Pages

Tuesday, September 18, 2012

ಎಲ್ಲರಿಗೂ ಗೌರಿ-ಗಣೇಶನ ಹಬ್ಬದ ಶುಭಾಶಯಗಳು



ಸ್ನೇಹಿತರೇ,

ಎಲ್ಲರಿಗೂ ಗೌರಿ-ಗಣೇಶನ ಹಬ್ಬದ ಶುಭಾಶಯಗಳು.ವೇದ ಪಾಠದ ಆರಂಭದ ಉಪನ್ಯಾಸಗಳನ್ನು ಕೇಳಿದ ಒಬ್ಬ ಸನ್ಮಿತ್ರರು ನನಗೆ ದೂರವಾಣಿ ಕರೆಮಾಡಿ " ನನಗೆ ಎಲ್ಲಾ ಕನ್ ಫ್ಯೂಸ್ ಆಗಿಬಿಟ್ಟಿದೆ, ಗಣೇಶನ ವ್ರತವನ್ನು ಮಾಡಬೇಕೋ ? ಬೇಡವೋ? ಎಂದು ಕೇಳಿದರು.ಅವರ ಪ್ರಶ್ನೆಗಷ್ಟೇ ಅಲ್ಲ, ಎಲ್ಲರಿಗೂ ನನ್ನ ಮನವಿ ಏನೆಂದರೆ " ನಾನು ಗಣೇಶನ ಪೂಜೆ ಮಾಡುತ್ತೇನೆ. ಮನೆಮಂದಿಯೊಡನೆ ಸಂತೋಷವಾಗಿ ಅಂದು ಕಾಲ ಕಳೆಯುತ್ತೇನೆ. ಆದರೆ ಮನೆಯಲ್ಲಿರುವವರಿಗೆ ಸಂತೋಷವಾಗುವಂತೆ ಅಗ್ನಿಹೋತ್ರ ಒಂದನ್ನು ವಿಶೇಷವಾಗಿ ಮಾಡಿ ಅದರ ವಿಶೇಷತೆಯನ್ನು ತಿಳಿಸುವ ಪ್ರಯತ್ನವನ್ನೂ ಮಾಡುತ್ತೇನೆ. ಅಗ್ನಿಹೋತ್ರದ ಬಗ್ಗೆ ಹಲವರಿಗೆ ಗೊತ್ತಿಲ್ಲ. ಮುಂದೆ ಅಗ್ನಿಹೋತ್ರವನ್ನೂ ವೇದ ಪಾಠದಲ್ಲಿ ಕಲಿಸಲಾಗುತ್ತದೆ.  ವೇದಪಾಠದ ಪರಿಚಯದ ಉಪನ್ಯಾಸಗಳಿಂದ  ನಿಮ್ಮ ಮನದಲ್ಲಿ ಸಂದೇಹಗಳು ಮೂಡಿದ್ದರೆ ದಯಮಾಡಿ ನಿಮ್ಮ  ಸಂದೇಹವನ್ನು ನೇರವಾಗಿ ವೇದಸುಧೆಗೆ ಬರೆಯಿರಿ.ವೇದಾಧ್ಯಾಯೀ ವಿಶ್ವನಾಥಶರ್ಮರು ಮತ್ತು ವೇದಾಧ್ಯಾಯೀ ಸುಧಾಕರಶರ್ಮರು ಸಂದೇಹವನ್ನು ಪರಿಹರಿಸುವ ಪ್ರಯತ್ನವನ್ನು ಮಾಡುತ್ತಾರೆ. ಸಾಪ್ತಾಹಿಕ  ವೇದ ಪಾಠವು ಆರಂಭವಾಗಿ ಒಂದು ತಿಂಗಳಾಯ್ತು.ಐದು ಭಾನುವಾರಗಳು. ಜೊತೆಯಲ್ಲಿ ಇನ್ನೆರಡು ತರಗತಿಗಳು ವಾರದ ಮಧ್ಯೆ ನಡೆದಿವೆ. ಇಷ್ಟಾದರೂ ಎರಡು ಮಂತ್ರ ಪಾಠ ಮಾತ್ರ ಆಗಿದೆ. ಪ್ರತ್ಯಕ್ಷ ತರಗತಿಯಲ್ಲಿ ವೈಯುಕ್ತಿಕವಾಗಿ  ವಿದ್ಯಾರ್ಥಿಗಳಿಂದ ಹೇಳಿಸುವಾಗ ಆಗಿರುವ ಅನುಭವವೆಂದರೆ ಇನ್ನೂ ಈ ಎರಡು ಚಿಕ್ಕ ಮಂತ್ರಗಳನ್ನೇ ಇನ್ನೂ ಸ್ವರಬದ್ಧವಾಗಿ ಪಠಿಸಲು ಸಮರ್ಥರಿಲ್ಲ. ಆದ್ದರಿಂದ ನಾವೆಲ್ಲರೂ ಸ್ವರ ಸಹಿತವಾಗಿ ಮಂತ್ರವನ್ನು ಅಭ್ಯಾಸ ಮಾಡುವುದು ಅಗತ್ಯವಾಗಿದೆ. ಹಿಂದಿನ  ಪಾಠಗಳಲ್ಲಿ ಮಾಡಿರುವ ಮಂತ್ರಾಭ್ಯಾಸ ಆಡಿಯೋ ವನ್ನು ಪ್ರತಿನಿತ್ಯವೂ ಕೇಳುತ್ತಾ,ಜೊತೆಯಲ್ಲಿ ಹೇಳುತ್ತಾ ಅಭ್ಯಾಸ ಮುಂದುವರೆಸುವುದು ಸೂಕ್ತ. ಮೇಲ್ ಮೂಲಕ ಅಭ್ಯಾಸ ಮಾಡುತ್ತಿರುವವರಲ್ಲಿ ಬಹುಪಾಲು ಜನರು ಬೆಂಗಳೂರಿನಲ್ಲಿದ್ದೀರಿ. ದೂರದ ದೇಶಗಳಲ್ಲಿರುವವರೂ ಮೇಲ್ ಮೂಲಕ ಅಭ್ಯಾಸವನ್ನು ಮಾಡುತ್ತಿದ್ದಾರೆ. ಆದರೆ ಬೆಂಗಳೂರಿನಲ್ಲಿರುವವರಿಗೆ ಮುಕ್ತವಾಗಿ ಭೇಟಿಯಾಗಲು ಎರಡು ಅವಕಾಶಗಳು ಹತ್ತಿರದಲ್ಲಿದೆ. ಮೊದಲನೆಯದು ದಿನಾಂಕ 30.9.2012 ರಂದು ಹಾಸನದಲ್ಲಿ ಆಯೋಜಿಸಿರುವ ಶ್ರೀಸುಧಾಕರಶರ್ಮರೊಡನೆ ಮುಕ್ತ ಸಂವಾದ,ಎರಡನೆಯದು ಬೆಂಗಳೂರಿನಲ್ಲಿ  ಬಸವನಗುಡಿ ರಸ್ತೆಯಲ್ಲಿರುವ ಶ್ರೀ ರಾಮಕೃಷ್ಣಾಶ್ರಮದ ಹತ್ತಿರ ದಿನಾಂಕ 7.10.2012 ಭಾನುವಾರ ಮತ್ತೊಂದು ಕಾರ್ಯಕ್ರಮ "ಹೊಸ ಬೆಳಕು"ಪುಸ್ತಕ ಬಿಡುಗಡೆ. ಅದರ ವಿವರವನ್ನು ಮೇಲ್ ಮಾಡಲಾಗುವುದು. ಈ ಎರಡೂ ಕಾರ್ಯಕ್ರಮಗಳಿಗೂ ನಿಮಗೆ ಸ್ವಾಗತವಿದೆ. ಇವೆರಡರಲ್ಲಿ ಯಾವ ಕಾರ್ಯಕ್ರಮಕ್ಕೆ ನೀವು ಬರಬಹುದೆಂದು ವೇದಸುಧೆಗೆ ದಯಮಾಡಿ ತಿಳಿಸಿ. ಎರಡೂ ಕಾರ್ಯಕ್ರಮಕ್ಕೂ ಬಂದರೆ ಸಂತೋಷ. ಇಲ್ಲದಿದ್ದರೂ ಒಂದು ಕಾರ್ಯಕ್ರಮಕ್ಕೆ ಸಮಯಾವಕಾಶವನ್ನು ಮಾಡಿಕೊಳ್ಳುತ್ತೀವೆಂದರೂ ಆ ಸಂದರ್ಭದಲ್ಲಿ ವೇದ ಪಾಠದ ವಿದ್ಯಾರ್ಥಿಗಳು ಶ್ರೀ ವಿಶ್ವನಾಥ ಶರ್ಮರೊಡನೆ ಒಂದೆರಡು ಗಂಟೆಗಲ ಕಾಲ ಮಾತುಕತೆ ನಡೆಸಲು ಅವಕಾಶವನ್ನು ಮಾಡಿಕೊಳ್ಳಲಾಗುವುದು. ಈ ಸಂದೇಶವನ್ನು ಮೇಲ್ ಮೂಲಕ ಪಾಠವನ್ನು ತರಿಸಿಕೊಳ್ಳುವ ಎಲ್ಲರಿಗೂ ಮೇಲ್ ಮಾಡಲಾಗಿದೆ. ಮೇಲ್ ಸ್ವೀಕರಿಸಿರುವವರಿಂದ ಮುಂದಿನ ಪಾಠ ಕಳಿಸುವ ಉದ್ಧೇಶದಿಂದ ಸಾಲುತ್ತರ  ಅಪೇಕ್ಷಣೀಯ.

ಬನ್ನಿ ,ಪರಸ್ಪರ ಪರಿಚಯ ಮಾಡಿಕೊಳ್ಳೋಣ. ವೇದ ಕೆಲಸದಲ್ಲಿ ಕೈ ಜೋಡಿಸೋಣ.


ವಂದನೆಗಳು

-ಹರಿಹರಪುರಶ್ರೀಧರ್

ಸಂಪಾದಕ, ವೇದಸುಧೆ.