Pages

Monday, June 1, 2015

ವೇದಚಿಂತನೆಯ ಕಾರ್ಯಗಾರನಿರೀಕ್ಷೆ ಮಾಡಿದ್ದೇ 70-80 ಜನರನ್ನು. ಪಾಲ್ಗೊಂಡವರೂ ಸರಿಸುಮಾರು ನೂರರ ಒಳಗಿನ ಸಂಖ್ಯೆ.  ದಿನಾಂಕ 31.5.2015 ಭಾನುವಾರ ಬೆಂಗಳೂರಿನ ರಾಜಾಜಿನಗರದ ವಂದೇಮಾತರಮ್ ಹೋಟೆಲಿನ ಕಾನ್ಫೆರೆನ್ಸ್ ಹಾಲಿನಲ್ಲಿ   ಸುಧಾಕರ ಶರ್ಮರ ಆರು  ಗಂಟೆಗೂ ಮೀರಿದ "ವೇದ ವಿವರಣೆ".   ಆರಂಭದಲ್ಲೇ ಹಾಸನ ವೇದಭಾರತಿಯ ಮಹಿಳಾ ಸದಸ್ಯೆಯರಿಂದ ಅಗ್ನಿಹೋತ್ರ.ಶ್ರೀ ಅಶೋಕ್ ಕುಮಾರ್ ಅವರ ಕಗ್ಗದ ರುಚಿ. ನಾಗೇಶ್ ಅವರ ಸಿರಿಧಾನ್ಯದ ಸವಿ. ಸಾಧನಾ ಸಂಗಮದ ಶ್ರೀ ಪಟ್ಟಾಬಿರಾಮ್ ಗುರೂಜಿ  ಹಾಗೂ ವಿವೇಕಾನಂದ ಆದರ್ಶ ಕೇಂದ್ರದ ಸದಸ್ಯರ ಉತ್ಸಾಹಪೂರ್ಣ ಪಾಲ್ಗೊಳ್ಳುವಿಕೆ. ಎಲ್ಲವೂ ಅದ್ಭುತಗಳೇ!!

ಬೆಂಗಳೂರಿನ ರಾಜಾಜಿನಗರದ ಇಸ್ಕಾನ್ ಸಮೀಪ ಇರುವ "ವಂದೇ ಮಾತರಮ್ ಹೋಟೆಲಿನ ಕಾನ್ಫೆರೆನ್ಸ್ ಹಾಲ್ ನಿಜವಾಗಿ "ವೇದಚಿಂತನೆಯ ಕಾರ್ಯಗಾರವಾಗಿ " ಪರಿವರ್ತಿತವಾಗಿತ್ತು. ಹೋಟೆಲಿನ ಮಾಲೀಕರಾದ ಶ್ರೀ ನಾಗೇಶ್ ಅವರ ಆತಿಥ್ಯವೂ ಅದ್ಭುತವೇ ಆಗಿತ್ತು. ಈ ಬಾರಿ ಮಿಸ್ ಮಾಡಿಕೊಂದವರು ಮುಂದೆ ನಾವು ಯೋಜಿಸಿದ ಸ್ಥಳಕ್ಕೆ ಬನ್ನಿ ಎಂದಷ್ಟೇ ತಿಳಿಸಬಯಸುವೆ. ಈಗಾಗಲೇ "ಸಾಧನಾಕೇಂದ್ರ" ಆಶ್ರಮವು ನಮಗೆ ಆಹ್ವಾನ ನೀಡಿದೆ. "ಎರಡು ದಿನದ ಕಾರ್ಯಾಗಾರಮಾಡಿ"-ಎಂಬುದು ಪಟ್ಟಾಭಿರಾಮ್ ಗುರೂಜಿಯವರ ಸಲಹೆ. ವ್ಯವಸ್ಥೆ ಮಾದಲು ಮುಂದೆ ಬಂದಮೇಲೆ ಬೇದಭಾರತಿಯು ತನ್ನ ಕರ್ತವ್ಯವನ್ನು ನಿರ್ವಹಿಸುವುದಕ್ಕೆ ಹಿಂದೆ ಬೀಳುವುದಿಲ್ಲ.

ಸುಧಾಕರಶರ್ಮರ ಚಿಂತನ ಗೋಷ್ಠಿಯ ಆಡಿಯೋ -ವೀಡಿಯೋ ರೆಕಾರ್ಡಿಂಗ್ ಆಗಿದೆ.   ವೇದಭಾರತಿಯು  ಮುಂದೆ  CD- DVD ಗಳಲ್ಲಿ ಸಾವಿರಾರು ಜನರಿಗೆ ವೇದದಸತ್ಯ ಸಂದೇಶವನ್ನು ತಲುಪಿಸುವ ಆಶಾಭಾವ ಹೊಂದಿದೆ. CD- DVD ಬೇಕೆನ್ನುವವರು 9663572406 ಗೆ ಒಂದು SMS ಕಳಿಸಿದರೆ ಎಡಿಟಿಂಗ್-ಪ್ರೊಸೆಸ್ಸೆಂಗ್ ಕೆಲಸ ಮುಗಿದ ಕೂಡಲೇ ಅದು  ಸಾರ್ವಜನಿಕರಿಗೆ ಲಭ್ಯ.