Pages

Monday, September 20, 2010

ಹೌದಲ್ವಾ!

ಯಾವುದೇ ನಾಯಿ ಇನ್ನೊ೦ದು ನಾಯಿಯನ್ನು ಕೊಲ್ಲುವುದಿಲ್ಲ. ಯಾವುದೇ ಚಿರತೆ ಹುಲಿ ಇನ್ನೊ೦ದು ಚಿರತೆ ಹುಲಿಯನ್ನು ಕೊಲ್ಲುವುದಿಲ್ಲ.ಆದರೆ ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಇರಿದು ಕೊಲ್ಲುತ್ತಾನೆ, ಚಿತ್ರಹಿ೦ಸೆಯಿ೦ದ ಸಾಯಿಸುತ್ತಾನೆ.
Damn with Human Civilization!!
------------------------------------------------------
ಜೀವನದ ತು೦ಬಾ ಕವಲುದಾರಿಗಳು.
ನೇರ ದಾರಿಯೇ ಇಲ್ಲ.
ಯಾವುದೋ ಒ೦ದು ಕವಲಿನಲ್ಲಿ ಸಿಕ್ಕಿ ಹಾಕಿಕೊಳ್ಳುತ್ತೇವೆ.
ಮತ್ತೆ ನೇರ ದಾರಿಗೆ ಬರುವ ಹೊತ್ತಿಗೆ
ಆ ಕವಲೇ ನಮ್ಮ ಬದುಕಿಗೆ ಉರುಳಾಗಿರುತ್ತದೆ....
ಮತ್ತು ಆಗಲೇ ಕಾಲ ಮಿ೦ಚಿರುತ್ತದೆ....
--------------------------------------------------------
ಸಮಾಜ ಕಾರ್ಯಕ್ಕೆ ಒ೦ದು ನೂರು ರೂಪಾಯಿ ದೇಣಿಗೆ ನೀಡಿದಾಗ
ಅದು ನಿನಗೆ ಅತಿ ದೊಡ್ಡ ಮೊತ್ತ ಅನಿಸುವುದು
ಆದರೆ
ನೀನು ಶಾಪಿ೦ಗ್ ಮಾಡುವಾಗ ಅದು ಅತಿ ಚಿಕ್ಕ ಮೊತ್ತ ಅನಿಸುವುದು
ವಿಚಿತ್ರವೆನಿಸುವುದಿಲ್ಲವೇ...?
---------------------------------------------------------------

ಜೀವನದಲ್ಲಿ ಕೆಲವು ಪುಟ್ಟ ಪುಟ್ಟ ಅನಾಮಧೇಯ ಸ೦ಗತಿಗಳು, ಕೆಲಸಗಳು ನಮ್ಮ ಬದುಕನ್ನೇ ಒ೦ದು ಸು೦ದರ ಕಾವ್ಯವನ್ನಾಗಿಸುವ ದೈತ್ಯ ಶಕ್ತಿ ಅವಕ್ಕಿವೆ.
ಒ೦ದು ಮಧುರ ಸ್ಪರ್ಶ, ಪ್ರೀತಿಪಾತ್ರರ ತಲೆಯನ್ನು ಮೃಧುವಾಗಿ ನೇವರಿಸುವುದು ಒಬ್ಬರ ಕಣ್ಣೀರ ಕಥೆಯನ್ನು ಆತ್ಮೀಯವಾಗಿ ಮೌನವಾಗಿ ಕೇಳುವುದು, ಸಾಧ್ಯವಾದರೆ ಅವರಿಗೆ ಒ೦ದೆರಡು ಕಣ್ಣೀರ ಹನಿ ಮುಡಿಪಾಗಿಡುವುದು..
ಒ೦ದು ಸಣ್ಣ ಮುಗುಳ್ನಗೆ, ಕೆಳಕ್ಕೆ ಎಡವಿದಾಗ ನಿಮ್ಮ ಕೈಯನ್ನು ನೀಡುವುದು, ಒ೦ದು ಸು೦ದರ ಸೂರ್ಯಾಸ್ತಮಾನ ವೀಕ್ಷಿಸುವುದು, ಹದವಾದ ಹಸಿ ನೆಲದಲ್ಲಿ ಒ೦ದು ಪುಟ್ಟ ಸಸಿಯನ್ನು ನೆಡುವುದು, ಬೇರೊಬ್ಬರ ಹರ್ಷದ ಘಳಿಗೆಯಲ್ಲಿ ಮನತು೦ಬಿ ನಗುವುದು, ಒ೦ದೆರಡು ಒಳ್ಳೆಯ ಮೆಚ್ಚುಗೆ ನುಡಿಗಳು ಅದೆಷ್ಟು ಅಸ೦ಖ್ಯ ಸ೦ಗತಿಗಳಿವೆ...
ಬನ್ನಿ ಅವುಗಳನ್ನು ದ್ವಿಗುಣಗೊಳಿಸೋಣ.
ಬದುಕಿನ ಸಾರ್ಥಕ್ಯವಿರುವುದೇ ಅ೦ತಹ ಪುಟ್ಟ ಅನಾಮಧೇಯ ಸ್ಪ೦ದನಗಳಲ್ಲಿ..
----------------------------------------------------------------------------

ಕಾಡುಮೃಗಗಳು ಎ೦ದಿಗೂ ಮೋಜಿಗಾಗಿ ಕೊಲ್ಲುವುದಿಲ್ಲ. ತನ್ನ ಸಹಜೀವಿಗಳನ್ನು ಹಿ೦ಸಿಸಿ ಕೊಲ್ಲುವುದು ಮನುಷ್ಯಪ್ರಾಣಿಗೆ ಮಾತ್ರ, ಅದು ಮೋಜಿನ ವಿಚಾರ.
-ಡಾ|| ಜ್ಞಾನದೇವ್

ವೇದಸುಧೆಯು ಅದರ ಮೂಲ ಉದ್ಧೇಶ ಬಿಟ್ಟು ಸಾಗುತ್ತಿದೆಯೇ?

ಶ್ರೀ ವಿಶಾಲ್ ಬೆಂಗಳೂರಿನಿಂದ ವೇದಸುಧೆಗೆ ಒಂದು ಮೇಲ್ ಮಾಡಿದ್ದಾರೆ. ಅದರಲ್ಲಿ ವೇದಸುಧೆಯು ಅದರ ಮೂಲ ಉದ್ಧೇಶ ಬಿಟ್ಟು ಸಾಗುತ್ತಿದೆಯೇ? ಎನ್ನುವ ಸಂದೇಹ ವ್ಯಕ್ತ ಪಡಿಸಿದ್ದಾರೆ.ವೇದಸುಧೆಯಿಂದ ಅವರ ನಿರೀಕ್ಷೆ ಬಹಳ ಇದೆ ಎಂಬುದು ಅವರ ಕಳಕಳಿಯಿಂದಲೇ ವ್ಯಕ್ತವಾಗುತ್ತದೆ. ಅವರ ಅಭಿಪ್ರಾಯಗಳನ್ನು ವೇದಸುಧೆಯ ಎಲ್ಲರ ಗಮನಕ್ಕಾಗಿಯೇ ಇಲ್ಲಿ ಪ್ರಕಟಿಸಲಾಗಿದೆ. ಅಲ್ಲದೆ ಕಳೆದೆರಡು ದಿನಗಳಿಂದ ವೇದಾಧ್ಯಾಯೀ ಸುಧಾಕರಶರ್ಮರು ವೇದಸುಧೆಗಾಗಿ ಆಡಿಯೋ/ವೀಡಿಯೋ ಕ್ಲಿಪ್ ಗಳಲ್ಲಿ ವೈದಿಕ ಚಿಂತನೆ ನಡೆಸಿರುತ್ತಾರೆ. ಇನ್ನು ಮುಂದೆ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಶ್ರೀ ಶರ್ಮರ ವೈದಿಕ ಚಿಂತನೆಗಳನ್ನು ವೇದಸುಧೆಯಲ್ಲಿ ಪ್ರಕಟಿಸಲಾಗುತ್ತದೆ. ಈ ವಿಷಯಗಳ ಮೇಲೆ ನಮ್ಮ ಸಂದೇಹಗಳನ್ನು /ಅಭಿಪ್ರಾಯಗಳನ್ನು ವೇದಸುಧೆಗೆ ಬರೆಯುತ್ತಾ ಹೋದರೆ ಶ್ರೀ ಶರ್ಮರು ಉತ್ತರಿಸಲು ಒಪ್ಪಿರುತ್ತಾರೆ.
-ಹರಿಹರಪುರಶ್ರೀಧರ್
ನಿರ್ವಾಹಕ

On 17 September 2010 10:37,
Dear Sir,


I have some doubts about vedasudhe and its objective.
I am aware of the fact that vedasudhe is a platform for spiritual thoughts and
its not aligned to any particular school of thought.I would like to list out
few of my questions:


If the objective of the vedasudhe is to spread vedic thoughts to the people then
is it right to post puranic articles which are quite contradictory to the former thoughts.


Or if the platform accepts and agrees everything then there would be no effort to search
truth.


Why do I feel that members wants to be in feel good position and simply appreciates
everything posted


I also feel that most of the members do not want to accept or even agree to the things that are logical
and true.People still are happy to believe their good old thoughts.

I feel that people stop discussing if the argument is not going on their side which is truly disappointing.
I also believe that any vaada should end with a concrete conclusion and one side has to accept the truth.
All those great minds shankara,ramanuja, madhwa believed in the above concept but why people
now say you follow yours and we ll follow ours.


I strongly feel that vedasudhe should a platform for healthy result oriented discussion that aims to
understand more about universal truth and not just a photo/video/article sharing place.


I really dont know what others feel about this but I have written what really makes sense to me.I may sound
rational and bold but I am very much clear about my thoughts.
Hope this wont hurt anyone.


Regards,


Vishal