ವೇದಸುಧೆಯ ಆತ್ಮೀಯ ಅಭಿಮಾನೀ ಬಂಧುಗಳೇ,
ನಮಸ್ತೆ. ನಿಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ನಿಮ್ಮೆಲ್ಲರ ನೆಮ್ಮದಿಯ ಬದುಕಿಗಾಗಿ ಒಂದಿಷ್ಟು ಉತ್ತಮ ವಿಚಾರಗಳನ್ನು ನೀಡುತ್ತಾ , ಸಂದೇಹಗಳು ಬಂದಾಗ ಆರೋಗ್ಯಪೂರ್ಣ ಚರ್ಚೆಮಾಡುತ್ತಾ ವೇದಸುಧೆಯ ಚಟುವಟಿಕೆಗಳು ಆತ್ಮೀಯ ವಾತಾವರಣದಲ್ಲಿ ಸಾಗುತ್ತಿರುವುದು ಸರಿಯಷ್ಟೆ. ಆದರೆ ಒಮ್ಮೊಮ್ಮೆ ಕೆಲವು ವಿಚಾರಗಳು ಎಲ್ಲರಿಗೂ ಒಪ್ಪಿಗೆ ಯಾಗುವುದಿಲ್ಲ. ಸತ್ಯ ಏನೇ ಇರಲಿ ತಾವು ನಂಬಿದ ವಿಚಾರವನ್ನು ಯಾರಾದರೂ ಖಂಡಿಸಿದಾಗ ಬೇಸರಗೊಂಡು ಕಡೆಗೆ ಚರ್ಚೆ ವೈಯಕ್ತಿಕ ಮಟ್ಟಕ್ಕೆ ಸಾಗಲು ಅನುವು ಮಾಡುತ್ತದೆ. ಅಂತಹ ಒಂದು ಪ್ರಸಂಗ ವೇದಸುಧೆಯಲ್ಲಿ ನಡೆದಿದೆ. ಆತ್ಮೀಯರಾದ ಶ್ರೀ ಮಹೇಶ್ ನೀರ್ಕಜೆಯವರು ನನಗೆ ಎಸ್,ಎಂ.ಎಸ್. ಮಾಡಿದಾಗ ಅಂತಹ ಪ್ರಸಂಗವು ನನ್ನ ಕಣ್ಣಿಗೆ ಬಿತ್ತು. ಚರ್ಚೆಗಳು ತೀರಾ ವೈಯಕ್ತಿಕ ಮಟ್ಟಕ್ಕೆ ಇಳಿದಿದ್ದರಿಂದ ಆ ಎರಡು ಪ್ರತಿಕ್ರಿಯೆಗಳನ್ನು
ತೆಗೆಯಲಾಗಿದೆ. ವೇದಸುಧೆಯಲ್ಲಿ ನೇರವಾಗಿ ಚರ್ಚೆ ಮಾಡಲು ಅನುಕೂಲವಿರಲೆಂಬ ಕಾರಣಕ್ಕಾಗಿ ಓದುಗರು ಬರೆದ ಪ್ರತಿಕ್ರಿಯೆಗಳನ್ನು ಪರಿಶೀಲಿಸದೆ ಪ್ರಕಟವಾಗಲು ಅವಕಾಶ ಕಲ್ಪಿಸಲಾಗಿದೆ. ಆದರೆ ಮುಂದೆ ಈ ಬಗ್ಗೆಯೂ ವೇದಸುಧೆ ಬಳಗವು ಒಂದು ಹೊಸನಿಲುವು ತೆಗೆದುಕೊಳ್ಳಬೇಕಾಗಬಹುದು. ಅಂತೂ ಯಾರೋ ಒಬ್ಬ ಓದುಗರ ಪ್ರತಿಕ್ರಿಯೆಯನ್ನು ಆಧರಿಸಿ ವೇದಸುಧೆಯು ತನ್ನ ನೀತಿಯನ್ನು ಬದಲಿಸಿಕೊಳ್ಳುವುದಿಲ್ಲ, ಬದಲಿಗೆ ಬಳಗದ ಹಿರಿಯ ಸದಸ್ಯರೊಡನೆ ಸಮಾಲೋಚಿಸಿ ನಿರ್ಧರಿಸಲಾಗುವುದು.