Pages

Saturday, December 11, 2010

Rig Veda Mantra

DEVAAN DEVYATE YAGYA

---------(15/12, Rigveda)

A person who desires godliness should respect scholars. Being respectful to the knowledgeable persons is an important criteria for acquiring knowledge. One has to be humble if he desires to acquire knowledge. In real worship,we just not do ritualistic worship but we try to imbibe the qualities of the one we are worshipping.By attaining godliness one shall be blessed with happiness and growth.


ಪ್ರಶ್ನೆ-ಪರಿಹಾರ

ಶ್ರೀ ಸುಧಾಕರ ಶರ್ಮರಿಗೆ ನಮಸ್ಕಾರಗಳು.

ವೇದಸುಧೆಯಲ್ಲಿ ನಿಮ್ಮ ಉಪನ್ಯಾಸಗಳು ಚೆನ್ನಾಗಿವೆ, ನಿಮಗೂ ಹಾಗೂ ಪ್ರಕಟಿಸಿದ ಶ್ರೀಧರ್ ರವರಿಗೆ ಧನ್ಯವಾದಗಳು.

ನನಗೆ ಬಂದ ಕೆಲವು ಅನುಮಾನಗಳಿಗೆ ತಾವು ಪರಿಹರಿಸುತ್ತೀರಿ ಎನ್ನುವ ಆಶಯದೊಂದಿಗೆ ನನ್ನ ಒಂದೆರಡು ಪ್ರಶ್ನೆಗಳು:

1. ತಾವು ತಮ್ಮ ಉಪನ್ಯಾಸದಲ್ಲಿ 2೦,೦೦೦ ಕ್ಕೂ ಹೆಚ್ಚಿರುವ ವೇದಮಂತ್ರಗಳಿಗೆ amendment ಇಲ್ಲ ಅಂತ ಹೇಳಿದ್ದೀರಿ, ಹಾಗಾದರೆ ನಮಕ, ಚಮಕ, ಪುರುಷಸೂಕ್ತ ಇತ್ಯಾದಿಗಳು, ಒಂದಕ್ಕಿಂತ ಹೆಚ್ಚು ವೇದಗಳಲ್ಲಿ ಬರುತ್ತವೆ. ಅವು ಋಗ್ವೇದದಲ್ಲಿ ಬರುವ ನಮಕ, ಚಮಕ, ಪುರುಷಸೂಕ್ತಕ್ಕೂ ಯಜುರ್ವೇದದಲ್ಲಿ ಬರುವುದಕ್ಕೂ ಬಹಳಷ್ಟು ವ್ಯತ್ಯಾಸ ಇದೆ. ಇದು amendment ಅಲ್ಲವೇ? ಈ ವ್ಯತ್ಯಾಸಕ್ಕೆ ಕಾರಣಗಳೇನು ?

2. ನಾವು ನಮಕ, ಚಮಕ, ಪುರುಷಸೂಕ್ತ ಪಠಣ ಮಾಡುವುದಾದರೆ ಅಥವಾ ಕೇಳುವುವುದಾದರೆ ಯಾವುದನ್ನು ಕೇಳಬೇಕು?ಓದಬೇಕು? ಋಗ್ವೇದದ್ದೇ?ಯಜುರ್ವೇದದ್ದೇ ? ಇದಕ್ಕೇನಾದರು ನಿಯಮಗಳಿವೆಯೇ? ಬೆಳಿಗ್ಗೆ, ಸಾಯಂಕಾಲ ಪಠಣ ಮಾಡಬೇಕಾದರೆ ಯಾವುದನ್ನು ಅನುಸರಿಸಬೇಕು?

3. ಶುಕ್ಲ ಯಜುರ್ವೇದ ಮಾಧ್ಯಂದಿನದಲ್ಲಿ ಪುರುಷಸೂಕ್ತದಲ್ಲಿ ಸಹರ್ಸಶೀರ್ಷಾ, ಪುರುಷ ಇತ್ಯಾದಿ ಶಬ್ದಗಳಿಗೆ ಸಹಸ್ರ ಶೀರುಖಾ, ಪುರೂಖಾ ಇತ್ಯಾದಿ ಹೇಳುತ್ತಾರಲ್ಲ ಕಾರಣವೇನು? (ಇದರೊಟ್ಟಿಗೆ ಅ ಆಡಿಯೋ ಫೈಲ್ ಕಳುಹಿಸಿದ್ದೇನೆ)


-ಜಿ.ಎಸ್.ಶ್ರೀನಾಥ್
-----------------------------------------------------------
ಶ್ರೀ ಸುಧಾಕರಶರ್ಮರು ಏನು ಹೇಳುತ್ತಾರೆ, ನೋಡೋಣ.....

1. Amendmentನ ಅರ್ಥವೇನೆಂದರೆ ಈಗಿರುವುದು ಸರಿಯಿಲ್ಲ, ಆದ್ದರಿಂದ ತಿದ್ದಿ ಬರೆಯಲಾಗಿದೆ. ಆಗ ಹಳೆಯದು ಅನೂರ್ಜಿತವಾಗುತ್ತದೆ.
ಇಲ್ಲಿ ಆ ತರಹದ ತಿದ್ದುಪಡಿಗಳಿಲ್ಲ.
ಹಲವು ಸೂಕ್ತಗಳು ಒಂದಕ್ಕಿಂತ ಹೆಚ್ಚು ವೇದಗಳಲ್ಲಿ ಕಂಡುಬರುವುದುಂಟು.
ಸಾಮವೇದದಲ್ಲಿ ಸಾಕಷ್ಟು ಮಂತ್ರಗಳು ಋಗ್ವೇದದ್ದೇ ಆಗಿವೆ.
ಇದು repetition ಕೂಡ ಅಲ್ಲ!
ಕಾರಣವಿಷ್ಟೇ.
ಋಗ್ವೇದ ಜ್ಞಾನಪ್ರಧಾನ (ಕರ್ಮ, ಉಪಾಸನೆ, ವಿಜ್ಞಾನುವೂ ಇದೆ)
ಯಜುರ್ವೆದ ಕರ್ಮಪ್ರಧಾನ (ಜ್ಞಾನ, ಉಪಾಸನೆ, ವಿಜ್ಞಾನವೂ ಇದೆ)
ಸಾಮವೇದವು ಉಪಾಸನಾಪ್ರಧಾನ (ಜ್ಞಾನ, ಕರ್ಮ, ವಿಜ್ಞಾನವೂ ಇದೆ)
ಅಥರ್ವವೇದವು ವಿಜ್ಞಾನಪ್ರದಾನ (ಜ್ಞಾನ, ಕರ್ಮ, ಉಪಾಸನೆಗಳೂ ಇದೆ)
ಅದೇ ಮಂತ್ರ/ಸೂಕ್ತವು ಬೇರೆ ಬೇರೆ ವೇದಗಳಲ್ಲಿ ಕಂಡುಬಂದರೂ ಅವುಗಳ
Frame of Reference ಬೇರೆ ಬೇರೆಯೇ ಅಗಿರುತ್ತದೆ! ಅದೇ ಮಂತ್ರದ ಬೇರೆ ಬೇರೆ ಮಗ್ಗುಲಗಳನ್ನು ಕಾಣಬೇಕಾಗುತ್ತದೆ.
2. ವೇದಗಳ ಅಧ್ಯಯನಕ್ಕೆ, ಪಠಣಕ್ಕೆ ಎಲ್ಲ ಕಾಲವೂ ಸೂಕ್ತವೇ! ಧ್ವನಿಯ ರೂಪದಲ್ಲಿ ಮಾಡುವಾಗ ಬಳಿಯಿರುವ ಇತರರ ಹಿತಾಹಿತಗಳು ಗಮನದಲ್ಲಿದ್ದರೆ ಸಾಕು.
ಇನ್ನು ಓದಿ ಅರ್ಥ ತಿಳಿಯುವ ವಿಚಾರ. ನಾಲ್ಕು ವೇದಗಳೂ ಒಂದಕ್ಕೊಂದು ಶತ್ರುಗಳಲ್ಲ, ವಿರೋಧವೂ ಇಲ್ಲ. ಸ್ಮೃತಿಶಕ್ತಿ ಕಡಿಮೆಯಾದಾಗ ಅನುಕೂಲಕ್ಕಾಗಿ ಒಬ್ಬೊಬ್ಬರು ಒಂದೊಂದು ವೇದವನ್ನು ನೆನಪಿನಲ್ಲಿಟ್ಟುಕೊಳ್ಳುವ ಪದ್ಧತಿ ಬಂದಂತೆ ಕಾಣುತ್ತದೆ. ಆದರೆ, ಯಾವುದೇ ವೇದದ ಮಂತ್ರದ ಅರ್ಥವನ್ನು ತಿಳಿಯುವಾಗ ಇತರ ವೇದಗಳಲ್ಲಿರುವ ಪೂರಕ ಮಂತ್ರಗಳ ಸಹಾಯ ಬೇಕೇ ಬೇಕು. ಸರಿಯಾದ ರೀತಿಯಲ್ಲಿ ವೇದಗಳ ಅಧ್ಯಯನವನ್ನು ಮಾಡುವುದೆಂದರೆ ನಾಲ್ಕೂ ವೇದಗಳನ್ನೂ ಅಧ್ಯಯನ ಮಾಡುವುದೇ ಆಗಿದೆ.
3. ನೀವು ಕಳಿಸಿರುವ ಆಡಿಯೋ ಕ್ಲಿಪ್ ಕೇಳಿದೆ. ಬಹುಷಃ ಉತ್ತರಭಾರತದ ವೇದಪಾಠಿಗಳು ಹೇಳಿದಂತೆ ಕಾಣುತ್ತದೆ. ಚಾರಿತ್ರಿಕ ಕಾರಣಗಳಿಂದಾಗಿ (ಮೇಲಿಂದ ಮೇಲಿಂದ ವಿದೇಶೀಯರ ಆಕ್ರಮಣ, ದಬ್ಬಾಳಿಕೆ)ಸ್ವರಶುದ್ಧತೆ, ಭಾಷಾಶುದ್ಧತೆಗಳನ್ನು ನಿರಿಕ್ಷಿಸುವಂತಿಲ್ಲ. ಈ ವಿಚಾರದಲ್ಲಿ ದಾಕ್ಷಿಣಾತ್ಯರ ಸ್ವರ, ಉಚ್ಚಾರಣೆಗಳೇ ಅನುಕರಣೀಯ.
ಇನ್ನು ಸಾಮಗಾನ ಮಾಡುವಾಗ, ಭಾವಾಭಿವ್ಯಕ್ತಿಯೇ ಪ್ರಧಾನವಾದ್ದರಿಂದ ಅಲ್ಲಿಯ ಸ್ವರವ್ಯವಸ್ಥೆಯೇ ಬೇರೆ ರೀತಿಯಲ್ಲಿರುತ್ತದೆ. ಕೆಲವೊಮ್ಮೆ ಪದ, ಅಕ್ಷರಗಳನ್ನು ಎಳೆದು, ಬಿಡಿಸಿ ಹಾಡುವುದುಂಟು.
ಏನೇ ಆದರೂ ಶೀರ್ಷಾ ಎಂಬುದು ಶೀರುಖಾ ಎಂಬಷ್ಟು ವ್ಯತ್ಯಾಸವಾಗುವುದು ಸರಿಯಿಲ್ಲ. (ಇದು ನನ್ನ ಅಭಿಪ್ರಾಯ - ಏಕೆಂದರೆ, Ultimately ಅರ್ಥವು ನಮಗೆ ಬೇಕಾಗುವುದರಿಂದ ಅದು Distort ಆಗುತ್ತದೆ)
ಅಷ್ಟೊಂದು ಉಚ್ಚಾರಣೆಯ ವ್ಯತ್ಯಾಸಕ್ಕೆ, ಅರ್ಥವ್ಯತ್ಯಾಸವಾಗದಂತೆ, ಯಾರಾದರೂ ಸಾಧಾರವಾಗಿ ವಿವರಣೆ ಕೊಡುವುದಾದರೆ, ಪರಿಶೀಲಿಸಲು ಸಿದ್ಧನಿದ್ದೇನೆ.
-ಸುಧಾಕರ ಶರ್ಮಾ

ವೇದೋಕ್ತ ಜೀವನ ಪಥ: ಜೀವಾತ್ಮ ಸ್ವರೂಪ -2ದ್ವಾ ಸುಪರ್ಣಾ ಸಯುಜಾ ಸಖಾಯಾ ಸಮಾನಂ ವೃಕ್ಷಂ ಪರಿ ಷಸ್ವಜಾತೇ|
ತಯೋರನ್ಯಃ ಪಿಪ್ಪಲಂ ಸ್ವಾದ್ವತ್ಯನಶ್ನನ್ನನ್ಯೋ ಅಭಿ ಚಾಕಶೀತಿ|| (ಋಕ್.೧.೧೬೪.೨೦)


     [ಸಯುಜಾ] ಸದಾ ಒಂದಿಗಿರುವ, [ಸಖಾಯಾ] ಪರಸ್ಪರ ಸ್ನೇಹಿತರಾದ ಅಥವಾ ಆತ್ಮ ಎಂಬ ಸಮಾನಖ್ಯಾನವನ್ನು ಹೆಸರಾಗುಳ್ಳ [ದ್ವಾ ಸುಪರ್ಣಾ] ಎರಡು ಸುಂದರವಾದ ರೆಕ್ಕೆಗಳನ್ನುಳ್ಳ ಪಕ್ಷಿಗಳು ಅಥವಾ ಸೊಗಸಾದ ಗತಿಯನ್ನುಳ್ಳ ಇಬ್ಬರು ಆತ್ಮರು [ಸಮಾನಂ ವೃಕ್ಷಂ] ಒಂದೇ ಮರವನ್ನು ಅಥವಾ ಕತ್ತರಿಸಲರ್ಹವಾದ ಪ್ರಾಕೃತಿಕ ಜಗತ್ತನ್ನು [ಪರಿ ಷಸ್ವಜಾತೇ] ಆಶ್ರಯಿಸಿದ್ದಾರೆ. [ತಯೋಃ ಅನ್ಯಃ] ಅವರಲ್ಲೊಬ್ಬನು, ಭೋಕ್ತ್ಯವಾದ ಜೀವಾತ್ಮನು [ಸ್ವಾದು ಪಿಪ್ಪಲಂ ಅತ್ತಿ] ಮಧುರವಾದ ಫಲವನ್ನು ಸವಿಯುತ್ತಿದ್ದಾನೆ. [ಅನ್ಯಃ] ಮತ್ತೊಬ್ಬನು [ಅನಶ್ನನ್] ಭುಂಜಿಸದೆ [ಅಭಿ ಚಾಕಶೀತಿ] ಸಾಕ್ಷಿರೂಪನಾಗಿ ವಿರಾಜಿಸುತ್ತಿದ್ದಾನೆ.
     ಇದೊಂದು ಆಕರ್ಷಕವಾದ ರೂಪಕ. ಜೀವಾತ್ಮ-ಪರಮಾತ್ಮರು ಅನಾದಿಕಾಲದಿಂದಲೂ ಒಂದಾಗಿದ್ದಾರೆ. ಪ್ರಾಕೃತಿಕ ಜಗತ್ತು ನಶ್ವರವಾದರೂ ಕೂಡ ಅಸ್ತಿತ್ವ ಹೊಂದಿದೆ. ಅಲ್ಪಜ್ಞ ಭೋಕ್ತವಾದ ಜೀವಾತ್ಮ ಪ್ರಾಕೃತಿಕ ಜಗತ್ತಿನ ಸುಖವನ್ನು ಭೋಗಿಸುತ್ತಿದ್ದಾನೆ. ಅಭೋಕ್ತವಾದ ಸರ್ವಜ್ಞ ಪರಮಾತ್ಮ ಸಾಕ್ಷಿರೂಪನಾಗಿ ರಾರಾಜಿಸುತ್ತಿದ್ದಾನೆ. ಇಲ್ಲಿ ಸ್ಪಷ್ಟವಾಗಿ ಪರಬ್ರಹ್ಮ ಪರಮಾತ್ಮನಿಂದ ಸರ್ವಥಾ ಭಿನ್ನವಾದ ಅನಾದಿ ಜೀವಾತ್ಮನ ವರ್ಣನೆಯಿದೆ. ನಶ್ವರವಾದರೂ ಮಿಥ್ಯೆಯಲ್ಲದ ಜಗತ್ತಿನ ಚಿತ್ರಣವು ಇದೆ. ಯುಕ್ತಿಯುಕ್ತವಾಗಿ ಇದನ್ನು ಖಂಡಿಸಲು ಸಾಧ್ಯವೇ ಇಲ್ಲ. ಆದರೂ ಇದು ವ್ಯಾವಹಾರಿಕ ಸತ್ಯ ಮಾತ್ರ, ಪಾರಮಾರ್ಥಿಕವಲ್ಲ ಎಂದು ಹೇಳಿ ಸುಲಭವಾಗಿ ತಳ್ಳಿಹಾಕಲು ಕೆಲವರು ಯತ್ನಿಸಿದ್ದಾರೆ. ಸ್ವತಃ ವೇದಗಳೇ ಸತ್ಯಕ್ಕೆ ವ್ಯಾವಹಾರಿಕ- ಪಾರಮಾರ್ಥಿಕ ಭೇದವನ್ನು ಕಲ್ಪಿಸದಿರುವಾಗ ಹಾಗೆ ಮಾಡಲು ಇವರಿಗೇನು ಅಧಿಕಾರವೋ?