Pages

Thursday, October 23, 2014

ಓಂ
ವೇದಭಾರತೀ, ಹಾಸನ

ಹುಬ್ಬಳ್ಳಿಯ ಆರ್ಶವಿದ್ಯಾಲಯದ 
ಪೂಜ್ಯ ಶ್ರೀ ಚಿದ್ರೂಪಾನಂದ ಸರಸ್ವತೀ ಸ್ವಾಮೀಜಿಯವರ
 ದಿವ್ಯ ಸಾನ್ನಿಧ್ಯದಲ್ಲಿ

ಲೋಕ ಕಲ್ಯಾಣಾರ್ಥ
ಸಾಮೂಹಿಕ ಅಗ್ನಿಹೋತ್ರ
ಮತ್ತು
ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು
ಸಂಗ್ರಹಿಸಿರುವ, ವೇದ ಮಂತ್ರಾಧಾರಿತ

ನೂರು ಹಿತನುಡಿಗಳು, ಭಾಗ-೨
 ಪುಸ್ತಕ ಬಿಡುಗಡೆ ಕಾರ್ಯಕ್ರಮ

ಸ್ಥಳ:  ಶ್ರೀ ಕೇಶವ ದೇವಾಲಯ, ಹಾಸನ

ದಿನಾಂಕ: ೧೦.೧೧.೨೦೧೪ ಸೋಮವಾರ ಸಂಜೆ ೬.೦೦ ಕ್ಕೆ

ನೂರು ದಂಪತಿಗಳಿಗೆ ಪಾಲ್ಗೊಳ್ಳಲು ಅವಕಾಶ

ಈ ವಿಶೇಷ ಕಾರ್ಯಕ್ರಮದಲ್ಲಿ 
ನಮ್ಮೊಡನೆ
ಶ್ರೀ ಸು.ರಾಮಣ್ಣ
ಅಖಿಲಭಾರತ ಪ್ರಮುಖರು,ಕುಟುಂಬ ಪ್ರಭೋದನ್
ಇವರು ಉಪಸ್ಥಿತರಿದ್ದು 
ಹಿಂದೂ ಜೀವನ ಮೌಲ್ಯಗಳ ಬಗ್ಗೆ ಮಾರ್ಗದರ್ಶನ ಮಾಡುವರು

1.ದಂಪತಿ ಸಹಿತವಾಗಿ  ಪಾಲ್ಗೊಳ್ಳಬೇಕೆಂಬುದು ಅಪೇಕ್ಷೆ. ಅನಿವಾರ್ಯ ಸಂದರ್ಭದಲ್ಲಿ 
   ಪತಿ-ಪತ್ನಿಯರಲ್ಲಿ ಒಬ್ಬರು ಸಹ  ಪಾಲ್ಗೊಳ್ಳಬಹುದು
2.ಬ್ರಹ್ಮಚಾರಿಗಳೂ ಸಹ ಪಾಲ್ಗೊಳ್ಳಬಹುದು
3. ಅಗ್ನಿಹೋತ್ರಕ್ಕೆ ಅಗತ್ಯವಾದ ಎಲ್ಲಾ ವ್ಯವಸ್ಥೆಯನ್ನು ವೇದಭಾರತಿಯು ಮಾಡುವುದು. ಆದರೆ ಅಗ್ನಿಹೋತ್ರದಲ್ಲಿ ಪಾಲ್ಗೊಳ್ಳುವವರು ಒಂದು ಪಂಚಪಾತ್ರೆ-ಉದ್ಧರಣೆ [ಅಥವಾ ಒಂದು ಲೋಟ ಮತ್ತು ಚಮಚ] ಮತ್ತು ತುಪ್ಪ ಹಾಕಲು ಒಂದು ಬಟ್ಟಲು ಮತ್ತು ಚಮಚ  ತಂದಿರಬೇಕು.
4.ಅಗ್ನಿಹೋತ್ರವು ೬.೦೦ ಗಂಟೆಗೆ ಸರಿಯಾಗಿ ಓಂಕಾರದಿಂದ ಆರಂಭವಾಗುವುದರಿಂದ ಅರ್ಧ ಗಂಟೆ ಮುಂಚೆ ಕಾರ್ಯಕ್ರಮದ ಸ್ಥಳದಲ್ಲಿರಬೇಕು.
5.ಉಡುಪು: ಸ್ತ್ರೀಯರಿಗೆ ಸಾಂಪ್ರಾದಾಯಿಕ ಉಡುಗೆ. ಪುರುಷರಿಗೆ ಬಿಳಿ ಪಂಚೆ ಮತ್ತು ಶಲ್ಯ 
ಹತ್ತಿ ಬಟ್ಟೆ ಅಪೇಕ್ಷಣೀಯ.
6.ಇಡೀ ಕಾರ್ಯಕ್ರಮದಲ್ಲಿ ಮೊಬೈಲ್ ಸ್ವಿಚ್‌ಆಫ್ ಆಗಿರಬೇಕು.
7.ತುಂಬಾ ಪುಟ್ಟಮಕ್ಕಳಿದ್ದರೆ ಅವರನ್ನು ನೋಡಿಕೊಳ್ಳಲು ದೊಡ್ದವರನ್ನು ಜೊತೆಗೆ ಕರೆ ತನ್ನಿ
8.ಅಗ್ನಿಹೋತ್ರದ ನಂತರ ಸಾಮೂಹಿಕ  ವೇದಭಜನೆ , ಉಪನ್ಯಾಸ ನಡೆಯಲಿದ್ದು ಉಪಹಾರವನ್ನು ಮುಗಿಸಿಕೊಂಡು ಮನೆಗೆ ತೆರಳಬಹುದು
9. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಂದಲೇ ಅಗ್ನಿಹೋತ್ರವನ್ನು ಮಾಡಿಸಲಾಗುವುದು.ಜೊತೆಯಲ್ಲಿ ವೇದಭಾರತಿಯ ಕಾರ್ಯಕರ್ತರಿದ್ದು ವಿದಿವಿಧಾನವನ್ನು ಸುಗಮಗೊಳಿಸಲು ಪೂರ್ಣ ನೆರವಾಗುವರು. 
10. ಇದೊಂದು ಅತ್ಯಂತ ರಳವಾದ ನಿತ್ಯವೂ ಎಲ್ಲರೂ ತಮ್ಮ ಮನೆಗಳಲ್ಲಿ ೨೦ ನಿಮಿಷಗಳಲ್ಲಿ  ಮಾಡಬಹುದಾದ  ಯಜ್ಞವಾಗಿದ್ದು, ಕಾರ್ಯಕ್ರಮದ ನಂತರವೂ ಹೊಯ್ಸಳನಗರದ ಈಶಾವಾಸ್ಯಮ್ ನಲ್ಲಿ  ಅಗ್ನಿಹೋತ್ರವನ್ನು ಕಲಿಸುವ ವ್ಯವಸ್ಥೆ ಇರುತ್ತದೆ. 
11. ಕಾರ್ಯಕ್ರಮ ಸ್ಥಳದಲ್ಲಿ ನೂರು ಹಿತನುಡಿಗಳು ಪುಸ್ತಕವನ್ನು ಉಚಿತವಾಗಿ ವಿತರಿಸಲಾಗುವುದು.

    ನಿಮಗೆ ಗೊತ್ತಿರಲಿ
1. ಈಶಾವಾಸ್ಯಮ್, ಶಕ್ತಿ ಗಣಪತಿ ದೇವಾಲಯ ರಸ್ತೆ, ಹೊಯ್ಸಳ ನಗರ,ಹಾಸನ- ಈ ವಿಳಾಸದಲ್ಲಿ ಪ್ರತಿದಿನ ಸಂಜೆ 6.00 ರಿಂದ  7.00  ರವರಗೆ ನಡೆಯುವ ಸತ್ಸಂಗದಲ್ಲಿ, ಅಗ್ನಿಹೋತ್ರ, ವೇದಾಭ್ಯಾಸ, ವೇದಪರಿಚಯ ಉಪನ್ಯಾಸ, ವೇದಭಜನ್ -ಮುಂತಾದ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದೆ. ಪ್ರವೇಶವು ಉಚಿತವಾಗಿದ್ದು  ಎಲ್ಲರಿಗೂ ಮುಕ್ತವಾಗಿ ಪಾಲ್ಗೊಳ್ಳುವ ಅವಕಾಶವಿದೆ.
2. ಹಾಸನದ ಸ್ಥಳೀಯ ಪತ್ರಿಕೆಗಳಾದ ಜನಮಿತ್ರ ಮತ್ತು ಜನಹಿತ ಪತ್ರಿಕೆ ಮತ್ತು ವಿಕ್ರಮ ವಾರ ಪತ್ರಿಕೆಯಲ್ಲಿ ಪ್ರತೀ ವಾರವೂ ಪ್ರಕಟವಾಗುತ್ತಿರುವ  ವೇದಾಧಾರಿತ ಲೇಖನಗಳನ್ನು ಓದಿ.
3. ನಮ್ಮ ಮೇಲ್ ವಿಳಾಸ : vedasudhe@gmail.com

ಸಾಮೂಹಿಕ ಅಗ್ನಿಹೋತ್ರ


ಮೇಲಿನ ಚಿತ್ರದಲ್ಲಿ ಸಾಮೂಹಿಕವಾಗಿ ನಡೆಯುತ್ತಿರುವ ಅಗ್ನಿಹೋತ್ರವನ್ನು ಗಮನಿಸಬಹುದು. ಭಾರತೀಯ ಋಷಿಪರಂಪರೆಯಿಂದ ಮೂಡಿಬಂದ "ಅಗ್ನಿಹೋತ್ರ"ವು ಪಾಶ್ಚಿಮಾತ್ಯ ಜನರನ್ನು ಆಕರ್ಷಿಸಿದೆ. ಭಾರತೀಯರಾದ ನಮಗೆ  ನಮ್ಮ ಋಷಿಪರಂಪರೆಯ ಬೆಗ್ಗೆ ಅಸಡ್ದೆ ಸರಿಯೇ?

      ಹಾಸನದ ವೇದಭಾರತಿಯು ಕಳೆದ ಎರಡು ವರ್ಷದಿಂದ ನಮ್ಮ ಋಷಿ ಪರಂಪರೆಯಲ್ಲಿ ಕಾರ್ಯ ಚಟುವಟಿಕೆ ಆರಂಭಿಸಿ ನಿತ್ಯವೂ  ಸಂಜೆ 6.00 ರಿಂದ 7.00 ರ ವರಗೆ ಅಗ್ನಿಹೋತ್ರ ಮತ್ತು ವೇದಾಭ್ಯಾಸವನ್ನು  ನಿರಂತರವಾಗಿ ನಡೆಸಿಕೊಂಡು ಬಂದಿದೆ.
       ವೇದಾಧ್ಯಾಯೀ ಶ್ರೀ ಸುಧಾಕರಶರ್ಮರ ಪ್ರೇರಣೆಯಿಂದ ಆರಂಭವಾಗಿರುವ ವೇದಭಾರತಿಯ ಕಾರ್ಯಚಟುವಟಿಕೆಗಳನ್ನು
ಹಲವಾರು ಸಾದು ಸಂತರು  ನೋಡಿ ಮೆಚ್ಚಿದ್ದಾರೆ. ಅವರಲ್ಲಿ ಹುಬ್ಬಳ್ಳಿಯ ಆರ್ಶ ವಿದ್ಯಾಲಯದ ಪೂಜ್ಯ ಚಿದ್ರೂಪಾನಂದ ಸರಸ್ವತೀ ಸ್ವಾಮೀಜಿಯವರು ವೇದಭಾರತಿಯ ಕಾರ್ಯಚಟುವಟಿಕೆಯನ್ನು     ತಮ್ಮದೇ ಕಾರ್ಯವೆಂಬಂತೆ ಗಮನಿಸಿ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ.
         ಶ್ರೀ ರಾಮಕೃಷ್ಣಾಶ್ರಮದ ಯತಿಗಳಾದ ಪೂಜ್ಯ ಬೋಧಸ್ವರೂಪಾನಂದರು, ಪೂಜ್ಯಯುಕ್ತೇಶ್ವರಾನಂದರು,  ಬರಮಸಾಗರದ ಪೂಜ್ಯ ಬ್ರಹ್ಮಾನಂದ ಭಿಕ್ಷು, ಬೆಂಗಳೂರಿನ ಮಾತಾಜಿ ವಿವೇಕಮಯೀ, ಚಿನ್ಮಯ ಮಿಷನ್ನಿನ ಆಚಾರ್ಯ ಸುಧರ್ಮಚೈತನ್ಯರು. . . .ಹೀಗೆ ಹತ್ತು ಹಲವು ಸ್ವಾಮೀಜಿಯವರು ವೇದಭಾರತಿಯ ಸತ್ಸಂಗಕ್ಕೆ ಬಂದು ಆಶೀರ್ವದಿಸಿದ್ದಾರೆ.
ಅಂತೆಯೇ ವೇದಭಾರತಿಯ ಸದಸ್ಯರೂ ಕೂಡ ಬೆಂಗಳೂರು, ಮೈಸೂರು, ಅರಸೀಕೆರೆ, ಹಂಪಾಪುರ, ಕೆರಳಾಪುರ ಮುಂತಾದ ಊರುಗಳಲ್ಲಿ ಅಗ್ನಿಹೋತ್ರವನ್ನು ನಡೆಸಿ  ವೇದದ ಅರಿವು ಮೂಡಿಸುವಲ್ಲಿ ತಮ್ಮ ಪ್ರಯತ್ನವನ್ನು ಮಾಡುತ್ತಿದ್ದಾರೆ.

       ಬೇಲೂರಿನ ವೇದಾಧ್ಯಾಯೀ ಶ್ರೀ ವಿಶ್ವನಾಥಶರ್ಮರ ಮೇಲ್ವಿಚಾರಣೆಯಲ್ಲಿ ವೇದಪಾಠವು  ನಡೆಯುತ್ತಿದೆ. ನಿತ್ಯವೂ ಸತ್ಸಂಗದಲ್ಲಿ   ಶ್ರೀಸುಧಾಕರಶರ್ಮ ಮುಂತಾದವರ ಹತ್ತಿಪ್ಪತ್ತು ನಿಮಿಷಗಳ ಉಪನ್ಯಾಸದ ಆಡಿಯೋ ಕೇಳಿಸಲಾಗುತ್ತಿದೆ. ಹಾಸನದ ದಿನಪತ್ರಿಕೆಗಳಲ್ಲಿ     ಮತ್ತು ವಿಕ್ರಮ ವಾರ ಪತ್ರಿಕೆಯಲ್ಲಿ  ವೇದ ಕುರಿತಾದ ಲೇಖನಗಳನ್ನು ಸರಳ ಶೈಲಿಯಲ್ಲಿ ಪ್ರತೀ ವಾರವೂ   ಪ್ರಕಟಿಸಲಾಗುತ್ತಿದೆ.
       ವೇದಶಿಬಿರ, ಬಾಲಶಿಬಿರ, ವಾರ್ಷಿಕೋತ್ಸವ, ಶ್ರೀ ಶರ್ಮರೊಡನೆ ಮುಕ್ತ ಸಂವಾದ ಮುಂತಾದ ಸಾರ್ವಜನಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿದ್ದು ಅವುಗಳಲ್ಲಿ ವೇದವಿದ್ವಾಂಸರ ಜೊತೆಗೆ RSS ನ ಪ್ರಮುಖರಾದ ಶ್ರೀ ಸು.ರಾಮಣ್ಣ, ಶ್ರೀ ಕಜಂಪಾಡಿಸುಬ್ರಮ್ಹಣ್ಯಭಟ್, ಶ್ರೀ ಪ್ರಭಾಕರಭಟ್ , ವೇದತರಂಗ ಮಾಸಿಕ ಪತ್ರಿಕೆಯ ಶ್ರೀ ಶ್ರುತಿಪ್ರಿಯ ಮೊದಲಾದವರು   ಪಾಲ್ಗೊಂಡು ಮಾರ್ಗದರ್ಶನ ಮಾಡಿದ್ದಾರೆ. ಪೂಜ್ಯ ಚಿದ್ರೂಪಾನಂದರ "ಗೀತಾಜ್ಞಾನಯಜ್ಞ:ವನ್ನೂ ಸಹ  ವೇದಭಾರತಿಯ ವತಿಯಿಂದ ನಡೆಸಲಾಗಿದೆ.

ಮುಂದಿನ ಕಾರ್ಯಕ್ರಮಗಳು:

1. ಇದೇ  ನವಂಬರ್ 10ರಂದು  ನೂರು ದಂಪತಿಗಳಿಂದ ಸಾಮೂಹಿಕ ಅಗ್ನಿಹೋತ್ರವು ಹಾಸನದಲ್ಲಿ  ನಡೆಯುತ್ತದೆ.

2. ಮುಂದಿನ ವರ್ಷ ಫೆಬ್ರವರಿ 10 ರಂದು ಹಾವೇರಿ ಸಮೀಪ ಮಗುಂದ ಆಶ್ರಮದಲ್ಲಿ ಸಾವಿರ ದಂಪತಿಗಳಿಂದ ಸಾಮೂಹಿಕ ಅಗ್ನಿಹೋತ್ರ ಕಾರ್ಯಕ್ರಮವು ವೇದಭಾರತಿಯ ಸಹಕಾರದೊಂದಿಗೆ ನಡೆಯಲಿದೆ. ಅದಕ್ಕಾಗಿ ಪೂಜ್ಯ ಚಿದ್ರೂಪಾನಂದರು ರಾಜ್ಯವ್ಯಾಪಿ ಪ್ರಚಾರವನ್ನು ಈಗಾಗಲೇ ಆರಂಭಿಸಿರುತ್ತಾರೆ. ನಮ್ಮೊಡನೆ  ವೇದಸುಧೆಯ ಅಭಿಮಾನಿಗಳೆಲ್ಲರೂ ಮಲಗಂದದ ಬೃಹತ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂಬುದು ವೇದಭಾರತಿಯ ಅಪೇಕ್ಷೆ. ವಿವರವನ್ನು ಪ್ರಕಟಿಸಲಾಗುವುದು.ಈಗಿನಿಂದಲೇ ಸಿದ್ಧತೆ ನಡೆಸಿಕೊಳ್ಳುವಿರಾ?
 ಶ್ರೀಸುಧಾಕರಶರ್ಮರ ಆರೋಗ್ಯವು ಸುಧಾರಿಸಲು ವೇದಭಾರತಿಯ ಮನವಿಗೆ ಹಲವರು ನೆರವು ನೀಡಿದ್ದಾರೆ.ಎಲ್ಲರಿಗೂ ಧನ್ಯವಾದಗಳು. ವೇದಜ್ಞಾನಪ್ರಸಾರದಲ್ಲಿ ಜೊತೆಜೊತೆಯಲ್ಲಿ ಸಾಗೋಣ  ಬನ್ನಿ.
ನಮಸ್ಕಾರಗಳು.
ಹರಿಹರಪುರಶ್ರೀಧರ್
ಸಂಪಾದಕ
ವೇದಸುಧೆ

ಆಚಾರ್ಯ ರಾಜೇಶ್

ವೇದತರಂಗದ ಸಂಪಾದಕರಾದ ಶ್ರೀ ಶೃತಿಪ್ರಿಯ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿದ್ದಾಗ ಕೇರಳದ ಆಚಾರ್ಯ ಶ್ರೀ ರಾಜೇಶ್ ಅವರ ಬಗ್ಗೆ ತಿಳಿಸಿದರು. ಶ್ರೀ ರಾಜೇಶ್ ಇವರು "ಎಲ್ಲರಿಗಾಗಿ ವೇದ" ಉದ್ದೇಶದೊಡನೆ ಕೇರಳದಲ್ಲಿ ಕಳೆದ ಹತ್ತು ವರ್ಷಗಳಿಂದ ಅದ್ಭುತವಾದ ಕೆಲಸವನ್ನು ಮಾಡುತ್ತಿದ್ದಾರೆ. ಮಹರ್ಷಿ ದಯಾನಂದ ಸರಸ್ವತಿಯವರ ವಿಚಾರವನ್ನು ಒಪ್ಪುವವರು.ಆದರೆ ಆರ್ಯಸಮಾಜಿಯಲ್ಲ. ಒಂದು ಲಕ್ಷ ಜನರಿಗೆ ಸಾಮೂಹಿಕ ಅಗ್ನಿಹೋತ್ರವನ್ನು ನಡೆಸಿದ್ದಾರೆಂಬ ಮಾತು ಕೇಳಿ ಅಚ್ಚರಿಗೊಂಡೆ. ಅವರ ವೆಬ್ ಸೈಟ್ ಜಾಲಾಡಿದೆ. ಅದರ ವೀಡಿಯೋ ಅಥವಾ ಫೋಟೋ ಲಭ್ಯವಾಗಲಿಲ್ಲ. ಬಹುಷಃ ಒಂದು ಲಕ್ಷ ಜನವನ್ನು ಸೇರಿಸಿ ಅಗ್ನಿಹೋತ್ರ ಒಂದನ್ನು ಮಾಡಿರಬಹುದು. ಇರಲಿ.ಅವರದು ಅದ್ಭುತ ಕಾರ್ಯ. ಅವರ Facebook ಗೋಡೆಯಲ್ಲಿ ಹಲವಾರು ಕಾರ್ಯಕ್ರಮಗಳ ಚಿತ್ರಗಳನ್ನು ಕಾಣಬಹುದು. ವೇದಭಾರತಿಯ ಮಾದರಿಯಲ್ಲೇ ಅವರದು ಇನ್ನೂ ಬೃಹತ್ ಕಾರ್ಯಕ್ರಮಗಳು!

ಅವರ ಕಾರ್ಯಕ್ಷೇತ್ರ:

ozhikode, Kerala, India 673001
ಯಾರಿಗಾದರೂ ಆಸಕ್ತಿ ಇದೆಯೇ?

 ಮಿತ್ರರೇ,

     ಸ್ವಂತ ತಾಣ  ಒಂದು ಇರಲಿ, ಎಂದು vedasudhe.com ಆರಂಭಿಸಿದ್ದಾಯ್ತು. ಆದರೆ ನನಗೆ ಬ್ಲಾಗ್ ನಲ್ಲಿ ಬರೆಯುವಷ್ಟು ಸುಲಭವಾಗಿ ಸ್ವಂತ ತಾಣದಲ್ಲಿ ಬರೆಯಲು ಸಾಧ್ಯವಾಗುತ್ತಿಲ್ಲ. ಬ್ಲಾಗ್ ನಿರ್ವಹಿಸಲು ಸೋದರಿ ಪ್ರಿಯಾಭಟ್ ಸಹಕರಿಸುತ್ತಿದ್ದಾರೆ. vedasudhe.com ತಾಣವನ್ನು  ವೇದದ ಉದ್ಧೇಶಕ್ಕಾಗಿ ಯಾರಾದರೂ ಉಪಯೋಗಿಸಲು ಮುಂದೆ ಬಂದರೆ ಉಚಿತವಾಗಿ ಬಿಟ್ಟುಕೊಡಲು ಸಿದ್ಧ. ಕಾರಣ   ಅದನ್ನು effective ಆಗಿ ನನಗೆ ಬಳಸಲು ಸಾಧ್ಯವಾಗುತ್ತಿಲ್ಲ. ಯಾರಿಗಾದರೂ ಆಸಕ್ತಿ ಇದೆಯೇ? ಆಸಕ್ತರು ನನ್ನನ್ನು vedasudhe@gmail.com ಮೂಲಕ ಸಂಪರ್ಕಿಸಲು ಕೋರುವೆ

-ಹರಿಹರಪುರಶ್ರೀಧರ್
ಸಂಪಾದಕ, ವೇದಸುಧೆ