ್ಥಮಾಡಿಕೊಳ್ಳಬೇಕು.ಹಾಗೆಯೇ ಇನ್ನೊಂದು ಅಂಶ ಕೂದ ಗಮನಿಅಸಬೇಕು. ನಿನ್ನಲ್ಲಿ ನಲವತ್ತೈದು ಅಂಕಗಳಷ್ಟು ಯೋಗ್ಯತೆ ಇದ್ದರೂ ಇನ್ನೂ ಐವತ್ತೈದರಷ್ಟು ದೋಷವಿದೆ, ಎಂದು ಹೇಳಿದವರ ಬಗ್ಗೆ ನಮ್ಮ ಪ್ರತಿಕ್ರಿಯೆ ಹೇಗಿರಬೇಕು ಅಂತವರಿಗೆ ಮೊದಲು ಧನ್ಯವಾದ ಹೇಳಿ, ಈ ದೋಷಗಳನ್ನು ಸರಿಪಡಿಸಿಕೊಳ್ಳಲು ನಾನೇನು ಮಾದಬೇಕೆಂದು ಧನಾತ್ಮಕವಾಗಿ ವಿಚಾರ ಮಾಡಿದಾಗ ಅವರ ತೆಗಳಿಕೆಯೂ ನಮಗೆ ವರವೇ ಆಗುತ್ತದೆ. ಹೀಗೆ ವಿಚಾರಮಾಡಿ ಜೀವನವನ್ನು ಸ್ವೀಕರಿಸುತ್ತಾ ಹೋದರೆ ನಮ್ಮ ಜೀವನ ಮಟ್ಟ ಸುಧಾರಿಸಲು ಸಾಧ್ಯವಿಲ್ಲವೇ? ಏನಂತೀರಾ?
[ಪ್ರೇರಣೆ: ವೇದಾಧ್ಯಾಯೀ ಶ್ರೀ ಸುಧಾಕರಶರ್ಮರ ಮಾತುಗಳು]
-ಹರಿಹರಪುರಶ್ರೀಧರ್




Saturday, July 6, 2013

ವೇದೋಕ್ತ ಜೀವನ ಶಿಬಿರ

ವೇದಭಾರತೀ, ಹಾಸನ

ವೇದೋಕ್ತ ಜೀವನ ಶಿಬಿರ

ಆಗಸ್ಟ್ 23,24 ಮತ್ತು 25

* ಹೊರ ಊರಿನಿಂದ ಶಿಬಿರ ಶುಲ್ಕ ಪಾವತಿಸಿರುವವರು 
1. ವಿಜಯಕುಮಾರ್ ಕಲ್ಯಾಣ್- ದೊಡ್ಡಬಳ್ಳಾಪುರ
2. ಸುಹಾಸ್ ದೇಶಪಾಂಡೆ,ಬೆಂಗಳೂರು
3. ಸುಬ್ರಹ್ಮಣ್ಯ, ಬೆಂಗಳೂರು
4. ಪುಷ್ಪಾ ಸುಬ್ರಹ್ಮಣ್ಯ, ಬೆಂಗಳೂರು 
5. ರಾಧೇಶ್ಯಾಮ್ ಸುಬ್ರಹ್ಮಣ್ಯ, ಬೆಂಗಳೂರು 
6. ಗಿರೀಶ್ ನಾಗಭೂಷಣ್, ಬೆಂಗಳೂರು
* ಹೊರ ಊರಿನಿಂದ  ದೂರವಾಣಿಯ/ಮೇಲ್  ಮೂಲಕ ನೊಂದಾಯಿಸಿಕೊಂಡಿರುವವರು
1. ವಿಶ್ವನಾಥ್ ಕಿಣಿ-ಪುಣೆ 
2. ಮೋಹನ್ ಕುಮಾರ್, ನಂಜನ ಗೂಡು
3.ಗುರುಪ್ರಸಾದ್, ಭದ್ರಾವತಿ
4. ಮಹೇಶ್, ಭದ್ರಾವತಿ
5. ಶಿವಕುಮಾರ್, ಬೆಂಗಳೂರು
6. ಚಿತ್ತರಂಜನ್,ಕೈಗಾ, ಉ.ಕ.ಜಿಲ್ಲೆ
7. ವಿನಯ್ ಕಾಶ್ಯಪ್, ಬೆಂಗಳೂರು
8 .ಶರಣಪ್ಪ, ಗದಗ್
9. ವಿಜಯ್ ಹೆರಗು, ಬೆಗಳೂರು
10. ಸುಬ್ರಹ್ಮಣ್ಯ ಹೆಚ್.ಎಸ್ , ಹಳೆಬೀಡು
11. ಕೆ.ಜಿ.ಕಾರ್ನಾಡ್,ತುಮಕೂರು

ಹಾಸನ ದೂರವಾಣಿಯ/ಮೇಲ್  ಮೂಲಕ ನೊಂದಾಯಿಸಿಕೊಂಡಿರುವವರು
1. ಕವಿ ನಾಗರಾಜ್
2. ಶ್ರೀನಿವಾಸ್, AIR
3. ಹರಿಹರಪುರಶ್ರೀಧರ್
4. ಶ್ರೀ ಹರ್ಷ
5. ಚಿನ್ನಪ್ಪ
6. ಅಶೋಕ್
7. ನಟರಾಜ್ ಪಂಡಿತ್
8. ಶ್ರೀ ನಾಥ್        
9. ಸತೀಶ್
10.ಲೋಕೇಶ್
11.ಆದಿಶೇಷ್
12.ಕೇಶವಮೂರ್ತಿ
13.ಬೈರಪ್ಪಾಜಿ, 

ಶಿಬಿರಶುಲ್ಕವನ್ನು ಈಗಾಗಲೇ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದು ಶುಲ್ಕ ಪಾವತಿಸಿರುವವರ ಪಟ್ಟಿಯಲ್ಲಿ ಹೆಸರು ಸೇರಿರದಿದ್ದಲ್ಲಿ ನೀವು ಶುಲ್ಕ ಪಾವತಿಸಿರುವ ಲಭ್ಯ ವಿವರವನ್ನು vedasudhe@gmail.com ಗೆ ಮೇಲ್ ಮೂಲಕ ತಿಳಿಸಲು ವಿನಂತಿಸುವೆ. 

ಒಟ್ಟು 40 ಶಿಬಿರಾರ್ಥಿಗಳಿಗೆ ಮಾತ್ರ ಅವಕಾಶವಿದ್ದು ಹೊರ ಊರುಗಳಿಂದ 15 ಜನರಿಗೆ ಮತ್ತು ಹಾಸನ ಜಿಲ್ಲೆಯಿಂದ 25 ಸಂಖ್ಯೆಗೆ ಮಿತಿಗೊಳಿಸಲಾಗುವುದು. ಶುಲ್ಕ ಪಾವತಿಸಲು  ಕಡೆಯ ದಿನ ಜುಲೈ 15. 

ವಿಶೇಷ:
1. ಸ್ಥಳೀಯವಾಗಿ ಪತ್ರಿಕೆಗಳಿಗೆ ಇನ್ನೂ ಮಾಹಿತಿ ನೀಡಿಲ್ಲ
2. ಇನ್ನೂ  ಕರಪತ್ರ ಮುದ್ರಣವಾಗಿಲ್ಲ
3. ಕೇವಲ ವೆಬ್ ಸೈಟ್ ಮಾಹಿತಿಯಿಂದ ಅಗತ್ಯ ಸಂಖ್ಯೆ ತಲುಪಿಯಾಗಿದೆ. 
4. ಸಂಜೆ ನಡೆಯುವ ಉಪನ್ಯಾಸಕ್ಕೆ    ಸಾರ್ವಜನಿಕರಿಗೂ ಪ್ರವೇಶ ವಿರುವುದರಿಂದ ಸ್ಥಳೀಯರು ಉಪನ್ಯಾಸದ ಲಾಭ 
    ಪಡೆಯುತ್ತಾರೆ. ಶಿಬಿರಕ್ಕಾಗಿ ಪ್ರಚಾರವನ್ನೇನೂ ಮಾಡುವುದಿಲ್ಲ.