Pages

Friday, October 5, 2012

ಮುಕ್ತ ಸಂವಾದ -ಸ್ವಾಗತ ಪರಿಚಯ

ವಿಮರ್ಶೆ ಮಾಡೋಣ ಬನ್ನಿ


ವೇದಸುಧೆಯ ಆತ್ಮೀಯ ಬಂಧುಗಳೇ,

"ಎಲ್ಲರಿಗಾಗಿ ವೇದ" ಎಂಬ ವಿಚಾರವನ್ನಿಟ್ಟುಕೊಂಡು ವೇದಸುಧೆಯು ಹೆಜ್ಜೆ ಇಡುವಾಗ ನಮಗೆ ಅತ್ಯಂತ ಸರಳವಾಗಿ, ಅತ್ಯಂತ ನಿಷ್ಟುರವಾಗಿ ಸತ್ಯದ ದಾರಿಯನ್ನು ಬಿಚ್ಚಿಡುತ್ತಿರುವ   ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು ಮಾತ್ರವೇ ಎಟುಕುತ್ತಾರೆ.  ನೂರಾರು ವರ್ಷಗಳಿಂದ  ಹಲವಾರು ಅರ್ಥರಹಿತ ಆಚರಣೆಗಳಿಗೆ ನಾವು ಒಗ್ಗಿ ಹೋಗಿದ್ದೇವೆ. ಆ ಕಾರಣದಿಂದ ಶರ್ಮರ ಮಾತುಗಳು     ಸ್ವಲ್ಪ ಕಠಿಣವಾಗಿಯೇ ತೋರುತ್ತದೆ. ಆದರೆ ತಾಳ್ಮೆಯಿಂದ ಅವರ ಮಾತುಗಳನ್ನು ಕೇಳಿ ನಂತರ ಆಳವಾಗಿ ನಮ್ಮೊಳಗೆ ಚಿಂತನ-ಮಂಥನ ನಡೆಸಿದರೆ "ಹೌದಲ್ವಾ? ಶರ್ಮರು ಸತ್ಯವನ್ನೇ ಹೇಳುತ್ತಿದ್ದಾರೆಂಬ ಅಭಿಪ್ರಾಯಕ್ಕೆ ಬರಬೇಕಾಗುತ್ತದೆ.ನಾನು ಇಷ್ಟು ಸ್ಪಷ್ಟವಾಗಿ ಈ ಮಾತು ಹೇಳಲು ಕಾರಣವಿದೆ. ನಾಲ್ಕೈದು ವರ್ಷಗಳಿಂದ ಅವರೊಡನೆ ಬಹಳ ಚರ್ಚೆ ಮಾಡಿ ಕೊನೆಗೆ  ಅವರ ಮಾತನ್ನು[ವೇದಾಧಾರಿತ]  ಒಪ್ಪುವ ಅನಿವಾರ್ಯತೆ ನನಗೆ ಬಂದಿದೆ. ಅವರ ಮಾತುಗಳು ವೇದಾಧಾರಿತ ಅಲ್ಲಾ ,ಎಂದು ಯಾರೂ ಈವರಗೆ ಹೇಳಲೇ ಇಲ್ಲ. ಶರ್ಮರ ಮಾತುಗಳನ್ನು    ಅವಲೋಕಿಸಲು      ಎಲ್ಲಾ ವೇದ ಪಂಡಿತರಲ್ಲಿ ವೇದಸುಧೆಯು ಈಗಲೂ ವಿನಂತಿಸುತ್ತದೆ. ಅವರ ಮಾತುಗಳಿಗೆ ವೇದದ ಆಧಾರವಿಲ್ಲ. ಅಥವಾ ವೇದದ ಈ ಆಧಾರದಂತೆ ಅವರ ಮಾತುಗಳು ತಪ್ಪು ಎಂದು ಯಾರೇ ಪಂಡಿತರು ನಿರೂಪಿಸಿದರೂ ವೇದಸುಧೆಯು ಅವರ ಮಾತನ್ನು ಸ್ವೀಕರಿಸಲು ಸಿದ್ಧವಿದೆ. ವೇದಸುಧೆಗೆ ಬೇಕಾಗಿರುವುದು ಸತ್ಯ ಪಥ.  ಎಲ್ಲಾ ವೇದ ವಿದ್ವಾಂಸರನ್ನೂ ಈ ಒಂದು ವಿಚಾರದಲ್ಲಿ "ಸತ್ಯ ಪಥ" ಮುನ್ನಡೆಯಲು ಮಾರ್ಗದರ್ಶನ ಮಾಡಿ-ಎಂದು ವೇದಸುಧೆಯು ವಿನಂತಿಸುತ್ತದೆ. ಇಲ್ಲಿ ಇಷ್ಟು ವಿಚಾರವನ್ನು ಪ್ರಸ್ತಾಪಿಸಲು ಕಾರಣ ಇದೆ. ಮೊನ್ನೆ ಹಾಸನದಲ್ಲಿ ಶ್ರೀ ಸುಧಾಕರಶರ್ಮರೊಂದಿದೆ ಮುಕ್ತ ಸಂವಾದವು ನಡೆದಿದೆ. ಅದರ ವೀಡಿಯೋ ಕ್ಲಿಪ್ ಗಳನ್ನು  ಇನ್ನು ಮುಂದೆ ಒಂದೊಂದಾಗಿ ಇಲ್ಲಿ ಪ್ರಕಟ ಮಾಡಲಾಗುವುದು. ವಿದ್ವಜ್ಜನರು ದಯಮಾಡಿ  ಇಂತಹ  ಸತ್ಯ ಶೋಧನ ಪ್ರಯತ್ನಕ್ಕೆ ಕೈ ಜೋಡಿಸಬೇಕೆಂದರೆ  ದಿನಕ್ಕೆ ಹತ್ತು ನಿಮಿಷ ಇಲ್ಲಿನ ವೀಡಿಯೋ ಕ್ಲಿಪ್ ಗಳನ್ನು ವೀಕ್ಷಿಸಬೇಕೆಂಬುದು ವೇದಸುಧೆಯ ಕಳಕಳಿಯ ಮನವಿ. ಆಗ ನಿಮ್ಮ  ಅಭಿಪ್ರಾಯಗಳನ್ನು ವೇದದ ಆಧಾರದಲ್ಲಿ ಬಿಚ್ಚಿಡಲು ಅನುಕೂಲವಾಗುತ್ತದೆ. ಅಲ್ಲದೆ ಕೆಲವು ಸಂದರ್ಭದಲ್ಲಿ ಶರ್ಮರು ವೇದ ಮಂತ್ರ ದ ಅರ್ಥವನ್ನಷ್ಟೇ ಹೇಳಿದ್ದಾರೆ. ಅದರ ಮೂಲ ಮಂತ್ರವನ್ನು  ಅಪೇಕ್ಷಿಸುವವರು ಖಂಡಿತವಾಗಿಯೂ  ವೇದಸುಧೆಗೆ ಬರೆಯಿರಿ . ಶರ್ಮರಿಂದ ಆಧಾರ ಮಂತ್ರಗಳನ್ನು  ಪಡೆದು ಪ್ರಕಟಿಸಲಾಗುವುದು. ನಮ್ಮ ಈ ಮೇಲ್ ವಿಳಾಸ’ mail@vedasudhe.com