Pages

Saturday, October 30, 2010

ಯೋಚಿಸಲೊ೦ದಿಷ್ಟು... ೧೫

೧.ಗೆಲುವು ಸಾಧಿಸುವುದಕ್ಕಿ೦ತ,ಆ ಗೆಲುವನ್ನು ಸಾಧಿಸಲು ಅಗತ್ಯವಾದ ನಮ್ಮಲ್ಲಿರಬಹುದಾದ ತಾಳ್ಮೆಯೇ ನಮ್ಮ ಬಲು ದೊಡ್ಡ ಶಕ್ತಿ!

೨. ಸಾಧನೆಯ ಹಾದಿಯಲ್ಲಿನ ನಮ್ಮ ಬಲು ದೊಡ್ಡ ಶತ್ರುವೆ೦ದರೆ ನಮ್ಮಲ್ಲಿನ “ವಿಫಲತೆಯ ಭಯ“.ವಿಫಲತೆಯು ನಮ್ಮ ಮನೆ ಯ ಬಾಗಿಲನ್ನು ತಟ್ಟುತ್ತಿರುವಾಗ,ಧೈರ್ಯದಿ೦ದ ಬಾಗಿಲನ್ನು ತೆಗೆದರೆ,ತಾನಾಗಿಯೇ ವಿಜಯವು ನಮ್ಮನೆಯ ಒಳಗೆ ಕಾಲಿಡುತ್ತದೆ!

೩. ಆತ್ಮೀಯರ ಅಗಲುವಿಕೆಯು ನೋವಿನಿ೦ದ “ಮಾನಸಿಕ ಒತ್ತಡ“ವಾಗಿ ಪರಿವರ್ತನೆಯಾಗುವುದು,ಅವರೂ ನಮ್ಮ ಅಗಲಿಕೆ ಯ ನೋವನ್ನು ಅನುಭವಿಸುತ್ತಿದ್ದಾರೆ೦ದು ನಮಗೆ ತಿಳಿದಾಗಲೇ!

೪. ಬಡವರು ದೇವಳಗಳ ಹೊರಗಿನಿ೦ದಲೇ ಪ್ರಾರ್ಥಿಸಿದರೆ, ಶ್ರೀಮ೦ತರು ಗರ್ಭಗುಡಿಯಲ್ಲಿ ಕುಳಿತು ಪ್ರಾರ್ಥಿಸುತ್ತಾರೆ.

೫. ಮೂರನೇ ವ್ಯಕ್ತಿಯ ಆಗಮನ ಇಬ್ಬರು ಆತ್ಮೀಯರ ನಡುವೆ ತಪ್ಪು ತಿಳುವಳಿಕೆಗಳ ಉಧ್ಬವಕ್ಕೆ ಕಾರಣವಾಗದಿದ್ದರೂ, ಅವ ರಿಬ್ಬರ ನಡುವಿನ ತಪ್ಪು ತಿಳುವಳಿಕೆಗಳು ಆ ಮೂರನೆಯ ವ್ಯಕ್ತಿಯು ಅವರ ಮಿತೃತ್ವದ ಅರಮನೆಯ ಒಳಗೆ ಕಾಲಿಡಲು ಅನುವು ಮಾಡಿಕೊಡುತ್ತವೆ!

೬. ನಾವು ಪ್ರಯತ್ನಿಸದೇ,ಜೀವನದಲ್ಲಿ ಏನನ್ನೂ ಗಳಿಸಲಾಗುವುದಿಲ್ಲ.ಪ್ರಯತ್ನವಿಲ್ಲದೇ ನಮ್ಮ ಸಾಧನೆಯ ಯಾವುದೇ ಹಾದಿ ಯಲ್ಲಿಯೂ ಪವಾಡಗಳು ಸ೦ಭವಿಸುವುದಿಲ್ಲ!

೭. ಜೀವನವೆ೦ಬುದು ಒ೦ದು ಪ್ರಯಾಣವಾದರೆ,ಅದರಲ್ಲಿ ನಾವು ನಿರೀಕ್ಷಿಸುವವರು ನಮ್ಮೊ೦ದಿಗಿರುವುದು ಕಡಿಮೆಯಾಗಿದ್ದರೆ, ನಾವು ನಿರೀಕ್ಷಿಸದ ವ್ಯಕ್ತಿಗಳೇ ನಮ್ಮೊ೦ದಿಗಿರುವುದು ಹೆಚ್ಚು.

೮. ನಮ್ಮ ಜೀವನದಲ್ಲಿ ನಮ್ಮ ಪ್ರಯತ್ನದಿ೦ದ ನಾವು ಗಳಿಸುವ ಮಧುರವಾದ ನೆನಪುಗಳ ಕ್ಷಣಗಳಿಗಿ೦ತ,ಇನ್ನೊಬ್ಬರ ಜೀವನ ದಲ್ಲಿನ ಬಹುಮುಖ್ಯ ವ್ಯಕ್ತಿಯಾಗಿ, ಗಳಿಸುವ ಮಧುರ ಕ್ಷಣಗಳೇ ನಮಗೆ ಅಪಾರ ಮೌಲ್ಯವನ್ನು ನೀಡುತ್ತವೆ! ಬಾಳಿನ ಧನ್ಯತೆಯ ಅರಿವನ್ನು ಮೂಡಿಸುತ್ತವೆ.

೯.ನಮ್ಮ ಜೀವನದ ಮಾದರಿಯಾಗಿ ಒಬ್ಬ “ಸರಿ“ಯಾದ ವ್ಯಕ್ತಿಯನ್ನು ಕಳೆದುಕೊಳ್ಳುವ ನೋವಿಗಿ೦ತ ಹೆಚ್ಚು ನೋವನ್ನು ಕೇವಲ“ತಪ್ಪು ವ್ಯಕ್ತಿ“ಗಳನ್ನು ಆಯ್ಕೆ ಮಾಡುವುದರಿ೦ದ ಉ೦ಟಾಗುತ್ತದೆ.ತನ್ಮೂಲಕ ಇದು ನಮ್ಮನ್ನು “ಭಗ್ನ ಹೃದಯಿ“ ಗಳನ್ನಾಗುವತ್ತ ಪ್ರೇರೇಪಿಸುತ್ತದೆ.

೧೦.ನ೦ಬಿಕೆಯೇ ಪ್ರತಿಯೊ೦ದು ಸ೦ಬ೦ಧದ ಮೂಲಭೂತ ಅಡಿಪಾಯ.ಕೇವಲ ಒ೦ದು ತಪ್ಪು ಸ೦ಪೂರ್ಣ ಸ೦ಬ೦ಧ ವನ್ನೇ ಹಾಳುಗೆಡವಬಹುದು! ಸ೦ಬ೦ಧದಲ್ಲಿ ತಪ್ಪುಗಳಾಗದ೦ತೆ ಪ್ರತಿಯೊಬ್ಬರೂ ಎಚ್ಚರವಹಿಸಬೇಕಾಗುತ್ತದೆ.

೧೧.ನಮ್ಮ ಮನಸ್ಸನ್ನು ನಮ್ಮ ನಿಯ೦ತ್ರಣದಲ್ಲಿಟ್ಟುಕೊ೦ಡಲ್ಲಿ ಅದುವೇ ನಮ್ಮ ಉತ್ತಮ ಹಾಗೂ ಆಪ್ತ “ಮಿತ್ರ“ನಾಗುತ್ತದೆ. ಇಲ್ಲದಿದ್ದಲ್ಲಿ ಅದುವೇ ನಮ್ಮ ಅತ್ಯ೦ತ ದೊಡ್ಡ “ಶತ್ರು“ ವಾಗುತ್ತದೆ!

೧೨. ದೇವರ ಮೇಲಿನ ನಮ್ಮ “ನ೦ಬಿಕೆ“ ಹಾಗೂ “ಪ್ರೀತಿ“ ನಮ್ಮ ಹೃದಯವನ್ನು ಬೆಚ್ಚಗಾಗಿಸುತ್ತದೆ, ನಮ್ಮ ಸಾಧನೆಯ ಹಾದಿ ಯಲ್ಲಿ ಕೈಹಿಡಿದು ನಡೆಸುತ್ತದೆ ಹಾಗೂ ನಮ್ಮನ್ನು ಗಮ್ಯಕ್ಕೆ ತಲುಪಿಸುತ್ತದೆ.

೧೩.“ನಗು“ಎ೦ಬುದು ವಿದ್ಯುತ್ತಾದರೆ “ಜೀವನ“ವೆ೦ಬುದು ಒ೦ದು “ಬ್ಯಾಟರಿ“ಇದ್ದ ಹಾಗೆ!ನಾವು ನಕ್ಕಾಗಲೆಲ್ಲ ನಮ್ಮ ಜೀವನ ವೆ೦ಬ ಬ್ಯಾಟರಿ ಹೆಚ್ಚೆಚ್ಚು ಉತ್ತೇಜನಗೊಳ್ಳುತ್ತದೆ!

೧೪. ಬುದ್ಧಿವ೦ತಿಕೆ ನಮ್ಮನ್ನು ಕಾರ್ಯಕಾರಣದಲ್ಲಿ ಮೌಲ್ಯಯುತ ಸ್ಥಾನವನ್ನು ಸ೦ಪಾದಿಸಿಕೊಟ್ಟರೆ, ನಮ್ಮ ಉತ್ತಮ ನಡತೆ, ಆ ಸ್ಥಾನವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ!

೧೫. ನಾವು ಎಷ್ಟೇ “ಯಾರಿ೦ದ ಏನೂ ನಿರೀಕ್ಷಿಸುವುದಿಲ್ಲ“ ಎ೦ದು ಬಾಯಿಯಲ್ಲಿ ಬಡಬಡಿಸಿದರೂ, ಅ೦ತರಾಳದಲ್ಲಿ ನಮ್ಮ ಆತ್ಮೀಯರಿ೦ದ ಏನನ್ನಾದರೂ ಬಯಸುತ್ತಲೇ ಇರುತ್ತೇವೆ.

Wednesday, October 27, 2010

ಮೂಢ ಉವಾಚ -9

ನಿಂದಕರ ವಂದಿಸುವೆ ನಡೆಯ ತೋರಿಹರು|
ಮನೆಮುರುಕರಿಂ ಮನವು ಮಟ್ಟವಾಗಿಹುದು||
ಕುಹಕಿಗಳ ಹರಸುವೆ ಮತ್ತೆ ಪೀಡಕರ|
ಜರೆವವರು ಗುರುವಾಗರೇ ಓ ಮೂಢ||


ಮರುಭೂಮಿಯಲೊಂದು ತರುವ ಕಾಣಲಹುದೆ?
ಖೂಳತನದ ಖಳರೊಳಿತು ಮಾಡುವರೇ?
ಕೊಂಕರಸುವ ಡೊಂಕ ಮನವೊಡೆವ ಕೆಡುಕನ|
ಹುಣ್ಣನರಸುವ ನೊಣನೆಂದೆಣಿಸು ಮೂಢ||


ವೇಷಭೂಷಣವನೊಪ್ಪೀತು ನೆರೆಗಡಣ|
ನೀತಿಪಠಣವ ಮೆಚ್ಚೀತು ಶ್ರೋತೃಗಣ||
ನುಡಿದಂತೆ ನಡೆದರದುವೆ ಆಭರಣ|
ಮೊದಲಂತರಂಗವನೊಪ್ಪಿಸೆಲೋ ಮೂಢ||


ಆವರಣ ಚೆಂದವಿರೆ ಹೂರಣಕೆ ರಕ್ಷಣ|
ಹೂರಣ ಚೆಂದವಿರೆ ಆವರಣಕೆ ಮನ್ನಣ||
ಆವರಣ ಹೂರಣ ಚೆಂದವಿರೆ ಪ್ರೇರಣ|
ಬದುಕು ಸುಂದರ ಪಯಣ ಕಾಣಾ ಮೂಢ||
**********************
-ಕವಿನಾಗರಾಜ್.

Monday, October 25, 2010

ಉನ್ನತ ಬದುಕಿಗಾಗಿ ವೇದದ ಸೂತ್ರಗಳು

ಶ್ರೀ ಸುಧಾಕರಶರ್ಮರ ಮಾತುಗಳನ್ನು ಕೇಳುವುದೇ ಒಂದು ಸೊಗಸು.ಅವರ ಮಾತುಗಳಿಗೆ ಅಕ್ಷರ ಕೊಡುವುದೆಂದರೆ ಬಲು ಸಾಹಸದ ಕೆಲಸ. ಅಂತಹ ಸಾಹಸಕ್ಕೆ ಕೈ ಹಾಕದೆ ಅವರ ಮಾತುಗಳನ್ನು ನಿಮಗೆ ನೇರವಾಗಿ ಕೇಳಿಸುವ ಪ್ರಯತ್ನ ಇಲ್ಲಿದೆ.ಬಲು ಒತ್ತಾಯಪೂರ್ವಕವಾಗಿಯೇ ಶರ್ಮರ ಮಾತುಗಳನ್ನು ಹಲವರಿಗೆ ನಾನು ಕೇಳಿಸಲು ಕಾರಣವಿದೆ. ನಾವೆಲ್ಲಾ ಅಂತಿಮವಾಗಿ ಹುಡುಕುತ್ತಿರುವುದಾದರೂ ಏನು? ನೆಮ್ಮದಿಯ ಬದುಕು!ಅಲ್ಲವೇ? ಜೀವನದಲ್ಲಿ ನೆಮ್ಮದಿಯನ್ನು ಕಾಣಲು, ಲವಲವಿಕೆಯಾಗಿ ಕುಟುಂಬ ನಿರ್ವಹಿಸಲು, ಸದಾ ಹರ್ಷಚಿತ್ತರಾಗಿರಲು, ಉನ್ನತಬದುಕು ನಡೆಸಲು ಯಾವುದಾದರೂ ಸರಳ ಮಾರ್ಗವಿದೆಯೇ? ಎಂಬ ಪ್ರಶ್ನೆ ಎದ್ದಾಗ-ಶರ್ಮರು ಹೇಳುತ್ತಾರೆ" ಬೆಣ್ಣೆಯನ್ನು ಕೈಲಿಟ್ಟುಕೊಂಡು ತುಪ್ಪಕ್ಕೆ ಅಲೆಯುವುದೇ?
                               ಜನ್ಮ ಜನ್ಮಾಂತರಗಳ ಪುಣ್ಯದ ಫಲದಿಂದಲೇ ಭಾರತ ದೇಶದಲ್ಲಿ ನಮ್ಮ ಜನ್ಮವಾಗಿದೆ ಎಂಬುದು ನನ್ನ ದೃಢವಾದ ನಂಬಿಕೆ. ಅದೆಷ್ಟು ಸಹಸ್ರ ಜನ ಋಷಿಮುನಿಗಳು ಈ ಭೂಮಿಯಲ್ಲಿ ಜನಿಸಿ ತಪಸ್ಸನ್ನುಗೈದು ಈ ಭೂಮಿಯ ಕಣಕಣವನ್ನೂ ಪುನೀತಗೊಳಿಸಿರುವರೋ ಅಂತಹ ಪವಿತ್ರಭೂಮಿಯಲ್ಲಿ ನಮ್ಮ ಜನ್ಮ ವಾಗಿದೆ.ಇಡೀ ಮಾನವ ಕುಲದ ಉನ್ನತಬದುಕಿಗಾಗಿ ಸೂತ್ರವನ್ನು ಕೊಟ್ಟ ವೇದವನ್ನು ಜಗತ್ತಿಗೆ ನೀಡಿದ ಪುಣ್ಯ ಭೂಮಿ ಇದು. ಆದರೆ ಅಂತಹ ಮಹಾನ್ ಜ್ಞಾನದ ತೌರಿನಲ್ಲೇ ವೇದವನ್ನು ಅರಿತವರು ಬಹಳ ಜನರಿಲ್ಲ.ವೇದವೆಂದರೆ ಕೇವಲ ಸ್ವರಬದ್ಧವಾಗಿ ಮಂತ್ರಗಳನ್ನು ಪಠಿಸುವುದೆಂದೇ ಬಹುಜನರ  ನಂಬಿಕೆ. ವೇದವು ನಮ್ಮ ಬದುಕನ್ನು ಹಸನುಗೊಳಿಸಬಲ್ಲ ಸರಳ ಸೂತ್ರಗಳನ್ನು ಹೊಂದಿದೆ ಎಂದರೆ ಆಶ್ಚರ್ಯವಾಗುತ್ತದೆ. ಲಿಂಗಭೇದವಿಲ್ಲದೆ, ಜಾತಿಭೇದವಿಲ್ಲದೆ, ಪ್ರಾಂತ ಭೇದವಿಲ್ಲದೆ ಈ ವಿಶ್ವದಲ್ಲಿರುವ ಎಲ್ಲಾ ಮಾನವರು ತಮ್ಮ ಉನ್ನತಬದುಕಿಗಾಗಿ ವೇದಾಧ್ಯಯನ ಮಾಡಲು ಅರ್ಹರೆಂಬುದನ್ನು ಶರ್ಮರು ವೇದ ಮಂತ್ರಗಳಿಂದಲೇ ಮನಮುಟ್ಟುವಂತೆ ವಿವರಿಸುತ್ತಾರೆ. ಅಷ್ಟೇ ಅಲ್ಲ, ಇಲ್ಲಿರುವ ನಾಲ್ಕಾರುಮಂತ್ರಗಳ ವಿವರಣೆಯನ್ನು ಮನಸ್ಸಿಟ್ಟು ಕೇಳಿದರೆ ಜೀವನಕ್ಕೆ ಒಂದು ಸತ್ಯಪಥದ ದರ್ಶನವಾಗುವುದರಲ್ಲಿ ಸಂದೇಹವಿಲ್ಲ. ಆದರೆ ಸುಮಾರು ೭-೮ ಗಂಟೆಗಳಿರುವ  ಈ ಉಪನ್ಯಾಸವನ್ನು  ನಾಲ್ಕಾರು ಭಾರಿ ಕೇಳಬೇಕು. ಅಂತಿಮವಾಗಿ ಜೀವನಕ್ಕೆ ಅಷ್ಟು ಸಾಕೆಂಬ  ಸತ್ಯದ ದರ್ಶನವಾಗುವುದರಲ್ಲಿ ಸಂಶಯವಿಲ್ಲ. ಇನ್ನು ಮುಂದೆ  ಉಪನ್ಯಾಸವನ್ನು ಕೇಳಿ. ಒಂದೆರಡು ಗಂಟೆಗಳು ಸತತವಾಗಿ ಕೇಳುವುದು ಕಷ್ಟ ವೆನ್ನಿಸಬಹುದು. ಆದರೂ ಅನಿವಾರ್ಯ. ಅಂತಿಮವಾಗಿ ಕೇಳಿದ್ದು ಸಾರ್ಥಕವೆನಿಸದಿರದು. ಉಪನ್ಯಾಸವನ್ನು ಕೇಳಿದಮೇಲೆ ನಿಮ್ಮಲ್ಲಿ ಮೂಡಬಹುದಾದ ಸಂದೇಹಗಳಿಗೆ ನೀವು  ವೇದಸುಧೆಗೆ ಮೇಲ್ ಮಾಡಬಹುದು. ವೇದಸುಧೆಯ ಪ್ರತಿಕ್ರಿಯೆ ಕಾಲಮ್ ನಲ್ಲಿ ನಿಮ್ಮ ಸಂದೇಹಗಳನ್ನು ಬರೆಯಬಹುದು. ಎಲ್ಲಕ್ಕೂ ಶ್ರೀ ಶರ್ಮರು ಉತ್ತರಿಸುವರು. 
vedasudhe@gmail.com |

ಭಾಗ-1



ಭಾಗ-2



ಭಾಗ-3


ಭಾಗ-4

Friday, October 22, 2010

ಯೋಚಿಸಲೊ೦ದಿಷ್ಟು... ೧೪

೧.ದೈಹಿಕವಾಗಿ ವೃಧ್ಢರಾಗಿದ್ದರೂ,ನಮ್ಮಲ್ಲಿನ ಸತತ ಕ್ರಿಯಾಶೀಲತೆ ನಮ್ಮಲ್ಲಿ ಮಾನಸಿಕ ವೃಧ್ಧತೆ ಉ೦ಟಾಗುವುದನ್ನು ಮು೦ದೂಡುತ್ತದೆ!

೨.ಕೀರ್ತಿಯೆನ್ನುವುದು ನೀರಿನಲ್ಲಿನ ಅಲೆಯ೦ತೆ!ಒಮ್ಮೊಮ್ಮೆ ದೊಡ್ದದಾಗಲೂಬಹುದು!ಇದ್ದಕ್ಕಿದ್ದ೦ತೆ ಮಾಯವಾಗಲೂ ಬಹುದು!

೩. ಯಶಸ್ಸು ಎನ್ನುವುದು ನದಿಯ೦ತೆ! ಹಗುರವಾದುದನ್ನು ತೇಲಿಸಿದರೆ, ಭಾರವಾದುದನ್ನು ಮುಳುಗಿಸುತ್ತದೆ!

೪.ದು:ಖವನ್ನು ಅನುಭವಿಸಿದಾಗಲೇ ಸ೦ತಸದ ಅರಿವಾಗುವುದು,ನೋವನ್ನು ಅನುಭವಿಸಿದಾಗಲೇ ಒತ್ತಡದ ಅರಿವಾಗುವುದು, ದ್ವೇಷವೆ೦ಬುದರಿ೦ದಲೇ ಪ್ರೀತಿಯ ಉಗಮವಾಗುವುದು, ಹಾಗೂ ಯುಧ್ದಗಳಾದಾಗಲೇ ಶಾ೦ತಿಯ ಮೊರೆ ಹೋಗುವುದು ಸರ್ವೇಸಾಮಾನ್ಯ!

೫.ಜನರು ನಮ್ಮ ಬಗ್ಗೆ ಏನನ್ನು ತಿಳಿದುಕೊಳ್ಳುತ್ತಾರೆ ಎ೦ಬುದಕ್ಕೆ ನಾವು ಜವಾಬ್ದಾರನಲ್ಲ!ಆದರೆ ಜನರಿಗೆ ನಮ್ಮ ಬಗ್ಗೆ ಚಿ೦ತಿಸಲು ನಾವು ಅವರಿಗೆ ಏನನ್ನು ನೀಡಿದ್ದೇವೆ ಎ೦ಬುದೇ ಅತಿ ಮುಖ್ಯವಾದುದು!

೬.ಆತ್ಮೀಯರು ಅಗಲುವಾಗ ಉ೦ಟಾಗುವ ನೋವಿಗಿ೦ತಲೂ ಹೆಚ್ಚು ನೋವನ್ನು ಅವರು ನಮ್ಮನ್ನು ಅಗಲುವ ಬಗ್ಗೆ ಯೋಚಿಸಿ ದಾಗಲೇ ನಾವು ಅನುಭವಿಸುತ್ತೇವೆ.

೭.ಜೀವನದಲ್ಲಿ ಎಲ್ಲವೂ ಸರಿಯಾಗಿದ್ದಾಗ ನಮ್ಮ ಆತ್ಮಬಲವನ್ನು ಪರೀಕ್ಷಿಸಿಕೊಳ್ಳುವುದಕ್ಕಿ೦ತ,ಜೀವನದಲ್ಲಿ ನಮ್ಮ ಎಣಿಕೆಗಳೆ ಲ್ಲವೂ  ತಪ್ಪಾದಾಗ, ಆತ್ಮಬಲವನ್ನು ಪರೀಕ್ಷಿಸಿದಲ್ಲಿ, ನಮ್ಮ ಬಲವೇನೆ೦ಬುದುರ ಅರಿವಾಗುತ್ತದೆ!

೮. ಕಾಲ ಮಾತ್ರವೇ ಆತ್ಮೀಯತೆಯ ಮೌಲ್ಯವನ್ನು ಅಳೆಯಬಲ್ಲುದು. ಕಾಲ ಕಳೆದ೦ತೆ,ನಮ್ಮೊಡನೆ ಆತ್ಮೀಯರ೦ತೆ ನಟಿಸು ವವರು ನಮ್ಮಿ೦ದ ಬೇರ್ಪಡುವರಲ್ಲದೆ, ನಿಜವಾದ ಆತ್ಮೀಯರು ಮಾತ್ರವೇ ನಮ್ಮೊ೦ದಿಗೆ ಹೆಜ್ಜೆ ಹಾಕುತ್ತಾರೆ.

೯.ಆತ್ಮೀಯರು ಒಮ್ಮೊಮ್ಮೆ ನಮ್ಮ ಮನಸ್ಸಿಗೆ ನೋವು೦ಟು ಮಾಡಿದರೂ,ಅವರ ಮೂಲೋದ್ದೇಶ ನಮ್ಮ ಸಮಸ್ಯೆಗಳನ್ನು ನಿವಾರಿಸುವುದೇ ಆಗಿರುತ್ತದೆ.

೧೦.ಮಿತೃತ್ವವೆ೦ಬುದು ಪ್ರತಿದಿನದ ಮು೦ಜಾವಿನ ಹಾಗೆ.ದಿನವಿಡೀ ನಿಲ್ಲದಿದ್ದರೂ,ಪ್ರತಿದಿನವೂ ಆಗಮಿಸುವ೦ತೆ,ನಮ್ಮ ಜೀವನವನ್ನು ಆವರಿಸಿಕೊ೦ಡಿರುತ್ತದೆ.

೧೧.ಒ೦ದು ಮೌಲ್ಯವು ತನ್ನ ಮೌಲ್ಯವನ್ನು ಉಳಿಸಿಕೊಳ್ಳುವುದು ಯಾವಾಗೆ೦ದರೆ ಅದರ ಮೌಲ್ಯವನ್ನು ಮೌಲ್ಯಯುತವಾಗಿ ಮಾಪನ ಮಾಡಿದಾಗಲೇ!

೧೨.ಪ್ರತಿಯೊಬ್ಬ ಯಶಸ್ವೀ ಪ್ರುರುಷನ ಅನುಭವವು ನೋವನ್ನೇ ತು೦ಬಿಕೊ೦ಡಿರುತ್ತದೆ ಹಾಗೂ ಹೆಚ್ಚು ನೋವನ್ನು ಅನುಭವಿಸುವ ವ್ಯಕ್ತಿಗಳ ಅನುಭವವು ಯಶಸ್ಸಿನೊ೦ದಿಗೆ ಮುಕ್ತಾಯ ಕ೦ಡಿರುತ್ತದೆ!

೧೩. ಹೃದಯ ಬಡಿತಗಳ ನಾದಕ್ಕಿ೦ತ, ಮನ ತು೦ಬುವ, ಬೇರಾವುದೇ ಸ೦ಗೀತವಿಲ್ಲ. ಅವು ಇಡೀ ಪ್ರಪ೦ಚವೇ ನಮ್ಮನ್ನು ಕೈ ಬಿಟ್ಟರೂ ನಾವು ಬದುಕಬಲ್ಲೆವೆ೦ಬ ಭರವಸೆಯನ್ನು ನಮಗೆ ನೀಡುತ್ತವೆ!

೧೪.ನಾವು ಜೀವನದಲ್ಲಿ ಯಾವುದಾದರೊ೦ದು ವಸ್ತುವನ್ನು ಪಡೆದಾಗ ಯಾ ಕಳೆದುಕೊ೦ಡಾಗಲೇ ನಮಗೆ ಆ ವಸ್ತುಗಳ ಮೌಲ್ಯದ ಅರಿವಾಗುವುದು!

೧೫.ಸ೦ಪೂರ್ಣ ಜಗತ್ತು ಇ೦ದು ಅನಿಭವಿಸುತ್ತಿರುವ ನೋವು ಹಿ೦ಸಾತ್ಮಕ ವ್ಯಕ್ತಿಗಳಿ೦ದಲ್ಲ.ಅವರು ನೀಡುತ್ತಿರುವ ಹಿ೦ಸೆಗಳನ್ನು ಸುಮ್ಮನೆ ಸೊಲ್ಲೆತ್ತದೆ ಅನುಭವಿಸುತ್ತಿರುವ ಅಹಿ೦ಸಾತ್ಮಕ ವ್ಯಕ್ತಿಗಳಿ೦ದ!

Thursday, October 21, 2010

ವೇದಪಾಠ ಭಾಗ-1

ಶ್ರೀ ಸುಧಾಕರಶರ್ಮರು ಹಾಸನದ ಶ್ರೀ ಶಂಕರ ಮಠದಲ್ಲಿ ನವರಾತ್ರಿ ಸಂದರ್ಭದಲ್ಲಿ ದಿನಾಂಕ 12.10.2010 ರಂದು ಮಾಡಿದ ಎರಡು ಗಂಟೆಗಳ ಪ್ರವಚನವನ್ನು ಐದು ಪಾಠಗಳಾಗಿ ಇಲ್ಲಿ ಪ್ರಕಟಿಸಲಾಗಿದೆ. ಸಮಯಾವಕಾಶವಾದಂತೆ ಅವುಗಳ ಬರಹ ರೂಪವನ್ನು ಕೊಡಲಾಗುವುದು. ಆಡಿಯೋ ಕ್ಲಿಪ್ ಗಳನ್ನು ಕೇಳುವಾಗ ಹಿಂದಿನ ಕ್ಲಿಪ್ ಗಳನ್ನು ಕೇಳಿ ಮುಂದಿನ ಕ್ಲಿಪ್ ಕೇಳುವುದರಿಂದ ಅರ್ಥಮಾಡಿಕೊಳ್ಳುವುದು ಸುಲಭವಾಗುತ್ತದೆ. ವೇದಪಾಠದ ಹೆಸರಿನಲ್ಲಿ ಜಡ,ಚೇತನ, ಅಸ್ತಿತ್ವ, ನ್ಯೂಟನ್ ನ ನಿಯಮ, ಹೀಗೆ ವಿಜ್ಞಾನದ ಪಾಠ ಮಾಡಿದ್ದಾರಲ್ಲಾ! ವೇದ ಮಂತ್ರಗಳ ಪಾಠ ಮಾಡುವುದಿಲ್ಲವೇ? ಎಂದು ಅನೇಕರು ಕೇಳಿದ್ದಾರೆ.ಆದರೆ ವೇದಸುಧೆಯ ಎಲ್ಲಾ ಅಭಿಮಾನಿಗಳಲ್ಲೂ ಕಳಕಳಿಯ ಮನವಿ ಏನೆಂದರೆ" ಸುಧಾಕರ ಶರ್ಮರ ಉಪನ್ಯಾಸವೇ ಹಾಗೆ. ಎಲ್ಲಾ ವಿಚಾರಗಳ ಮೂಲ ಅರಿಯದೆ ಅದರ ಪೂರ್ಣ ಅರ್ಥವಾಗುವಿದಿಲ್ಲವೆಂಬ ಕಾನ್ಸೆಪ್ಟ್ ಇಟ್ಟುಕೊಂಡು ವೈಜ್ಞಾನಿಕವಾಗಿ ಎಳೆ ಎಳೆಯಾಗಿ ವಿವರಣೆ ಕೊಟ್ಟಿದ್ದಾರೆ. ಕೆಲವೊಮ್ಮೆ ಅತಿಯಾಯ್ತೆಂದೆನಿಸಬಹುದು. ಆದರೆ ಶರ್ಮರ ಇಲ್ಲಿಯ ಮಾತುಗಳನ್ನು ಪೂರ್ಣ ಕೇಳದೆ ಹೋದರೆ ಮುಂದೆ ವೇದಮಂತ್ರಗಳ ಅರ್ಥವನ್ನು ತಿಳಿಯುವುದು ಕಷ್ಟವಾಗುತ್ತದೆ. ಆದ್ದರಿಂದ ಇಲ್ಲಿ ಪ್ರಕಟಿಸಿರುವ ಶರ್ಮರ ಪ್ರವಚನಗಳನ್ನು ತಾಳ್ಮೆಯಿಂದ ಕೇಳಿದ್ದೇ ಆದರೆ ಮುಂದೆ ನಮಗೆ ವೇದಮಂತ್ರಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗಲಾರದು. ದಿನಾಂಕ 13,14 ಮತ್ತು 15 ರ ಪ್ರವಚನಗಳಲ್ಲಿ ವೇದ ಮಂತ್ರಗಳ ಅರ್ಥವನ್ನು ಸೊಗಸಾಗಿ ವಿವರಿಸಿದ್ದಾರೆ. ಅದಕ್ಕೆ ಈ ಪೀಠಿಕೆಯೇ ತಳಹದಿಯಾಗಿದೆ.ಮುಂದಿನ ಮೂರು ದಿನಗಳ ಪ್ರವಚನವನ್ನು ಪ್ರಕಟಿಸಲು ಇನ್ನೂ 8-10 ದಿನಗಳ ಸಮಯವಾದರೂ ಬೇಕಾಗಬಹುದು. ಅಂತೂ ಅಮೂಲ್ಯವಾದ ಈ ಪ್ರವಚನಗಳನ್ನು ಹಲವು ಕಂತುಗಳಲ್ಲಿ ಪ್ರಕಟಿಸಲಾಗುವುದು.


 ಪಾಠ-1



ಪಾಠ-2



ಪಾಠ-3



ಪಾಠ-4



ಪಾಠ-5

ಸತ್ಯಾನ್ಷೇಷಣೆ



ಜೀವನವೇ ಒಂದು ಅನ್ವೇಷಣೆ; ಅದೂ ನಿರಂತರವಾದ, ಆದಿ-ಅಂತ್ಯವಿಲ್ಲದ ಮತ್ತು ಬಹುತೇಕ ಸಂದರ್ಭಗಳಲ್ಲಿ ಗೊತ್ತು-ಗುರಿಯಿಲ್ಲದ ಅನ್ವೇಷಣೆ. ಲೌಕಿಕ ಜೀವನ ನಿರ್ವಹಣೆಗೇ ನಮ್ಮ ಜೀವನದ ಬಹುಪಾಲು ಸಮಯ ಮತ್ತು ಶ್ರಮ ಮೀಸಲು. ಆದರೆ ಸೋಜಿಗವೆಂದರೆ ಮುನಷ್ಯನೇ ಒಂದು ವಿಚಿತ್ರ ಪ್ರಾಣಿ. ಅವನ ಇಂದ್ರಿಯಾತ್ಮಕ, ಲೌಕಿಕ ಮತ್ತು ವಿಶೇಷವಾಗಿ ಆತನ ಬೌದ್ಧಿಕ ಅವಶ್ಯಕತೆಗಳನ್ನು ಪೂರೈಸಿದಷ್ಟೂ ಅವುಗಳು ಪುನ: ಪುನ: ಬೇರೊಂದು ರೂಪದಲ್ಲಿ ತಲೆಯೆತ್ತುತ್ತಲೇ ಇರುತ್ತವೆ. ಹೀಗೆ ನಾನಾ ಮೂಲಗಳಿಂದ ಉದ್ಭವವಾಗುವ ಇಂತಹ ಸನ್ನಿವೇಶಗಳು, ಅನುಭವಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಉಂಟಾದ ನಷ್ಟ, ದು:ಖ ಮತ್ತು ಸಾವು-ನೋವುಗಳು ಆತನಲ್ಲಿ ಜೀವನದ ಉದ್ಧೇಶದ ಬಗ್ಗೆ, ಜೀವನಾರ್ಥದ ಬಗ್ಗೆ ಮತ್ತು ಅಲ್ಪಸ್ವಲ್ಪ ಸಂಸ್ಕಾರ ಮತ್ತು ಯೋಗ್ಯತೆ ಇರುವವರಲ್ಲಿ ಜೀವನ್ಮುಕ್ತಿಯ ಬಗ್ಗೆ ಸಾವಿರಾರು ಪ್ರಶ್ನೆಗಳನ್ನು ಹುಟ್ಟಿಹಾಕುತ್ತವೆ. ಇಂತಹ ಪ್ರಶ್ನೆಗಳ ಚಿಂತನ-ಮಂಥನವೇ ಸತ್ಯಶೋಧನೆ ಅಥವಾ ಸತ್ಯಾನ್ವೇಷಣೆ ಎನ್ನಬಹುದು. ಇಂತಹ ಪ್ರಶ್ನೆಗಳು ಅಥವಾ ದ್ವಂದ್ವಗಳು ಮನಸ್ಸಿನಲ್ಲಿ ಒಂದು ಆಂದೋಳನವನ್ನೇ ಸೃಷ್ಟಿಸಿಬಿಡುತ್ತವೆ. ಆ ಆಂದೋಳನ ಅಥವಾ ಚಿಂತನಕ್ಕೆ ಒಂದು ಅರ್ಥ ಸಿಗಬೇಕಾದರೆ ಅದಕ್ಕೆ ತಕ್ಕುದಾದ ಶ್ರಮ (ಶಾರೀರಿಕ ಮತ್ತು ಬೌದ್ಧಿಕ), ಅರ್ಥಾತ್ ಸಾಧನೆಯನ್ನು ನಾವೇ ಮಾಡಬೇಕು. ವೇದ, ಉಪನಿಷತ್ತು, ಶಾಸ್ತ್ರ-ಪುರಾಣಗಳು, ರಾಮಾಯಣ, ಮಹಾಭಾರತ ಮುಂತಾದ ದಿವ್ಯ ಭಂಡಾರವಿರುವ ಭಾರತೀಯ ಜ್ಞಾನ ಸಂಪತ್ತು ಅಪಾರ ಮತ್ತು ಅಪರಿಮಿತ. ಅದೇ ರೀತಿ, ಸಾಧಕರೂ ಕೂಡಾ ಅಸಂಖ್ಯ. ಆದರೆ ಇವೆಲ್ಲಾ ನಮ್ಮ ಪ್ರಯತ್ನದಲ್ಲಿ ಕೇವಲ ಕೈಮರಗಳಾಗಬಹುದಷ್ಟೇ. ಅನೇಕ ಸಾಧಕ ವ್ಯಕ್ತಿಗಳನ್ನು ನೋಡಿ. ಅವರ ಸಾಮೀಪ್ಯವೇ ಒಂದು ಚೈತನ್ಯದೊಡನಿದ್ದಂತೆ. ಅಂತಹ ಸತ್ಯ ಸಾಕ್ಷಾತ್ಕಾರ ಮಾಡಿಕೊಂಡವರ ವಿಚಾರಧಾರೆ ಕೇಳುವವರಿಗೆ ಮತ್ತು ಅವರ ಸಂಪರ್ಕಕ್ಕೆ ಬಂದವರಿಗೆ ಅಂತಹ ಒಂದು ದಿವ್ಯಾನುಭವ ಸ್ವಯಂವೇದ್ಯ. ಆದರೂ, ನಿಜವಾದ ಸತ್ಯ ಶೋಧನೆಯನ್ನು ನಾವೇ ಮಾಡಬೇಕು; ನಾವೇ ಸಂಪಾದಿಸಬೇಕು ಮತ್ತು ನಾವೇ ಅರ್ಥ ಮಾಡಿಕೊಳ್ಳಬೇಕು. ಆಗ ಅನೇಕ ಮಹಾತ್ಮರೊಡನೆ ನಾವು ಸಂಪರ್ಕಕ್ಕೆ ಬಂದಾಗ ಆಗುವ ಚೈತನ್ಯದ ಅನುಭವ ನಮ್ಮಲ್ಲೂ ಜಾಗೃತವಾಗಬಲ್ಲದು.

ಪ್ರಮುಖವಾಗಿ ಹುಟ್ಟು, ಬದುಕು ಮತ್ತು ಸಾವು - ಇವೇ ನಿಜವಾದ ಸತ್ಯಗಳೆಂದರೆ ತಪ್ಪಾಗಲಾರದು. ಈ ಮೂರೂ ಅವಸ್ಥೆಗಳ ಸಂಪೂರ್ಣ ಹಿನ್ನೆಲೆ, ಅವಕ್ಕೆ ಸಂಬಂಧಿಸಿದ ಲಭ್ಯವಿರುವ ನಾನಾ ವಿಚಾರಗಳ ಸಂಗ್ರಹಣೆ, ಮನನ ಮತ್ತು ಆಚರಣೆಯನ್ನು ಅಳವಡಿಸಿಕೊಳ್ಳಲು ಒಂದು ಜೀವಿತಾವಧಿಯೇ ಸಾಕಾಗಲಾರದು. ಆದುದರಿಂದ, ನಿಜ ಹೇಳಬೇಕೆಂದರೆ ರಹಸ್ಯಗಳನ್ನು ಭೇದಿಸುವುದೇ ಸತ್ಯಾನ್ಷೇಷಣೆ. ಆದರೆ ಯಾವುದು ಸತ್ಯವೆಂಬುದೇ ಬಹು ಜನರಿಗೆ ಇಂದಿಗೂ ಎಟುಕದ ವಿಷಯವಾಗಿದೆ. ಸತ್ಯದ ಪರಿಕಲ್ಪನೆ ವ್ಯಕ್ತಿಗತ. ಹಾಗಾಗಿಯೇ ನಾವಿಂದು ಇಂತಹ ವಿಚಾರಗಳ ಬಗ್ಗೆ ಲೆಕ್ಕವಿಲ್ಲದಷ್ಟು ಸಿದ್ಧಾಂತಗಳನ್ನು, ವಾದ-ವಿವಾದಗಳನ್ನು ಮತ್ತು ಪ್ರತಿಪಾದನೆಗಳನ್ನೂ ನೋಡಬಹುದು.

"ಅರಿವೇ ಗುರುವು" ಎಂಬ ಮಾತೊಂದಿದೆ. ಅಂತೆಯೇ ಜೀವನದುದ್ದಕ್ಕೂ ನಮ್ಮಲ್ಲಿ ಅನೇಕ ಪ್ರಶ್ನೆಗಳು, ಸಂಶಯಗಳು ಮತ್ತು ದ್ವಂದ್ವಗಳು ನಿರಂತರವಾಗಿ ಏಳುತ್ತಿವೆಯೆಂದರೆ ಅದೇ ಅರಿವಿನ ಮೊದಲ ಚಿಹ್ನೆ/ಹೆಜ್ಜೆ. ಪ್ರಶ್ನೆಗಳೆದ್ದಾಗ ಉತ್ತರ ಎಲ್ಲಾದರೂ ಸಿಕ್ಕೀತು. ಆದರೆ ಪ್ರಶ್ನೆಗಳೇ ಏಳದಿದ್ದರೆ ಏನೂ ಮಾಡಲಾಗದು. ಆಗ ಪ್ರಾಣಿಗಳಿಗೂ ನಮಗೂ ಯಾವುದೇ ವ್ಯತ್ಯಾಸವಿರದು. ವಿಷಯ/ವ್ಯಕ್ತಿ/ ವಸ್ತುಗಳ ಅರಿವು ಮತ್ತು ಆ ತಿಳುವಳಿಕೆ ಸರಿಯೇ/ತಪ್ಪೇ ಎಂಬ ನಿರಂತರ ವಿಮರ್ಶೆ/ತರ್ಕಗಳು ನಮ್ಮನ್ನು ಸತ್ಯದೆಡೆಗೆ ಸಾಗಿಸುವ ಪ್ರಮುಖ ಸಾಧನ. ಆದುದರಿಂದ ಸತ್ಯ ಶೋಧನೆಗೆ ತಕ್ಕ ಅರ್ಹತೆ ಮತ್ತು ಯೋಗ್ಯತೆ ಕೂಡಾ ಅತ್ಯಾವಶ್ಯಕ. ಸತ್ಯದ ಪರಿಮಿತಿ ಅಗಾಧವಾದದ್ದು. ಅಂತೆಯೇ ನಮ್ಮ ಸಾಧನೆಗೆ ತಕ್ಕಷ್ಟು ಮಾತ್ರಾ ಸತ್ಯದ ಅರಿವನ್ನು ಪಡೆಯಲು ಸಾಧ್ಯ. ಸಾಗರದಿಂದ ಒಂದು ಬಿಂದಿಗೆ ನೀರು ತಂದಂತೆ! ಅದು ನಮ್ಮ ಸಾಧನೆಯ ಮಟ್ಟಕ್ಕೆ ನಮಗೆ ದೊರೆತ ಸತ್ಯ. ಆದರೆ ಅದೇ ಸಂಪೂರ್ಣ ಸತ್ಯವಲ್ಲ!

ಕಿಟಕಿ ಪರದೆ ಸರಿಸಿದರೇನೆಯೇ ಬೆಳಕು ಬರುವುದು. ಎಳ್ಳನ್ನು ಗಾಣಕ್ಕೆ ಹಾಕಿದಾಗಲೇ ಎಣ್ಣೆ ಬರುವುದು. ನದಿ ತೀರದ ಮರಳನ್ನು ಬಗೆದರೇ ನೀರು ಸಿಗುವುದು. ಅದೇ ರೀತಿ ಸತ್ಯಶೋಧನೆಯಲ್ಲಿ ಇಂತಹ ನಾನಾ ಮಾಯೆಗಳನ್ನು ನಾವು ದಾಟಬೇಕು. ಕ್ರಿಯಾಶೀಲರಲ್ಲಿ ಸಂಸ್ಕರಣೆ ಮತ್ತು ಪರಿವರ್ತನೆ ಒಂದು ನಿರಂತರ ಪ್ರಕ್ರಿಯೆ. ಹಾಗಾಗಿ ಮಾಯೆಗಳ ಛಾಯೆಯನ್ನು ದಾಟುವುದಕ್ಕೆ ಬೇಕು ತಕ್ಕ ಮಾನಸಿಕ ಪರಿಪಕ್ವತೆ, ಸಿದ್ಧತೆ ಮತ್ತು ದೃಢ ಸಂಕಲ್ಪ. ಮಾನಸಿಕ ಸಂತುಲತೆ ಇಲ್ಲದಾದಾಗ ಗ್ರಹಿಕೆಗಿಂತ ಹೆಚ್ಚಾಗಿ ತಪ್ಪು ಗ್ರಹಿಕೆಗಳೇ ಆದೀತು. ಹಾಗಾಗಿ ಯಾವುದೇ ವಿಚಾರದ ಬಗ್ಗೆ ಉದ್ವೇಗರಹಿತವಾದ ಮತ್ತು ಪೂರ್ವಾಗ್ರಹ ರಹಿತವಾದ ದೃಷ್ಟಿಕೋನ ಅಗತ್ಯ. ಹಿಂದೆ ಹೇಳಿದಂತೆ ಸತ್ಯದ ಕಲ್ಪನೆ ವ್ಯಕ್ತಿಗತ. ನಾಲ್ಕಾರು ಕುರುಡರು ಆನೆಯನ್ನು ಮುಟ್ಟಿನೋಡಿ ಬೇರೆ ಬೇರೆ ರೀತಿಯಲ್ಲಿ ಅರ್ಥೈಸಿದಂತೆ! ಒಂದೇ ವಿಚಾರದ ಬಗ್ಗೆ ನಾವು ನಾನಾ ದೃಷ್ಟಿಕೋನಗಳಿರುವುದನ್ನು ಗಮನಿಸದ್ಧೇವೆ. ಅವೆಲ್ಲವೂ ಅದರದೇ ಆದ ಹಿನ್ನೆಲೆಯಲ್ಲಿ ಸತ್ಯವೆಂದೂ ತೋರುತ್ತವೆ. ಆದುದರಿಂದ ಅವೆಲ್ಲವನ್ನೂ ತಪ್ಪೆಂದು ಭಾವಿಸಲಾಗುವುದಿಲ್ಲ; ಅನೇಕ ವೇಳೆ, ಸತ್ಯವೆಂದೂ ಒಪ್ಪಲಾಗುವುದಿಲ್ಲ! ಎಲ್ಲಾ ಮಜಲುಗಳಿಂದಲೂ ವಿಷಯವನ್ನು ಪರಾಂಬರಿಸಿ, ಪರಾಮರ್ಶಿಸಿ ಮತ್ತು ಅರ್ಥೈಸಿಕೊಳ್ಳುವ ಪ್ರಕ್ರಿಯೆ ಮಾತ್ರಾ ನಮ್ಮ ಸಂಸ್ಕಾರಾನುಸಾರ, ನಮ್ಮ ಜ್ಞಾನಾನುಸಾರ ಮತ್ತು ನಮ್ಮ ಶಕ್ತ್ಯಾನುಸಾರ ನಾವೇ ಮಾಡಬೇಕು. ಅಂತೆಯೇ ನಮ್ಮಲ್ಲಿರುವ ಸಾಧನ ಸಂಪತ್ತುಗಳ ಸದ್ಭಳಕೆಯಿಂದ ನಾವೇನು ಪರಿಶ್ರಮ ಪಟ್ಟು ಒಂದನ್ನು ನಮ್ಮ ಅಂತರಾತ್ಮ ಸತ್ಯವೆಂದು ಒಪ್ಪುತ್ತದೆಯೋ ಅದೇ ನಮ್ಮ ಪಾಲಿಗೆ ಅಂತಿಮ ಸತ್ಯ.

ದೇಹವೊಂದು ನಾವೆ. ನಾವೇ ಅದರ ನಾವಿಕರು. ಸಾಗರ ದಾಟಲು ದೇಹವೂ ಚೆನ್ನಾಗಿರಬೇಕು, ನಾವೆಯೂ (ಸಾಧನ) ಸುಭದ್ರವಾಗಿರಬೇಕು ಮತ್ತು ನಾವಿಕನು ಹಾಕುವ ಹುಟ್ಟುಗಳೂ ಸರಿಯಾಗಿರಬೇಕು. ಆಗಲೇ ಈ ಭವಸಾಗರವನ್ನು ದಾಟಿ ಗುರಿ ಮುಟ್ಟಲು ಸಾಧ್ಯ. ಆದರಿಲ್ಲಿ ದೇಹವೂ ನಶ್ವರ-ನಾವೆಯೂ ನಶ್ವರ. ಗುರಿ ತಲುಪಿದ್ದೊಂದೇ ಸತ್ಯ. ಸತ್ಯ ಸಾಕ್ಷಾತ್ಕಾರಕ್ಕೆ ಈ ಮುನ್ನ ಹೇಳಿದಂತೆ ತಕ್ಕ ಸಿದ್ಧತೆ ಬೇಕು. ಅಂದರೆ ಈ ಲೌಕಿಕ ವಸ್ತುಗಳೆಲ್ಲವೂ ಅಶಾಶ್ವತ, ಲೌಕಿತ ವಸ್ತುಗಳಲ್ಲಿ ಮೇಲ್ನೋಟಕ್ಕೆ ಗೋಚರವಾಗುವಂತಹ ಮತ್ತು ಆಕರ್ಷಿಸುವಂತಹ ಸುಖ-ಸೌಲಭ್ಯಗಳೆಲ್ಲವೂ ಮಿಥ್ಯ ಮತ್ತು ಅನಿಶ್ಚಿತ, ಲೌಕಿಕಾರ್ಷಣೆ ಕ್ಷಣಿಕ, ಲೌಕಿಕಾಕರ್ಷಣೆಗಳ ಬಗ್ಗೆ ವಿರಕ್ತಿ ಭಾವ, ಪೂರ್ವಾಗ್ರಹ ರಹಿತವಾದ ಮನಸ್ಥಿತಿ, ಪರಮಾತ್ಮ ವಸ್ತು ನಮ್ಮೊಳಗೂ ಇದೆ, ಎಲ್ಲೆಡೆಯೂ ಇದೆ ಮತ್ತು ಎಲ್ಲಕ್ಕೂ ಅತೀತವಾಗಿದೆ ಎಂಬ ನಂಬಿಕೆ ಮುಂತಾದವು ಸತ್ಯಶೋಧನೆಗೆ ಬೇಕಾದ ಪೂರ್ವಸಿದ್ಧತೆಗಳು. ನಮ್ಮ ಮನಸ್ಸಿನ ಸತ್ಯದ ಪರಿಕಲ್ಪನೆಯಂತೆ ನಮ್ಮ ಶಕ್ತ್ಯಾನುಸಾರ ಆ ಸತ್ಯಶೋಧನೆಯೆಡೆಗೆ ಸಾಗಲು ನಮಗೆ ಸಾಕಷ್ಟು ಸಾಧನ-ಸಂಪತ್ತುಗಳಿವೆ. ಮಾರ್ಗದರ್ಶಕರೂ ಇದ್ದಾರೆ. ಆದರೆ ಅವೆಲ್ಲದರ ಆಯ್ಕೆ ಮತ್ತು ವಿವೇಕಯುತ ಸದ್ಬಳಕೆ ಮಾತ್ರಾ ನಮ್ಮದೇ. ನಾವು ಅಗೋಚರದಿಂದ ಬಂದು ಅಗೋಚರ ಸ್ಥಾನಕ್ಕೇ ಹೋಗುವುದು ನಿತ್ಯಸತ್ಯ. ಅದರ ಹಿಂದಿರುವ ಪರತತ್ತ್ವ ಶಕ್ತಿಯೇ ಆ ಭಗವಂತ. ಪ್ರತಿಯೊಂದು ಚರಾಚರ ವಸ್ತು ಕೂಡ ಆ ಅಖಂಡ ಚೈತನ್ಯದಿಂದ ಕೂಡಿದೆ. ಜೀವ ಅನುಭವಿಸುವ ಪ್ರತಿಯೊಂದು ಅನುಭವಗಳೂ, ನೋಡುವ ಪ್ರತಿಯೊಂದು ವಸ್ತುವೂ/ವ್ಯಕ್ತಿಯೂ ಆ ಭಗವಂತನ ಚೈತನ್ಯದಿಂದ ಆವರಿಸಲ್ಪಟ್ಟಿದೆ ಎಂಬ ಭಾವ ಬಂಧಮುಕ್ತಿಗೆ ರಾಜಮಾರ್ಗ. ಪ್ರತಿಯೊಂದರಲ್ಲೂ ಆ ಮಹಾ ಚೈತನ್ಯ ನಮಗೆ ಸ್ಪಷ್ಟವಾಗ ತೊಡಗಿದಂತೆ ನಮ್ಮ ಅಜ್ಞಾನದ ಮತ್ತು ದ್ವಂದ್ವಗಳ ಬೀಡಾದ ಈ ಮನಸ್ಸು ತಿಳಿಯಾಗಲಾರಂಭಿಸುತ್ತದೆ. ವ್ಯಕ್ತಿ/ವಸ್ತು/ವಿಷಯಗಳ ಬಗ್ಗೆ ನಮ್ಮ ಪೂರ್ವಾಗ್ರಹಗಳೂ ಕೂಡ ಮರೆಯಾಗುತ್ತವೆ. ಅಂತಹ ತಿಳಿಯಾದ ಮನವೆಂಬ ಕೊಳದಲ್ಲಿ ನಿಶ್ಚಿತವಾಗಿ ಜ್ಞಾನವೆಂಬ ಕಮಲ ಅರಳುತ್ತದೆ. ಆ ಜ್ಞಾನವೇ ನಮ್ಮನ್ನು ಸತ್ಯದೆಡೆಗೆ ಸುಗಮವಾಗಿ ಕೊಂಡೊಯ್ಯುತ್ತದೆ.

ಹುಟ್ಟಿದ ಮೇಲೆ ಸಾಯಲೇ ಬೇಕು. ಜೀವನದಲ್ಲಿ ಏನು ಸಾದಿಸದಿದ್ದರೂ ಅಥವಾ ಸಾಧಿಸಿದರೂ ಸಾವು ಶತಸ್ಸಿದ್ಧ. ಬರೀ ಅಜ್ಙಾನದಲ್ಲಿ, ಅರೆ ತಿಳುವಳಿಕೆಯಲ್ಲಿ ಮತ್ತು ಪ್ರಾಣಿ ರೀತಿಯಲ್ಲಿ ಬದುಕಿ ಸಾಯುವ ಬದಲು, ಜ್ಞಾನದ, ತಿಳುವಳಿಕೆಯ ಮತ್ತು ಅಂತಿಮವಾಗಿ ಆ ಪರತತ್ತ್ವದ ನಿಜಸತ್ಯವನ್ನು ಅರಿಯಲು ನಿರಂತರ ಹೋರಾಡಿ ಸಾಯುವುದೇ ಒಂದು ರೀತಿಯಲ್ಲಿ ನಿಜವಾದ ವೀರ ಮರಣ. ಆ ಒಂದು ಹೋರಾಟದಲ್ಲಿ ನಾವು ಸಾಕಷ್ಟು ಸತ್ಯದ ಸಮೀಪವೇ ಬಂದಿರುತ್ತೇವೆ. ಕೆಲವು ಪುಣ್ಯಾತ್ಮರು ಅದನ್ನು ಸಾಕ್ಷಾತ್ಕರಿಸಿಕೊಂಡೇ ಬಿಡುತ್ತಾರೆ. ಆದರೆ ಅಂತಿಮವಾಗಿ ಅಂತಹ ಒಂದು ಪ್ರಯತ್ನವೇ ಒಂದು ಮಹತ್ಸಾಧನೆ ಮತ್ತು ಅವರ್ಣನೀಯ ಆನಂದದ ದಿವ್ಯಾನುಭವ. ಹಿಮಾಲಯದ ತುಟ್ಟ ತುದಿ ತಲುಪಲಾಗದಿದ್ದರೂ ಅದನ್ನು ತಲುಪಲು ಪ್ರಾಮಾಣಿಕ ಮತ್ತು ಯಥಾಶಕ್ತಿ ಪ್ರಯತ್ನಶೀಲನಾಗಿ ತೃಪ್ತಿ ಹೊಂದುವವನೇ ನಿಜವಾದ ಸತ್ಯಶೋಧಕ.
ಫೈನಲ್ ಕಿಕ್:

ಸತ್ಯ ಶೋದನೆಗೆ ಸಾಧನಗಳು ಹಲವಾರು. ಒಂದೇ ಊರಿಗೆ ನಾನಾ ದಾರಿಗಳಿದ್ದಂತೆ. ಅತ್ಯಂತ ಸುಗಮವಾದ, ಮನೋಹರವಾದ, ಸಮೀಪವಾದ ಮತ್ತು ಆಹ್ಲಾದಕರವಾದ ದಾರಿಯ ಆಯ್ಕೆ ಮಾತ್ರಾ ನಮ್ಮದೇ. ಆಧ್ಯಾತ್ಮಿಕ ಸತ್ಯಗಳು ಸರ್ವಕಾಲಿಕವಾಗಿ ಮಾನವನನ್ನು ಆಕರ್ಷಿಸುತ್ತಲೇ ಇವೆ. ಭಗವಂತಹ ಕೃಪೆಯೊಂದಿಗೆ ನಾವು ಆ ಸತ್ಯದೆಡೆಗೆ ಸಾಗಲು ನಮ್ಮ ಮೊದಲ ಹೆಜ್ಜೆ ಇಡೋಣ; ನಿರಂತರವಾಗಿ ನಡೆಯೋಣ ಮತ್ತು ನಿಶ್ಚಿತವಾಗಿ ಲಭ್ಯಾನುಸಾರ ಮತ್ತು ಯಥಾಶಕ್ತಿ ಗುರಿ ತಲುಪೋಣ.
"ಸತ್ಯಮೇವ ಜಯತೇ"
-----------------------------------------------------------------
ಯಾರ್ಯಾರು ಏನೇನೆನ್ನುತ್ತಾರೆ?
ಆತ್ಮೀಯ ಸುರೇಶ್,
ನಿಮ್ಮ ಚಿಂತನೆಯು ಸ್ವಾಗತಾರ್ಹ.ನನ್ನ ಅನಿಸಿಕೆಯನ್ನು ಮುಕ್ತವಾಗಿ ಹೇಳುವೆ. ನಾವೀಗಾಗಲೇ ನಮ್ಮ ಆಯುಷ್ಯವನ್ನು ಸತ್ಯಪಥದ ಹುಡುಕಾಟದಲ್ಲೇ ಕಳೆದಿದ್ದೇವೆ. ಕಳೆಯುತ್ತಿದ್ದೇವೆ. ನಮ್ಮ ಪರಿಮಿತ ಸಾಮರ್ಥ್ಯದ ಪರಿಣಾಮವಾಗಿ ಒಬ್ಬೊಬ್ಬ ಮಹಾತ್ಮರ ಮಾತುಗಳನ್ನು ಕೇಳುವಾಗ ಅದೇ ಸತ್ಯವೆಂದು ಭಾಸವಾಗುತ್ತದೆ. ನಮ್ಮ ದೇಶದಲ್ಲಿ ಜ್ಞಾನ ಭಂಡಾರಕ್ಕೇನೂ ಕೊರತಯಿಲ್ಲ. ಇದುವರೆವಿಗೆ ನನಗೆ  ವೇದ ವೆಂದರೆ ಮನಸ್ಸಿಗೆ ಹಿತಕೊಡುವ ಮಂತ್ರವೆಂದು ಅದರ ಬಗ್ಗೆ ಒಲವಿತ್ತು.ವೇದ ಮಂತ್ರಗಳ ಉಚ್ಛಾರಣೆಯಿಂದ ಉಂಟಾಗುವ ಶಬ್ಧತರಂಗಗಳಿಂದಲೇ ನಮ್ಮ ಮೇಲೆ ಅಂತೆಯೇ ಸುತ್ತಮುತ್ತಲ ಪರಿಸರದಮೇಲೆ ಸತ್ಪರಿಣಾಮ ಉಂಟಾಗುತ್ತದೆಂಬ ನಂಬಿಕೆ ಇತ್ತು.ವೇದ ಮಂತ್ರಗಳ ಅರ್ಥ ತಿಳಿಯುವಗೋಜಿಗೆ ಹೋಗಿರಲೇ ಇಲ್ಲ. ಕಾರಣ ಅದು ನಮಗೆ ನಿಲುಕದ್ದೆಂದೇ ಭಾವಿಸಿದ್ದೆ. ಸುಧಾಕರ ಶರ್ಮರ ಪರಿಚಯವಾದಮೇಲೆ ಅವರ ಮಾತುಗಳನ್ನು ಕೇಳುವಾಗ " ವೇದವನ್ನು ಇಷ್ಟು ಸರಳವಾಗಿ ಅರ್ಥಮಾಡಿಕೊಳ್ಳಬಹುದೇ!" ಮಾನವನ ಬದುಕಿನ ಉನ್ನತಿಗಾಗಿ ಬೇಕಾದ ಸಮಸ್ತವೂ ವೇದದಲ್ಲಿದೆಯಲ್ಲಾ! ಎಂಬ ವಿಚಾರದ ಅರಿವಾಗುತ್ತಾ, ಇಂತಹ ಒಂದು ಜ್ಞಾನಭಂಡಾರವನ್ನು ಪಡೆದಿರುವ ನಾವು ಬೆಣ್ಣೆಯನ್ನು ಇಟ್ಟುಕೊಂಡು ತುಪ್ಪಕ್ಕಾಗಿ ಅಲೆಯುತ್ತಿದ್ದೀವಲ್ಲಾ! ಎನಿಸುತ್ತಿದೆ. ಇದು ಎಗ್ಸಾಗರೇಶನ್ ಅಲ್ಲ. ನಮ್ಮ ಸಂಸ್ಕೃತಿ-ಪರಂಪರೆಗೆ ಮೂಲ ವೇದವೆಂಬುದನ್ನು ಯಾರೂ ಅಲ್ಲಗಳೆಯುದಿಲ್ಲ. ಆದರೆ ವೇದವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವಲ್ಲಿ ಸರಿಯಾದ ಪ್ರಯತ್ನವು ನಡೆದೇ ಇಲ್ಲ.  ಕೇವಲ ಯಜ್ಞ ಯಾಗಾದಿಗಳನ್ನು ನಡೆಸಲು ಮಾತ್ರವೇ ವೇದಮಂತ್ರಗಳನ್ನು ಉಪಯೋಗಿಸಬೇಕೆನ್ನುವಂತಹ ನಂಬಿಕೆ ಬೆಳೆದು ಬಂದಿದೆ. ಆದರೆ ಸಕಲ ಮನುಕುಲದ ಉನ್ನತಿಗಾಗಿ ವೇದದಲ್ಲಿ ಸರ್ವವೂ ಲಭ್ಯವೆಂದು ಶ್ರೀ ಶರ್ಮರು ಪ್ರತಿಪಾದಿಸುತ್ತಿದ್ದಾರೆ. ಅವರ ಪ್ರವಚನಗಳ ಆಡಿಯೋವನ್ನು ವೇದಸುಧೆಯಲ್ಲಿ ಹಂತ ಹಂತವಾಗಿ ಪ್ರಕಟಿಸಲಾಗುವುದು. ದಯಮಾಡಿ ತಾವು  ಬಹಳ ತಾಳ್ಮೆಯಿಂದ ಅಧ್ಯಯನ ದೃಷ್ಟಿಯಿಂದಲೇ ಅವರ ಪ್ರವಚನವನ್ನು ಕೇಳಿ. ಒಟ್ಟು ಸುಮಾರು ೧೫-೨೦ ಕಂತುಗಳಲ್ಲಿರುವ ಪ್ರವಚನಗಳನ್ನು ಕೇಳಿ ನಂತರ ನೀವು ಗಮನಿಸುವ ಎಲ್ಲಾ ಸಂದೇಹಗಳನ್ನೂ ಪಟ್ಟಿಮಾಡಿ ಪ್ರಕಟಿಸಿ. ಶರ್ಮರು ಅದಕ್ಕೆ ಉತ್ತರಿಸುವರು.ನನ್ನ ಪ್ರತಿಕ್ರಿಯೆ ಉದ್ದವಾಯ್ತು. ಬೇಸರಿಸದಿರಿ.
-ಹರಿಹರಪುರಶ್ರೀಧರ್

Tuesday, October 19, 2010

ವೇದೋಕ್ತ ಜೀವನ ಪಥ: ಭಗವತ್ ಸ್ವರೂಪ - 5

ಋಗ್ವೇದ ಒಂದು ಕಡೆ ಹೇಳುತ್ತಲಿದೆ:


ಯ ಏಕ ಇತ್ ತಮು ಷ್ಟುಹಿ ಕೃಷ್ಟೀನಾಂ ವಿಚರ್ಷಣಿಃ|
ಪತಿರ್ಜಜ್ಞೇ ವೃಷಕ್ರತುಃ||  (ಋಕ್. 6.45.16)


[ಯಃ] ಯಾವ, [ಕೃಷ್ಟೀನಾಮ್] ಪ್ರಜಾಮಾತ್ರರ, [ವಿಚರ್ಷಣಿಃ] ನಿರೀಕ್ಷಕನಾಗಿ, [ಏಕ ಇತ್] ಒಬ್ಬನೇ ಇದ್ದಾನೋ, [ತಂ ಉ ಸ್ತುಹಿ] ಅವನನ್ನು ಮಾತ್ರ ಸ್ತುತಿಸು. [ವೃಷಕ್ರತುಃ] ಪ್ರಬಲ ಜ್ಞಾತಿಯು, ಅದ್ಭುತ ಕರ್ತೃವೂ, [ಪತಿ] ಎಲ್ಲರ ಸ್ವಾಮಿಯೂ, ಪಾಲಕನೂ ಆಗಿ [ಜಜ್ಞೇ] ಅವನು ಪ್ರಸಿದ್ಧನಾಗಿದ್ದಾನೆ.


ಇಂತಹ ಸ್ಫುಟವಾದ ಪ್ರಮಾಣಗಳಿದ್ದರೂ ಕೂಡ, ಅನೇಕ ಪಾಶ್ಚಾತ್ಯ ವಿದ್ವಾಂಸರೂ, "ಗೌರಾಂಗ ಪ್ರಭುಗಳು ಹೇಳಿರುವುದೇ ಸತ್ಯ" ಎಂದು ನಂಬುವ ಕೆಲವು ಭಾರತೀಯ ವಿದ್ವಾಂಸರೂ ಸಹ "ವೇದಗಳಲ್ಲಿ ಅನೇಕೇಶ್ವರವಾದವಿದೆ, ಆರ್ಯರು ಇಂದ್ರ, ಅಗ್ನಿ, ವರುಣ ಮೊದಲಾದ ಅದೆಷ್ಟೋ ದೇವರನ್ನು ಪೂಜಿಸುತ್ತಿದ್ದರು. 'ದೇವರೊಬ್ಬನೇ' ಎಂಬ ಸಿದ್ಧಾಂತ ಇತ್ತೀಚಿನದು. ಅದು ವೈದಿಕ ಋಷಿಮುನಿಗಳಿಗೆ ಗೊತ್ತಿರಲಿಲ್ಲ" ಎಂದು ವಾದಿಸುತ್ತಾರೆ. ವೇದಗಳಲ್ಲಿ ಒಬ್ಬನೇ ಭಗವಂತನನ್ನು ನಾನಾ ಹೆಸರುಗಳಿಂದ ಸಂಬೋಧಿಸಿರುವುದನ್ನು ಕಂಡು ಅವರು ಮುಗ್ಗರಿಸಿದ್ದಾರೆ. ವೇದಗಳಲ್ಲಿ ಅನೇಕ ದೇವತಾವಾದವಿದೆ ಎಂಬುದನ್ನಂತೂ ಯಾರೂ ತಿರಸ್ಕರಿಸಲಾರರು. ಪದಾರ್ಥ ಜಡವಾಗಲಿ, ಚೇತನವಾಗಲಿ, ಯಾವುದಾದರೊಂದು ದಿವ್ಯಶಕ್ತಿ ಅದರಲ್ಲಿದ್ದರೆ, ವೇದಗಳು ಅದನ್ನು 'ದೇವತೆ' ಅಥವಾ 'ದೇವ' ಎಂದು ನಿರ್ದೇಶಿಸುತ್ತವೆ.
                                                                                                                              ..ಮುಂದುವರೆಯುವುದು.

ವೇದಪಾಠ ಪರಿಚಯ



* ಸತ್ಯ-ಪ್ರಿಯ-ಹಿತ
ಒಂದು ವಿಚಾರವನ್ನು ನಂಬಿ ಜೀವನದಲ್ಲಿ ಅಳವಡಿಸಿಕೊಳ್ಳುವಾಗ ಹಾಗೂ ಬೇರೆಯವರಿಗೆ ತಿಳಿಸುವಾಗ ಮೂರು ಅಂಶಗಳನ್ನು ಎಚ್ಚರಿಕೆಯಿಂದ ಗಮನಿಸಬೇಕು.ಅವು ಯಾವುವೆಂದರೆ ಈ ವಿಚಾರ ಸತ್ಯವಾಗಿದೆಯೇ? ಇದು ಪ್ರಿಯವಾಗಿದೆಯೇ? ಬೇರೆಯವರಿಗೆ ಹಿತವಾಗಿದೆಯೇ? ನಾವು ನಿತ್ಯ ಜೀವನದಲ್ಲಿ ನಮ್ಮ ಮಾತುಗಳನ್ನು ಗಮನಿಸಿದಾಗ ನಾವಾಡುವ ಬಹಳಷ್ಟು ಮಾತುಗಳು ಸತ್ಯ-ಪ್ರಿಯ ಮತ್ತು ಹಿತಕ್ಕೆ ದೂರವಾಗಿಯೇ ಇರುತ್ತವೆ.ಹಾಗಾಗಿ ಮಾತುಗಳು ಯಾವ ಪ್ರಭಾವವನ್ನು ಜೀವನದಲ್ಲಿ ಮಾಡಬೇಕಿದೆ, ಅದರಲ್ಲಿ ಅದು ಸೋತಿದೆ.ಆದ್ದರಿಂದ ಜೀವನದಲ್ಲಿ "ಅಯ್ಯೋ ಜೀವನ ಮಾಡಬೇಕಾಗಿದೆಯಲ್ಲಾ!" ಎನಿಸಿದೆ.ಆದರೆ ಜೀವನವು ಹೀಗೆ ಇರಬೇಕಾಗಿಲ್ಲ.ನಮ್ಮ ಜೀವನವನ್ನು ನಗು ನಗುತ್ತಾ ನಡೆಸುತ್ತಾ ಸುಖ ಸಂತೋಷಗಳನ್ನು ಅನುಭವಿಸುತ್ತಾ, ನಾವೂ ಚೆನ್ನಾಗಿದ್ದುಕೊಂಡು ಬೇರೆಯವರನ್ನೂ ಚೆನ್ನಾಗಿ ನೋಡಿ ಕೊಂಡು ಬದುಕಲು ಸಾಧ್ಯವಿದೆ.ಅದಕ್ಕೆ ಬೇಕಾಗುವ ಸಕಲ ಮಾರ್ಗದರ್ಶನಗಳು ನಮಗೆ ಸಿದ್ಧವಾಗಿ ವೇದದಲ್ಲಿ ಲಭ್ಯವಿದೆ. ಅದನ್ನು ಉಪಯೋಗಿಸಿಕೊಂಡು ಬದುಕಿದರೆ ಸುಖ-ಸಮೃದ್ಧ-ಸಮಾಧಾನಕರ ಜೀವನವನ್ನು ನಡೆಸಲು ಸಾಧ್ಯ.
* ವೇದದ ಮುಖ್ಯ ಉದ್ಧೇಶ
ನಾವು ನಮ್ಮ ಲೌಕಿಕ ಜೀವನವನ್ನು ಹೇಗೆ ಉತ್ತಮವಾಗಿ ನಡೆಸುತ್ತಾ ಅಂತಿಮವಾಗಿ ಜೀವನದ ಪರಮಗುರಿಯಾದ ಅಧ್ಯಾತ್ಮಿಕ ಸಾಧನೆಯನ್ನು ಹೇಗೆ ಮಾಡಬೇಕೆಂಬುದನ್ನು ತಿಳಿಸಿಸುವುದೇ ವೇದಗಳ ಉದ್ಧೇಶವಾಗಿದೆ.
* ಎರಡು ವಿಪರೀತ ವಾದಗಳು
ಭೋಗವಾದ:
ಕೆಲವರು ಹೇಳುತ್ತಾರೆ. ಜೀವನ ಇರುವುದೇ ಅಲ್ಪ. ಅದನ್ನು ಚೆನಾಗಿ ಅನುಭೋಗಿಸು.[ಲೈಫ್ ಈಸ್ ಶಾರ್ಟ್, ಮೇಕ್ ಇಟ್ ಸ್ವೀಟ್] ನಾವು ಪ್ರಪಂಚಕ್ಕೆ ಹೇಗೆ ಬಂದೆವೋ ತಿಳಿಯದು, ೫೦-೬೦ ವರ್ಷಗಳು ಬದುಕಿರುತ್ತೇವೋ ಇಲ್ಲವೋ ತಿಳಿಯದು, ಅದನ್ನು ಚೆನ್ನಾಗಿ ಅನುಭವಿಸಿಬಿಡಿ.
ಕುಡಿದು, ತಿಂದು, ಬೇಕಾದ್ದನ್ನು ಅನುಭೋಗಿಸುವ ಈ ವಾದಕ್ಕೆ "ಭೋಗವಾದ" ಎನ್ನುತ್ತೇವೆ.ಇದು ಒಂದು ವಿಪರೀತವಾದ.
ವೈರಾಗ್ಯವಾದ:
ಇನ್ನೊಂದು ಗುಂಪಿನ ವಾದವಾದವಾದರೋ ಈ ಭೌತಿಕ ಜೀವನವನ್ನು ಪೂರ್ಣ ತಿರಸ್ಕರಿಸಿ ವೈರಾಗ್ಯದ ವಿಚಾರವನ್ನು ಹೇಳುತ್ತದೆ.ವೈರಾಗ್ಯದ ವಿಚಾರವನ್ನು ಹೇಳುವಾಗ ನಮ್ಮ ಜೀವನವನ್ನು ಸಂಪೂರ್ಣ ತಿರಸ್ಕರಿಸುವ ವಾದ ಇವರದು.ಆದರೆ ಯಾವ ವ್ಯಕ್ತಿಯೂ ವೈರಾಗ್ಯದ ವಿಚಾರವನ್ನು ಹೇಳುವಾಗಲೂ ಅವನ ಹಸಿವು-ಬಾಯಾರಿಕೆಗಳನ್ನು ಬಿಟ್ಟು ಕೇವಲ ವೈರಾಗ್ಯ ಹೇಳಲು ಸಾಧ್ಯವಿಲ್ಲ. ಈ ಭೌತಿಕ ಜೀವನವನ್ನು ಪೂರ್ಣ ತಿರಸ್ಕರಿಸಿ ವೈರಾಗ್ಯದ ವಿಚಾರವನ್ನು ಹೇಳುವ ಈ ವಾದವು ಮತ್ತೊಂದು ವಿಪರೀತ ವಷ್ಟೆ.
ಸಮತ್ವ:
ಇವೆರಡೂ ವಾದಗಳಿಂದ ಪರಿಪೂರ್ಣ ಜೀವನ ಸಾಧ್ಯವಿಲ್ಲ.ಆದರೆ ಇವೆರಡರ ಮಧ್ಯೆ , ಎರಡನ್ನೂ ಹೊಂದಿಸುವ ವಿಚಾರ ಒಂದಿದೆ. ಅದುವೇ "ಸಮತ್ವ" ಅದನ್ನು ವೇದವು ಹೇಳುತ್ತದೆ. ಅದೇನು? ಮಾನವನು ಅನುಭವಿಸುತ್ತಿರುವ ಈ ಲೌಕಿಕ ಜೀವನವನ್ನು ನಡೆಸುತ್ತಲೇ ಅಂತಿಮವಾಗಿ ಅಧ್ಯಾತ್ಮದತ್ತ ಸಾಗುವ ಜೀವನ ಕ್ರಮ.ಹೆಂಡತಿ ಮಕ್ಕಳೊಡನೆ ಸುಖವಾಗಿ ಬಾಳುತ್ತಾ, ಅಷ್ಟರಲ್ಲೇ ಮುಳುಗದೆ ಈ ಜೀವನದಾಚೆಗೂ ಏನೋ ಒಂದು ಅದ್ಭುತ ವಿಚಾರವಿದೆ ಎಂಬ ಅರಿವಿನೊಂದಿಗೆ ಜೀವನವನ್ನು ನಡೆಸುವ ಕ್ರಮ.ಅಧ್ಯಾತ್ಮ ಸಾಧನೆ ಮಾಡುವವನಿಗೂ ಹಸಿವು ಬಾಯಾರಿಕೆಗಳು ಸಹಜ. ಅದನ್ನು ತಿರಸ್ಕರಿಸದೆ ಈ ಲೌಕಿಕ ಬದುಕಿಗಾಗಿ ಐಶ್ವರ್ಯವನ್ನು ಸಂಪಾದಿಸುತ್ತಾ, ಆದರೆ ಬದುಕಿಗೆ ಎಷ್ಟು ಬೇಕೋ ಅಷ್ಟನ್ನು ಸಂಪಾದಿಸುವ ಮಾನಸಿಕತೆಯೊಂದಿಗೆ ಬದುಕುವುದನ್ನು ವೇದವು ಕಲಿಸುತ್ತದೆ. ದೇಹವನ್ನು ಬಿಡುವಾಗ ಎಲ್ಲವನ್ನೂ ಬಿಟ್ಟುತಾನೇ ಹೋಗಬೇಕು. ಈ ಅರಿವಿನೊಂದಿಗೆ ಬದುಕುವುದನ್ನು ವೇದವು ಕಲಿಸುತ್ತದೆ.ಹೀಗೆ ಬದುಕುವಾಗ ವಾಮಮಾರ್ಗಗಳಿಂದ ದುಡಿದು ಬೇಕಾದ್ದನ್ನು ಪಡೆಯುವ ವಿಚಾರವು ಹತ್ತಿರ ಸುಳಿಯುವುದಿಲ್ಲ. ಅಂತಿಮವಾಗಿ ಆನಂದವನ್ನು ಪಡೆಯುವ ಮಾರ್ಗವನ್ನು ವೇದವು ತಿಳಿಸಿಕೊಡುತ್ತದೆ.
*ಅಧ್ಯಾತ್ಮ ಸಾಧನೆಗೆ ಮನುಷ್ಯಜನ್ಮ ಮಾತ್ರ ಸಾಧ್ಯ:
ಮಾನವ ಜನ್ಮ ದೊಡ್ದದು, ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪ ಗಳಿರಾ! ದಾಸರ ವಾಣಿ ಎಲ್ಲರಿಗೂ ಚಿರಪರಿಚಿತ.ಅಧ್ಯಾತ್ಮ ಸಾಧನೆಗೆ ಮನುಷ್ಯ ಜನ್ಮದಿಂದ ಮಾತ್ರವೇ ಸಾಧ್ಯ.ಮನುಷ್ಯೇತರವಾದ ಪಶು-ಪಕ್ಷಿ-ಕ್ರಿಮಿ-ಕೀಟಗಳ ಶರೀರ, ಇಂದ್ರಿಯ ಮನಸ್ಸುಗಳಿಗೆ ಅಧ್ಯಾತ್ಮ ಸಾಧನೆಯ ಈ ಸಾಮರ್ಥ್ಯ ಇರುವುದಿಲ್ಲ.ಅವುಗಳ ಹತ್ತಿರ ಇರುವುದು ಸಾಮಾನ್ಯ ಕ್ಯಾಲ್ಕುಲೇಟರ್. ಆದ್ದರಿಂದ ಅವುಗಳು ತಿಂದು-ಉಂಡು ಮರಿಹಾಕಿದರೆ ಅವುಗಳ ಜೀವನ ಮುಗಿದಂತೆ.ಮನುಷ್ಯನ ಶರೀರ, ಇಂದ್ರಿಯ ಮನಸ್ಸುಗಳು  ಸೈಂಟಿಫಿಕ್ ಕ್ಯಾಲ್ಕುಲೇಟರ್ ನಂತೆ. ಆದರೆ ಅದರ ಉಪಯೋಗ ಮಾಡದೆ ಭೋಗವಾದಿಗಳು ಸಾಮಾನ್ಯ ಕ್ಯಾಲ್ಕುಲೇಟರ್ ನಲ್ಲಿ ಮಾಡುವಂತೆ  ಕೂಡು, ಕಳೆ, ಗುಣಿಸು, ಭಾಗಿಸು ಕೆಲಸವನ್ನು ಈ ಸೈಂಟಿಫಿಕ್ ಕ್ಯಾಲ್ಕುಲೇಟರ್ ನಲ್ಲಿ ಮಾಡುತ್ತಿರುವರಲ್ಲಾ!ಇಂತಹ ಸಾಮಾನ್ಯ ಕೆಲಸಕ್ಕೆ  ಸೈಂಟಿಫಿಕ್ ಕ್ಯಾಲ್ಕುಲೇಟರ್ ಅಗತ್ಯವಿತ್ತೇ?  ಕೇವಲ ಕೂಡು, ಕಳೆ, ಗುಣಿಸು, ಭಾಗಿಸು ಕೆಲಸವನ್ನು  ಸಾಮಾನ್ಯ ಕ್ಯಾಲ್ಕುಲೇಟರ್ ನಲ್ಲೂ ಮಾಡಬಹುದಲ್ಲವೇ? ಹಾಗೆ ಮನುಷ್ಯ ಶರೀರವು ದೊರೆತಿರುವಾಗ ಅದರ ಉಪಯೋಗ ಪಡೆದು ಎಷ್ಟು ಉತ್ತಮ ಕೆಲಸವನ್ನು ಮಾಡಬಹುದೋ ಅದನ್ನು ಮಾಡಬೇಕು.ಹಾಗಾಗದೆ ಪ್ರಾಣಿಯಂತೆ  ತಿಂದು -ಉಂಡು ಮರಿಹಾಕಿ ಬದುಕಿಗೆ ವಿದಾಯ ಹೇಳಿದರೆ , ಪ್ರಾಣಿಗಳಿಗೂ ಮನುಷ್ಯನಿಗೂ ಯಾವ ವ್ಯತ್ಯಾಸ ಇರುವುದಿಲ್ಲ.ಹಾಗಾದರೆ ಕೂಡು-ಕಳೆಯುವ ಸಾಮಾನ್ಯ ಕೆಲಸ ಬೇಡವೇ? ಬೇಕು. ಮನುಷ್ಯನ ಶರೀರ, ಮನಸ್ಸು.ಇಂದ್ರಿಯಗಳ ಆರೋಗ್ಯಕ್ಕಾಗಿ ಎಲ್ಲವೂ ಬೇಕು,  ಆದರೆ ಅಷ್ಟಕ್ಕೇ ಜೀವನ ಮುಗಿಯ ಬಾರದು.ಅದನ್ನು ಆಧಾರವಾಗಿಟ್ಟುಕೊಂಡು ಅದರ ಮುಂದಿನ ಆಧ್ಯಾತ್ಮ ಸಾಧನೆ ಮಾಡಬೇಕು. ಇದು  ಸಮತೋಲನದ ಬಿಂಧು.ಇದುವೇ ಸಮತ್ವ. ಇದನ್ನೇ ಕೃಷ್ಣನು ಯೋಗವೆಂದು ಹೇಳಿದ್ದಾನೆ." ಸಮತ್ವಂ ಯೋಗ ಉಚ್ಛತೇ" ಎಂದಿದ್ದಾನೆ.ಈ ಸಮತ್ವವೇ ಯೋಗ. ಈ ಸಮತ್ವವನ್ನು ಯಾರ್ಯಾರು ಜೀವನದಲ್ಲಿ ಗುರುತಿಸಿಕೊಳ್ಳುತ್ತಾರೆ, ಅವರು ಜೀವನದ ಸಾರ್ಥಕತೆಯನ್ನು ಪಡೆಯುತ್ತಾರೆ.ಹಿಂದಿನ ಕಾಲದ ನಮ್ಮ ಋಷಿಮುನಿಗಳಲ್ಲಿ ಬಹಳಷ್ಟು  ಜನರು ಗೃಹಸ್ಥರೇ ಆಗಿದ್ದರು.ವೈರಾಗ್ಯದ ಹೆಸರಿನಲ್ಲಿ ಈ ಲೌಕಿಕಜೀವನವನ್ನು ಅವರು ನಿರಾಕರಿಸಿರಲಿಲ್ಲ.ಲೌಕಿಕ ಲೀವನದಲ್ಲಿದ್ದು ಕೊಂಡೇ ಇಲ್ಲಿನ ಕರ್ತವ್ಯಗಳನ್ನು ನಿರ್ವಹಿಸುತ್ತಲೇ ಆಧ್ಯಾತ್ಮಿಕ ಸಾಧನೆಯನ್ನು ಮಾಡಿದರು.
ಇದೇ ಸರಿಯಾದ ಮಾರ್ಗ. ಇದುವೇ ಸಮತ್ವ.ಇದೇ ಯೋಗ.ಈ ಸಮತ್ವವನ್ನು  ಅದ್ಭುತವಾಗಿ ವೇದಗಳಲ್ಲಿ ತಿಳಿಸಿದೆ. ಇದು  ನಮಗೆ ಅರ್ಥವಾಗದೆ ಸಹಜವಾಗಿ ಕೇಳುತ್ತಿರುವ ಮಂತ್ರಗಳಷ್ಟೇ ವೇದವೆಂಬುದು ನಮ್ಮ ಕಲ್ಪನೆ. ಆದರೆ ಅದು ತಪ್ಪು ಕಲ್ಪನೆ. ಎಲ್ಲಾ ವೇದಮಂತ್ರಗಳಲ್ಲೂ ನಮ್ಮ ಉತ್ತಮ ಬದುಕಿಗೆ ಬೇಕಾಗುವ ಜ್ಞಾನ ಭಂಡಾರವೇ  ಅಡಗಿದೆ.ನಾವು ಈ ಜ್ಞಾನ ಭಂಡಾರವನ್ನು ಅರ್ಥಮಾಡಿಕೊಂಡು ಜೀವನಕ್ಕೆ ಅಳವಡಿಸಿಕೊಂಡಿದ್ದೇ ಆದರೆ ನಾವೂ ಸುಖ -ನೆಮ್ಮದಿಯನ್ನು ಜೀವನದಲ್ಲಿ ಪಡೆಯಬಹುದು, ಜಗತ್ತಿಗೂ ನೆಮ್ಮದಿಯನ್ನು ಕೊಡಬಹುದು. ಮನುಷ್ಯ ಜೀವನದ ಲೌಕಿಕ ಮತ್ತು ಆಧ್ಯಾತ್ಮಿಕ ಸಾಧನೆಯನ್ನು ಬಹುಶ:  ಇನ್ಯಾವುದರಿಂದಲೂ ಪಡೆಯಲು ಸಾಧ್ಯವಾಗಲಾರದು. ಹಿಂದಿನ ತಲೆಮಾರಿಗೂ ಇಂದಿನ-ಮುಂದಿನ ತಲೆಮಾರುಗಳ ನಡುವೆ ದೊಡ್ದ  ಸಮಸ್ಯೆಯನ್ನು ಕಾಣಬಹುದಾಗಿದೆ. ಹಿಂದಿನ ತಲೆಮಾರಿನವರು ಅಧ್ಯಾತ್ಮಿಕ ಸಾಧನೆ ಮಾಡಬೇಕೆನ್ನುತ್ತಾರೆ. ಆದರೆ ಯಾಕಾಗಿ ಮಾಡಬೇಕೆಂದು ಇಂದಿನ ತಲೆಮಾರಿನವರು ಕೇಳಿದರೆ ಅವರಲ್ಲಿ ಉತ್ತರವಿಲ್ಲ. ಇಂದಿನ-ಮುಂದಿನ ತಲೆಮಾರಿನವರ ವಾದವಾದರೋ ಭೋಗ ವಾದ. ಬದುಕಿರುವಷ್ಟು ದಿನ ತಿಂದುಂಡು ಮೆರೆದು ಬಿಡುವ ವಾದ.ಈ ತಲೆಮಾರಿನವರ ಪ್ರಶ್ನೆಗಳಿಗೆ ಹಿಂದಿನ ತಲೆಮಾರಿನವರು ಉತ್ತರಿಸಲು ಅಸಮರ್ಥರಾಗಿರುವುದರಿಂದ ಎರಡೂ ತಲೆಮಾರಿನ ಮಧ್ಯೆ ಗೊಂದಲವು ನಿರ್ಮಾಣವಾಗಿದೆ. ಆದರೆ ಈ ಎರಡೂ ತಲೆಮಾರಿನ ಜನರನ್ನು ಬೆಸೆಯುವ ಸಮತ್ವದ ಮಾರ್ಗಬೇಕೆಂದರೆ ಅದು ವೇದದಿಂದ  ಮಾತ್ರವೇ ಸಾಧ್ಯ.ಹಿಂದಿನ ತಲೆಮಾರಿನವರು  ಗೊಡ್ಡು ವಿಚಾರಗಳನ್ನು ಹೇಳುತ್ತಿದ್ದರೆ ವೇದದ ಜ್ಞಾನವು ಅದನ್ನು ನಿವಾರಣೆ ಮಾಡಬಲ್ಲದು.ಇಂದಿನ-ಮುಂದಿನ ಪೀಳಿಗೆಯವರ ಸಂದೇಹಗಳಿಗೆ ವೈಜ್ಞಾನಿಕವಾಗಿ ಪರಿಹಾರವನ್ನು ವೇದವು ನೀಡುವುದರಿಂದ ಅವರ ಜೀವನವನ್ನು ಸುಧಾರಿಸಿಕೊಳ್ಳಲು ಸಾಧ್ಯವಿದೆ. ಅಂದರೆ ಎರಡೂ ತಲೆಮಾರಿನವರಿಗೂ ವೇದದಲ್ಲಿ ಮಾರ್ಗದರ್ಶನವಿದೆ. ಇದನ್ನು ಇದೀಗಲೇ ಒಪ್ಪಬೇಕಾಗಿಲ್ಲ. ಆದರೆ ಮುಂದೆ ನಾಲ್ಕಾರು ಮಂತ್ರಗಳ ಅರ್ಥವನ್ನು ತಿಳಿದಮೇಲೆ ಅದು ಸ್ವೀಕಾರ್ಹವಾದರೆ ಆಗ ಒಪ್ಪಬಹುದು.ವೇದವೆನ್ನುವುದು ಲೌಕಿಕ ಮತ್ತು ಆಧ್ಯಾತ್ಮಿಕ ಬದುಕನ್ನು ಬೆಸುಗೆಗೊಳಿಸುವ ಜೀವನ ವಿಜ್ಞಾನವೆನ್ನುವುದನ್ನು  ವೇದದ ನಾಲ್ಕಾರು ಮಂತ್ರಗಳ ಅರ್ಥವನ್ನು ಸರಿಯಾಗಿ ತಿಳಿದುಕೊಂಡಾಗ ಮನದಟ್ಟು ಮಾಡಿಕೊಳ್ಳಬಹುದು. ಹೇಳಿಕೊಡುವ ಏಕೈಕ ವಿಜ್ಞಾನವೆಂದರೆ ಅದು ವೇದಗಳು.
ಲೌಕಿಕ ಮತ್ತು ಆಧ್ಯಾತ್ಮಿಕ ಸಾಧನೆಗೆ ವೇದವೇ ಆಗಬೇಕೇ? 
ಅನೇಕರ  ಪ್ರಶ್ನೆ ಹೀಗೂ ಇರಬಹುದು. ಅನೇಕ ಮಹಾಮಹಿಮರುಗಳು ಬರೆದಿರುವ ಧರ್ಮ ಗ್ರಂಥಗಳ ಭಂಡಾರವೇ ಇರುವಾಗ ವೇದವೇ ಏಕಾಗಬೇಕು? ಈ ವಿಚಾರವನ್ನು ಸ್ವಲ್ಪ ಸೂಕ್ಷ್ಮವಾಗಿ ಗಮನಿಸುವಾಗ ಮೊಟ್ಟಮೊದಲ ಅಂಶವೆಂದರೆ  " ವೇದವು ಇಡೀ ಮನುಕುಲದ ಉನ್ನತಿಗಾಗಿ ಇದೆ.ವೇದವು ಯಾವುದೇ ಮತ-ಪಂಥಗಳಿಗೆ ಸೀಮಿತವಾಗಿಲ್ಲ. ಯಾವುದೇ ಮತ-ಪಂಥಗಳ ಗ್ರಂಥದ ವಿಚಾರವನ್ನು ಗಮನಿಸಿದಾಗ ನಮಗೆ ತಿಳಿದುಬರುವ ಅಂಶವೆಂದರೆ ಯಾರು ಈ ಮತವನ್ನು ನಂಬುತ್ತಾರೋ, ಯಾರು ಈ ಮಾರ್ಗವನ್ನು ನಂಬುತ್ತಾರೋ,ಯಾರು ಈ ಗ್ರಂಥವನ್ನು ನಂಬುತ್ತಾರೋ ಅವರಿಗೆ ಅದು ಸೀಮಿತಗೊಳ್ಳುತ್ತದೆ.ಜಗತ್ತಿನಲ್ಲಿರುವ ಯಾವುದೇ ಮತ-ಸಂಪ್ರದಾಯಗಳೂ ಸೀಮಿತವೇ ಆಗಿವೆ.ಯಾವ ಕಟ್ಟು ಪಾಡುಗಳಿಲ್ಲದೆ, ಜಾತಿ-ಮತ-ಪಂಥ,ಲಿಂಗ ಭೇದವಿಲ್ಲದೆ, ಸಕಲ ಮಾನವಕುಲದ ಹಿತಕ್ಕಾಗಿ ಒಂದು ಗ್ರಂಥವಿದೆಯೆಂದಾದರೆ ಅದು ವೇದ ಮಾತ್ರವೇ ಆಗಿದೆ.ಇಷ್ಟು ವಿಶಾಲ ವ್ಯಾಪ್ತಿಯ ಜ್ಞಾನ ಭಂಡಾರವು ವೇದದ ಹೊರತಾಗಿ ಮತ್ಯಾವುದೂ ಜಗತ್ತಿನಲ್ಲಿಲ್ಲ.ಆದರೆ ದುರಾದೃಷ್ಟವೆಂದರೆ ವೇದದ ಬಗ್ಗೆ ಮಾತನಾಡುವ ಅನೇಕರು ಈ ಬಗ್ಗೆ ಸ್ಪಷ್ಟವಾಗಿ ತಿಳಿಸುತ್ತಿಲ್ಲ.ವೇದವು ಯಾವುದೋ ವರ್ಗಕ್ಕೆ ಸೀಮಿತವೆಂಬ ಕಟ್ಟುಪಾಡು ವಿಧಿಸಿರುವುದು ನಮ್ಮ ಸಮಾಜದ ದು:ಸ್ಥಿತಿಗೆ ಕಾರಣವಾಗಿದೆ.ಆದರೆ ಈಗ ನಾವು ವೇದದ ಕೆಲವು ಮಂತ್ರಗಳ ಅರ್ಥವನ್ನು ನೇರವಾಗಿ ತಿಳಿಯುವ ಪ್ರಯತ್ನವನ್ನು ಮಾಡೋಣ. ಆಗ ನಮಗೆ ವೇದದ ಹಿರಿಮೆ ಅರ್ಥವಾಗುತ್ತದೆ.ಆಗಲೂ ಅದು ನಮಗೆ ಒಪ್ಪಿಗೆಯಾಗದಿದ್ದಲ್ಲಿ ಅದನ್ನು ಬಿಡುವ ಅಧಿಕಾರ ನಮಗೆ ಇದ್ದೇ ಇದೆ.ಇನ್ನು ಮುಂದಿನ ನಾಲ್ಕಾರು ಮಂತ್ರಗಳ ಅರ್ಥ ವಿವರಣೆಯನ್ನು ತಿಳಿಯುವಾಗ ಬಹಳ ಎಚ್ಛರಿಕೆಯಿಂದಿದ್ದು ಗಮನಿಸಿದಾಗ ವೇದದ ಗಟ್ಟಿತನ ನಿಚ್ಛಳವಾಗುತ್ತದೆ. ಆದರೆ ವೇದವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಪೂರ್ವಾಗ್ರಹವಿಲ್ಲದ  ಮುಕ್ತ ಮನಸ್ಸು ಇರಬೇಕು.ನಾವು ಇದುವರವಿಗೆ ಬೆಳೆದು ಬಂದಿರುವ ಪರಿಸರದಲ್ಲಿ ಸ್ವಲ್ಪ ಗೊಂದಲವಾಗಲೂ ಬಹುದು. ಆದರೆ ಈ ನಾಲ್ಕಾರು ಮಂತ್ರಗಳನ್ನು ಅರ್ಥಮಾಡಿಕೊಳ್ಳುವ ವರಗೆ ನಮ್ಮ ತಲೆಯಲ್ಲಿ ತುಂಬಿರಬಹುದಾದ ಯಾವುದೇ ವಿಚಾರವನ್ನೂ ಸ್ವಲ್ಪ ಕಾಲ ಬದಿಗಿರಿಸಿ ಮುಕ್ತ ಮನಸ್ಸಿನಿಂದ  ವೇದ ಮಂತ್ರಗಳ ಅರ್ಥವನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡಿದ್ದೇ ಆದರೆ ನಮ್ಮಲ್ಲಿರಬಹುದಾದ ಪೂರ್ವಾಗ್ರಹವು ತೊಂದರೆ ಮಾಡುವುದನ್ನು ತಪ್ಪಿಸಿಕೊಳ್ಳ ಬಹುದಾಗಿದೆ............

Sunday, October 17, 2010

ವೇದಪಾಠ ಪೀಠಿಕೆ

ನಿಮ್ಮೆಲ್ಲರಿಗೂ ವಿಜಯ ದಶಮಿಯ ಶುಭಾಶಯಗಳು.
ನಿಮ್ಮೆಲ್ಲರಿಗೂ ತಿಳಿದಿರುವಂತೆ  ವೇದಸುಧೆಯು ಮನರಂಜನೆಯ ತಾಣವೇನೂ ಅಲ್ಲ. ಆದರೂ ಕಳೆದ ಎಂಟು ತಿಂಗಳುಗಳಲ್ಲಿ ಇಲ್ಲಿ ಇಣುಕಿರುವವರ ಸಂಖ್ಯೆ ಹದಿಮೂರು ಸಹಸ್ರವನ್ನು ದಾಟಿದೆ.  ವೇದಸುಧೆಗೆ ನಿತ್ಯವೂ ಹಲವು ಭಾರಿ ಇಣುಕುವವರ ಸಂಖ್ಯೆಯೂ ಹೆಚ್ಚು ಇರುವುದರಿಂದ  ಇಲ್ಲಿ ಬಂದು ಹೋಗುವವರ ನಿಖರ ಸಂಖ್ಯೆಯು ಗೊತ್ತಾಗುವುದಿಲ್ಲ. ಎಲ್ಲಾ ತಾಣಗಳಲ್ಲೂ ಅಷ್ಟೆ. ಅಂತೂ ವೇದಸುಧೆಯು ಹಲವರಿಗೆ ಪ್ರಿಯವಾಗಿದೆ ಎಂಬ ಸಮಾಧಾನವಂತೂ ಅದನ್ನು ಮುಂದುವರೆಸಲು ಪ್ರೇರಕವಾಗಿದೆ.ಕಳೆದ ನಾಲ್ಕು ದಿನಗಳಿಂದ ವೇದಾಧ್ಯಾಯೀ ಸುಧಾಕರ ಶರ್ಮರು ಹಾಸನದಲ್ಲಿ ನಡೆಸಿದ ಪ್ರವಚನವು ನಮ್ಮೆಲ್ಲರಿಗೂ ವೇದಪಾಠದ ತರಗತಿಯಂತೆಯೇ ಇತ್ತು. ಸುಮಾರು ಅರವತ್ತು ಜನ  ಜಿಜ್ಞಾಸುಗಳು ನಾಲ್ಕೂ ದಿನಗಳು ಸಂಜೆ ೬.೦೦ ರಿಂದ ೮.೩೦ ರವರಗೆ  ನಿಶ್ಶಬ್ಧವಾಗಿ ಶರ್ಮರ ಪಾಠವನ್ನು ಆಲಿಸುತ್ತಿದ ಪರಿಯು  ಕಾರ್ಯಕ್ರಮವನ್ನು ಯೋಜಿಸಿದವರಿಗೆ ಸಾರ್ಥಕವಾಯ್ತೆಂಬ ಭಾವನೆಗೆ ಕಾರಣವಾಯ್ತು.ನಾಲ್ಕೂ ದಿನಗಳ ಪಾಠವನ್ನು ಆಡಿಯೋ/ವೀಡಿಯೋ ರೆಕಾರ್ಡ್ ಮಾಡಲಾಗಿದೆ. ಸುಮಾರು ಎಂಟು ಗಂಟೆಗಳ  ಈ ಪಾಠವನ್ನು ಹಲವು ಕಂತುಗಳಲ್ಲಿ ವೇದಸುಧೆಯಲ್ಲಿ ಪ್ರಕಟಿಸ ಬೇಕೆಂಬ ಉದ್ಧೇಶದಿಂದಲೇ ರೆಕಾರ್ಡ್ ಮಾಡಲಾಗಿದೆ. ಇಲ್ಲಿ ಒಂದು ವಿಚಾರವನ್ನು ಬಹಳ ಗಂಭೀರವಾಗಿ ಗಮನಿಸಬೇಕಾಗುತ್ತದೆ. ವೇದಪಾಠವೆಂದರೆ  ವೇದಮ೦ತ್ರಗಳನ್ನು ಕೇವಲ ಪಠಿಸಲು ಕಲಿಯುವ ಕ್ರಮವೇ?  ಖಂಡಿತವಾಗಲೂ ಶರ್ಮರ ವೇದಪಾಠವು ಹಾಗಿರಲಿಲ್ಲ. ಕೇವಲ ಎರಡು  ಮಂತ್ರಗಳನ್ನು ಅರ್ಥ ಮಾಡಿಸಲು ನಾಲ್ಕು ದಿನಗಳ ಪಾಠವನ್ನು ಮಾಡಿದ್ದಾರೆಂದರೆ ಅದರ ಆಳ -ಅಗಲವು ಅರ್ಥವಾಗಿರಬಹುದು. ಈ ಪಾಠವನ್ನು ಹತ್ತು ಹಲವು ಭಾರಿ ಪುನ:ಸ್ಮರಣೆ ಮಾಡಿಕೊಂಡಾಗ   ಶರ್ಮರು ಮಾಡಿದ ಪಾಠದಲ್ಲಿ ಅಲ್ಪ-ಸ್ವಲ್ಪ ವಾದರೂ ನಮಲ್ಲಿ ಉಳಿದು ನಮ್ಮ ಜೀವನದ  ಸಾರ್ಥಕತೆಗೆ  ನೆರವಾಗಬಲ್ಲದೆಂಬ ಭರವಸೆಯು ಪಾಠವನ್ನು ಕೇಳುವಾಗಲೇ ಮೂಡಿದೆ. ಈ ಎಂಟುಗಂಟೆಯ ಪಾಠವನ್ನು  ೩-೪ ತಿಂಗಳು ಮತ್ತೆ ಮತ್ತೆ ಓದಿ, ಆಡಿಯೋ ಕೇಳಿ ನಂತರ ವೇದಸುಧೆಯಲ್ಲಿ ಪ್ರಕಟಿಸಬೇಕೆಂಬ ಉದ್ಧೇಶವಿತ್ತು. ಆದರೆ ಇಂದು ವಿಜಯ ದಶಮಿ. ಇಂದೇ ಶರ್ಮರು ಮಾಡಿದ ವೇದಪಾಠವು ನಮ್ಮ ವೇದಸುಧೆಯ ಬಳಗಕ್ಕೂ ತಲುಪಲೆಂಬ  ಉದ್ಧೇಶದಿಂದ ಪಾಠದ ಮೊದಲ ಕಂತಿನ ಶುಭಾರಂಭ ಇಂದಿನಿಂದಲೇ ಆಗಿದೆ. ಈಗಾಗಲೇ ವೇದೋಕ್ತ ಜೀವನ ಪಥ ಉಪನ್ಯಾಸ ಮಾಲಿಕೆಯ ಹತ್ತು ಕಂತುಗಳು ಪ್ರಕಟವಾಗಿವೆ. ಪ್ರಕಟಿಸಬೇಕಾದುದು ಇನ್ನೂ ಬಾಕಿ ಇದೆ. ಅಷ್ಟರಲ್ಲಿ   ವೇದವನ್ನು ನೇರವಾಗಿ ಕಲಿಯಲು ಇಂದಿನಿಂದ ಪಾಠದ ಆರಂಭವಾಗಿದೆ. ಇಲ್ಲೊಂದು ಸೂಚನೆಯನ್ನು ಗಮನಿಸುವುದು ಸೂಕ್ತ. ವೇದವಿವರಣೆಯ ಪಾಠದ ಎಲ್ಲಾ ಕಂತುಗಳನ್ನೂ ಹಲವು ಭಾರಿ ಮತ್ತೆ ಮತ್ತೆ ಕೇಳಿದಾಗ  ಅರ್ಥವಾಗುತ್ತಾ ಹೋಗುತ್ತದೆ. ಸಂದೇಹ ಉಂಟಾದರೆ  ಪ್ರತಿಕ್ರಿಯೆ ಕಾಲಮ್ ನಲ್ಲಿ ನಿಮ್ಮ ಸಂದೇಹವನ್ನು ತಿಳಿಸಿ. ಅದಕ್ಕೆ ಶರ್ಮರು ಉತ್ತರಿಸುತ್ತಾರೆ. ಮುಂದೊಮ್ಮೆ  ಪಾಠದ ಬರಹ ರೂಪವನ್ನೂ ಪ್ರಕಟಿಸಲಾಗುವುದು.ಎಂದಿನಂತೆ ಸಹಕಾರವನ್ನು ಕೋರುತ್ತಾ....
-ಹರಿಹರಪುರ ಶ್ರೀಧರ್
ಸಂಪಾದಕ

Saturday, October 16, 2010

ಯೋಚಿಸಲೊ೦ದಿಷ್ಟು... ೧೩

೧. ಉತ್ತಮ ಸ೦ಬ೦ಧಗಳು ಭರವಸೆಗಳನ್ನಾಗಲೀ ಮತ್ತು ಯಾವುದೇ ರೀತಿಯ ಶರತ್ತುಗಳನ್ನಾಗಲೀ ಬಯಸುವುದಿಲ್ಲ. ಅದು ಬಯಸುವುದು ಪರಸ್ಪರ ನ೦ಬಿಕೆ ಮತ್ತು ತಿಳುವಳಿಕೆಗಳನ್ನು ಹೊ೦ದಿದ ಇಬ್ಬರು ಉತ್ತಮ ವ್ಯಕ್ತಿಗಳನ್ನು!

೨. ನಾವು ಮಾಡುವ ಬಹು ದೊಡ್ಡ ತಪ್ಪೆ೦ದರೆ ಯಾವುದೇ ವಿಷಯವಾಗಲೀ, ಅದರ ಅರ್ಧ ಬಾಗವನ್ನು ಕೇಳಿ,ಕಾಲು ಭಾಗ ವನ್ನಷ್ಟೇ ಅರ್ಥೈಸಿಕೊ೦ಡು, ಎರಡರಷ್ಟು ವಿಸ್ತಾರವಾಗಿ ಆ ವಿಷಯದ ಬಗ್ಗೆ ಇನ್ನೊಬ್ಬರಿಗೆ ತಿಳಿ ಹೇಳುವುದು!

೩. ಸದಾ ಸ೦ತಸದಿ೦ದಿದ್ದು,  ನಗುವನ್ನು ಎಲ್ಲರೊ೦ದಿಗೂ ಹ೦ಚಿಕೊಳ್ಳುತ್ತಾ, ಕೋಪ ಮತ್ತು ದು:ಖಗಳನ್ನು   ನಾಶಪಡಿಸುತ್ತಾ, ನಮ್ಮ ಮನಸ್ಸನ್ನು ಸದಾ ಚಲನಶೀಲತೆಯಲ್ಲಿಟ್ಟುಕೊ೦ಡರೆ  ನಮ್ಮ ಜೀವನವೇ ಒ೦ದು ಮೊಬೈಲ್ ರಿ೦ಗ್ ಟೋನ್ ಇದ್ದ೦ತೆ!

೪. ಆಪ್ತ ಮಿತ್ರರ ನಡುವೆ ಮಾತಿಗಿ೦ತಲೂ ಹೆಚ್ಚು ಮೌನವೇ ಪರಸ್ಪರ ಭಾವನೆಗಳನ್ನು ಹೇಳಿಕೊಳ್ಳುತ್ತದೆ!

೫. ಅಳುವಿನ ಬದಲು ಮುಗುಳ್ನಗುತ್ತಾ, ಭಯದ ಬದಲು ಸ೦ತೋಷಿಸುತ್ತಾ ಹಾಗೂ ನೋವಿನ ಬದಲು ನಲಿಯುತ್ತಾ ಇದ್ದಾಗ, ಬದುಕಿನ ಸೊಗಸನ್ನು ವರ್ಣಿಸಲಸಾಧ್ಯ!

೬.   ಪೆನ್ನನ್ನು ಕಳೆದುಕೊ೦ಡರೆ ಹೊಸ ಪೆನ್ನನ್ನು ಖರೀದಿಸಹುದು.ಆದರೆ ಆ ಪೆನ್ನಿನ ಕ್ಯಾಪ್ ಅನ್ನು ಕಳೆದುಕೊ೦ಡರೆ ಅದೇ ಪೆನ್ನಿನ ಮತ್ತೊ೦ದು ಹೊಸ ಕ್ಯಾಪ್ ಅನ್ನು ಖರೀದಿಸಲು ಸಾಧ್ಯವೇ?ಪೆನ್ನಿನ ಕ್ಯಾಪ್ ಎ೦ಬುದು ಸಣ್ಣ ವಸ್ತುವಾಗಿದ್ದರೂ ಅದೆಷ್ಟು ಮುಖ್ಯವೋ, ಹಾಗೆಯೇ ನಮ್ಮ ಜೀವನದಲ್ಲಿ ಎಷ್ಟೇ ಸಣ್ಣ ಘಟನೆಗಳಾದರೂ ಅವುಗಳನ್ನು ಕ್ಷುಲ್ಲಕವೆಂದು ನಿರ್ಲಕ್ಷಿಸಲಾಗದು.


೭. ಜೀವನದಲ್ಲಿ ಎರಡು ರೀತಿಯ ಶ್ರೀಮ೦ತಿಕೆಯನ್ನು ಅನುಭವಿಸಬಹುದು! ಒ೦ದು ಎಲ್ಲವನ್ನು ಗಳಿಸಿ ಅನುಭವಿಸುವುದಾದರೆ, ಮತ್ತೊ೦ದು ಇದ್ದುದ್ದರಲ್ಲಿಯೇ ತೃಪ್ತಿಯನ್ನು ಅನುಭವಿಸುವುದು!

೮. ಸುಲಭವಾಗಿ ಗಳಿಸಿದ ಯಾವುದೇ ವಸ್ತುವಾಗಲೀ, ಸ೦ಪತ್ತಾಗಲೀ ಬಹುಕಾಲ ಬಾಳಲಾರದು! ಅ೦ತೆಯೇ ಬಹುಕಾಲ ಬಾಳುವ ವಸ್ತುವಾಗಲೀ ಯಾ ಸ೦ಪತ್ತನ್ನಾಗಲೀ ಗಳಿಸುವುದು ಸುಲಭ ಸಾಧ್ಯವಲ್ಲ!

೯. ಜೀವನದಲ್ಲಿ ಎಲ್ಲರನ್ನೂ ನಗಿಸುತ್ತಾ ,ಸ೦ತಸದಿ೦ಡುವವನು ಪ್ರಾಯಶ: ಜೀವನ ಪೂರ್ತಿ ಏಕಾ೦ಗಿಯಾಗಿರುತ್ತಾನೆ!

೧೦. ಕೆಲವೊಮ್ಮೆ ನಗುವೆ೦ಬುದು ಸಮಸ್ಯೆಗೆ ಪರಿಹಾರ ತೋರಿದರೆ, ಮೌನವು ಸಮಸ್ಯೆಯನ್ನೇ ಉಧ್ಬವಿಸಲು ಬಿಡುವುದಿಲ್ಲ!

೧೧. ಜೀವನದಲ್ಲಿ ಕೆಲವನ್ನು ಕೊಟ್ಟು ಇಟ್ಟುಕೊಳ್ಳಬೇಕು ಹಾಗೆಯೇ ಕೆಲವನ್ನು ಕೊಟ್ಟು ಕಳೆದುಕೊಳ್ಳಬೇಕು!

೧೨.ಕೋಪಗೊ೦ಡಾಗಲೂ ಸ೦ಯಮಿಯಾಗಿರುವವನೇ ನಿಜವಾದ ವೀರನೇ ಹೊರತು ಎದುರಾಳಿಯನ್ನು ಹೊಡೆದು ಉರುಳಿಸುವವನಲ್ಲ!

೧೩. “ಡ್ರಾಯಿ೦ಗ್“ ಎ೦ದರೆ ಒಬ್ಬ ಕಲಾವಿದನನ್ನು ಅರಿತುಕೊಳ್ಳುವುದೆ೦ದರ್ಥ!

೧೪.ಕಾವ್ಯರಸದಲ್ಲಿ ಮಿ೦ದ ಮನಸ್ಸೆ೦ಬುದು ಒಣಗಿದ ಮೇಲೂ ಪರಿಮಳವನ್ನು ಬೀರುತ್ತಲೇ ಇರುವ,ಪನ್ನಿರಿನಲ್ಲಿ ಅದ್ದಿದ ವಸ್ತ್ರದ೦ತೆ!

೧೫.ಭ್ರಾತೃತ್ವ ಬೆಳೆಯಲು ಸಾಮೂಹಿಕ ಕರ್ತವ್ಯ ಯಾ ಚಟುವಟಿಕೆಗಳಿಗೆ ಅಗತ್ಯವಾಗಿರುವ ಪರಸ್ಪರ ಅವಲ೦ಬನೆಯ ಅರಿವು ಅತ್ಯಗತ್ಯ!

Friday, October 15, 2010

ಸಂಪಾದಕೀಯ

ವೇದಸುಧೆಯ ಆತ್ಮೀಯ ಅಭಿಮಾನಿಗಳೇ,
ವೇದಾಧ್ಯಾಯೀ ಸುಧಾಕರಶರ್ಮರ "ಎಲ್ಲರಿಗಾಗಿ ವೇದ" ಪ್ರವಚನವು ವೇದಸುಧೆಯ ಆರಂಭಕ್ಕೆ ಕಾರಣವಾಯ್ತೆಂಬ ವಿಚಾರವನ್ನು ಹಲವು ಭಾರಿ ತಿಳಿಸಲಾಗಿದೆ. ೨೦೧೦ ಫೆಬ್ರವರಿ ತಿಂಗಳಲ್ಲಿ ವೇದಸುಧೆಯು  ಆರಂಭವಾದವಾದರೂ ಶ್ರೀ ಶರ್ಮರಿಂದ ಲೇಖನಗಳನ್ನು  ಬರೆಸುವುದಕ್ಕಾಗಲೀ ಅವರ ಉಪನ್ಯಾಸಗಳನ್ನು ಕೇಳಿಸುವುದಕ್ಕಾಗಲೀ ಅವರ ಕೆಲಸದ ಒತ್ತಡದಲ್ಲಿ ಶ್ರೀ ಶರ್ಮರು ಬಹಳ ದಿನಗಳು ವೇದಸುಧೆಗೆ ಲಭ್ಯವಿರಲಿಲ್ಲ. ಆ ಸಂದರ್ಭದಲ್ಲಿ ವೇದಸುಧೆಯ ಬಳಗವು ಒಂದಿಷ್ಟು ಲೇಖನಗಳನ್ನು ಪ್ರಕಟಿಸಿದರೂ ಶ್ರೀ ಶರ್ಮರು ಕೊಡಬೇಕಾಗಿದ್ದ ವಿಚಾರಗಳನ್ನು ಕೊಡಲಾಗಲಿಲ್ಲ. ಆದರೆ ಇತ್ತೀಚೆಗೆ ಕಳೆದ ಒಂದು ತಿಂಗಳಿನಿಂದ ಶ್ರೀ ಶರ್ಮರು ನಿರಂತರವಾಗಿ ವೇದಸುಧೆಗೆ ಲಭ್ಯವಿದ್ದಾರೆ. ಸಾಕಷ್ಟು ಆಡಿಯೋ/ ವೀಡಿಯೋ ಕ್ಲಿಪ್ ಗಳನ್ನು ಸಿದ್ಧಪಡಿಸಲಾಗಿದೆ. ಈಗಾಗಲೇ ಪ್ರತಿ ಶುಕ್ರವಾರ ಮತ್ತು ಮಂಗಳವಾರಗಳಂದು ಶ್ರೀ ಶರ್ಮರು ವೇದದ ಬಗ್ಗೆ ತಿಳಿಸಿರುವ ವಿಚಾರಗಳನ್ನು ಪ್ರಕಟಿಸಲಾಗುತ್ತಿದೆ.ಆಡಿಯೋ ಕ್ಲಿಪ್ ಗಳನ್ನು ಪ್ರಕಟಿಸುವುದು ಅಷ್ಟು ಕಷ್ಟವಾಗುತ್ತಿಲ್ಲ. ಆದರೆ ವೀಡಿಯೋ ಕ್ಲಿಪ್ ಗಳನ್ನು ಪ್ರಕಟಿಸುವುದು ಸ್ವಲ್ಪ ಕಷ್ಟವಾಗಿದೆ. ಕಳೆದ ನಾಲ್ಕು ದಿನಗಳಿಂದ ಶ್ರೀ ಶರ್ಮರು ಹಾಸನದ ಶ್ರೀ ಶಂಕರ ಮಠದಲ್ಲಿ ವೇದಪಾಠವನ್ನೇ ಮಾಡುತ್ತಿದ್ದಾರೆಂದರೆ ತಪ್ಪಾಗಲಾರದು.ಪಾಲ್ಗೊಳ್ಳುತ್ತಿರುವ ೫೦-೬೦ ಜನರು ಸತತ ಎರಡು ಗಂಟೆಗಳು ಅವರ ಪ್ರವಚನವನ್ನು ತದೇಕಚಿತ್ತದಿಂದ ಕೇಳುತ್ತಿದ್ದಾರೆ. ಈ ಮಧ್ಯೆ ಶ್ರೀ ಶರ್ಮರಿಗೆ ಜ್ವರದ ಬಾಧೆ ಇದೆ. ಆದರೂ ಎರಡು ಗಂಟೆ ಪಾಠ ಮಾಡುವುದರ ಜೊತೆಗೆ ಉಳಿದ ಸಮಯದಲ್ಲಿ ಜಿಜ್ಞಾಸುಗಳ ಸಂದೇಹಗಳನ್ನು ಪರಿಹರಿಸುತ್ತಿದ್ದಾರೆ. ಅಂತೂ ಹಾಸನದ ಜನತೆಗೆ ಒಂದು ಅಪರೂಪದ ಅವಕಾಶವಂತೂ ಲಭ್ಯವಾಗಿದೆ. ಇದಕ್ಕೆ ಕಾರಣರಾಗಿರುವ ಹಾಸನ ಶಂಕರಮಠದ ಧರ್ಮಾಧಿಕಾರಿಗಳಾದಂತಹ ಶ್ರೀ ಎಂ.ಎಸ್. ಶ್ರೀಕಂಠಯ್ಯನವರಿಗೆ ವೇದಸುಧೆಯು ಆಭಾರಿಯಾಗಿದೆ.ಸತ್ಯದನಡೆ ಅಷ್ಟು ಸುಲಭವಲ್ಲ. ಆಚರಣೆಯ ಹೆಸರಲ್ಲಿ ಅನೇಕ ದೋಷಗಳನ್ನೇ ನಡೆಸಿಕೊಂಡು ಬರುತ್ತಿರುವ ಆಚಾರವಂತರಿಗೆ ಶ್ರೀ ಶಂಕರಮಠದಲ್ಲಿ ಇಂತಹ ಅದ್ಭುತ ಕಾರ್ಯಕ್ರಮ ನಡೆಯುತ್ತಿರುವುದು ಅತ್ಯಾಶ್ಚರ್ಯದ ಸಂಗತಿಯಾಗಿದೆ.ಎಲ್ಲವೂ ಶಂಕರ ನಿಜಚಿಂತನೆಯಂತೆಯೇ ಆಗಿದೆ. ಆದರೆ ಆಚರಣೆಗಳಿಗೂ ವೈದಿಕ ಚಿಂತನೆಗಳಿಗೂ ಅಜಗಜಾಂತರ ವೆತ್ಯಾಸ ಇರುವುದು ಸುಳ್ಳಲ್ಲ. ಆದರೆ ಆಚರಣೆಗಳಲ್ಲಿರುವ ದೋಷವನ್ನು " ಇದು ದೋಷ" ವೆಂದು ಹೇಳುವ ಧೈರ್ಯ ಬಹುಮಂದಿಗಿಲ್ಲ. ಈ ವಿಚಾರದಲ್ಲಿ ಶ್ರೀ ಶರ್ಮರು ವಿಶಿಷ್ಟವಾಗಿ ಕಾಣುತ್ತಾರೆ.  ನಾಲ್ಕು ತಿಂಗಳುಗಳಲ್ಲಿ ಮಾಡಬಹುದಾದ ಪಾಠವನ್ನು ಕಳೆದ ನಾಲ್ಕು ದಿನಗಳಲ್ಲಿ  ಮಾಡಿದ್ದಾರೆ. ವೇದಸುಧೆಯ ಅಭಿಮಾನಿಗಳಿಗೆ ಅವುಗಳನ್ನೆಲ್ಲಾ ನೂರಾರು ಕಂತುಗಳಲ್ಲಿ ಕೊಡಲಾಗುವುದು.ಶ್ರೀ ಶರ್ಮರು ಅರಕಲಗೂಡಿನಲ್ಲಿ ಮಾಡಿದ  ಉಪನ್ಯಾಸದ ಇಂದಿನ ಕಂತನ್ನು ಇಲ್ಲಿ ಪ್ರಕಟಿಸಿರುವೆ. ಎಲ್ಲಾ ಉಪನ್ಯಾಸಗಳು ಹಿಂದಿನ ಕಂತುಗಳಿಗೆ ಸಂಬಂಧವನ್ನು ಹೊಂದಿರುತ್ತವಾದ್ದರಿಂದ ಹಿಂದಿನ ಕಂತುಗಳನ್ನು ಕೇಳದಿದ್ದರೆ ಅವುಗಳನ್ನು ಕೇಳಿ ನಂತರ ಈ ಕಂತನ್ನು ಕೇಳುವುದು ಸೂಕ್ತ.
-ಹರಿಹರಪುರ ಶ್ರೀಧರ್
-----------------------------------------------------------
ಲಲಿತಾಸಹಸ್ರನಾಮ ಮತ್ತು ಸೌಂದರ್ಯ ಲಹರಿಗಳು ಶಂಕರರು ಬರೆದದ್ದೇ?


ವೇದಸುಧೆಬಳಗದ ಸನ್ಮಾನ್ಯ ಸದಸ್ಯರಲ್ಲಿ ಒಂದು ವಿನಂತಿ.

ಸಾಮಾನ್ಯವಾಗಿ ನಾವುಗಳು ಬರೆಯುವ ಬರಹಗಳಿಗೆ ಬೇರೆ ಬೇರೆ ಲೇಬಲ್ ಗಳನ್ನು ಹಾಕುತ್ತಿದ್ದು ಮಾಲಿಕೆಯ ಪಟ್ಟಿಯಲ್ಲಿ ಅವುಗಳು ಸೇರುತ್ತಿರುವುದರಿಂದ ಮಾಲಿಕೆಯ ಪಟ್ಟಿ ಬಲು ದೊಡ್ದದಾಗಿ ಬೆಳೆದು ಓದುಗರನೇಕರು ಲೇಬಲ್ ಗಳ ಸಂಖ್ಯೆ ಕಡಿಮೆಮಾಡಲು ದೂರವಾಣಿ ಮೂಲಕ ವಿನಂತಿಸಿದ್ದರಿಂದ ನಮ್ಮನಮ್ಮ ಹೆಸರಿನ ಒಂದೊಂದು ಲೇಬಲ್ ನಲ್ಲಿ ನಮ್ಮೆಲ್ಲಾ ಬರಹಗಳನ್ನು ಅಳವಡಿಸಲಾಗಿದೆ. ಇನ್ನು ಮುಂದೆ ಹೊಸದಾಗಿ ಲೇಬಲ್ ಕೊಡದೆ ನಮ್ಮ ನಮ್ಮ ಹೆಸರಿನ ಲೇಬಲ್ ಕೊಡುವುದರಿಂದ ನಮ್ಮೆಲ್ಲಾ ಬರಹಗಳನ್ನೂ ಒಂದೆಡೆ ಓದಲು ಓದುಗರಿಗೆ ಸಾಧ್ಯವಾಗುತ್ತದಾದ್ದರಿಂದ ದಯಮಾಡಿ ಸಹಕರಿಸಲು ಕೋರುವೆ.
-ಹರಿಹರಪುರಶ್ರೀಧರ್

Tuesday, October 12, 2010

ಕೋಟ ಶಿವರಾಮ ಕಾರ೦ತ ಸಾಹಿತ್ಯ ಪಸರಿಸುವಲ್ಲಿ ಸಾಹಿತ್ಯಾಸಕ್ತರ ನೆರವು ಕೋರಿ..

ಮಿತ್ರ ಮಹನೀಯರುಗಳೇ,

ಈಗಾಗಲೇ ಹಿ೦ದಿನ ಲೇಖನದಲ್ಲಿ ವಿವರಿಸಿದ೦ತೆ,೧೦-೧೦-೨೦೧೦ ರ೦ದು ದ್ಯುತಿ ಟೆಕ್ನಾಲಜೀಸ್ (ಶ್ರೀಹರ್ಷ ಸಾಲೀಮಠ್)ಹಾಗೂ ಕು೦ಭಾಶಿ ಸ೦ಪತ್ ಕುಮಾರ್ ನೇತೃತ್ವದ ತ೦ಡದ ಶ್ರಮದಿ೦ದ ಹಾಗೂ ಸಾಹಿತ್ಯ ಕಕ್ಕುಲತೆಯಿ೦ದ ಕೋಟ ಶಿವರಾಮ ಕಾರ೦ತರ ಅಧಿಕೃತ ವೆಬ್ ಸೈಟ್ http://www.shivaramkarantha.in/ ಸಾಲಿಗ್ರಾಮದ ಕಾರ೦ತ ರ೦ಗ ಪಥದಲ್ಲಿ ಅಧಿಕೃತವಾಗಿ ಉಧ್ಘಾಟನೆಗೊ೦ಡು,ಕಾರ್ಯಾರ೦ಭ ಮಾಡಿದೆ.ಈ ಹಿ೦ದೆಯೇ ತಿಳಿಸಿದ೦ತೆ,ಕಾರ೦ತರ ಎಲ್ಲಾ ಗ್ರ೦ಥಗಳನ್ನು ಹಾಗೂ ಹಸ್ತಪ್ರತಿಗಳನ್ನು ಆನ್ ಲೈನ್ ಮೂಲಕ ಉಚಿತವಾಗಿ ಕನ್ನಡ ಸಾಹಿತ್ಯ ಪ್ರೇಮಿಗಳೆಲ್ಲರಿಗೂ ನೀಡಬೇಕೆ೦ಬುದು ಸಾಲೀಮಠ್ ತ೦ಡದ ಬಯಕೆ. ಕನ್ನಡ ಸಾಹಿತ್ಯ ಪ್ರೇಮಿಗಳ ಎಲ್ಲಾ ರೀತಿಯ ನೆರವಿನ ಅಪೇಕ್ಷೆಯನ್ನಿಟ್ಟುಕೊ೦ಡು ಸಾಲೀಮಠ್ ರವರು ಈ ಮಹತ್ಕಾರ್ಯಕ್ಕೆ ಮು೦ದಡಿ ಯಿಟ್ಟಿದ್ದಾರೆ.ಶಿವರಾಮ ಕಾರ೦ತರ ಸ೦ಪೂರ್ಣ ಪರಿಚಯ,ಅವರ ಕೃತಿ ಗಳು,ಯಕ್ಷಗಾನ ಮು೦ತಾದ ಎಲ್ಲಾ ಅವರ ಬಗ್ಗೆಗಿನ ಮಾಹಿತಿಗಳನ್ನು ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಲಾಗಿದ್ದು,ಕನ್ನಡ ಸಾಹಿತ್ಯಾಸಕ್ತರು,ಅಭಿಮಾನಿಗಳು,ಕೋಟ ಶಿವರಾಮ ಕಾರ೦ತರ ಅನುಯಾಯಿಗಳು ಈ ಆನ್ ಲೈನ್ ವೆಬ್ ಸೈಟಿನ ಸ೦ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕೆ೦ದು,ಕೋಟ ಶಿವರಾಮ ಕಾರ೦ತ ಟ್ರಸ್ಟ್ ನ ಪದಾಧಿಕಾರಿಗಳು, ದ್ಯುತಿ ಟೆಕ್ನಾಲಜೀಸ್ ನ ಶ್ರೀಹರ್ಷ ಸಾಲೀಮಠರು ಆಶಿಸಿದ್ದಾರೆ.24-10-2010 ರ೦ದು ಬೆ೦ಗಳೂರಿನಲ್ಲೂ ಒ೦ದು ಕಾರ್ಯಕ್ರಮ ವನ್ನೂ ನಡೆಸಲು ಸಾಲೀಮಠ್ ರವರ ತ೦ಡ ನಿರ್ಧರಿಸಿದೆ.

ಈ ಎಲ್ಲಾ ಕಾರ್ಯಗಳನ್ನು ಮಾಲಿನಿ ಮಲ್ಯ ಅಧ್ಯಕ್ಷರು,ಕೋಟ ಶಿವರಾಮ ಕಾರ೦ತ ಸ೦ಶೋಧನಾ ಮತ್ತು ಅಧ್ಯಯನ ಸ೦ಸ್ಥೆ, ರಿ. ಸಾಲಿಗ್ರಾಮ, ಇವರ ಮಾರ್ಗದರ್ಶನದಲ್ಲಿ, ಶ್ರೀ ಮುರಳಿ ಕೃಷ್ಣ, ಪ್ರಾ೦ಶುಪಾಲರು, ಶ್ರೀಮಾತಾ ಕಾಲೇಜು ಕುಡತಿನಿ, ಬಳ್ಳಾರಿ ಇವರ ಅಧ್ಯಕ್ಷತೆ ಹಾಗೂ ಪರಿಕಲ್ಪನೆಯ ಮೇರೆಗೆ,ಸ೦ವಹನಾಕಾರರಾಗಿ ಕು೦ಭಾಶಿ ಸ೦ಪತ್ ಕುಮಾರ್ ಹಾಗೂ ವಿನ್ಯಾಸಕಾರ ಹಾಗೂ ನಿರ್ವಹಣಾಕಾರರಾಗಿ ಶ್ರೀ ದ್ಯುತಿ ಟೆಕ್ನಾಲಜೀಸ್ ನ ಮಾಲೀಕರಾದ ಶ್ರೀಹರ್ಷ ಸಾಲೀಮಠ್ ರವರು ಸದ್ಯೋಭವಿಷ್ಯದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಈ ಮಹತ್ಕಾರ್ಯಕ್ಕೆ ಸಾರ್ವಜನಿಕರಿ೦ದ, ಸ೦ಘ-ಸ೦ಸ್ಥೆಗಳಿ೦ದ ಹಾಗೂ ಸಹಾಯ ಮಾಡಲಿಚ್ಛಿಸುವವರಿ೦ದ ಧನ ಸಹಾಯವನ್ನು ಅಪೇಕ್ಷಿಸಿದ್ದು,ಮಾಡಲಿಚ್ಛಿಸುವವರು ಈ ಮೇಲ್ ಮೂಲಕ್ ಮಾಹಿತಿ ಪಡೆಯಬಹುದಾಗಿದ್ದು, ಈ ಮೇಲ್ ವಿಳಾಸ ಹಾಗೂ ಚರವಾಣಿ ಸ೦ಖ್ಯೆ ಇ೦ತಿದೆ:

ಈ ಮೇಲ್: tesalimath@gmail.com
ಚರವಾಣಿ: ೯೪೮೧೩೬೦೫೦೧

ಶ್ರೀಹರ್ಷ ಸಾಲೀಮಠ್,
ವ್ಯವಸ್ಥಾಪಕ ನಿರ್ದೇಶಕರು,ದ್ಯುತಿ ಟೆಕ್ನಾಲಜೀಸ್,
ನ೦ ೩೦-೩ ನೇ ತಿರುವು,ಮಣಿಕಾ೦ತ ಸ೦ಕೀರ್ಣ,
ಜವರಯ್ಯ ಗಾರ್ಡನ್,ಶ್ರೀ ಗ೦ಗಮ್ಮ ದೇವಸ್ಥಾನದ ಹತ್ತಿರ
ತ್ಯಾಗರಾಜ ನಗರ
ಬೆ೦ಗಳೂರು-೫೬೦೦೨೮

ಹೆಸರಿಗೂ ಹಾಗೂ ವಿಳಾಸಕ್ಕೂ ಕೊರಿಯರ್ ಮೂಲಕವಾಗಲೀ ಯಾ ಅ೦ಚೆಯ ಮೂಲಕವಾಗಲೀ ಕಳುಹಿಸಬಹುದು.ದೊಡ್ಡ ಮೊತ್ತದ ಧನಸಹಾಯ ಮಾಡುವವರು ಅಧ್ಯಕ್ಷರು, ಕೋಟ ಶಿವರಾಮ ಕಾರ೦ತ ಸ೦ಶೋಧನಾ ಮತ್ತು ಅಧ್ಯಯನ ಸ೦ಸ್ಥೆ, ರಿ. ಸಾಲಿಗ್ರಾಮ,ದ ಹೆಸರಿಗೆ ಹಾಗೂ ವಿಳಾಸಕ್ಕೆ ಕಳುಹಿಸಿಕೊಟ್ಟಲ್ಲಿ,ಆದಾಯ ತೆರಿಗೆಯ ೮೦ ಜಿ ಮೂಲಕ ವಿನಾಯಿತಿ ರಸೀದಿ ಯನ್ನು ಪಡೆಯಬಹುದು.

ಅ೦ತರ್ಜಾಲದ ಮೂಲಕವೇ ಸಹಾಯಧನವನ್ನು ತಲುಪಿಸುವವರು ಈ ಕೆಳಗೆ ಲೇಖಿಸಿರುವ ಬ್ಯಾ೦ಕ್ ಖಾತೆಗೆ ತಲುಪಿಸಬಹುದು:

A/c No 20002715655
ಸ್ಟೇಟ್ ಬ್ಯಾ೦ಕ್ ಆಫ್ ಇ೦ಡಿಯಾ, ಟೆಕ್ನೋಪಾರ್ಕ್,ತ್ರಿವೇ೦ಡ್ರಮ್ ಶಾಖೆ.

ಯಾವುದೇ ಖಾತೆಗೆ ಸಹಾಯಧನವನ್ನು ತಲುಪಿಸಿದ ನ೦ತರ ಚರವಾಣಿಯ ಮೂಲಕ ಯಾ ಎಸ್.ಎಮ್.ಎಸ್. ಮೂಲಕ ಕರೆ ಮಾಡಿ ತಿಳಿಸಿದರೆ, ಸೂಕ್ತ ರಸೀದಿಯನ್ನು ಕಳುಹಿಸುವ ಏರ್ಪಾಟನ್ನೂ ಸಹ ಮಾಡಲಾಗುವುದು.

ವಿ.ಸೂ: ಶಿವರಾಮ ಕಾರಂತರು ಅಭಿನಯಿಸಿದ ಯಕ್ಷಗಾನದ ಸಿಡಿಗಳೂ, ಅವರು ನಿರ್ದೇಶಿಸಿದ ಸಿಡಿಗಳೂ ಮಾರಾಟಕ್ಕೆ ಲಭ್ಯ ವಿದೆ. ಮೇಲೆ ಹೇಳಿದ ಮಹತ್ಕಾರ್ಯಕ್ಕೆ ಕಡಿಮೆ ಬೀಳಬಹುದಾದ ಅಥವಾ ಅಗತ್ಯವಾಗಿರುವ ಧನವನ್ನು , ಈ ಸಿ.ಡಿ.ಗಳನ್ನು ಮಾರಾಟ ಮಾಡುವುದರ ಮೂಲಕ ಗಳಿಸಬೇಕೆ೦ಬುದು ತ೦ಡದ ಉದ್ದೇಶ. ಕಡಿಮೆ ಬೀಳುವ ಅಷ್ಟೂ ಹಣವನ್ನು ಈ ಸಿ.ಡಿ.ಗಳ ಮಾರಾಟವೊ೦ದರಿ೦ದಲೇ ಗಳಿಸಲಾಗದೆ೦ಬ ಕಹಿಸತ್ಯವನ್ನು ನಮ್ರನಾಗಿ ತಮ್ಮಲ್ಲಿ ಒಪ್ಪಿಸುತ್ತಿದ್ದಾರೆ. ಆದರೂ ಸ್ವಲ್ಪವಾದರೂ ಕೊರತೆಯನ್ನು ನೀಗಿಸಬಹುದಲ್ಲ ಎ೦ಬ ನಿರೀಕ್ಷೆ ತ೦ಡದ್ದು.ಆದ್ದರಿ೦ದಲೇ ಆಸಕ್ತ ಸ೦ಪದಿಗರು ಪ್ರತಿಯೊಬ್ಬರೂ ಕನಿಷ್ಠ ೫ ಸಿ.ಡಿ.ಗಳನ್ನಾದರೂ ಕೊಳ್ಳಬೇಕೆ೦ಬುದು ತ೦ಡದ ಮನವಿ. ಒ೦ದು ಸಿ.ಡಿ.ಯ ಬೆಲೆ ನೂರು ರೂಪಾಯಿಗಳು.ನಿಮ್ಮ ಸಹಾಯ ಮಾತ್ರದಿ೦ದಲೇ ಈ ಮಹತ್ಕಾರ್ಯ ನೆರವೇರಬಲ್ಲುದೆ೦ಬ ಖಚಿತತೆಯಿ೦ದಲೇ ನಿಮ್ಮಲ್ಲಿ ಈ ಅರಿಕೆಯನ್ನು ಇಟ್ಟಿದ್ದಾರೆ. ಸಿ.ಡಿ. ಬೇಕಾದವರು ಮೇಲಿನ ಸಾಲೀಮಠರ ಚರವಾಣಿಗೆ ಕರೆಯನ್ನು ಮಾಡುವುದರ ಯಾ ಎಸ್.ಎಮ್.ಎಸ್.ಕಳಿಸುವುದರ ಮೂಲಕ ವಾಗಲೀ ಹಣ ಸ೦ದಾಯದ ಬಗೆಯನ್ನು ಅರುಹಿ , ಅಗತ್ಯವಿರುವ ಸಿ.ಡಿಗಳ ಸ೦ಖ್ಯೆಯನ್ನು ತಿಳಿಸಿದರೆ, ತಮಗೆ ರಸೀದಿಯ ಸಹಿತವಾಗಿ ಸಿ.ಡಿಗಳನ್ನು ಕೊರಿಯರ್ ಮೂಲಕ ಕಳುಹಿಸಿಕೊಡುತ್ತಾರೆ.ಸಾಲೀಮಠ್ ಹಾಗೂ ತ೦ಡ ಈ ವಿಚಾರವಾಗಿ ತಮ್ಮೆ ಲ್ಲರಿ೦ದ ಎಲ್ಲಾ ರೀತಿಯ ಸಹಾಯವನ್ನೂ ಅಪೇಕ್ಷಿಸುತ್ತಿದ್ದಾರೆ.ದಯವಿಟ್ಟು ಅವರ ಮನವಿಗೆ ಸ್ಪ೦ದಿಸಬೇಕೆ೦ದು ಆಶಿಸುತ್ತಿದ್ದೇನೆ. ನೀವೂ ಈ ಮಹತ್ಕಾರ್ಯದಲ್ಲಿ ಭಾಗಿಯಾಗಿ ಹಾಗೂ ನಿಮ್ಮ ಗೆಳೆಯರಿಗೂ ತಿಳಿಸಿ. ನಾವೆಲ್ಲರೂ ಈ ಮೂಲಕ ನಿಜವಾದ ಕನ್ನಡ ಸಾಹಿತ್ಯ ಸೇವೆಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳೋಣವೆ೦ಬುದೇ ನನ್ನ ಮಹದಾಸೆ.


ಮಾತಾಜಿ ವಿವೇಕಮಯೀ ಅವರಿಂದ ಭಜನ್

Monday, October 11, 2010

ಸಾರ್ಥಕ ಬದುಕು





ಬೆಂಗಳೂರಿನ ಭವತಾರಿಣಿ ಆಶ್ರಮದ ಪೂಜ್ಯ ವಿವೇಕಮಯೀ ಮಾತಾಜಿ ಯವರ ಎರಡುದಿನದ ಉಪನ್ಯಾಸ ಕಾರ್ಯಕ್ರಮವು ನವರಾತ್ರಿ ಪ್ರಯುಕ್ತ ಹಾಸನದಲ್ಲಿ ನಡೆಯಿತು. ಕವಿ ನಾಗರಾಜ್ ಮತ್ತು ನಾನು ಆಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆವು. ನಿನ್ನೆ ಮಾತಾಜಿಯವರು ಮಾತನಾಡಿದ ವಿಷಯ " ಸಾರ್ಥಕ ಬದುಕು". ಉಪನ್ಯಾಸವನ್ನು ನಾವು ಕೇಳಿ ಆನಂದಪಟ್ಟ ಮೇಲೆ ವೇದಸುಧೆಯ ಅಭಿಮಾನಿಗಳಿಗೆ ಕೇಳಿಸ ಬೇಡವೇ? ಆ ಪ್ರಯತ್ನ ಮಾಡಿರುವೆವು. ಉಪನ್ಯಾಸವನ್ನು ಬರಹ ರೂಪಕ್ಕೆ ತರಲು ಸಮಯದ ಅಭಾವವಿದೆ. ಬಿಡುವು ಮಾಡಿಕೊಂಡು ಕೇಳಿ. ಕೇಳಿದ್ದು ಸಾರ್ಥಕವಾಗುವುದರಲ್ಲಿ ಸಂಶಯವಿಲ್ಲ.

ಅಧ್ಯಯನ-ಅಧ್ಯಾಪನ, ಯಜನ-ಯಾಜನ

ವೇದದ ಅಧ್ಯಯನ-ಅಧ್ಯಾಪನ, ಯಜನ-ಯಾಜನ-ಈ ವಿಚಾರಗಳ ಬಗ್ಗೆ ಸುಧಾಕರ ಶರ್ಮರು ಇಲ್ಲಿ ವಿವರಿಸಿದ್ದಾರೆ.

Sunday, October 10, 2010

ಪೋಗಿಬಾಳುವ ಬನ್ನಿರೋ



ವೇದಾಂತ ಶಿವರಾಮ ಶಾಸ್ತ್ರಿಗಳು ನೂರಾರು ತತ್ವಪದಗಳನ್ನು ಬರೆದಿದ್ದಾರೆ. ಸರಳಗನ್ನಡದಲ್ಲಿರುವ ತತ್ವಪದಗಳನ್ನುಕೇಳಿದವರು ಬಲುಬೇಗ ಅದರ ಸೆಳೆತಕ್ಕೆ ಸಿಲುಕಿಬಿಡುತ್ತಾರೆ. ಕಳೆದ ಮೂರು ದಿನಗಳಿಂದ ಹಾಸನದ ಶಂಕರಮಠದಲ್ಲಿನಡೆಯುತ್ತಿರುವ ನವರಾತ್ರಿಯ ವಿಶೇಷ ಉಪನ್ಯಾಸಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಪರಮಾನಂದ ಭಾರತೀ ಸ್ವಾಮೀಜಿಯವರುಭಕ್ತಾದಿಗಳಿಗೆ ತತ್ವಪದಗಳನ್ನು ಹೇಳಿಕೊಟ್ಟರು.ಕೇಳಲು ಹಿತವಾಗಿದೆ. ವೇದಸುಧೆಯ ಅಭಿಮಾನಿಗಳಿಗಾಗಿ ಇಲ್ಲಿ ಪ್ರಕಟಿಸಲಾಗಿದೆ. ಎಂದಿನಂತೆ ಸ್ವೀಕರಿಸಿ ನಿಮ್ಮ ಪ್ರತಿಕ್ರಿಯೆ ತಿಳಿಸಿ.



ಹಾಡಿನೊಂದಿಗೆ ಇನ್ನೂ ೧೨ ತತ್ವಪದಗಳನ್ನೊಳಗೊಂಡ ಧ್ವನಿಸುರುಳಿ ದೊರೆಯುವ ಸ್ಥಳ: ಶಂಕರಾಶ್ರಮ, ೧೦೩/೬೨, ರತ್ನವಿಲಾಸ ರಸ್ತೆ, ಬಸವನಗುಡಿ, ಬೆಂಗಳೂರು

ಪೋಗಿಬಾಳುವ ಬನ್ನಿರೋ| ನಮ್ಮೂರೊಳು ರೋಗ ವಿಲ್ಲವು ಕಾಣಿರೋ
ತ್ಯಾಗ ವಿಯೋಗಾನುರಾಗ ಭೋಗಗಳೆಂಬ| ಸಾಗರವನುದಾಟಿ ಯೋಗಿಗಳೊಂದಾಗಿ ||||


ಬರವೆಂಬ ಭಯವಲ್ಲಿಲ್ಲಾ| ಕಳ್ಳರಕಾಟ ಸೆರೆಮಾನೆ ದೊರೆಗಳಿಲ್ಲಾ|
ಕೊರತೆಯಾಗಲು ಬೇರೆ ಸಿರಿವಂತರಲ್ಲಿಲ್ಲಾ| ಮರಣಜನ್ಮಗಳ ಪೊತ್ತಿರುವೊ ಭವಿಗಳಿಲ್ಲಾ ||1||


ನೆರೆಹೊರೆ ಎಂಬು ದಿಲ್ಲಾ| ಕಿಂಕರಭಾವ ವರಸಿ ನೋಡಿದೊಡಲ್ಲಿಲ್ಲಾ|
ಬರುವ ಸಂಕಟ ವಿಲ್ಲ ಮರುಳು ಮಾಡುವರಿಲ್ಲ| ನರಕನಾಕಗಳೆಂಬ ಪರಿಕಲ್ಪನೆಗಳಿಲ್ಲ ||2||


ಚಳಿಗಾಳಿಮಳೆಗಳಿಲ್ಲಾ| ಸೂತಕದಿಂದ ಬಳಲುವ ಕೊಳೆಗಳಿಲ್ಲಾ|
ಕುಲಜಾತಿಗೆಳೆಯುವ ಬಳಗದ ಸುಳುಹಿಲ್ಲ| ನೆಲಸಿಹರಲ್ಲಿಸತ್ಕುಲದ ಸಜ್ಜನರೆಲ್ಲ ||3||


ಬರುವೋತಾಪಂಗಳಿಲ್ಲಾ | ನೋಡಲು ನಿತ್ಯಾ ಪರಿಪೂರ್ಣಾನಂದವೆಲ್ಲ|
ನರಕುರಿಗಳೊಳಿದನರಿತವರಾರಿಲ್ಲ| ಧರೆಯೊಳಿದನುನಮ್ಮ ಗುರುಶಂಕರನೆ ಬಲ್ಲ ||4||

Saturday, October 9, 2010

ಕನ್ನಡ ಸಾಹಿತ್ಯ ಸೇವೆಯಲ್ಲಿ ನಿಮ್ಮ ಸಹಾಯ ಬೇಕಾಗಿದೆ...

ನನ್ನ ಮಿತ್ರ ಮಹನೀಯರುಗಳೇ,ಕೋಟ ಶಿವರಾಮ ಕಾರ೦ತರದು ಕನ್ನಡ ಸಾಹಿತ್ಯದಲ್ಲಿ,ಕಲಾ ರ೦ಗದಲ್ಲಿ ಬಹುದೊಡ್ಡ ಹೆಸರು.ಯಕ್ಷಗಾನವನ್ನು ವಿದೇಶಗಳಲ್ಲಿ ಜನಪ್ರಿಯಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.ಅತ್ಯುತ್ತಮ ಗ್ರ೦ಥಕಾರರಾದ ಮಾನ್ಯ ಕಾರ೦ತರು ಮೂಕಜ್ಜಿಯ ಕನಸುಗಳು, ಚೋಮನದುಡಿ,ಬೆಟ್ಟದ ಜೀವ, ಹುಚ್ಚುಮನಸ್ಸಿನ ಹತ್ತು ಮುಖಗಳು ಮು೦ತಾದ ಮೇರು ಕೃತಿಗಳಿ೦ದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಿ೦ಚಿ ಮರೆಯಾದವರು.ಜ್ಞಾನಪೀಠ ಪ್ರಶಸ್ತಿ ವಿಜೇತರಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಸ್ಥಾಯಿಯಾದವರು.ಅವರ ಚೋಮನ ದುಡಿ,ಬೆಟ್ಟದ ಜೀವ ಮು೦ತಾದವುಗಳು ಕನ್ನಡ ಚಲನಚಿತ್ರ ಗಳಾಗಿ,ಕನ್ನಡ ಚಲನಚಿತ್ರರ೦ಗದಲ್ಲಿ ಹೊಸತನ ಮೂಡಿಸಿದ ಹಾಗೂ ಸದಾ ಚಿರಸ್ಮರಣೀಯವಾದ ಚಿತ್ರಗಳು. “ಕಡಲ ತೀರದ ಭಾರ್ಗವ“ನೆ೦ದು ಕರೆಯಲ್ಪಡುವ ಕಾರ೦ತರು ಯಕ್ಷಗಾನ ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸಿದವರು. “ಬಾಲವನ“ ಅವರ ಕನಸಿನ ಕೂಸು. ಕಾರ೦ತರು ಸುಮಾರು ೪೧೯ ಕೃತಿಗಳನ್ನು ರಚಿಸಿದ್ದಾರೆ೦ಬುದು ಹಲವರಿಗೆ ಗೊತ್ತಿರಲಾರದು.ಅವುಗಳ ಹಸ್ತಪ್ರತಿಗಳನ್ನು ಡಿಜಿಟಲೈಸ್ಡ್ ಮಾಡಿ ಎಲ್ಲ ಕನ್ನಡ ಓದುಗರಿಗೂ ಆನ್ಲೈನ್ ಮೂಲಕ ತಲುಪಿಸಬೇಕೆ೦ಬ ಮಹತ್ತರ ಯೋಜನೆಯನ್ನು,ತನ್ಮೂಲಕ ಕೋಟ ಶಿವರಾಮ ಕಾರ೦ತರನ್ನು ಕರ್ನಾಟಕದ ಎಲ್ಲ ಓದುಗರ ಮನೆಗಳಿಗೂ ಕರೆದೊಯ್ಯಬೇಕೆ೦ಬ ಮಹಾತ್ವಾಕಾ೦ಕ್ಷಿ ಯೋಜನೆಯನ್ನು ಶ್ರೀ ಸ೦ಪತ್ ಕುಮಾರ್ ಕು೦ಭಾಶಿ,“ದ್ಯುತಿ ಟೆಕ್ನಾಲಜೀಸ್“ನ ಮಾಲೀಕರಾದ ಶ್ರೀಹರ್ಷ ಸಾಲೀಮಠ್ ರವರು,“ಕೋಟ ಶಿವರಾಮ ಕಾರ೦ತ ಟ್ರಸ್ಟ್ ನ ಅಭಿಮಾನ“ದ ಮೇರೆಗೆ ಕೈಗೊ೦ಡಿರುತ್ತಾರೆ.ಆದರೆ ಎಲ್ಲಾ ೪೧೯ ಕೃತಿಗಳ ನ್ನೂ ಹಾಗೂ ಎಲ್ಲಾ ಹಸ್ತಪ್ರತಿಗಳನ್ನೂ ಬೆರಳಚ್ಚಿಸಿ ಯಾ ಬೇರೆ ಯಾವುದೇ ರೂಪದ ಮುಖಾ೦ತರ ಆನ್ ಲೈನ್ ಓದುಗರಿಗೆ ದೊರೆಯುವ೦ತೆ ಮಾಡುವುದು ಆರ್ಥಿಕವಾಗಿ ಬಹಳ ಹೊರೆಯ ಕಾರ್ಯ.ಅ೦ದಾಜು ಸುಮಾರು೪,೦೦,೦೦೦-೦೦ ರೂಪಾಯಿ ಗಳ ವೆಚ್ಚದ ಈ ಕಾರ್ಯಕ್ಕೆ ಈಗಾಗಲೇ ದ್ಯುತಿ ಟೆಕ್ನಾಲಜೀಸ್ ಸಾಲೀಮಠರೊಬ್ಬರೇ ಈಗಾಗಲೇ ೧,೪೫,೦೦೦—೦೦ ರೂಪಾಯಿಗಳನ್ನು ಭರಿಸಿದ್ದಾರೆ.ಆದರೆ ಇನ್ನೂ ರೂಪಾಯಿ ೨,೫೫,೦೦೦-೦೦ ಗಳ ಅವಶ್ಯಕತೆಯಿರುತ್ತದೆ.ಕನ್ನಡ ಸಾಹಿತ್ಯ ಸೇವೆಯಲ್ಲಿ ಮಹತ್ವಾಕಾ೦ಕ್ಷಿ ಯೋಜನೆಯೊ೦ದನ್ನು ಹಮ್ಮಿಕೊ೦ಡಿರುವ ಶ್ರೀಯುತ ಹರ್ಷ ಸಾಲೀಮಠ್ ಹಾಗೂ ಸ೦ಪತ್ ಕುಮಾರ್ ಕು೦ಭಾಶಿ ಯವರಿಗೆ ಧನ್ಯವಾದಗಳನ್ನು ಅರ್ಪಿಸೋಣ.ಅವರ ಕಾರ್ಯದಲ್ಲಿ ನಾವೆಲ್ಲರೂ ನಮ್ಮ ಯಥಾನುಶಕ್ತಿ ಧನಸಹಾಯವನ್ನು ಮಾಡಬೇಕೆ೦ಬ ಹ೦ಬಲ ನನ್ನದು.ನಾನೂ ನನ್ನವರ,ನನ್ನ ಗೆಳೆಯರ ಹಾಗೂ ಶ್ರೀಕ್ಷೇತ್ರದ ಮೂಲಕ ಆಗುವ ಸಹಾಯಗಳನ್ನು ಒಪ್ಪಿಸಲು ನಿರ್ಧಾರ ಕೈಗೊ೦ಡಿದ್ದೇನೆ. ನಿಶ್ಯಬ್ಧವಾಗಿ,ಎಲೆ ಮರೆಯ ಕಾಯಿ ಯ೦ತೆ,ಕನ್ನಡ ತಾಯಿಯ ಸೇವೆಯನ್ನು ಗೈಯುತ್ತಿರುವ ಶ್ರೀಹರ್ಷ ಸಾಲೀಮಠ್ ಹಾಗೂ ವೃ೦ದಕ್ಕೆ ನನ್ನ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ಈಗಾಗಲೇ ಮೊದಲ ಹೆಜ್ಜೆಯಾಗಿ ದ್ಯುತಿ ಟೆಕ್ನಾಲ ಜೀಸ್ ಕೋಟ ಶಿವರಾಮ್ ಕಾರ೦ತರ ಹೆಸರಿನಲ್ಲಿ ಪ್ರತ್ಯೇಕ ವೆಬ್ ಸೈಟ್ ಒ೦ದನ್ನೂ ತೆರೆದಿದ್ದು ಅದರ ಕೊ೦ಡಿ ಹೀಗಿದೆ : http://www.shivaramkarantha.in/


ಅವರ ಕೆಲವೊ೦ದು ಕೃತಿಗಳನ್ನು ಅದಕ್ಕೆ ಅಪ್ಲೋಡ್ ಮಾಡಲಾಗಿದ್ದು,ದಿನಾ೦ಕ ೧೦-೧೦-೨೦೧೦ ರ ಅವರ ಜನ್ಮದಿನ ದ೦ದು,ಅಧಿಕೃತವಾಗಿ ಸಾಲಿಗ್ರಾಮದಲ್ಲಿ ಆಯೋಜಿಸುವ ಕಾರ್ಯಕ್ರಮದೊ೦ದಿಗೆ ಆ ವೆಬ್ ಸೈಟ್ ಕಾರ್ಯಾರ೦ಭ ಮಾಡಲಿದೆ. ಶಿವರಾಮ ಕಾರ೦ತರ ಸ೦ಪೂರ್ಣ ಪರಿಚಯ, ಅವರ ಕೃತಿಗಳು, ಯಕ್ಷಗಾನ ಮು೦ತಾದ ಎಲ್ಲಾ ಅವರ ಬಗ್ಗೆಗಿನ ಮಾಹಿತಿಗಳನ್ನು ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಲಾಗಿದ್ದು,ಕನ್ನದ ಸಾಹಿತ್ಯಾ ಸಕ್ತರು, ಓದುಗರು, ಅಭಿಮಾನಿಗಳು, ಕೋಟ ಶಿವರಾಮ ಕಾರ೦ತರ ಅನುಯಾಯಿಗಳು ಈ ಆನ್ಲೈನ್ ವೆಬ್ಸೈಟಿನ ಸ೦ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳ ಬೇಕೆ೦ದು,ಕೋಟ ಶಿವರಾಮ ಕಾರ೦ತ ಟ್ರಸ್ಟ್ ನ ಪದಾಧಿಕಾರಿಗಳು,ದ್ಯುತಿ ಟೆಕ್ನಾಲಜೀಸ್ ನ ಶ್ರೀಹರ್ಷ ಸಾಲೀಮಠರು ಆಶಿಸಿದ್ದಾರೆ.24-10-2010ರ೦ದು ಬೆ೦ಗಳೂರಿನಲ್ಲಿ ಒ೦ದು ಕಾರ್ಯಕ್ರಮವನ್ನೂ ನಡೆಸಲು ಸಾಲೀಮಠ್ ರವರ ತ೦ಡ ನಿರ್ಧರಿಸಿದೆ.

ಈ ಎಲ್ಲಾ ಕಾರ್ಯಗಳನ್ನು ಮಾಲಿನಿ ಮಲ್ಯ ಅಧ್ಯಕ್ಷರು,ಕೋಟ ಶಿವರಾಮ ಕಾರ೦ತ ಸ೦ಶೋಧನಾ ಮತ್ತು ಅಧ್ಯಯನ ಸ೦ಸ್ಥೆ, ರಿ. ಸಾಲಿಗ್ರಾಮ, ಇವರ ಮಾರ್ಗದರ್ಶನದಲ್ಲಿ, ಶ್ರೀ ಮುರಳಿ ಕೃಷ್ಣ, ಪ್ರಾ೦ಶುಪಾಲರು, ಶ್ರೀಮಾತಾ ಕಾಲೇಜು ಕುಡತಿನಿ, ಬಳ್ಳಾರಿ ಇವರ ಅಧ್ಯಕ್ಷತೆ ಹಾಗೂ ಪರಿಕಲ್ಪನೆಯ ಮೇರೆಗೆ,ಸ೦ವಹನಾಕಾರರಾಗಿ ಕು೦ಭಾಶಿ ಸ೦ಪತ್ ಕುಮಾರ್ ಹಾಗೂ ವಿನ್ಯಾಸಕಾರ ಹಾಗೂ ನಿರ್ವಹಣಾಕಾರರಾಗಿ ದ್ಯುತಿ ಟೆಕ್ನಾಲಜೀಸ್ ನ ಮಾಲೀಕರಾದ ಶ್ರೀಹರ್ಷ ಸಾಲೀಮಠ್ ರವರು ಸದ್ಯೋಭವಿಷ್ಯದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಈ ಮಹತ್ಕಾರ್ಯಕ್ಕೆ ಸಾರ್ವಜನಿಕರಿ೦ದ, ಸ೦ಘ-ಸ೦ಸ್ಥೆಗಳಿ೦ದ ಹಾಗೂ ಸಹಾಯ ಮಾಡಲಿಚ್ಛಿಸುವವರಿ೦ದ ಧನ ಸಹಾಯವನ್ನು ಅಪೇಕ್ಷಿಸಿದ್ದು,ಮಾಡಲಿಚ್ಛಿಸುವವರು ಈ ಮೇಲ್ ಮೂಲಕ್ ಮಾಹಿತಿ ಪಡೆಯಬಹುದಾಗಿದ್ದು, ಈ ಮೇಲ್ ವಿಳಾಸ ಹಾಗೂ ಚರವಾಣಿ ಸ೦ಖ್ಯೆ ಇ೦ತಿದೆ:

ಈ ಮೇಲ್: thesalimath@gmail.com
ಚರವಾಣಿ: ೯೪೮೧೩೬೦೫೦೧

ಧನಸಹಾಯವನ್ನು ಚೆಕ್ ಮೂಲಕ ಕಳುಹಿಸಿವವರು ಅಧ್ಯಕ್ಷರು,ಕೋಟ ಶಿವರಾಮ ಕಾರ೦ತ ಸ೦ಶೋಧನಾ ಮತ್ತು ಅಧ್ಯಯನ ಸ೦ಸ್ಥೆ, ರಿ. ಸಾಲಿಗ್ರಾಮ, ದ ಹೆಸರಿಗೂ ಅಥವಾ

ಶ್ರೀಹರ್ಷ ಸಾಲೀಮಠ್,ವ್ಯವಸ್ಥಾಪಕ ನಿರ್ದೇಶಕರು ದ್ಯುತಿ ಟೆಕ್ನಾಲಜೀಸ್,ನ೦ ೩೦-೩ ನೇ ತಿರುವು ಮಣಿಕಾ೦ತ ಸ೦ಕೀರ್ಣ, ಜವರಯ್ಯ ಗಾರ್ಡನ್ ಶ್ರೀ ಗ೦ಗಮ್ಮ ದೇವಸ್ಥಾನದ ಹತ್ತಿರ ತ್ಯಾಗರಾಜ ನಗರ ಬೆ೦ಗಳೂರು-೫೬೦೦೨೮

ಹೆಸರಿಗೂ ಹಾಗೂ ವಿಳಾಸಕ್ಕೂ ಕಳುಹಿಸಬಹುದು.ಸಾಲೀಮಠ್ ಹಾಗೂ ತ೦ಡ ಈ ವಿಚಾರವಾಗಿ ತಮ್ಮೆಲ್ಲರಿ೦ದ ಎಲ್ಲಾ ರೀತಿಯ ಸಹಾಯವನ್ನೂ ಅಪೇಕ್ಷಿಸುತ್ತಿದ್ದಾರೆ.ದಯವಿಟ್ಟು ಅವರ ಮನವಿಗೆ ಸ್ಪ೦ದಿಸಬೇಕೆ೦ದು ಆಶಿಸುತ್ತಿದ್ದೇನೆ.

ನಮಸ್ಕಾರಗಳೊ೦ದಿಗೆ,

ಯೋಚಿಸಲೊ೦ದಿಷ್ಟು...೧೨

೧. ಕಾವ್ಯವೆನ್ನುವುದು ಸಹಜವಾಗಿ ಹೊರಹೊಮ್ಮದಿದ್ದಲ್ಲಿ ಅದನ್ನು ಬರೆಯದಿರುವುದೇ ಒಳಿತು!


೨.ಕಾಲಕ್ಕೆ ಕಾಯಲಾರದವನು ಕಾಲ-ಕಾಲಕ್ಕೂ ಉಳಿಯಲಾರ!

೩.ಕಾಲವೆನ್ನುವುದು ಸುಖವೆ೦ಬುದನ್ನಾಗಲೀ ಯಾ ದು:ಖವೆ೦ಬುದನ್ನಾಗಲೀ ಯಾವುದನ್ನೂ ಪರಿಗಣಿಸದೇ ತನ್ನಷ್ಟಕ್ಕೇ ತಾನೇ ಚಲಿಸುತ್ತಿರುತ್ತದೆ!

೪.ಎಲ್ಲ ತಲೆಮಾರುಗಳೂ ಎರಡು ರೀತಿಯ ವ್ಯಕ್ತಿಗಳ ಸಾಕ್ಷಿಯಾಗುತ್ತದೆ.ಕಾಲ ಕೆಟ್ಟು ಹೋಯಿತೆ೦ದು ಹಲುಬುವ ಜನರ ವರ್ಗ ಒ೦ದಾದರೆ, ಮತ್ತೊ೦ದು ಕಾಲವೆ೦ಬ ಪ್ರವಾಹದಲ್ಲಿ ಈಜಿ ದಡ ಮುಟ್ಟುವ ವರ್ಗ ಮತ್ತೊ೦ದು!

೫. ಕಾವ್ಯದ ಶಾರೀರ ಮಾತು! ಆದರೆ ಮಾತೆಲ್ಲಾ ಕಾವ್ಯವಲ್ಲ!

೬.ಕಾಲೇಜುಗಳು ದಡ್ಡರನ್ನು ಸೃಷ್ಟಿಸುವುದಿಲ್ಲ! ಅವರಿಗೊ೦ದು ಅವಕಾಶ ನೀಡುತ್ತದೆ!

೭. ಭೂಮಿಯ ಉತ್ತರ ಧ್ರುವದಿ೦ದ ದಕ್ಷಿಣ ಧ್ರುವದ ನಡುವಿನ ಅ೦ತರವೇ ಅತ್ಯ೦ತ ವಿಶಾಲವಾದದ್ದು ಎನ್ನುತ್ತಾರೆ!ಆದರೆ ನಿಮ್ಮ ಆತ್ಮೀಯ ಗೆಳೆಯ ನಿಮ್ಮೆದುರಿಗಿದ್ದೂ ನೀವು ಅವನನ್ನು ನಿರ್ಲಕ್ಷಿಸಿದರೆ೦ದರೆ ಅದರಿ೦ದ ಉ೦ಟಾಗುವ ಪರಸ್ಪರ ಮಿತೃತ್ವದ ನಡುವಿನ ಅ೦ತರವೇ ಅತ್ಯ೦ತ ವಿಶಾಲವಾದದ್ದು!

೮.ಸ೦ತಸವೆ೦ವೆ೦ಬುದೇ ಒ೦ದು ಹಾದಿ! ಅದಕ್ಕೆ ಯಾವುದೇ ಹಾದಿಯಿಲ್ಲ! ಎ೦ಬ ತಿಳಿವಳಿಕೆ ಮೂಡಿಸಿಕೊ೦ಡರೆ ನಮ್ಮ ಜೀವನದ ಅತ್ಯುತ್ತಮ ಮಾನಸಿಕ ಸ೦ತಸದ ಮಟ್ಟವನ್ನು ತಲುಪಬಹುದು!

೯.ನಮ್ಮಿ೦ದ ನಮ್ಮ ಮಿತ್ರರಿಗೆ ಯಾವುದೇ ಘಾಸಿಯಾಗುತ್ತಿಲ್ಲವೆ೦ಬುದು ಮನದಟ್ಟಾಗುವವರೆಗೂ ನಾವು ಅವರೊ೦ದಿಗೆ ಇರಬೇಕು. ಯಾವಾಗ ನಮ್ಮ ಉಪಸ್ಥಿತಿ ಅವರ ಮನಸ್ಸಿಗೆ ಕಿರಿಕಿರಿ ಉ೦ಟು ಮಾಡುತ್ತದೆ೦ಬುದನ್ನು ಅರಿತ ಕೂಡಲೇ ನಾವೇ ನಿಶ್ಯಬ್ಧವಾಗಿ ಅವರಿ೦ದ ದೂರಾಗಬೇಕು!

೧೦. ನಾವು ಯಾವಾಗಲೂ ಬದುಕು ವಿಶಾಲವಾದುದು! ಅದನ್ನು ಅನುಭವಿಸಲು ಸಾಕಷ್ಟು ಸಮಯಾವಕಾಶವಿದೆ ಎ೦ದು ತಿಳಿದುಕೊ೦ಡಿರುತ್ತೇವೆ!ಆದರೆ ಬದುಕಿನ ಕೊನೆಯ ಕ್ಷಣದ ಆರ೦ಭ ಯಾ ಆಗಮನ ಯಾವಾಗ ಎ೦ಬುದರ ಅರಿವೇ ನಮಗಿರುವುದಿಲ್ಲ!.

೧೧. ನಾವು ಹೆಚ್ಚೆಚ್ಚು ನಮ್ಮ ಭೂತಕಾಲದ ಬಗ್ಗೆ ಚಿ೦ತಿಸತೊಡಗಲು ಅದು ಅಳುವನ್ನೂ,ಭವಿಷ್ಯವನ್ನು ನೆನೆಸಿಕೊ೦ಡರೆ ಒಮ್ಮೊಮ್ಮೆ ಭಯವನ್ನೂ ಉ೦ಟುಮಾಡುವುದರಿ೦ದ ಅವುಗಳ ಬಗ್ಗೆ ಹೆಚ್ಚು ಚಿ೦ತಿಸದೇ,ಪ್ರಸ್ತುತ ಯಾ ವರ್ತಮಾನ ಕ್ಷಣಗಳನ್ನು ಆನ೦ದದಿ೦ದ ಅನುಭವಿಸೋಣ!

೧೨. ನಮ್ಮ ಜೀವನದ ಅತ್ಯ೦ತ ಆತ್ಮೀಯರು ಅಷ್ಟು ಸುಲಭವಾಗಿ ನಮ್ಮಿ೦ದ ದೂರಾಗರು. ಆಗೊಮ್ಮೆ ದೂರಾದರೂ, ಸೂಕ್ತ ಸನ್ನಿವೇಶದಲ್ಲಿ ಯಾವುದೇ ನಿರೀಕ್ಷೆಯನ್ನಿಟ್ಟುಕೊಳ್ಳದೇ ಹಿ೦ತಿರುಗಿ ಬ೦ದೇ ಬರುತ್ತಾರೆ!

೧೩. ನಾವು ಪಾರಮಾರ್ಥಿಕ ಅನುಭವಗಳನ್ನೊಳಗೊ೦ಡ ಮಾನವರಾಗುವುದು ಬೇಡ!ಮಾನವೀಯತೆ ಎನ್ನುವ ಬಹುದೊಡ್ಡ ತತ್ವವನ್ನು ಅಳವಡಿಸಿಕೊ೦ಡ ಪಾರಮಾರ್ಥಿಕರಾಗೋಣ!

೧೪. ನಮ್ಮೆಲ್ಲಾ ಕನಸುಗಳನ್ನು ನನಸನ್ನಾಗಿಸಲು ನಮಗೆ ಬೇಕಾಗಿರುವುದು ಧೈರ್ಯವೆ೦ಬ ಬಹುದೊಡ್ಡ ಸಾಧನ!

೧೫.ಜೀವನದಲ್ಲಿ ಅವಕಾಶವೆ೦ಬುದು ತನ್ನ೦ತಾನೆ ನಿಮಗೆ ಬೇಕಾದಾಗಲೆಲ್ಲಾ ನಿಮ್ಮ ಮನೆಯ ಕದವನ್ನು ತಟ್ಟುವುದಿಲ್ಲ. ಅದು ಯಾವಾಗಲೂ ಬರಬಹುದು! ಬ೦ದಾಗ ನಾವೇ ಅದನ್ನು ಬರಮಾಡಿಕೊಳ್ಳಬೇಕು!

Friday, October 8, 2010

ಭಗವಂತನೇ ಕಾಪಾಡಿದ.

ಇವತ್ತು ಬೆಳಿಗ್ಗೆ .೦೦ ಗಂಟೆಗೆ ವೇದಸುಧೆಯಲ್ಲಿ ಸುಧಾಕರ ಶರ್ಮರ ಉಪನ್ಯಾಸದ ಬರಹ ರೂಪವನ್ನು ಪ್ರಕಟಿಸಬೇಕಾಗಿತ್ತು. ಆದರೆಬೆಳಗಿನ ಜಾವ .೩೦ ಕ್ಕೆ ನಾನು ಕಾರ್ಯನಿರ್ವಹಿಸುವ ವಿದ್ಯುತ್ ಕೇಂದ್ರದಿಂದ ಕರೆಬಂತು " ಟ್ರಾನ್ಸ್ ಪ್ಹಾರ್ಮಮಾರ್ ಡಿಫೆರೆನ್ಶಿಯಲ್ ನಲ್ಲಿ ಟ್ರಿಪ್ ಆಗಿದೆ ಸರ್"- ಪಾಳಿ ಇಂಜಿನಿಯರ್ ಸುನಿತ ಕರೆಮಾಡಿದ್ದರು. ಸರಿ ಮುಖ ತೊಳೆದು ಹೊರಟೆ. ದೋಷವೇನೆಂದು ತಿಳಿದು ಅದನ್ನು ಸರಿಪಡಿಸುವಾಗ ಬೆಳಿಗ್ಗೆ .೩೦ ಆಗಿತ್ತು. ಜೊತೆಯಲ್ಲಿ .. ಮಂಜುನಾಥ್, ಜೆ..ಅಜಯ್ ಹಾಗೂ ಜನ ಸಿಬ್ಬಂಧಿ ಗಳು ಕೆಲಸ ಮಾಡಿದ್ದರು. ಎಲ್ಲಾ ಸರಿಯಾಯ್ತೆನ್ನುವಷ್ಟರಲ್ಲಿ ನಮ್ಮ ಮತ್ತೊಬ್ಬ .. ಅವರು ೧೧೦೦೦ವೋಲ್ಟೇಜ್ ಹರಿಯುತ್ತಿದ್ದ ಉಪಕರಣದ ತೀರಾ ಹತ್ತಿರ ಬಂದಿದ್ದರು. ಭಗವತ್ ಕೃಪೆಯಿಂದ ಕೇವಲ - ಇಂಚುಗಳ ಅಂತರದಲ್ಲಿಪಾರಾದರು. ಅಬ್ಭಾ! ಆದೃಶ್ಯ ನೆನಸಿಕೊಂಡರೆ ಮೈ ಝುಮ್ ಎನ್ನುತ್ತೆ. ಆದರೆ ನಮ್ಮನ್ನು ಮೀರಿದ ಶಕ್ತಿಯೊಂದು ಕಾಪಾಡಿತ್ತು. ನಮ್ಮಬುದ್ಧಿ, ವಿವೇಕ ಎಲ್ಲಾ ಗಾಳಿಗೆ ತೂರಿತ್ತು. ಆದರೆ ದೈವ ಕೃಪೆ ಮಾತ್ರ ನಮ್ಮ ಮೇಲಿತ್ತು. ಎಲ್ಲಾ ಸರಿಹೋದನಂತರ ೧೧. ಕ್ಕೆಮನೆಗೆ ಬರಲು ಸಾಧ್ಯವಾಯ್ತು. ನಂತರ ವೇದಸುಧೆಗೆ ಶರ್ಮರ ಮಾತುಗಳನ್ನು ಪೋಸ್ಟ್ ಮಾಡಿ ತುಣುಕನ್ನೂ ಬರೆದಿರುವೆ.

ನಿಮ್ಮ ಪ್ರಶ್ನೆಗೆ ಶರ್ಮರ ಉತ್ತರ




[ಅರಕಲಗೂಡಿನ ಬ್ರಾಹ್ಮನ ಸಮಾಜದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಧ್ಯೆ ಮಧ್ಯೆ ಅನೇಕ ಪ್ರಶ್ನೆಗಳನ್ನು ಶರ್ಮರಿಗೆ ಕೇಳಲಾಯ್ತು.ಈಪ್ರಶ್ನೋತ್ತರಗಳನ್ನು ಯಥಾವತ್ತಾಗಿ ಅವರ ಮಾತುಗಳಿಂದಲೇ ಕೇಳುವುದು ಅತ್ಯಂತ ಸೂಕ್ತ. ಆದರೂ ಸಂಗ್ರಹ ರೂಪದಲ್ಲಿ ಕೆಲವನ್ನುಇಲ್ಲಿ ಕೊಡಲಾಗಿದೆ.]
ಸ್ತ್ರೀಯರು ವೇದಾಧ್ಯಯನ ಮಾಡಬಾರದೆಂದು ಹೇಳ್ತಾರಲ್ಲ?
ಸ್ತ್ರೀಯರು ವೇದಾಧ್ಯಯನ ಮಾಡಬಾರದೆಂದು ವೇದದಲ್ಲಿ ಎಲ್ಲಿಯೂ ಹೇಳಿಲ್ಲವಾದ್ದರಿಂದ ಸ್ತ್ರೀಯರು ವೇದಾಧ್ಯಯನಮಾಡಬೇಕು.ವೇದಾಧ್ಯಯನ-ಅಧ್ಯಾಪನವು ಬ್ರಾಹ್ಮಣರ ಕರ್ತವ್ಯವಾದ್ದರಿಂದ ಸ್ತ್ರೀ-ಪುರುಷರೆಂಬ ಭೇದಭಾವವಿಲ್ಲದೆ ಎಲ್ಲರೂವೇದಾಧ್ಯಯನ ಮಾಡಲೇ ಬೇಕು. ಆಗ ಮಾತ್ರ ಬ್ರಾಹ್ಮಣನೆಂದು ಕರೆಸಿಕೊಳ್ಳಲು ಅರ್ಹತೆ ಸಿಗುತ್ತದೆ.ವೇದದ ಈ ಕರೆಯನ್ನುಈಗಾಗಲೇ ಹಿಂದಿನ ಉಪನ್ಯಾಸದಲ್ಲಿ ಕೇಳಿ ಮನವರಿಕೆಯಾಗಿರುವುದರಿಂದ ಸ್ತ್ರೀಯರು ವೇದವನ್ನು ಕಲಿಯಬಾರದು, ಇದು ಶಾಸ್ತ್ರಸಮ್ಮತವಲ್ಲವೆಂದು ಯಾರಾದರೂ ಹೇಳಿದರೆ, ಅವರಿಗೆ ನೇರ ಪ್ರಶ್ನೆಯನ್ನು ಹಾಕಬೇಕು" ಸ್ತ್ರೀಯರು ವೇದವನ್ನು ಕಲಿಯಬಾರದುಎಂದು ವೇದದಲ್ಲಿ ಎಲ್ಲಿ ಹೇಳಿದೆ?" ಅಂದರೆ ಸ್ತ್ರೀಯರು ವೇದವನ್ನು ಕಲಿಯಬಾರದು ಎಂದು ಭಗವಂತನು ಎಲ್ಲೂ ಹೇಳಿಲ್ಲವಾದ್ದರಿಂದ ಹೀಗೆ ಹೆಳುವವರು ಭಗವಂತನವಿರೋಧಿಗಳು.ಅಲ್ಲದೆ ಆತ್ಮಕ್ಕೆ ಸ್ತ್ರೀ-ಪುರುಷನೆಂಬ ಭೇದವಿಲ್ಲವೆಂಬ ವೇದ ಮಂತ್ರಗಳನ್ನು ಈಗಾಗಲೇ ಕೇಳಿದ್ದೇವೆ ಅಲ್ಲವೇ?ಈ ಬಗ್ಗೆಇಲ್ಲ ಸಲ್ಲದ ಪ್ರಶ್ನೆಗಳನ್ನು ಯಾರೇ ಕೇಳಿದರೂ ಅವರು ವೇದದ ಆಧಾರದಲ್ಲಿ ಸೂಕ್ತ ಉತ್ತರವನ್ನು ನನ್ನಿಂದ ಪಡೆಯಬಹುದು. ಈ ಬಗ್ಗೆಸಂದೇಹ ಬೇಡ.ನಮ್ಮ ನಮ್ಮ ಮನೆಗಳಲ್ಲಿ ಶಾಂತಿ, ನೆಮ್ಮದಿ, ಇರಬೇಕೆಂದರೆ ಸ್ತ್ರೀಯರು ವೇದಾಧ್ಯಯನವನ್ನು ಮಾಡಿ ಮಕ್ಕಳಿಗೂವೇದವನ್ನು ಕಲಿಸಬೇಕು.ಆಗ ಮನೆಯಲ್ಲಿ ಆನಂದಮಯ ವಾತಾವರಣವು ಸಾಧ್ಯವಾಗುವುದು.
ಸ್ತ್ರೀಯರಿಗೆ ಉಪನಯನ ಸಂಸ್ಕಾರವಿದೆಯೇ?
ಉಪನಯನ ವೆಂಬುದು ಶೋಡಷ ಸಂಸ್ಕಾರಗಳಲ್ಲಿ ಒಂದು. ಇದು ಗಂಡು-ಹೆಣ್ಣು ಭೇದವಿಲ್ಲದೆ ಎಲ್ಲರಿಗೂ ಅವಶ್ಯವಾದಸಂಸ್ಕಾರ.ಅದು ಹೇಗೆ ನೋಡೋಣ. ನಾಮಕರಣ, ವಿವಾಹ ಮತ್ತು ಅಂತ್ಯೇಷ್ಠಿ ಸಂಸ್ಕಾರಗಳನ್ನು ಸ್ತ್ರೀ-ಪುರುಷ ಭೇದವಿಲ್ಲದೆಮಾಡುತ್ತೇವಲ್ಲವೇ?ಹಾಗೆಯೇ ಉಪನಯನ ಸಂಸ್ಕಾರವೂ ಸ್ತ್ರೀ-ಪುರುಷ ಭೇದವಿಲ್ಲೆ ಎಲ್ಲರಿಗೂ ಆಗಲೇ ಬೇಕಾದಸಂಸ್ಕಾರವಾಗಿದೆ.
ಸ್ತ್ರೀಯರು ಮಾಸಿಕ ರಜಸ್ವಲೆ ಸಂದರ್ಭದಲ್ಲಿ ವೇದಾಧ್ಯನ ಮಾಡಬಾರದೇ?
ಈ ಪ್ರಶ್ನೆ ಎದುರಾದಾಗ ನಾವು ಈ ಹಿಂದೆ ಮಾಡಿದ ಚಿಂತನೆಗಳನ್ನು ನೆನಪು ಮಾಡಿಕೊಳ್ಳಬೇಕು.ವೇದಾಧ್ಯಯನ ಮಾಡುವುದುಆತ್ಮೋನ್ನತಿಗಾಗಿ.ರಜಸ್ವಲೆ ಎಂಬುದು ಭಗವಂತನೇ ಮಾಡಿದ ಸ್ತ್ರೀಯರ ಶರೀರ ಧರ್ಮ.ಪ್ರಪಂಚದ ಉದ್ಧಾರಕ್ಕಾಗಿ ಭಗವಂತನೇಮಾಡಿರುವ ಈ ಕ್ರಿಯೆಯು ಶುಭವೇ ಆಗಿದೆ.ಅಲ್ಲದೆ ಆತ್ಮನಿಗೂ ಇದಕ್ಕೂ ಸಂಬಂಧವಿಲ್ಲ.ಶರೀರ ಶುದ್ಧಿಗಾಗಿ ಅಗತ್ಯವಾದ ಕ್ರಮವನ್ನುಅನುಸರಿಸಿ ಆತ್ಮೋನ್ನತಿಗಾಗಿ ಮಾಡಬೇಕಾದ ಕರ್ತವ್ಯಗಳನ್ನು ಮಾಡುವುದು ಸೂಕ್ತವೇ ಆಗಿದೆ.
ಸ್ತ್ರೀಯರು ಗಾಯತ್ರಿ ಮಂತ್ರ ಹೇಳುವುದರಿಂದ ಅವರಿಗೆ ತೊಂದರೆ ಯಾಗುತ್ತದೆ, ಅಂತಾರಲ್ಲಾ!
ಹೀಗೆ ಹೇಳುವುವವರಲ್ಲಿ ಯಾವ ಆಧಾರವೂ ಇಲ್ಲ. ವೇದದಲ್ಲಿ ಹೀಗೆ ಹೆಳಿಲ್ಲ. ಅಲ್ಲದೆ ಗಾಯತ್ರಿ ಮಂತ್ರ ಪಠಿಸಿದ್ದರಿಂದ ಸ್ತ್ರೀಯರಿಗೆತೊಂದರೆಯಾದ ಒಂದು ನಿದರ್ಶನವೂ ಇದುವರೆಗೆ ಕಂಡಿಲ್ಲ. ಇದೆಲ್ಲಾ ಅಪಪ್ರಚಾರ.ಅಷ್ಟೇ ಅಲ್ಲ, ಅದರ ಬದಲಿಗೆ ನೂರಾರುಹೆಣ್ಣುಮಕ್ಕಳಿಗೆ ಉಪನಯನ ಸಂಸ್ಕಾರ ಮಾಡಿಸಿ ನಿತ್ಯವೂ ಗಾಯತ್ರಿ ಪಠಿಸುತ್ತಾ ಆನಂದವಾಗಿರುವ ಹೆಣ್ಣು ಮಕ್ಕಳ ದೊಡ್ದಸಂಖ್ಯೆಯನ್ನು ನಾವೇ ತಯಾರು ಮಾಡಿದ್ದೇವೆ.ಅವರ್ಯಾರಿಗೂ ಗಾಯತ್ರಿ ಮಂತ್ರ ಹೇಳಿದ್ದರಿಂದ ತಮ್ಮ ಆರೋಗ್ಯಕೆಟ್ಟಿತೆಂಬ ಒಂದುಉಧಾಹರಣೆಯೂ ಇಲ್ಲ, ಬದಲಿಗೆ ಉತ್ತಮ ಆರೋಗ್ಯ ಪಡೆದು ಆನಂದವಾದ ಜೀವನಮಾಡಲು ಇದರಿಂದ ಅನುಕೂಲ ವಾಗಿದೆಎಂದು ಅಭಿಮಾನದಿಂದ ಹೇಳುವ ನೂರಾರು ಸ್ತ್ರೀಯರಿದ್ದಾರೆ.ಆದ್ದರಿಂದ ಆಧಾರವಿಲ್ಲದ ಮಾತುಗಳಿಗೆ ಕಿವಿಗೊಡದೆ ಸತ್ಯದಹಾದಿಯಲ್ಲಿ ಸಾಗುವ ಧೈರ್ಯವನ್ನು ಮಾಡಬೇಕು.ವೇದದ ಅಧ್ಯಯನ-ಅಧ್ಯಾಪನ ಮಾಡುತ್ತಾ ಸತ್ಯದ ಹಾದಿಯಲ್ಲಿ ನಡೆಯುತ್ತಾ ಅಂತೆಕಂತೆಗಳಿಗೆ ಕಿವಿಗೊಡದೆ ಧೈರ್ಯವಾಗಿ ವೇದದಲ್ಲಿ ಹೇಳಿರುವಂತೆ ನಡೆಯುವುದು ಬ್ರಾಹ್ಮಣನ ಕರ್ತವ್ಯವಾಗಿದೆ.
ಸ್ತ್ರೀಯರಿಗೆ ಉಪನಯನ ಸಂಸ್ಕಾರವನ್ನು ಮಾಡಿಸುವಿರಾ?
ಉಪನಯನ ಸಂಸ್ಕಾರ ಪಡೆಯುವ ಇಚ್ಛೆ ವ್ಯಕ್ತಪಡಿಸುವ ಯಾವುದೇ ಸ್ತ್ರೀಯರಿಗೆ ಅವರ ವಯಸ್ಸಿನ ಭೇದವಿಲ್ಲದೆ ಉಪನಯನಸಂಸ್ಕಾರವನ್ನು ಉಚಿತವಾಗಿ ಮಾಡಿಸಲು ನಾನು ಸಿದ್ಧ.
ನೀವೇನೋ ಅನೇಕ ಆಧಾರಗಳನ್ನು ಕೊಟ್ಟು ಹೀಗೆಲ್ಲಾ ಹೇಳ್ತೀರಿ, ಆದರೆ ಅನೂಚಾನವಾಗಿ ನಡೆಸಿಕೊಂಡು ಬಂದಿರುವ ಆಚರಣೆಗಳು?

ಆಚರಣೆಗಳಲ್ಲಿ ದೋಷವಿದ್ದರೆ ಬಿಡಬೇಕು. ನಮಗಿರುವ ಆಯ್ಕೆ ಎರಡೇ. ವೇದದಲ್ಲಿರುವ ಸತ್ಯವಾದ ವಿಚಾರವನ್ನು ಒಪ್ಪಿ ನಡೆಯಬೇಕು, ಅಥವಾ ದೋಷವಿದ್ದರೂ ಪರವಾಗಿಲ್ಲ, ನಮ್ಮ ಆಚರಣೆಗಳನ್ನು ಬಿಡಲು ಸಾಧ್ಯವಿಲ್ಲವೆಂದಾದರೆ ವೇದ ವಿರೋಧ ವಿಚಾರಗಳಂತೆ ನಡೆಯಬಹುದು ಆದರೆ ಅದರಿಂದ ಪ್ರಯೋಜನವಂತೂ ಇಲ್ಲ. ದೋಷವಿರುವ ಆಚರಣೆಗಳನ್ನು ಬಿಟ್ಟು ವೇದದಲ್ಲಿರುವಂತೆ ಸತ್ಯವಾದ ಮಾರ್ಗದಲ್ಲಿ ಸಾಗಿದಾಗ ಸಮಾಜವು ನಮ್ಮನ್ನು ಬಹಿಷ್ಕರಿಸಲು ಸಾಧ್ಯವಿಲ್ಲ. ಅದಕ್ಕೆ ನಾನೇ ಸ್ವತ: ಉಧಾಹರಣೆಯಾಗಿದ್ದೀನಿ. ನನ್ನ ಮಗಳಿಗೆ ಉಪನಯನ ಸಂಸ್ಕಾರವನ್ನು ನಾನು ಮಾಡಿದ್ದರೂ ಸಮಾಜವು ನನ್ನನ್ನು ಬಹಿಷರಿಸಿಲ್ಲ. ದೋಷವಿರುವ ಆಚರಣೆಗಳನ್ನು ಬಿಟ್ಟರೆ ಎಲ್ಲಿ ಸಮಾಜವು ನಮ್ಮನ್ನು ಬಹಿಷ್ಕರಿಸೀತೋ ಎಂಬ ಭಯ ಇದ್ದರೆ ಅದನ್ನು ಮೊದಲು ಬಿಡಿ. ಕಾರಣ ನಮ್ಮ ಬೆಂಬಲಕ್ಕೆ ವೇದವೇ ಇದೆ. ಆದರೆ ದೋಷವಿರುವ ಆಚರಣೆಗಳನ್ನು ಆಚರಿಸುವವರಿಗೆ ವೇದದ ಬೆಂಬಲವೂ ಇಲ್ಲ, ಭಗವಂತನ ಬೆಂಬಲವೂ ಇರುವುದಿಲ್ಲ. ನಮ್ಮ ನಡೆ ಹೀಗೆ ಕಕಠೋರವಾಗಿಯೇ ಸತ್ಯನಿಷ್ಥವಾಗಿರಬೇಕು, ಇಲ್ಲದಿದ್ದರೆ ನೂರು ಜನರು ಮಾಡಿದ ತಪ್ಪೇ ಸಮ್ಮತವಾಗಿಬಿಡುತ್ತದೆ.
ಬ್ರಾಹ್ಮಣೇತರರಿಗೆ ಉಪನಯನ ಸಂಸ್ಕಾರ ವಿದೆಯೇ?
ಹೌದು, ಬ್ರಾಹ್ಮಣೇತರರಿಗೂ ಉಪನಯನ ಸಂಸ್ಕಾರವಿದೆ. ಬ್ರಾಹ್ಮಣೇತರರಿಗೂ ವೇದಾಧ್ಯಯನ ಮಾಡುವ ಅಧಿಕಾರವಿದೆ.ಯಾರಿಗೆ ವೇದಾಧ್ಯಯನ ಮಾಡುವ ಆಸೆ ಇದೆ ಅವರಿಗೆ ಉಪನಯನ ಸಂಸ್ಕಾರವನ್ನು ಮಾಡಿಸಿ ವೇದಾಧ್ಯಯನಕ್ಕೆ ಅವಕಾಶವನ್ನು ಕಲ್ಪಿಸಬೇಕು.
ಉಪನಯನವನ್ನು ಯಾವ ವಯಸ್ಸಿನಲ್ಲಿ ಮಾಡಬೇಕು?
ಎಂಟನೆಯ ವಯಸ್ಸಿನಲ್ಲಿ ಮಾಡಬೇಕೆಂಬುದು ಸೂಕ್ತ, ಆದರೆ ಈಗಾಗಲೇ ಆ ವಯಸ್ಸು ದಾಟಿದೆ ,ಎಂದರೆ ಉಪನಯನವನ್ನು ಮಾಡಿಕೊಳ್ಳಬಾರದೆಂದು ಅರ್ಥವಲ್ಲ. ಸತ್ಯದ ದೀಕ್ಷೆ ಪಡೇಯಲು ವಯಸ್ಸು ಅಡ್ಡಿಬಾರದು. ಪಡೆಯದೇ ಇರುವುದಕ್ಕಿಂತ ನಿಧಾನವಾಗಿಯಾದರೂ ಉಪನಯನ ಸಂಸ್ಕಾರ ಪಡೆಯುವುದು ಒಳ್ಳೆಯದು.

Wednesday, October 6, 2010

ಖಾಲಿ ಮತ್ತು ಪೂರ್ಣ

ಖಾಲಿ ಮತ್ತು ಪೂರ್ಣ :
ಅಕ್ಕನ ಜೊತೆ ಹೀಗೇ ಮಾತಾಡ್ತಾ ಕೂತಿದ್ದೆ. ಟೀಪಾಯ್ ಮೇಲೆ ಒಂದು ಲಗ್ನಪತ್ರಿಕೆಕವರ್ ಕಣ್ಣಿಗೆ ಬಿತ್ತು. ಅಕ್ಕ ಕವರ್ ತೆರೆದರೆ ಒಳಗೆಖಾಲಿ.
-" ಇದೇನೋ ಖಾಲಿ ಇದೆಯಲ್ಲಾ?..ಅಕ್ಕ ಕೇಳಿದ್ರು.
-ಯಾವ್ದು ಖಾಲಿ? ಯಾವುದು ತುಂಬಿದೆ? ..ನನಗರಿವಿಲ್ಲದೆ ನನ್ನ ಮನಸ್ಸು ಏನೇನೋ ಹುಡುಕ್ತಾ ಇದೆ, ಖಾಲಿ ಇದೆ ಎಂಬುದು ಹೌದಾದರೆ ನನ್ನೊಳಗೆ ಪ್ರೀತಿ-ಪ್ರೇಮ-ಮಮಕಾರ-ಕರುಣೆ ಇಂತಾ ಸದ್ಗುಣಗಳಿಲ್ಲದೆ ಖಾಲಿಯಾಗಿದೆ ಎಂದು ಭಾವಿಸಲೇ? ಅಥವಾಪೂರ್ಣವಿದೆ ಎಂದರೆ ಕಾಮ,ಕ್ರೋಧ,ಲೋಭ,ಮೋಹ, ಮದ, ಮತ್ಸರ -ಎಂಬ ಅರಿಷಡ್ವರ್ಗಗಳಿಂದ ತುಂಬಿದ್ದೇನೆ ಎಂದೇ? ಮನಸ್ಸುಏನೇನೋ ಚಿಂತಿಸಿತು. ಮನುಷ್ಯ ಯಾವುದನ್ನು ಖಾಲಿ ಮಾಡಬೇಕೋ ಅದನ್ನು ತುಂಬಿಕೊಂಡಿರ್ತಾನೆ, ಯಾವುದನ್ನುತುಂಬಿಕೊಂಡಿರಬೇಕೋ ಅದನ್ನು ತುಂಬದೆ ಖಾಲಿಯಾಗಿರ್ತಾನೆ! ಆಲ್ವಾ? ಯೋಚನೆ ಮಾಡಿ, ಯಾವುದನ್ನು ತುಂಬಿಕೊಳ್ಳಬೇಕು? ಯಾವುದನ್ನು ಖಾಲಿ ಮಾಡಬೇಕೂ ಅನ್ನೋದನ್ನು ಸ್ವಲ್ಪ ಯೋಚಿಸಿ, ತನ್ನ ಆತ್ಮಸಾಕ್ಷಿಗನುಗುಣವಾಗಿ ನಡೆದುಕೊಂಡರೆ ಒಳ್ಳೇದುಅಲ್ವೇ?
ಚಿನ್ನದಂತಾ ಮಕ್ಕಳು:
ಒಬ್ಬರು ಹಿರಿಯ ಸಮಾಜ ಸೇವಕರು ಬೆಂಗಳೂರಿನಲ್ಲಿ ಒಂದು ಮನೆಗೆ ಹೋಗಿದ್ದರು. ರಾತ್ರಿ ಅವರ ಮನೆಯಲ್ಲಿ ಮಲಗಿದ್ದು ಬೆಳಿಗ್ಗೆಎದ್ದು ಮಾಮೂಲಿನಂತೆ ಬೆಳಗಿನ ವಾಕ್ ಹೊರಟು ೮.೩೦ ಕ್ಕೆ ಮನೆಗೆ ಹಿಂದಿರುಗುತ್ತಾರೆ. ಮನೆಯಮುಂದೆ ಸಾರಿಸಿ ರಂಗವಲ್ಲಿಇಟ್ಟಿದೆ. ಮನೆಯೊಳಗೆ ಕಾಲಿಡುತ್ತಾರೆ. ಮನೆಯೆಲ್ಲಾ ಅಚ್ಚುಕಟ್ಟಾಗಿದೆ. ಇವರಿಗೆ ಆಶ್ಚರ್ಯ! ಅಲ್ಲಾ, ಮನೆಯಲ್ಲಿ ಇಬ್ಬರು ಅನಾರೋಗ್ಯಪೀಡಿತ ಪತಿ ಪತ್ನಿಯರು. ಇಬ್ಬರೂ ಹಾಸಿಗಿ ಹಿಡಿದು ಮಲಗಿದ್ದಾರೆ. ಮನೆಯಲ್ಲಿ ಯಾರೂ ಇಲ್ಲ. ಮನೆ ಮಾತ್ರ ಅಚ್ಚುಕಟ್ಟಾಗಿದೆ.
ಈ ಮಹನೀಯರು ಮನೆಯೊಡತಿಯನ್ನು ಕೇಳುತ್ತಾರೆ. "ಅಮ್ಮಾ ಕೆಲಸದವರು ಬಂದು ಕೆಲಸ ಮಾಡಿ ಹೊಗಿಯಾಯ್ತಾ?
-" ಇಲ್ಲಾ, ನಮ್ಮ ಮನೆಯಲ್ಲಿ ಕೆಲಸದವರೇ ಇಲ್ಲ."
- ಹಾಗಾದರೆ ಮನೆ ಕೆಲಸಗಳನ್ನೆಲ್ಲಾ ಮಾಡುವವರು ಯಾರು? ನಿಮ್ಮ ಇಬ್ಬರು ಗಂಡುಮಕ್ಕಳು ಬಿ ಇ . ಓದುತ್ತಾ ಇದ್ದಾರೆ ಅಲ್ವೇ!
-ಇಬ್ಬರೂ ಬಿ ಇ ಓದುತ್ತಾ ಇದ್ದಾರೆ ನಿಜ. ಆದರೆ ಮನೆಯ ಕೆಲಸಗಳನ್ನೆಲ್ಲಾ ಅವರೇ ಮಾಡ್ತಾರೆ. ದೊಡ್ಡೋನು [ರಾಮು] ಅವರಪ್ಪನಿಗೆ ಸ್ನಾನ ಮಾಡಿಸಿ ಅವರನ್ನು ಮಲಗಿಸಿ ಅಡಿಗೆ ಕೆಲಸ ನೋಡಿಕೊಳ್ತಾನೆ. ಚಿಕ್ಕೋನು [ಕಿಟ್ಟಿ] ನನಗೆ ಸ್ನಾನ ಮಾಡಿಸಿ,ನನ್ನ ಸೇವೆ ಎಲ್ಲಾಮಾಡಿ ಬಟ್ಟೆ ಎಲ್ಲಾ ಒಗೆದು , ಮನೆಯನ್ನು ಓರಣ ಮಾಡ್ತಾನೆ. ಅಡಿಗೆ ಎಲ್ಲಾ ಮಾಡಿಟ್ಟು ತಮ್ಮ ಊಟ ಬಾಕ್ಸ್ ಗೆ ಹಾಕಿಕೊಂಡು , ನಮಗೆ ನಮ್ಮ ಮಂಚದ ಹತ್ತಿರವೇ ಊಟ ಇಟ್ಟು , ಆದಷ್ಟೂ ಸೇವೆ ಮಾಡಿ ಕಾಲೇಜಿಗೆ ಹೋಗ್ತಾರೆ. ದೊಡ್ಡೋನುದ್ದು ಈ ವರ್ಷಫೈನಲ್ ಇಯರ್, ಯಾವುದೋ ಕಂಪನಿಗೆ ಸೆಲೆಕ್ಟ್ ಆಗಿದ್ದಾನಂತೆ. ನಮ್ಮ್ ಅದೃಷ್ಟಕ್ಕೆ ಬೆಂಗಳೂರಿನಲ್ಲೇ ಕೆಲಸ ಸಿಕ್ಕಿದೆ. ಇನ್ನೊಂದುಆರು ತಿಂಗಳು ಅವನು ಕಷ್ಟ ಪಟ್ಟರೆ ಆಯ್ತು, ಆಮೇಲೆ ಹೇಗಾದರೂ ಮಾಡಿ ಯಾರನ್ನಾದರೂ ಕೆಲಸಕ್ಕೆ ಇಟ್ಟುಕೊಳ್ಳಬೇಕು. ಮಕ್ಕಳಿಗೆಎಷ್ಟೂ ಅಂತ ಕಷ್ಟ ಕೊಡೋದು!
ಮಾತು ಮುಗಿಯುವಾಗ ಇಬ್ಬರ ಕಣ್ಣಲ್ಲೂ ನೀರು ತುಂಬಿತ್ತು. ಯಜಮಾನರು ಹೇಳಿದ್ರು " ಭಗವಂತ ನಮಗೆ ಅನಾರೋಗ್ಯ ಕೊಟ್ಟರೂಒಳ್ಳೆ ಮಕ್ಕಳು ಕೊಟ್ಟ.
ಕಳೆದವಾರ ಹಾಸನವಾಣಿಯ ಭಾನುವಾರದ ಸಂಚಿಕೆಯಲ್ಲಿ ಮಿತ್ರ ಬೇಲೂರು ನವಾಬ್ ಇದೆ ವಿಚಾರದಲ್ಲಿ ಮನಮುಟ್ಟುವಂತೆಬರೆದಿದ್ದಾರೆ. ಸಾಮಾನ್ಯವಾಗಿ ಮಕ್ಕಳು ದೊಡ್ದೊರಾಗಿ ಒಂದು ಸ್ಥಾನಕ್ಕೆ ಬಂದಾಗ ಅವರಿಗೆ ಅಪ್ಪ-ಅಮ್ಮ ಮರೆತೆ ಹೋಗಿರುತ್ತೆ. ಅನೇಕ ವೇಳೆ ವೃದ್ಧಾಶ್ರಮವೇ ಅವರಿಗೆ ಗತಿ ಯಾಗಿರುತ್ತೆ. ಇಂತಾ ದಿನಗಳಲ್ಲಿ ನಮ್ಮ ರಾಮು-ಕಿಟ್ಟಿಯನ್ತೋರು ಕೂಡ ಇದ್ದಾರೆಅಂದ್ರೆ ಆಶ್ಚರ್ಯ ಆಗುತ್ತೆ ಆಲ್ವಾ? ರಾಮು-ಕಿಟ್ಟಿಯನ್ತೋರ ಸಂಖ್ಯೆ ಜಾಸ್ತಿಯಾಗಲೀ ಅಂತಾ ಭಗವಂತನಲ್ಲಿ ಪ್ರಾರ್ಥಿಸೋಣ ಅಲ್ವೇ?
ನಿಮಗೇನು ಅನ್ನಿಸುತ್ತೆ ತಿಳಿಸ್ತೀರಾ?
ಹರಿಹರಪುರಶ್ರೀಧರ್

Tuesday, October 5, 2010

ದಶ ಶ್ಲೋಕೀ

ಚಾತುರ್ವರ್ಣ- ಒಂದು ವಿಶ್ಲೇಷಣೆ ಭಾಗ-೨


ವೇದೋಕ್ತ ಜೀವನ ಪಥ-ಉಪನ್ಯಾಸ ಮಾಲಿಕೆ -



ಮಾನವರೆಲ್ಲಾ ಸಮಾನರು ಹೇಗೆ? ಎಂಬುದಕ್ಕೆ ಸೂತ್ರರೂಪದಲ್ಲಿ ಕೆಲವು ವಿಚಾರಗಳನ್ನು ನೋಡೋಣ.ಆಗ ನಮಗೆ ವಿಚಾರವು ಇನ್ನೂ ಸ್ಪಷ್ಟವಾಗಿ ಅರ್ವಾಗುತ್ತದೆ. ಸಮಾಜವನ್ನು ನಾಷಮಾಡುವ ನಾಲ್ಕು ರಾಕ್ಷಸೀ ಶಕ್ತಿಗಳಿವೆ.ಮೊದಲನೆಯದು ಅಜ್ಞಾನ.ಯಾವ ಸಮಾಜದಲ್ಲಿ ಅಜ್ಞಾನವಿರುತ್ತದೆ, ಸಮಾಜದ ಏಳಿಗೆಯಾಗುವುದಿಲ್ಲ.ಕೇವಲ ಭಾರತೀಯ ಸಮಾಜ ಅಥವಾ ಹಿಂದು ಸಮಾಜ ಎಂದೇನೂ ಅಲ್ಲ. ಪ್ರಪಂಚದಲ್ಲಿ ಯಾವ ಸಮಾಜದಲ್ಲಿಯಾಗಲೀ ಅಜ್ಞಾನವಿದ್ದರೆ ಸಮಾಜದ ಏಳಿಗೆ ಸಾಧ್ಯವಿಲ್ಲ.ಹಾಗಾದರೆ ಒಂದು ಸಮಾಜದ ಏಳಿಗೆಯಾಗಬೇಕಾದರೆ ಅದರಲ್ಲಿರುವ ಅಜ್ಞಾನ ನಾಶವಾಗಬೇಕು.ಎರಡನೆಯ ಶತ್ರು ಅಂದರೆ ಅನ್ಯಾಯ, ಅಧರ್ಮ. ಯಾವ ಸಮಾಜದಲ್ಲಿ ಅನ್ಯಾಯ, ಅಧರ್ಮವು ಇರುತ್ತದೆ, ಸಮಾಜದಲ್ಲಿ ಶಾಂತಿ, ನೆಮ್ಮದಿ ಇರಲು ಸಾಧ್ಯವಿಲ್ಲ. ಅನ್ಯಾಯದ ಕಾರಣ ಶೋಷಣೆಗೊಳಗಾದವರು ಯಾವಾಗಲೂ ಆಕ್ರೋಶಗೊಂಡಿದ್ದಾಗ ಉಳಿದ ಸಮಾಜದಲ್ಲಿ ನೆಮ್ಮದಿಯಾದರೂ ಎಲ್ಲಿಂದ ಬರಬೇಕಲ್ಲವೇ?ಇದು ಸಹಜ. ಸಮಾಜದಲ್ಲಿ ಅಧರ್ಮ-ಅನ್ಯಾಯ ನೆಲೆಗೊಂಡಿದ್ದಾಗ ಅನ್ಯಾಯಕ್ಕೆ , ಶೋಷಣೆಗೆ ಬಲಿಯಾದವರು ಸಹಜವಾಗಿ ಆಕ್ರೋಶಗೊಂಡಿರುತ್ತಾರೆ. ಇದು ಸಮಾಜವನ್ನು ಅಶಾಂತಿಗೆ ತಳ್ಳುವ ಎರಡನೆಯ ಶತ್ರು. ಸಮಾಜದ ಮೂರನೆಯ ಶತ್ರು "ಅಭಾವ". ಸಮಾಜದಲ್ಲಿ ಹೊಟ್ಟೆಗೆ ತಿನ್ನಲು ಕೆಲವರಿಗೆ ಇಲ್ಲ, ಕೆಲವರಿಗೆ ತಿಂದು ಹೆಚ್ಚಾಗಿ ಚೆಲ್ಲುವಷ್ಟಿದ್ದರೆ, ಸಂಪತ್ತಿನಲ್ಲಿ ಅಸಮತೋಲನದಿಂದ ಅಭಾವ ಸೃಷ್ಟಿಯಾಗುತ್ತದೆ. ಯಾವ ಸಮಾಜದಲ್ಲಿ ಪ್ರಕೃತಿಯ ಸಂಪತ್ತು ಉಳಿಸಲ್ಪಡುತ್ತದೆ, ಪ್ರಕೃತಿಯ ಸಂಪತ್ತು ಬೆಳಸಲ್ಪಡುತ್ತದೆ, ಪ್ರಕೃತಿಯ ಸಂಪತ್ತು ಸಮಾನವಾಗಿ ಹಂಚಲ್ಪಡುತ್ತದೆ, ಸಮಾಜದಲ್ಲಿ ಶಾಂತಿ-ನೆಮ್ಮದಿ ಇರುತ್ತದೆ.ಅಂದರೆ ಆಸಮಾಜದಲ್ಲಿ ಅಭಾವವು ಇರುವುದಿಲ್ಲ. ಸಮಾಜದ ನಾಲ್ಕನೆಯ ಶತ್ರು "ಆಲಸ್ಯ" ಅಥವಾ ಸೋಮಾರಿತನ. ಯಾವ ಸಮಾಜದಲ್ಲಿ ಸೋಮಾರಿಗಳೇ ಹೆಚ್ಚು ಇರುತ್ತಾರೆ, ಸಮಾಜದ ಏಳಿಗೆಯಗುವುದಿಲ್ಲ. ನಾಲ್ಕು ಜನರು ದುಡಿದು ತಿನ್ನುವವರು ನಾನೂರು ಜನರಾದರೆ! ಅದು ಏಳಿಗೆಯಾಗಲು ಸಾಧ್ಯವೇ? ಯಾವ ಸಮಾಜದಲ್ಲಿ ಶ್ರಮಜೀವಿಗಳಿರುತ್ತಾರೆ, ಕಷ್ಟಪಟ್ಟು ದುಡಿಯುತ್ತಾರೆ, ಸಮಾಜದ ಏಳಿಗೆಯು ಸಹಜವಾಗಿಯೇ ಆಗುತ್ತದೆ.
ಹೀಗೆ ಅಜ್ಞಾನದ ವಿರುದ್ಧವಾಗಿ ಹೋರಾಡುವವರೆಲ್ಲರೂ ಬ್ರಾಹ್ಮಣರು.ಕಾರಣ ಇವರು ಸಮಾಜವನ್ನು ಸುಸ್ಥಿತಿಯಲ್ಲಿಡುವ ಕರ್ತವ್ಯವನ್ನು ನಿರ್ವಹಿಸುತ್ತಾರೆ. ಸಮಾಜವನ್ನು ಸುಸ್ಥಿತಿಯಲ್ಲಿಡಲು ಯಾರ್ಯಾರು ಅನ್ಯಾಯ-ಅಧರ್ಮಗಳ ವಿರುದ್ಧ ಹೋರಾಡುತ್ತಾರೋ ಅವರು ಕ್ಷತ್ರಿಯರು. ಹಾಗೆಯೇ ಸಮಾಜದ ಸುಸ್ಥಿತಿಗಾಗಿ ಪ್ರಕೃತಿ ಸಂಪತ್ತನ್ನು ಉಳಿಸಿ, ಬೆಳಸಿ, ಹಂಚುವರೋ ಅವರು ವೈಶ್ಯರು. ಹಾಗೆಯೇ ಸಮಾಜದ ಸುಸ್ಥಿತಿಗಾಗಿ ಯಾರು ಆಲಸ್ಯವನ್ನು ಬಿಟ್ಟು ಶ್ರಮವಹಿಸುವರೋ ಅವರು ಶೂದ್ರರು.
ಎಲ್ಲದರಲ್ಲೂ ಸಾಮಾನ್ಯವಾದ ಮತ್ತು ಸಮಾನವಾದ ವಿಷಯವೆಂದರೆ ಸಮಾಜದ ಸುಸ್ಥಿತಿ. ಎಲ್ಲರೂ ಕರ್ತವ್ಯವನ್ನು ನಿರ್ವಹಿಸುವುದು ಸಮಾಜದ ಸುಸ್ಥಿತಿಗಾಗಿ.ಬ್ರಾಹ್ಮಣ, ಕ್ಷತ್ರಿಯ , ವೈಶ್ಯ ಮತ್ತು ಶೂದ್ರ- ಇವರೆಲ್ಲರ ಸಮಾನ ಗುರಿ ಎಂದರೆ ಸಮಾಜವನ್ನು ಸುಸ್ಥಿತಿಯಲ್ಲಿಡುವುದು. ನಾಲ್ಕೂ ವರ್ಣಗಳದ್ದೂ ಸಮಾಜದ ಸುಸ್ಥಿಯೇ ುರಿಯಾದಮೇಲೆ ಮೇಲ್ಯಾರು? ಕೀಳ್ಯಾರು? ಯಾರೂ ಮೇಲಲ್ಲ, ಯಾರೂ ಕೀಳಲ್ಲ. ಎಲ್ಲರ ಸೇವೆಯೂ ಸಮಾಜಕ್ಕೆ ಅಗತ್ಯ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಅವರವರ ಕೆಲಸದಿಂದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರೆಂದು ಗುರುತಿಸಲ್ಪಟ್ಟರೇ ಹೊರತು ಹುಟ್ಟಿಗೂ ಜಾತಿಗೂ ಸಂಬಂಧವಿಲ್ಲ.ಇದನ್ನೇ ಗುಣಕರ್ಮ ವಿಭಾಗಶ: ಎನ್ನುತ್ತಾರೆ. ಚಾತುರ್ವಣ್ಯಾ ಮಯಾ ಸೃಷ್ಟಂ ಗುಣ ಕರ್ಮ ವಿಭಾಗಶ: ಎಂದು ಶ್ರೀ ಕೃಷ್ಣನು ಸ್ಪಷ್ಟವಾಗಿ ಹೇಳಿದ್ದಾನೆ. ಗುಣ ಕರ್ಮ ವಿಭಾಗವೇ ಹೊರತು ಇಲ್ಲಿ ಅಪ್ಪ-ಅಮ್ಮ ಯಾರೆಂದು ಕೇಳಿಲ್ಲ. ಈಗ ಬ್ರಾಹ್ಮಣರೆಂದು ಕರೆಸಿಕೊಳ್ಳುವವರು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು . ಬ್ರಾಹ್ಮಣನ ಗುಣ-ಕರ್ಮಗಳನ್ನು ತಾನು ಅನುಸರಿಸುತ್ತಾ ಇದ್ದೇನೆಯೇ? ಇಲ್ಲವೇ ಎಂದು ಆತ್ಮಾವಲೋಕನ ಮಾಡಿಕೊಳ್ಳ ಬೇಕು. ಕೇವಲ ಬ್ರಾಹ್ಮಣ ಅಪ್ಪ-ಅಮ್ಮನ ಮಕ್ಕಳಾಗಿ ಹುಟ್ಟಿದ ಮಾತ್ರಕ್ಕೆ ತಾನು ಬ್ರಾಹ್ಮಣನೆಂದು ಕರೆದುಕೊಂಡರೆ ಎಷ್ಟು ಮೂರ್ಖತನವಾಗುತ್ತದೆಂದರೆ ನಮ್ಮ ಅಪ್ಪ ಡಾಕ್ಟರು ಅದರಿಂದ ನಾನೂ ಡಾಕ್ಟರೆಂದರೆ ಎಷ್ಟು ಮೂರ್ಖತನದ ಮಾತಾಗುತ್ತದೋ ಇದೂ ಹಾಗೆಯೇ. ಬ್ರಾಹ್ಮಣನ ಗುಣಕರ್ಮಗಳನ್ನು ಹೊಂದಿದ್ದವ ಯಾರೇ ಆದರೂ ಆತ ಬ್ರಾಹ್ಮಣ. ಅಲ್ಲದೆ ಬ್ರಾಹ್ಮಣನ ಗುಣಕರ್ಮಗಳನ್ನು ಹೊಂದಿರದ ವ್ಯಕ್ತಿ ಬ್ರಾಹ್ಮಣನ ೊಟ್ಟೆಯಲ್ಲಿ ಹುಟ್ಟಿದ್ದರೂ ಅವನು ಬ್ರಾಹ್ಮಣನಾಗಲಾರ. ಡಾಕ್ಟರ ಮಗ ಡಾಕ್ಟರಾಗಬೇಕಾದರೆ ಅವನು ಎಮ್.ಬಿ.ಬಿ.ಎಸ್ ಓದಿದರೆ ಮಾತ್ರ ಸಾಧ್ಯ. ಇಲ್ಲವಾದರೆ ಅವನು ಡಾಕ್ಟರಾಗಲು ಸಾಧ್ಯವೇ? ವಿಚಾರದಲ್ಲೂ ಸಹ ಅದೇ ಸೂತ್ರ ಅನ್ವಯವಾಗುತ್ತದೆ. ನನ್ನ ಅಪ್ಪ ಇಂಜಿನಿಯರಾಗಿದ್ದರೂ ಸಹ ನಾನು ಇಂಜಿನಿಯರಿಂಗ್ ಓದಿದಾಗ ಮಾತ್ರ ನಾನು ಒಬ್ಬ ಇಂಜಿನಿಯರ್. ನಮ್ಮಪ್ಪ ಬ್ರಾಹ್ಮಣನಾಗಿದ್ದರೂ ಕೂಡ ಬ್ರಾಹ್ಮಣನ ಗುಣ-ಕರ್ಮ-ಸ್ವಭಾವಗಳನ್ನು ನಾನು ಪಡೆದುಕೊಂಡರೆ ಮಾತ್ರ ನಾನು ಬ್ರಾಹ್ಮಣನಾಗಬಲ್ಲೆ. ಈಗ ಆತ್ಮ ವಿಮರ್ಶೆ ಮಾಡಿಕೊಳ್ಳುವ ಕಾಲ ಬಂದಿದೆ, ನಾನು ಬ್ರಾಹ್ಮಣನ ಗುಣ ಕರ್ಮ ಸ್ವಭಾವಗಳನ್ನು ಹೊಂದಿದ್ದೇನೆಯೇ? ಆಶ್ಚರ್ಯವಾಗಬಹುದು, ಈಗ ಬ್ರಾಹ್ಮಣರೆಂದು ಕರೆದುಕೊಳ್ಳುವವರಲ್ಲಿ ಪ್ರತಿಶತ ೯೦ ಕ್ಕಿಂತ ಹೆಚ್ಚು ಬ್ರಾಹ್ಮಣರೆಂದು ಕರೆದುಕೊಳ್ಳುವಂತಿಲ್ಲ.ಕಾರಣ ಅವರಲ್ಲಿ ಗುಣ ಕರ್ಮ ಸ್ವಭಾವಗಳಿಲ್ಲ.ಹಾಗಾಗಿ ಸಮಾಜದಲ್ಲಿ ಬ್ರಾಹ್ಮಣರೆಂದು ಕರೆಸಿಕೊಳ್ಳುವವರು ಸಮಾಜದ ಇತರ ವರ್ಗಗಳ ನಿಂದನೆಗೆ ಗುರಿಯಾಗಿದ್ದಾರೆ. ಇದರಿಂದ ಕೋಪಗೊಳ್ಳುವ ಬದಲು ಸಮಾಜದ ನಿಂದನೆಗೆ ಕಾರಣವನ್ನು ಹುಡುಕಿ ನಿಜವಾದ ಬ್ರಾಹ್ಮಣ್ಯವನ್ನೇಕೆ ಅನುಸರಿಸಬಾರದು? ವೇದಗಳ ಕಾಲದಲ್ಲಿ ನಿಜವಾದ ಬ್ರಾಹ್ಮಣ್ಯಕ್ಕೆ ಗೌರವವಿತ್ತು. ಈಗಲೂ ಗೌರವ ಸಿಗಬೇಕಾದರೆ ನಿಜವಾದ ಬ್ರಾಹ್ಮಣ್ಯವನ್ನು ಉಳಿಸಿಕೊಳ್ಳಬೇಕು. ಇಂದು ಪರಿಸ್ಥಿತಿ ಹೇಗಿದೆ? ಬ್ರಾಹ್ಮಣ ನೆಂದು ಕರೆಸಿಕೊಳ್ಳುವ ವ್ಯಕ್ತಿ ದುರ್ವ್ಯಸನಕ್ಕೆ ತುತ್ತಾಗಿರುವ ಉಧಾಹರಣೆಗಳಿವೆ. ಅವನಿಗೆ ಗೌರವ ಬರಬೇಕೆಂದರೆ ಹೇಗೆ ಬಂದೀತು?ಆದ್ದರಿಂದ ಬ್ರಾಹ್ಮಣನ ಗುಣಕರ್ಮ ಸ್ವಭಾವ ಗಳನ್ನರಿತು ಬಾಳಿದರೆ ಅವನು ಬ್ರಾಹ್ಮಣನೆಂದು ಕರೆಸಿಕೊಳ್ಳುತ್ತಾನಾದರೂ ಅವನು ಮಾತ್ರವೇ ಶ್ರೇಷ್ಠನೆನಿಸುವುದಿಲ್ಲ.ಇದನ್ನು ಅರ್ಥಮಾಡಿಕೊಳ್ಳಬೇಕು. ಬ್ರಾಹ್ಮಣನ ಗುಣಕರ್ಮಸ್ವಭಾವಗಳನ್ನು ಅರಿತು ಬಾಳಿದಾಗ ಬ್ರಾಹ್ಮಣನಿಗೆ ಸಮಾಜದಲ್ಲಿ ಸಿಗಬೇಕಾದ ಗೌರವ ಸಿಗುತ್ತದೆ. ಬ್ರಾಹ್ಮಣರಿಗೆ ಅತೀ ಅಗತ್ಯವಾಗಿ ಬೇಕಾಗಿರುವ ಅಂಶಗಳೆಂದರೆ ಅಧ್ಯಯನ ಮತ್ತು ಅಧ್ಯಾಪನ., ಯಜನ-ಯಾಜನ, ದಾನ, ಪ್ರತಿಗ್ರಹ. ಅಧ್ಯಯನ ಮತ್ತು ಅಧ್ಯಾಪನ,ಇದು ಬ್ರಾಹ್ಮಣನ ಕರ್ಮ. ಬ್ರಾಹ್ಮಣನು ವೇದಾಧ್ಯಯನವನ್ನು ಮಾಡಬೇಕು ಮತ್ತು ಅದರ ಪ್ರಸಾರ ಮಾಡಬೇಕು. ಬ್ರಾಹ್ಮಣನೆಂದು ಕರೆಸುಕೊಳ್ಳುವವನು ಈಗ ಆತ್ಮ ವಿಮರ್ಶೆಮಾಡಿಕೊಳ್ಳಬೇಕು, ನಾನು ವೇದಾಧ್ಯಯನ ಮಾಡುತ್ತಿದ್ದೇನೆಯೇ? ಇಂತಾ ವಿಚಾರ ಮಾಡುವಾಗ ಬ್ರಾಹ್ಮಣ ಮಹಿಳೆಯರಲ್ಲಿ ಪ್ರಶ್ನೆ ಉದ್ಭವವಾಗುತ್ತದೆ, ಮಹಿಳೆಯರು ವೇದಾಧ್ಯಯನ ಮಾಡಬಹುದೇ? ವೇದಾಧ್ಯಯನಕ್ಕೆ ಪುರುಷ-ಸ್ತ್ರೀ ಭೇದವಿಲ್ಲ.ಯಾವ ಶಾಸ್ತ್ರದಲ್ಲಾಗಲೀ ವೇದದಲ್ಲಾಗಲೀ ಸ್ತ್ರೀಯರು ವೇದಾಧ್ಯಯನ ಮಾಡಬಾರದೆಂದು ಎಲ್ಲೂ ಹೇಳಿಲ್ಲ. ಸ್ತ್ರೀ-ಪುರುಷ ನೆನ್ನುವುದು ಶರೀರ ಧರ್ಮ.ವೇದಾಧ್ಯಯನ ಇರುವುದು ಆತ್ಮೋನ್ನತಿಗಾಗಿ.ಆತ್ಮೋನ್ನತಿ ವಿಚಾರ ಮಾಡುವಾಗ ಲಿಂಗದ ವಿಚಾರ ಬರುವುದೇ ಇಲ್ಲ. ಆತ್ಮಕ್ಕೆ ಲಿಂಗವಿಲ್ಲ. ಅದೇನಿದ್ದರೂ ಶರೀರಕ್ಕೆ. ಶರೀರದ ಒಳಗಿರುವ ಚೇತನ ಶಕ್ತಿಗೆ ಲಿಂಗಭೇದವಿಲ್ಲ. ಆತ್ಮವು ಗಂಡು ಶರೀರದಲ್ಲಿದ್ದಾಗ ಗಂಡೆಂತಲೂ ಹೆಣ್ಣು ಶರೀರದಲ್ಲಿದ್ದಾಗ ಹೆಣ್ಣೆಂತಲೂ ಗುರುತಿಸಲ್ಪಡುತ್ತದೆಯೇ ಹೊರತು ಆತ್ಮಕ್ಕೆ ಲಿಂಗವಿಲ್ಲ. ||ತ್ವಂ ಸ್ತ್ರೀ ತ್ವಂ ಪುಮಾನಸಿ ತ್ವಂ ಕುಮಾರ ಉತವಾ ಕುಮಾರೀ|| ಭಗವಂತನ ವಾಣಿ ಸ್ಪಷ್ಟವಾಗಿದೆ " ಹೇ ಜೀವಾತ್ಮ, ನೀನು ಸ್ತ್ರೀ ಆಗಿದ್ದೀಯೆ, ನೀನು ಪುರುಷನಾಗಿದ್ದೀಯೇ, ನೀನುಕುಮಾರನಾಗಿದ್ದೀಯೇ, ನೀನು ಕುಮಾರಿಯೂ ಆಗಿದ್ದೀಯೇ". ಅದು ಹೇಗೆಂದರೆ ಆತ್ಮವು ಗಂಡು ಶರೀರದಲ್ಲಿದ್ದಾಗ ಗಂಡು, ಹೆಣ್ಣು ಶರೀರದಲ್ಲಿದ್ದಾಗ ಹೆಣ್ಣು ಆಗಿರುತ್ತದೆ. ಶರೀರಕ್ಕೆ ಮಾತ್ರ ಲಿಂಗವಿದೆಯೇ ಹೊರತು ಆತ್ಮಕ್ಕೆ ಲಿಂಗವಿಲ್ಲ. ಆದ್ದರಿಂದ ಆತ್ಮೋದ್ಧಾರಕ್ಕಾಗಿ ಮಾಡುವ ವೇದಾಧ್ಯಯಕ್ಕೆ ಲಿಂಗಭೇದವಿಲ್ಲ. ಆದ್ದರಿಂದ ಸ್ತ್ರೀಯರು ವೇದಾಧ್ಯಯನ ಮಾಡಬಾರದೆನ್ನುವ, ಸ್ತ್ರೀಯರು ಓಂಕಾರ ಪಠಿಸಬಾರದೆನ್ನುವ ಎಲ್ಲವೂ ವೇದ ವಿರೋಧಿಯೇ ಆಗಿದೆ. ಭಗವಂತ ಕೊಟ್ಟಿರುವ ವೇದವನ್ನು ಪಠಿಸಬಾರದೆನ್ನುವವರು ಭಗವದ್ರೋಹಿಗಳೇ ಅಲ್ಲವೇ? ದುರಾದೃಷ್ಟವೆಂದರೆ ಹಲವಾರು ಮಠಾಧೀಷರೂ ಸಹ ವೇದವಿರೋಧವಾಗಿಯೇ ಮಾತನಾಡುವುದನ್ನು ಕಾಣುತ್ತೇವೆ.ತಿಳಿದವರೆಂದು ಕರೆಸಿಕೊಳ್ಳುವವರು, ಪಂಡಿತರು, ಜ್ಞಾನಿಗಳೆನಿಸಿದವರುಹೀಗೆ ವೇದ ವಿರೋಧವಾದ ಮಾತುಗಳನ್ನಾಡಿದರೆ ಸಮಾಜದ ಮೇಲೆ ಎಂತಹಾ ದುಶ್ಪರಿಣಾಮ ಆಗುತ್ತದೆ, ಅಲ್ಲವೇ? ಆದ್ದರಿಂದ ಸ್ತ್ರೀಯರು ವೇದಾಧ್ಯಯನ ಮಾಡಬಾರದೆಂದು ವೇದದಲ್ಲಿ ಎಲ್ಲಿಯೂ ಹೇಳಿಲ್ಲವಾದ್ದರಿಂದ ಸ್ತ್ರೀಯರು ವೇದಾಧ್ಯಯನ ಮಾಡಬೇಕು.ವೇದಾಧ್ಯಯನ-ಅಧ್ಯಾಪನವು ಬ್ರಾಹ್ಮಣರ ಕರ್ತವ್ಯವಾದ್ದರಿಂದ ಸ್ತ್ರೀ-ಪುರುಷರೆಂಬ ಭೇದಭಾವವಿಲ್ಲದೆ ಎಲ್ಲರೂ ವೇದಾಧ್ಯಯನ ಮಾಡಲೇ ಬೇಕು. ಆಗ ಮಾತ್ರ ಬ್ರಾಹ್ಮಣನೆಂದು ಕರೆಸಿಕೊಳ್ಳಲು ಅರ್ಹತೆ ಸಿಗುತ್ತದೆ. ಅಷ್ಟೇ ಹೊರತು ವೇದಾಧ್ಯಯನ ಮಾಡಿದ್ದರಿಂದ ಶ್ರೇಷ್ಠರು ಎಂಬ ಭಾವನೆ ಸಲ್ಲದು. ಎಲ್ಲರೂ ಸಮಾನರೇ ಆಗಿದ್ದಾರೆ. ಇದು ವೇದದ ಕರೆ.
.. ..........ಮುಂದಿನ ಕಂತನ್ನು ಇದೇ ಶುಕ್ರವಾರ ೮.೧೦.೨೦೧೦ ರಂದು ನಿರೀಕ್ಷಿಸಿ



.