ಯಾವುದೇ ವಿಚಾರಗಳ ಬಗ್ಗೆ ಚಿಂತನ-ಮಂಥನ ನಡೆಸಿದಾಗ ಅದರಲ್ಲಿ ಪಾಲ್ಗೊಂಡಿದ್ದವರಲ್ಲಿ ಒಬ್ಬಿಬ್ಬರು ತಮ್ಮ ಅಭಿಪ್ರಾಯಗಳನ್ನು ಬದಲಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ ಉಳಿದ ಸಮಾಜಕ್ಕೆ ಈ ವಿಚಾರಗಳು ಮುಂಚೆ ಹೇಗಿತ್ತೋ ಈಗಲೂ ಹಾಗೆಯೇ ಇರುತ್ತದೆ. ಉಧಾಹರಣೆಗೆ ನನ್ನ ವಿಚಾರದಲ್ಲಿ ಹೇಳಬೇಕೆಂದರೆ ಸುಮಾರು ಹತ್ತು ವರ್ಷಗಳು ಸುಧಾಕರಶರ್ಮರೊಡನೆ ನಡೆಸಿದ ಮಾತುಕತೆಯಿಂದ ನನ್ನ ವಿಚಾರಗಳಲ್ಲಿ ಕೆಲವು ಬದಲಾಗಿವೆ. ಬಹುಪಾಲು ಮುಂಚಿನಂತೆಯೇ ಇವೆ. ಆದರೆ ಹತ್ತು ವರ್ಷಗಳ ಹಿಂದೆ ಈ ವಿಚಾರಗಳು ಸಮಾಜದಲ್ಲಿ ಹೇಗಿತ್ತೋ ಈಗಲೂ ಹಾಗೆಯೇ ಇದೆ. ವಿದ್ಯಾವಂತರಲ್ಲಿ ಮೌಢ್ಯ ಹೆಚ್ಚಾಗಿದೆ,. ಅದಕ್ಕೆ ಉಧಾಹರಣೆಗಳನ್ನು ನಿತ್ಯವೂ ಟಿ.ವಿ ಚಾನಲ್ ಗಳಲ್ಲಿ ನೋಡಬಹುದು. ಇರಲಿ. ಇಷ್ಟೆಲ್ಲಾ ಯಾಕೆ ಹೇಳುತ್ತಿದ್ದೀನೆಂದರೆ ಸುಧಾಕರಶರ್ಮರಿಂದ ಒಂದು ಚಿಂತನ ಗೋಷ್ಠಿಯನ್ನು ಮೇ 31 ರಂದು ಬೆಂಗಳೂರಿನಲ್ಲಿ ಹಾಸನ ವೇದಭಾರತಿಯು ಆಯೋಜಿಸಿರುವ ವಿಷಯವು ನಿಮ್ಮ ಗಮನಕಕ್ಕೆ ಬಂದಿರಬಹುದು. ಇದುವರೆವಿಗೆ ಆ ಬಗ್ಗೆ ವಿಚಾರ ಮಾಡಿದ್ದರಲ್ಲಿ ನನಗೆ ತಿಳಿದ ಅಂಶವೆಂದರೆ 98% ಜನರಿಗೆ ಹೊರಗೆ ಬರುವ ಇಚ್ಚೆ ಇಲ್ಲ. face book ನಲ್ಲಿ ಹಾಕಿದರೆ ನೋಡಲು ತಮ್ಮ ಕಾಮೆಂಟ್ ಹಾಕಲು ತಯಾರ್. ಹಾಗಾಗಿ ಅಂದಿನ ಗೋಷ್ಠಿಯಲ್ಲಿ ಚರ್ಚೆ ನಡೆಸಲು ನಿಮ್ಮಿಂದಲೇ ವಿಷಯಗಳನ್ನು ಆಹ್ವಾನಿಸಿದರೆ ಸೂಕ್ತವೆಂದು ನನ್ನ ಭಾವನೆ. ನಿಮ್ಮ ಪ್ರಶ್ನೆಗಳನ್ನು ಶರ್ಮರಿಗೆ ಈ ಮೂಲಕವೇ ಕೇಳುವಿರಾ? ಕೇಳುವುದಕ್ಕೆ ಮುಂಚೆ ನನ್ನದೊಂದು ಮನವಿ. ವಿಗ್ರಹಾರಾದನೆ ನೀವು ಒಪ್ಪುತ್ತೀರಾ? ಒಪ್ಪದಿದ್ದರೆ ಅದಕ್ಕೆ ವೇದದ ಆಧಾರ ಕೊಡಿ- ಇಂತಾ ಪ್ರಶ್ನೆಗಳು ಬೇಡ. ನಮ್ಮ ಅಂದಿನ ಚರ್ಚೆಯಲ್ಲಿ ವಿಗ್ರಹಾರಾಧನೆ ವಿಚಾರ ಚರ್ಚೆ ಬೇಡ. ಆವಿಚಾರ ಬಂದರೆ ಇಡೀ ದಿನ ಅದೇ ಸಮಯವನ್ನು ನುಂಗಿಹಾಕುತ್ತದೆ. ಅದಕ್ಕೆ ಹೊರತಾಗಿ........
1. ಹುಟ್ಟು-ಸಾವು
2. ಆತ್ಮೋನ್ನತಿ
3. ಶ್ರಾದ್ಧ ಕರ್ಮಗಳು
4. ಪಾಪ-ಪುಣ್ಯ
5. ಆರೋಗ್ಯ
6. ಭೂತ-ಪ್ರೇತ ಇದೆಯೇ?
7. ಕರ್ಮಫಲ
ಈ ವಿಚಾರಗಳನ್ನೊಳಗೊಂಡಂತೆ ನಿಮ್ಮ ಹೆಸರು-ಫೋನ್ ನಂಬರ್-ಊರು ವಿವರಗಳೊಂದಿಗೆ ಪ್ರಶ್ನೆಗಳನ್ನು ಕೇಳುವಿರಾ?
ನಿಮ್ಮ ಪ್ರಶ್ನೆಗಳನ್ನು ಇಲ್ಲೂ ಬರೆಯಬಹುದು. ಅಥವಾ vedasudhe@gmail.com ಗೆ ಮೇಲ್ ಮಾಡಬಹುದು.
ಆದರೆ ನೀವೇ ಹಾಜರಾದಾಗ ಶರ್ಮರ ಮಾತಿಗೆ ನೀವು ಮರು ಪ್ರಶ್ನೆ ಹಾಕಲು ಅವಕಾಶ ಇರುತ್ತೆ.ಅಲ್ಲವೇ?
-----------------------------------------------------------------------------------------------
ಪ್ರಶ್ನೆ-1
Raveesh Karnur ಮುಕ್ತವಾಗುವುದು,ಅಥವಾ ಮೋಕ್ಷ ಹಿಂದು ಚಿಂತನೆಯ ಪ್ರಕಾರ ಅಂತಿಮ ಗಮ್ಯ.ಸ್ವರ್ಗ,ನರಕ,ಕೈಲಾಸ,ವೈಕುಂಠ ಅಲ್ಲ.ಯಾಕೆಂದರೆ ಅಲ್ಲಿನ ಅಧಿಪತಿಗಳೂ ಖಾಯಂ ಅಲ್ಲಿರಲ್ಲ.ಈ ಮುಕ್ತಿ ಅಥವಾ ಮೋಕ್ಷಕ್ಕೇನಾದರೂ ಸುಲಭವಾಗಿ ಅರ್ಥವಾಗುವ ವ್ಯಾಖ್ಯಾನ ಇದೆಯೇ?

ಪ್ರಶ್ನೆ-2
ವಿ ಭಾ : ಕರ್ಮಫಲ ಈ ಜನ್ಮಕ್ಕೋ? ಮರುಜನ್ಮಕ್ಕೋ?
ವಿ ಭಾ : ಕರ್ಮಫಲ ಈ ಜನ್ಮಕ್ಕೋ? ಮರುಜನ್ಮಕ್ಕೋ?