ಗ್ರಂಥದ ಮುಂದುವರಿದ ಭಾಗ
पठंतु शास्त्राणि यजंतु देवान्
कुर्वंतु कर्माणि भजंतु देवताः ।
आत्मैक्य बोधेन विना विमुक्ति-
र्न सिध्यति ब्रह्मशतांतरेपि ॥६॥
ಪಠಂತು ಶಾಸ್ತ್ರಾಣಿ ಯಜಂತು ದೇವಾನ್
ಕುರ್ವಂತು ಕರ್ಮಾಣಿ ಭಜಂತು ದೇವತಾಃ|
ಆತ್ಮೈಕ್ಯ ಬೋಧೇನ ವಿನಾ ವಿಮುಕ್ತಿ-
-ರ್ನ ಸಿಧ್ಯತಿ ಬ್ರಹ್ಮ ಶತಾಂತರೇಪಿ ||೬||
ಮುಕ್ತಿಯ ಮಹತ್ವವನ್ನು ತಿಳಿಸುತ್ತಾ ಶ್ರೀ ಶಂಕರರು ಮುಂದೆ ಬಹಳ ದಿಟ್ಟವಾದ ಧೀರವಾದ ಘೋಷಣೆಯನ್ನು ಮಾಡುತ್ತಾರೆ. ಮೇಲಿನ ಶ್ಲೋಕದ ವಿವರಣೆಯನ್ನು ತಿಳಿಯುವುದರ ಮೂಲಕ ಆ ಉದ್ಘೋಷವೇನು ಎಂಬುದನ್ನು ಅರಿಯೋಣ.
ಪಠಂತು ಶಾಸ್ತ್ರಾಣಿ (=ಶಾಸ್ತ್ರಗಳನ್ನು ಓದುವುದು), ಯಜಂತು ದೇವಾನ್ (=ದೇವತೆಗಳನ್ನು ಪೂಜಿಸುವುದು)
ಕುರ್ವಂತು ಕರ್ಮಾಣಿ (=ಕರ್ಮಗಳನ್ನು ಮಾಡುವುದು), ಭಜಂತು ದೇವತಾ: (=ದೇವತೆಗಳನ್ನು ಸ್ತುತಿಸುವುದು)
ಆತ್ಮ್ಯೆಕ್ಯ ಬೋಧೇನ ವಿನಾ ವಿಮುಕ್ತಿಃ (= ಆತ್ಮಜ್ಞಾನ(ಬ್ರಹ್ಮ ಸಾಕ್ಷಾತ್ಕಾರೆ) ವಿಲ್ಲದೆ ಮುಕ್ತಿಯಿಲ್ಲ)
ನ ಸಿಧ್ಯತಿ ಬ್ರಹ್ಮ ಶತಾಂತರೇಪಿ (= ನೂರು ಚತುರ್ಮುಖ ಬ್ರಹ್ಮರು ಆಗಿಹೋದರೂ ಸಿದ್ಧಿಸದು)
"ಆರು ಶಾಸ್ತ್ರವ ಓದಿದರಿಲ್ಲ ನೂರಾರು ಪುರಾಣವ ಪಠಿಸಿದರಿಲ್ಲ" ಎಂಬ ದಾಸವಾಣಿಯನ್ನು ಕೇಳಿರುತ್ತೇವೆ.ಶಾಸ್ತ್ರಗ್ರಂಥಗಳನ್ನು ಓದುವುದರಿಂದ, ದೇವತೆಗಳನ್ನು ಪೂಜಿಸುವುದರಿಂದ, ಕರ್ಮಾನುಷ್ಠಾನಗಳನ್ನು ಆಚರಿಸುವುದರಿಂದ, ದೇವತೆಗಳನ್ನು ಸ್ತುತಿಸುವುದರಿಂದ, ಇದ್ಯಾವುದರಿಂದಲೂ ಮುಕ್ತಿಯು ದೊರೆಯುವುದಿಲ್ಲ ಎಂದು ಶಂಕರರು ಹೇಳುತ್ತಾರೆ. ಹಾಗಾದರೆ ಮುಕ್ತಿಯ ದಾರಿ ಯಾವುದು ? ಈ ಚಿಂತೆ-ಕೋಟಲೆಗಳಿಂದ ಬಿಡುಗಡೆ ಎಂತು ?.
ತನ್ನೊಳಗಿನ ಸುಪ್ತ ಪ್ರಜ್ಞೆಯನ್ನು ಜಾಗೃತಗೊಳಿಸಿ ಪರಮಾರ್ಥ ಚಿಂತನೆಗೆ ಒಡ್ಡಿಕೊಳ್ಳದೆ ಇದ್ದಲ್ಲಿ ನೂರಾರು ಚತುರ್ಮುಖ ಬ್ರಹ್ಮರು ಬಂದು ಹೋದರೂ (ಅಷ್ಟು ಅವಧಿ ಕಳೆದರೂ) ಮೋಕ್ಷ ಅಥವಾ ಮುಮುಕ್ಷುತ್ವವು ದೊರಕಲಾರದು ಎಂದು ಹೇಳುತ್ತಾರೆ.
ಆತ್ಮ ಸಾಕ್ಷಾತ್ಕಾರದಿಂದ ಮಾತ್ರವೇ ನೆಮ್ಮದಿ, ಮುಕ್ತಿ ಎಂದಾದರೆ ನಾವು ದಿನವೂ ಮಾಡುವ ಪೂಜೆ, ಮಡಿ, ಸಾಂಪ್ರದಾಯಿಕ ಆಚರಣೆಗಳು, ಹವನಗಳು, ಪರೋಪಕಾರ, ದೇಶಸೇವೆ, ಪ್ರಾಮಾಣಿಕತೆ ಇದೆಲ್ಲಾ ಬಳಕೆಗೆ ಬಾರದ್ದೇ ? ವ್ಯರ್ಥವೇ ? ಇದನ್ನೆಲ್ಲಾ ಮಾಡುವುದಾದರೂ ಏಕೆ? ಎಂಬ ಪ್ರಶ್ನೆ ಏಳುವುದು ಸಹಜ.
ನಾವು ನಿತ್ಯವೂ ಆಚರಿಸುವ-ಅನುಸರಿಸುವ ಈ ಎಲ್ಲಾ ಕರ್ಮಗಳೂ ನಮ್ಮ ನಿರ್ಧಾರಗಳನ್ನು ಬಲಗೊಳಿಸುವಂತಹುದು. ನಮ್ಮಲ್ಲಿ ಸಾಮರ್ಥ್ಯವನ್ನು ತುಂಬುವಂತಹುದು. ನೆಮ್ಮದಿಯ ಅಕೌಂಟಿನಲ್ಲಿ ಜಮೆಯಾಗುವ ಡಿಪಾಸಿಟ್ಟುಗಳು !. ಹಾಗಾಗಿ ಕರ್ಮಗಳನ್ನು ಆಚರಿಸಲೇಬೇಕಾಗುತ್ತದೆ. ಕರ್ಮಗಳನ್ನು ಬಿಟ್ಟು ಬಿಡೋಣ ಎಂದರೆ, ಅವನ್ನು ಕಟ್ಟಿಕೊಂಡಿದ್ದೇವೆ ಎಂದೇ ಅರ್ಥ !. ಕರ್ಮಗಳಿಂದ ದೊರೆಯುವ ಫಲವು ಮಾತ್ರ ಗೌಣವಾದುದು. ’ಕರ್ಮವನ್ನು ಮಾಡು ಅದರ ಫಲಾಫಲಗಳನ್ನು ನನಗೆ ಬಿಡು’ ಎಂದು ಕೃಷ್ಣನು ಗೀತೆಯಲ್ಲಿ ಹೇಳಿದ್ದಾನೆ. ’ನನಗೆ ಬಿಡು’ ಎಂದರೆ ಫಲದ ಅಪೇಕ್ಷೆಯನ್ನು ಬಿಡು ಎಂದು ಅರ್ಥವೇ ಹೊರತು ಮಾಡಬಾರದ್ದನ್ನೆಲ್ಲಾ ಮಾಡಿ ಫಲಕ್ಕೆ ಮಾತ್ರ ಕೃಷ್ಣನನ್ನು ಹೊಣೆಯಾಗಿಸು ಎಂದಲ್ಲ. ಕೃಷ್ಣನು ಇಲ್ಲಿ ಜ್ಞಾನದ ಸಂಕೇತವೇ ಆಗಿದ್ದಾನೆ.
ಇಂದಿನ ನಿತ್ಯ ಜೀವನದ ಜಂಜಡದಲ್ಲಿ ಆತ್ಮಜ್ಞಾನ ಸಾಧನೆಗೆ ಸಮಯವಾದರೂ ಎಲ್ಲಿದೆ? ಕರ್ಮಗಳನ್ನಾದರೂ ಹೇಗೋ ಆಚರಿಸಬಹುದು, ಜ್ಞಾನಮಾರ್ಗಕ್ಕೆ ಅವಕಾಶವಾಗುವುದು ಕಷ್ಟವಲ್ಲವೆ ? ಕರ್ಮ-ಜ್ಞಾನಗಳ ಅ ಆ ಇ ಈ ಗಳೂ ಗೊತ್ತಿರದವರು ಆತ್ಮಜ್ಞಾನವನ್ನು ಸಾಧಿಸಲು ಸಾಧ್ಯವೆ ? ಎಂಬ ಪ್ರಶ್ನೆಗಳು ಏಳುತ್ತದೆ.
ಬಿ.ಎ. ಮುಗಿಸಿದ ನಂತರವಷ್ಟೇ ಎಂ.ಎ. ಗೆ ಹೋಗಬಹುದೇ ಹೊರತು ಒಂದನೇ ತರಗತಿಯಿಂದ ನೇರವಾಗಿ ಎಂ.ಎ. ಪಾಸು ಮಾಡಲು ಸಾಧ್ಯವಿಲ್ಲ. ಎಲ್ಲದಕ್ಕೂ ಸಾಧನೆ ಎನ್ನುವುದು ಬೇಕಾಗುತ್ತದೆ.
"ಜಟ್ಟಿ ಕಾಳಗದಿ ಸೋತೊಡೇನಾಯ್ತು
ಪಟ್ಟು ವರಸೆಗಳೆಲ್ಲಾ ವಿಫಲವೆನ್ನುವೆಯಾ?
ಮುಟ್ಟಿ ನೋಡವನ ಮೈ ಕಬ್ಬಿಣ ಗಟ್ಟಿ
ಗಟ್ಟಿತನ ಗರಡಿ ಫಲ " ಎನ್ನುವ ವಾಕ್ಯವನ್ನು ನಾವು ಬಹುವಾಗಿ ಗಮನಿಸಬೇಕಾಗುತ್ತದೆ.
ಕೆಲವೊಂದು ವಿಷಯಗಳನ್ನು ಹೀಗೇ ಹೇಳಬೇಕಾಗುತ್ತದೆ.
’ಕೊಳೆತ ಹಣ್ಣನ್ನು ತಿನ್ನಬಾರದು ಆರೋಗ್ಯಕ್ಕೆ ಒಳ್ಳೆಯದಲ್ಲಾ’ ಎಂದರೆ ಆಗೊಮ್ಮೆ ಈಗೊಮ್ಮೆ ರುಚಿ ನೋಡುವ ಮನಸಾಗುತ್ತದೆ. ’ತಿಂದರೆ ಸತ್ತೇ ಹೋಗುತ್ತಿಯಾ’ ಎಂದಾಗ ಕೊಂಚ ಗಂಭೀರತೆ ಬರುತ್ತದೆ. ಕರ್ಮ-ಜ್ಞಾನಗಳ ವಿಚಾರವೂ ಹಾಗೆಯೇ. ನಾವು ಆಚರಿಸುವ ಯಾವ ಕರ್ಮಗಳೂ ವ್ಯರ್ಥವಾಗುವುದಿಲ್ಲ, ಅವೆಲ್ಲವೂ ಜ್ಞಾನ ಮಾರ್ಗದ ಮೆಟ್ಟಿಲುಗಳು. ಸಂಸಾರಿಗಳಿಗೆ ಲೌಕಿಕರಿಗೆ {ಪ್ರವೃತ್ತಿ ಧರ್ಮ(೧)} ಕರ್ಮಕ್ಕೆ ಸದಾ ಅವಕಾಶವಿದೆ, ಆದರೆ ಸನ್ಯಾಸಿಗಳಿಗೆ, ವಿರಾಗಿಗಳಿಗೆ {ನಿವೃತ್ತಿ ಧರ್ಮ(೧)} ಕರ್ಮದ ಗೊಡವೆಯೇ ಇಲ್ಲದವರಿಗೆ ಬಿಡುಗಡೆ ಹೇಗೆ ? . ಪ್ರವೃತ್ತಿ-ನಿವೃತ್ತಿ ಧರ್ಮಗಳನ್ನು ಎಷ್ಟೇ ಆಚರಿಸಿದರೂ ’ಆತ್ಮೈಕ ಜ್ಞಾನ’ ಲಭ್ಯವಾಗದೆ ಮುಮುಕ್ಷುತ್ವವಿಲ್ಲ ಎಂಬ ಧೀರವಾದ ಮಾತನ್ನು ಶ್ರೀ ಶಂಕರರು ಹೇಳುತ್ತಾರೆ.
-------------------------------------------------------
ಗ್ರಂಥದ ಮುಂದಿನ ಸೂಕ್ತಿಯನ್ನು ಗಮನಿಸೋಣ
अम्रुतत्वस्य नाशास्ति वित्तेनेत्येव हि श्रुतिः ।
ब्रवीति कर्मणो मुक्तेः अहेतुत्वं स्पुटं यतः ॥७॥
ಅಮೃತತ್ವಸ್ವ ನಾಶಾಸ್ತಿ ವಿತ್ತೇನೇತ್ಯೇವ ಹಿ ಶ್ರುತಿಃ | (=ವಿತ್ತ ಅಥವಾ ಸಂಪತ್ತಿನಿಂದ ಅಮೃತತ್ವವು(ಮುಕ್ತಿಯು) ದೊರಕದು)
ಬ್ರವೀತಿ ಕರ್ಮಣೋ ಮುಕ್ತೇಃ ಅಹೇತುತ್ವಂ ಸ್ಪುಟಂ ಯತಃ||೭|| (= ಕರ್ಮದಿಂದ ಮುಕ್ತಿಯಿಲ್ಲ ಎಂಬುದು ಸ್ಪಷ್ಟವಾದುದು)
ನಾವು ಲೌಕಿಕ ಕರ್ಮಗಳನ್ನು ಅನುಸರಿಸಿದಾಗ ಅದರಿಂದ ಸಂಪತ್ತಿನ ಅಥವಾ ದ್ರವ್ಯದ ಲಾಭವು ನಮಗೆ ಬರುತ್ತದೆ. ಪರೋಪಕಾರವು ಒಳ್ಳೆಯ ಕಾರ್ಯವೇ ಆಗಿದ್ದರೂ ಅಂತಹ ಕಾರ್ಯಕ್ಕೆ ಪ್ರತಿಫಲವನ್ನು ಪಡೆದಾಗ ಆ ಕರ್ಮವು ನೆಮ್ಮದಿಯ ಮಾರ್ಗಕ್ಕೆ ಅಡಾಚಣೆಯಾಗುತ್ತದೆ. ’ಪುತ್ರ ಸಂತಾನವಿಲ್ಲದೆ ಮುಕ್ತಿಯಿಲ್ಲ’ ಎಂಬ ಮಾತೊಂದು ಅಲ್ಲಲ್ಲಿ ತೇಲಿ ಬರುತ್ತಿರುತ್ತದೆ. ಅಂತಹವರು ಶಂಕರರ ಈ ಮಾತನ್ನು ಗಮನಿಸಲೇ ಬೇಕು.
" ಶ್ರುತಿಗಳು (೨) ಹೇಳಿರುವಂತೆ ಪುತ್ರರು, ಧರ್ಮ-ಕರ್ಮಗಳು, ಉಪಾಸನೆ, ಸಂಪತ್ತು, ವಸ್ತು-ವಾಹನಗಳು, ಇವೆಲ್ಲವೂ ವಿತ್ತದ ಅಥವಾ ಧನದ ರೂಪವೇ ಆಗಿರುವುದರಿಂದ ಇವುಗಳಿಂದ ಮೋಕ್ಷದ ಆಸೆಯನ್ನು ಇಟ್ಟುಕೊಳ್ಳುವಂತಿಲ್ಲ"
ಎಂದು ಹೇಳುತ್ತಾರೆ. ’ನಕರ್ಮಣಾ ನಪ್ರಜಯಾ ಧನೇನ ತ್ಯಾಗೇನೈಕೇ ಅಮೃತತ್ವ ಮಾನಶುಃ’ ಎಂಬ ಉಪನಿಷತ್ತಿನ ಸಾಲುಗಳು ಬಹು ಪ್ರಖ್ಯಾತವಾದುದು. ತ್ಯಾಗದಿಂದಲೇ ಅಮೃತತ್ವವು ಎಂಬುದನ್ನು ಶ್ರುತಿಗಳು ಹೇಳುತ್ತವೆ.
ಎಲ್ಲರೂ ಬ್ರಹ್ಮಜ್ಞಾನಿಗಳಾಗಲು ಸಾಧ್ಯವೆ? ಆ ದಾರಿ ಅಷ್ಟೊಂದು ಸುಲಭವೇ ? ಎಂಬ ಪ್ರಶ್ನೆ ಬರುತ್ತದೆ.
ನನ್ನ ಮಿತ್ರರಾದ ಕೊಳ್ಳೇಗಾಲದ ಮಂಜುನಾಥರು ಒಮ್ಮೆ ನನಗೆ ಹೀಗೆ ಹೇಳಿದ್ದರು ( ಬಹುಷಃ ಅವರು ಹೇಳಿರುವುದು ಅವರಿಗೇ ಮರೆತು ಹೋಗಿರಬಹುದು !)
"ನೀವು ಒಂದು ಕೆಲಸ ಮಾಡಿಲ್ಲ ಅಂದ್ರೆ ಅದು ನಿಮ್ಮಿಂದ ಆಗೋದಿಲ್ಲ ಅಂತಾ ಅಲ್ಲ, ಅದು ನಿಮ್ಮ ಕೆಲಸದ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿಲ್ಲ, ಅಂದರೆ ನೀವು ಆ ಕೆಲಸಕ್ಕೆ ಪ್ರಾಶಸ್ತ್ಯ ಕೊಟ್ಟಿಲ್ಲ ಅಂತ ಅರ್ಥ ಅಷ್ಟೆ " .
ಯಾವುದೂ ಅಸಾಧ್ಯವಲ್ಲ, ಆದರೆ ಆ ಕೆಲಸ ನಮ್ಮ ಅಜೆಂಡಾದಲ್ಲಿ ಟಾಪ್ ಪ್ರಿಯಾರಿಟಿ ಪಡೆದುಕೊಳ್ಳದೆ ಗುರಿಯನ್ನು ತಲುಪುವುದು ಕಷ್ಟಸಾಧ್ಯ ಎಂದು ಹೇಳಬಹುದು.
ಜ್ಞಾನಪ್ರಾಪ್ತಿಯಿಂದಲೇ(ಬ್ರಹ್ಮಜ್ಞಾನ) ಮುಕ್ತಿ ಎನ್ನುವುದಾದರೆ ಅದನ್ನು ಪಡೆಯುವ ದಾರಿ ಯಾವುದು? ಸಾಧನಗಳೇನು ? ಮುಂದಿನ ಕಂತಿನಲ್ಲಿ ಈ ವಿಚಾರವನ್ನು ತಿಳಿಯೋಣ.
-----------------------------------------
ಟಿಪ್ಪಣಿ :
೧: ಪ್ರವೃತ್ತಿ ಧರ್ಮ : ನಮ್ಮ ನಿತ್ಯ -ನೈಮಿತ್ತಿಕ-ಕಾಮ್ಯ ಕರ್ಮಗಳು. ಉಪಾಸನೆ, ಸಾಂಪ್ರದಾಯಿಕ ಆಚರಣೆಗಳು, ಹೊಟ್ಟೆಪಾಡಿನ ಕೆಲಸಗಳು ಮುಂತಾದುವು.
ನಿವೃತ್ತಿ ಧರ್ಮ : ವೈರಾಗ್ಯ, ಸನ್ಯಾಸ, ಅಷ್ಟಾಂಗ ಯೋಗಗಳು [ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ.( ಇವುಗಳ ವಿವರಣೆಗಳು ಮುಂದೆ ಬರಲಿದೆ)] ಮುಂತಾದುವು
೨. ಶ್ರುತಿಗಳು ಹೇಳಿರುವಂತೆ : ಬೃಹದಾರಣ್ಯಕ ಉಪನಿಷತ್ತಿನ ಭಾಷ್ಯ. ಯಾಜ್ಞವಲ್ಕ್ಯ ಮಹರ್ಷಿಗಳು ಮೈತ್ರಾದೇವಿಗೆ ಹೇಳುತ್ತಾರೆ " ಕರ್ಮದಿಂದ ಫಲವು ಲಭಿಸುವುದು ಮತ್ತು ಆ ಫಲವು ಧನಕ್ಕೆ ಸಮಾನವಾದುದರಿಂದ ಕರ್ಮದಿಂದ ಮುಕ್ತಿ ಸಾಧ್ಯವಿಲ್ಲ" ಎಂದು.
-------------------------
ಹಿಂದಿನ ಕಂತುಗಳು:
ವಿವೇಕ ಚೂಡಾಮಣಿ -ಭಾಗ-1