Pages

Monday, June 18, 2012

ಹಾಸನದಲ್ಲಿ ಚಿನ್ಮಯ ಸತ್ಸಂಗದ ಶುಭಾರಂಭ

 ದಿನಾಂಕ 17.6.2012 ಭಾನುವಾರ  ಹಾಸನದಲ್ಲಿ  ಚಿನ್ಮಯ ಸತ್ಸಂಗದ ಶುಭಾರಂಭವಾಯ್ತು.   ಬೆಳಿಗ್ಗೆ 11.00 ಗಂಟೆಗೆ ನಡೆದ ಆಸಕ್ತರ ಸಭೆಯಲ್ಲಿ  ತಿಪಟೂರು ಚಿನ್ಮಯಾ ಸಂಸ್ಥೆಯ  ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರು     ಮಾರ್ಗದರ್ಶನ ಮಾಡಿದರು. ಸಂಜೆ 6.00 ಗಂಟೆಗೆ  ನಡೆದ  ಸತ್ಸಂಗದಲ್ಲಿ ಹಾಸನದ ನೂರಾರು ಜನ ಭಕ್ತರು ಪಾಲ್ಗೊಂಡು ಸತ್ಸಂಗದ ಯಶಸ್ಸಿಗೆ ಕಾರಣರಾದರು. ಶ್ರೀಮತಿ ಲಲಿತಾರಮೇಶರ ಪ್ರಾರ್ಥನೆಯೊಂದಿಗೆ ಆರಂಭವಾದ ಸತ್ಸಂಗದಲ್ಲಿ ಶ್ರೀಹರಿಹರಪುರ ಶ್ರೀಧರರು ಹಾಸನದಲ್ಲಿ ಚಿನ್ಮಯ ಸಂಸ್ಥೆಯ ನ್ನು  ಆರಂಭಿಸಲು ಎಲ್ಲರ ಸಹಕಾರ ಕೋರಿ ಸಭೆಗೆ ಸ್ವಾಮೀಜಿಯವರನ್ನು ಪರಿಚಯಿಸಿದರು. ಸ್ವಾಮೀಜಿಯವರು ನಡೆಸಿಕೊಟ್ಟ ಭಜನೆ ಮತ್ತು ನಂತರದ ಉಪನ್ಯಾಸ ಕಾರ್ಯಕ್ರಮದಲ್ಲಿ ಅತ್ಯಂತ ಶ್ರದ್ಧೆಯಿಂದ  ಭಕ್ತರು ಪಾಲ್ಗೊಂಡು  ಕೊನೆಯಲ್ಲಿ ಸ್ವಾಮೀಜಿಯವರಿಂದ ಪ್ರಸಾದವನ್ನು ಪಡೆದರು.


 


 ಮುಂದಿನ ಸತ್ಸಂಗವು  ಈಶಾವಾಸ್ಯಮ್  ಸಭಾಂಗಣದಲ್ಲಿಯೇ  ಜುಲೈ 8 ರಂದು ಅಪರಾಹ್ನ 4.00 ಗಂಟೆಗೆ ನಡೆಯಲಿದ್ದು  ತದನಂತರ ಜುಲೈ 22 ರಂದು ಅದೇ ಸ್ಥಳದಲ್ಲಿ  ಅಪರಾಹ್ನ 4.00 ಗಂಟೆಗೆ ನಡೆಯುವ ಸತ್ಸಂಗದಲ್ಲಿ ಶ್ರೀ ಸುಧರ್ಮ ಚೈತನ್ಯರು ಪಾಲ್ಗೊಳ್ಳಲಿರುವರು.



















सुभाषितानि :

२.
विद्या विनयेन शोभते !

"ವಿದ್ಯೆ ಎಂಬುದು ವಿನಯದಿಂದ ಶೋಭಿಸುತ್ತದೆ."
ಯಾವುದೇ ವ್ಯಕ್ತಿ ಎಷ್ಟೇ ಜ್ಞಾನ ಹೊಂದಿದ್ದರೂ ಅದು ಅವನ ನಡೆ ನುಡಿಗಳಿಂದ ಮಾತ್ರ ತಿಳಿಯುತ್ತದೆ. ಒಬ್ಬ ಮಹಾಜ್ಞಾನಿಯ ನುಡಿಯೇ ಸರಿ ಇಲ್ಲದಿದ್ದರೆ ಅವನ ಜ್ಞಾನಕ್ಕೆ ಯಾವುದೇ ಬೆಲೆ ಇರುವುದಿಲ್ಲ. ಹಾಗಾಗಿ ನಮ್ಮ ನಡೆ ನುಡಿಯ ಮೇಲೆ ಮಾತ್ರ ನಮ್ಮ ಜ್ಞಾನಕ್ಕೆ ಮಹತ್ವವಿರುವುದು.