Pages

Saturday, September 10, 2016

ವೇದಭಾರತಿಯಿಂದ ಅಗ್ನಿಹೋತ್ರದ ಒಂದು ತುಣುಕು

ರಾಯಚೂರು ಜಿಲ್ಲಾ ಭೈಠಕ್

Dhyana Yoga - 1

ಇತ್ತೀಚೆಗೆ ದೇಹವನ್ನು ತ್ಯಜಿಸಿದ ಪೂಜ್ಯ ಪಟ್ಟಾಭಿರಾಮ್ ಗುರೂಜಿಯವರು ಅವರ ವಿದ್ಯಾಭ್ಯಾಸ ಕಾಲದಲ್ಲಿ RSS ಕಾರ್ಯಕರ್ತರು. ನನ್ನ ಸ್ನೇಹಿತರು. ಭಗವದ್ಗೀತೆಯನ್ನು ಹೇಗೆ ಸರಳವಾಗಿ ಅರ್ಥಮಾಡಿಕೊಳ್ಳಬೇಕೆಂಬುದನ್ನು ಅವರ ಕಂಠದಿಂದಲೇ ಕೇಳಿ.

ಭಾರತವನ್ನು ಜಗದ್ಗುರುವಾಗಿಸಲು......

ವಿಶ್ವಯೋಗ ದಿನವನ್ನು ಕಳೆದ ವರ್ಷ ಪ್ರಧಾನಿಯವರು ಘೋಷಣೆ ಮಾಡಿದ ನಂತರ  ನನ್ನ ಮನದಲ್ಲಿ ಬಲವಾದ ಒಂದು ವಿಶ್ವಾಸ ಮೂಡಿದೆ. RSS ಕಳೆದ 90 ವರ್ಷಗಳಲ್ಲಿ  ಜನರಲ್ಲಿ ರಾಷ್ಟ್ರ ಭಕ್ತಿಯನ್ನು ಜಾಗೃತ ಮಾಡಿ ಹಿಂದು ಶಬ್ದವನ್ನು ವಿಶ್ವದಲ್ಲಿ ಮೊಳಗುವಂತೆ ಮಾಡಿದೆ. ಆರ್ಯಸಮಾಜವು ಕಳೆದ 150 ವರ್ಷಗಳಲ್ಲಿ ಮಾಡಿರುವ ಸಾಧನೆಯನ್ನು ಮೀರಿಸಿ RSS ಬಲಿಷ್ಟವಾಗಿದೆ.
ನನ್ನ ದೃಷ್ಟಿಯಲ್ಲಿ ಹಿಂದು, ಆರ್ಯ, ಸನಾತನ......ಈ ಪದಗಳಲ್ಲಿ ಅಂತಾದ್ದೇನೂ ವೆತ್ಯಾಸವಿಲ್ಲ. 

ಹಿಮಾಲಯಮ್ ಸಮಾರಭ್ಯ ಯಾವದಿಂದು ಸರೋವರಮ್
ತಂ ದೇವ ನಿರ್ಮಿತಮ್ ದೇಶಂ ಹಿಂದುಸ್ಥಾನಮ್ ಪ್ರಚಕ್ಷತೆ||

             ದೇವರೇ ನಿರ್ಮಿಸಿದ ಹಿಮಾಲಯದಿಂದ ಇಂದುಸರೋವರದ ವರಗಿನ ಈ ಭೂಮಿಯನ್ನು ಹಿಂದುಸ್ಥಾನ ಎನ್ನುತ್ತಾರೆ. ಬೃಹಸ್ಪತಿ ಆಗಮದಲ್ಲಿನ ಶ್ಲೋಕದ ಅರ್ಥವಿದು.
            ಇದನ್ನು ಆಧಾರವಾಗಿಟ್ಟುಕೊಂಡು ಹಿಂದು ಎಂದರೆ ಇದು ಜಾತಿಯಲ್ಲ, ಇದು ನಮ್ಮ ದೇಶದ ಹೆಸರು. ಇಲ್ಲಿರುವ ಎಲ್ಲರೂ ಯಾವುದೇ ದೇವರನ್ನು ಪೂಜಿಸಿದರೂ ಇಲ್ಲಿರುವವರೆಲ್ಲಾ ಹಿಂದುಗಳೇ ಎಂಬುದು RSS ವಿಚಾರಧಾರೆ. ಎಷ್ಟು ವಿಶಾಲ ಅರ್ಥವಿದೆ!
              ಸ್ವಾಮಿ ದಯಾನಂದರಾದರು 150 ವರ್ಷಗಳ ಹಿಂದೆಯೇ ವೇದವನ್ನು ಸರಿಯಾಗಿ ಅಧ್ಯಯನ ಮಾಡಿ , ಪ್ರಪಂಚದ ಮೂಲ ಸಾಹಿತ್ಯ "ವೇದ" . ವೇದವು ಎಲ್ಲರನ್ನೂ " ಆರ್ಯ " ಅಂದರೆ ಶ್ರೇಷ್ಠ ಎನ್ನುತ್ತದೆ. ಯಾವಾಗ ವೇದವನ್ನು ಅನುಸರಿಸದೆ  ಪುರಾಣದ ಆಧಾರದ ಮೆಲೆ ಸಂಪ್ರದಾಯಗಳು ನಡೆದುಬಂತೋ ಆಗ ವೇದದ ಸತ್ಯವನ್ನು ಮರೆಮಾಚುವಂತಹ ಕೆಲಸವನ್ನು ಕಂಡು ಮಹರ್ಷಿ ದಯಾನಂದ ಸರಸ್ವತಿಯವರು  ಮೇಲು ಕೀಳು, ಸ್ಪೃಶ್ಯ-ಅಸ್ಪೃಶ್ಯ, ಜಾತಿ-ಮತ  ಯಾವ ಭೇದವಿಲ್ಲದೆ ಮಾನವಮಾತ್ರದ ಎಲ್ಲರಿಗಾಗಿ  "ಆರ್ಯ ಸಮಾಜವನ್ನು " ಸ್ಥಾಪಿಸಿದರು.
            ಆದರೆ ಸಾವಿರಾರು ವರ್ಷಗಳ ದಾಸ್ಯದ ಪರಿಣಾಮವಾಗಿ ವೇದದ ನಾಡಿನಲ್ಲೇ ವೇದವನ್ನು ಪೋಷಿಸದೆ ಆರ್ಯ ಸಮಾಜದ ಕೆಲಸವು ನಿರೀಕ್ಷೆಯಷ್ಟು ಬೆಳೆಯಲಿಲ್ಲ. ಸಂಪ್ರದಾಯದ ಹೆಸರಲ್ಲಿ ಹಲವಾರು ಕುರುಡು ನಂಬಿಕೆಗಳೂ ಮುಂದುವರೆಯಿತು. ಅದರ ಪರಿಣಾಮವಾಗಿಯೇ ಸ್ಪೃಶ್ಯ -ಅಸ್ಪೃಶ್ಯ ಭಾವನೆಯನ್ನು ಇಂದೂ ಸಹ ಬುಡ ಸಹಿತ ತೊಲಗಿಸಲಾಗದೆ ಅದೊಂದು ಬೃಹತ್ ಸಮಸ್ಯೆಯಾಗಿ ದೇಶವನ್ನು ಕಾಡುತ್ತಿದೆ. 
RSS ಆದರೋ ಎಲ್ಲರಲ್ಲೂ "ಹಿಂದು " ಎಂಬ ಭಾವನೆ ಮೊದಲು  ಜಾಗೃತ ಗೊಳಿಸೋಣ ಎಂಬ ಸಂಕಲ್ಪ ತಾಳಿ ಅದರಂತೆ ಬಹುಪಾಲು ಯಶಸ್ಸು ಪಡೆದಿದೆ. ಆದರೆ ಬೆಳೆಯ ಜೊತೆಗೆ ಕಳೆಯೂ ಹುಲುಸಾಗಿಯೇ ಇದೆ. ಕಳೆಯನ್ನು ತೆಗೆಯಲೇ ಬೇಕು.ಇಂದಲ್ಲಾ ಇನ್ನು ಒಂದೆರಡು ದಶಕಗಳಲ್ಲಾದರೂ  ಆ ಕೆಲಸ ಆಗುತ್ತದೆಂಬುದರಲ್ಲಿ ಎರಡು ಮಾತಿಲ್ಲ.

ಆದರೆ ಪೂಜ್ಯ ಸ್ವಾಮಿ ಬಾಬಾ ರಾಮ್ ದೇವ್ 2006 ರಲ್ಲಿ ಪತಂಜಲಿ ಯೋಗ ಪೀಠವನ್ನು ಸ್ಥಾಪಿಸಿದರೂ ಸಹ 1995 ರಿಂದಲೇ ಯೋಗವನ್ನು ಅಸ್ತ್ರವಾಗಿಟ್ಟುಕೊಂಡು ಮನುಷ್ಯನ ಎಲ್ಲಾ ಸಮಸ್ಯೆಗಳಿಗೂ ಅವನ ತಪ್ಪು ಆಹಾರ ಮತ್ತು ತಪ್ಪು ವಿಚಾರವೇ ಕಾರಣವೆಂದು ವಿವರಿಸುತ್ತಾ ಅದಕ್ಕೆ ವೇದದ ಹಿನ್ನೆಲೆಯನ್ನು ನೀಡುವುದರ ಮೂಲಕ ಜನರನ್ನು ಯೋಗ ಮಾರ್ಗದತ್ತ ಸೆಳೆದಿದ್ದಾರೆ.

 ನಮ್ಮ ದೇಶದಲ್ಲಿ ಸಾವಿರಾರು ವರ್ಷಗಳ  ಹಿಂದೆಯೇ ನಮ್ಮ ಪ್ರಾಚೀನ ಋಷಿಗಳು ತಮ್ಮ ತಪಸ್ಸಿನ ಫಲವಾಗಿ ನಮಗೆ ಆರೋಗ್ಯಕರವಾಗಿ ಬದುಕುವ ದಾರಿ ತೋರಿಸಿದ್ದಾರೆಂದು  ಪತಂಜಲಿ ಮಹಾಮುನಿಗಳ ಯೋಗ ದರ್ಶನವನ್ನು ಅಧ್ಯಯನ ಮಾಡಿದ್ದಲ್ಲದೆ , ಸರಿಯಾದ ಗುರುಗಳಿಂದ ವೇದಾಧ್ಯಯನವನ್ನೂ ಮಾಡಿ, ವೇದ ಉಪನಿಷತ್ತನ್ನು ಕರಗತ ಗೊಳಿಸಿಕೊಂಡು ಜಗತ್ತಿನ ಎಲ್ಲಾ ಸಮಸ್ಯೆಗಳಿಗೂ ವೇದದಲ್ಲಿ ಪರಿಹಾರವಿದೆ. ನಮ್ಮ ಋಷಿಗಳು ತೋರಿದ ಮಾರ್ಗದಲ್ಲಿ ನಡೆದರೆ ಇಡೀ ಜಗತ್ತು ಸುಖಮಯವಾಗಿರಬಹುದೆಂಬ ವಿಚಾರವನ್ನು ಕೋಟಿ ಕೋಟಿ ಜನರಿಗೆ ಯೋಗ ಶಿಬಿರಗಳ ಮೂಲಕ ಮನವರಿಕೆ ಮಾಡುತ್ತಿದ್ದಾರೆ. 

ಇಷ್ಟೆಲ್ಲಾ ಬರೆಯಲು ಕಾರಣವಿದೆ. ಪೂಜ್ಯ ಬಾಬಾ ರಾಮದೇವ್ ಸ್ವಾಮೀಜಿಯವರು ಯೋಗ, ಸ್ವದೇಶೀ ಉತ್ಪಾದನೆ, ಗೋಮಾತೆಯ ವಿಚಾರದಲ್ಲಿ ಶ್ರದ್ಧೆಯನ್ನು ಬೆಳೆಸುವಲ್ಲಿ , ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸುವಲ್ಲಿ ತಮ್ಮದೇ ಆದ ಹಾದಿಯಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಸ್ವಾಮೀಜಿಯವರ ಪ್ರಯತ್ನಕ್ಕೆ ಯಶಸ್ಸು ಸಿಗಲು RSS   90 ವರ್ಷಗಳಿಂದ ದೇಶದಲ್ಲಿ ಮಾಡಿರುವ ಜಾಗೃತಿಯೂ ಸಹ  ಕಾರಣವಾಗಿದೆ. ಸಂಘಸ್ಥಾಪಕರಾದ  ಪರಮ ಪೂಜನೀಯ   Dr. ಹೆಡಗೇ ವಾರರ ಆಶಯ ಒಂದಿತ್ತು. ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ರಾಷ್ಟ್ರ ನಿಷ್ಠ ಕಾರ್ಯಕರ್ತರನ್ನು  ಬೆಳೆಸಿ ತನ್ಮೂಲಕ  ದೇಶದಲ್ಲಿ ಒಂದು ಪರಿವರ್ತನೆಯನ್ನು ತರಬೇಕೆಂದು.
ಪೂಜ್ಯ ಸ್ವಾಮೀಜಿಯವರ ಪತಂಜಲಿ ಯೋಗ ಪೀಠದ ಕೆಲಸದಲ್ಲಿ ಸಾವಿರಾರು ಜನ RSS ಕಾರ್ಯಕರ್ತರು ಕೈಜೋಡಿಸಿರುವುದು ಜನರಿಗೆ ಗೊತ್ತಾಗುವುದಿಲ್ಲ.

ಭಾರತವು ಮತ್ತೊಮ್ಮೆ ಜಗದ್ಗುರುವಾಗಬೇಕೆಂಬುದು RSS ಸಂಕಲ್ಪ. ಅದೇ ಸಂಕಲ್ಪ ಸ್ವಾಮೀಜಿಯವರದ್ದೂ ಆಗಿದೆ. ಈಗ ಆಗಬೇಕಾಗಿರುವ ಕೆಲಸವೆಂದರೆ RSS ಮತ್ತು ಪತಂಜಲಿ ಕಾರ್ಯಕರ್ತರು ಪರಸ್ಪರ ಅಲ್ಪ ಸ್ವಲ್ಪ ಹೊಂದಾಣಿಕೆಯನ್ನು ಮಾಡಿಕೊಂಡು ರಾಷ್ಟ್ರದ ಪುನರುತ್ಠಾನ ಕಾರ್ಯದಲ್ಲಿ ಪರಸ್ಪರ ಕೈ ಜೋಡಿಸುವುದು ದೇಶದ ದೃಷ್ಠಿಯಿಂದ ಅತ್ಯಂತ ಅಗತ್ಯವಾಗಿದೆ.
ಭಾರತವು ಮತ್ತೊಮ್ಮೆ ಜಗದ್ಗುರುವಾಗಲು.......

RSS ನ ರಾಷ್ಟ್ರ ಪ್ರೇಮ ಮತ್ತು ಶಿಸ್ತು
ಪತಂಜಲಿ ಪರಿವಾರದ ಯೋಗ ಮತ್ತು ವೇದ  ಚಿಂತನೆಗಳು
ಹಾಗೂ ಸಮಾನ ಮಾನಸಿಕತೆಯ ಎಲ್ಲರೂ   ಸ್ವದೇಶೀ ಮತ್ತು  ಗೋರಕ್ಷೆ ಹಾಗೂ  ದೇಶದ ಅಖಂಡತೆಗಾಗಿ ಒಗ್ಗೂಡಿ ಕೆಲಸ ಮಾಡಬೇಕಾಗಿದೆ.
ಇದು ನನ್ನ ಪ್ರಾಮಾಣಿಕ ಆಶಯ.

ಸಂಪಾದಕೀಯ

             ವೇದಸುಧೆಯ ಅಭಿಮಾನೀ ಮಿತ್ರರೇ, ಕಳೆದ ಆರೇಳು ವರ್ಷಗಳ ಹಿಂದೆ  ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮರ ಮಾರ್ಗದರ್ಶನದಲ್ಲಿ  ಆರಂಭವಾದ " ವೇದಸುಧೆ"  ಆರಂಭದ ದಿನಗಳಲ್ಲಿ  ಶ್ರೀ ಸುಧಾಕರ ಶರ್ಮರ ಆಡಿಯೋ /ವೀಡಿಯೋ ಗಳನ್ನು ಸಾಕಷ್ಟು ಪ್ರಕಟಿಸಿ ಜನರಲ್ಲಿ ವೇದದ ಅರಿವು ಮೂಡಿಸುವಂತಹ ಕೆಲಸಗಳನ್ನು ಸುಮಾರು ನಾಲ್ಕೈದು ವರ್ಷ ಮಾಡಿತು. ಆನಂತರದಲ್ಲಿ ಶರ್ಮರ ಆರೋಗ್ಯವೂ ಸ್ವಲ್ಪ ಕಮ್ಮಿಯಾಯ್ತು. ಅವರ ಪ್ರವಾಸ ಕಮ್ಮಿಯಾಯ್ತು. ಸಂಪರ್ಕ ಮುಂಚಿನಂತೆ ಹೆಚ್ಚು ಮಾಡುವುದು ಕಷ್ಟವಾಯ್ತು. ನಂತರದ ದಿನಗಳಲ್ಲಿ ವೇದಭಾರತಿಯ ಚಟುವಟಿಕೆಗಳನ್ನು ಹೆಚ್ಚು ಪ್ರಕಟಿಸುತ್ತಾ ವೇದಸುಧೆ ಮುಂದುವರೆಯಿತು.
Facebook  ನಲ್ಲಿ ಬರೆಯುವುದು ಆರಂಭವಾದಮೇಲೆ ಬ್ಲಾಗ್ ನಲ್ಲಿ ಬರೆಯುವುದೂ ಕಷ್ಟವಾಯ್ತು. ಕಳೆದ ಒಂದು ವರ್ಷದಿಂದ Face book ನಲ್ಲೇ ಎಲ್ಲಾ ಚಟುವಟಿಕೆಗಳನ್ನೂ ಪೋಸ್ಟ್ ಮಾಡುತ್ತಾ ಬ್ಲಾಗ್ ನಲ್ಲಿ ಹೆಚ್ಚು ಬರೆಯಲಾಗಲಿಲ್ಲ. ಆದರೆ "ವೇದಸುಧೆ" ಯು ತನ್ನದೇ ಆದ ಮಹತ್ವ ಪಡೆದಿದೆ.

ಇನ್ನುಮುಂದೆ ವೇದಭಾರತಿಯ ಮತ್ತು ಪತಂಜಲಿ ಯೋಗ ಪರಿವಾರದ ಚಟುವಟಿಕೆಗಳನ್ನು ವೇದಸುಧೆಯು ನಿರಂತರ ಪ್ರಕಟಿಸುವುದು. ಹೊಸದಾಗಿ ಲೇಖಕರಾಗಲು ಒಪ್ಪಿರುವ ಶ್ರೀ ಗುರುದತ್ತ ವಿದ್ಯಾರ್ಥಿಯವರು   "ಪತಂಜಲಿ ಪರಿವಾರ  ಕರ್ನಾಟಕ " ಚಟುವಟಿಕೆ ಗಳನ್ನು ಪ್ರಕಟಿಸುವರು. ಅವರಿಗೆ ವೇದಸುಧೆಯ ಸ್ವಾಗತ.

ಸಿಂಧನೂರಿನ ಗಣೇಶೋತ್ಸವದಲ್ಲಿ ಪತಂಜಲಿ ಯೋಗ ಸಮಿತಿಯ ಪ್ರಾಂತ ಪ್ರಭಾರಿಗಳಾದ ಶ್ರೀ ಭವರ್ ಲಾಲ್ ಆರ್ಯ ರಿಂದ ಸತ್ಸಂಗ

ಹಾಸನದಲ್ಲೂ ಹೀಗೆ ಮಾಡುವ plan ಇದೆ. ಭವರ್ಲಾಲ್ ಜಿ ಸಮಯ ಸಿಗಬೇಕಷ್ಟೆ.






ಯಾರು ಯೋಗಿ? ಸುಖೀ ಯಾರು?

ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಪರಮಾತ್ಮನು ಅರ್ಜುನ ಮೂಲಕ ನಮಗೆ ಹೇಳಿರುವ ಮಾತು ಕೇಳಿ...
ಅಧ್ಯಾಯ : 5 , ಶ್ಲೋಕ : 23
ಶಕ್ನೋತೀಹೈವ ಯಃ ಸೋಢುಂ ಪ್ರಾಕ್ಶರೀರವಿಮೋಕ್ಷಣಾತ್ |
ಕಾಮಕ್ರೋದೋದ್ಭವಂ ವೇಗಂ ಸ ಯುಕ್ತಃ ಸ ಸುಖೀ ನರಃ ||
ಯಾವ ಸಾಧಕನು ಈ ಮನುಷ್ಯ ಶರೀರದಲ್ಲಿ ಶರೀರ ನಾಶವಾಗುವುದಕ್ಕಿಂತ ಮೊದಲೇ ಕಾಮಕ್ರೋಧಗಳಿಂದ ಉಂಟಾಗುವ ಉದ್ವೇಗವನ್ನು ಸಹಿಸಿಕೊಳ್ಳಲು ಸಮರ್ಥನೋ ಆ ಮನುಷ್ಯನೇ ಯೋಗಿ , ಅವನೇ ಸುಖೀ.
ಎಷ್ಟು ಸರಳವಾಗಿದೆ ಅಲ್ಲವೇ?
ಆದರೆ ಜೀವನದಲ್ಲಿ ಅಳವಡಿಸಿಕೊಳ್ಳುವುದು ಬಲು ಕಷ್ಟ. ಸ್ವಲ್ಪ ವಿಶ್ಲೇಷಿಸೋಣ.
ಮೊದಲಿಗೆ ...

ಕಾಮದಿಂದಾಗುವ ಉದ್ವೇಗ :
ಕಾಮ ಎಂದೊಡನೆ ಸ್ತ್ರೀ ಪುರುಷರ ನಡುವೆ ಇರುವ ಭೋಗ ಎಂದು ಭಾವಿಸಬೇಕಾಗಿಲ್ಲ.
ಕಾಮ ಎಂದರೆ ಬಯಕೆ, ಇಚ್ಛೆ, ವಿಷಯಾಭಿಲಾಷೆ.
ಸಣ್ಣಪುಟ್ಟ ಬಯಕೆಗಳೇ ಸಾಕು ನಮ್ಮನ್ನು ವಿಚಲಿತರನ್ನಾಗಿ ಮಾಡಲು,
ಅದು ಅಧಿಕಾರ ಇರಬಹುದು, ಗೌರವದ ಪ್ರಶ್ನೆ ಇರಬಹುದು, ಎಷ್ಟು ಬೇಗ ನಮ್ಮನ್ನಷ್ಟೇ ಅಲ್ಲ ಸಾದು ಸಂತರನ್ನೂ ಉದ್ವೇಗಗೊಳಿಸದೇ ಇರದು. ಒಬ್ಬ ಸಾದುವಿಗೆ ಸಾಮಾನ್ಯನೊಬ್ಬ ಗೌರವ ಕೊಡಲಿಲ್ಲ ಎಂಬ ಕಾರಣಕ್ಕೆ ಅವರು ಎಷ್ಟು ತಾಳ್ಮೆ ಕಳೆದುಕೊಂಡರೆಂದರೆ........
ನಾವು ಲೌಕಿಕರೆ ಪರವಾಗಿಲ್ಲ ಎನಿಸದೇ ಇರಲಿಲ್ಲ.

ಯಾವುದೋ ಸಮಾರಂಭದಲ್ಲಿ ಯೋಜಕರ ಕಾರ್ಯ ಒತ್ತಡದಿಂದ ಗಣ್ಯರೊಬ್ಬರನ್ನು ಗಮನಿಸದಿದ್ದಾಗ ಗಣ್ಯರ ಮುಖ ನೋಡ ಬೇಕು.....

ಇನ್ನು ಕ್ರೋಧದಿಂದಾಗುವ ಉದ್ವೇಗ : ಯಾರೋ ಒಬ್ಬ ಅವನ ಅಜ್ಞಾನದಿಂದ ತಪ್ಪೆಸಗಿದ ಪರಿಣಾಮ ಮತ್ತೊಬ್ಬನಿಗೆ ಅವಮಾನವಾಗುವ ಪ್ರಸಂಗ ಬರುತ್ತದೆ. ತಕ್ಷಣ ಎರಡನೆಯವನು ಅವನ ದೃಷ್ಟಿಯಿಂದಲೇ ಕ್ರೋಧವನ್ನು ಪ್ರಕಟಿಸುತ್ತಾನೆ.ಮೊದಲನೆಯವನಿಗೆ ಅವನ ತಪ್ಪಿನ ಅರಿವಿರುವುದಿಲ್ಲ ಅವನು ಶಾಂತವಾಗೇ ಇರುತ್ತಾನೆ. ಎರಡನೆಯವನು ಕ್ರೋಧದಿಂದ ಕುದ್ದು ಹೋಗುತ್ತಾನೆ. ಇದನ್ನೇ ಉದ್ವೇಗ ಎನ್ನುವುದು.

ಈ ಸ್ಥಿತಿಗಳಿಂದ ಹೊರಬಂದಾಗ ಅವನು ಯೋಗಿಯೂ ಹೌದು. ಸುಖಿಯೂ ಹೌದು.

ಈಶಾವಾಸ್ಯಮ್ ನಲ್ಲಿ ಹಾಸನದ ಪತಂಜಲಿ ಯೋಗ ಪರಿವಾರದ ಭೈಠಕ್

ಹಾಸನದ ಪತಂಜಲಿ ಯೋಗ ಪರಿವಾರದಿಂದ ಇದೇ 19 ರಿಂದ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ನಡೆಯಲಿರುವ ಯೋಗ ಶಿಕ್ಷಕ ತರಬೇತಿ ಶಿಬಿರದ ವ್ಯವಸ್ಥೆ ಬಗ್ಗೆ ಇಂದು ಕಾರ್ಯಾಲಯ ಈಶಾವಾಸ್ಯಮ್ ನಲ್ಲಿ ಭೈಠಕ್ ನಡೆದು ಸಮಗ್ರವಾಗಿ ಚರ್ಚಿಸಲಾಯ್ತು.