ಸ್ವಾರ್ಥ
ಸ್ವಾರ್ಥದ ಭೂತ ದ್ವೇಷದ ಕತ್ತಿ ಸೆಳೆದಿತ್ತು
ಕಂಡ ಕಂಡವರ ಗುಂಡಿಗೆಯ ಬಗೆದಿತ್ತು
ಅಪ್ಪ ಅಮ್ಮರಿಲ್ಲ ಅಣ್ಣ ತಮ್ಮದಿರಿಲ್ಲ
ಗಂಡ ಹೆಂಡತಿಯಿಲ್ಲ ಮಕ್ಕಳು ಮರಿಯಿಲ್ಲ
ಯಾರನೂ ಉಳಿಸಿಲ್ಲ, ಬೇಡಿದರೂ ಬಿಡಲಿಲ್ಲ
ನಗು ಬಂದೀತೆಂದು ಹಲ್ಲು ಮುರಿದಿತ್ತು
ಓಡಿ ಹೋದಾರೆಂದು ಕಾಲು ತುಂಡರಿಸಿತ್ತು.
ಬೇಡವೆಂದವರ ಕೈಯ ಕಡಿದಿತ್ತು
ಕಣ್ಣೀರು ಒರೆಸುವರ ಕಣ್ಣ ಬಗೆದಿತ್ತು
ಕೈಚೆಲ್ಲಿ ಕುಳಿತವರ ಬೆದರಿ ಬೆಂಡಾದವರ
ಗಂಟಲನು ಸೀಳಿ ಗಹಗಹಿಸಿ ನಕ್ಕಿತ್ತು
ನೊಂದು ಬೆಂದ ಅತೃಪ್ತ ಆತ್ಮಗಳು
ತಿರುಗಿ ಬೀಳುವ ವೇಳೆ ಕಾಲ ಮಿಂಚಿತ್ತು
-ಕ.ವೆಂ.ನಾಗರಾಜ್
///// ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ ////// ಕೃಣ್ವಂತೋ ವಿಶ್ವಮಾರ್ಯಂ //// //// ಮಾತಾ ಭೂಮಿಃ ಪುತ್ರೋಹಂ ಪೃಥಿವ್ಯಾಃ /////
Thursday, July 29, 2010
ನಾನೊ೦ದು ತುಳಸೀದಳವಾಗಲೇ..?
ಸ್ವರ ರಾಗಗಳ ಗ೦ಗಾ ಪ್ರವಾಹದಿ೦ದ,
ಸ್ವರ್ಗೀಯ ಸಾಯುಜ್ಯ ಭಾವವು ತು೦ಬಿ,
ಎ೦ತು ಅರ್ಚಿಸಲಿ ನಿನ್ನ ನಾ
ನಿನ್ನ ಪೂಜಿಸುವ ತುಳಸೀದಳವಾಗಲೇ?
ತಾವರೆ ಹೂವಿನ ಸಾವಿರ ದಳಗಳ೦ತೆ
ಮನಸಿನ ತು೦ಬೆಲ್ಲಾ ನಿನ್ನ ಕಾಣುವ ಕಾತುರ
ಕಾಣದ ವೇದನೆಯೇ ವೇದಾ೦ತವಾದಾಗ
ಎಲ್ಲೆಲ್ಲೂ ನೀನೇ ಎ೦ಬ ಭಾವನೆಯು
ಮನಸಿಗೊ೦ದು ಸಮಾಧಾನವಾದಾಗ
ಕಟ್ಟು ಬಿಚ್ಚಿಕೊ೦ಡ ಕರುವು ತಾಯಿಯ
ಬಳಿಗೆ ಹೋದ೦ತೆ, ಕೆಚ್ಚಲಿಗೇ
ಬಾಯಿ ಹಾಕಿ ಹಾಲನ್ನು ಕುಡಿದ೦ತೆ.
ಧನ್ಯತಾ ಭಾವವು ಮನದಲ್ಲಿ ತು೦ಬಿ
ಸ೦ಗೀತದಿ, ಸರಸ-ಸಲ್ಲಾಪದಿ
ಕೃಷ್ಣ, ನಾ ನಿನ್ನ ಅರ್ಚಿಸುವ ತುಳಸೀದಳವಾಗಲೇ?
ಪುಷ್ಪದ ಜೊತೆಗೆ ನಾರಿನ೦ತೆ
ನಿನ್ನಿ೦ದ ನಾನಿ೦ದು ಪರಿಪೂರ್ಣನಾದೆ,
ಎನಿತು ಧ್ಯಾನಿಸಲಿ ನಿನ್ನ?
ಭಾವನೆಗಳ ಮಹಾಪೂರದಿ೦ದ
ಮನದಲ್ಲಿ ಹುಟ್ಟಿರುವ ಆ೦ದೋಲನಕ್ಕೆ,
ಎನಿತು ಸ೦ತೈಸಲಿ ಅದನ್ನು
ಕೃಷ್ಣ, ನಾ ನಿನ್ನ ಅರ್ಚಿಸುವ ತುಳಸೀದಳವಾಗಲೇ?
----------------------------
ರಾಘವೇಂದ್ರರ ಕವನವನ್ನು ನೋಡಿದಮೇಲೆ ನನ್ನದೊಂದು ಕವನ ನೆನಪಾಯ್ತು. ಭಾವವು ಹೆಚ್ಚುಕಮ್ಮಿ ಅದರಂತೆಯೇ ಇದೆಯೆಂದು ಅದರೊಟ್ಟಿಗೇ ಪ್ರಕಟಿಸಿರುವೆ.
- ಹರಿಹರಪುರಶ್ರೀಧರ್
ನನ್ನ ಕವನ
ಗುಡಿಗೆತಂದ ಹೂಗಳೆಲ್ಲಾ
ಪೂಜೆಗೆಂದು ರಾಶಿ ಇರಲು
ಶಿವನ ಮುಡಿಯ ಸೇರ್ವ ಒಂದು ದಳವೆ ಧನ್ಯವು||
ನದಿಯ ನೀರು ಹರಿಯುತಿರಲು
ಕೋಟಿ ಜನರ ತೃಶೆಯ ತಣಿಸೆ
ಶಿವನ ಪಾದ ತೊಳೆವ ನೀರ ಹನಿಯೆ ಧನ್ಯವು|
ಎಲ್ಲ ಕವನ ರಾಶಿಯಲ್ಲಿ
ಎನ್ನ ಕವನದೊಂದು ಪದವು
ನಿಮ್ಮ ಮನಕೆ ಮುದವ ನೀಡೆ
ನಾನೆ ಧನ್ಯನು| ನನ್ನ ಕವನ ಧನ್ಯವು||
ಸ್ವರ್ಗೀಯ ಸಾಯುಜ್ಯ ಭಾವವು ತು೦ಬಿ,
ಎ೦ತು ಅರ್ಚಿಸಲಿ ನಿನ್ನ ನಾ
ನಿನ್ನ ಪೂಜಿಸುವ ತುಳಸೀದಳವಾಗಲೇ?
ಮನಸಿನ ತು೦ಬೆಲ್ಲಾ ನಿನ್ನ ಕಾಣುವ ಕಾತುರ
ಕಾಣದ ವೇದನೆಯೇ ವೇದಾ೦ತವಾದಾಗ
ಎಲ್ಲೆಲ್ಲೂ ನೀನೇ ಎ೦ಬ ಭಾವನೆಯು
ಮನಸಿಗೊ೦ದು ಸಮಾಧಾನವಾದಾಗ
ಕಟ್ಟು ಬಿಚ್ಚಿಕೊ೦ಡ ಕರುವು ತಾಯಿಯ
ಬಳಿಗೆ ಹೋದ೦ತೆ, ಕೆಚ್ಚಲಿಗೇ
ಬಾಯಿ ಹಾಕಿ ಹಾಲನ್ನು ಕುಡಿದ೦ತೆ.
ಧನ್ಯತಾ ಭಾವವು ಮನದಲ್ಲಿ ತು೦ಬಿ
ಸ೦ಗೀತದಿ, ಸರಸ-ಸಲ್ಲಾಪದಿ
ಕೃಷ್ಣ, ನಾ ನಿನ್ನ ಅರ್ಚಿಸುವ ತುಳಸೀದಳವಾಗಲೇ?
ನಿನ್ನಿ೦ದ ನಾನಿ೦ದು ಪರಿಪೂರ್ಣನಾದೆ,
ಎನಿತು ಧ್ಯಾನಿಸಲಿ ನಿನ್ನ?
ಭಾವನೆಗಳ ಮಹಾಪೂರದಿ೦ದ
ಮನದಲ್ಲಿ ಹುಟ್ಟಿರುವ ಆ೦ದೋಲನಕ್ಕೆ,
ಎನಿತು ಸ೦ತೈಸಲಿ ಅದನ್ನು
ಕೃಷ್ಣ, ನಾ ನಿನ್ನ ಅರ್ಚಿಸುವ ತುಳಸೀದಳವಾಗಲೇ?
----------------------------
ರಾಘವೇಂದ್ರರ ಕವನವನ್ನು ನೋಡಿದಮೇಲೆ ನನ್ನದೊಂದು ಕವನ ನೆನಪಾಯ್ತು. ಭಾವವು ಹೆಚ್ಚುಕಮ್ಮಿ ಅದರಂತೆಯೇ ಇದೆಯೆಂದು ಅದರೊಟ್ಟಿಗೇ ಪ್ರಕಟಿಸಿರುವೆ.
- ಹರಿಹರಪುರಶ್ರೀಧರ್
ನನ್ನ ಕವನ
ಗುಡಿಗೆತಂದ ಹೂಗಳೆಲ್ಲಾ
ಪೂಜೆಗೆಂದು ರಾಶಿ ಇರಲು
ಶಿವನ ಮುಡಿಯ ಸೇರ್ವ ಒಂದು ದಳವೆ ಧನ್ಯವು||
ನದಿಯ ನೀರು ಹರಿಯುತಿರಲು
ಕೋಟಿ ಜನರ ತೃಶೆಯ ತಣಿಸೆ
ಶಿವನ ಪಾದ ತೊಳೆವ ನೀರ ಹನಿಯೆ ಧನ್ಯವು|
ಎಲ್ಲ ಕವನ ರಾಶಿಯಲ್ಲಿ
ಎನ್ನ ಕವನದೊಂದು ಪದವು
ನಿಮ್ಮ ಮನಕೆ ಮುದವ ನೀಡೆ
ನಾನೆ ಧನ್ಯನು| ನನ್ನ ಕವನ ಧನ್ಯವು||
Subscribe to:
Posts (Atom)