Pages

Monday, July 30, 2012

ದೇವರಿಗೆ ಹರಕೆಹೊತ್ತರೆ ಕೆಲಸ ಆಗುತ್ತದೆಯೇ?

ದೇವಾಲಯಗಳ ಹಿನ್ನೆಲೆ

ನಮ್ಮ ದೇಶದಲ್ಲಿ ರಾಜ ಮಹಾರಾಜರ ಕಾಲದಿಂದಲೂ ದೇವಾಲಯಗಳನ್ನು ಕಟ್ಟುವುದು, ಕೆರೆ ಕಟ್ಟೆಗಳನ್ನು ನಿರ್ಮಿಸುವುದು, ಕೊಳಗಳನ್ನು ನಿರ್ಮಿಸುವುದು, ಅರಳೀಕಟ್ಟೆಗಳ ನಿರ್ಮಾಣ, ತೋಪು ಬೆಳೆಸುವುದು,ಗೋಮಾಳಗಳನ್ನು ಬಿಡುವುದು, ಸಾಲು ಮರಗಳನ್ನು ನೆಡುವುದು,ಛತ್ರಗಳನ್ನು ಸ್ಥಾಪಿಸುವುದು, ಮಠ ಮಂದಿರಗಳಿಗೆ ಪ್ರೋತ್ಸಾಹಿಸುವುದು...ಮುಂತಾದ ಹಲವು ಸತ್ಕಾರ್ಯಗಳನ್ನು ನಮ್ಮ ಪೂರ್ವಜರು ಮಾಡಿದ್ದಾರೆ. ನನ್ನ ಸ್ವಂತ ಊರಾದ ಹರಿಹರಪುರವನ್ನು ಎರಡನೇ ಹರಿಹರಮಹಾರಾಜನು ಮಾಧವಾಧ್ವರಿ ಎಂಬ ವೇದ ವಿದ್ವಾಂಸನಿಗೆ ಅವನ ವೇದಜ್ಞಾನಕ್ಕೆ ಮನ್ನಣೆ ಕೊಟ್ಟು ದಾನವಾಗಿ ನೀಡಿದ್ದನು, ಎಂಬ ಶಾಸನ ಇದೆ.ಮಾಧವಾಧ್ವರಿ ಎಂಬ ವೇದವಿದ್ವಾಂಸನಿದ್ದ ಊರಿನಲ್ಲಿ ನಾನು ಜನಿಸಿದ್ದೇನೆ, ಎಂಬುದರಿಂದಲೇ ನನಗೆ ಸಂತೋಷವಿದೆ. ಆದರೆ ಮಾಧವಾಧ್ವರಿಯ ನಂತರ ನಮ್ಮೂರಿನಲ್ಲಿ ವೇದಜ್ಞಾನ ಯಾವ ಕಾರಣಕ್ಕೆ ಹಿನ್ನಡೆ ಪಡೆಯಿತು, ಎಂಬಬಗ್ಗೆ ಅರಿವಿಲ್ಲ, ಆದರೆ ನಿಜವಾದ ವೇದಜ್ಞಾನ ಮರೆಯಾಗುತ್ತಾ,ಪುರಾಣದ ಮೇಲುಗೈಯ್ಯಾದಂತೆ ತೋರುವುದು ಸತ್ಯ.ಏನೇ ಇರಲಿ, ದೇವಾಲಯಗಳ ಸ್ಥಾಪನೆಯ ಹಿಂದಿನ ಉದ್ಧೇಶವನ್ನು ಶ್ರೀ ಸುಧಾಕರಶರ್ಮರ ಮಾತುಗಲ್ಲಿ ಕೇಳೋಣ. ಅವರ ಮಾತುಗಳು ನಿಷ್ಟುರವಾಗಿರುತ್ತವೆ. ಕಹಿಸತ್ಯವನ್ನು ಅರಗಿಸಿಕೊಳ್ಳುವುದು ಕಷ್ಟವಾದರೂ ನಿಜವನ್ನು ಅರಿತುಕೊಳ್ಳಲೇ ಬೇಕು.

ಒಂದು ವಿಭಿನ್ನವಾದ, ವಿಶಿಷ್ಟವಾದ ವೇದೋಕ್ತ ವಿವಾಹ




ವಿವಾಹ ಆಮಂತ್ರಣ ಓದಲು:
Right clik on invitation , open link in new window, clik on image,ಈಗ  ಅಕ್ಷರ ದೊಡ್ದದು ಮಾಡಿ ಓದಬಹುದು



ಈ ದಿನಗಳಲ್ಲಿ ಮದುವೆ ಎಂದಾಗ  ಕಲ್ಯಾಣ ಮಂಟಪದಲ್ಲಿ  ವಧು ವರರ ಬಂಧು ಮಿತ್ರರು ಅಪಾರ ಸಂಖ್ಯೆಯಲ್ಲಿ ಸೇರಿದಾಗ ವಿವಾಹ ಮಂಟ ಪದಲ್ಲಿ ನಡೆಯುವ ಕಲಾಪಗಳನ್ನು ನೋಡಲು ಹಲವರಿಗೆ ವ್ಯವಧಾನವೇ ಇರುವುದಿಲ್ಲ. ಅಪರೂಪಕ್ಕೆ ಸಿಕ್ಕ ಬಂಧುಮಿತ್ರರೊಡನೆ ಹರಟೆ ಹೊಡೆಯ ಬೇಡವೇ? ತಪ್ಪೇನಿಲ್ಲಾ ಬಿಡಿ. ಆದರೆ  ಈ ವಧುವರರಿಗೆ ಮಾತ್ರ ಜೀವನದಲ್ಲಿ  ಇದು  ಅತೀ ಮಹತ್ವದ ಸಂದರ್ಭ. ಇದರ ಔಚಿತ್ಯ ಹಲವರಿಗೆ ಅರ್ಥವಾಗುವುದೇ ಇಲ್ಲ. ಹರಟೆ ಹೊಡೆಯೋಕೆ ಮದುವೆ ಮಂತಪವೇ ಬೇಕಾ ? ನೀವೇ ಹೇಳಿ. ಇವೆಲ್ಲಾ ರೂಢಿಯಾಗಿ ಬಿಟ್ಟಿದೆ. ಪುರೋಹಿತರು ಮಂತ್ರ ಹೆಳ್ತಾರೆ  , " ಮಮ" ಅಂತ ಹೇಳಿ ಅಂತಾರೆ. ವರನ/ವಧುವಿನ/ತಂದೆಯ/ತಾಯಿ ಯಾರಿಗೆ ಮಂತ್ರ ಸಂಬಂಧಿಸಿರುತ್ತೋ ಅವರು "ಮಮ"  ಅಂತಾ ಅಂತಾರೆ, ಕಿವಿಗೆ ಬೀಳದಿದ್ದರೆ  ಪುರೋಹಿತರು " ಮಮ" ಅಂತಾ ಹೇಳಿ ವಿಧಿಯನ್ನು ಮುಗಿಸಿ ಬಿಡುತ್ತಾರೆ. ವೈದಿಕ  ವಿಧಿಗೆ ಹೊರತಾದ ಹಲವು ಕಾರ್ಯಕ್ರಮಗಳು ಮದುವೆ ಮಂಟಪದಲ್ಲಿ ನಡೆಯುತ್ತೆ. ವೀಡಿಯೋ ತೆಗೆಯುವವರು  ಎಲ್ಲವನ್ನೂ ಸೆರೆ ಹಿಡಿಯುತ್ತಾರೆ. ಮದುವೆ ಆದ ಮೇಲೆ ನಾಲ್ಕಾರು ದಿನ  ವೀಡಿಯೋ ವನ್ನು ಮತ್ತು ಆಲ್ಬಮ್ ನ್ನು  ನೋಡಿ ಆ ನಂತರ  ಬೇಸರ ವಾದರೆ ಅದರ ಜಾಗಕ್ಕೆ ಸೇರಿಸುತ್ತಾರೆ. ಅಲ್ಲಿಗೆ ಮದುವೆಯ ಆಟ  ಮುಗಿಯುತ್ತೆ.

  ವಿವಾಹ ಎಂಬುದು ಜೀವನದಲ್ಲಿ    ಎಂತಹ ಮಹತ್ವ ಪೂರ್ಣ ಘಟ್ಟ! ಅದಕ್ಕೆ ಕೊಡುತ್ತಿರುವ ಮಹತ್ವ?  ಒಂದು ಮದುವೆಯಲ್ಲಿ  ಅಕ್ಕಿಗೆ  ನಾಲ್ಕಾರು ರೀತಿಯ ಬಣ್ಣ ಹಾಕಿ ಅದನ್ನು ವಧು ವರರ ತಲೆಯ ಮೆಲೆ ಸುರಿಸಿದಾಗ ಅಲ್ಲಿ ಚೆಲ್ಲಾಡಿದ್ದ ಅಕ್ಕಿ     ಕಂಡು ಬೇಸರಗೊಂಡೆ. ಐದಾರು ಕೆ.ಜಿ.ಅಕ್ಕಿ! ಬಣ್ಣ  ಬಳಿದಿದೆ! ಹಕ್ಕಿ ತಿಂದರೂ ಸಾಯುತ್ತವೆ! ಎಲ್ಲವೂ ತಿಪ್ಪೆಯ ಪಾಲು! ಇದು ನಾವು  ಕಷ್ಟ  ಪಟ್ಟು  ಅನ್ನ ಬೆಳೆದ ರೈತನಿಗೆ ನಾವು ಕೊಡುವ ಬೆಲೆ!

ಈಗ ರೂಡಿಯಲ್ಲಿರುವ ವಿವಾಹದ ಹಲವು ಆಚರಣೆಗಳು ವೇದೋಕ್ತವಲ್ಲ! ಆದರೂ ನಮ್ಮ ಹಿಂದಿನವರು ಆಚರಿಸಿಕೊಂಡು ಬಂದರು, ನಾವೂ ಆಚರಿಸುತ್ತೇವೆ.ಆದರೆ ಇಲ್ಲೊಂದು ಮದುವೆಯ ಕರೆಯೋಲೆ ನನ್ನ ಕೈ ತಲುಪಿದೆ. ಎಲ್ಲವೂ ವೇದೋಕ್ತ. ವಿವಾಹವಾಗುತ್ತಿರುವ ವಧುವಿಗೆ ಶಾಸ್ತ್ರೋಕ್ತ ಉಪನಯನ ವಾಗಿದೆ. ವಧು ವರರು ವೇದೋಕ್ತವಾಗಿ ವಿವಾಹ ಸಂಸ್ಕಾರವನ್ನು ಪಡೆಯುತ್ತಿದ್ದಾರೆ. ಆಸಕ್ತರು "ವೇದೋಕ್ತವಿವಾಹವನ್ನು" ಬಂದು ವೀಕ್ಷಿಸಬಹುದು.
-ಹರಿಹರಪುರ ಶ್ರೀಧರ್.