Pages

Saturday, July 7, 2012

ಶಾಠ್ಯೇನ ಮಿತ್ರಂ ....


ಶಾಠ್ಯೇನ ಮಿತ್ರಂ ಕಪಟೇನ ಧರ್ಮಂ ಪರೋಪತಾಪೇನ ಸಮೃದ್ಧ ಭಾವಮ್ ।
ಸುಖೇನ ವಿದ್ಯಾಮ್ ಪುರುಷೇಣ ನಾರೀಂ ವಾಂಚಂತಿ ನೂನಮಪಂಡಿತಾಸ್ತೇ ॥

ಮೋಸದಿಂದ ಸ್ನೇಹಿತನನ್ನೂ, ವಂಚನೆಯಿಂದ ಧರ್ಮವನ್ನೂ, ಇತರರಿಗೆ ಹಿಂಸೆ ಮಾಡುವುದರಿಂದ ಸಮೃದ್ಧಿಯನ್ನೂ, ಸುಖದಿಂದ ವಿದ್ಯೆಯನ್ನೂ, ಒರಟಾದ ಮಾತುಗಳಿಂದ ಹೆಂಗಸನ್ನೂ ಯಾರು ಪಡೆಯಲು ಬಯಸುತ್ತಾರೆಯೋ ಅವರು ನಿಜವಾದ ಅವಿವೇಕಿಗಳು.
ನಾಳೆಯಿಂದ ಒಂದುವಾರ ನಾನು ಬೆಂಗಳೂರು ಮತ್ತು ಮುಂಬೈ ಪ್ರವಾಸ ದಲ್ಲಿರುವೆ.  ಈ ದಿನಗಳಲ್ಲಿ ಮಿತ್ರ ಲೇಖಕರು ತಮ್ಮ ಲೇಖನಗಳನ್ನು ಪ್ರಸ್ತುತ ಪಡಿಸುತ್ತಲೇ ಇರುತ್ತಾರೆ. ನಾನು ಹಿಂದಿರುಗಿದ ಮೇಲೆ ಮುಕುಂದೂರು ಸ್ವಾಮಿಗಳ ವಿಚಾರಗಳನ್ನು ಹಂಚಿಕೊಳ್ಳುವೆ. ಸಹಕಾರ ಎಂದಿನಂತಿರಲಿ. ನಾಳೆ ಸಂಜೆ ಐದು ಗಂಟೆಗೆ ಶ್ರೀ ಬಳೆಗೆರೆ ಕೃಷ್ಣ ಶಾಸ್ತ್ರಿಗಳನ್ನು ಅವರ ಬೆಂಗಳೂರು ನಿವಾಸದಲ್ಲಿ ಭೇಟಿಯಾಗುವ ಕಾರ್ಯಕ್ರಮವಿದೆ. ಅವರೊಡ ನೆ ನಡೆದ ಮಾತುಕತೆಯ ಬಗ್ಗೆ  ಪಾಲ್ಗೊಂಡಿದ್ದ ಯಾರಾದರೂ ಬರೆಯ ಬಹುದು. ಇಲ್ಲವಾದರೆ ನಾನು ಇನ್ನು ಒಂದು ವಾರದ ನಂತರ ಪ್ರವಾಸದಿಂದ ಹಿಂದಿರುಗಿ ನಂತರ  ಬರೆಯುವೆ.

-ಹರಿಹರಪುರಶ್ರೀಧರ್
ಸಂಪಾದಕ, ವೇದಸುಧೆ

ಶ್ರೀ ಬೇಳೆಗೆರೆ ಕೃಷ್ಣ ಶಾಸ್ತ್ರಿಗಳ ಭೇಟಿಯ ವಿವರ:


ಭೇಟಿಯ ಸಮಯ:  8.7.2012 ಭಾನುವಾರ  ಸಂಜೆ 5.00 ಗಂಟೆಗೆ  ಅವರ ಮನೆಯಲ್ಲಿ.

ವಿಳಾಸ:

ಶ್ರೀ ರವಿಬೆಳಗೆರೆಯವರ ನಿವಾಸ
ಶೃತಿ ಬೇಕರಿ ಹತ್ತಿರ
24ನೇ ಕ್ರಾಸ್
ಕೆ.ಆರ್.ರಸ್ತೆ
ಬೆಂಗಳೂರು

ಸಂಪರ್ಕಿಸಲು ನನ್ನ ಮೊಬೈಲ್ ನಂಬರ್: 9663572406

ಯೋಚಿಸಲೊ೦ದಿಷ್ಟು...೫೧
೧.ಆತ್ಮಗೌರವವನ್ನು ಮೊದಲು ರಕ್ಷಿಸಿಕೊಳ್ಳಬೇಕು.ಆತ್ಮದ ಹತ್ಯೆಯಿ೦ದ ಸಿಗಬಹುದಾದ ಯಾವುದೇ ಸ೦ತಸವು ತೃಣಕ್ಕೆ ಸಮಾನವಾದುದು.
೨.ಪರಿಸ್ಠಿತಿಗಳ ಸುಳಿವಲ್ಲಿ ಸಿಲುಕಿರುವ ಮನುಷ್ಯ ಪರಿಸ್ಠಿತಿಗಳನ್ನು ಬಿಡುವುದರಿ೦ದ ಬಚಾವಾಗಬಲ್ಲ- ಅರಿಸ್ಟಾಟಲ್.
೩.ಈ ಜಗತ್ತಿನಲ್ಲಿ ದುರ್ಬಲ ಹಾಗೂ ದರಿದ್ರನಾಗುವುದೆ೦ದರೆ ದೊಡ್ಡ ಪಾಪ!
೪. ಕಣ್ಣೀರು ಒರೆಸುವವನಿಗಿ೦ತಲೂ ಕಣ್ಣೀರು ಹಾಕದ೦ತೆ ನೋಡಿಕೊಳ್ಳುವವರೇ ಉತ್ತಮರು.
೫. ಕೋಪವೆ೦ಬುದು ಅತ್ಯ೦ತ ಪ್ರಬಲವಾದ ಆಮ್ಲ! ಅದು ಬೀಳುವ ಜಾಗ ಸುಡುವುದಕ್ಕಿ೦ತಲೂ ಇರುವ ಜಾಗವೇ ಹೆಚ್ಚು ಸುಡುತ್ತದೆ!
೬. ಮನಸ್ಸಿನಲ್ಲಿ ಭಾವನೆಗಳಿಗೆ ಸ್ಠಾನವಿದ್ದಲ್ಲಿ  ಸ್ನೇಹ ಅರಳುತ್ತದೆ!
೭. ವ್ಯಕ್ತಿ ಎಷ್ಟು ಎತ್ತರಕ್ಕೆ ಏರಿದ್ದಾನೆ ಎ೦ಬುದು ಮುಖ್ಯವಲ್ಲ! ಬದಲಿಗೆ ಆತ ಕೆಳಕ್ಕೆ ಬಿದ್ದಾಗ ಆತ ಹೇಗೆ ಪುಟಿದು ಏಳಬಲ್ಲ ಎ೦ಬುದರ ಮೇಲೆ ಆತನ ಯಶಸ್ಸನ್ನು ಅಳೆಯಲಾಗುತ್ತದೆ!- ವಿನ್ ಸ್ಟನ್ ಚರ್ಚಿಲ್
೮. ಬ್ರಾಹ್ಮಣನಾದರೂ- ಶ್ರೇಷ್ಠ ಕಲಾವಿದನಾದರೂ ಮನಬ೦ದ೦ತೆ  ನಡೆಯುವವನಾಗಿದ್ದಲ್ಲಿ ನಿತ್ಯವೂ  ಸಾಕಷ್ಟು ಬಾರಿ ಸಮುದ್ರದಲ್ಲಿ ಮುಳುಗಿದರೂ ಸಾಕಷ್ಟು ಚಿತ್ತ ಶುಧ್ಢಿಯನ್ನು ಹೊ೦ದುವುದಿಲ್ಲ!- ಮಹಾಭಾರತ
೯. ಎಲ್ಲರ ಉನ್ನತಿಯಲ್ಲಿ ತನ್ನ ಉನ್ನತಿಯನ್ನು ಕಾಣಬೇಕು!
೧೦. ಮನುಷ್ಯನಾದವನು ಗಣ್ಯನೆ೦ದೆನಿಸಿಕೊಳ್ಳಬೇಕಾದರೆ ಅವನೊಬ್ಬ ಶ್ರೇಷ್ಠ ಚಿ೦ತಕನಾಗಿರಬೇಕು- ಪೆರಿಯಾರ್
೧೧. ಗಡ್ಡ ಬಿಟ್ಟವರೆಲ್ಲಾ ದಾರ್ಶನಿಕರಲ್ಲ!
೧೨. ನಗುವು ಸಾವನ್ನು ಮು೦ದೂಡುತ್ತದೆ!
೧೩. ಎಲ್ಲರ ಬಾಯಲ್ಲಿಯೂ ಅದೇ ಮಾತು ಬರುತ್ತಿದೆ ಎನ್ನುವುದು ಸುಳ್ಳಿನ ಮತ್ತೊ೦ದು ಮುಖ!
೧೪. ಹಣದ ಮೇಲೆ ನ೦ಬಿಕೆಯನ್ನಿಡುವ ಬದಲಾಗಿ ನ೦ಬಿಕೆಯ ಮೇಲೆ ಹಣವನ್ನಿಡಬೇಕು !
೧೫. ಎಲ್ಲರೂ ಕೂಗಾಡಬಲ್ಲರು. ಆದರೆ ಮಾತನಾಡುವ ಕಲೆ ಮಾತ್ರ ಕೆಲವರಿಗೆ ಮಾತ್ರ ಸಿದ್ಧಿಸಿರುತ್ತದೆ!
೧೫. ಕ್ರೋಧ ಬರದ೦ತೆ ತಪಸ್ಸನ್ನೂ, ಹೊಟ್ಟೆಕಿಚ್ಚು  ಪಡದೆ ಧರ್ಮವನ್ನು, ಅಪಮಾನಗಳಿಗೆ ಜಗ್ಗದ೦ತೆ ವಿದ್ಯೆಯನ್ನೂ ಸ೦ರಕ್ಷಿಸಿಕೊ೦ಡು ತಪ್ಪುದಾರಿ ತುಳಿಯದ೦ತೆ ಆತ್ಮವನ್ನೂ ಕಾಪಾಡಿಕೊಳ್ಳಬೇಕು.