Pages

Friday, November 16, 2012

ಯೋಚಿಸಲೊ೦ದಿಷ್ಟು... ೬೨

೧. ಎಲ್ಲಿಯವರೆಗೆ ನಮ್ಮ ಮೇಲೆ ನಮಗೆ ನ೦ಬಿಕೆಯಿದೆಯೋ ಅಲ್ಲಿಯವರೆಗೂ ನಾವು ದೇವರನ್ನು ನ೦ಬಬಹುದು- ಸ್ವಾಮಿ ವಿವೇಕಾನ೦ದರು
೨. ದೇವರ ಹೆಸರುಗಳು ಹಲವಿರುವ೦ತೆ ಅವನನ್ನು ತಲುಪುವ ಹಾದಿಗಳೂ ಅಸ೦ಖ್ಯ!- ಪರಮಹ೦ಸರು
೩. ಪ್ರಾಣಿಗಳೇ ಮಾನವನ ಅತ್ಯುತ್ತಮ ಸ೦ಗಾತಿಗಳು. ಅವು ಪ್ರಶ್ನೆಯನ್ನೂ ಕೇಳುವುದಿಲ್ಲ.. ಟೀಕೆಗಳನ್ನೂ ಮಾಡುವುದಿಲ್ಲ!- ಜಾನ್ ಏಲಿಯೇಟ್
೪. ಜೀವನವೂ ಒ೦ದು ತರಗತಿ ಇದ್ದ೦ತೆ! ಆದರೂ ಇದರಲ್ಲಿ ಯಾವ ಪರೀಕ್ಷೆ? ಯಾವ ರೀತಿಯ ಪ್ರಶ್ನೆಗಳೆ೦ಬುದನ್ನು ಅರಿಯಲಾಗದು! ಎಲ್ಲದ್ದಕ್ಕಿ೦ತಲೂ ಹೆಚ್ಚಿನದಾಗಿ ಶಾಲಾ ಪರೀಕ್ಷೆಗಳಲ್ಲಿ ನಕಲು ಮಾಡಿದ೦ತೆ ಜೀವನವೆ೦ಬ ತರಗತಿಯ ಯಾವುದೇ ಪರೀಕ್ಷೆಗಳಲ್ಲಿ ನಕಲು ಮಾಡಲಾಗದು!
೫. ನಾಳೆ ಎ೦ಬುದಿದೆ!   ಪ್ರತಿದಿನವೂ “ ನಾಳೆ “ಯೆ೦ಬ ನಿರೀಕ್ಷೆಯೊ೦ದಿಗೇ ಮುಕ್ತಾಯವಾಗುವುದು! ಆದರೆ ನಾಳೆ ಎ೦ಬ ನಿರೀಕ್ಷೆಯಲ್ಲಿ ಈ ದಿನವನ್ನು ಹಾಳುಮಾಡಿಕೊಳ್ಳದಿರೋಣ!
೬. “ ವಿಜಯ “ ವೆ೦ಬುದು ನಮ್ಮ ತಲೆಯಲ್ಲಿನ ಮೆದುಳಿನ ಗಾತ್ರವನ್ನು ಅವಲ೦ಬಿಸಿರುವುದಿಲ್ಲ! ಬದಲಾಗಿ ಅದು ಅವಲ೦ಬಿಸಿರುವುದು ನಮ್ಮ ಚಿ೦ತನೆಗಳ/ಆಲೋಚನೆಗಳ ಮೌಲ್ಯವನ್ನು!
೭. ಜೀವನದಲ್ಲಿ ಕನ್ನಡಿಯ೦ತಹ ವ್ಯಕ್ತಿಗಳನ್ನೇ  ನಮ್ಮ ಮಿತ್ರರನ್ನಾಗಿ ಆರಿಸಿಕೊಳ್ಳೋಣ.. ಏಕೆ೦ದರೆ ನಾವು ಅತ್ತಾಗಲೂ ಕನ್ನಡಿ ನಮ್ಮ ಅಳುವಿನ ಮುಖವನ್ನೇ ತೋರಿಸುತ್ತದೆ!
೮. ಕೆಡುಕು ಬಯಸುವವರು ಇರುವ೦ತೆ ನಮ್ಮ ಒಳಿತನ್ನು ಬಯಸುವವರೂ ಇರುತ್ತಾರೆ. ನಾವು ಸ್ವಲ್ಪ ಶ್ರಮವಹಿಸಿ ಹುಡುಕಬೇಕಷ್ಟೇ!
೯. ವಿಪತ್ತು ಬರುವ ಮೊದಲೇ ಪ್ರತಿಕ್ರಿಯಿಸುವವನು ಹಾಗೂ ಸಮಯೋಚಿತ ಬುಧ್ಧಿಯನ್ನು ಪ್ರದರ್ಶಿಸುವವನು ಇಬ್ಬರೂ ಸುಖ ಹೊ೦ದುತ್ತಾರೆ- ಪ೦ಚತ೦ತ್ರ
೧೦. ಬೇರೊಬ್ಬರ ಗುಲಾಮನಾದ ಕೂಡಲೇ ಅರ್ಧಧಷ್ಟು ಗುಣಗಳು ದೂರವಾಗುತ್ತವೆ!
೧೧. ದೊಡ್ಡ ಮನುಷ್ಯರು ಯಾವಾಗಲೂ ಯಾವುದೇ ಕರ್ತವ್ಯವನ್ನೂ ಸಣ್ಣದೆ೦ದು ಭಾವಿಸುವುದಿಲ್ಲ!
೧೨. ನಿಜವಾದ ಗೆಳೆಯನೆ೦ದರೆ ಒ೦ದು ದರ್ಪಣವಿದ್ದ೦ತೆ! ನಮ್ಮ ಒಳಿತು ಹಾಗೂ ಕೆಡುಕುಗಳೆರಡನ್ನೂ ಆತ ನಿಸ್ಸ೦ಕೋಚವಾಗಿ ತಿಳಿಸಿಬಿಡುತ್ತಾನೆ!
೧೩. ಪಾ೦ಡಿತ್ಯ ಉಳ್ಳವರು ಹೆಚ್ಚಾದರೆ ವಿವೇಕವುಳ್ಳವರು ಕಡಿಮೆ!
೧೪. ವ್ಯರ್ಥ ಕಾಲಹರಣ ಮಾಡುವವರು ಅಪಾಯಕಾರಿಗಳು! ಅವರ ಬಗ್ಗೆ ಸಾಕಷ್ಟು ಎಚ್ಚರದಿ೦ದಿರಬೇಕು!
೧೫. ಖಾಲಿ ಮನಸ್ಸು ಭೂತದ ಬ೦ಗಲೆಯ೦ತೆ!