Pages

Thursday, January 21, 2016

ಹಾಸನದಲ್ಲೊಂದ ಯಶಸ್ವೀ ಯೋಗ ಶಿಬಿರ

ಶಿಬಿರದ ಆರಂಭದಲ್ಲಿ ನನ್ನ ಮಾತು

ಶಿರಾರ್ಥಿಗಳಿಂದ ಭಾರತಮಾತಾ ಪೂಜನ್

ಹಾಸನದ ಶಾಸಕರಾದ ಶ್ರೀ ಹೆಚ್.ಎಸ್.ಪ್ರಕಾಶ್ ಮತ್ತು ಪತಂಜಲಿ ಯೋಗ ಪೀಠದ 
ಕರ್ನಾಟಕ ರಾಜ್ಯದ ಯುವ ಪ್ರಭಾರಿ ಶ್ರೀ ಪ್ರದೀಪ್ ,ಹಾಸನ ಜಿಲ್ಲಾ ಪ್ರಭಾರಿ ಶ್ರೀ ಶೇಷಪ್ಪ  ಅವರುಗಳಿಂದ ಶುಭಕಾಮನೆ

ಹಾಸನದ ಆರ್ಯವೈಶ್ಯ ಮಂಡಳಿ ಅಧ್ಯಕ್ಷರಾದ ಶ್ರೀ ಗೋವಿಂದರಾಜ ಶ್ರೇಷ್ಠಿ ಅವರಿಂದ ಭಾರತಮಾತೆಗೆ ಪ್ರಥಮ ಅರ್ಚನೆ

ಶಾಸಕರಾದ ಹೆಚ್.ಎಸ್.ಪ್ರಕಾಶ್  ಇವರಿಂದ ಶುಭ ಹಾರೈಕೆ

ಯೋಗಾಭ್ಯಾಸ

ಗಣ್ಯರೊಡನೆ ಶಿಬಿರಾರ್ಥಿಗಳ ಫೋಟೋ ಸೆಶನ್

 ಶಿಬಿರದ ಸಮಾರೋಪ ಸಮಾರಂಭದಲ್ಲಿ ನನ್ನ ಪ್ರಾಸ್ತಾವಿಕ ಭಾಷಣ

ಶಿಬಿರದ ಒಂದು ವರದಿ
ಸ್ವಾಸ್ಥ್ಯಪೂರ್ಣ ಸಮಾಜ ನಿರ್ಮಾಣವೇ ಪತಂಜಲಿ ಯೋಗ ಪೀಠದ ಮುಖ್ಯ ಗುರಿ
ಹಾಸನ : 
ಸ್ವಾಸ್ಥ್ಯಪೂರ್ಣ ಸಮಾಜ ನಿರ್ಮಾಣವೇ ಶ್ರೀ ಪತಂಜಲಿ ಯೋಗ ಪೀಠದ ಮುಖ್ಯ ಗುರಿ ಎಂದು ಹಾಸನಜಿಲ್ಲಾ ಶ್ರೀ ಪತಂಜಲಿ ಯೋಗ ಒಕ್ಕೂಟದ ಅಧ್ಯಕ್ಷರಾದ ಶ್ರೀ ಹರಿಹರಪುರ ಶ್ರೀಧರ್ ಹೇಳಿದರು. ಶ್ರೀ ಪತಂಜಲಿ ಯೋಗ ಸಮಿತಿಯು ಹಾಸನದ ಶ್ರೀ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ಜನವರಿ ೧೯ರ ಮಂಗಳವಾರ ಸಂಜೆ  ಹಮ್ಮಿಕೊಂಡಿದ್ದ ಯೋಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶ್ರೀಯುತರು ಪ್ರಾಸ್ತಾವಿಕ ಭಾಷಣವನ್ನು ಮಾಡುತ್ತಿದ್ದರು. ಈ ಶಿಬಿರವು ಕೇವಲ ಯಾವುದೋ ರೋಗ ನಿವಾರಣೆಗಾಗಿ ಮಾತ್ರ ಆಯೋಜಿಸಿದ್ದಲ್ಲ ಆದರೆ ಹಾಸನದ ಜನತೆಯ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ದೃಷ್ಠಿಯಿಂದ ಯೋಗದ ಮೂಲಕ ಸಾಮಾಜಿಕ ಜಾಗೃತಿಯನ್ನುಂಟು ಮಾಡುವ ಸಲುವಾಗಿ ಈ ಶಿಬಿರವನ್ನು ಆಯೋಜಿಸಲಾಗಿತ್ತು. ವಿಶ್ವವೇ ಭಾರತ ಕಡೆ ಯೋಗ ಮತ್ತು ವೇದದ ಜ್ಞಾನಕ್ಕಾಗಿ ಎದಿರುನೋಡುತ್ತಿರುವ ಈ ದಿನಗಳಲ್ಲಿ ಶಿಬಿರದಿಂದ ಲಾಭವನ್ನು ಪಡೆದಿರುವ  ಶಿಬಿರಾರ್ಥಿಗಳು ಯೋಗಸೇವೆಗೆ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಯೋಗದಿಂದ ಮಾನಸಿಕ ಒತ್ತಡ ನಿವಾರಣೆ ಸಾಧ್ಯ
ಯೋಗ ಮತ್ತು ಪ್ರಾಣಾಯಾಮದಿಂದ ಮಾನಸಿಕ ಒತ್ತಡವನ್ನು ನಿವಾರಿಸಿಕೊಳ್ಳಲು ಸಾಧ್ಯ- ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಾಸನದ ಹಾಸನಾಂಬ ದಂತಮಹಾವಿದ್ಯಾಲಯದ ಅಧ್ಯಕ್ಷರಾದ ಶ್ರೀ ಯತೀಶ್ ಅವರು ತಿಳಿಸಿದರು.
 ಶಿಬಿರಾರ್ಥಿಗಳ ಕೆಲವು ಅನಿಸಿಕೆಗಳು :
1. ದುಶ್ಚಟಗಳಿಂದ ದೂರವಾದೆ, ಶಿಬಿರದ ಪರಿಣಾಮ ನನ್ನ ಕುಟುಂಬದಲ್ಲಿ ನನ್ನ ಗೌರವ ಹೆಚ್ಚಿದೆ - ಒಬ್ಬ ಹಿರಿಯರ ಹೇಳಿಕೆ
2. ಕುಳಿತರೆ ಏಳಲೂ ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿದ್ದ ನಾನು ಶಿಬಿರಕ್ಕೆ ಬಂದ ಮೆಲೆ ಈಗ ಯಾರ ನೆರವೂ ಇಲ್ಲದೆ ಏಳುತ್ತೇನೆ- ಒಬ್ಬ ಮಹಿಳೆಯ ಅಭಿಮಾನದ ಮಾತು.
3. ಅಪಘಾತದ ಪರಿಣಾಮ ಮಂಡಿ ಚಿಪ್ಪನ್ನು ಬದಲಿಸುವುದು ಅನಿವಾರ್ಯ ಎಂದು ತಿಳಿದು ದಿಗಿಲು ಗೊಂಡಿದ್ದ ಕಾಲೇಜು ಯುವತಿಯು ಶಿಬಿರದಲ್ಲಿ ಕೆಲವು ಸೂಕ್ಷ್ಮವ್ಯಾಯಾಮ ಮತ್ತು ಪ್ರಾಣಾಯಾಮವನ್ನು ಮಾಡಿದ ಪರಿಣಾಮ ನೋವು ನಿವಾರಣೆಯಾಗಿ ಶಸ್ತ್ರ ಚಿಕಿತ್ಸೆ ಇಲ್ಲದೆ ಮಂಡಿಯು ಸುಸ್ಥಿಗೆ ಬರುತ್ತದೆಂಬ ಆತ್ಮ ವಿಶ್ವಾಸವನ್ನು ವ್ಯಕ್ತ ಪಡಿಸಿದ್ದು ಜನರಲ್ಲಿ ಅಚ್ಚರಿ ಮೂಡಿಸಿತು
4. ಒಂದುವಾರದಲ್ಲಿ ನನ್ನ ತೂಕ ನಾಲ್ಕು ಕೆ.ಜಿ. ಕಡಿಮೆಯಾಯ್ತು. ಶರೀರ ಈಗ ಹಗುರಾಯ್ತು.
5. ನನ್ನ ಮಧುಮೇಹ ಈಗ ಸಾಮಾನ್ಯ ಸ್ಥಿತಿಗೆ ಬಂದಿದೆ.
6. ಈ ಶಿಬಿರವು ನನಗೆ ಜೀವನದ ಕಲೆಯನ್ನು ಕಲಿಸಿತು.
ಹೀಗೆ ತಮ್ಮ ಸಂತೋಶದ ಅನಿಸಿಕೆಗಳನ್ನು ಹಲವಾರು ಶಿಬಿರಾರ್ಥಿಗಳು ಹಂಚಿಕೊಂಡರು.
ಭಾರತಮಾತಾ ಪೂಜನ:
ಭಾರತ ಮಾತೆಯ ಭಾವ ಚಿತ್ರಕ್ಕೆ ಅತಿಥಿಗಳು ಪುಷ್ಪಾರ್ಚನೆ ಮಾಡಿದ ನಂತರ ಶಿಬಿರಾರ್ಥಿಗಳೆಲ್ಲರೂ ಅರ್ಚನೆ ಮಾಡುವುದರ ಮೂಲಕ ಸಮಾರಂಭವು ಆರಂಭವಾಯ್ತು.

ರೋಗ ಬರುವುದಕ್ಕಿಂತ ಮುಂಚೆ ರೋಗ ಬಾರದಂತೆ ತಡೆಯಲು ಯೋಗವು ಸಹಕಾರಿಯಾಗಿದೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿರಲು ದೈನಂದಿನ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕೆಂದು  ಜನತಾಮಾಧ್ಯಮ ಪತ್ರಿಕೆಯ ಸಂಪಾದಕರಾರಾದ   ಶ್ರೀ ಆರ್.ಪಿ. ವೆಂಕಟೇಶಮೂರ್ತಿಯವರು ಕರೆ ನೀಡಿದರು.

ಹಾಸನದ ಆರ್ಯವೈಶ್ಯ ಮಂಡಳಿಯ  ಅಧ್ಯಕ್ಷರಾದ ಶ್ರೀ ಗೋವಿಂದರಾಜ ಶ್ರೇಷ್ಠಿಯವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.

ಸಮಾರಂಭದಲ್ಲಿ ಆಯ್ದ ಶಿರಾರ್ಥಿಗಳು ಯೋಗ ಪ್ರದರ್ಶನವನ್ನು ಮಾಡಿದರು. ಸಮಾರಂಭದಲ್ಲಿ ಜನಹಿತ ಪತ್ರಿಕೆಯ ಸಂಪಾದಕರಾದ ಶ್ರೀ ಹೆಚ್.ಎಸ್.ಪ್ರಭಾಕರ್, ಪ್ರತಿನಿಧಿ ಪತ್ರಿಕೆಯ ಸಂಪಾದಕರಾದ ಶ್ರೀ ಉದಯ ರವಿ, ಪ್ರಜಾವಾಣಿ ಪತ್ರಿಕೆಯ ಜಿಲ್ಲಾ ವರದಿಗಾರರಾದ ಶ್ರೀ ಉದಯ್ ಮತ್ತು ಅಂತರಾಷ್ಟ್ರೀಯ ಕ್ರೀಡಾಪಟು ಶ್ರೀಮತಿ ಹೆಚ್.ಎಲ್. ಭಾರತಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಪತಂಜಲಿ ಯೋಗಸಮಿತಿಯ ಯೋಗಪ್ರಚಾರಕರಾದ ಶ್ರೀ ಸಂಜಯ್ ಸ್ವಾಮಿ ಮತ್ತು ಉಚಿತ ಆರೋಗ್ಯ ಕೇಂದ್ರದ ಶ್ರೀ ಗಂಗಾಧರ್ ಉಪಸ್ಥಿತರಿದ್ದರು. ಪತಂಜಲಿ ಯೋಗಸಮಿತಿಯ ಜಿಲ್ಲಾ ಯುವಪ್ರಭಾರಿ ಶ್ರೀ ಸುರೇಶ್ ಪ್ರಜಾಪತಿಯವರು ನಿರೂಪಿಸಿದ ಕಾರ್ಯಕ್ರಮದಲ್ಲಿ ಡಾ. ರಮೇಶ್ ಸ್ವಾಗತಿಸಿದರೆ ಜಿಲ್ಲಾ ಪ್ರಭಾರಿಗಳಾದ ಶ್ರೀ ಶೇಷಪ್ಪನವರು ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.

ವರದಿ : ಡಾ. ರಮೇಶ್

Exercises for cervical pain, Neck, Back, Eyes | Baba Ramdev Yoga YouTube

Baba Ramdev's cure for Neck pain and Spondylitis

Baba Ramdev's cure for Joint pain

Swami Baba Ramdev Yoga Tips Arthritis (Part 1) | Knee Pain Cure

Swami Ramdevs Yoga Tips Arthritis part 2

Sunday, January 17, 2016

ಯೋಗ ಶಿಬಿರದಲ್ಲಿ ಮೃತ್ಯುಂಜಯ ಮಂತ್ರ ಸಹಿತ ವಿಶೇಷ ಅಗ್ನಿಹೋತ್ರ
ಕಳೆದ ವರ್ಷ ಜೂನ್ 21 ನ್ನು  ನಮ್ಮ ನೆಚ್ಚಿನ ಪ್ರಧಾನಿಯವರು "ವಿಶ್ವ ಯೋಗದಿನ " ಎಂದು ಘೋಷಿಸಿದ ಪರಿಣಾಮ ಹಾಸನದಲ್ಲಿ  ಪತಂಜಲಿ ಯೋಗಕೇಂದ್ರ ಮತ್ತು ವೇದಭಾರತಿಯು ಒಂದೇ ವೇದಿಕೆಯಲ್ಲಿ ಕಾರ್ಯಕ್ರಮಗಳನ್ನು ಮಾಡಲು   ಆರಂಭಿಸಿದವು. ಹಾಸನದಲ್ಲಿ ನಡೆಯುತ್ತಿರುವ ಎಲ್ಲಾ ಯೋಗಕೇಂದ್ರಗಳಲ್ಲೂ ಅಗ್ನಿಹೋತ್ರ ಮತ್ತು ವೇದದ ಪರಿಚಯ ಮಾಡಿಕೊಡುವ ಕಾರ್ಯಕ್ರಮಗಳು ನಡೆಯುತ್ತಲೇ ಇವೆ. ಜೂನ್ 21 ರ ನಂತರ ವಿಶೇಷವಾದ ಮೂರು ಶಿಬಿರಗಳನ್ನು ಏರ್ಪಡಿಸಿ ಸುಮಾರು ಒಂದು ಸಾವಿರ ಜನರಿಗೆ ಯೋಗದ ತರಬೇತಿಯನ್ನು ನೀಡಲಾಗಿದೆ. ಎಲ್ಲಾ ಶಿಬಿರಗಳಲ್ಲೂ ಅಗ್ನಿಹೋತ್ರವು  ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಗಳ ಪ್ರಮುಖ ಭಾಗವಾಗಿರುತ್ತದೆ. 11.01.2016  ರಿಂದ 20.01.2016 ರವರಗೆ ನಡೆಯುತ್ತಿರುವ ಯೋಗ ಶಿಬಿರದಲ್ಲಿ ಸುಮಾರು 200   ಶಿಬಿರಾರ್ಥಿಗಳು ಪಾಲ್ಗೊಂಡಿದ್ದು   ದಿನಾಂಕ 17.01.2016 ಭಾನುವಾರ ಮುಂಜಾನೆ 6.30 ಕ್ಕೆ  ವಿಶೇಷ ಅಗ್ನಿಹೋತ್ರವು ನಡೆಯಿತು. ಗಾಯತ್ರಿ ಮಂತ್ರ ಹಾಗೂ ಮೃತ್ಯುಂಜಯ ಮಂತ್ರದ ಜೊತೆಗೆ ಶಿಬಿರಾರ್ಥಿಗಳೆಲ್ಲರೂ ಯಜ್ಞ ಕ್ಕೆ ಹವಿಸ್ಸನ್ನು ಅರ್ಪಿಸಿದರು.