Pages

Tuesday, March 6, 2012

ಬಲಿವೈಶ್ವದೇವಯಜ್ಞ


     ಯಜ್ಞದಲ್ಲಿ ಪ್ರಾಣಿಬಲಿಯನ್ನು ಸಮರ್ಥಿಸಿಕೊಳ್ಳಲು ಬಲಿವೈಶ್ವದೇವಯಜ್ಞವನ್ನು ಕೆಲವರು ಉಲ್ಲೇಖಿಸುತ್ತಿದ್ದು,, ಈ ಬಲಿವೈಶ್ವದೇವಯಜ್ಞವೆಂದರೆ ಏನು ಎಂಬುದನ್ನು ತಿಳಿಯಪಡಿಸುವುದೇ ಈ ಬರಹದ ಉದ್ದೇಶ. ವೈಶ್ವದೇವಯಜ್ಞಕ್ಕೂ ಪ್ರಾಣಿಬಲಿಗೂ ಸಂಬಂಧವೇ ಇಲ್ಲದಿರುವುದನ್ನು ವಾಚಕರು ಗಮನಿಸಬಹುದು.
-ಕ.ವೆಂ.ನಾಗರಾಜ್.


     ಬಲಿವೈಶ್ವದೇವಯಜ್ಞದಲ್ಲಿ ಈ ಕೆಳಗಿನ ೧೦ ಮಂತ್ರಗಳನ್ನು ಉಚ್ಛರಿಸಲಾಗುತ್ತದೆ. ಭೋಜನಕ್ಕಾಗಿ ಸಿದ್ಧಪಡಿಸಿದ ಆಹಾರ ಪದಾರ್ಥಗಳಲ್ಲಿ ಹುಳಿ, ಉಪ್ಪು, ಖಾರ, ದ್ವಿದಳ ಧಾನ್ಯಗಳನ್ನು ಹೊರತುಪಡಿಸಿ ಉಳಿದ ಆಹಾರದಲ್ಲಿ ಭಾಗವನ್ನು ಅಗ್ನಿಗೆ ಆಹುತಿ ನೀಡುತ್ತಾರೆ. ಮನೆಯ ಯಜಮಾನ ಅಥವ ಆತನ ಅನುಪಸ್ಥಿತಿಯಲ್ಲಿ ಆತನ ಪತ್ನಿ ಅಥವ ಸ್ತ್ರೀಯರೇ ಈ ಆಹುತಿಯನ್ನು ಅರ್ಪಿಸಬಹುದಾಗಿದೆ.
ಓಂ ಅಗ್ನಯೇ ಸ್ವಾಹಾ || ೧ ||
ಓಂ ಸೋಮಾಯ ಸ್ವಾಹಾ || ೨ ||
ಓಂ ಅಗ್ನಿ ಸೋಮಾಭ್ಯಾಂ ಸ್ವಾಹಾ || ೩ ||
ಓಂ ವಿಶ್ವೇಭ್ಯೋ ದೇವೇಭ್ಯಃ ಸ್ವಾಹಾ || ೪ ||
ಓಂ ಧನ್ವಂತರಯೇ ಸ್ವಾಹಾ || ೫ ||
ಓಂ ಕುಹ್ವೈ ಸ್ವಾಹಾ || ೬ ||
ಓಂ ಅನುಮತ್ಯೈ ಸ್ವಾಹಾ || ೭ ||
ಓಂ ಪ್ರಜಾಪತಯೇ ಸ್ವಾಹಾ || ೮ ||
ಓಂ ಸಹ ದ್ವಾವಾ ಪೃಥಿವೀಭ್ಯಾಂ ಸ್ವಾಹಾ || ೯ ||
ಓಂ ಸ್ವಿಷ್ಟಕೃತೇ ಸ್ವಾಹಾ || ೧೦ ||
     ಈ ಮಂತ್ರಗಳ ಅರ್ಥ ಅನುಕ್ರಮವಾಗಿ:
೧. ಪರಮಾತ್ಮನ ಸಾಕ್ಷಾತ್ಕಾರ ಮತ್ತು ಜಠರಾಗ್ನಿಯ ಪ್ರದೀಪ್ತತೆಗಾಗಿ ಈ ಆಹುತಿ,
೨. ಪರಮಾತ್ಮನ ಹಾಗೂ ಶಾಂತಿ, ಇತ್ಯಾದಿ ಸದ್ಗುಣಗಳ ಧಾರಣೆಗಾಗಿ ಈ ಆಹುತಿ,
೩. ಪ್ರಕಾಶಸ್ವರೂಪ, ಶಾಂತಿಯ ಆಗರ ಪರಮಾತ್ಮನ ಸಾಕ್ಷಾತ್ಕಾರ ಹಾಗೂ ಪ್ರಾಣಾಪಾನ ಪುಷ್ಟಿಗಾಗಿ ಈ ಆಹುತಿ,
೪. ಪರಮಾತ್ಮನ ವಿವಿಧ ಶಕ್ತಿಗಳ ಸಲುವಾಗಿ ಮತ್ತು ಸಮಸ್ತ ವಿದ್ವಜ್ಜನರ ಪ್ರಸನ್ನತೆಯ ಸಲುವಾಗಿ ಈ ಆಹುತಿ,
೫. ಭವರೋಗಹರ ಪರಮೇಶ್ವರನ, ರೋಗಗಳಿಗೆ ಚಿಕಿತ್ಸೆ ನೀಡುವ ವೈದ್ಯನ ಹಾಗೂ ರೋಗನಿರೋಧಕ ಶಕ್ತಿಯ ಪ್ರಾಪ್ತಿಗಾಗಿ ಈ ಆಹುತಿ,
೬. ದೇವನ ವಿಸ್ಮಯಕರ ಸೃಷ್ಟಿಯ ಅರಿವಿಗೆ ಹಾಗೂ ಶರೀರಧಾರ್ಢ್ಯ, ಪ್ರಸನ್ನತೆಗಳಿಗಾಗಿ ಈ ಆಹುತಿ,
೭. ಜೀವಕರ್ಮಾನುಕೂಲ ಜ್ಞಾನ, ಅಧ್ಯಯನಾನುಕೂಲ ಬುದ್ಧಿಯುಳ್ಳ ಪರಮಾತ್ಮನ ಹಾಗೂ ವಿದ್ವಾಂಸರ ಪ್ರಸನ್ನತೆಗಾಗಿ ಈ ಆಹುತಿ,
೮. ಸಮಸ್ತ ಪ್ರಜೆಗಳ ಸ್ವಾಮಿ ಪರಮಾತ್ಮ ಹಾಗೂ ಸತ್ಸಂತಾನ ನಿರ್ಮಾತೃ ಪಿತೃಗಳಿಗಾಗಿ ಈ ಆಹುತಿ,
೯. ಪ್ರಕಾಶವನ್ನೂ, ಬ್ರಹ್ಮಾಂಡವನ್ನೂ ವಿಸ್ತಿರಿಸಿರುವ ಜಗದೀಶ್ವರನ ಹಾಗೂ ತೇಜಸ್ವಿ, ಜ್ಞಾನವಾನ್ ವಿದ್ವಾಂಸರ ಸಲುವಾಗಿ ಈ ಅಹುತಿ, ಮತ್ತು
೧೦. ಇಷ್ಟಾರ್ಥ ನೀಡುವ ಪರಮಾತ್ಮ ಹಾಗೂ ಸಹಾಯಕಾರೀ ಮಿತ್ರರ ಸಲುವಾಗಿ ಈ ಅಹುತಿ. 
     ಇದಾದ ನಂತರ ಒಂದು ಎಲೆಯಲ್ಲಿ ಉಪ್ಪು ಹಾಕಲ್ಪಟ್ಟ ಸಾರು, ಅನ್ನ, ಇತರ ಖಾದ್ಯ ಪದಾರ್ಥಗಳನ್ನು ಏಳು ಭಾಗಗಳಾಗಿ ಮಾಡಿ ಇಡಬೇಕು. ಇವನ್ನು "ಶ್ವಭ್ಯೋ ನಮಃ|, ಪತಿತೇಭ್ಯೋ ನಮಃ| ಶ್ವಪಗ್ಭೋ ನಮಃ|, ಪಾಪ ರೋಗಿಭ್ಯೋ ನಮಃ| ವಾಯುಸೇಭ್ಯೋ ನಮಃ\, ಕೃಮಿಭ್ಯೋ ನಮಃ|" ಎಂದು ಹೇಳಿ ದೀನ, ದುಃಖಿತ, ಹಸಿದ ಮಾನವರಿಗೂ, ನಾಯಿ, ಗೋವು, ಕಾಗೆ, ಇತ್ಯಾದಿಗಳಿಗೂ, ಕ್ರಿಮಿಕೀಟಗಳಿಗೂ ಹಂಚಬೇಕು. ಮೂಲ ಉದ್ದೇಶವೆಂದರೆ ಇರುವುದನ್ನು ತಾವು ತಿನ್ನುವ ಮುನ್ನ ಅಗತ್ಯವಿರುವವರಿಗೆ ಉಣಬಡಿಸಿ ತಿನ್ನಬೇಕು ಎನ್ನವುದೇ ಆಗಿದೆ. ಇಂತಹ ಸ್ವಾರ್ಥತ್ಯಾಗ, ಪರಹಿತ ಚಿಂತನೆಗೆ ಪ್ರೇರಿಸುವ ಕ್ರಿಯೆಯನ್ನು ಪ್ರಾಣಿಬಲಿಗೆ ಸಮರ್ಥಿಸಲು ಕೆಲವರು ಉಪಯೋಗಿಸಿಕೊಂಡಿರುವುದು ಮನಸ್ಸಿಗೆ ನೋವು ಕೊಡುವಂತಹುದು ಎನ್ನದೇ ವಿಧಿಯಿಲ್ಲ. 
[ಆಧಾರ: ಪಂ.ಸುಧಾಕರ ಚತುರ್ವೇದಿಯವರ ಲೇಖನ].

ಸತ್ಯ ಹುಡುಕಲು ಹೊರಟಾಗ ಬರೀ ಗೊಂದಲವೇ!

ಸತ್ಯ ಹುಡುಕಲು ಹೊರಟಾಗ ಬರೀ ಗೊಂದಲವೇ! ಇಂದು    ಹಾಸನದ ಸಮೀಪ ದೊಡ್ದಪುರದಲ್ಲಿ ನಡೆಯುತ್ತಿರುವ ಸಾಂಕೇತಿಕ ಅಶ್ವಮೇಧಯಾಗದ ಕಡೆಯದಿನ . ಯಾಗಕ್ಕೆ ಬಂದಿರುವ ನೂರಾರು ವೈದಿಕರಲ್ಲಿ  ನಮ್ಮ ಮನೆಯಲ್ಲಿ ನಾಲ್ಕಾರುಜನರು ತಂಗುತ್ತಿದ್ದಾರೆ.  ಈ ಅವಕಾಶವನ್ನು ಉಪಯೋಗಿಸಿಕೊಂಡು ಅವರೊಡನೆ  ಯಜ್ಞದಲ್ಲಿ ಪ್ರಾಣಿಬಲಿ ಯ ಬಗ್ಗೆ    ವೇದ ದಲ್ಲಿದೆಯೇ? ಎಂದರೆ  "ಇದೆ" ಎನ್ನಲು ಸಂಕೋಚವನ್ನೂ ಪಡುವುದಿಲ್ಲ. ಆದರೆ ನಾವು ಇಲ್ಲಿ ಅಶ್ವಮೇಧ ಯಾಗವನ್ನೇ ಮಾಡುತ್ತಿಲ್ಲವೆಂದು ಹೇಳುತ್ತಾರೆ. "ಸಾಂಕೇತಿಕ ಅಶ್ವಮೇಧಯಾಗ " ಎಂದೇ ಪ್ರಚಾರವಾಗಿದೆಯಲ್ಲಾ! ಎಂದು ಕೇಳಿದರೆ  ವ್ಯವಸ್ಥಾಪಕರನ್ನು ಕೇಳಿ, ಇಲ್ಲಿ ಬೇರೆ ಬೇರೆ ಯಜ್ಞಗಳನ್ನು ಮಾಡುತ್ತಿದ್ದೇವೆ. ಇಲ್ಲಿ ಪ್ರಾಣಿಬಲಿ ಇಲ್ಲ  ಎನ್ನುತ್ತಾರೆ. ಹಾಗಾದರೆ ಕುದುರೆ  ಇದೆಯಲ್ಲಾ!  ಎಂದರೆ ಅದರ ಸಮ್ಮುಖದಲ್ಲಿ ಯಜ್ಞ ನಡೆಯತ್ತದೆ ಹೊರತು " ಬಲಿ  ಇಲ್ಲ" " ಸಾ೦ಕೇತಿಕ ವಾಗಿಯೂ ಇಲ್ಲ" ಎನ್ನುತ್ತಾರೆ.  ಅಶ್ವ ಮೇಧದ ಮಂತ್ರವನ್ನು ಹೇಳುವುದಿಲ್ಲವೇ? ಎಂದರೆ  ಅಶ್ವಮೇಧಯಾಗವೆ ಇಲ್ಲವೆಂದಮೇಲೆ  ಮಂತ್ರವೆಲ್ಲಿ ? ಎನ್ನುತ್ತಾರೆ.  ಒಟ್ಟಿನಲ್ಲಿ ಎಲ್ಲವೂ ಗೊಂದಲದ ಗೂಡು. ಯಜ್ಞದಲ್ಲಿ ಪ್ರಾಣಿಬಲಿಯನ್ನು ವೇದದಲ್ಲಿ ಹೇಳಿದೆ ,ಎನ್ನುತ್ತಾರೆ. ಆಧಾರವನ್ನೂ ಕೊಡುವುದಾಗಿ ಹೇಳುತ್ತಾರೆ. ಕೊಟ್ಟಿಲ್ಲ. ಕೊಡಬಹುದೇನೋ .......
ಇರಲಿ. ಕೊಟ್ಟರೂ ಅದನ್ನು  ಸುಧಾಕರಶರ್ಮರು ಒಪ್ಪುವುದಿಲ್ಲ.

ನನ್ನಲ್ಲಿ  ಮತ್ತಷ್ಟು ಗೊಂದಲಗಳಿಗೆ ಈ ಚರ್ಚೆಗಳು ಕಾರಣ ವಾಯ್ತಷ್ಟೇ.  
ಚರ್ಚೆಗಾಗಿ ಮಾತ್ರ ಇಲ್ಲಿ ಒಂದು ವಿಚಾರವನ್ನು  ಹರಿಬಿಡುತ್ತೇನೆ.   ಸಾಮಾನ್ಯವಾಗಿ " ನೀನು ಒಳ್ಳೆಯವನಾಗಬೇಕು, ನೀನು ಕೋಪ ಬಿಡಬೇಕು.....ಇತ್ಯಾದಿ ಯಾರಿಗಾದರೂ ಉಪದೆಶಿಸಿದಾಗ ನಾವು ಏನು ಅರ್ಥ ಮಾಡಿಕೊಳ್ಳಬೇಕು? ಉಪದೇಶ ಪಡೆಯುತ್ತಿರುವ ವ್ಯಕ್ತಿಯು  ಅಲ್ಲಿಯವರಗೆ ಒಳ್ಳೆಯವನಾಗಿರಲಿಲ್ಲ. ಕೋಪಿಷ್ಠ ನಾಗಿದ್ದ, ಎಂದು ತಾನೇ ತಿಳಿಯಬೇಕು .

ಇದೇ ಭಾವದಲ್ಲಿ  ಚಿಂತನೆ ನಡೆಸಿದಾಗ  "ವೇದಗಳಲ್ಲಿ  ಅಲ್ಲಲ್ಲಿ  ಹಸುವನ್ನು ಕೊಲ್ಲಬೇಡ, ಕುದುರೆಯನ್ನು ಕೊಲ್ಲಬೇಡ, ಕುರಿಯನ್ನು ಕೊಲ್ಲಬೇಡ, ಆಶಕ್ತವಾದ ಪ್ರಾಣಿಯನ್ನು ಕೊಲ್ಲಬೇಡ"  ಎಂದು ಹೇಳುವಾಗ   ಒಂದನ್ನು ಕೊಲ್ಲ ಬೇಡವೆಂದಾಗ  ಇನ್ನೊಂದನ್ನು ಕೊಂದರೆ ಪರವಾಗಿಲ್ಲವೆಂದು ಭಾವಿಸಬಹುದಲ್ಲವೇ? 

ವೇದದಲ್ಲಿ ಅಲ್ಲಲ್ಲಿ ಯಾಕೆ ಹೀಗೆ ಪ್ರತ್ಯೇಕವಾಗಿ ಮಂತ್ರಗಳಿವೆ? ಅಂದರೆ  ಆ ಸಂದರ್ಭದಲ್ಲಿ ಯಜ್ಞಕ್ಕೆ ಪ್ರಾಣಿಬಲಿ ಇತ್ತು ಎಂದು ಅರ್ಥೈಸಬೇಕಾಗುತ್ತದಲ್ಲವೇ?  ಹೌದು ಇತ್ತು ಅದು ತಪ್ಪೆಂದು ವೇದ ಹೇಳುತ್ತಲಿದೆ ಎಂದಾದರೆ  ವೇದವೇ ಅಲ್ಲವೇ?  ಎಲ್ಲಕ್ಕಿಂತ ಪ್ರಾಚೀನ. ಮನುಷ್ಯನಿಗೆ ಜ್ಞಾನ ಬಂದಿದ್ದೇ  ವೇದದಿಂದ ಎಂತಲೂ ಭಾವಿಸಬಹುದಲ್ಲವೇ? 

ಮೊಂಡುವಾದಕ್ಕಾಗಿ ಈ ಮಾತುಗಳನ್ನು ಬರೆಯುತ್ತಿಲ್ಲ. ನಿನ್ನೆ ರಾತ್ರಿ ನನಗೆ ಕೆಲವರು " ನೀವು ವೇದಸುಧೆಯ ಸಂಪಾದಕರು, ವೇದವನ್ನು ಒಪ್ಪುವವರು. ನೀವು ಅಶ್ವಮೇಧ ಯಾಗಕ್ಕೆ ಹೋಗಲಿಲ್ಲವೇಕೆ? ಎಂದು ಪ್ರಶ್ನಿಸಿದರು.ಸೋಮಯಾಗ ಇತ್ಯಾದಿ ಅನೇಕ   ಯಜ್ಞಗಳು        ಪ್ರಾಣಿಬಲಿಇಲ್ಲದೆ  ಮುಗಿಯುವುದೇ ಇಲ್ಲವೆಂಬ ಮಾತನ್ನು       ವೈದಿಕರ ಬಾಯಲ್ಲಿ  ಕೇಳುವಾಗ ನನಗೆ ದು:ಖವಾಗಿದೆ. ಇನ್ನು  ಅಶ್ವಮೇಧ ಯಾಗಕ್ಕೆ ಹೋಗುವ ಮಾತೆಲ್ಲಿ? 

ವೈದಿಕರುಗಲೊಡನೆ ಮಾತನಾಡುವಾಗ ಬರೀ ಗೊಂದಲವೇ.  ಅಶ್ವಮೇಧಯಾಗವನ್ನು ಮಾಡಬೇಕಾದ್ದು ಕ್ಷತ್ರಿಯರು. ಅವರು ಯಜ್ಞಕ್ಕೆ ಪ್ರಾಣಿಯನ್ನು   ಬಲಿಕೊಡ  ಬಹುದು. ಎನ್ನುತ್ತಾರೆ. ಸರಿ. ಮಂತ್ರವನ್ನು ನೀವು ಹೇಳುತ್ತಾ ಅದಕ್ಕೆ ಸಾಕ್ಷಿಯಾಗುತ್ತೀರಲ್ಲಾ! ಎಂದರೆ ಸರಿಯಾದ ಉತ್ತರವಿಲ್ಲ. 

ಅಂತೂ ಕೇವಲ ನನ್ನ    ಸದ್ಭಾವನೆ ಗಳು  ವೈದಿಕರ ಮೇಲೆ ಯಾವ ಪರಿಣಾಮವನ್ನೂ ಬೀರಲಿಲ್ಲ.  ಯಾವುದೋ ಕಾರಣದಿಂದ  ಇಂದಿನ ಸಮಾಜ ಒಪ್ಪದ ಅನೇಕ ಸಂಗತಿಗಳು ನಡೆದು ಬಂದಿರಬಹುದು.ಆದರೆ ಇಂದಿನ ಯುವ ಪುರೋಹಿತರುಗಳಾದರೂ "ಪ್ರಾಣಿಬಲಿಯಂತ "  ವಿಚಾರಗಳನ್ನು  ಸಮಾಜದಲ್ಲಿ ಹೇಳುವುದನ್ನು ಬಿಟ್ಟು ಸಮಾಜಕ್ಕೆ   ಯಜ್ಞದ ಮಹತ್ವವನ್ನು ತಿಳಿಸಿ ಎಂಬ ಮನ: ಪೂರ್ವಕ ಸಲಹೆ ನೀಡಿರುವೆ. ಅದೆಷ್ಟು ಪರಿಣಾಮ ವಾಗುತ್ತದೋ ನಾನರಿಯೆ. 
ಇನ್ನು  ವೇದಾಧ್ಯಾಯೀ ಸುಧಾಕರಶರ್ಮ ರಂತಹ  ಸತ್ಯವನ್ನು ಹುಡುಕುವ ವಿದ್ವಾಂಸರು ಒಂದಿಷ್ಟು ಕಠಿಣ ಪದಗಳಿಂದ  ವೈದಿಕರ ನಡೆಯನ್ನು ಖಂಡಿ ಸಬಹುದು. ಆದರೆ ಪ್ರಯೋಜನವಾಗದು. ಎಲ್ಲರಲ್ಲೂ ಕಿರಿಕಿರಿ ತಪ್ಪಿದ್ದಲ್ಲ.  
ಮಾನವನ ನೆಮ್ಮದಿಗೆ ಕಾರಣವಾಗಬೇಕಿರುವ ವೇದದ ವಿಚಾರಗಳು ಗೊಂದಲವನ್ನು ಮೂಡಿಸುತ್ತಿವೆಯಲ್ಲಾ! ಎಂಬುದು ಬೇಸರದ ವಿಚಾರ.
---------------------------------------------
"ಯಜ್ಞದಲ್ಲಿ ಪ್ರಾಣಿಬಲಿ" ಚರ್ಚೆಯಲ್ಲಿ ಹಲವರು ಬೇರೆ ಬೇರೆ ತಾಣದಲ್ಲಿ ಚರ್ಚಿಸುತ್ತಿದ್ದು  ನನಗೆ ಹಲವು ಮೇಲ ಗಳು ಬರುತ್ತಿವೆ. ಆ ಎಲ್ಲವನ್ನೂ  ಇಲ್ಲಿ ಸೇರಿಸುತ್ತಾ ಹೋಗುತ್ತೇನೆ.

ಯಜ್ಞದಲ್ಲಿ ಪ್ರಾಣಿಬಲಿ!!

ಯಜ್ಞದಲ್ಲಿ ಪ್ರಾಣಿಬಲಿಯನ್ನು ವೇದವು ಪ್ರೋತ್ಸಾಹಿಸುತ್ತದೆಯೇ? ಎಂಬ ವಿಚಾರದಲ್ಲಿ  ವೇದಸುಧೆಯಲ್ಲಿ ಚರ್ಚೆ ಆರಂಭವಾಗಿ  facebook ನಲ್ಲಿ  ಸಮಾನ ಮಾನಸಿಗರ ಒಂದು ಗುಂಪು "ಸುಮನಸ"ದಲ್ಲೂ ಸಾಕಷ್ಟು ಚರ್ಚೆಯಾಗಿದೆ. ಇದನ್ನೆಲ್ಲಾ ವೇದಸುಧೆಯ ಅಭಿಮಾನಿಗಳ ಗಮನಕ್ಕಾಗಿ ಇಲ್ಲಿ  ಪ್ರಕಟಿಸಲಾಗಿದೆ.  facebook ನಲ್ಲಿ ಬರೆಯುವಾಗ ಅಲ್ಲಿರುವ ಚಿಕ್ಕಫಾಂಟ್  ಪರಿಣಾಮ ಅಕ್ಷರದಲ್ಲಿ ಅನೇಕ ತಪ್ಪುಗಳು ಸಂಭವಿಸಿವೆ. ಅವನ್ನು ಇಲ್ಲಿ ತಿದ್ದಲು ಹೋಗದೆ ಯಥಾವತ್ತಾಗಿ ಇಲ್ಲಿ ಪ್ರಕಟಿಸಲಾಗಿದೆ. ಮುಖ್ಯವಾಗಿ ವೇದಸುಧೆಯ ಪ್ರೆರಕರಾದ ಶ್ರೀ ಸುಧಾಕರಶರ್ಮರು  ಇದನ್ನೆಲ್ಲಾ ಗಮನಿಸಿ  ನಮಗೆ ತಮ್ಮ  ಅಭಿಪ್ರಾಯಗಳನ್ನು ಸ್ಪಷ್ಟ ಪಡಿಸಬೇಕೆಂದು ಕೋರುವೆ. 


• ಆತ್ಮೀಯ ಸುಮನಸರೇ, ಅತ್ಯಂತ ಚಿಂತನ-ಮಂಥನಕ್ಕೆ ಯೋಗ್ಯವಾದ ಒಂದು ವಿಚಾರ ಇಲ್ಲಿದೆ. ನಿಮಗೆ ಹತ್ತು ನಿಮಿಷ ಬಿಡುವಿದೆಯೇ? ಕೆಳಗಿನ ಕೊಂಡಿಯನ್ನು ನೋಡಿ. http://blog.vedasudhe.com/2012/03/blog-post_04.html ವೇದಸುಧೆ: ವೇದ ಧರ್ಮವು ಪರಮ ಅಹಿಂಸಾಧರ್ಮ blog.vedasudhe.com  

o  Bhimasen Purohit ಶ್ರೀಧರ್ ಅವ್ರೆ.. ನಿಮಗೆ ಮೊದಲು ಅನಂತ ವಂದನೆಗಳು.. ಒಂದೊಳ್ಳೆ ವಿಚಾರವನ್ನು ಚರ್ಚೆಗೆ ತಂದಿದ್ದಕ್ಕೆ.. ಅಶ್ವಮೇಧಯಾಗದಲ್ಲಿ ಕುದುರೆಯನ್ನು ಕೊನೆಗೆ ಬಲಿಕೊಡುವುದು ಆಚರೆಣೆಯೇ.. ನಿಮಗೆ ಇನ್ನೊಂದು ವಿಷಯ ತಿಳಿಯಪಡಿಸುತ್ತೇನೆ, ಕೃಷ್ಣಾನದಿಯ ತೀರದಲ್ಲಿ, ರಾಜನೊಬ್ಬ "ಗೋವುಗಳನ್ನೇ" ಬಲಿಕೊಟ್ಟನೆಂದು ಪುರಾಣಗಳಲ್ಲಿ ಉಲ್ಲೇಖವಿದೆ.. ಇಲ್ಲಿ ಬಹಳ ಜಾಗರೂಕತೆಯಿಂದ ನಾವು ವಿಚಾರಿಸಬೇಕಿದೆ.. ಮೊದಲು ಈ ಅಹಿಂಸೆ ಅನ್ನೋ ಶಬ್ದದ ವಿವರಣೆ ನಾವು ಮಾಡಬೇಕಾಗುತ್ತದೆ.. ಕೇವಲ ಕುದುರೆ,ಮೇಕೆ ಇಂಥಾ ಪ್ರಾಣಿಗಳನ್ನು ಕೊಲ್ಲುವುದೊಂದೇ ಹಿಂಸೆಯೇ..? ಸಸ್ಯಗಳನ್ನು, ಮರದ ಎಲೆ,ಹೂ,ಹಣ್ಣುಗಳನ್ನು, ಜೇನಿಗಾಗಿ ಆ ಹುಳುಗಳನ್ನು ಕೊಲ್ಲುವುದೂ ಹಿಂಸೆಯೇ ಅಲ್ಲವೇ..!!?? ಒಂದು ಕುದುರೆಯನ್ನು ಕೊಂದು, ಬಲಿ ಕೊಡುವುದು ಹಿಂಸೆಯಾದರೆ, ಯಜ್ಞದಲ್ಲಿ ನವಧಾನ್ಯಗಳನ್ನೂ ಅರ್ಪಿಸುವುದೂ ಹಿಂಸೆಯೇ.. ಆದರೆ, ಈ ವಿಷಯದಲ್ಲಿ ಸ್ಪಷ್ಟವಾದ ಉಕ್ತಿಯಿದೆ.."ವೈದೀ ಹಿಂಸಾ ನ ಪಾಪಸಾಧನಂ." ಅಂದ್ರೆ, ವೇದೋಕ್ತ ಕರ್ಮಗಳಿಗೆ ಮಾಡುವ ಹಿಂಸೆಯು, ಪಾಪಕ್ಕೆ ಕಾರಣವಾಗುವುದಿಲ್ಲ.. ಹೀಗಾಗಿಯೇ ಮನೆಯಲ್ಲಿ "ವೈಶ್ವದೇವ"ಯಜ್ನವನ್ನು ಮಾಡುವುದು.
. Sunday at 10:19pm • Like • 1 
 Hariharapura Sridhar ಚರ್ಚೆ ಸಾಗಲಿ. Sunday at 10:20pm • Like • 1 

 Bhimasen Purohit ವೆದಪಂಡಿತರನ್ನು ವಿಚಾರಿಸಿ. ಪ್ರತಿದಿನ ಊಟಕ್ಕೂ ಮುಂಚೆ. ಗೃಹಸ್ಥರು ಈ "ವೈಶ್ವದೇವ"ಯಜ್ನವನ್ನು ಮಾಡುತ್ತಾರೆ. ಅಂದರೆ, ಅಗ್ನಿಗೆ ಮಾಡಿದ ಅಡಿಗೆಯ ಸ್ವಲ್ಪ ಭಾಗವನ್ನು ಅರ್ಪಿಸುವುದು.. ಈ ಯಜ್ಞದ ಅವಶ್ಯಕತೆ ಏನು?ಅನ್ನೋದು ಭಾಳ ದಿನದಿಂದ ನನ್ನ ಕಾಡಿತ್ತು. ಆ ನಂತರ ನಮ್ಮ ತಂದೆಯವರು ಹೇಳಿದ ಪ್ರಮಾಣವಾಕ್ಯಗಳಿಂದ ಸ್ಫುಟವಾಯಿತು.. ಅದೇನೆಂದರೆ, ನಾವು ಸಸ್ಯಾಹಾರಿಗಳೂ, ಸಸ್ಯಗಳನ್ನು ಕೊಂದು ಆ ಪಾಪದಿಂದ ಲೆಪಿತರಾಗಿರುತ್ತೇವೆ.. ಅದನ್ನು ಕ್ಷಮಿಸು ಎಂದು ಪ್ರಾರ್ಥನೆ ಮಾಡಿಯೇ, ಆ ಭಾಗವನ್ನು ಅಗ್ನಿಗೆ ಅರ್ಪಿಸುವುದು.. ಅಂದ ಮೇಲೆ, ಒಂದಂತೂ ಸ್ಪಷ್ಟವಾಯಿತು.. ಕೇವಲ ಪ್ರಾಣಿವಧೆಯೊಂದೆ ಹಿಂಸೆಯಲ್ಲ.. ಸಸ್ಯಹಿಮ್ಸೆಯೂ ಹಿಂಸೆಯೇ..ಆ ಪಾಪದ ಪ್ರಯಶ್ಚಿತ್ತವೆ "ವೈಶ್ವದೇವ."
 Sunday at 10:24pm 
 Bhimasen Purohit ನಮ್ಮಲ್ಲಿ ಇರೋ ಒಂದು ಭಾವವನ್ನು ಸ್ಪಷ್ಟಪಡಿಸುವೆ.. ಯಾವ ಜೀವಿ ಯಜ್ಞಕ್ಕಾಗಿ ಬಲಿಯಾಗುತ್ತದೆಯೋ ಅದು ಮುಂದಿನ ಜನ್ಮದಲ್ಲಿ ಉತ್ತಮವಾದ ಸಜ್ಜನಿಕೆಯ ಜೀವಿಯಾಗಿ ಹುಟ್ಟುತ್ತದೆ.. ರಾಜನೊಬ್ಬ ಗೋವುಗಳನ್ನು ಬಲಿಕೊಟ್ಟಿದ್ದ ವಿಷಯವನ್ನು ಹಿಂದಷ್ಟೇ ಪ್ರಸ್ತಾಪಿಸಿದ್ದೆ. ಅದೇ ಪುರಾಣದ ಕಥೆಯಲ್ಲೇ ಮುಂದೆ ಹೇಳುತ್ತಾರೆ.. ಹಾಗೆ ಬಲಿಕೊಟ್ಟ ಹಸುಗಳೆಲ್ಲ ಮತ್ತೆ ಪುನರ್ಜನ್ಮ ತಾಳಿ, ಅತ್ಯುತ್ತಮವಾದ, ಶ್ರೇಷ್ಠ ಆಕಳುಗಳಾಗಿದ್ದವು, ಎಂದು. ಅಂದರೆ, ಮಾತು ಸ್ಪಷ್ಟವಾಯಿತಷ್ಟೇ, ಆ ಕಾಲದಲ್ಲಿ ಕುದುರೆ ಮುಂತಾದವನ್ನು ಬಲಿಕೊಡೋದು ಇತ್ತು. ಆದರೆ ಅದು ಕ್ರೌರ್ಯ ಅಂತಲ್ಲ.. ಆಗಿನ ಕಾಲದ ಋಷಿ-ಮುನಿಗಳಿಗೆ, ಯಜ್ಞದ ಆಧ್ವರ್ಯುಗಳಿಗೆ, ಹಾಗೆ ಬಲಿಕೊಟ್ಟ ಪ್ರಾಣಿಗಳನ್ನು ಮತ್ತೆ ಸೃಷ್ಟಿ ಮಾಡುವ ಸಾಮರ್ಥ್ಯವಿತ್ತು.. ಹೀಗಾಗಿಯೇ ಅವರು, ೧) ಯಜ್ಞದ ಭಾಗವಾಗಿ ಮತ್ತು ೨) ಆ ಜೀವಿಗೆ ಸದ್ಗತಿ ಸಿಗಲಿ ಅಂಬ ಕಾರಣಗಳಿಗಾಗಿ ಬಲಿ ಕೊಡುತ್ತಿದ್ದರು.. ಆದರೆ, ಕಲಿಗಾಲದಲ್ಲಿ, ಹಾಗೆ ಸತ್ತ ಪ್ರಾಣಿಗಳನ್ನು ಬದುಕಿಸುವ ಸಾಮರ್ಥ್ಯವಿಲ್ಲ. ಹೀಗಾಗಿಯೇ ಇನ್ನೊಂದು ಅಂಶವನ್ನು ಋಷಿಗಳು ಸ್ಪಷ್ಟ ಪಡಿಸಿದ್ದಾರೆ. ಏನೆಂದರೆ, ಈ ಕಲಿಗಾಲದಲ್ಲಿ, ಪ್ರಾಣಿಬಲಿ ಸರ್ವಥಾ ಅಯೋಗ್ಯವಾದದ್ದು.. ಅಂತ.. ಅದಕ್ಕೆಂದೇ, ಯಜ್ಞದ ಆಚರಣೆಗೂ ಭಂಗ ಬರಬಾರದು, ಋಷಿಗಳ ಮಾತನ್ನೂ ಮೀರಬಾರದು ಅಂತಲೇ, ಅದರದೊಂದು ಮಣ್ಣಿನ ಅಥವಾ ಹಿಟ್ಟಿನ ಪ್ರತಿಕೃತಿ ಮಾಡಿ ಬಲಿಕೊಡುತ್ತಾರೆ.. Sunday at 10:35pm 

 Hariharapura Sridhar ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿ ನಾಗರಾಜರು ವೇದಸುಧೆಯಲ್ಲಿ ನೀಡಿರುವ ಅವರ ಪ್ರತಿಕ್ರಿಯೆ ಹೀಗಿದೆ....... ಬೇರೊಂದು ಜೀವಿಯನ್ನು ಉದ್ಧಾರ (ಉತ್ತಮ ಜನ್ಮ?)ಮಾಡುವ ಸಲುವಾಗಿ ಬಲಿ ಕೊಡುವುದು ಉಚಿತವೇ ಎಂಬುದನ್ನು ಗಮನಿಸಬೇಕು. ಕೀಳು ಜನ್ಮ ಎಂದು ಭಾವಿಸುವ ಯಾವುದೇ ಪ್ರಾಣಿ/ಕೀಟ ಸಹ ಬದುಕಿರುವವರೆಗೂ ಸಾಯಲು ಬಯಸುವುದಿಲ್ಲ ಎಂಬುದು ಸತ್ಯಸ್ಯ ಸತ್ಯ. ಹಾಗಿರುವಾಗ ಬೇರೊಂದು ಜೀವಿಯ ಬಲಿ ಕೊಡುವ ಹಂಬಲವೇ ಕ್ರೂರ. 
ಕವಿ ನಾಗರಾಜ್Mar 4, 2012 09:01 PM 19 

 1  Bhimasen Purohit ನೀವು ಹೇಳುವ ಮಾತು ಸತ್ಯವೇ ಇರಬಹುದು.. ಧಾನ್ಯಗಳನ್ನ, ಜೇನುತುಪ್ಪವನ್ನ ಯಜ್ಞದಲ್ಲಿ ಹವಿಸ್ಸು ಹಾಕ್ತಾರಲ, ಅದಕ್ಕೆ ತಮ್ಮ ಸಮಜಾಯಿಷಿ ಏನು..? ಜೇನುತುಪ್ಪ ಆಯುರ್ವೇದೀಯ ಮತ್ತು ಯಜ್ನಪದಾರ್ಥ.. ಸದಾಶುದ್ಧ ಅನ್ನೋದೋ ವೇದೋಕ್ತವೆ.. ಅದಕ್ಕೆ ತಮ್ಮ. ಮತ್ತು ಕವಿಗಳ ಉತ್ತರ?? 

 Bhimasen Purohit ಕುದುರೆಗಳನ್ನು ಬಲಿಕೊಡೋದು ಕ್ರೌರ್ಯ ಆದ್ರೆ, ಅಕ್ಕಿ, ಗೊಧಿಗಳ ಸಾವಿರಾರು ಜೀವಿಗಳನ್ನು ಬಲಿಕೊಡೋದು ಅಷ್ಟೇ ಕ್ರೌರ್ಯವಲ್ಲವೇ..?? ಪ್ರಾಣಿಗಳನ್ನು ಬಲಿಕೊದೊವಾಗ, ಅವುಗಳ ಯಾತನೆ ನೋಡಿ ಅದೆಂತಹ ಹಿಂಸೆ ಅಂತ ನಮಗನಿಸುತ್ತದೆ.ಆದರೆ, ಭಾವನೆಗಳನ್ನು ತೋರ್ಪದಿಸಲಾಗದ ಸಸ್ಯಗಳ ವೇದನೆಯೂ ಇದ್ದೆ ಇರುತ್ತೆ ಆಲ್ವಾ..!! ಅದಕ್ಕೇನು ಉತ್ತರ..?

 Hariharapura Sridhar ಕಡತೋಕೆ ರಾಂಭಟ್ಟ ಅಗ್ನಿಹೋತ್ರಿ ಯವರು ಇಲ್ಲೇ ಹೇಳಿದ್ದಾರೆ. ನೋಡಿ....... ಪ್ರಕೃತಿಯನ್ನು ಇದ್ದಾಂಗೆ ಉಪಭೋಗಿಸುವುದಕ್ಕೆ ಮನುಷ್ಯರನ್ನು ಬಿಟ್ಟು ಉಳಿದ ಜಂತುಗಳಿಗೆ ಅವಕಾಶ(ಅಧಿಕಾರ) ಇದೆ. ಆದರೆ ತನಗೆ ದೊರೆತ ಪ್ರಕೃತಿಯನ್ನು ಸಂಸ್ಕರಿಸಿ ಭುಂಜಿಸುವುದು ನಮಗೆ ಹೇಳಿಸಿದ್ದು. ಅದುವೇ ಸಂಸ್ಕೃತಿ. ಇನ್ನು ಪ್ರಕೃತಿಯನ್ನು ಸಂಸ್ಕರಿಸುವ ನೆಪದಲ್ಲಿ ವಿಕೃತಿಗೊಳಿಸಿ ವಿಘ್ನಸಂತೋಷಿಗಳಾಗುವವರು ಹೆಚ್ಚಾಗುತ್ತಿದ್ದಾರೆ. ಅದು ವಿಕೃತಿ. 

 Hariharapura Sridhar ಅರಳಿ ಮರ ಇತ್ಯಾದಿ ಮರಗಳಿಂದ ಒಣಗಿಬಿದ್ದ ಕಡ್ದಿಗಳಿಂದ ಯಜ್ಞವನ್ನು ಮಾಡುವುದೇ ಸೂಕ್ತವೆಂದೂ ಹಾಗೂ ಕರು ಕುಡಿದು ಹೆಚ್ಚಾಗಿ ಕೆಚ್ಚಲಿನಲ್ಲಿ ಉಳಿದ ಹಾಲನ್ನು ಮಾತ್ರವೇ ಕರೆದು ಅದರಿಂದ ತುಪ್ಪವನ್ನು ಮಾಡಿ ಯಜ್ಞಕ್ಕೆ ಉಪಯೋಗಿಸಿ ಪ್ರಕೃತಿಯನ್ನು ಸಂಪನ್ನಗೊಳಿಸಬೇಕೆಂಬುದು ಅಪೆಕ್ಷೆ. ಅದು ಬಿಟ್ಟು ಯಜ್ಞಕ್ಕೆ ಬೇಡವಾದ ರೇಶ್ಮೆ ಬಟ್ಟೆ, ನಾಣ್ಯ, ತೆಂಗಿನಕಾಯಿ ಇತ್ಯಾದಿ ಹಾಕುವುದು ಮೂರ್ಖತನವಲ್ಲವೇ? [ಮಾತು ಒರಟಾಗಿದ್ದರೆ ಕ್ಷಮೆ ಇರಲಿ] 

Hariharapura Sridhar ಶ್ರೀಯುತ ಭೀಮಸೇನ ಪುರೋಹಿತರಿಗೆ ವಂದನೆಗಳು. ನನ್ನ ಪ್ರತಿಕ್ರಿಯೆಗೆ ಉತ್ತರವಾಗಿ ನೀವು ಇದನ್ನು ಬರೆದಿರುವುದರಿಂದ ನನ್ನ ಅನಿಸಿಕೆ ದಾಖಲಿಸಿರುವೆ. ಸಸ್ಯಹಿಂಸೆಯೂ ಹಿಂಸೆ ಎಂಬುದನ್ನು ಒಪ್ಪುವೆ. ಆದರೆ ಅದು ಕುದುರೆಯನ್ನು ಬಲಿ ಕೊಡಲು ಸಮರ್ಥನೆಯೆನಿಸುವುದಿಲ್ಲ. ಸಾಂಕೇತಿಕ ಅಶ್ವಮೇಧ ಯಾಗಕ್ಕೆ ಸಂಬಂಧಿಸಿದಂತೆ ಹೊರಡಿಸಲಾಗಿರುವ ಕರಪತ್ರದಲ್ಲಿ ಕುದುರೆ ನಮ್ಮೊಳಗಿನ ಮೃಗೀಯ ಸಂಸ್ಕಾರಗಳ ಪ್ರತೀಕ ಎಂದು ಬಣ್ಣಿಸಲಾಗಿದೆ. ವಾಸ್ತವವಾಗಿ ಕುದುರೆ ಶಕ್ತಿ ಮತ್ತು ವೀರ್ಯದ ಪ್ರತೀಕ. ಕುದುರೆ ಮಾನವನಿಗೆ ಅನುಕೂಲಿಯಾಗಿ ವರ್ತಿಸಿರುವುದನ್ನು ನಾವು ಕಂಡಿದ್ದೇವೆಯೇ ಹೊರತು ಇತರ ಜೀವಿಗಳಿಗೆ ಮಾರಕವಾಗಿ ವರ್ತಿಸಿದ್ದನ್ನು ಅರಿತಿಲ್ಲ. ವಾಸ್ತವವಾಗಿ ಮಾನವನಷ್ಟು ಮೃಗೀಯವಾಗಿ ವರ್ತಿಸುವ ಬೇರೆ ಜೀವಿ ಇರಲಿಕ್ಕಿಲ್ಲ. ವೇದದ ಯಾವ ಮಂತ್ರದಲ್ಲಿ ಹಿಂಸೆಗೆ ಅವಕಾಶವಿದೆ ಎಂಬ ಬಗ್ಗೆ ಆ ಮಂತ್ರದ ಉಲ್ಲೇಖ ಮಾಡಿ ಬರೆದರೆ ಉಪಕಾರವಾಗುತ್ತದೆ. ನೀವು ಹೇಳಿದ "ವೈದೀ ಹಿಂಸಾ ನ ಪಾಪಸಾಧನಂ" ಎಂಬುದು ಎಲ್ಲಿ ಉಲ್ಲೇಖಿಸಲ್ಪಟ್ಟಿದೆ ಎಂಬ ಕುರಿತು ತಿಳಿಯಲು ಕುತೂಹಲಿಯಾಗಿದ್ದೇನೆ.
 ಕವಿ ನಾಗರಾಜ್Mar 4, 2012 09:26 PM 

  Bhimasen Purohit ಚರ್ಚೆ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದೆ.. ಖುಷಿಯಾಗಿದೆ.. ಶ್ರೀಧರ್ ಅವ್ರೆ, ಮೊದಲಿಗೆ ಒಂದು ಮಾತನ್ನು ಸ್ಪಷ್ಟಪಡಿಸಿ.. ಕೇವಲ ತರ್ಕಗಳಿಂದ ಮಂಡನೆ ಮಾಡಲಿಚ್ಚಿಸಿದ್ದೀರೋ, ಅಥವಾ ಪ್ರಮಾಣವಾಕ್ಯಗಳನ್ನು ಹಿಡಿದು ಚರ್ಚೆ ಮಾಡಲು ಇಚ್ಚಿಸಿದ್ದೆರೋ.? ಎರಡನೆಯದಾಗಿ, ನೀವು ಕೇವಲ ವೆದವಷ್ಟೇ ಪ್ರಮಾಣ ಅನ್ನುತ್ತೆರೋ, ಅಥವಾ ತದನುಕೂಲಿಯಾದ ಮಹಾಭಾರತ, ಪುರಾಣಗಳು ಇವೂ ಪ್ರಮಾಣ ಅಂತ ಅಂಗೀಕರಿಸುತ್ತೆರೋ..?..!! [ ಯಾಕೆಂದರೆ, ಮುಂದೆ ಚರ್ಚೆ ಮಾಡಲು ನನಗೂ ಅನುಕೂಲವಾಗುತ್ತೆ.. ಮೇಲಿನ ಸಂದೇಹಗಳಿಗೆ ನಿಮ್ಮ ಸ್ಪಷ್ಟ ನಿಲುವು ಪ್ರಕಟಿಸಿದ ಮೇಲೆ, ತದನುಸಾರಿಯಾಗಿ ಚರ್ಚೆಯನ್ನು ಮುಂದುವರಿಸುತ್ತೇನೆ..] 

  Bhimasen Purohit ಶ್ರೀಧರ್ ಅವ್ರೆ.. ಕುದುರೆ ವೀರ್ಯದ, ಶಕ್ತಿಯ ಸಂಕೇತ.. ನಿಜವೇ.. ಆದರೆ, ಇನ್ನೊಂದು ವಿಚಾರದಲ್ಲೂ ಕುದುರೆಯನ್ನು ಬಳಸಲಾಗುತ್ತದೆ.. ಅದು ಇಂದ್ರಿಯಗಳ ವಿಚಾರದಲ್ಲಿ.. ನಮ್ಮ ಇಂದ್ರಿಯಗಳು ಕುದುರೆಗಳಿದ್ದಂತೆ, ಲಗಾಮಿಲ್ಲದಿದ್ದರೆ ಎಲ್ಲೆಲ್ಲಿಗೋ ಓಡಿ ಹೋಗುತ್ತವೆ ಅಂತ.. ಆ ಅರ್ಥದಲ್ಲಿ ಅದನ್ನು ನಮ್ಮಲ್ಲಿನ 'ಮೃಗೀಯ' ಸಂಸ್ಕಾರಗಳ ಗುರುತಾಗಿ ಹೇಳಿರುವುದು. ಎಲ್ಲಾ ಸಂದರ್ಭದಲ್ಲೂ, ಎಲ್ಲದಕ್ಕೂ ಒಂದೇ ಅರ್ಥ ಕಲ್ಪಿಸಲಾಗುವುದಿಲ್ಲ.. ಪ್ರತಾಪಸಿಮ್ಹನ ವಿಚಾರ ಬಂದಾಗ, ಕುದುರೆ ಶೌರ್ಯದ ಸಂಕೇತ.. ಅದೇ ಇಂದ್ರಿಯಗಳ ವಿಚಾರ ಬಂದಾಗ, ಕುದುರೆ 'ಚಂಚಲತೆ'ಯ ಪ್ರತೀಕ.. ಆ ಮನೋದೌರ್ಬಲ್ಯವನ್ನು ಸುಟ್ಟುಹಾಕುವದಕ್ಕಾಗಿ ಹಾಗೆ ಹೇಳಿರುವುದು.. 

  Bhimasen Purohit ‎"ವೈದೀ ಹಿಂಸಾ ನ ಪಾಪಸಾಧನಂ" ಈ ವಾಕ್ಯ ವೈದಿಕ ಶಾಸ್ತ್ರಾಭ್ಯಾಸದಲ್ಲಿ ಬಹಳ ಚಾಲ್ತಿಯಲ್ಲಿರೋದು.. ಇದು ನ್ಯಾಯಶಾಸ್ತ್ರದ ವಾಕ್ಯ.. ಅಧ್ಯಾಯ-ಪಾದಗಳ ನೆನಪಿಲ್ಲ.. ಹುಡುಕಿ ಹೇಳುವೆ..

  Hariharapura Sridhar ಪುರೋಹಿತರೇ,ನಮಸ್ತೆ. ನನಗೂ ಖುಷಿಯಾಗಿದೆ ನಿಮ್ಮ ಹೆಸರಿನಿಂದಲೇ. ನೀವು ಪುರದ ಹಿತವನ್ನು ಕಾಯುವವರಾದ್ದರಿಂದ ನಮ್ಮೆಲ್ಲರ ಹಿತವೂ ನಿಮ್ಮ ಕೈಲಿದೆ. ಇರಲಿ. ಮೊದಲೇ ಒಂದುಮಾತು ಸ್ಪಷ್ಟಪಡಿಸುವೆ. ನಾನು ವೇದವನ್ನು ಅಭ್ಯಾಸ ಮಾಡಿದವನಲ್ಲ. ಆದರೆ ವೇದಾಧ್ಯಾಯೀ ಸುಧಾಕರಶರ್ಮರ ಉಪನ್ಯಾಸಗಲನ್ನು ಕೇಳಿ ಒಂದಿಷ್ಟು ಅಂಶಗಳು "ಇವು ಸತ್ಯ ಎನಿಸಿ ಸಮಾಧಾನವಾಗಿದೆ. ಹಾಗಾಗಿ ನಾನು ಅವರ ಪ್ರೇರಣೆ ಇಂದಲೇ ವೇದಸುಧೆಯೆಂಬ ತಾಣವನ್ನು ಆರಂಭಿಸಿರುವವನು. ನಾನಿ ಇಲ್ಲಿ ಚರ್ಚೆಗೆ ಆರಂಭದಲ್ಲಿಯೇ ಇದರ ಮೂಲ ಲೇಖನದ ಕೊಂಡಿ ನೀಡಿರುವೆ. ಆ ಲೇಖನದಲ್ಲಿ ನಾನು ನನ್ನ ವಿಚಾರ ಸ್ಪಷ್ಟ ಪಡಿಸಿರುವೆ. ನಾನೊಬ್ಬ ಅಂಚೆ ಪೇದೆ. ಸತ್ಯದ ವಿಚಾರವನ್ನು ನೀವು ಕೊಟ್ತರೂ ನಾಲ್ಕು ಜನರಿಗೆ ಮುಟ್ಟಿಸುವೆ. ಯಾರು ಕೊಟ್ತರೂ ಅದೇ ಕೆಲಸ ಮಾಡುವೆ. ಇನ್ನು ಶರ್ಮರ ಉಪನ್ಯಾಸಗಳನ್ನು ಕೇಳಿರುವ ನಾನು ಪುರಾಣಗಳನ್ನು ವೇದದೊಡನೆ ಸೇರಿಸಲು ಇಚ್ಛಿಸುವುದಿಲ್ಲ. ವೇದವೇ ನಮಗೆ ಮೂಲ ಎಂಬುದು ನನ್ನ ಧೃಢ ವಿಶ್ವಾಸ. ವೇದದ ವಿಚಾರದಲ್ಲಿ ಬರುವ ಸಂಶಯಗಳನ್ನೆಲ್ಲಾ ಪರಿಹರಿಸಲು ನಮ್ಮ ಗುರುಗಳಿದ್ದಾರೆ. ವೇದದ ಆಧಾರದಲ್ಲಿ ಚರ್ಚೆ ಮುಂದುವರೆಸಿ. ನೀವು ವೇದದ ಯಾವ ಮಂತ್ರವನ್ನು ಆಧಾರವಾಗಿ ಹೇಳಿದರೂ ನನಗೇನೂ ಅದರ ಮೂಲ ಸಿಗುವುದಿಲ್ಲ. ಆದರೆ ಗುರುಗಳಿದ್ದಾರೆ ಪರಿಹರಿಸಲು. ಅಂತೂ ಸತ್ಯ ಹೊರಬರಲಿ. ಕಡೆಯದಾಗಿ ಒಂದು ಮಾತು. ಇಷ್ಟು ಮುಂದುವರೆದ ದಿಗಳಲ್ಲೂ ಯಜ್ಞದಲ್ಲಿ ಪ್ರಾಣಿಬಲಿ ಬೇಡವೆನ್ನುವುದಕ್ಕೆ ಆಧಾರ ಬೇರೆ ಬೇಕೆ? ಆದರೂ ಕೊಟ್ಟಿರುವೆ. 
 Hariharapura Sridhar ‎"ವೈದೀ ಹಿಂಸಾ ನ ಪಾಪಸಾಧನಂ" ಪುರೋಹಿತರೇ , ಈ ಮಂತ್ರದ ಆಧಾರವೇನು? ಮತ್ತು ಅದರ ವಿವರಣೆ ಕೂಡ ಕೊಡುವಿರಾ?

 Bhimasen Purohit ಮೊಟ್ಟಮೊದಲನೆಯದಾಗಿ "ವೈದೀ ಹಿಂಸಾ" ಅನ್ನೋ ವಾಕ್ಯ ನ್ಯಾಯಶಾಸ್ತ್ರದ್ದು ಅಂತ ಮೊದಲೇ ಹೇಳಿದ್ದೇನೆ. ಅದು ಮಂತ್ರವಲ್ಲ. ನ್ಯಾಯ.. ವೈದಿಕ ಶಾಸ್ತ್ರವನ್ನು ಅಭ್ಯಾಸ ಮಾಡುವ ಅನೇಕ ಅಂಗಗಳಾದ "ವ್ಯಾಕರಣ","ನಿರುಕ್ತ" ಇವುಗಳ ಜೊತೆಗೆ "ನ್ಯಾಯ"ವೂ ಒಂದು.. ನ್ಯಾಯಶಾಸ್ತ್ರ ವೇದಾಧ್ಯಯನಕ್ಕೆ ಪೂರಕವಾದ ಒಂದು ಪ್ರಮಾಣ ಶಾಸ್ತ್ರ. ಅದರಲ್ಲಿ ಹೇಳಿರುವ ಮಾತಿದು.. 

  Bhimasen Purohit ‎"ವೇದವೇ ನಮಗೆ ಮೂಲ." ಅದನ್ನು ನಾನೂ ಒಪ್ಪುವ ಮಾತೇ.. ಆದರೆ, ವೇದಗಳಿಗೆ ಎಷ್ಟು ಪ್ರಾಮುಖ್ಯತೆ ಇದೆಯೋ ಅಷ್ಟೇ ಪ್ರಾಮುಖ್ಯತೆ ರಾಮಾಯಣ-ಮಹಾಭಾರತ-ಬ್ರಹ್ಮಸೂತ್ರ-ಪುರಾಣಗಳಿಗೆ ಇದೆ ಅನ್ನೋದೂ ಅಷ್ಟೇ ಸತ್ಯ.. ಈ ಪ್ರಮಾಣ ವಾಕ್ಯವನ್ನು ನೋಡಿ.. " ಋಗಾದ್ಯಾ ಭಾರತಮ್ ಚೈವ ಪಂಚರಾತ್ರಮಥಾಖಿಲಂ. ಮೂಲರಾಮಯನಂ ಚೈವ ಪುರಾಣಂ ಚೈತದಾತ್ಮಕಂ." -- ಅಂದ್ರೆ, ಋಗಾದಿ ೪ ವೇದಗಳು, ಮಹಾಭಾರತ, ಮೂಲರಾಮಾಯಣ, ಪಂಚರಾತ್ರಾಗಮ, ಮತ್ತು ತದನುಸಾರಿಯಾದ ಪುರಾಣಗಳು ಎಲ್ಲವೂ ಪ್ರಮಾಣಗಳು.. ಅಂತ ಈ ಶ್ಲೋಕ ಹೇಳುತ್ತೆ.. ಸ್ವತಃ ಉಪನಿಷತ್ತುಗಳಲ್ಲಿ, ಪುರಾಣಗಳ ಆವಿರ್ಭಾವ ಹೇಳುವಾಗ, ಅವುಗಳೂ ವೆದಾನುಸಾರಿಯಾಗಿ ಪ್ರಮಾಣಗಳು ಅಂತ ಹೇಳಿವೆ..(ನನಗೆ ಆ ಉಪನಿಶತ್ವಾಕ್ಯ ನೆನಪಾಗುತ್ತಿಲ್ಲ.. ಆದರೆ ಖಂಡಿತ ಇದೆ..) ಯಾಕೆ ಈ ವಿಚಾರವನ್ನು ಇಲ್ಲಿ ಹೇಳಿದೆ ಅಂದ್ರೆ, ಎಲ್ಲಾ ಆಚರಣೆಗಳೂ, ನಮಗೆ ಈಗ ಲಭ್ಯವಿರುವ ವೇದಗಳಲ್ಲಿ ಸಿಗೋದಿಲ್ಲ.. ವೇದಗಳು ಅನಂತವಾಗಿವೆ.. ನಮಗೆ ಉಪಳಭ್ಯವಿರುವ ಕೆಲವು ಭಾಗಗಳು, ಉಪನಿಷತ್ತುಗಳು ಅತ್ಯಲ್ಪವಷ್ಟೇ.. ಅದಷ್ಟೇ ವೇದ ಅಲ್ಲ.. ಹೀಗಾಗಿ ಕೆಲವು ಆಚರಣೆಗಳನ್ನ, ವೇದ ದ್ರಷ್ಟಾರರು ಅಂತ ನಾವು ಯಾರನ್ನ ಕರಿತೀವೋ, ಅಂಥಾ ಋಷಿಗಳು, ತಪಸ್ವಿಗಳ ಆಚರಣೆಯನ್ನು ಗಮನಿಸಬೇಕಾಗುತ್ತೆ.. ಅದಕ್ಕೆ ನಿಮಗೆ ಆ ಪ್ರಶ್ನೆಯನ್ನು ಕೇಳಿದ್ದು.

 Bhimasen Purohit ಈಗ ಮತ್ತೆ ಚರ್ಚೆಯ ಗರ್ಭಕ್ಕೆ ಬರೋದಾದ್ರೆ, ವಾಲ್ಮೀಕಿ ರಾಮಾಯಣದ, ಬಾಲಕಾಂಡದಲ್ಲಿ, ೧೪ ನೆ ಸರ್ಗದಲ್ಲಿ , ೩೮ ನೆ ಶ್ಲೋಕ ಹೀಗಿದೆ ನೋಡಿ.. "ಹಯಸ್ಯ ಯಾನಿ ಚಾಂಗಾನಿ ತಾನಿ ಸರ್ವಾಣಿ ಭೂಸುರಾಃ| ಅಗ್ನೌ ಪ್ರಾಸ್ಯಂತಿ ವಿಧಿವತ್ ಸಮಸ್ತಾಃ ಷೋಡಶರ್ತ್ವಿಜಃ ||" ದಶರಥನು ಅಶ್ವಮೇಧಯಾಗ ಮಾಡಿದಾಗ ಬರುವ ವರ್ಣನೆಯಿದು.. ಅದರ ಅರ್ಥ ಹೀಗಿದೆ. " ಯಜ್ಞದ ಸಂದರ್ಭದಲ್ಲಿ, ಯಜ್ಞದ ಭೂಸುರರು(ಬ್ರಾಹ್ಮಣರು ವಾ ಪುರೋಹಿತರು), ಹಯದ(ಕುದುರೆಯ) ಎಲ್ಲ ಅಂಗಗಳನ್ನೂ, ಆ ಅಗ್ನಿಯಲ್ಲಿ, ವೇದಮಂತ್ರಗಳನ್ನು ಉಚ್ಚರಿಸುತ್ತ(ಷೋಡಶರ್ತ್ವಿಜಃ), ಆಹುತಿ ಕೊಟ್ಟರು.." ಬಲಿಯ ಬಗ್ಗೆ ಇಷ್ಟು ಸ್ಪಷ್ಟವಾದ ವಾಕ್ಯ ರಾಮಾಯಣದಲ್ಲಿದೆ.. ಈಗ ಒಂದು ತರ್ಕ ಮಾಡೋಣ.. ಒಂದು ವೇಳೆ, ವೇದಗಳಲ್ಲಿ ಎಲ್ಲಿಯೂ ಈ ಬಲಿಯ ಉಲ್ಲೇಖವಿರದೆ ಇದ್ದರೆ, ೧) ವಾಲ್ಮೀಕಿ ಋಷಿಗಳಿಗೆ ಸರಿಯಾಗಿ ವೆದಜ್ಞಾನ ಇರಲಿಲ್ಲ ಎಂದು ಹೇಳಬೇಕಾಗುತ್ತೆ.. ಅಥವಾ ೨) ಆ ದಶರಥ, ರಾಮ ಮುಂತಾದ ಮಹಾತಪಸ್ವಿ ರಾಜರಿಗೆ ಸರಿಯಾಗಿ ವೇದ ಗೊತ್ತಿರಲಿಲ್ಲ ಅಂತ ಆರೋಪಿಸಬೇಕಾಗುತ್ತೆ.. ಈ ಎರಡನ್ನೂ ಒಪ್ಪಲು ಸಾಧ್ಯವೇ..?? ನಾನಂತೂ ವಾಲ್ಮೀಕಿ-ದಶರಥರಷ್ಟು ಪಂಡಿತನಲ್ಲ.. ಮತ್ತು ಅವರಂಥ ಜ್ಞಾನಿಗಳು ವೆದವಿರುದ್ಧವಾದ ಆಚರಣೆಯನ್ನು ಮಾಡುತ್ತಿದ್ದರು ಅನ್ನೋದೂ ಸಮಂಜಸವಲ್ಲ.. ನಿಮ್ಮ ಉತ್ತರದ ನಿರೀಕ್ಷೆಯಲ್ಲಿ..!!!!!!!! 

 • ಕಡತೋಕೆ ರಾಂಭಟ್ಟ ಅಗ್ನಿಹೋತ್ರಿ ಯಜ್ನಯಾಗಾದಿಗಳ ಮಾಡುತ ಲೋಕ ಕಲ್ಯಾಣವನು ಕಾಂಬರು.| ಬಲಿಯನೀವರು ಅಜಹಯಾದಿಗಳಂತರಾತ್ಮನಿಗೆ| ಕೇಳಲೊಲ್ಲರು ದೇವ ಸಸ್ಯಾಹಾರಿಯೋ ಮರು ಮಾಂಸತಿಂಬನೋ ದೇವಪ್ರೀತಿಗೆ ಪ್ರೀಯಪ್ರಾಣಿಯ ಮೇಧಬೇಕಾಯ್ತೇ|| ಮಾಡಲಾದರೆ ಮಾಡಿ ಉಪ್ಪಿನ ಯಾಗವನು ನೀವೆಸಗಿ ಧರಣಿಗೆ ವರುಣನಾಗವಾಗೆ ಸಗ್ಗದ ಸಿರಿಯ ಕೊಂಬುದಕೆ | ಕೂಡಿ ಒಣ ಕಾಷ್ಟಗಳ ಮೇಲಕೆ ಸುರಿಯೆ ಉಪ್ಪೊಂದಿಷ್ಟ ಮುಂದಕೆ ಬೆಂಕಿಯಿಟ್ಟರೆ ಹೊಗೆಯು ಕರೆವುದು ಮಳೆಯ ರಾಯನನು|ಆವ ಮಂತ್ರವು ಬೇಡ ಹವನಕೆ ಶಾಲು ಸೌಖರ್ಯಗಳ ಕೇಳದು ಕಲ್ಲಿನ ಬಾವಿಯೊಂದಿರೆ ಸಾಕು ಈ ಯಾಗ ಮಾಡಲಿಕೆ!! ಬರಲು ವರುಣನು ಮಳೆಯ ತರುವನು ಆಗ ಧರಣೀದೇವಿ ನಲಿವಳು ಹಸಿರ ಸೆರಗಿನಲಿ| ಬೇಕೆ ಬೇರೆಯ ಯಜ್ನ ಯಾಗಾದಿಗಳು ಮುಂದಕೆ ಕೊಡುವುದವನೀದೇವೆಯೆಲ್ಲವ ಸಾಕು ಸಾಕೆನುತಾ| 

  ಕಡತೋಕೆ ರಾಂಭಟ್ಟ ಅಗ್ನಿಹೋತ್ರಿ ಕ್ಷಮಿಸಿ ನಾನು ಬರೆದದ್ದು ಪದ್ಯ ಅಲ್ಲ ಆ ರೂಪದಲ್ಲಿ ನನಗನಿಸಿದ್ದನ್ನ ಹೇಳುವ ಪ್ರಯತ್ನ ಅಷ್ಟೇ. 8 hours ago • Like • 1  ಕಡತೋಕೆ ರಾಂಭಟ್ಟ ಅಗ್ನಿಹೋತ್ರಿ ಪಶುಗಳು ಆಹಾರವನ್ನು ಯಥಾವತ್ತಾಗಿ ಅಂದರೆ ಮಣ್ಣು-ಕಲ್ಲು ಸಹಿತ(ಅವಕ್ಕೆ ವರ್ಜ್ಯವನ್ನು ಶೇಖರಿಸಿಡಲು ಪ್ರತ್ಯೇಕ ಅವಕಾಶ ಉದರದಲ್ಲಿರುತ್ತದೆ) ತಿಂತಾವೆ. ನಾವು ಅಕ್ಕಿಯನ್ನು ಹೆಕ್ಕಿ ಅನ್ನಕ್ಕೆ ಬಳಸುತ್ತೇವೆ. ಅಷ್ಟೇ ನಮ್ಮ ರಾಮನಗರದಲ್ಲಿ "ಹಕ್ಕಿಯನ್ನು ಎಕ್ಕಿ "ಅಂತ ಬಳಸುತ್ತೇವೆ!!!ಅದನ್ನೇ ಒಂದು ಬರವಣಿಗೆಯಲ್ಲಿ ಹೇಳಿದ್ದೇನೆ . ಅಕ್ಕಿಯೊಂದು ಆರಿ ಬಂದು ಹೇರಿಮ್ಯಾಲೆ ಕುಳಿತಿತು|ಕುಂತು ತಾನು ಹಕ್ಕಿಯನ್ನು ಎಕ್ಕಿ ಎಕ್ಕಿ ತಿಂದಿತು ಅಂತ.!!!! ಹೆಹ್ಹೆಹ್ಹೇ....
-------------------------------------------------------------
ವೇದಸುಧೆ ಯಲ್ಲಾದ ಚರ್ಚೆ:
[ಇಲ್ಲಿ ಕೆಲವು ಪುನರಾವರ್ತಿಯಾಗಿರಬಹುದು.]

ಕವಿ ನಾಗರಾಜ್Mar 3, 2012 08:58 PM


ಚಂದನ ವಾಹಿನಿಯಲ್ಲಿ ಇಂದು ಪ್ರಸಾರವಾದ 'ಹೊಸಬೆಳಕು'ಕಾರ್ಯಕ್ರಮದಲ್ಲೂ ವೇದದಲ್ಲಿ ಪ್ರಾಣಿಹಿಂಸೆಗೆ ಅವಕಾಶವಿಲ್ಲವೆಂಬ ಅಂಶವನ್ನು ಒತ್ತಿ ತಿಳಿಸಲಾಗಿದೆ. 
ಈಗ ದೊಡ್ಡಪುರದಲ್ಲಿ ಸಾಂಕೇತಿಕವಾಗಿ ಕುದುರೆಯ ಬೊಂಬೆಯನ್ನು ಅಗ್ನಿಗೆ ಅರ್ಪಿಸಲಾಗುವುದೆಂದು ಹೇಳಲಾಗಿದೆ. ಹಾಗಿದ್ದಲ್ಲಿ ಕುದುರೆಯ ಬೊಂಬೆಯನ್ನೇ -ನಿಜವಾದ ಕುದುರೆಯ ಬದಲಿಗೆ- ಮೆರವಣಿಗೆ ಮಾಡಬಹುದಿತ್ತು. ಪ್ರಾಣಿಬಲಿಯನ್ನು ಸಾಂಕೇತಿಕವಾಗಿ ಮಾಡಿದರೂ ಪ್ರಾಣಿಬಲಿಯನ್ನು ಮಾಡುವ ಉದ್ದೇಶವಿತ್ತೆಂದು ಭಾವಿಸಬಹುದಲ್ಲವೇ? ಮೆರವಣಿಗೆಯಲ್ಲಿ ಬಂದ ಕುದುರೆ ತನ್ನ ನಿಜವಾದ ಆಯಸ್ಸು ಪೂರ್ಣಗೊಳ್ಳುವವರೆಗೆ ಬದುಕಲಿ ಎಂಬುದು ನನ್ನ ಹಾರೈಕೆ.


ಕವಿ ನಾಗರಾಜ್Mar 4, 2012 09:26 PM

ಶ್ರೀಯುತ ಭೀಮಸೇನ ಪುರೋಹಿತರಿಗೆ ವಂದನೆಗಳು. ನನ್ನ ಪ್ರತಿಕ್ರಿಯೆಗೆ ಉತ್ತರವಾಗಿ ನೀವು ಇದನ್ನು ಬರೆದಿರುವುದರಿಂದ ನನ್ನ ಅನಿಸಿಕೆ ದಾಖಲಿಸಿರುವೆ. ಸಸ್ಯಹಿಂಸೆಯೂ ಹಿಂಸೆ ಎಂಬುದನ್ನು ಒಪ್ಪುವೆ. ಆದರೆ ಅದು ಕುದುರೆಯನ್ನು ಬಲಿ ಕೊಡಲು ಸಮರ್ಥನೆಯೆನಿಸುವುದಿಲ್ಲ. ಸಾಂಕೇತಿಕ ಅಶ್ವಮೇಧ ಯಾಗಕ್ಕೆ ಸಂಬಂಧಿಸಿದಂತೆ ಹೊರಡಿಸಲಾಗಿರುವ ಕರಪತ್ರದಲ್ಲಿ ಕುದುರೆ ನಮ್ಮೊಳಗಿನ ಮೃಗೀಯ ಸಂಸ್ಕಾರಗಳ ಪ್ರತೀಕ ಎಂದು ಬಣ್ಣಿಸಲಾಗಿದೆ. ವಾಸ್ತವವಾಗಿ ಕುದುರೆ ಶಕ್ತಿ ಮತ್ತು ವೀರ್ಯದ ಪ್ರತೀಕ. ಕುದುರೆ ಮಾನವನಿಗೆ ಅನುಕೂಲಿಯಾಗಿ ವರ್ತಿಸಿರುವುದನ್ನು ನಾವು ಕಂಡಿದ್ದೇವೆಯೇ ಹೊರತು ಇತರ ಜೀವಿಗಳಿಗೆ ಮಾರಕವಾಗಿ ವರ್ತಿಸಿದ್ದನ್ನು ಅರಿತಿಲ್ಲ. ವಾಸ್ತವವಾಗಿ ಮಾನವನಷ್ಟು ಮೃಗೀಯವಾಗಿ ವರ್ತಿಸುವ ಬೇರೆ ಜೀವಿ ಇರಲಿಕ್ಕಿಲ್ಲ. ವೇದದ ಯಾವ ಮಂತ್ರದಲ್ಲಿ ಹಿಂಸೆಗೆ ಅವಕಾಶವಿದೆ ಎಂಬ ಬಗ್ಗೆ ಆ ಮಂತ್ರದ ಉಲ್ಲೇಖ ಮಾಡಿ ಬರೆದರೆ ಉಪಕಾರವಾಗುತ್ತದೆ. ನೀವು ಹೇಳಿದ "ವೈದೀ ಹಿಂಸಾ ನ ಪಾಪಸಾಧನಂ" ಎಂಬುದು ಎಲ್ಲಿ ಉಲ್ಲೇಖಿಸಲ್ಪಟ್ಟಿದೆ ಎಂಬ ಕುರಿತು ತಿಳಿಯಲು ಕುತೂಹಲಿಯಾಗಿದ್ದೇನೆ.


ವಿ.ಆರ್.ಭಟ್Mar 4, 2012 03:53 AM


ನಮ್ಮ ಉಳಿವಿಗಾಗಿ ದೇವರನ್ನು ತೃಪ್ತಿ ಪಡಿಸುತ್ತೇವೆಂಬ ಕುರುಡು ನಂಬಿಕೆಯಿಂದ ಬಲಿಗಾಗಿ ಯಾ ಮಾನವನ ಕಬಳಿಕೆಗಾಗಿ ಇರುವೆಯಿಂದ ಹಿಡಿದು ಯಾವುದೇ ಜೀವಿಯನ್ನು ವಧಿಸುವುದೂ ಖಂಡಿತಕ್ಕೂ ಪಾಪಕೃತ್ಯ, ಹೇಯಕೃತ್ಯ. ನಾವು ಯಜ್ಞ-ಯಾಗಗಳಲ್ಲೊಂದೇ ಅಲ್ಲ ಹೊರಗಡೆ ಕಟುಕರು ನಿರ್ದಯೆಯಿಂದ ಕಡಿಯುವ ಸನ್ನಿವೇಶ ಒಮ್ಮೆ ನೋಡಿದರೆ ಮನುಷ್ಯನಾಗಿ ಯಾಕಾದರೂ ಹುಟ್ಟಿದೆವಪ್ಪಾ ಎನಿಸುತ್ತದೆ. ಪ್ರತೀ ಭಾನುವಾರ ಹೊಸದಿಗಂತದ ೭ ನೇ ಪುಟದಲ್ಲಿಡಾ| ಸತ್ಯನಾರಾಯಣ ಭಟ್ ಅವರು ಬರೆಯುವ ಅಂಕಣ ’ಪೃಥಿವೀಸೂಕ್ತ’ ನನ್ನ ಅತೀ ಮೆಚ್ಚಿನ ಅಂಕಣಗಳಲ್ಲೊಂದು. ಜ್ಞಾನ ದಾಹಿಗಳಿಗೆ, ಆಯ್ದುಕೊಂಡ ಒಂದೊಂದೂ ವಿಷಯವಸ್ತುವಿನ ಪರಿಪೂರ್ಣ ಮಾಹಿತಿಯನ್ನು ತಮ್ಮ ಪ್ರಪಂಚ ಪರ್ಯಟನೆಯ ಸ್ವಾನುಭವದಿಂದ ಉಣಬಡಿಸುವ ಈ ಆಯುರ್ವೇದ ವೈದ್ಯರನ್ನು ನಾನೊಮ್ಮೆ ಸಂಪರ್ಕಿಸಿದಾಗ ಹೇಳಿದೆ "ಸ್ವಾಮೀ ಶ್ರೀಸೂಕ್ತ, ಪುರುಷಸೂಕ್ತ, ನಾರಾಯಣ ಸೂಕ್ತಗಳ ಜೊತೆಗೇ ಪೃಥಿವೀಸೂಕ್ತವನ್ನೂ ಇಟ್ಟು ಪೂಜಿಸುವ, ಆಗಾಗ ತೆಗೆದು ಓದಿ ಆಸ್ವಾದಿಸುವ ಮನಸ್ಸಾಗುತ್ತದೆ " ಎಂದು. ಅವರು ಖುಷಿಪಟ್ಟರೂ "ಇವತ್ತಿನ ಕಾಲದಲ್ಲಿ ಪ್ರಕಾಶಕರುಗಳು ನೋಡುವುದು ವ್ಯಾವಹಾರಿಕ ಲಾಭವನ್ನಷ್ಟೇ. ಇಂಥದ್ದನ್ನೆಲ್ಲಾ ಪುಸ್ತಕರೂಪದಲ್ಲಿ ಪ್ರಕಟಿಸಲು ಯಾರೂ ಮುಂದೆಬರುವುದಿಲ್ಲ. ಇಂಥದ್ದಕ್ಕೆ ಓದುಗರ ಸಂಖ್ಯೆಯೂ ಕಮ್ಮಿ ಇರುತ್ತದೆ " ಎನ್ನುತ್ತಾ ಪಶ್ಚಾತ್ತಾಪಪಟ್ಟುಕೊಂಡರು. ಈ ಜಗತ್ತಿನಲ್ಲಿ ನಾವು ಕಳೆದುಕೊಳ್ಳುತ್ತಿರುವ ಸಸ್ಯ ಪ್ರಭೇದಗಳು, ವನ್ಯಜೀವಿಗಳು, ಜಲಚರಗಳು ಮುಂತಾದ ಹಲವು ಹತ್ತು ಮಾಹಿತಿಗಳನ್ನು ವಾರಕ್ಕೊಂದರಂತೇ ಕೊಡಮಾಡುವ ಅವರ ಈ ಪ್ರಯತ್ನ ಅನವದ್ಯ, ಹೃದ್ಯ. ಆಸಕ್ತರು ಪ್ರತೀ ಭಾನುವಾರದ ಹೊಸದಿಗಂತವನ್ನು ಕೊಂಡು ಓದಬಹುದು ಅಥವಾ ಅಂತರ್ಜಾಲದ ಮೂಲಕವೂ ಓದಬಹುದು. ಲೇಖಕ ಡಾ| ಭಟ್ಟರಿಗೆ ಕವಿಹೃದಯವೂ ಇದೆ ಎಂಬುದು ಗೊತ್ತು. ಅನೇಕ ವಿಷಯಗಳನ್ನು ಸಂಗಮಿಸಿಯೇ ವಿಷಯಪೂರಣ ಮಾಡುವ ಅವರ ಲೇಖನದ ಹೂರಣ ಚೆನ್ನಾಗಿರುತ್ತದೆ. ಅನುಕೂಲ/ಆಸಕ್ತಿ ಇದ್ದವರು ಓದಲಿ ಎಂದು ಇಲ್ಲಿ ಮತ್ತೊಮ್ಮೆ ನೆನಪಿಸುತ್ತಿದ್ದೇನೆ. ಈ ವಾರ ಡಾಲ್ಫಿನ್ ಹತ್ಯೆಯ ಕುರಿತು ಬರೆದಿದ್ದು ಓದಿ ಬಹಳ ಬೇಸರಗೊಂಡೆ. ಅದರ ಕೊಂಡಿ ಈ ಕೆಳಗಿದೆ: 


http://hosadigantha.in/epaper.php?date=03-04-2012&name=03-04-2012-7

AnonymousMar 4, 2012 04:47 PM

Bhimasen Purohit ನಮ್ಮಲ್ಲಿ ಇರೋ ಒಂದು ಭಾವವನ್ನು ಸ್ಪಷ್ಟಪಡಿಸುವೆ.. ಯಾವ ಜೀವಿ ಯಜ್ಞಕ್ಕಾಗಿ ಬಲಿಯಾಗುತ್ತದೆಯೋ ಅದು ಮುಂದಿನ ಜನ್ಮದಲ್ಲಿ ಉತ್ತಮವಾದ ಸಜ್ಜನಿಕೆಯ ಜೀವಿಯಾಗಿ ಹುಟ್ಟುತ್ತದೆ..

ರಾಜನೊಬ್ಬ ಗೋವುಗಳನ್ನು ಬಲಿಕೊಟ್ಟಿದ್ದ ವಿಷಯವನ್ನು ಹಿಂದಷ್ಟೇ ಪ್ರಸ್ತಾಪಿಸಿದ್ದೆ. ಅದೇ ಪುರಾಣದ ಕಥೆಯಲ್ಲೇ ಮುಂದೆ ಹೇಳುತ್ತಾರೆ.. ಹಾಗೆ ಬಲಿಕೊಟ್ಟ ಹಸುಗಳೆಲ್ಲ ಮತ್ತೆ ಪುನರ್ಜನ್ಮ ತಾಳಿ, ಅತ್ಯುತ್ತಮವಾದ, ಶ್ರೇಷ್ಠ ಆಕಳುಗಳಾಗಿದ್ದವು, ಎಂದು.
ಅಂದರೆ, ಮಾತು ಸ್ಪಷ್ಟವಾಯಿತಷ್ಟೇ, ಆ ಕಾಲದಲ್ಲಿ ಕುದುರೆ ಮುಂತಾದವನ್ನು ಬಲಿಕೊಡೋದು ಇತ್ತು.
ಆದರೆ ಅದು ಕ್ರೌರ್ಯ ಅಂತಲ್ಲ.. ಆಗಿನ ಕಾಲದ ಋಷಿ-ಮುನಿಗಳಿಗೆ, ಯಜ್ಞದ ಆಧ್ವರ್ಯುಗಳಿಗೆ, ಹಾಗೆ ಬಲಿಕೊಟ್ಟ ಪ್ರಾಣಿಗಳನ್ನು ಮತ್ತೆ ಸೃಷ್ಟಿ ಮಾಡುವ ಸಾಮರ್ಥ್ಯವಿತ್ತು.. ಹೀಗಾಗಿಯೇ ಅವರು, ೧) ಯಜ್ಞದ ಭಾಗವಾಗಿ ಮತ್ತು ೨) ಆ ಜೀವಿಗೆ ಸದ್ಗತಿ ಸಿಗಲಿ ಅಂಬ ಕಾರಣಗಳಿಗಾಗಿ ಬಲಿ ಕೊಡುತ್ತಿದ್ದರು..

ಆದರೆ, ಕಲಿಗಾಲದಲ್ಲಿ, ಹಾಗೆ ಸತ್ತ ಪ್ರಾಣಿಗಳನ್ನು ಬದುಕಿಸುವ ಸಾಮರ್ಥ್ಯವಿಲ್ಲ. ಹೀಗಾಗಿಯೇ ಇನ್ನೊಂದು ಅಂಶವನ್ನು ಋಷಿಗಳು ಸ್ಪಷ್ಟ ಪಡಿಸಿದ್ದಾರೆ. ಏನೆಂದರೆ, ಈ ಕಲಿಗಾಲದಲ್ಲಿ, ಪ್ರಾಣಿಬಲಿ ಸರ್ವಥಾ ಅಯೋಗ್ಯವಾದದ್ದು.. ಅಂತ.. ಅದಕ್ಕೆಂದೇ, ಯಜ್ಞದ ಆಚರಣೆಗೂ ಭಂಗ ಬರಬಾರದು, ಋಷಿಗಳ ಮಾತನ್ನೂ ಮೀರಬಾರದು ಅಂತಲೇ, ಅದರದೊಂದು ಮಣ್ಣಿನ ಅಥವಾ ಹಿಟ್ಟಿನ ಪ್ರತಿಕೃತಿ ಮಾಡಿ ಬಲಿಕೊಡುತ್ತಾರೆ..
-Bhimasen Purohit

vasanth Kumar 10:09am Mar 5
ಯಜ್ಝ ಯಾಗ ಎಂಬುದಕ್ಕೆ ಅಧ್ವರ ಎಂಬ ಅರ್ಥವೂ ಇದೆ.. ಅಂದರೆ ಅಹಿಂಸೆ ಎಂದು ಅರ್ಥ. ಹಾಗಿದ್ದಲ್ಲಿ ಯಜ್ಞ, ಯಾಗಾದಿಗಳಲ್ಲಿ ಪ್ರಾಣಿ ಬಲಿ ಎಂಬುದು ಖಂಡಿತಾ ಇಲ್ಲ. ಜಗತ್ತಿನ ಯಾವ ಜೀವಿಗಳನ್ನೂ ಹಿಂಸಿಸಬೇಡಿ ಎಂದು ವೇದಗಳು ಘ್ಹಂಟಾಘೋಷವಾಗಿ ಸಾರಿವೆ. ಹಾಗಿದ್ದಲ್ಲಿ ಪಶುಬಲಿ ಎಲ್ಲಿಂದ ಬಂತು? ಯಾವುದೇ ಯಜ್ಞ್ನ ಕಾರ್ಯದಲ್ಲಿ ನಿಮ್ಮ ’ಪಶುತ್ವ’ ವನ್ನು ಬಲಿಕೊಡಿ ಎಂದು ವೇದಗಳು ಹೇಳಿವೆ. ಅಂದರೆ ನಿಮ್ಮಲ್ಲಿರುವ ಮೃಗೀಯ ಭಾವನೆಗಳನ್ನು ಬಿಟ್ಟು ಮಾನವತೆಯನ್ನು ಬೆಳೆಸಿಕೊಳ್ಳಿ ಎಂದರ್ಥ.. ಇದನ್ನೇ ಕೆಲವರು ಅರ್ಥ ತಿರುಚಿ ಪಶುಬಲಿ ಎಂದು ಅರ್ಥೈಸಿದ್ದಾರೆ...

(ನಿನ್ನೆ ಬೆಳಿಗ್ಗೆ ೯.೩೦ಕ್ಕೆ ಚಂದನವಾಹಿನಿಯಲ್ಲಿ ಪ್ರಸಾರವಾದ ’ವೇದ’ಗಳ ಕುರಿತಾದ ’ಹೊಸಬೆಳಕು’ ಕಾರ್ಯಕ್ರಮದಲ್ಲಿ, ಮಾನ್ಯ ಶ್ರೀ ಸುಧಾಕರ ಶರ್ಮಾ ಅವರು)

AnonymousMar 4, 2012 09:24 PM

Glany Fernandes ಉತ್ತಮ ಮಾಹಿತಿಗೆ ಧನ್ಯವಾದಗಳು...ಯಜ್ನ ಯಾಗಗಳಿಂದ ಭಗವಂತ ಒಲಿಯಬೇಕು, ಭಗವಂತನಿಗೆ ಬೇಕಿರುವುದು ಪ್ರೀತಿಯ, ಮಮತೆಯ, ವಾತ್ಲಲ್ಯದ ಹ್ರದಯ


Subramanya Machikoppa
10:49pm Mar 5

ಇಲ್ಲ . ಹಾಗಿರಲಿಕ್ಕಿಲ್ಲ!!! ಮಾಂಸಾಹಾರ ಮಾನವನ ಸಹಜ ಪದ್ಧತಿ. ವೇದಕಾಲದಲ್ಲಿ ಅವಿರುವ ಸಂಭವವೇ ಹೆಚ್ಚು. ಅಶ್ವಮೇಧದಲ್ಲಿ ಕುದುರೆಯ ವಧೆ ನಡೆಯುವುದಿಲ್ಲವೆ??

Subramanya Machikoppa ಶತಪಥ ಬ್ರಾಹ್ಮಣದಲ್ಲಿ ಅಶ್ವಮೇಧದ ಬಗ್ಗೆ ಹೇಳಿದೆ…….. “ಅಶ್ವಂ ಇತಿ ರಾಷ್ಟ್ರಂ” ಅದರ ವಿವರಣೆ ಹೀಗಿದೆ. ಶ್ವ: ಅಂದರೆ ನಾಳೆ. ಅಶ್ವ: ಅಂದರೆ ಯಾವುದಕ್ಕೆ ನಾಳೆ ಇಲ್ಲವೋ ಅದು.ಯಾವುದಕ್ಕೆ ನಾಳೆ ಎನ್ನುವುದು ಇಲ್ಲವೋ ಅದಕ್ಕೆ ನಿನ್ನೆ ಎಂಬುದೂ ಇಲ್ಲ. ಅಂದರೆ ಯಾವುದು ನಿರಂತರವಾಗಿ ಇದ್ದೇ ಇರುತ್ತದೋ ಅದಕ್ಕೆ ನಿನ್ನೆ ನಾಳೆಗಳಿಲ್ಲ.ಯಾವುದಕ್ಕೆ ನಿನ್ನೆ ನಾಳೆಗಳಿರುತ್ತದೆ ಎಂದರೆ ಯಾವುದುಶಾಶ್ವತ ವಲ್ಲವೋ ಅದಕ್ಕೆ ಇರುತ್ತದೆ. ನಿನ್ನೆ ಇತ್ತು, ಇವತ್ತು ಇದೆ. ನಾಳೆ ಗೊತ್ತಿಲ್ಲ ಅಂದರೆ ಅದು ಶಾಶ್ವತವಲ್ಲ ಎಂದಾಯ್ತು.ಯಾವುದು ನಿನ್ನೆ ಇತ್ತು, ಇವತ್ತೂ ಇದೆ, ನಾಳೆಯೂ ಇರುತ್ತದೋ ಅದು ಮಾತ್ರ ಶಾಶ್ವತ.ಯಾವುದು ನಿರಂತರವಾಗಿರುತ್ತದೆ, ಅದು ಅಶ್ವ.ಆದ್ದರಿಂದಲೇ “ಅಶ್ವಂ ಇತಿ ರಾಷ್ಟ್ರಂ” ನಾನು ಇವತ್ತು ಇದ್ದೀನಿ, ನಾಳೆ ಗೊತ್ತಿಲ್ಲ.ಆದರೆ ರಾಷ್ಟ್ರಶಾಶ್ವತ.["ದೇಹ ನಶ್ವರವೆಂದು, ದೇಶಶಾಶ್ವತವೆಂದು, ನಶ್ವರವುಶಾಶ್ವತಕೆ ಮುಡಿಪಾಗಲೆಂದು" ಎಂಬ ಗೀತೆ ಕೇಳಿರುವೆ] ನಾವೆಲ್ಲಾ ಪ್ರಜೆಗಳು ಇಂದು ಇದ್ದೀವಿ. ಇನ್ನೊಂದು ಐವತ್ತು ವರ್ಷ ನಾವು ಇರಬಹುದೇನೋ , ಮತ್ತೆ ಬೇರೆ ಪ್ರಜೆಗಳ ಹುಟ್ಟು, ಸಾವು, ಇದೆಲ್ಲಾ ನಡೆಯುತ್ತಲೇ ಇರುತ್ತದೆ.ಎಷ್ಟೋ ತಲೆಮಾರು ಕಳೆಯುತ್ತಲೇ ಇರುತ್ತದೆ ,ಅದರೆ ರಾಷ್ಟ್ರ ಮಾತ್ರ ನಿರಂತರ. ನಿರಂತರವಾಗಿರುವ ಭೂಮಿ ರಾಷ್ಟ್ರ. ಇಂದು ಇದ್ದು ನಾಳೆ ಇಲ್ಲಾವಾಗುವವರು ನಾವು ನೀವು.
ಇನ್ನು “ಮೇಧ” ಎಂದರೆ ” ಸಂಗಮೇ” ಅಂದರೆ ಒಟ್ಟು ಗೂಡಿಸು.ಎಂದಾಗ ರಾಷ್ಟ್ರವನ್ನು ಒಟ್ಟು ಗೂಡಿಸಲು ಮಾಡುವ ಕಾರ್ಯಕ್ರಮಗಳೆಲ್ಲಾ ” ಅಶ್ವಮೇಧ ಯಾಗವೇ” ಎಂದಂತಾಯ್ತು. ಎಂತಹಾ ಶ್ರೇಷ್ಠವಾದ ಅರ್ಥ ಇದೆಯಲ್ಲವೇ?. ಅಂದರೆ ವೇದಕ್ಕೆ ಸರಿಯಾದ ಅರ್ಥವಿದೆ,ಆದರೆ ನಾವು ಸರಿಯಾಗಿ ಅರ್ಥೈಸದೆ ತಪ್ಪಾಗಿ ಅರ್ಥೈಸಿದ್ದೇವೆ.
ನೋಡಿ : http://www.vedasudhe.com/

Ganesh Khare
9:45am Mar 6

ನನಗೆ ತಿಳಿದ ಮಟ್ಟಿಗೆ ಹಿಂದಿನ ಕಾಲದಲ್ಲಿ ಯಜ್ಞ ಯಾಗಗಲ್ಲಿ ಪಶು ಬಲಿ ಸಹಜವಾಗಿತ್ತು. ಈಗಲೂ ಕೂಡ ಕೆಲವು ಕಡೆ ಶ್ರೌತ ಯಾಗಗಳಲ್ಲಿ ಪಶು ಬಲಿ ನಡೆಯುತ್ತಾ ಇದೆ ಮತ್ತು ಶ್ರೌತ ಯಾಗ ಮಾಡುವ ಪುರೋಹಿತರು ಸ್ವಲ್ಪ ಪ್ರಮಾಣದಲ್ಲಿ ಅದರ ಭಕ್ಷಣೆ ಕೂಡ ಮಾಡುತ್ತಾರೆ. ಈಗ ಕೇವಲ ಕೆಲವು ಶ್ರೌತ ಯಾಗಗಳಲ್ಲಿ ಮಾತ್ರ ಪಶು ಬಲಿ ನಡೆಯುತ್ತೆ.ಪ್ರತಿಯೊಂದು ಶಾಂತಿಯಲ್ಲೂ (ಉದಾಹರಣೆಗೆ ವಾಸ್ತುಶಾಂತಿ,ಜನನ ಶಾಂತಿ)ಕೂಡ ಬಲಿ ನೀಡಲು ಹೇಳಿದ್ದಾರೆ, ಆದರೆ ಈಗ ಬಲಿಯ ಪ್ರತೀಕವಾಗಿ ಉದ್ದು ಹಾಕಿ ಬೇಯಿಸಿದ ಅನ್ನದ ಬಲಿ ನೀಡುವುದು ರೂಢಿಯಲ್ಲಿದೆ.ಕಪ್ಪು ಉದ್ದಿನ ಕಾಳನ್ನ ಮಾಂಸಾಹಾರದ ಪ್ರತೀಕವಾಗಿ ಬಳಸಲಾಗುತ್ತೆ.ಹಿಂದಿನ ಕಾಲದಲ್ಲಿ ಬ್ರಾಹ್ಮಣರಲ್ಲಿ (ಈಗ ಶುದ್ಧ ಶಾಕಾಹಾರಿ ಆಗಿರುವವರು) ಕೂಡ ಮಾಂಸಾಹಾರ ಸಾಮಾನ್ಯವಾಗಿತ್ತು. ಆದರೆ ಕಾಲಾಂತರದಲ್ಲಿ ಬಂದಂತಹ ಜೈನ ಸಂಸ್ಕೃತಿಯ ಪ್ರಕಾರ ಪ್ರಾಣಿಹಿಂಸೆ ಕಡಿಮೆಯಾಗತೊಡಗಿತು,ಏಕೆಂದರೆ ಜೈನರ ಅಹಿಂಸಾವಾದ ಎಷ್ಟೋ ಜನರನ್ನ ಹಿಂದೂ ಧರ್ಮದಿಂದ ಜೈನ ಧರ್ಮಕ್ಕೆ ಮತಾಂತರ ಆಗುವಂತೆ ಮಾಡಿದ್ದು.ಹಾಗಾಗಿ ಹಿಂದೂ ಧರ್ಮದವರೂ ಕೂಡ ಮಾಂಸಾಹಾರವನ್ನ ಕೇವಲ ಯಜ್ಞಯಾಗಾದಿಗಳಿಗೆ ಮೀಸಲಿಟ್ಟು ತಮ್ಮ ಧರ್ಮವನ್ನ ಕೂಡ ಅಹಿಂಸಾವಾದ ಧರ್ಮವನ್ನಾಗಿ ಮಾಡಿದರು.

Kavinagaraj:6 Mar 2012 10.36am
  ಭೀಮಸೇನ ಪುರೋಹಿತರು ಒಪ್ಪಿರುವಂತೆ ವೇದವೇ ಮೂಲವಾದರೆ ವೇದದ ಮಂತ್ರಗಳಿಗೆ, ಆಶಯಗಳಿಗೆ ವಿರೋಧವೆನಿಸುವ ಕೆಲವು ಪುರಾಣ, ಪುಣ್ಯಕಥೆಗಳನ್ನು ಅನುಕೂಲಸಿಂಧುವಾಗಿ ಬಳಸುತ್ತಿದ್ದಾರೆಂದು ಹೇಳಬಹುದು. ಪುರಾಣ, ಪುಣ್ಯಕಥೆಗಳು ಸದ್ವಿಚಾರ ಪೋಷಿಸಲು ನೆರವಾಗಬಹುದಷ್ಟೆ. ಇಲ್ಲಿ ಚರ್ಚೆಯಿರುವುದು ವೇದಗಳಲ್ಲಿ ಪ್ರಾಣಿಬಲಿಗೆ ಪೋಷಕವಾಗುವ ಸಂಗತಿಗಳಿವೆಯೇ ಎಂಬುದು. ಇದ್ದಲ್ಲಿ ತಿಳಿಸಿದರೆ ಒಳ್ಳೆಯದು. ವೇದದಲ್ಲಿ ಇಲ್ಲದ್ದು ವೇದದ ಉಪಾಂಗಗಳಲ್ಲಿ ಕಂಡುಬಂದರೆ ಅದು ವಿಮರ್ಶೆ ಮತ್ತು ಜಿಜ್ಞಾಸೆಗೆ ಅರ್ಹ. ಹಾಗೆ ಇದೆಯೆಂದು ಸಮರ್ಥನೆಗಾಗಿ ಬಳಸುವ ಉಕ್ತಿ/ಮಂತ್ರಗಳನ್ನು ಅವು ಎಲ್ಲಿ ಉಲ್ಲೇಖಿಸಲ್ಪಟ್ಟಿದೆ ಎಂಬ ಬಗ್ಗೆ ಸವಿವರವಾಗಿ ಪ್ರಾಣಿಬಲಿ ಸಮರ್ಥಿಸುವ ವರ್ಗದವರು ಮಂಡಿಸಲಿ ಎಂಬುದು ನನ್ನ ಬಿನ್ನಹ. ವೇದಾಧ್ಯಾಯಿಗಳು ಹೇಳುವ ಪ್ರಕಾರ ನಾಲ್ಕು ವೇದಗಳ ಯಾವುದೇ ಮಂತ್ರಗಳಲ್ಲಿ ವಿರೋಧಾಭಾಸವಿರುವ ಅರ್ಥ ಕೊಡುವ ಮಂತ್ರಗಳಿಲ್ಲವೆಂಬುದು.
"ವೈದೀ ಹಿಂಸೆ" ಎಂಬ ಪದಕ್ಕೆ ವ್ಯಾಪಕ ಅರ್ಥವೂ ಇರಬಹುದು. ವೈದೀ ಹಿಂಸೆ ಎಂಬುದನ್ನು ಪ್ರಾಣಿಬಲಿಗೆ ಸಮರ್ಥನೆಯಾಗಿ ಬಳಸಲಾಗದು. ವೇದ ಹಿಂಸೆಯನ್ನು ಎಂದೂ ಬೋಧಿಸಿಲ್ಲವೆಂದು ವೇದಾಧ್ಯಾಯಿಗಳು ಘೋಷಿಸುವ ಮಾತು. ಸರ್ವರ ಹಿತ ಬಯಸುವ ವೇದ ಸಕಲ ಜೀವಜಂತುಗಳಿಗೂ ಅನ್ವಯವಾಗುವಂತಹುದು. ಕೇವಲ ಒಂದು ವರ್ಗ ಅಥವ ವರ್ಣದವರಿಗಲ್ಲ.


Vasanth Kumar 11:04am Mar 6
Ganesh Khare ಯಾವುದೇ ಯಜ್ಞ್ನ ಕಾರ್ಯದಲ್ಲಿ ನಿಮ್ಮ ’ಪಶುತ್ವ’ ವನ್ನು ಬಲಿಕೊಡಿ ಎಂದು ವೇದಗಳು ಹೇಳಿವೆ. ಅಂದರೆ ನಿಮ್ಮಲ್ಲಿರುವ ಮೃಗೀಯ ಭಾವನೆಗಳನ್ನು ಬಿಟ್ಟು ಮಾನವತೆಯನ್ನು ಬೆಳೆಸಿಕೊಳ್ಳಿ ಎಂದರ್ಥ.. ಇದನ್ನೇ ಕೆಲವರು ಅರ್ಥ ತಿರುಚಿ ಪಶುಬಲಿ ಎಂದು ಅರ್ಥೈಸಿದ್ದಾರೆ... ಮತ್ತು ಅದನ್ನು ರೂಢಿಸಿ ಕೊಂಡಿದ್ದಾರೆ ಕಾಲಾಂತರದಲ್ಲಿ ಬಂದ ಅಹಿಂಸೆಯನ್ನು ಎಲ್ಲಾ ಮತಗಳಿಂತಲೂ ಪ್ರಾಚೀನವಾದ ವೇದಗಳು ಸಾರಿವೆ.. ಪಶುಬಲಿ ಎನ್ನುವುದು, ಹಿಂಸೆ... ಹಿಂಸೆ ಎನ್ನುವುದು ’ಮಾನವಧರ್ಮ’ ಎಂದು ತಾವು ಹೇಳುವುದಾದರೆ ತಮ್ಮ ಮಾತನ್ನು ಒಪ್ಪಿಕೊಳ್ಳುತ್ತೇನೆ.




 ನೋಡಿ ಯಾವುದೇ ವೇದಗಲ್ಲಿ ಕೂಡ ಪಶು ಬಲಿ ನಿಷೇಧ ಅಂತ ಹೇಳಿಲ್ಲ. ನೀವು ಹೇಳುತ್ತಿರುವ ಹಾಗೆ ಜಗತ್ತಿನ ಯಾವ ಜೀವಿಗಳನ್ನೂ ಹಿಂಸಿಸಬೇಡಿ ಎಂದು ವೇದಗಳು ಘಂಟಾಘೋಷವಾಗಿ ಸಾರಿವೆ ಅನ್ನುವ ಮಾತು ತಪ್ಪು. ಅಧ್ವರ ಅಂದರೆ ಬರೀ ಹಿಂಸಾರಹಿತ ಅನ್ನುವ ಅರ್ಥವಲ್ಲ ಯಜ್ಞ ಕಾರ್ರ್ಯದಲ್ಲಿ ಮಾಡುವ ಹಿಂಸೆಯನ್ನ ಬಿಟ್ಟು ಉಳಿದ ಹಿಂಸೆ ಅನ್ನುವುದು ಅಧ್ವರ. ಆ ರೀತಿಯ ಯಜ್ಞ ಕಾರ್ಯವನ್ನ ಮಾಡುವವನನ್ನ "ಅಧ್ವರ್ಯವಃ" ಅನ್ನುತ್ತಾರೆ. ಅಶ್ವಮೇಧ ಯಾಗದಲ್ಲಿ "ಅಶ್ವಂ ಮಾ ಹಿಂಸೀ:" ಅನ್ನುವ ಮಂತ್ರದಿಂದಲೇ ಅದರ ವಧೆಯನ್ನು ಮಾಡಲು ಹೇಳಿದ್ದಾರೆ.
ವಿಶೇಷ ಮನೋಕಾಮನೆಯ ಉದ್ದೇಶವಾಗಿ ಮಾಡುವ ಪ್ರತಿಯೊಂದು ಯಜ್ನಯಾಗದಲ್ಲಿ ಕೂಡ ಪಶು ಬಲಿ ಇದ್ದೇ ಇದೆ. ಪಶುಬಲಿಗೆ ಪರ್ಯಾಯವಾಗಿ ಪಿಷ್ಟ ಬಲಿ ಈಗ ಸರ್ವಸಾಧಾರಣವಾಗಿ ಮಾಡುತ್ತಾರೆ. ಇದನ್ನೂ ಕೂಡ ವೆದದಲ್ಲೇ ಹೇಳಿದೆ. ಈಗಿನ ಕಾಲದಲ್ಲಿ ೧೦೦೦ ಯಜ್ಞಗಳಲ್ಲಿ ೧ ಯಜ್ಞದಲ್ಲಿ ಎಲ್ಲೋ ಪಶುಬಲಿ ನಡೆಯುತ್ತಾ ಇರಬಹುದು."ವೇದಾಹಿ ಯಜ್ನಾರ್ಥಂ ಅಭಿಪ್ರವೃತ್ತಾ:"ಅಂದರೆ ವೇದಗಳು ಯಜ್ಞದ ಸಲುವಾಗೆ ಇರುವಂತಹುದು.ವೇದದಲ್ಲಿ ಹೇಳಿರುವಂತೆ ನಡೆಯುವುದು ನಮ್ಮ ಕರ್ತವ್ಯ.ಆದರೆ ಪ್ರತಿಯೊಂದು ವ್ಯಕ್ತಿಯ ಮಾನಸಿಕತೆಗೆ ಅನುಗುಣವಾಗಿ ಬಲಿ ಅನ್ನುವುದು ಪಶು ಬಲಿಯೋ ಅಥವಾ ಪಿಷ್ಟ ಬಲಿಯೋ ಅನ್ನುವುದು ನಿರ್ಧಾರವಾಗುತ್ತೆ. ವೇದಗಳಲ್ಲಿ ಪಶು ಬಲಿ ಹೇಳಿರುವುದಂತೂ ನಿಜ. ನಿಮ್ಮ ಪ್ರಕಾರ ಯಜ್ಞಗಳಲ್ಲಿ ನಡೆಯುತ್ತಿರುವ ಪಶುಬಲಿ ಮಹಾಪಾಪ ಅನ್ನುವುದಾದರೆ, ಈಗ ರಸ್ತೆಯ ಬದಿಯಲ್ಲಿ ಮಾರಾಟಕ್ಕಾಗಿ ಮಾಂಸವನ್ನ ಜೋತು ಹಾಕಿರುತ್ತಾರೆ ಅದು ತಪ್ಪಲ್ಲವೇ? ಮನುಷ್ಯನು ತನ್ನ ನಾಲಿಗೆಯ ರುಚಿಗಾಗಿ ಪ್ರಾಣಿ ಹಿಂಸೆ ಮಾಡುವುದಕ್ಕಿಂತ ಸಮಾಜದ ಉನ್ನತಿಗಾಗಿ ಯಜ್ಞದಲ್ಲಿ ಪಶು ಬಲಿ ನೀಡುವುದು ತಪ್ಪಲ್ಲ ಅಲ್ಲವೇ?
-Ganesh Khare


ಮಾಂಸ ಮಾರಾಟಮಾಡುವವರು ಕಟುಕರು. ಯಜ್ಞ್ನ ಮಾಡುವವರು? ....ಸಮರ್ಥನೆಗಾಗಿ ಇಂತಾ ಉಧಾಹರಣೆಗಳೆಲ್ಲಾ ಬೇಡ.

-Hariharapura Sridhar 




ಇದು ಸಮರ್ಥನೆಯಲ್ಲ ಇರುವುದನ್ನ ಹೇಳಿದ್ದೇನೆ. ವಿನಾಯಕ ಶಾಂತಿಯಲ್ಲಿ ಹೇಳಿರುವ ಹಾಗೆ "ಪಕ್ವ ಮತ್ಸ್ಯಾಃ, ಅಪಕ್ವಾಃ , ತ್ರಿವಿಧ ಸುರಾಃ" ಅಂದರೆ ಬೇಯಿಸಿದ ಮೀನು, ಬೇಯಿಸದೆ ಇರುವ ಮೀನು , ಮೂರು ಪ್ರಕಾರದ ಸುರ ಇವೆಲ್ಲದರ ನೈವೇದ್ಯವನ್ನ ಹೇಳಿದ್ದಾರೆ. ಆಗ ಏನು ಮಾಡಬೇಕು ನೀವೇ ಹೇಳಿ. ಆದರೆ ಈಗ ಇದಕ್ಕೆ ಪರ್ಯಾಯವಾಗಿ ಹಿಟ್ಟಿನಿಂದ ಗೊಂಬೆ ಮಾಡಿ ಅದರ ನೈವೇದ್ಯವನ್ನ ತೋರಿಸುವ ರೂಢಿ ಇದೆ. ಆದರೆ ಇದನ್ನ ವೇದದಲ್ಲಿ ಹೇಳಿರುವುದಂತೂ ನಿಜವಲ್ಲವೆ? ನಾವೂ ಕೂಡ ಕಟುಕರಾಗಿದ್ದರೆ ದಿನವೂ ಕೂಡ ಪಶು ಬಲಿ ನಡೆಯುತ್ತಾ ಇತ್ತು. ಇದಕ್ಕೆ ವೇದಗಳೇ ಪರ್ಯಾಯ್ ವ್ಯವಸ್ಥೆಯನ್ನ ನೀಡಿದೆ. ಆದರೆ ವಿಶೇಷ ಕಾಮನೆಗಳ ಸಲುವಾಗಿ ಮಾಡಿದ ಯಜ್ಞದ ಪೂರ್ಣ ಫಲ ಸಿಗುವುದರ ಸಲುವಾಗಿ ಪಶು ಬಲಿ ಮಾಡುವುದು ತಪ್ಪಲ್ಲ. ಈಗ ಅಶ್ವಮೇಧ ಯಾಗದಲ್ಲಿ ಕೂಡ ಪೂರ್ಣ ಅಶ್ವವನ್ನ ಬಲಿ ನೀಡದೆ ಚಿಕ್ಕ ಮಾಂಸದ ತುಂಡನ್ನ ಬಲಿ ನೀಡುತ್ತಿದ್ದಾರೆ.
--Ganesh Khare


 ನೀವು ವೆದಸುಧೆಯಲ್ಲಿ ಬರೆದಿರುವ ಕೆಲ ಮಂತ್ರಗಳ ಪ್ರಕಾರ ಪ್ರಾಣಿಹಿಂಸೆ ಮಾಡಬಾರದು ಅನ್ನುವುದು ಒಪ್ಪುವ ವಿಚಾರವೇ.ಅದು ಕೆಲವು ಕಡೆ ಮಾತ್ರ ಅದೇ ರೀತಿ ಪಶು ಬಲಿ ಕೊಡಬೇಕು ಅನ್ನುವ ಎಷ್ಟೋ ಮಂತ್ರಗಳಿವೆ.ಈಗ ನೋಡಿ ನಮ್ಮ ದಿನನಿತ್ಯದ ಭಕ್ಷಣೆಯ ಕೆಲ ಪದಾರ್ಥಗಳು ಕೆಲವೊಂದು ರೋಗಗಳಿಗೆ ಮಾರಕ ಕೆಲವು ರೋಗಗಳಿಗೆ ಪೂರಕ. ಆ ಪದಾರ್ಥವನ್ನ ನಮ್ಮ ಅನುಕೂಲತೆಯಂತೆ ಬಳಸುತ್ತೇವೆ.ನಿಮ್ಮ ಉತ್ತರಕ್ಕಾಗಿ ಕಾಯುತ್ತಿದ್ದೇನೆ ಮಹನೀಯರೇ.
-Ganesh Khare



ನಾಗರಾಜ್ ಅವರ ಲೇಖನವನ್ನೂ ಓದಿದೆ.. ನಾನು ವೈಶ್ವದೆವವನ್ನು ಪ್ರಸ್ತಾಪಿಸಿದ ವಿಷಯವನ್ನು ಅವರು ತಪ್ಪಾಗಿ ಗ್ರಹಿಸಿದ್ದಾರೆನೋ. ಅನ್ನಿಸಿತು.. ಕಾರಣ, ಅದನ್ನ ನಾನು "ವೈದೀ ಹಿಂಸಾ" ಅನ್ನೋ ನ್ಯಾಯಶಾಸ್ತ್ರದ ಪ್ರತಿಪಾದನೆಗಾಗಿ ಹೇಳಿದ್ದು..

ಶ್ರೀಯುತ ನಾಗರಾಜ್ ಅವರೇ,ಇನ್ನೊಂದು ಅಂಶವನ್ನು ಗಮನಿಸಿ. ನೀವೇ ಆ ಶ್ಲೋಕಗಳ ಅರ್ಥಗಳನ್ನು ತಿಳಿಸಿದ್ದೀರಿ.. ಓದಿ ಸಂತೋಷವಾಯಿತು.. 
"೧) ಪರಮಾತ್ಮನ ಸಾಕ್ಷಾತ್ಕಾರ ಮತ್ತು ಜಠರಾಗ್ನಿಯ ಪ್ರದೀಪ್ತತೆಗಾಗಿ ಈ ಆಹುತಿ" 
-- ಅಂದ್ರೆ, ನಮ್ಮ ಜಥರದೊಳಗಿನ ಅಗ್ನಿಯ(ವೈಶ್ವಾನರಾಗ್ನಿ) ಪ್ರದೀಪ್ತತೆಗಾಗಿ ಅಂತ ಹೇಳಿ ಆಹುತಿ ಕೊಡುತ್ತೇವೆ.. ಎಲ್ಲಿ? ಜಥರಾಗ್ನಿಗೆನು. ಅಲ್ಲ..ಮುಂದೆ ಇರುವ ಅಗ್ನಿಗೆ. 
ನೀವೇ ಹೇಳಿದಂತೆ, "ಪರಮಾತ್ಮನ ಸಾಕ್ಷಾತ್ಕಾರಕ್ಕಾಗಿ" ಆಹಾರ ಪದಾರ್ಥಗಳನ್ನು, ಅಗ್ನಿಗೆ ಹಾಕುತ್ತೀರೆಂದರೆ, ಅಲ್ಲಿಗೆ ನೀವೂ ಹಿಂಸೆ ಮಾಡಿದಂತೆಯೇ ಆಯಿತಲ್ಲವೇ.. ಅದೇ ನನ್ನ ಪ್ರಶ್ನೆಯಾಗಿದೆ..
ನೀವು ಮಾಡಿದ್ದೂ ಹಿಂಸೆ ಅಂತ ಒಪ್ಪಿಕೊಂಡಲ್ಲಿ, ಹಾಗಾದರೆ ಅಂಥಾ ಹಿಂಸೆಯನ್ನು ಯಾಕೆ ಮಾಡುತ್ತೀರಿ ಅನ್ನೋದು ನನ್ನ ಮುಂದಿನ ಪ್ರಶ್ನೆ.. "ಭಗವಂತನ ಸಾಕ್ಷಾತ್ಕಾರಕ್ಕಾಗಿ" ಅಂತ ನೀವು ಮತ್ತೆ ಉತ್ತರ ಹೇಳಬಹುದು.. ಇದೆ ಉತ್ತರವನ್ನು ಆ ಅಶ್ವಮೇಧದ ಕುದುರೆಬಲಿಗೆ ನಾನು ಕೊಡುತ್ತೇನೆ.. "ಪರಮಾತ್ಮನ ಸಾಕ್ಷಾತ್ಕಾರಕ್ಕಾಗಿ" ಅಂತ..

"ದೇವರ ಸಾಕ್ಷಾತ್ಕಾರಕ್ಕಾಗಿ" ಸಸ್ಯಗಳನ್ನ ಆಹುತಿ ನೀಡುವುದು ದೋಷವಲ್ಲ, ಅಂದ ಮೇಲೆ, ಜೀವಿಯ ಮತ್ತೊಂದು ಪ್ರಾಕಾರವಾದ ಪ್ರಾಣಿಗಳನ್ನೂ ಅದೇ ಉದ್ದೇಶದಿಂದ ಆಹುತಿ ನೀಡಿದರೆ, ಅದನ್ನು ಹೇಗೆ ದೋಷ ಅಂತ ಹೇಳುತ್ತೀರಿ.? ತರ್ಕದ ಮೂಲಕ ಇದಕ್ಕೇನು ಉತ್ತರ ನೀಡುತ್ತೀರಿ.?
-Bhimasen Purohit 

ನಮಸ್ತೆ.. ಚರ್ಚೆಯನ್ನು ಅರ್ಧಕ್ಕೆ ನಿಲ್ಲಿಸಲು ಅದ್ಹೇಗೆ ಮನಸ್ಸಾಗುತ್ತದೆ ಹೇಳಿ.!!! ಇಷ್ಟು ಆರೋಗ್ಯಪೂರ್ಣವಾಗಿ ವಾದ-ವಿವಾದಗಳು ನಡೆಯುತ್ತಿರುವಾಗ.!!!!

ಒಂದು ಮಾತನ್ನಂತೂ ಸ್ಪಷ್ಟಪಡಿಸುತ್ತೇನೆ. ಕಲಿಯುಗದಲ್ಲಿ "ಪ್ರಾಣಿಬಲಿ" ಸರ್ವಥಾ ನಿಶಿದ್ಧವಾದದ್ದು. ಮತ್ತು ಅಧರ್ಮವಾದುದು.. ಅದನ್ನೂ ಪ್ರಮಾಣಗಳೇ ಹೇಳುತ್ತವೆ.. ಈಗಿನ ಕಾಲಮಾನದಲ್ಲಿ 'ಪ್ರಾಣಿಬಲಿಗೆ' ಅವಕಾಶವಿಲ್ಲ.. ಅದು ನನಗೂ ಇಷ್ಟಾಪತ್ತಿಯೇ..
ಆದರೆ, ಪ್ರಾಣಿಬಲಿ ಅನ್ನೋದು ಯಾರೋ ಮೂರವನೆಯವರು ಮಧ್ಯೆ ತಂದ ಆಚರಣೆ ಅನ್ನೋ ನಿಮ್ಮ ವಾದಕ್ಕಷ್ಟೇ ನಾನಿಲ್ಲಿ ಉತ್ತರಿಸುತ್ತಿರುವುದು..

ಕಲಿಯುಗವನ್ನು ಬಿಟ್ಟು, ಉಳಿದ ಮೂರುಯುಗಗಳಲ್ಲಿ 'ಪ್ರಾಣಿಬಲಿ' ಇತ್ತು. ಮತ್ತು ಅದನ್ನು ಮಾಡಿಸುತ್ತಿದ್ದವರು, ವೆದದ್ರಷ್ಟಾರರಾದ ಋಷಿಮುನಿಗಳೇ.. ಅದು ಆಗಿನ ಯುಗಧರ್ಮ. ಪ್ರತಿಯೊಂದು ಯುಗಕ್ಕೂ ತನ್ನದೇ ಆದ ಯುಗಧರ್ಮಗಳಿರುತ್ತವೆ.. ಅದಕ್ಕನುಸಾರವಾಗಿ ಆಗ 'ಪ್ರಾಣಿಬಲಿ' ನಡೆಯುತ್ತಿತ್ತು.. ಆದರೆ, ಅಂಥಾ ಆಚರಣೆ ಯಾವತ್ತಿಗೂ ನಿಷಿದ್ಧವಾಗಿತ್ತು ಅನ್ನೋದು ನಿಮ್ಮ ವಾದವಾದರೆ, ನನ್ನ 'ರಾಮಾಯಣ'ದ ವಾಕ್ಯಕ್ಕೆ ನಿಮ್ಮ ಉತ್ತರವೇನು.?
6 hours ago · Like ·  1
Bhimasen Purohit 





ಭೀಮಸೇನ ಪುರೋಹಿತರೇ, ಸಾಕಷ್ಟು ಚರ್ಚೆಮಾಡಿದ್ದೀರಿ. ನಿಮ್ಮ ವಾದಕ್ಕೆ ಪುಷ್ಟಿ ಕೊಡುವ ಆಧಾರಗಲನ್ನು ಎಲ್ಲಾಕಡೆಗಳಿಂದಲೂ ಹೆಕ್ಕಿ ತಂದಿದ್ದೀರಿ. ಧನ್ಯವಾದಗಳು. ಆದರೂ ಇಂತಹ ಗಹನ ವಿಚಾರದಲ್ಲಿ ಸತ್ಯವೆನ್ನುವುದು ಒಂದೇ ಆದರೂ ಅದು ಬಹಿರಂಗವಾಗಿ ಪ್ರಕಟವಾಗುವಂತೆ ತೋರುವುದಿಲ್ಲ. ನಮ್ಮ ಆಚರಣೆಗ ಳನ್ನೇ ನೋಡಿ. ಅರ್ಥ ತಿಳಿಯದೆ ಎಷ್ಟೊಂದು ಆಚರಣೆಗಳು ನಡೆದಿವೆ. ಆದರೆ ಕಾಲಕ್ಕೆ ಎಲ್ಲಾ ಶಕ್ತಿಯೂ ಇದೆ. ತಾನೇ ತಾನಾಗಿ ಎಲ್ಲರಿಗೂ ಸತ್ಯದ ಅರಿವಾಗುತ್ತಾ ಹೋಗುತ್ತದೆ. ಇಲ್ಲಿಗೆ ಈ ಚರ್ಚೆಯನ್ನು ನಿಲ್ಲಿಸೋಣ. ಪಾಲ್ಗೊಂಡ ಎಲ್ಲರಿಗೂ ಧನ್ಯವಾದಗಳು. ವೇದಾಧ್ಯಾಯೀ ಶ್ರೀ ಸುಧಾಕರಶರ್ಮರ ವಿಚಾರಗಳು ವೇದಸುಧೆಯಲ್ಲಿ ಮೂಡಿಬರಲಿದೆ. www.vedasudhe.com ಮತ್ತು blog.vedasudhe.com ಗೆ ಭೇಟಿಕೊಡುತ್ತಿರಿ. ತಾಳ್ಮೆಗೆಡದ ಎಲ್ಲರಿಗೂ ನಮಸ್ಕಾರ.


-Hariharapura Sridhar 


Ganesh Khare ಈ ವಿಷಯದ ಬಗ್ಗೆ ಕೊನೆಯದಾಗಿ ಒಂದೆರಡು ಮಾತನ್ನ ಹೇಳುವುದಿದೆ. ದಯವಿಟ್ಟು ಅವಕಾಶ ನೀಡಬೇಕೆಂದು ಕೋರಿಕೆ.
about an hour ago · Like ·  1


Ganesh Khare ‎Hariharapura Sridhar Jois Mvr Bhimasen Purohit
26 minutes ago · Unlike ·  2


Hariharapura Sridhar ಅದಕ್ಕೇನಂತೆ, ಮುಂದುವರೆಸಿ,ನಾನು ನಿಲ್ಲಿಸೋಣವೆಂದಮಾತ್ರಕ್ಕೆ ನಿಲ್ಲಿಸಬೇಕಾಗಿಲ್ಲ. ವಿಚಾರ ಮಥನ ನಡೆಯಲಿ.
15 minutes ago · Like ·  1


Jois Mvr ಶ್ರೀ ಖರೆಯವರೆ.....ತಮ್ಮ ಅಭಿಪ್ರಾಯ ಮಂಡಿಸಿ.........ಶ್ರೀ ಶ್ರೀಧರ್ ರವರು ಶಸ್ತ್ರ ಸನ್ಯಾಸವನ್ನೇನೂ ಸ್ವೀಕರಿಸಿಲ್ಲ......"ಸತ್ಯವು ಬಹಿರಂಗವಾಗಲಿ" ಎಂಬುದು ಅವರ ನಿಲುವು......ತಾವೂ ತಮ್ಮ ಅಭಿಪ್ರಾಯ ಮಂಡಿಸಿ..ದಯವಿಟ್ಟು.......ಚರ್ಚೆ ಮುಂದುವರೆಯಲಿ.........
10 minutes ago · Unlike ·  2


Ganesh Khare ಈ ಚರ್ಚೆ ನಮ್ಮ ಧರ್ಮದಲ್ಲಿರುವ ಹಲವಾರು ಆಚರಣೆಗಳಲ್ಲ ಎದುರಿಗೆ ತಂದಿಟ್ಟಿದೆ.ಇದು ತಪ್ಪೋ ಸರಿಯೋ ಅನ್ನುವುದು ಮುಖ್ಯವಲ್ಲದೇ ವೇದ ಶಾಸ್ತ್ರಗಳಲ್ಲಿ ಹೇಳಿರುವುದು ಏನು ಅನ್ನುವುದು ಮುಖ್ಯ. ಆದ್ದರಿಂದ ಈ ಚರ್ಚೆ ನಮ್ಮ ನಮ್ಮಲ್ಲಿಯೇ ಉಳಿದರೆ ಒಳಿತು ಅನ್ನುವುದು ನನ್ನ ಭಾವನೆ.ಮೊದಲಿಗೇ ನಮ್ಮ ಧರ್ಮದವರ ಬಗ್ಗೆ ಹೊರಗಡೆ ಆಡಿಕೊಳ್ಳುವವರ ಸಂಖ್ಯೆಗೇನೂ ಕಡಿಮೆಯಿಲ್ಲ.
ತಿಳಿಸಬೇಕಾದ ಇನ್ನೊಂದು ವಿಚಾರವೆನೆಂದರೆ "ಮಧುಪರ್ಕ" ದ ಕುರಿತು.ಮಧುಪರ್ಕವೆಂದರೆ ನಮ್ಮಲ್ಲಿ ಯಾರಾದರೂ ಹಿರಿಯರು ಗುರುಗಳು ಬಂದಾಗ ಅವರನ್ನ ಸ್ವಾಗತಿಸಿ ಅವರಿಗೆ ಮಧುಪರ್ಕ (ಮಧು-ಜೇನುತುಪ್ಪ,ದಧಿ-ಮೊಸರು) ನೀಡಿ ಪೂಜಿಸುವುದು. ಈಗಿನ ಕಾಲದಲ್ಲಿ ಮಧುಪರ್ಕವೆಂಬುದು ಬರೀ ಕೆಲ ಮದುವೆಯಲ್ಲಿ ಅಥವಾ ಯಾವುದಾದರೋ ಶುಭಕಾರ್ಯದಲ್ಲಿ ಮಾತ್ರ ಕಾಣಸಿಗುತ್ತೆ. ಬಿಡಿ ಮುಖ್ಯವಾದ ವಿಷಯವೇನೆಂದರೆ ಗೃಹ್ಯಸೂತ್ರದಲ್ಲಿ ಹೇಳಿದ ಪ್ರಕಾರ "ನಾಮಾಂಸೋ ಮಧುಪರ್ಕೋ ಭವತಿ" ಅಂದರೆ ಮಾಂಸವಿಲ್ಲದೆ ಮಧುಪರ್ಕ ಸಾಧ್ಯವಿಲ್ಲ.ಇದರಿಂದ ಸಾಬೀತಾಗುವುದೆನೆಂದರೆ ಹಿಂದಿನ ಕಾಲದಲ್ಲಿ ಬರೀ ಯಜ್ಞ ಯಾಗದಲ್ಲಿ ಮಾತ್ರ ಪಶುಬಲಿ ಇರದೇ ಅದರ ಭಕ್ಷಣೆ ಸಾಮಾನ್ಯವಾಗಿತ್ತು. ನಂತರದ ಕಾಲದಲ್ಲಿ ನಮ್ಮ ಧರ್ಮ ಬದಲಾವಣೆಯಾಗಿದ್ದನ್ನ ನಾನು ಮೊದಲೇ ಹೇಳಿದ್ದೆ. ಇವೆಲ್ಲ ನಮ್ಮ ಧರ್ಮದ ಬಗೆಗಿನ ಕೀಳು ಭಾವನೆಯಲ್ಲ.ಉತ್ತರ ರಾಮ ಚರಿತದಲ್ಲಿನ ಒಂದು ವಿಷಯ ಕೇಳಿದರೆ ಇನ್ನೂ ಅಚ್ಚರಿಯಾಗುವುದಂತೂ ನಿಜ. ಆ ವಿಷಯವನ್ನ ಚರ್ಚಿಸಲು ನನಗೆ ಮನಸ್ಸಿಲ್ಲ.ಯಾರಿಗಾದರೂ ತಿಳಿಯಬೇಕಿದ್ದರೆ ಒಂದು ಸುಳಿವು ಉತ್ತರ ರಾಮ ಚರಿತದಲ್ಲಿ ವಸಿಸ್ಥ ಮುನಿಗಳು ಆಶ್ರಮಕ್ಕೆ ಬಂದಾಗಿನ ವಿವರಣೆಯನ್ನ ಓದಿ.
ಬಿಡಿ ಮತ್ತೊಂದು ವಿಷಯವೆಂದರೆ ಈ ಚರ್ಚೆ ಶುರುವಾದ ಮೇಲೆ ನಾನು ಪುಣೆಯಲ್ಲಿನ ಅಗ್ನಿಹೋತ್ರಿ ಮತ್ತು ಕೆಲ ವೈದಿಕರನ್ನ ಭೇಟಿ ಮಾಡಿ ಈ ವಿಷಯದ ಬಗ್ಗೆ ಮಾಹಿತಿಯನ್ನ ಪಡೆದುಕೊಂಡೆ.ಶ್ರೌತ ಯಾಗದಲ್ಲಿ ಸಪಶು ಯಾಗ ಇರುವುದು ತಿಳಿದು ಬಂತು ಮತ್ತು ಅದನ್ನ ಅವರು ಬಲಿ ಅನ್ನದೆ ಅದನ್ನ ಯಜ್ಞದ ಒಂದು ಭಾಗವೆಂದುಕೊಂದಿದ್ದಾರೆ.ಆದರೆ ಈಗ ಅದು ಕಡಿಮೆಯಾಗಿದ್ದು ಅದರ ಪ್ರತೀಕವಾಗಿ ಹಿಟ್ಟಿನ ಮೂರ್ತಿಯನ್ನ ಮಾಡುವುದಾಗಿಯೂ ತಿಳಿಯಿತು.ಇದರ ಬಗ್ಗೆ ವಿವರವಾಗಿ ಕೇಳಿದಾಗ ಅದರಲ್ಲಿ ನನಗೆ ಸಿಕ್ಕ ಒಂದು ವಿಶೇಷ ಮಾಹಿತಿಯೆಂದರೆ ನಾವು ಈಗ ಮಾಡುತ್ತಿರುವ ಈ ಚರ್ಚೆ ಪ್ರತಿ ವರ್ಷ ನಡೆಯುವ ಶ್ರೌತ ಸಮ್ಮೇಳನದಲ್ಲಿ ಕಳೆದ ಐದಾರು ವರ್ಷದಲ್ಲಿ ಹಲವು ಬಾರಿ ಪ್ರಸ್ತಾವನೆಗೆ ಬಂದು ಕೊನೆಗೆ ಎಲ್ಲ ವೈದಿಕರು ಮತ್ತು ಶೃಂಗೇರಿ ಮಠದ ಹಲವು ವಿದ್ವಾನರ ಹೇಳಿಕೆಯ ಪ್ರಕಾರ " ಪಶು ಬಲಿ ಅನ್ನುವುದು ನಮ್ಮಲ್ಲಿ ಹೇಳಿರುವುದು ನಿಜ ಯಾರಿಗೆ ಮಾಡುವ ಇಚ್ಹೆಯಿದೆಯೋ ಅವರು ಮಾಡುವುದಕ್ಕೆ ಯಾವುದೇ ಅಡ್ಡಿಯಿಲ್ಲ, ಯಾರಿಗೆ ಮಾಡಲು ಇಷ್ಟವಿಲ್ಲವೋ ಅವರು ಅದಕ್ಕೆ ಸೂಚಿಸಿದ ಪರ್ಯಾಯದಂತೆ ಪಿಷ್ಟ ಬಲಿ ಮಾಡಬಹುದು. ಇದರ ಬಗ್ಗೆ ಮತ್ತೆ ಎಂದೂ ಯಾರೂ ಚರ್ಚೆ ಮಾಡುವಂತಿಲ್ಲ" ಅನ್ನುವುದು. ಇದು ನಿಜವೇ ಸುಳ್ಳೋ ಎಂದೂ ತಿಳಿದುಕೊಳ್ಳಲು ನೀವು ಯಾರನ್ನಾದರೂ ಅಗ್ನಿಹೊತ್ರಿಗಳನ್ನ ಅಥವಾ ಶ್ರೌತಯಾಗ ಮಾಡುವ ವೈದಿಕರನ್ನ ಭೇಟಿ ಮಾಡಿ ಪರಿಹಾರ ಕಂಡುಕೊಳ್ಳಬಹುದು.
ನಾನು ಹೇಳುವ ಉದ್ದೇಶ ಇಷ್ಟೇ ವೇದಗಳಲ್ಲಿ ಪಶುಬಲಿ ಮಾಡಬಾರದೆಂದು ಹೇಳಿಲ್ಲ. ಆದರೆ ಈಗ ಅದು ಪ್ರತಿಯೊಬ್ಬರ ಮನಸ್ಥಿತಿಯ ಮೇಲೆ ಅವಲಂಬಿಸಿದೆ ಅಷ್ಟೇ. ಇವೆಲ್ಲ ನಮ್ಮ ಧರ್ಮ ಮತ್ತು ವೇದಗಳಿಗೆ ಸಂಬಂಧ ಪಟ್ಟ ಕೆಲ ಮಾಹಿತಿಯನ್ನ ನನ್ನ ಅಲ್ಪ ಜ್ಞಾನದಿಂದ ಹೇಳುವ ಪ್ರಯತ್ನ ಪಟ್ಟಿದ್ದೇನೆ. ಏನಾದರೂ ತಪ್ಪಿದ್ದಲ್ಲಿ ಕ್ಷಮೆ ಇರಲಿ.


ಅವಕಾಶ ಮಾಡಿಕೊಟ್ಟದ್ದಕ್ಕೆ ಎಲ್ಲರಿಗೂ ಧನ್ಯವಾದಗಳು.
7 minutes ago · Like


Hariharapura Sridhar ಚರ್ಚೆಯು ಮಧುರವಾಗಿ ಸಾಗುತ್ತಿರುವುದರಿಂದ ಮುಂದುವರೆಸಬಹುದಷ್ಟೆ. ಆದರೆ ಸತ್ಯವೆಂಬುದು ಹೊರಬರಲು ಕಾಲವೇ ಗತಿ.
7 minutes ago · Like ·  1


 ಖರೆಯವರೇ, ಧನ್ಯವಾದಗಳು. ಇಲ್ಲಿನೆಲ್ಲಾ ಚರ್ಚೆಗಳನ್ನೂ ವೇದಸುಧೆಯಲ್ಲಿ ಪ್ರಕಟಿಸುತ್ತಿರುವೆ. ನೋಡೋಣ, ಯಾರಾದರೂ ಇನ್ನೂ ಹೆಚ್ಚು ಮಾಹಿತಿ ಉಳ್ಲವರು ಏನು ಹೇಳುತ್ತಾರೆಂದು! ಒಂದು ನನಗೆ ತೋಚಿದ್ದು, "ಈಗಂತೂ ಸಮಾಜದ ಹಿತದೃಷ್ಟಿಯಿಂದ ಯಾರೂ ಪ್ರಾಣಿಬಲಿ ಪ್ರೋತ್ಸಾಹಿಸಬಾರದು. ಅದರಿಂದ ವೃತಾ ವೇದದ ನಿಂದನೆಗೆ ಹೆಚ್ಚು ಅವಕಾಶವಾಗುತ್ತದೆ. ನಮಸ್ಕಾರ.


-Hariharapura Sridhar


ಶ್ರೀ ಖರೆಯವರಿಗೆ ಅನಂತ ಧನ್ಯವಾದಗಳು.........ವಾಸ್ತವವನ್ನು ಬಿಚ್ಚಿಟ್ಟಿದ್ದೀರಿ........... " ಪಶು ಬಲಿ ಅನ್ನುವುದು ನಮ್ಮಲ್ಲಿ ಹೇಳಿರುವುದು ನಿಜ ಯಾರಿಗೆ ಮಾಡುವ ಇಚ್ಹೆಯಿದೆಯೋ ಅವರು ಮಾಡುವುದಕ್ಕೆ ಯಾವುದೇ ಅಡ್ಡಿಯಿಲ್ಲ, ಯಾರಿಗೆ ಮಾಡಲು ಇಷ್ಟವಿಲ್ಲವೋ ಅವರು ಅದಕ್ಕೆ ಸೂಚಿಸಿದ ಪರ್ಯಾಯದಂತೆ ಪಿಷ್ಟ ಬಲಿ ಮಾಡಬಹುದು. ಇದರ ಬಗ್ಗೆ ಮತ್ತೆ ಎಂದೂ ಯಾರೂ ಚರ್ಚೆ ಮಾಡುವಂತಿಲ್ಲ" ಈ ವಿಚಾರ ಮನನ ಯೋಗ್ಯ.........ನಾವು ಅಜ್ಞರು ಆರಂಭಿಸಿದ ಚರ್ಚೆ ಈಗಾಗಲೇ ತಜ್ಞರಲ್ಲಿ ಬಂದು ತೀರ್ಮಾನವಾಗಿದೆಯೆಂದಾದರೇ.....ಅದರ ವಿವರ ಗಳನ್ನು ನೀವಂದಂತೆ ಸಂಗ್ರಹಿಸೋಣ......... ಮತ್ತೊಂದು ಮಾತು.......ಇದುವರೆಗಿನ ಚರ್ಚೆಯನ್ನು ಗಮನಿಸಿದಾಗ.....ವಿಷಯ ಪ್ರಸ್ತಾವನೆ ಮಾಡಿ ಪೂರ್ವ ಪಕ್ಷದ ನೇತೃತ್ವ ವಹಿಸಿದ ಶ್ರೀಧರ್ ರವರ ಅಭಿಪ್ರಾಯದಲ್ಲಿ - "ಪಶುಬಲಿಯನ್ನು ವೇದದಲ್ಲಿ ಹೇಳಿಲ್ಲ" ವೆಂಬ ಅಂಶ ಪ್ರಧಾನವಾದದ್ದು. ಉತ್ತರ ಪಕ್ಷದಲ್ಲಿ ಇದುವರೆವಿಗೂ ಏಕಾಕಿಯಾಗಿ ಕಣಕ್ಕಳಿದು...."ವೇದಗಳಲ್ಲಿ ಪಶುಬಲಿಯನ್ನು ಹೇಳಿದ್ದಾರಾದರೂ ಅದು ಕಾಲಾನುವರ್ತಿ - ಆದರೂ ಪಶುಬಲಿ ಸಮ್ಮತವಲ್ಲ" ವೆಂದು ಶ್ನರೀ ಭಿಮಸೇನ ಪುರೋಹಿತರು ಸಾಧಾರ ನಿರೂಪಿಸುತ್ತಿದ್ದಾರೆ.........ಈಗ ತಾವು ಪ್ರಸ್ತುತ ಪಡಿಸಿದ ವಿಚಾರವೂ ಮತ್ತಷ್ಟು ಮಾಹಿತಿಯುಳ್ಲದ್ದೂ ಅಲ್ಲದೇ.......ಹೊಸ ಮಾರ್ಗವೊಂದನ್ನು ತೆರೆದಿಟ್ಟಿದೆ........ಇದರ ಬ್ಗ್ಎ ಚರ್ಚೆ ಮುಂದುವರಿಯಲಿ.......ಎಂದು ಆಶಿಸುತ್ತೇನೆ........(ತಮ್ಮಗಳನ್ನು ನಾನು ಉಲ್ಲೇಖಿಸಿ ಹೇಳಿದ್ದು ತಪ್ಪಾಗಿದ್ದರೆ ತಿದ್ದಿಕೊಳ್ಳುತ್ತೇನೆ)- ವಂದನೆಗಳು.


-Jois Mvr 


 ಮುಖ್ಯ ವಿಷಯವೇನೆಂದರೆ ಈಗ ನಡೆಯುತ್ತಿರುವುದಕ್ಕೂ ಮತ್ತು ವೇದ ಶಾಸ್ತ್ರಗಳಲ್ಲಿ ಹೇಳಿರುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ.ಹಾಗಂತ ನಾವು ವೇದಗಳಲ್ಲಿ ಹೇಳಿರುವುದು ಸತ್ಯವಲ್ಲ ಅನ್ನುವುದು ತಪ್ಪೆನಿಸಬಹುದು. ಯಾಕೆಂದರೆ ಪೌರೋಹಿತ್ಯ ಮಾಡುವವರು ಮಾಂಸಾಹಾರ ಮಾಡುತ್ತಿದ್ದರು ಅಂದ್ರೆ ಎಲ್ಲ ನಗುವವರೇ.. ಆದರೆ ಇದು ನಿಜ ಸಂಗತಿ. ನಾನೂ ಕೂಡ ಪೌರೋಹಿತ್ಯ ಮಾಡುತ್ತಿರುವುದರಿಂದ (ನಾನೇನು ವೈದಿಕನಲ್ಲ)ಶಾಸ್ತ್ರಗಳಲ್ಲಿ ಹೇಳಿರುವುದಕ್ಕೋ ಈಗ ಮಾಡುತ್ತಿರುವುದಕ್ಕೋ ಹಲವಾರು ವ್ಯತ್ಯಾಸಗಳಿರುವುದನ್ನ ನಾನು ಗಮನಿಸಿದ್ದೇನೆ.ಅಷ್ಟೇ. ನನಗೂ ಕೂಡ ಪ್ರಾಣಿಹಿಂಸೆ ಇಷ್ಟವಿಲ್ಲ.ಆದರೆ ವೇದಗಳಲ್ಲಿ ಹೇಳಿರುವುದು ತಪ್ಪು ಅಥವಾ ಅದನ್ನ ಮಾಡುತ್ತಿರುವವರು ತಪ್ಪು ಅಂತ ಕೂಡ ನಾನು ಹೇಳಲ್ಲ. ಇದು ಅವರವರಿಗೆ ಸಂಬಂದಪಟ್ಟದ್ದು. ನಾವು ದಿನವೂ ಮಾಡುವ ಕೆಲಸದಲ್ಲಿ (ಶಾಂತಿಗಳಲ್ಲಿ)ಪಿಷ್ಟ ಬಲಿಯನ್ನೇ ನೀಡುತ್ತೇವೆ. ನಮಗೆ ಈ ರೀತಿಯ ಪಶುಬಲಿಯ ಯಾಗ ಮಾಡುವ ಯೋಗ ಬಂದಾಗ ವಿಚಾರ ಮಾಡೋಣ ಅಲ್ಲವೇ??
ಅದಕ್ಕೆ ನಾನು ಮೊದಲೇ ಹೇಳಿದ್ದು ಈ ವಿಚಾರಗಳು ನಮ್ಮಲ್ಲಿಯೇ ಶುರುವಾಗಿ ನಮ್ಮಲ್ಲಿಯೇ ಮುಗಿದರೆ ಒಳಿತು ಎಂದು. ಅನ್ಯಥಾ ಬೇರೆಯವರ ಬಾಯಿಗೆ ಆಹಾರವಾಗುವುದೆಂತೂ ನಿಜ.
-Ganesh Khare


-ಉಲ್ಲೇಖಿಸಿ ಹೇಳಿದ್ದರಲ್ಲಿ ಏನೂ ತಪ್ಪಿಲ್ಲ. ಏಕೆಂದರೆ ಎಲ್ಲರೂ ಹೇಳಿರುವುದು ಎದುರಿಗೆ ಇದೆ.ನಮ್ಮ ಧರ್ಮದ ಬಗ್ಗೆ ತಿಳಿದುಕೊಳ್ಳುವಂತಹದ್ದು ಬಹಳಷ್ಟಿದೆ. ಇದರ ಬಗ್ಗೆ ಚರ್ಚೆ ನಡೆಯಬೇಕಷ್ಟೇ. ವೆದಸುಧೆ ಈ ಬಗ್ಗೆ ಹೆಚ್ಚು ಒಲುಮೆ ತೋರಿಸುತ್ತಿರುವದು ನಿಜಕ್ಕೋ ಒಳ್ಳೆಯ ಸಂಗತಿ. ಹೀಗೆ ಮುಂದುವರೆಯಲಿ.. ಧನ್ಯವಾದಗಳು.


- Ganesh Khare


 ಶ್ರೀ ಜೋಯಿಸ್ ಮತ್ತು ಖರೆ ಯವರೇ, ನಮಸ್ಕಾರಗಳು. ಈವರೆಗಿನ ಎಲ್ಲಾ ಚರ್ಚೆಗಳು ಬಲು ಸೊಗಸಾಗಿ ಮೂಡಿಬಂದಿವೆ. ಇದೆಲ್ಲಾ ನೋಡಿದಾಗ ನನಗನಿಸಿದ್ದನ್ನು ನಿಮ್ಮಲ್ಲಿ ಹಂಚಿಕೊಳ್ಳಲು ಇಷ್ಟ ಪಡುವೆ. ಇದುವರೆವಿಗೆ ಅನೇಕ ಆಚರಣೆಗಳು ಸಮಾಜಕ್ಕೆ ಹಿತವಲ್ಲದ್ದು ಕೂಡ ವೇದದ ಹೆಸರಲ್ಲಿ ನಡೆದು ಬಂದಿದೆ. ಯಾಕೆ ಹೀಗೆ? ವೇದವನ್ನು ಓದಿರುವ ವಿದ್ವಾಂಸರು ಯಾಕೆ ಸತ್ಯವನ್ನು ಹುಡುಕುತ್ತಿಲ್ಲ. ಅಲ್ಲದೆ ಇಂದಿನ ಸಮಾಜಕ್ಕೆ ಹಿತವಾಗುವಂತೆ [ಇಲ್ಲಿ ಭಾವನೆ ಪ್ರಧಾನ] ಯಾಕೆ ತಪ್ಪಾದ ಆಚರಣೆಗಳನ್ನು ಬಿಡಿ ಎಂದು ಹೇಳುತ್ತಿಲ್ಲ? ಇವೆಲ್ಲಾ ಚಿಂತನೆಗೆ ಯೋಗ್ಯವೇ ಆಗಿವೆ. ಆದ್ದರಿಂದ ಯಾರಾದರೂ ಈ ವಿಚಾರವನ್ನು ಕೈಗೆತ್ತಿಕೊಳ್ಲಬೇಕಲ್ಲವೇ? ನಾವೇ ಏಕಾಗಬಾರದು? ವೇದ ವಿದ್ವಾಂಸರ ಒಂದು ಕಮಿಟಿ ರಚನೆಯಾಗಲಿ [ಇದಕ್ಕೆ ಕಾನೂನು ಮೊರೆ ಹೋಗಬೇಕಾದೀತೇನೋ,ಅಥವಾ ಸರ್ಕಾರದ ಮೊರೆ] ಎಲ್ಲಾ ಆಚರಣೆಗಳ ಚರ್ಚೆಯಾಗಲಿ. ವೇದದಲ್ಲಿರಲಿ ಅಥವಾ ಬಿಡಲಿ, ಯಾವುದು ಕಾಲ ಬಾಹಿರವೋ ಅದನ್ನು ಬಿಡುವ ಸೂತ್ರವನ್ನು ತಜ್ಞರು ರೂಪಿಸಬಹುದಲ್ಲವೇ? ಈವರಗೆ ಆಗಿರುವ ಚರ್ಚೆಯನ್ನೇ ಅದರೊಟ್ಟಿಗೆ ಇನ್ನೂ ಹಲವರ ಅಭಿಪ್ರಾಯ ಪಡೆದು ಒಂದು ಪುಸ್ತಕ ಮಾಡಿ , ವಿಚಾರ ಸಂಕಿರಣ ಒಂದನ್ನು ಆಯೋಜಿಸಿ ಬಿಡುಗಡೆಮಾದಬಾರದೇಕೇ? ಎಂಬ ಆಸೆಯೂ ಇದೆ. ಏನಂತೀರಿ?
-Hariharapura Sridhar



ಕವಿ ನಾಗರಾಜ್Mar 7, 2012 09:18 PM
ಶ್ರೀಧರರು ಮಾಡಿಕೊಟ್ಟ ಪರಿಚಯದಿಂದ ನೀವಿನ್ನೂ ತರುಣರಾಗಿದ್ದು ಇಂತಹ ವಿಷಯಗಳಲ್ಲಿ ಆಸಕ್ತಿ ತೋರುತ್ತಿರುವುದು ಸಂತಸಕರ ವಿಷಯ, ಭೀಮಸೇನ ಪುರೋಹಿತರೇ. 
ನಿಮ್ಮ ಮೇಲಿನ ಪ್ರತಿಕ್ರಿಯೆ ಕುರಿತು:
ಸತ್ಯಾನ್ವೇಷಣೆಯಲ್ಲಿ ಪೂರ್ವಾಗ್ರಹ ಪಾತ್ರ ವಹಿಸಬಾರದು. ಚರ್ಚೆಯಲ್ಲಿ ಪಾಲುಗೊಳ್ಳುವ ಉಭಯಪಕ್ಷದವರೂ ತಮ್ಮ ನಿಲುವಿಗೆ ವಿರುದ್ಧವೆನಿಸಿದರೂ ಸತ್ಯವನ್ನು ಗ್ರಹಿಸಬೇಕು.
1.ನೀವು ಹೊಸ ವಾದವನ್ನೇನೂ ಮಂಡಿಸಿಲ್ಲ. ಈ ಹಿಂದೆ ಕೇಳಿದ್ದಂತೆ ವೇದದಲ್ಲಿ ಪ್ರಾಣಿಬಲಿ ಸಮರ್ಥಿಸುವ ವೇದಮಂತ್ರಗಳಿದ್ದಲ್ಲಿ ತಿಳಿಸುವಿರಾ? ಮೂಲವಿಷಯಾಂತರವಾಗದಿರಲಿ. ಕೇವಲ ವಾದಕ್ಕಾಗಿ ಚರ್ಚೆ ಮುಂದುವರೆಯುವುದು ಸೂಕ್ತವಲ್ಲ. 
2. ಬಲಿವೈಶ್ವದೇವಯಜ್ಞ ಮಾಡಿದ ಅಡಿಗೆಯನ್ನು ಸೇವಿಸುವ ಮುನ್ನ ದೇವನನ್ನು ನೆನೆದು, ಅಗತ್ಯವಿರುವವರಿಗೆ ಹಂಚಿ ತಿನ್ನುವ ಉದಾತ್ತತೆ ಬೋಧಿಸುತ್ತದೆ. ಇದನ್ನೇ ಕುದುರೆ ಬಲಿಗೆ ಸಮರ್ಥನೆಯೆಂದರೆ ಒಪ್ಪಲಾಗದು. ಎಂತಹ ಆಹಾರ ಸೇವಿಸಬೇಕು, ಹೇಗೆ ಸೇವಿಸಬೇಕು ಎಂಬುದು ಪ್ರತ್ಯೇಕವಾದ ಚರ್ಚಾರ್ಹ ವಿಷಯವಾಗುವುದರಿಂದ ಇಲ್ಲಿ ಈ ಚರ್ಚೆ ಬೇಡ.
ಅಧ್ಯಯನ, ಮನನ, ಮಥನಗಳಿಂದ ಸತ್ಯ ಹೊರಬರಲಿ. ನಿಮ್ಮಂತಹ ತರುಣರು ನಿಜಸತ್ಯದ ಪ್ರತಿಪಾದಕರಾಗಲಿ. ಕೇವಲ ಸಂಪ್ರದಾಯಗಳನ್ನು ಸತ್ಯವೆಂದು ಭಾವಿಸುವ ಪರಿಪಾಠ ದೂರವಾಗಲಿ, ಮನದ ಕತ್ತಲೆ ಕಳೆಯಲಿ.
-ಕ.ವೆಂ.ನಾಗರಾಜ್.




 ಮಹಾಭಾರತದ ಅಶ್ವಮೇಧಪರ್ವದಲ್ಲಿಯೂ ಅಶ್ವವನ್ನು ಬಲಿಕೊಟ್ಟ ಬಗ್ಗೆ ಸ್ಪಷ್ಟ ನಿರ್ಣಯವಿದೆ..

"ಧೌಮ್ಯೋಬ್ರವೀತ್ ಭೀಮಸೇನಂ ಛಿಂದಿ ಕಂ ವಾಜಿನೋಧುನಾ.
ಯಥಾ ತುಶ್ಯೇಜ್ಜಗನ್ನಾಥಃ ಪುರಾಣಪುರುಶೋತ್ತಮಃ "
-- ಯಜ್ಞದ ಪುರೋಹಿತರಾದ ಧೌಮ್ಯ ಋಷಿಗಳು, 'ಹೇ ಭೀಮಸೇನ, ಪರಮಾತ್ಮನು ಪ್ರೀತನಾಗುವಂತೆ, ಈ ಯಜ್ನಾಶ್ವದ ಶಿರಸ್ಸನ್ನು ಛೇದಿಸು' ಎಂದು ಆಜ್ಞೆ ಮಾಡಿದರು..
ಆನಂತರ ಭೀಮನು ಅಶ್ವದ ಶಿರಛ್ಛೇದ ಮಾಡಿದನೆಂದು ಸ್ಪಷ್ಟ ವಾಕ್ಯವಿದೆ. 



-Bhimasen Purohit




ಮಾನ್ಯ Hariharapura Sridhar ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ...........
"ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿನಾಗರಾಜರು ಚರ್ಚೆಯನ್ನು ನಿಲ್ಲಿಸಿದ್ದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ದಯಮಾಡಿ ಮುಂದುವರೆಸಲು ಅನುಮತಿಸಿ". "ಸುಮನಸ" ದ ನಿರ್ವಾಹಕ ತಂಡದಿಂದ ಈ ಅಭಿಪ್ರಾಯಕ್ಕೆ ಬಂದಿದ್ದೇವೆ.................... "ತಾರ್ಕಿಕವಾಗಿ "ಪಶುಬಲಿ" ಯನ್ನು ಎಲ್ಲರೂ ವಿರೋಧಿಸಿದ್ದಾರೆ........ಈ ಅಂಶ ಸುಸ್ಫಷ್ಟ......ಇನ್ನು ವೇದಗಳಲ್ಲಿ ಪಶುಬಲಿಯನ್ನು ಹೇಳಿದೆಯೋ ಪಾಶವೀ ವೃತ್ತಿಯ ಬಲಿಯನ್ನು ಹೇಳಿದೆಯೋ ಎಂಬುದು ತೀರ್ಮಾನವಾಗಬೇಕು........
ಇಲ್ಲಿ ಯಾರು ಸರಿ ಯಾರು ತಪ್ಪು ಎಂಬ ವಿಚಾರ ಚರ್ಚೆಯಲ್ಲಿ ಇಲ್ಲ........ಇದಕ್ಕಾಗಿ ವೇದದ ಸಂಪೂರ್ಣ ಪರಿಚಯವಿರುವವರು.....ವೇದವ್ಯಾಕರಣದ ಪೂರ್ಣ ಪರಿಚಯವಿರುವವರು...ಹಾಗೂ "ನಿರುಕ್ತ" ದ ಪಾಠವಾದವರೂ ಇದ್ದಲ್ಲಿ ಚರ್ಚೆ ಮುಂದುವರೆಯಲು ಅಡ್ಡಿಯಿಲ್ಲ....."



 ವಿಶ್ವಾಸಗಳೊಂದಿಗೆ 
- ರಮೇಶ ಜೋಯಿಸ್.


ಚರ್ಚೆಯನ್ನು ನಿಲ್ಲಿಸಿದ್ದಕ್ಕೆ ನನ್ನ ಆಕ್ಷೇಪವೇನೂ ಇಲ್ಲ, ಇದ್ದಿದ್ದು ನಿಲ್ಲಿಸಿದ ರೀತಿಗೆ ಅಷ್ಟೇ. ವೇದಸುಧೆಯಲ್ಲಿ ನಡೆದ ಚರ್ಚೆಯಲ್ಲಿ ಮಾತ್ರ ನಾನು ಪಾಲುಗೊಂಡಿದ್ದೇನೆ.
-ಕ.ವೆಂ. ನಾಗರಾಜ್.



 ಭೀಮಸೇನ ಪುರೋಹಿತರೇ, ನಿಮ್ಮ ಆಧಾರ ಸಂಗ್ರಹ ಚೆನ್ನಾಗಿದೆ. ಆದರೆ ಮಹಾಭಾರತ ಗ್ರಂಥದಲ್ಲೂ ಮೂಲಕ್ಕೆ ಹೊರತಾಗಿ ಆನಂತರ ಸೇರ್ಪಡೆಯಾಗಿರುವ ಅಂಶಗಳು ಸಾಕಷ್ಟಿವೆ, ಎನ್ನುತ್ತಾರೆ. ಏನಾದರೂ ಆಗಲಿ. ವಿದ್ಯಾರ್ಥಿಯಾದ ನೀವು ಆಧಾರಗಳನ್ನು ಸಂಗ್ರಹಿಸಿ ವಾದ ಮಂಡಿಸಿದ್ದೀರಿ. ನಿಮಗೆ ಅಭಿನಂದನೆಗಳು. ಕಲಿಯುಗದಲ್ಲಿ ಪ್ರಾಣಿಬಲಿಯನ್ನು ನಿಶೇಧಿಸಿದ್ದಾರೆಂಬ ನಿಮ್ಮ ಮಾತು ಯೋಗ್ಯವಾಗಿದೆ. ಶ್ರೀ ಸುಧಾಕರ ಶರ್ಮರು ಎಲ್ಲವನ್ನೂ ನಿರಾಕರಿಸಿ ನನಗೆ ಮೇಲ್ ಮಾಡಿದ್ದಾರೆ. ಅವರ ಆರೋಗ್ಯ ಉತ್ತಮವಾಗಿಲ್ಲ. ನಿಧಾನವಾಗಿಯಾದರೂ ವೇದಸುಧೆಯಲ್ಲಿ ವಿವರವಾದ ಅವರ ಲೇಖನವನ್ನು ಪ್ರಕಟಿಸುವೆ. ನನ್ನ ಅಭಿಪ್ರಾಯಗಳನ್ನು ಈ ಮುಂಚೆಯೇ ತಿಳಿಸಿರುವೆ. ನಿಮಗೆ ಮತ್ತೊಮ್ಮೆ ಅಭಿನಂದನೆಗಳು
-Hariharapura Sridhar




 ನೀವು ಹೇಳೋ ಮಾತು ಒಪ್ಪತಕ್ಕುದಾದ ವಿಷಯವಾದರೂ, ನಾನು ಉಲ್ಲೇಖಿಸಿದ ಶ್ಲೋಕಗಳು ಬೇರೆ ಯಾರೋ ಸೇರಿಸಿದ್ದಾರೆ ಎಂದು ಹೇಳಲು ಯಾವ ಆಧಾರವನ್ನು ಹೇಳುತ್ತೀರಿ..?
ಅಥವಾ, ಈಗ ಪ್ರಾಣಿಬಲಿಯನ್ನು ನಿರಾಕರಿಸಿ ನೀವು ಕೊಡುವ ಪ್ರಮಾಣಗಳಿಗೂ ನಾನು ಇದೆ ಉತ್ತರವನ್ನು ಹೇಳಬಹುದಲ್ಲ.. 'ನೀವು ಹೇಳಿದ ವಾಕ್ಯವೂ, ಮೂಲದಲ್ಲಿ ಇಲ್ಲ, ಯಾರೋ ಸೇರಿಸಿರಬೇಕು' ಅಂತ ನಿಮ್ಮ ವಾಕ್ಯಗಳ ಮೇಲೂ ಆಕ್ಷೇಪ ಮಾಡಲು ಸಾಧ್ಯವಿದೆ ಅಲ್ಲವೇ..?


ಅಥವಾ, ಇರಲಿ.. ಅಂತೂ ಕಾಲಾನಂತರದಲ್ಲಿ ಕೆಲವು ಮಾರ್ಪಾಡುಗಳಾಗಿವೆ ಅಂತಲೇ ಭಾವಿಸೋಣ..
ಅದು ವೇದಗಳಿಗೂ ಅನ್ವಯಿಸುತ್ತದೆ.. ಮೂಲಕ್ಕಿಂತಲೂ ಭಿನ್ನವಾದ ವಾಕ್ಯಗಳು ಸೇರ್ಪಡೆಯಾಗಿರುವುದು ಎಷ್ಟು ನಿಜವೋ., ಹಾಗೆಯೇ ಎಷ್ಟೋ ವೇದಭಾಗಗಳು ತಿರೋಹಿತವಾಗಿವೆ. ಈಗ ನಮಗೆ ಲಭ್ಯವಿಲ್ಲ.. ಆದರಿಂದ, ಹಾಗೆ ಅನುಪಲಭ್ಯವಾದ ವೇದಗಳಲ್ಲಿ 'ಪ್ರಾಣಿಬಲಿ' ಇರಬಹುದು ಅಂತಲೂ ವಾದಿಸಲು ಸಾಧ್ಯವಿದೆ..
-
Bhimasen Purohit




ಈ ಶ್ಲೋಕಗಳು ನನ್ನ ರಚನೆಯಂತೂ ಅಲ್ಲ.. ಈಗಾಗಲೇ ಮುದ್ರಿತವಾದ ೨-೩ ಗ್ರಂಥಗಳನ್ನು ನೋಡಿಯೇ ನಾನು ಉಲ್ಲೇಖಿಸಿದ್ದು..
ಆಮೇಲೆ, ವೇದಗಳಲ್ಲಿ "ಪ್ರಾಣಿಬಲಿ" ನಿಷಿದ್ಧ ಎಂದು ಸಾಧಿಸುವ ವಾಕ್ಯಗಳು ಎಲ್ಲಿವೆ.? ದಯವಿಟ್ಟು ತಿಳಿಸಿ..
-Bhimasen Purohit 




 ಮಹಾಭಾರತದ ಬಗ್ಗೆ ಆಕ್ಷೇಪವಿದ್ದರೆ., ಭಾಗವತಪುರಾಣವನ್ನು ಗಮನಿಸಬಹುದು, ಅಲ್ಲಿಯ ಚತುರ್ಥಸ್ಕಂಧದಲ್ಲಿ ನಾರದ-ಪ್ರಾಚೀನಬರ್ಹಿಗಳ ಸಂವಾದದಲ್ಲಿ "ಪ್ರಾಣಿಬಲಿ"ಯ ಬಗ್ಗೆ ಉಲ್ಲೇಖವಿದೆ.. 
"ಭೋ ಭೋ ಪ್ರಜಾಪತೆ ರಾಜನ್ ಪಶೂನ್ ಪಶ್ಯ ತ್ವಯಾಧ್ವರೆ..
ಸಂಜ್ಞಾಪಿತಾನ್ ಜೀವಸಂಘಾನ್ ನಿರ್ಘ್ರುನೆನ ಸಹಸ್ರಶಃ.."
-- ಹೇ ರಾಜನ್ ಪ್ರಾಚೀನಬರ್ಹಿಯೇ.. ಅಲ್ಲಿ ನೋಡು ನಿನ್ನಿಂದ ಯಜ್ಞದಲ್ಲಿ ಆಹುತಿಯಾದ ಪಶುಗಳನ್ನು...
ಎಂಬ ಈ ಶ್ಲೋಕದಲ್ಲಿಯೂ, ಯಜ್ಞದಲ್ಲಿ ಪ್ರಾಣಿಬಲಿಯ ಆಚರಣೆಯನ್ನು ಉಲ್ಲೇಖಿಸಲಾಗಿದೆ..
-
Bhimasen Purohit




 ‎[ವೇದಗಳಲ್ಲಿ "ಪ್ರಾಣಿಬಲಿ" ನಿಷಿದ್ಧ ಎಂದು ಸಾಧಿಸುವ ವಾಕ್ಯಗಳು ಎಲ್ಲಿವೆ.? ] ಇಲ್ಲಿಯವರಗೆ ನಿಮ್ಮಲ್ಲಿಲ್ಲದ ಸಂದೇಹ ಈಗ ಶುರುವಾಯ್ತಲ್ಲ. ನೀವು ಚರ್ಚೆ ಆರಂಭದಲ್ಲಿ ವೇದಸುಧೆಯಲ್ಲಿ ನನ್ನ ಲೇಖನ ಓದಲಿಲ್ಲವೇ? ಅಲ್ಲಿ ನಾಲ್ಕಾರು ವೇದಮಂತ್ರಗಲನ್ನು ಆಧಾರಸಹಿತ ಕೊಟ್ಟಿದ್ದೇನಲ್ಲಾ! ನನಗೆ ಅದು ತಪ್ಪು ಅನ್ನು ವವರಿದ್ದರೆ ಬೇಕು. ತಪ್ಪಾದರೆ ಹೇಗೆ ಎನ್ನುವ ಸಮರ್ಥನೆ ಬೆಕು. ವೇದವೇ ಮೂಲ. ನನ್ನ ಲೇಖನವನ್ನು ಇನ್ನೊಮ್ಮೆ ಓದಿ. http://blog.vedasudhe.com/2012/03/blog-post_04.html


-Hariharapura Sridhar





ಮಾನ್ಯ ಶ್ರೀಧರರವರೇ...... ತಾವು ಕಾಣಿಸಿರುವ ವೇದಸುಧೆಯ ಕೊಂಡಿಯಲ್ಲಿ ೀ ಕೆಳಕಂಡ ಮಾತುಗಳು ಬಂದಿವೆ: ................................................................" ಎಲ್ಲಿ ಈ ವೇದವು ಸರ್ವ ಜೀವಿಗಳ ಒಳಿತಿಗಾಗಿ ಆವರಣವಾಗಿ ಮಾಡಲ್ಪದುತ್ತದೋ ಅಲ್ಲಿ ಎಲ್ಲಾ ಜೀವಿಗಳೂ ನಿಜವಾಗಿ ಬದುಕುತ್ತವೆ. ಅಂದರೆ ಇಲ್ಲಿ "ಆವರಣ" ಎಂಬ ಪದವನ್ನು ಆಳವಾಗಿ ಅರ್ಥಮಾಡಿಕೊಳ್ಳಬೇಕು. " ಸರ್ವಜೀವಿಗಳ ಒಳಿತಿಗಾಗಿ ಎಲ್ಲಿ ವೇದವು ಆವರಣವಾಗಿ ಮಾಡಲ್ಪದುತ್ತದೋ" ಅಂದರೆ ವೇದವು ಎಲ್ಲಾ ಜೀವಿಗಳಿಗೆ ರಕ್ಷಣೆಯಾಗಿ ಎಲ್ಲಿ ಸುತ್ತು ಗೋಡೆ ಯಾಗಿ ನಿಲ್ಲುತ್ತದೋ ಅಲ್ಲಿ ಎಲ್ಲಾ ಜೀವಿಗಳು ನಿಜವಾಗಿ ಬದುಕುತ್ತವೆ" . ಎಷ್ಟು ವಿಶಾಲವಾದ ಅರ್ಥವಿದೆ!


ಅಂದರೆ ವೇದವು ಎಲ್ಲಾ ಜೀವಿಗಳ ನೆಮ್ಮದಿಯ,ನಿರ್ಭೀತ ಬದುಕಿಗಾಗಿ ಕರೆಕೊದುತ್ತದೆಯೇ ಹೊರತೂ ಯಾವ ಜೀವಿಗಳ ಹಿಂಸೆಗೆ ಆಸ್ಪದವೇ ಇಲ್ಲ ಎಂದು ಭಾವಿಸಬಹುದಲ್ಲವೇ?


ಅಲ್ಲದೆ ಒಂದು ಪದವನ್ನು ಸಮಯಕ್ಕೆ ತಕ್ಕಂತೆ ಅರ್ಥೈಸುತ್ತಾರಾದರೂ ವಿಶ್ವದ ಒಳಿತಿಗಾಗಿಯೇ ಇರುವ ವೇದವನ್ನು ನಾವು ಹೀಗೆಯೇ ಅರ್ಥೈಸಬೇಕಲ್ಲವೇ?


ವೇದದಲ್ಲಿ ಈ ಮೇಲಿನ ಅಂಶಗಳೆಲ್ಲಾ ಇರುವುದನ್ನು ಆಧಾರ ಸಮೇತ ಪಂ. ಸುಧಾಕರ ಚತುರ್ವೆದಿಗಳು ಉಲ್ಲೇಖಿಸಿರುವುದರಿಂದ ಮೂಲ ವೇದದಲ್ಲಿ ಹಿಂಸೆ ಯನ್ನು ಪ್ರೋತ್ಸಾಹಿಸುವ ಅಂಶಗಳು ಕಾಣ ಬರುವುದಿಲ್ಲ ವೆಂಬ ವಿಚಾರವನ್ನು ಅನಿವಾರ್ಯವಾಗಿ ಒಪ್ಪಬೇಕಾಗಿದೆ. ಈಗ ಹೇಳಿ ಈ ಆಧಾರಗಳು ಸುಳ್ಳೇ? ಸುಳ್ಳಾಗಿದ್ದರೆ ಸತ್ಯ ಯಾವುದು?


ಕೊನೆಯ ಮಾತು:


ಮೂಲವೇದ ಗ್ರಂಥವು ಯಾವುದು? ಎನ್ನುವ ವಿಚಾರದಲ್ಲೂ ಗೊಂದಲಗಳು ಇರಬಹುದು. ಆದರೆ ಇಡೀ ಪ್ರಪಂಚದ ನೆಮ್ಮದಿಗೆ "ಅಹಿಂಸಾ ಮಾರ್ಗವು ಇಂದಿನ ಅತೀ ಅಗತ್ಯವಾದ ವಿಚಾರವಾಗಿದ್ದು, ಮನುಕುಲಕ್ಕೆ ಬೆಳಕಾಗಿರುವ ವೇದದ ಕಡೆ ಇಡೀ ವಿಶ್ವವು ನೋಡುತ್ತಿರುವ ಸಂದರ್ಭದಲ್ಲಿ ಯಜ್ಞ ದಲ್ಲಿ ಪ್ರಾಣಿಬಲಿಯನ್ನು ಪ್ರೋತ್ಸಾಹಿಸುವುದು ತರವಲ್ಲವೆನ್ಬುದು ನನ್ನ ಸ್ಪಷ್ಟ ನಿಲುವು."..........................................................................ಈ ಎಲ್ಲಾ ಮಾತುಗಳನ್ನು ಗಮನವಿಟ್ಟು ನೋಡಿದಾಗ ಮೇಲೆ ಅರ್ಥೈಸಿರುವ ರೀತಿ ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆ ಏಳುತ್ತದೆ..................."ಅಲ್ಲದೆ ಒಂದು ಪದವನ್ನು ಸಮಯಕ್ಕೆ ತಕ್ಕಂತೆ ಅರ್ಥೈಸುತ್ತಾರಾದರೂ ವಿಶ್ವದ ಒಳಿತಿಗಾಗಿಯೇ ಇರುವ ವೇದವನ್ನು ನಾವು ಹೀಗೆಯೇ ಅರ್ಥೈಸಬೇಕಲ್ಲವೇ?" ಎಂಬ ಪ್ರಶ್ನೆಗೆ ಉತ್ತರ ಸಕಾರಾತ್ಮಕವೇ ಆಗಬೇಕಿಲ್ಲವಲ್ಲಾ...........................ಮತ್ತು ತಾವೇ ಹೇಳಿದಂತೆ..."ಮೂಲವೇದ ಗ್ರಂಥವು ಯಾವುದು? ಎನ್ನುವ ವಿಚಾರದಲ್ಲೂ ಗೊಂದಲಗಳು ಇರಬಹುದು." ಎಂಬ ಭಾವ ತಮ್ಮಲ್ಲಿರುವಾಗ "ಇದೇ ಸರಿ - ಇದು ತಪ್ಪು" ಎಂಬ ನಿರ್ಧಾರಕ್ಕೆ ಬರುವುದೂ ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆ ನನ್ನದು.............................................. ಮತ್ತು ಈ ಎಲ್ಲ ಅಂಶಗಳೂ - ವೇದ ವನ್ನು ಅರ್ಥೈಸುವುದರ ಕುರಿತಾಗಲೀ ಅಥವಾ ಜೀವನದ ಯಾವುದೆ ವಿಚಾರವನ್ನು ಕುರಿತಾಗಲೀ - ನಮನಮಗೆ - ನಮ್ಮ ಮನೋ ಭಾವಕ್ಕೆ ಒಪ್ಪಿತವಾಗುವ ಅಂಶಗಳನ್ನಷ್ಟೇ ಒಪ್ಪಲು ನಮ್ಮ ಮನಸ್ಸು ನಮಗೆ ಅನುಮತಿಸುವದೇ ಹೊರತು, ಇತರ ಅರ್ಥ/ವಿಚಾರಗಳನ್ನಲ್ಲ . ಅದರಲ್ಲೂ ಒಂದು ಪದವನ್ನು ಸಮಯಾನುಕೂಲಿಯಾಗಿ ಅರ್ಥೈಸುವದು ಪರಂಪರೆಯಾಗಿರುವಾಗ ಇದಮಿತ್ಧಂ ಎಂದು ಹೇಳುವುದು ಎಷ್ಟುಸರಿ..........ನಾನು ವೇದಬಲ್ಲವನಲ್ಲ........ತಾವು, ತಾವೇ ಹೇಳಿದಂತೆ : "ಅಂಚೆಪೇದೆ".......ಇಲ್ಲಿನದನ್ನು ಅಲ್ಲಿಗೆ - ಅಲ್ಲಿನದನ್ನು ಇಲ್ಲಿಗೆ ತಲುಪಿಸಿ ಸಾರ್ಥಕತಯೆನ್ನು ಅನುಭವಿಸುತ್ತಿದ್ದೀರಿ........ಹೀಗಾಗಿ ಯಾರೇ ಹೇಳಿದರೂ - ಅವರ ವಿಚಾರ ನನಗೊಪ್ಪಿಗೆಯಾದರೆ - ನನ್ನ ಮನಸ್ಸಿಗೆ - ಅದು ಸರಿ ಎಂಬುದು ಕಂಡುಬಂದರೆ ಅದನ್ನೇ ಸತ್ಯ ಎಂದು ಒಪ್ಪಿಕೊಳ್ಳುತ್ತೇವೆ...... ಹೀಗಾಗಿ "ಸತ್ಯ" ಯಾವಾಗಲೂ ಅಹಂಕಾರದಿಂದ ಆವೃತ್ತವಾಗಿರುತ್ತದೆಯಾದ್ದರಿಂದ -ಚರ್ಚೆಗಳು ಚರ್ಚೆಗಳಾಗಿಯೇ ಉಳಿಯುತ್ತವೆಯೇ?
about an hour ago · Like ·  1


ಸಾವಿರಾರು ವರ್ಷಗಳಿಂದ ಚರ್ಚೆಯಾಗೇ ಉಳಿದು ಸತ್ಯಪ್ರತಿಪಾದನೆ ಮಾಡುವ ಯತ್ನದಲ್ಲಿ ಸ್ವಾಮಿ ದಯಾನಂದರ ಹತ್ಯೆಯಾಯಿ ತೆನ್ನುವುದು ಇತಿಹಾಸ. ಹಾಗಾಗಿ ಸತ್ಯ ಹೊರ ಬರುತ್ತದೆಂಬ ಭ್ರಮೆ ನನಗಿಲ್ಲ. ಆದರೆ ಇಂದಿನ ಸಮಾಜದ ಸಾಮರಸ್ಯಕ್ಕಾಗಿ ಯಾವುದು ಪೂರಕವೋ ಅದನ್ನು ಸ್ವೀಕರಿಸುವುದು, ಪ್ರಸಾರ ಮಾಡುವುದು ಒಳಿತಲ್ಲವೇ?


-Hariharapura Sridhar