Pages

Sunday, August 11, 2013

ಸರಳ ವಾಸ್ತು ಹೋಮ

ನಿಮ್ಮ ಜೀವನ ವೇಸ್ಟ್!!!!!

-ನೀವು ಹೀಗೆ ಯಾವಾಗಲೂ ಏನಾದರೂ ಮಾಡ್ತಾ ಇರ್ತೀರಲ್ಲಾ,ನಿಮಗೆ ಅನುಷ್ಠಾನಕ್ಕೆ ಯಾವಾಗ ಸಮಯ ಸಿಗುತ್ತೇ?
........ಪ್ರಶ್ನೆ ಮಾಡಿದವರು ನನ್ನ ಆತ್ಮೀಯರೇ ಹೌದು. ನನ್ನ ಬಗ್ಗೆ ಅವರಿಗೆ ಹೆಚ್ಚು ಕಳಕಳಿ. ನಾನು ಕೆಳಿದೆ" ಅನುಷ್ಠಾನ ಎಂದರೆ ಏನು?
-ಏನು ಹೀಗೆ ಹೆಳ್ತೀರಲ್ಲಾ, ನಾಲ್ಕಾರು ವರ್ಷದಿಂದ ವೇದ ಪ್ರಸಾರಕ್ಕಾಗಿ ಕೆಲಸ ಮಾಡ್ತಾ ಇದ್ದೀರಿ, ಅನುಷ್ಠಾನ ಎಂದರೆ ನಿಮಗೆ ಗೊತ್ತಿಲ್ಲದಿದ್ದರೆ ಬೇರೆಯವರಿಗೆ ಏನು ಹೇಳ್ತೀರಿ?
-ನಿಮ್ಮ ಕೊನೆ ಪ್ರಶ್ನೆಗೆ ಮೊದಲು ಉತ್ತರ ಕೊಡ್ತೇನೆ." ನಾನು ಯಾರಿಗೂ ಏನೂ ಹೇಳಲು ಹೊರಟಿಲ್ಲ" ಈಗ ಅನುಷ್ಠಾನ ಅಂದರೆ ಏನು ಅಂತಾ ನೀವು ಹೇಳಿ.
-ನೋಡಿ, ಒಬ್ಬ ಬ್ರಾಹ್ಮಣ ನಾದವನು ತ್ರಿಕಾಲ ಸಂಧ್ಯಾವಂದನೆ ಮಾಡಬೇಕು. ದಿನದಲ್ಲಿ ನೂರಾದರೂ ಗಾಯತ್ರಿ ಜಪ ಮಾಡಲೇ ಬೇಕು. ಬಿಳಿಗ್ಗೆ ಮತ್ತು ಸಂಜೆ ದೇವರ ಪೂಜೆ ಮಾಡಬೇಕು.ವಿಷ್ಣು ಸಹಸ್ರನಾಮ,ಲಲಿತಾ ಸಹಸ್ರನಾಮ ಪಾರಾಯಣ ಮಾಡಬೇಕು.
-ಅದಕ್ಕೆಲ್ಲಾ ಎಷ್ಟು ಸಮಯಬೇಕು?
-ಮಾಡುವುದರ ಮೇಲೆ ಹೋಗುತ್ತೆ. ನನಗೆ ಇಷ್ಟಕ್ಕೆಲ್ಲಾ hardly one hour is enough. ನಿಮಗೆ ಅಭ್ಯಾಸ ಇಲ್ಲದಿದ್ದರೆ ಎರಡು ಮೂರು ಗಂಟೆ ಬೇಕಾಗಬಹುದು.
-ವೇದಾಧ್ಯಯನ ಸಮಯ ಅನುಷ್ಠಾನಕ್ಕೆ ಸೇರಿಕೊಳ್ಳುತ್ತಾ? ಅಥವಾ ಇಲ್ವಾ?
- ಏನ್ರೀ ಹೀಗೆ ಹೇಳ್ತೀರಾ? 
ಅಧ್ಯಯನಕ್ಕೂ ಅನುಷ್ಠಾನಕ್ಕೂ ವೆತ್ಯಾಸ ಗೊತ್ತಿಲ್ಲವಲ್ಲಾ, ನಿಮಗೆ!
-ತಿಳಿದವರು ನೀವು ಹೇಳಿದರಾಯ್ತು
-ನೋಡಿ, ಅಧ್ಯಯನ ಬೇರೆ, ಅನುಷ್ಠಾನ ಬೇರೆ. ಜ್ಞಾನವನ್ನು ಪಡೆಯುವುದಕ್ಕೆ ಮಾಡಬೇಕಾದುದು ಅಧ್ಯಯನ. ನೀವು ವೇದವನ್ನಾದರೂ ಅಧ್ಯಯನ ಮಾಡಿ, ಪುರಾಣವನ್ನಾದರೂ ಓದಿ,ಏನಾದರೂ ಓದಿ,ಅದು ಅನುಷ್ಠಾನಕ್ಕೆ ಬರುವುದಿಲ್ಲ. ಅನುಷ್ಠಾನ ಎಂಬುದು ಬ್ರಾಹ್ಮಣನ ಕರ್ತವ್ಯ. ತ್ರಿಕಾಲ ಸಂಧ್ಯಾ, ಎರಡು ಹೊತ್ತು ದೇವರಪೂಜೆ, ರುದ್ರಾಭಿಷೇಕ, ನಿತ್ಯವೂ ನೂರಾದರೂ ಗಾಯತ್ರಿ ಮಾಡಲೇಬೇಕು.
- ನೋಡಿ, ನಾನು ಬೆಳಿಗ್ಗೆ ಐದಕ್ಕೆ ಏಳ್ತೀನಿ, ಪ್ರಾಥ: ವಿಧಿಗಳನ್ನು ಮುಗಿಸಿಕೊಂಡುಸಂಧ್ಯೋಪಾಸನೆ ಮತ್ತು ಅಗ್ನಿಹೋತ್ರವನ್ನು ಅರ್ಧಗಂಟೆ ಮಾಡಿ ನಂತರ ವೇದಕ್ಕೆ ಸಂಬಂಧಿಸಿದ ಓದು, ಬರವಣಿಗೆ,ಕಾರ್ಯಕ್ರಮಗಳ ಯೋಜನೆ ಇವುಗಳಲ್ಲಿ ರಾತ್ರಿ ಹತ್ತಾಗುವುದು ಗೊತ್ತಾಗುವುದೇ ಇಲ್ಲ. ಕಣ್ಣಿಗೆ ನಿದ್ರೆ ಬರುತ್ತೆ ಮಲಗ್ತೀನಿ.
- ದೇವರ ಪೂಜೆ ಮಾಡಲ್ವಾ?
-ನಾನು ಮಾಡುವುದು ಈಗ ನಾನು ಹೇಳಿದಷ್ಟನ್ನೇ.
-ಹಾಗಾದರೆ ನಿಮಗೆ ಏನು ಸಾಧನೆ ಮಾಡಿದಂತಾಯ್ತು? ಬ್ರಾಹ್ಮಣನ ಮಿನಿಮಮ್ ಕರ್ತವ್ಯಗಳನ್ನೂ ನೀವು ಮಾಡುತ್ತಿಲ್ಲವಲ್ಲಾ! ನಿಮ್ಮ ಜೀವನ ವೇಸ್ಟ್!!!!!
-ನನ್ನ ಮಿತ್ರ ಒಬ್ಬ ಸ್ವಯಂ ನಿವೃತ್ತ ತಹಸಿಲ್ದಾರ್ ಇದಾರೆ. ಅವರೂ ಅಷ್ಟೇ ಮಾಡೋದು.ನಾನೂ ಎರಡು ವರ್ಷ ಮುಂಚೆ ಸ್ವಯಂ ನಿವೃತ್ತಿ ಪಡೆದು ಇಬ್ಬರೂ ಇದೇ ಕೆಲಸಾ ಮಾಡ್ತಾ ಇದ್ದೀವಿ. ಇಬ್ಬರ ಜೀವನವೂ ವೇಸ್ಟ್ ಅಂತೀರಾ?
-ಇನ್ನೇನು ಮತ್ತೇ?

http://blog.vedasudhe.com/2010/11/blog-post_5166.html