Pages

Sunday, October 3, 2010

ಶ್ರೀ ಶಾರದಾ ಶರನ್ನವರಾತ್ರಿ ಉಪನ್ಯಾಸ ಕಾರ್ಯಕ್ರಮಗಳು


ಹಾಸನದ ಶ್ರೀ ಶಂಕರ ಮಠದ ಧರ್ಮಾಧಿಕಾರಿಗಳಾದ ಶ್ರೀ ಶ್ರೀಕಂಠಯ್ಯನವರು ಶಂಕರಮಠದಲ್ಲಿ ನಡೆಯುವ ಶ್ರೀ ಶಂಕರ ಜಯಂತಿ ಹಾಗೂ ನವರಾತ್ರಿ ಕಾರ್ಯಕ್ರಮಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಉತ್ತಮವದ ಉಪನ್ಯಾಸಗಳನ್ನೂ ಹಲವು ವರ್ಷಗಳಿಂದ ನಡೆಸುತ್ತಾ ಬಂದಿರುತ್ತಾರೆ. ಕಳೆದ ೨-೩ ವರ್ಷಗಳಿಂದ ವೇದಾಧ್ಯಾಯೀ ಸುಧಾಕರ ಶರ್ಮರು ವೇದದ ವಿಚಾರವಾಗಿ ಉಪನ್ಯಾಸಗಳನ್ನು ಮಾಡಿದರೆ ಮಾತಾಜಿ ವಿವೇಕಮಯೀ ಇವರು ನಮ್ಮೊಳಗಿರುವ ಚೈತನ್ಯದ ಜಾಗೃತಿಯ ಬಗ್ಗೆ ಉತ್ತಮ ಉಪನ್ಯಾಸಗಳನ್ನು ಮಾಡುತ್ತಿದ್ದಾರೆ. ವೇದಸುಧೆಯ ಅಭಿಮಾನಿಗಳನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ.
ಶೃಂಗೇರಿ ಶ್ರೀ ಶಂಕರ ಮಠ, ಹಾಸನ
ಶ್ರೀ ಶಾರದಾ ಶರನ್ನವರಾತ್ರಿ ಉಪನ್ಯಾಸ ಕಾರ್ಯಕ್ರಮಗಳು
ದಿನಾಂಕ 7.10.2010 ರಿಂದ 17.10.2010 ರವರಗೆ
ಸಂಜೆ 6.00 ರಿಂದ 7.30
ದಿನಾಂಕ
ಉಪನ್ಯಾಸಕರು
ವಿಷಯ
7,8,9
ಶ್ರೀ ಶ್ರೀ ಪರಮನಂದ ಭಾರತೀ ಸ್ವಾಮೀಜಿ, ಬೆಂಗಳೂರು
1]ಮಹಾ ತಪಸ್ವೀ ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳು
2]ಪುನರ್ಜನ್ಮ-ಒಂದು ಚಿಂತನೆ
10,11
ಪೂಜ್ಯ ಮಾತಾಜಿ ವಿವೇಕಮಯೀ,
ಭವತಾರಿಣಿ ಆಶ್ರಮ, ಬೆಂಗಳೂರು
1] ಜೀವನದ ಸಾರ್ಥಕತೆ
2] ಭಕ್ತಿ ಮಾರ್ಗ-ಶಂಕರರು ಕಂಡಂತೆ
12,13,
14,15
ವೇದಾಧ್ಯಾಯೀ
ಶ್ರೀ ಸುಧಾಕರ ಶರ್ಮ, ಬೆಂಗಳೂರು
ನಿತ್ಯ ಜೀವನದಲ್ಲಿ ವೇದಮಂತ್ರಗಳ ಪ್ರಭಾವ
[ಎಲ್ಲರಿಗಾಗಿ ವೇದ]
16,17
ಡಾ.ಸನತ್ ಕುಮಾರ್, ಮತ್ತೂರು
1] ಶಿವಾಪರಾಧ ಕ್ಷಮಾಪಣಾ ಸ್ತೋತ್ರ
2] ಅರ್ಧ ನಾರೀಶ್ವರ ಸ್ತೋತ್ರ
ಎಲ್ಲರಿಗೂ ಆದರಪೂರ್ಣ ಸ್ವಾಗತ
ಎಂ.ಎಸ್.ಶ್ರೀಕಂಠಯ್ಯ, ಧರ್ಮಾಧಿಕಾರಿಗಳು , ಶೃಂಗೇರಿ ಶ್ರೀ ಶಂಕರ ಮಠ, ಹಾಸನ

ವೇದೋಕ್ತ ಜೀವನ ಪಥ: ಭಗವತ್ ಸ್ವರೂಪ - 4

ಋಗ್ವೇದ ಸಾರುತ್ತಲಿದೆ:-
ವಿಶ್ವತಶ್ಚಕ್ಷುರುತ ವಿಶ್ವತೋಮುಖೋ ವಿಶ್ವತೋಬಾಹುರುತ ವಿಶ್ವತಸ್ಪಾತ್|
ಸಂ ಬಾಹುಭ್ಯಾಂ ಧಮತಿ ಸಂ ಪತತ್ರೈರ್ದ್ಯಾವಾಭೂಮೀ ಜನಯನ್ ದೇವ ಏಕಃ|| (ಋಕ್.10.81.3.)


[ವಿಶ್ವತಃ ಚಕ್ಷುಃ] ಎಲ್ಲೆಡೆಯಲ್ಲೂ ಕಣ್ಣನ್ನುಳ್ಳ, ಸರ್ವದ್ರಷ್ಟನಾದ [ಉತ] ಮತ್ತು [ವಿಶ್ವತಃ ಮುಖಃ] ಎಲ್ಲೆಡೆಯಲ್ಲಿಯೂ ಮುಖವನ್ನುಳ್ಳ, ಎಲ್ಲೆಡೆಯೂ ತಿರುಗುವ, [ವಿಶ್ವತಃ ಬಾಹುಃ] ಎಲ್ಲೆಡೆಯಲ್ಲೂ ಬಾಹುಗಳನ್ನುಳ್ಳ, ಸರ್ವಕರ್ತೃವಾದ, [ಉತ] ಅದೇ ರೀತಿ [ವಿಶ್ವತಃ ಪಾತ್] ಎಲ್ಲೆಡೆಯಲ್ಲೂ ಪಾದಗಳನ್ನುಳ್ಳ, ಸರ್ವಗತನಾದ, [ಏಕದೇವಃ] ಒಬ್ಬ ದೇವನು [ದ್ಯಾವಾ ಭೂಮಿ ಜನಯನ್] ದ್ಯುಲೋಕ, ಪೃಥಿವೀ ಲೋಕಗಳನ್ನು ರಚಿಸುತ್ತಾ [ಬಾಹುಭ್ಯಾಂ ಸಮ್] ತನ್ನ ಸೃಜನ, ಪೋಷಣ ಸಾಮರ್ಥ್ಯಗಳಿಂದಲೂ [ಪತತ್ರೈ ಸಮ್] ಗತಿಶೀಲ ಚೇತನರಾದ ಜೀವಾತ್ಮರುಗಳ ಮೂಲಕವೂ [ಧಮತಿ] ಪ್ರಾಣವನ್ನು ಊದುತ್ತಿದ್ದಾನೆ.


     ಎಂತಹ ಸೊಗಸಾಗಿದೆ, ಈ ವರ್ಣನೆ! ಕಣ್ಣು, ಮುಖ, ಬಾಹು, ಪಾದ ಮೊದಲಾದ ಶಬ್ದಗಳನ್ನು ಕಂಡು ಭಗವಂತ ಸಾಕಾರನೋ ಎಂಬ ಭ್ರಾಂತಿಗೆ ಬಲಿಬೀಳುವುದು ಬೇಡ. ಭಗವಂತ ಸರ್ವವ್ಯಾಪಕನಾದ ಕಾರಣ, ಸರ್ವಥಾ ನಿರಾಕಾರ ಎಂದು ಮೊದಲೇ ಓದಿದ್ದೇವೆ. ಕಣ್ಣು, ಮುಖ, ಕೈಕಾಲು ಇಲ್ಲದಿದ್ದರೂ, ಭಗವಂತ ಅಂಗೋಪಾಂಗಗಳು ಮಾಡಬಹುದಾದ ಕೆಲಸವನ್ನೆಲ್ಲಾ ಅಶರೀರನಾಗಿಯೇ ಮಾಡುತ್ತಿದ್ದಾನೆ ಎನ್ನುವುದೇ ಈ ಮಂತ್ರದ ಭಾವನೆ. ಶಬ್ದಾರ್ಥವನ್ನೇ ಹಿಡಿದು ಹೊರಟರೆ ಎಲ್ಲೆಡೆಯೂ ಕಣ್ಣು, ಎಲ್ಲೆಡೆಯೂ ಮುಖ, ಎಲ್ಲೆಡೆಯೂ ಕೈ, ಎಲ್ಲೆಡೆಯೂ ಕಾಲು ಇರುವ ಎದೆ, ಬೆನ್ನು, ಹೊಟ್ಟೆ ಹಾಗೂ ಕಿವಿಯೇ ಇಲ್ಲದ, ಜಗತ್ತಿನ ಯಾವ ದೇವಸ್ಥಾನದಲ್ಲಿಯೂ, ಯಾವ ಕಲಾಮಂದಿರದಲ್ಲಿಯೂ ಕಾಣಿಸದ ವಿಚಿತ್ರ ಮೂರ್ತಿಯೊಂದನ್ನು ಊಹಿಸಿಕೊಳ್ಳಬೇಕಾದೀತು. ಆದರೆ ವೇದಗಳ ಭಾಷಾಶೈಲಿಯನ್ನು ಬಲ್ಲ ಯಾರೂ ಮೋಸ ಹೋಗಲಾರರು. ಸರ್ವತ್ರ ವ್ಯಾಪಕನಾದ, ಸರ್ವಕರ್ತೃ, ಸರ್ವಪಾತ್ರವಾದ ಭಗವಂತನಿರುವುದು ಒಬ್ಬನೇ. ಈ ಮಂತ್ರದಲ್ಲಿಯೂ "ಏಕ ದೇವಃ" ಎಂಬ ಶಬ್ದಗಳಿವೆ. ಮೊದಲು ಉದ್ಗರಿಸಿದ ಯಜುರ್ವೇದ ಮಂತ್ರವೊಂದರಲ್ಲಿಯೂ ನಾವು "ಏಕಮ್" ಎಂಬ ಶಬ್ದವನ್ನು ಕಾಣುತ್ತೇವೆ.